Tuesday, February 28, 2017

ಯುದ್ಧಭೂಮಿಯಾಗಿರುವ ವಿಶ್ವವಿದ್ಯಾಲಯಗಳು

Image result for ಶಿವಸುಂದರ್


ಅನು: ಶಿವಸುಂದರ್ಭಾರತೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವೆಂದರೆ ಭಿನ್ನಮತವೆಂಬುದನ್ನು ನಮಗೆ ನೆನಪಿಸುತ್ತಿದ್ದಾರೆ.

ಪ್ರಜಾತಂತ್ರದ ಮುಂಚೂಣಿ ನಾಯಕರು ನಮ್ಮ ವಿಶ್ವವಿದ್ಯಾಲಯಗಳ ಯುದ್ಧಭೂಮಿಯಲ್ಲಿದ್ದಾರೆ. ವಿಶ್ವವಿದ್ಯಾಲಯಗಳೆಂದರೆ ಯುವ ಮತ್ತು ಕುತೂಹಲದಿಂದ ಕೂಡಿದ ಮನಸ್ಸುಗಳು ವಿವಿಧ ಮತ್ತು ವಿಭಿನ್ನ ವಿಷಯಗಳನ್ನು ಅನ್ವೇಷಿಸುವ, ಅಭಿವ್ಯಕ್ತಿಸುವ ಮತ್ತು ವಾಗ್ವಾದ ಮಾಡುವ ವೈಚಾರಿಕ ಸಂಘರ್ಷದ ತಾಣವೆಂದು ಪರಿಭಾವಿಸುವಂಥವರು, ಆಡಳಿತರೂಢರ ಅಧಿಕೃತ ಸಿದ್ಧಾಂತಗಳಿಗೆ ಪೂರಕವಾಗಿರದ ಎಲ್ಲಾ ಬಗೆಯ ಅಭಿವ್ಯಕಿಗಳನ್ನು ದೇಶದ್ರೋಹವೆಂದು ಪರಿಗಣಿಸಿ ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಸೆಣೆಸಾಡುತ್ತಿದ್ದಾರೆ. ಅಂಥಾ ಒಂದು ಸಂಘರ್ಷ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಮ್‌ಜಾಸ್ ಕಾಲೇಜಿನಲ್ಲಿ ನಡೆಯಿತು. ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಬೆಂಬಲಿತವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಪ್ರತಿರೋಧದ ಸಂಸ್ಕೃತಿ ಎಂಬ ವಿಷಯದ ಕುರಿತು ನಡೆಯಬೇಕಿದ್ದ ಒಂದು ವಿಚಾರ ಸಂಕಿರಣವನ್ನು ಬಹಿರಂಗವಾಗಿ ಬೆದರಿಕೆಯನ್ನು ಒಡ್ಡಿ ಮತ್ತು ಗಲಭೆ ಮಾಡಿ ತಡೆಗಟ್ಟಿದರು. ಈ ವಿಚಾರ ಸಂಕಿರಣದಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಡಾಕ್ಟೋರಲ್ ವಿದ್ಯಾರ್ಥಿಯಾಗಿರುವ ಉಮರ್ ಖಲೀದ್ ಅವರನ್ನು ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು. ಮರುದಿನ ಎಬಿವಿಪಿ ಎಬ್ಬಿಸಿದ ಈ ಗಲಭೆಯ ವಿರುದ್ಧ ಪ್ರತಿಭಟನೆ ಮಾಡಲು ನೆರೆದಿದ್ದ ವಿದ್ಯಾರ್ಥಿ ಮತ್ತು ಅಧ್ಯಾಪಕರ ಮೇಲೆ ಎಬಿವಿಪಿ ಗೂಂಡಾಗಳು ಕಲ್ಲು ಮತ್ತು ಬಾಟಲ್‌ಗಳಿಂದ ಹಲ್ಲೆ ಮಾಡಿದರು. ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರೂ ದಾಳಿಗೊಳಗಾದರು. ಆದರೆ ಭಾರಿ ಸಂಖ್ಯೆಯಲ್ಲಿ ಹಾಜರಿದ್ದ ದೆಹಲಿ ಪೊಲೀಸರು ಮಾತ್ರ ಇದನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳದೆ ಮೌನವಾಗಿ ನಿಂತಿದ್ದರು. ಅಷ್ಟು ಮಾತ್ರವಲ್ಲ, ಎಬಿವಿಪಿ ಸದಸ್ಯರ ಮೇಲೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಅಲ್ಲದೆ ದೂರು ದಾಖಲಿಸಿಕೊಳ್ಳಬೇಕೆಂದು  ಮಾರಿಸ್ ನಗರ್ ಪೊಲೀಸ್ ಠಾಣೆಯೆದುರು ಆಗ್ರಹಿಸುತ್ತಿದ್ದ ಗುಂಪಿನ ಮೇಲೆ ಲಾಠಿ ಚಾರ್ಜ್ ಕೂಡಾ ನಡೆಸಿದರು.

ಈ ಘಟನೆಯು ಬಿಡಿಯಾಗಿ ನಡೆದದ್ದೇನಲ್ಲ. ಅದು ತನ್ನ ಸೈದ್ಧಾಂತಿಕ ಅಜೆಂಡಾಗಳನ್ನು ಒಪ್ಪಿಕೊಳ್ಳದ ಎಲ್ಲಾ ಧ್ವನಿಗಳನ್ನು ಸುಮ್ಮನಾಗಿಸಲು ಆಳುವ ಸರ್ಕಾರವು ಅನುಸರಿಸುತ್ತಿರುವ ಸ್ಪಷ್ಟ ಮಾದರಿಯ ಭಾಗವೇ ಆಗಿದೆ. ಅಲ್ಲದೆ, ವಾಗ್ವಾದ, ಚರ್ಚೆ ಅಥವಾ ತರ್ಕಗಳ ಬದಲಿಗೆ ಬೆದರಿಕೆ, ಕಿರುಕುಳ ಮತ್ತು ಹಿಂಸೆ ಹಾಗೂ ಪ್ರಭುತ್ವದ ಯಂತ್ರಾಂಗಗಳ ಸಹಕಾರದ ಮೂಲಕ ಉನ್ನತ ವಿದ್ಯಾ ಸಂಸ್ಥೆಗಳನ್ನು ವಶಕ್ಕೆ ಪಡೆಯುವ ಮತ್ತು ಬೌದ್ಧಿಕ ಸ್ಥಳಾವಕಾಶಗಳನ್ನು ಬುಡಮೇಲು ಮಾಡುವ ಸಂಘಪರಿವಾರದ ದೀರ್ಘಕಾಲೀನ ವ್ಯೂಹತಂತ್ರದ ಭಾಗವೂ ಆಗಿದೆ. ಈ ವರ್ಷದ ಮೊದಲಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದ ಕಾಂಪಾರೇಟೀವ್ ಗವರ್ನೆನ್ಸ್ ಮತ್ತು ಪೊಲಿಟಿಕಲ್ ಥಿಯರಿ ವಿಭಾಗದ ಪ್ರೊಫೆಸರ್ ಆಗಿರುವ ನಿವೇದಿತಾ ಮೆನನ್ ಅವರು ಕ್ಯಾಂಪಸ್ಸಿನಲ್ಲಿ ಮಾಡಿದ ಭಾಷಣವೊಂದರಲ್ಲಿ ಕಾಶ್ಮೀರದ ಬಗ್ಗೆ ಮಾಡಲೆನ್ನಲಾದ ಟಿಪ್ಪಣಿಯ ವಿರುದ್ಧ ಜೋಧಪುರದ ಜೈ ನಾರಾಯಣ ವ್ಯಾಸ್ ವಿಶ್ವವಿದ್ಯಾಲಯ (ಜೆಎನ್‌ವಿಎಸ್)ದ ರಿಜಿಸ್ಟ್ರಾರ್ ಅವರು ಪೊಲೀಸ್ ದೂರೊಂದನ್ನು ದಾಖಲಿಸಿದಾಗಲೂ ಇದೇ ಬಗೆಯ ಪರಿಸ್ಥಿತಿ ಉದ್ಭವವಾಗಿತ್ತು. ಎಂದಿನಂತೆ ಮೆನನ್ ಅವರ ಭಾಷಣವು ದೇಶದ್ರೋಹವೆಂದು ಎಬಿವಿಪಿ ಸದಸ್ಯರು ಗಲಭೆ ಎಬ್ಬಿಸಿದರು. ಇದು ಅಂತಿಮವಾಗಿ ಆ ಕಾರ್ಯಕ್ರಮದ ಪ್ರಮುಖ ಸಂಘಟಕರಾಗಿದ್ದ ಜೆಎನ್‌ವಿಎಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆದ ರಾಜಶ್ರೀ ರನಾವತ್ ಅವರ ಅಮಾನತ್ತಿಗೂ ಕಾರಣವಾಯಿತು. ೨೦೧೬ರ ಸೆಪ್ಟೆಂಬರನಲ್ಲಿ ಮಹಾಶ್ವೇತಾ ದೇವಿಯವರ ದೋಪ್ದಿ ಕಥೆಯ ರಂಗ ರೂಪಾಂತರವನ್ನು ಪ್ರದರ್ಶಿಸಿದ್ದಕ್ಕಾಗಿ ಹರಿಯಾಣದ ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾಪಕರಾದ ಸ್ನೇಹ್‌ಸತ ಮನಯ್ ಮತ್ತು ಮನೋಜ್ ಕುಮಾರ್ ಅವರನ್ನು ಅಮಾನತ್ತುಗೊಳಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಹುಯಿಲನ್ನು ಎಬ್ಬಿಸಲಾಗಿತ್ತು. ಈ ಕೃತಿಯನ್ನು ಬರೆದ ಮಹಾಶ್ವೇತ ದೇವಿಯವರು ಇತ್ತೀಚಿಗೆ  ನಿಧನರಾದ ಬಳಿಕ ಅವರ ಜೀವಮಾನ ಸಾಧನೆಗೆ ದೇಶಾದ್ಯಂತ ಗೌರವ ಸಮರ್ಪಣೆಗಳು ನಡೆಯುತ್ತಿದೆ. ಆದರೆ ಎಬಿವಿಪಿಯು ಮಾತ್ರ ದೋಪ್ದಿಯು ಸೈನ್ಯವನ್ನು ಕೀಳಾಗಿ ತೋರಿಸುತ್ತದಾದ್ದರಿಂದ ಅದು ದೇಶದ್ರೋಹೀ ನಾಟಕವೆಂದು ಘೋಷಿಸಿದೆ.

ಕಳೆದೊಂದು ವರ್ಷದಿಂದ ರಣರಂಗವಾಗಿ ಪರಿವರ್ತನೆಗೊಂಡಿರುವ ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‌ಯು ಗಳ ಸಾಲಿಗೆ ಈ ಎಲ್ಲಾ ವಿಶ್ವವಿದ್ಯಾಲಯಗಳು ಸೇರಿಕೊಂಡಿವೆ. ಜೆಎನ್‌ಯು ನಲ್ಲಿ ೨೦೧೬ರ ಫೆಬ್ರವರಿ ೯ರಂದು ವಿದ್ಯಾರ್ಥಿಗಳ ತಂಡವೊಂದು ಅಫ್ಜಲ್‌ಗುರುವನ್ನು ನೇಣಿಗೇರಿಸಿದ ಸಂದರ್ಭz ನೆನಪಿನಲ್ಲಿ ಆಚರಿಸಿದ ವಾರ್ಷಿಕ ಸ್ಮರಣಾಚರಣೆಯು ದೇಶಾದ್ಯಂತ  ದೇಶಭಕ್ತ ಮತ್ತು ದೇಶದ್ರೋಹಿ ಗಳೆಂಬ ಪರಸ್ಪರ ವಿರೋಧಿ ಗುಂಪುಗಳನ್ನು ಹುಟ್ಟುಹಾಕಿತು. ಆದರೆ ಅದಕ್ಕೆ ಮೊದಲೇ, ೨೦೧೫ರಲ್ಲಿ, ದೆಹಲಿ ವಿಶ್ವವಿದ್ಯಾಲಯದ ಕಿಶೋರಿ ಮಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಮುಜಫ್ಫರ್‌ನಗರ್ ಬಾಕಿ ಹೈ ಎಂಬ ಚಿತ್ರ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಎಬಿವಿಪಿ ಗುಂಡಾಗಳು ಗಲಭೆ ಎಬ್ಬಿಸಿದ್ದಲ್ಲದೆ ಚಿತ್ರವು ಪ್ರದರ್ಶನವಾಗದಂತೆ ತಡೆದಿದ್ದರು. ಇಂದಿನಂತೆ ಆಗಲೂ ಸಹ ಅವರು ಚಿತ್ರವನ್ನು ಧರ್ಮ ವಿರೋಧಿ ಎಂದು ಕರೆದಿದ್ದಲ್ಲದೆ ಚಿತ್ರದ ಆಶಯಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಘಟನೆಗಳು ಬಿಡಿಬಿಡಿಯಾಗಿಯೂ ಮತ್ತು ಇಡಿಯಾಗಿಯೂ ಒಂದನ್ನಂತೂ ಹೇಳುತ್ತಿದೆ. ನರೇಂದ್ರ ಮೋದಿ ಸರ್ಕಾರವು ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಮರುಗಳಿಗೆಯಿಂದ ಉನ್ನತ ವಿದ್ಯಾ ಸಂಸ್ಥೆಗಳನ್ನು ಒಂದೇ ವಿಚಾರಧಾರೆಯ ಪ್ರಭಾವದಡಿಗೆ ತರಲು ಏನನ್ನು ಬೇಕಾದರೂ ಮಾಡುತ್ತಿದೆ. ಈ ಗುರಿಯನ್ನು ಸಾಧಿಸಲು ಭಿನ್ನ ಭಿನ್ನ ಮಾರ್ಗಗಳನ್ನು ಅನುಸರಿಸಲಾಗಿದೆ. ಅದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ನವ ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಗಳಂಥ ಸಂಸ್ಥೆಗಳಿಗೆ ಆರೆಸ್ಸೆಸ್ ಗೆ ಆಪ್ತರಾಗಿರುವವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಿರಬಹುದು. ಅಥವಾ ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‌ಯು ವಿಶ್ವವಿದ್ಯಾಲಯಗಳಿಗೆ ಎಬಿವಿಪಿ ಮತ್ತು ಕೇಂದ್ರ ಸರ್ಕಾರಗಳ ಕಣ್ಸನ್ನೆಗೆ ತಕ್ಕಂತೆ ಕುಣಿಯುವ ಉಪಕುಲಪತಿಗಳನ್ನು ನೇಮಕ ಮಾಡುವುದಿರಬಹುದು. ಮಾರ್ಗವೇನೇ ಇದ್ದರೂ ಒಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಭಿನ್ನಮತ ಅಥವಾ ಪ್ರಶ್ನೆ ಮಾಡುವ ಧ್ವನಿಗಳಿಗೆ ವಿರುದ್ಧವಾಗಿರುವ ಪರಿಸರವನ್ನು ನಿರ್ಮಿಸಲೆಂದೇ ವಿಶ್ವವಿದ್ಯಾಲಯಗಳ ಮತ್ತು ಉನ್ನತ ವಿದ್ಯಾ ಸಂಸ್ಥೆಗಳ ಬೌದ್ಧಿಕ ಸ್ಥಾನಮಾನಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಂದೋ ಅಧಿಕಾರಸ್ಥರೊಂದಿಗೆ  ಸಹಕರಿಸಬೇಕು  ಇಲ್ಲವೇ ಅಮಾನತ್ತನ್ನು ಎದುರಿಸಬೇಕು ಎಂಬಂಥ ವಾತಾರಣವನ್ನು ಅನುದಿನವೂ ಸೃಷ್ಟಿಸಲಾಗುತ್ತಿದೆ. ಸರ್ಕಾರ ಮತ್ತು ಅದರ ಮಂತ್ರಿಗಳು ನಿರಂತರವಾಗಿ ದೇಶದ್ರೋಹದ ಮಾತುಗಳನ್ನು ಪದೇಪದೇ ಹೇಳುವ ಮೂಲಕ ಅವರ ವಿದ್ಯಾರ್ಥಿ ಘಟಕವು ವಿಶ್ವವಿದ್ಯಾಲಯಗಳಲ್ಲಿ ಮಾಡುವ ರಂಪಾಟಕ್ಕೆ ಮತ್ತು ತೋಳುಬಲದ ಬಳಕೆಗೆ ಮಾನ್ಯತೆಯನ್ನು ಒದಗಿಸಿದೆ. ಅವರು ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ: ಆಳುವ ಸರ್ಕಾರಕ್ಕೆ ವಿರುದ್ಧವಾಗಿರುವುದು ದೇಶಕ್ಕೆ ವಿರುದ್ಧವಾಗಿರುವುದಕ್ಕೆ ಸಮ. ಈ ಹಿಂಸೆಯ ಮತ್ತು ಬೆದರಿಕೆಯ ಸಂಸ್ಕೃತಿಯು ಸ್ವತಂತ್ರ ಚಿಂತನೆಗೂ ಮತ್ತು ಆಳುವ ಸರ್ಕಾರದ ಬಹುಸಂಖ್ಯಾತಪರ ಸಿದ್ಧಾಂತಕ್ಕೆ ವಿರುದ್ಧವಿರುವರಲ್ಲೂ ಭೀತಿ ಹುಟ್ಟಿಸುತ್ತಿದೆ.

ಈ ಬೆದರಿಕೆಯ ತಂತದಲ್ಲಿ  ಆರೆಸೆಸ್-ಬಿಜೆಪಿಗಳು ಪರಿಣಿತರೇ ಆಗಿದ್ದರೂ ಈ ತಂತ್ರ ಕೇವಲ ಅವರ ಸ್ವತ್ತಾಗಿಯೇನೂ ಉಳಿದಿಲ್ಲ. ಉದಾಹರಣೆಗೆ ಅವರ ವಿದ್ಯಾರ್ಥಿ ಘಟಕಗಳು ದೆಹಲಿ, ರಾಜಸ್ಥಾನ, ಹರ್ಯಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಕಿಡಿಗೇಡಿತನ ಮಾಡಿದರೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯು ಇತ್ತೀಚೆಗೆ ತನ್ನ ಕ್ಯಾಂಪಸ್ಸಿನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಕಾರ್ಯಕರ್ತರ ಸಭೆಯೊಂದನ್ನು ರದ್ದುಗೊಳಿಸಿದೆ. ಮಾತ್ರವಲ್ಲ ಫೇಸ್‌ಬುಕ್‌ನ ಪೋಸ್ಟ್ ಒಂದರಲ್ಲಿ ಜೆಎನ್‌ಯು ವಿನ ವಿದ್ಯಾರ್ಥಿನಿ ಕಾರ್ಯಕರ್ತೆಯಾದ ಶೈಲಾ ರಷೀದ್ ಅವರು ಪ್ರವಾದಿ ಮೊಹಮದರನ್ನು ಅವಹೇಳನೆ ಮಾಡಿದ್ದಾರೆಂದು ಪೊಲೀಸ್ ದೂರನ್ನು ಸಹ ನೀಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಹೆಚ್ಚುತ್ತಿರುವ ಈ ಬಗೆಯ ಘರ್ಷಣೆಗಳು ಮತ್ತು ಕುಗ್ಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಯಾವ ಸಂಕುಚಿತ ಮನೋಧರ್ಮಕ್ಕೆ ವ್ಯತಿರಿಕ್ತವಾದ ಆಶಯಗಳನ್ನು ವಿಶ್ವವಿದ್ಯಾಲಯಗಳು ಪ್ರತಿನಿಧಿಸುತ್ತವೋ ಅಂಥಾ ಸಂಕುಚಿತ ಮನೋಧರ್ಮವೇ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗುತ್ತಿರುವ ವಿಷಾದ ಗಾಥೆಯನ್ನು ಹೇಳುತ್ತಿವೆ. ವಿಶ್ವವಿದ್ಯಾಲಯಗಳು ವಿಭಿನ್ನ ಚಿಂತನಗೆಳನ್ನು ಚರ್ಚಿಸುವ, ಹೊಸ ಚಿಂತನೆಗಳನ್ನು ರೂಪಿಸಿಕೊಳ್ಳುವ ಮತ್ತು ಈಗಾಗಲೇ ಸಮ್ಮತವಾಗಲ್ಪಟ್ಟ ತಿಳವಳಿಕೆಗಳ ಕ್ಷಿತಿಜಗಳಿಗೆ ಸವಾಲೆಸೆಯುವ ತಾಣಗಳಾಗಿವೆ. ಪ್ರಭುತ್ವದ ಸಂಸ್ಥೆಗಳು ಅಥವಾ ಅವರ ಕೃಪಾಪೋಷಿತ ದೊಂಬಿ ಗುಂಪುಗಳು ಅಂಥಾ ತಾಣಗಳನ್ನು ಧ್ವಂಸಗೊಳಿಸಲು ಯತ್ನಿಸುತ್ತಿರುವಾಗ ನಮ್ಮ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜಾತಾಂತ್ರಿಕ ಭಿನ್ನಮತದ ಅಳಿವನ್ನು ತಡೆಗಟ್ಟಲು ಶ್ರಮಿಸುತ್ತಿರುವವರ ಜೊತೆಗೆ ನಾವು ನಿಲ್ಲಬೇಕಿದೆ.


ಕೃಪೆ: Economic and Political Weekly
                                                                       February 25, 2017. Vol 52, No. 8

 

ಯುದ್ಧವಿರೋಧಿ ಹನಿಗಳು

Image result for ಕಾದಂಬಿನಿ


~ ಕಾದಂಬಿನಿ

ಸರಹದ್ದಿನಲ್ಲಿ
ನಿಂತ ಯೋಧನಿಗೆ
ಎದುರಲ್ಲೂ
ಬೆನ್ನ ಹಿಂದೆಯೂ
ವೈರಿಗಳು
ಮತ್ತು ಈ ಮಾತನ್ನು
ಬರೆದ ವ್ಯಕ್ತಿಯನ್ನು
ದೇಶದ್ರೋಹಿಗಳ ಸಾಲಿನಲ್ಲಿ
ನಿಲ್ಲಿಸಲಾಗುವುದು
* * *
ಯುದ್ಧದಲ್ಲಿ ಹುತಾತ್ಮನಾದ
ಯೋಧನ ಮಗಳು
ರಣಾಂಗಣದಲ್ಲಿ
ಶಾಂತಿ ಬಯಸಿದ ಗಳಿಗೆ
ವೈರಿಪಡೆ
ಯುದ್ಧ ಸಾರಿತು
ಅವಳದೇ ವಿರುದ್ಧ
* * *
ಯುದ್ಧದಲ್ಲಿ...
ಪಡೆದುಕೊಳ್ಳುವುದಕ್ಕೆ
ಕಳೆದುಕೊಳ್ಳುವುದೆಂದೂ
ಕಳೆದುಕೊಳ್ಳುವುದಕ್ಕೆ
ಪಡೆದುಕೊಳ್ಳುವುದೆಂದೂ
ಅರ್ಥವಿದೆ
ಅವರ ಪಡೆದುಕೊಳ್ಳುವ
ಹಪಹಪಿಯು
ನೋಡಿದೆಯಾ ಹೇಗೆ
ಮತ್ತೆ ಮತ್ತೆ ಯುದ್ಧ ಸಾರುತ್ತದೆ
* * *
ನೀನೆಂದಾದರೂ
ಯುದ್ಧವನ್ನು ನೋಡಿದೆಯಾ?
ಯುದ್ಧನಿರತ ಯೋಧನ
ಎದೆಯೊಳಗೆ
ನಡೆಯುವ ಯುದ್ಧವನ್ನು?
* * *
ಸರಹದ್ದಿನಲ್ಲಿ
ಬಂದೂಕಿನ ನಳಿಕೆಯಿಂದ
ಸಿಡಿದ ಒಂದೊಂದು ಗುಂಡೂ
ಯೋಧರ ಪತ್ನಿಯರ
ಎದೆ ಸೀಳುತ್ತವೆ
* * *
ಯೋಧನೊಬ್ಬ ಪ್ರತಿಬಾರಿ
ಊರಿಗೆ ಮರಳುವಾಗಲೂ
'ಇದೇ ಮೊದಲ ಸಲ
ತನ್ನವರನ್ನು ನೋಡುತ್ತಿರುವೆ'
ಎಂಬಂತೆ ಸಂಭ್ರಮಿಸುತ್ತಾನೆ
ಮತ್ತು
ಪ್ರತಿ ಬಾರಿ ಊರಿನಿಂದ
ಸರಹದ್ದಿಗೆ ಮರಳುವಾಗಲೂ
ಇದೇ ಕಡೆಯ ಸಾರಿ ಎಂಬಂತೆ
ತನ್ನವರ ಮುಖಗಳನ್ನು
ದಿಟ್ಟಿಸುತ್ತಾನೆ
* * *
ಫುಡಾರಿಯೊಬ್ಬನ ಮೈತುಂಬ
ಮಗನಿಗೆ ಟಿಕೇಟು
ಸಿಗಲಿಲ್ಲವೆಂಬ ನಿರಾಸೆ
ಅತ್ತ ಸರಹದ್ದಿನಲ್ಲಿ
ಗುಂಡೇಟು ತಿಂದ ಯೋಧನ ಕಣ್ಣಲ್ಲಿ
ಕೊನೆಗೊಮ್ಮೆ
ಮಗಳ ನೋಡುವಾನೆ
* * *
ಪ್ರಪಾತಕ್ಕುರುಳಿ
ಹಿಮದ ರಾಶಿಯಡಿ ಸಿಲುಕಿ
ಇನ್ನೂ ಉಸಿರಾಡುತ್ತಿದ್ದ
ಆ ಯೋಧನ ಎದೆಯನ್ನು
ಬೆಚ್ಚಗಿರಿಸಿದ್ದು
ಮಗಳ ನೆನಪು!
* * *
'ನನ್ನ ಅಪ್ಪ ಎಲ್ಲಿ?'
ಎಂದು ಮಗು ಕೇಳಿದಾಗೆಲ್ಲ
ಯೋಧರ ಪತ್ನಿಯರು
ಕ್ಯಾಲೆಂಡರ್ ತೋರಿಸುತ್ತಾರೆ
ಅಥವಾ
ಆಕಾಶದ ನಕ್ಷತ್ರಗಳನ್ನು

ಸಶಬ್ದImage result for ಡಾ. ಎಚ್. ಎಸ್. ಅನುಪಮಾ


ಡಾ. ಎಚ್. ಎಸ್. ಅನುಪಮಾ
(ಚಿತ್ರ: ಅಂತರ್ಜಾಲ)
ಒಂದು ನಸುಕು
ಇನ್ನೂ ಮಬ್ಬುಗತ್ತಲು
ಭಾರೀ ಸದ್ದು!
ಬೇಲಿ ದೂಡಿ ಕಲ್ಲು ಝಾಡಿಸಿ
ಇದ್ದಲ್ಲೆ ಅತ್ತಿತ್ತ ಸರಿದು ಧೂಳು ಹಾರಿಸಿ
ಬೃಹದಾಕಾರದ ಮಿಶಿನು
ಬಂದೆನೆಂದು ಸಾರಿತು

ಮೇಲೆ ಗೂಡಿನಲಿ ಮಲಗಿದ್ದ ಜೋತಮ್ಮ
ಭಯಾನಕ ಸದ್ದಿಗೆ ಎಚ್ಚೆತ್ತು ಕಣ್ಣುಜ್ಜುತ್ತ
‘ಮಾಮ್, ವಾಟೀಸ್ ದಿಸ್’ ಎಂದಳು.
ಸಂಪಿಗೆ ಮರದ ತುತ್ತತುದಿ ಮಹಲಿನ
ಮರಿಕಾಗೆ, ಕಾಗಮ್ಮ
ಏನೋ ಆಗಿಹೋಯಿತೆಂದು
ಹುಯ್ಯಲಿಟ್ಟರು.
ಪುಟ್ಟ ಬೆಕ್ಕುಮರಿ ಕಂಗಾಲು
ಹಿಂದೆಮುಂದೆ ಸುಳಿಯುತ್ತ
ನನ್ನ ಕಾಲುಗಳತ್ತಲೇ ನೆಟ್ಟಿದೆ ಕಣ್ಣು..

ಕೊರೆವ ಸದ್ದು ಕಿವಿ ತುಂಬುತಿರಲು
ಹೊರಹೋಗಿ ನೋಡುತ್ತೇನೆ
ಬೀದಿಯಲಿ ಹೆಜ್ಜೆಗೊಂದೊಂದು ಗುರುತು
ನೆಲ ಕೊರೆದು ಆಳಬಾವಿ ತೋಡಲು.
ಗುರುಗುಡುತ್ತ ಬೀಡುಬಿಟ್ಟಿದೆ ಭಾರೀ ಮಿಶಿನು!

ಒಂದಿಡೀ ದಿವಸ ಕೊರೆದದ್ದೇ ಕೊರೆದದ್ದು
ಈ ಬೋರು ಆ ಬೋರು ಮತ್ತೊಂದು ಬೋರು
ನೂರಿನ್ನೂರು ಮುನ್ನೂರು ನಾನೂರು
ಕೊರೆದ ಅಡಿ ಇಂಚಿಗು ಲೆಕ್ಕ ಉಂಟು.
ಆದರೇನು, ಎಲ್ಲು ಇಲ್ಲ ನೀರು
ಕಿಸೆ ಕಂಗಾಲು
ಜನ ಕಂಗಾಲು
ಮಿಶಿನು ಕಂಗಾಲು
ಅಲ್ಲಿ ನೀರಿಲ್ಲ ಇಲ್ಲಿಯೂ ಇಲ್ಲ
ಸದ್ದು ಮಾಡಿದ್ದೇ ಬಂತು ನೀರೇ ಇಲ್ಲ
ಭುಸ್ಸೆಂದು ನಿಟ್ಟುಸಿರ್ಗರೆದು
ವಾಪಸು ಹೊರಟಿತು ಮಿಶಿನು
ಅಬಬ, ಏನು ಗದ್ದಲ ಏನಬ್ಬರ!
ಬರುವಂತೆ ಹೋಗುವಾಗಲೂ?

‘ಕೊರೆತವೇ ಹಾಗೆ,
ಸೋಲುಗೆಲುವು ಇರುವುದೇ
ಕೊರೆವ ಸದ್ದಿಗೆ ಬೆಚ್ಚದಿರಲು ಸಾಧ್ಯವೇ?’
ನನ್ನ ಅಚ್ಚರಿಗೆ
ಗೇರು ಮರದ ಕಾಂಡ ಕೊರೆವ ಹುಳು
ತೂತಿನಿಂದ ಹೊರಗಿಣುಕಿ ನಕ್ಕು
ಟ್ರೊಂಯ್ ಟ್ರೊಂಯ್ಯನೆ ಕೊರೆಯುತ್ತ
ಮತ್ತೆ ಒಳ ಸರಿಯಿತು.

ಹೌದಲ್ಲ ಹುಳವೇ,
ಕೊರೆವುದು ಎಂದಿಗು ಸಶಬ್ದ.
ಮೊಗೆವುದು, ನನದೆನುವುದು ಸಶಬ್ದ.
ಸಿಗಲಿಲ್ಲವೆನುವುದು ಸಶಬ್ದ.
ಕೊರಗುತ್ತ ಮರಳುವುದೂ ಸಶಬ್ದ..
ಯಂತ್ರವೆಂದಿಗು ಕರ್ಕಶ ಶಬ್ದ.

ಕೊಡುವಾಗ ಕೊಟ್ಟುಕೊಳುವಾಗ
ಅರಸುವಾಗ ಒಪ್ಪಿಸಿಕೊಳುವಾಗ
ನಿಶ್ಶಬ್ದವಾಗಿರಲು ಯಂತ್ರ ಹೆಣ್ಣಲ್ಲವಲ್ಲ?!


(ಅಂತರ್ಜಾಲ ಚಿತ್ರ)

ಹೆರುವ ಒಡಲಿನ ಬೇಗುದಿ..

ಇಂ
ಡಿಯಾ ಪಾಕಿಸ್ತಾನಗಳ
ನಡುವೆ ಎಷ್ಟಾಯಿತು ಯುದ್ಧ?
ರಕ್ತ ಕಣ್ಣೀರ ಹೊರತು
ಮತ್ತೇನೂ ಹರಿಯದ ಯುದ್ಧದಲಿ
ನೆಹರು ಸತ್ತರೆ?
ಅವರ ಸಂಬಂಧಿಕರು ಸತ್ತರೆ?

ಬಾವುಟ ಭಕ್ತಿಯ ಕಾರ್ಗಿಲ್ ಕದನದಲಿ
ಸೈನಿಕರು ಎಷ್ಟು ದಿನ ಕಾದಾಡಿದರು?
ಶವ ಪೆಟ್ಟಿಗೆಯ ಹೊರತು
ಮತ್ತೇನೂ ದೊರಕದ ಯುದ್ಧದಲಿ
ಊರೂರಿಗೆ ತಲುಪಿದ
ಶವಪೆಟ್ಟಿಗೆಯಲ್ಲಿ ವಾಜಪೇಯಿ ಹೆಣವಿತ್ತೆ?
ಅವರ ಸಂಬಂಧಿಕರು ಹುತಾತ್ಮರಾದರೆ?
ಮುಷರಫ್ ಹೆಣವಾಗಿ ಹೋದನೆ?
ಜೀವ ಉಳಿಸುವ ಸರ್ಜಿಕಲ್ ಪದಕ್ಕೆ
ದಾಳಿಯ ಮೊನಚು ಅಂಟಿಸಿದ ಪ್ರಭುಗಳೆ
ಎಷ್ಟು ತಾಸು ಮದ್ದುಗುಂಡುಗಳು ಸಿಡಿದವು
ರಣಹದ್ದಿನ ಕೇಕೆಯ ಹೊರತು
ಮತ್ತೇನೂ ಕೇಳಿಸದ ಯುದ್ಧದಲಿ
ಮೋದಿಯ ಕೊನೆಯುಸಿರು ಹೋಯಿತೆ?
ಅವರ ಹೆಂಡತಿಯ ಹೃದಯ ಸ್ಥಬ್ಧವಾಯಿತೆ?
ನವಾಜ್ ಶರೀಫ್ ಜೀವ ತೆತ್ತನೆ?

ಮಗಳೇ, ಗುರ್ ಮೆಹರ್ ಕೌರ್,
ಯುದ್ಧಕೋರನಿಗೆ ಯಾವ ದೇಶ?
ಯಾವ ನೆಲ? ಯಾವ ಪಕ್ಷ?
ನಿನ್ನ ಅನಾಥ ನಿಟ್ಟುಸಿರು ಕೇಳುವ
ಪ್ರಶ್ನೆಗೆ ಯಾರು ಉತ್ತರಿಸಿಯಾರು?

ತಂದೆ ಕಳಕೊಂಡ ಮಗಳಷ್ಟೇ
ಮತ್ತೆ ಯುದ್ಧವಾಗದಿರಲೆಂದು ಪ್ರಾರ್ಥಿಸಬಲ್ಲಳು..
ಬಾ ಮಗಳೆ  ಯುದ್ಧವಿಲ್ಲದ
ಗಡಿಗಳಿಲ್ಲದ
ನಿನ್ನ ಕನಸಿಗೆ ಬಣ್ಣ ತುಂಬು
ಈ ನೆಲದಲಿ ನೀನು
ಆ ನೆಲದಲಿ ಇನ್ಯಾರೋ
ನಿನ್ನ ಬಳಗ ಹೆಚ್ಚಿಸು
ಜೊತೆಯಾಗುತ್ತಾಳೆ ನಿನ್ನ ಜೊತೆ ನನ್ನ ಮಗಳೂ.

ನನಗಿಷ್ಟೇ ಗೊತ್ತು ಮಗಳೆ
ಹೆರುವ ಒಡಲಷ್ಟೆ ಅನಾಥಗೊಳುವ ನೋವ ಅರಿಯಬಲ್ಲದು

- ಬಸೂ

Monday, February 20, 2017

ಹಾವೇರಿ : 2017 ಫೆ 22 -ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನಹಾವೇರಿ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೆರಿಮತ್ತಿಹಳ್ಳಿಯಲ್ಲಿ 2017 ಫೆ 22 ರಂದು ಮಧ್ಯಾಹ್ನ 11.30 ಗಂಟೆಗೆ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮ.. ಬನ್ನಿ.

Sunday, February 19, 2017

ಧಾರವಾಡ ;ಇಂದು ಫೆ 20, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಾಳೆ 20.2.2017 ರಂದು ಮಧ್ಯಾಹ್ನ 3 ಗಂಟೆಗೆ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮ.. ಬನ್ನಿ.
LikeShow more reactions
Comment

ಆಜಾದಿ- ಭಾರತೀಯ ದಮನದಿಂದ ಸ್ವಾತಂತ್ರ್ಯ
ಅನು: ಶಿವಸುಂದರ್

ಕೃಪೆ: 

      February 18,2017. Vol 52, No. 


ಕಾಶ್ಮೀರಿ ಮುಸ್ಲಿಮರು ಕಳೆದ ೨೭ ವರ್ಷಗಳಿಂದ ಮಿಲಿಟರಿ ಅಡಳಿತವನ್ನು ಮತ್ತು ಭಾರತೀಯ ಸೈನಿಕ ಪಡೆಗಳಿಂದ ಎಲ್ಲಾ ಬಗೆಯ ದೌರ್ಜನ್ಯಗಳನ್ನೂ ಅನುಭವಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿನ ಭೀಕರ ಚಳಿ ಮೂಳೆಗಳನ್ನು ಕೊರೆಯುವಷ್ಟಿದ್ದರೂ ಅಲ್ಲಿನ ಜನರ ಇಚ್ಚಾಶಕ್ತಿಯನ್ನೇನೂ ತಣ್ಣಗಾಗಿಸಿಲ್ಲ. ಅಲ್ಲಿನ ಯಾವುದೋ ಜಾಗದ ಯಾವುದೋ ಮನೆಯಲ್ಲಿ ಬೆರಳೆಣಿಕೆಯಷ್ಟು ಮಿಲಿಟೆಂಟ್‌ಗಳು ಅಡಗಿಕೊಂಡಿದ್ದಾರೆಂದೂ ಭಾರತದ ಭದ್ರತಾ ಪಡೆಗಳ ನೂರಾರು ಸೈನಿಕರು ನುಗ್ಗಿದಾUಲೆಲ್ಲಾ ಸ್ಥಳೀಯ ಜನ ಕೊರೆವ ಚಳಿಯನ್ನೂ ಲೆಕ್ಕಿಸದೆ ಮಿಲೆಟೆಂಟ್‌ಗಳ ಬೆಂಬಲಕ್ಕೆ ಧಾವಿಸುತ್ತಾರೆ. ಮಾತ್ರವಲ್ಲದೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮಾಡದಂತೆ ತಡೆಯೊಡ್ಡುತ್ತಾ ಹಲವು ಬಾರಿ ಮಿಲಿಟೆಂಟ್‌ಗಳು ತಪ್ಪಿಸಿಕೊಳ್ಳಲೂ ಸಹಕರಿಸಿದ್ದಾರೆ. ಭಾರತದ ಭದ್ರತಾ ಪಡೆಗಳ ದೃಷ್ಟಿಯಲ್ಲಿ ಮಿಲಿಟೆಂಟ್‌ಗಳಿಗೆ ಬೆಂಬಲ ನೀಡುವ ಸ್ಥಳೀಯರು ನಿಶ್ಚಿತವಾಗಿ, ದೇಶದ್ರೋಹಿಗಳೇ. ಹೀಗಾಗಿ ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಯಾವ  ಹಿಂಜರಿಕೆಯೂ ಭದ್ರತಾ ಪಡೆಗಳಿಗೆ ಇರುವುದಿಲ್ಲ.

ವಸ್ತುಸ್ಥಿತಿಯೇನೆಂದರೆ ಬಹಳಷ್ಟು ಸ್ಥಳೀಯರು ಮಿಲಿಟೆಂಟ್‌ಗಳನ್ನು ರಕ್ಷಿಸಲು ತಮ್ಮ  ಪ್ರಾಣಗಳನ್ನೂ ಪಣಕ್ಕಿಡಲು ಸಿದ್ದವಿರುತ್ತಾರೆ. ಹತ್ಯೆಗೀಡಾಗುವ ಪ್ರತಿಯೊಬ್ಬ ಮಿಲಿಟೆಂಟ್ ಕೂಡಾ ಕಾಶ್ಮೀರಿಯೇ ಆಗಿರುತ್ತಾನೆ. ಪಾಕಿಸ್ತಾನದ ಆಡಳಿತಕೊಳ್ಳಪಟ್ಟಿರುವ ಪಶ್ಚಿಮ ಕಾಶ್ಮೀರದ ದೃಷ್ಟಿಯಿಂದ ಹೇಳುವುದಾದರೆ ಬಹಳಷ್ಟು ಮಿಲಿಟೆಂಟ್‌ಗಳು ಭಾರತದ ಆಡಳಿತಕ್ಕೊಳಪಟ್ಟಿರುವ ಪೂರ್ವ ಕಾಶ್ಮೀರಿಗಳೇ ಆಗಿರುತ್ತಾರೆ. ಇದು ಕಾಶ್ಮೀರಿಗಳಲ್ಲಿ ತೀವ್ರವಾದ ಆಕ್ರೋಶವನ್ನುಂಟುಮಾಡಿದೆ. ಈ ಮಿಲಿಟೆಂಟ್ ಅಥವಾ ಹಲವು ಮಿಲಿಟೆಂಟ್‌ಗಳ ಎನ್‌ಕೌಂಟರ್ ಹತ್ಯೆಗಳು, ಮತ್ತು ಆ ಹೆಸರಿನಲ್ಲಿ ವಿಶೇಷವಾಗಿ ಸಾಮಾನ್ಯ ನಾಗರಿಕರು ಹತ್ಯೆಗೊಳಗಾಗುವಂಥ ವಿದ್ಯಮಾನಗಳೇ ಕೊರೆಯುವ ಚಳಿಯನ್ನೂ ಲೆಕ್ಕಿಸದಂಥಾ ದಿಡೀರ್ ಸಾರ್ವಜನಿಕ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಅಂಥಾ ಪ್ರತಿರೋಧಗಳು ಹೆಚ್ಚೆಚ್ಚು ಕಸುವು ಪಡೆದುಕೊಳ್ಳುತ್ತಿದ್ದಂತೆ ಅವನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಪ್ರತಿಭಟಿನಾ ನಿರತ ಜನರ ಗುಂಪುಗಳ ಮೇಲೆ ಗುಂಡು ಹಾರಿಸುತ್ತಾರೆ. ಇದು ಮತ್ತಷ್ಟು ಪ್ರತಿಭಟನೆಗಳ ಸರಣಿಗೆ ಕಾರಣವಾಗುತ್ತದೆ.

ಕಾಶ್ಮೀರಿ ಪ್ರಜೆಗಳು ೨೭ ವರ್ಷಗಳ ಕಾಲ  ಮಿಲಿಟರಿ ಆಡಳಿತಕ್ಕೆ ಸದೃಶವಾದ ಆಡಳಿತಕ್ಕೆ ಗುರಿಯಾಗಿದ್ದಾರೆ; ಹೆಚ್ಚೂಕಡಿಮೆ ಇಡೀ ಪ್ರದೇಶವನ್ನೇ ಗಲಭೆಗ್ರಸ್ಠವೆಂದು ಪರಿಗಣಿಸಲಾಗಿದೆ. ಹೀಗಾಗಿ ನಾಗರಿಕರ ಮೇಲೆ ಭದ್ರತಾಪಡೆಗಳು ಎಸಗುವ ಬಲಾತ್ಕಾರ, ಚಿತ್ರಹಿಂಸೆ, ಅಪಹರಣ, ಅಥವಾ ಕೊಲೆಗಳಂತ ಅಪರಾಧಗಳ ವಿರುದ್ಧ ಯಾವ ಶಿಕ್ಷೆಗೂ ಗುರಿಯಾಗದ ರೀತಿ ಅವು ಕಾನೂನು ರಕ್ಷಣೆಯನ್ನು ಪಡೆದುಕೊಂಡಿವೆ. ಕಾಶ್ಮೀರದ ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್‌ಅಪಿಯರ್ಡ್ ಪರ್ಸನ್ (ಕಾಣೆಯಾದ ವ್ಯಕ್ತಿಗಳ ಪೋಷಕರ ಸಂಘ- ಂPಆP) ಸಂಸ್ಥೆಯ ೨೦೧೭ರ ಜನವರಿ ೧೦ ರ ಹೇಳಿಕೆಯ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಕಳೆದ ಜುಲೈ ೮ರಿಂದ ಪ್ರಾರಂಭಗೊಂಡು ಸಾಗುತ್ತಲೇ ಇರುವ ಜನ ಬಂಡಾಯದಲ್ಲಿ ಒಂದು ನೂರಕ್ಕೂ ಹೆಚ್ಚು ಜನಸಾಮಾನ್ಯರನ್ನು ಕೊಲ್ಲಲಾಗಿದೆ. ಭದ್ರತಾಪಡೆಗಳು ಪ್ರತಿಭಟನಾನಿರತರ ಮೇಲೆ ಸಿಡಿಸಿದ ಪೆಲೆಟ್‌ಗುಂಡುಗಳಿಂದಾಗಿ ಒಂದು ಸಾವಿರಕ್ಕೂ ಹೆಚ್ಚು ಜನರ ಕಣ್ಣುಗಳಿಗೆ ಗಂಭೀರವಾದ ಹಾನಿಯಾಗಿದೆ ಅಥವಾ ಕಣ್ಣುಗಳನ್ನೇ ಕಳೆದುಕೊಂಡು ಕುರುಡರಾಗಿದ್ದಾರೆ. ಕರಾಳವಾದ ಸಾರ್ವಜನಿಕ ಸುರಕ್ಷಾ ಕಾಯಿದೆ-೧೯೭೮ (ಪಬ್ಲಿಕ್ ಸೇಫ್ಟಿ ಆಕ್ಟ್) ಯಡಿ  ಅಪಾರ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರವೇ ವಿವಿಧ ಅಪರಾಧಗಳಡಿ ೮೦೦೦ದಷ್ಟು ಜನರನ್ನು ಬಂಧಿಸಲಾಗಿದೆ. ಸುದೀರ್ಘ ಕರ್ಫ್ಯೂಗಳು, ಮಾಧ್ಯಮ ಮತ್ತು ಇಂಟರ್‌ನೆಟ್ ಮೇಲಿನ ಪ್ರತಿಬಂಧಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಗಳಂಥಾ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧಗಳು ಕಾಶ್ಮೀರದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ.

ಕಾಣೆಯಾದ ವ್ಯಕ್ತಿಗಳ ತಂದೆತಾಯಿಗಳ ಮತ್ತು ಪ್ರೀತಿಪಾತ್ರರ ವೇದನೆಗಳು ಯಾರಿಗಾದರೂ ಅರ್ಥವಾಗುತ್ತದೆ. ಂPಆP ಸಂಸ್ಥೆಯ ಅಧ್ಯಯನದ ಪ್ರಕಾರ ೧೯೮೯ರಿಂದಾಚೆಗೆ ೮೦೦೦-೧೦೦೦೦ ಕಾಶ್ಮೀರಿಗಳು ಬವಂತಕ್ಕೆ ಗುರಿಯಾಗಿ ಕಾಣೆಯಾಗಿದ್ದಾರೆ ಮತ್ತು ನಂತರದಲ್ಲಿ ಸುಳ್ಳು ಎನ್‌ಕೌಂಟರಿನಲ್ಲಿ ಹತರಾಗಿದ್ದಾರೆ. ಈ ಹಿಂದಿನ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವೇ ಖುದ್ದು ೩೭೪೪ ಜನರು ಈ ರೀತಿ ಹತರಾಗಿರುವುದನ್ನು ಜಮ್ಮು-ಕಾಶ್ಮೀರ ವಿಧಾನ ಸಭೆಯಲ್ಲಿ ಒಪ್ಪಿಕೊಂಡಿತ್ತು. ಆದರೆ ಭಾರತ ಸರ್ಕಾರವು ಈ ಬಲಾತ್ಕಾರದ ಕಣ್ಮರೆ ಮತ್ತು ಹತ್ಯೆಗಳ ವಿದ್ಯಮಾನವನ್ನೇ ನಿರಾಕರಿಸುತ್ತಾ ಬಂದಿದೆ. ಅಷ್ಟು ಮಾತ್ರವಲ್ಲ, ಕಾಶ್ಮೀರದಲ್ಲಿನ  ಹಿಂಸಾಚಾರಕ್ಕೆ ಈ ರೀತಿ ಹತ್ಯೆಗೆ ಗುರಿಯಾದವರೇ ಕಾರಣರೆಂದು ದೂರುತ್ತಾ, ಬಲಿಪಶುಗಳನ್ನೇ ಬೇಟೆಗಾರರೆಂದು ಆರೋಪಿಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿರುವ ಈ ಬಲಾತ್ಕಾರದ ಕಣ್ಮರೆಯ ವಿರುದ್ಧ ಂPಆP ಸಂಸ್ಥೆಯು ಪ್ರತಿ ತಿಂಗಳ ೧೦ ರಂದು ಮೌನ ಪ್ರತಿಭmನೆಯನ್ನು ಮಾಡುತ್ತದೆ ಮತ್ತು ಅದರ ಸ್ಮರಣೆಯಲ್ಲಿ ಒಂದು ಕ್ಯಾಲೆಂಡರನ್ನು ಪ್ರಕಟಿಸುತ್ತಿದೆ.  ಅದು ಬಲಾತ್ಕಾರವಾಗಿ ಕಣ್ಮರೆಯಾದವರ ಕುಟುಂಬಗಳ ವೇದನೆಗಳ ನೆನಪುಗಳು ಅಳಿದುಹೋಗದಂತೆ ಕಾಪಿಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ತದನಂತರದ ರಾಜ್ಯ ಸರ್ಕಾರಗಳು ಈ ಬಲಾತ್ಕಾರದ ಕಣ್ಮರೆಯ ವಿರುದ್ಧ ಈವರೆಗೆ ಶಾಸನ ಸಭೆಯಲ್ಲಿ ಯಾವುದೇ ಕಾನೂನುನನ್ನು ಅಂಗೀಕರಿಸದೆ ತಮ್ಮ  ನಿರ್ದಯ ಕ್ರೌರ್ಯವನ್ನು ಮುಂದುವರೆಸಿವೆ. ತದನಂತರದ ಕೇಂದ್ರ ಸರ್ಕಾರಗಳು ಸಹ ಈ ರೀತಿಯ ಬಲಾತ್ಕಾರದ ಕಣ್ಮರೆಯಿಂದ ಜನರನ್ನು ರಕ್ಷಿಸುವ ಅಂತತರಾಷ್ಟ್ರೀಯ ಒಪ್ಪಂದಗಳನ್ನು ಅನುಮೋದಿಸದೆ ತಮ್ಮ ಸಂವೇದನಾ ಶೂನ್ಯತೆಯನ್ನು ಸಾಬೀತುಪಡಿಸಿವೆ.

ಮೂಲಭೂತವಾದ ವಿಷಯವೆಂದರೆ ಭಾರತದಲ್ಲಿರಲು ಇಚ್ಚಿಸದ ಬಹಳಷ್ಟು ಜನರಿರುವ ಕಾಶ್ಮೀರ ಕಣಿವೆಯ ಮೇಲೆ ೨೭ ವರ್ಷಗಳಿಂದ ಭಾರತವು ಸೈನಿಕ ಬಲವನ್ನು ಪ್ರಯೋಗಿಸುತ್ತಿದೆ. ದೆಲ್ಲಿ ಸರ್ಕಾರವು ಈ ಎಲ್ಲವನ್ನೂ ಭೌಗೋಳಿಕ ಸಮಗ್ರತೆ ಮತ್ತು ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತದೆ. ಕಾಶ್ಮೀರ ಕಣಿವೆಯಲ್ಲಿ ಸಂಭವಿಸುತ್ತಿರುವ ಎಲ್ಲದಕ್ಕೂ ಅದು ಪಾಕಿಸ್ತಾನವನ್ನು ದೂಷಿಸುತ್ತದೆ. ಅಲ್ಲಿ ನಡೆಯುತ್ತಿರುವ ಜನ ಬಂಡಾಯ ಮತ್ತು ಮಿಲಿಟೆಂಟ್ ದಾಳಿಗಳೆಲ್ಲವೂ ಪಾಕಿಸ್ತಾನ ಪ್ರಾಯೋಜಿತ ಎಂದು ಅದು ಭಾವಿಸುತ್ತದೆ. ಹಾಗೆ ನೋಡಿದಲ್ಲಿ ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯತೆಯು ಅಖಿಲ ಭಾರತ ರಾಷ್ಟ್ರೀಯತೆಯೇನೂ ಅಲ್ಲ; ಅದು ಭಾರತದ ಜನಸಂಖ್ಯೆಯ ಒಂದು ವಿಭಾಗವನ್ನು ಪ್ರತಿನಿಧಿಸುವ ಕೋಮುವಾದಿ ಹಿಂದೂತ್ವವಾದಿ ರಾಷ್ಟ್ರೀಯತೆಯಷ್ಟೇ ಆಗಿದೆ. ಈಗ ಅಧಿಕಾರದಲ್ಲಿರುವ ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ತಮ್ಮ ಆಳ್ವಿಕೆಯನ್ನು ಕಾಶ್ಮೀರದ ಮೇಲೆ ಹೇರಲು ಯಾವ ಅಳುಕು-ಅಂಜಿಕೆಯನ್ನೂ ತೋರುತ್ತಿಲ್ಲ. ಕಾಂಗ್ರೆಸ್ ಪ್ರಣೀತ ರಾಷ್ಟ್ರೀಯವಾದವೂ ಸಹ ಇದಕ್ಕಿಂತ ಹೆಚ್ಚೇನೂ ಭಿನ್ನವಿರಲಿಲ್ಲ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಹಾಗೆ ನೋಡಿದಲ್ಲಿ ಪಾಕಿಸ್ತಾನೀ ರಾಷ್ಟ್ರೀಯವಾದವೂ ಇದಕ್ಕಿಂತ ಉತ್ತಮವೇನಲ್ಲ. ಇದೀಗ, ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಲೋಚಿ ರಾಷ್ಟ್ರೀಯ ವಿಮೋಚನಾ ಹೋರಾಟವನ್ನು ಬೆಂಬಲಿಸುತ್ತೇವೆಂದು ಹೇಳುತ್ತಿರುವುದು ಅವರ ಬಗೆಗಿನ ಯಾವುದೇ ಪ್ರೀತಿ ಅಥವಾ ಸೌಹಾರ್ದತೆಯ ಕಾರಣಗಳಿಗಲ್ಲ ಎಂಬುದು ಸ್ಪಷ್ಟ. ಮತ್ತೊಂದೆಡೆ ಪಾಕಿಸ್ತಾನ ರಾಷ್ಟ್ರೀಯವಾದಿಗಳು ಕಾಶ್ಮೀರವು ಭಾರತದಿಂದ ಆಜಾದಿಯನ್ನು ಪಡೆಯುವುದನ್ನು ಬೆಂಬಲಿಸುತ್ತೇವೆಂದು ಹೇಳುತ್ತಿರುವಾಗಲೇ ತಮ್ಮ ಭಾಗದಲ್ಲಿರುವ ಆಜಾದ್ ಕಾಶ್ಮೀರವನ್ನು ಹೆಚ್ಚೂ ಕಡಿಮೆ ಅಂತರಿಕ ವಸಾಹತುವನ್ನಾಗಿಸಿಕೊಂಡಿದ್ದಾರೆ. ಆದರೆ ದೆಲ್ಲಿ ಸರ್ಕಾರಗಳು ಕಳೆದ ೨೭ ವರ್ಷಗಳಿಂದ ಕಾಶ್ಮೀರ ಕಣಿವೆಯ ಮೇಲೆ ನಿರಂತರ ಸೈನಿಕ ದುರಾಳ್ವಿಕೆಯನ್ನು ಹೇರಿರುವುದರಿಂದ, ಕಾಶ್ಮೀರಿ ಆಜಾದಿಯೆಂಬುದು, ಪ್ರಮುಖವಾಗಿ,  ಭಾರತದ ದಮನದಿಂದ ಸ್ವತಂತ್ರವಾಗಬೇಕೆಂಬ ಕಾಶ್ಮೀರಿ ಜನತೆಯ ಹೃದಯಾಂತರಾಳದ ಕೂಗೇ ಆಗಿಬಿಟ್ಟಿದೆ.


7

 ಸಂಘ ಪರಿವಾರವನ್ನು ನಾವೇಕೆ ವಿರೋಧಿಸುತ್ತೇವೆ?Image result for ಸನತ್ ಕುಮಾರ ಬೆಳಗಲಿ


-ಸನತ್ ಕುಮಾರ ಬೆಳಗಲಿ

ಸೌಜನ್ಯ : ವಾರ್ತಾಭಾರತಿ .

ಸಂಘ ಪರಿವಾರವನ್ನು ನೀವೇಕೆ ವಿರೋಧಿಸುತ್ತೀರಿ ಎಂಬ ಪ್ರಶ್ನೆಯನ್ನು ಅನೇಕರು ಆಗಾಗ್ಗೆ ನನಗೆ ಮತ್ತು ನನ್ನಂತೆಯೇ ಯೋಚಿಸುವವರಿಗೆ ಕೇಳುತ್ತಾರೆ. ಹೀಗೆ ಯೋಚಿಸುವವರಿಗೆ ತಾವೇಕೆ ಆರ್ಎಸ್ಎಸ್ ಪರವಾಗಿ ಇದ್ದಾರೆಂಬ ಸ್ಪಷ್ಟ ಕಲ್ಪನೆಯಿಲ್ಲ.ನೀವೇಕೆ ಅಲ್ಲಿದ್ದೀರಿಯೆಂದು ಕೇಳಿದರೆ, ಗೊಡ್ಡು ಪುರಾಣ ಆರಂಭಿಸುತ್ತಾರೆ. ಮುಸ್ಲಮಾನರು, ಕ್ರೈಸ್ತರ ಸಂಖ್ಯೆ ಹೆಚ್ಚುತ್ತಿದೆ. ಅವರು ಐವರು ಹೆಂಡಂದಿರನ್ನು ಕಟ್ಟಿಕೊಂಡು 50 ಮಕ್ಕಳನ್ನು ಹಡೆಯುತ್ತಾರೆ. ಇನ್ನೂ ಐದು ವರ್ಷಗಳಲ್ಲಿ 50 ಸಾವಿರ ಜನರು ಕ್ರೈಸ್ತ ಮತಕ್ಕೆ ಮತಾಂತರ ಆಗುತ್ತಾರೆಂದು ರೈಲು ಬಿಡುತ್ತಾರೆ. ಇದಕ್ಕೆ ಪೂರಕವಾಗಿ ಹಿಂದೂ ಹೆಣ್ಣುಮಕ್ಕಳು ತಲಾ ಐವರು ಮಕ್ಕಳನ್ನು ಹಡೆಯಬೇಕೆಂದು ಮೋಹನ್ ಭಾಗವತ್ರಿಂದ ಹಿಡಿದು ಸಂಘ ಪರಿವಾರದ ಪುಡಿ ನಾಯಕರವರೆಗೆ ಎಲ್ಲರೂ ಹೇಳುತ್ತಾರೆ. ಸಂಘ ಪರಿವಾರವನ್ನು ಸಮಥರ್ಿಸುವವರು ತಾವು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಯಾವ ರಾಷ್ಟ್ರವೆಂದು ಕೇಳಿದರೆ, ಹಿಂದೂ ರಾಷ್ಟ್ರ ಎನ್ನುತ್ತಾರೆ. ಹಿಂದೂ ರಾಷ್ಟ್ರದಲ್ಲಿ ದಲಿತರಿಗೆ ಮೀಸಲಾತಿ ಇರಬಾರದೆಂದು ಹೇಳುತ್ತಾರೆ. ಹೀಗೆ ತರಹಾವರಿ ವಾದಗಳ ಮೂಲಕ ತಮ್ಮ ನಿಲುವನ್ನು ಸಮಥರ್ಿಸಿಕೊಳ್ಳುತ್ತಾರೆ.

ಸಂಘ ಪರಿವಾರವನ್ನು ನಾವೇಕೆ ವಿರೋಧಿಸುತ್ತೇವೆ ಎಂಬುದಕ್ಕೆ ನಮಗೆ ಸ್ಪಷ್ಟ ಕಾರಣಗಳಿವೆ. ರಾಷ್ಟ್ರೀಯತೆ ಪಾಠ ಮಾಡುತ್ತಲೇ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಮಾಹಿತಿ ರವಾನೆ ಮಾಡುತ್ತಿದ್ದ ಸಂಘ ಪರಿವಾರದ ಕಾರ್ಯಕರ್ತರ ಬಂಧನ ಮತ್ತು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಚಿಕ್ಕಮಗಳೂರಿನಲ್ಲಿ ಸಿಕ್ಕಿಬಿದ್ದ ಬಿಜೆಪಿ ಯುವಮೋಚರ್ಾ ನಾಯಕರು ಇವಷ್ಟೇ ಆರೋಪಗಳನ್ನಲ್ಲ ಹಲವಾರು ಮೂಲಭೂತ ಪ್ರಶ್ನೆಗಳನ್ನು ಎತ್ತಿದರೆ ನಮಗೆ ಉತ್ತರ ಸಿಗುವುದಿಲ್ಲ. ನಮ್ಮ ಪ್ರಶ್ನೆಗಳಿಗೆ ಅವಾಚ್ಯಪದಗಳ ಬೈಗುಳ ಉತ್ತರವಾಗುತ್ತದೆ. ಈ ಅಸಹನೆ ಮಾತಿಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ ಎಂಬುದು ದಾಬೋಳ್ಕರ, ಪಾನ್ಸಾರೆ ಮತ್ತು ಕಲಬುಗರ್ಿಯವರ ಹತ್ಯೆಯಿಂದ ಸಾಬೀತಾಗಿದೆ. ಈ ಚಿಂತಕರ ಹತ್ಯೆಯನ್ನು ಅಂತರಂಗದಲ್ಲಿ ಸಮಥರ್ಿಸಿಕೊಳ್ಳುತ್ತ ಬಹಿರಂಗದಲ್ಲಿ ಮೈಗೆ ಅಂಟಿಕೊಂಡ ಕಲೆಯನ್ನು ಒರೆಸಿಕೊಳ್ಳುತ್ತ ಇರುತ್ತಾರೆ.

ಆರ್ಎಸ್ಎಸ್ ಜೊತೆಗಿನ ನಮ್ಮ ವಿರೋಧ ವೈಯಕ್ತಿಕವಲ್ಲ. ಅವರೊಂದಿಗೆ ವೈಯಕ್ತಿಕ ದ್ವೇಷವೂ ಇಲ್ಲ. ವ್ಯಕ್ತಿಗತವಾಗಿ ನಮ್ಮ ಕೆಲ ಸ್ನೇಹಿತರು ಅಲ್ಲಿದ್ದಾರೆ. ಆದರೆ ಸಂಘದ ಮೊದಲ ಸರಸಂಘ ಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ನಮ್ಮನ್ನು ಅಂದ್ರೆ ಕಮ್ಯುನಿಸ್ಟರನ್ನು, ಸಮಾಜವಾದಿಗಳನ್ನು ತಮ್ಮ ಶತ್ರುಗಳ ಸಾಲಿಗೆ ಸೇರಿಸುವುದರಿಂದ ನಾವು ಅನಿವಾರ್ಯವಾಗಿ ಸಂಘರ್ಷಕ್ಕೆ ಇಳಿಯಬೇಕಾಗಿದೆ. ಕಮ್ಯುನಿಸ್ಟರು, ಮುಸ್ಲಮಾನರು ಮತ್ತು ಕ್ರೈಸ್ತರು ನಮ್ಮ ಮೊದಲ ಶತ್ರುಗಳೆಂದು 70 ವರ್ಷಗಳ ಹಿಂದೆಯೇ ಹೇಳಿದರು. ಹಿಂದೂ ರಾಷ್ಟ್ರ ನಿಮರ್ಾಣದ ಗುರಿ ಸಾಧನೆಗಾಗಿ ಈ ಶತ್ರುಗಳ ನಾಶ ಅಗತ್ಯವೆಂದು ಪ್ರತಿಪಾದಿಸಿದರು. ಆಗ ಯಾವುದೋ ಗುಂಗಿನಲ್ಲಿ ಈ ಮಾತನ್ನು ಹೇಳಿದ್ದಾರೆಂದು ತಳ್ಳಿ ಹಾಕಲು ಬರುವುದಿಲ್ಲ. ಗೋಳ್ವಲ್ಕರ್ ಬರೆದ 'ಚಿಂತನಗಂಗಾ' ಎಂಬ ಪುಸ್ತಕವನ್ನೇ ಇಂದಿಗೂ ಪ್ರಮಾಣ ಗ್ರಂಥವೆಂದು ಇಟ್ಟುಕೊಂಡಿರುವ ಆರ್ಎಸ್ಎಸ್ ಸಂಘಟನೆಗೆ ಈ ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಜನತಂತ್ರದಲ್ಲ ನಂಬಿಕೆ ಇಲ್ಲದವರನ್ನು ನಾವು ವಿರೋಧಿಸಲೇಬೇಕಾಗುತ್ತದೆ. ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಆರ್ಎಸ್ಎಸ್ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿಲ್ಲ. ನಮಗೆಲ್ಲ ಅಂದ್ರೆ ಈ ದೇಶದ ಕೋಟ್ಯಂತರ ಜನರಿಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನ ದಾರಿದೀಪವಾಗಿದೆ. ಆದರೆ ಸಂಘ ಪರಿವಾರಕ್ಕೆ ಗೋಳ್ವಲ್ಕರ್ ಬರೆದ 'ಚಿಂತನ ಗಂಗಾ' ಪುಸ್ತಕ ಪ್ರಮಾಣ ಗ್ರಂಥವಾಗಿದೆ.

ದಲಿತರನ್ನು ತಮ್ಮ ಬಲೆಗೆ ಹಾಕಿಕೊಳ್ಳಲು ತೋರಿಕೆಗೆ ಅಂಬೇಡ್ಕರ್ ಫೋಟೋ ಹಾಕಿಕೊಳ್ಳುವ ಸಂಘ ಪರಿವಾರ ಅಂತರಂಗದಲ್ಲಿ ಅವರನ್ನು ತುಂಬಾ ದ್ವೇಷಿಸುತ್ತದೆ. ಗಾಂಧಿ, ನೆಹರೂ ಅವರನ್ನು ತೇಜೋವಧೆ ಮಾಡಿದಂತೆ ಅಂಬೇಡ್ಕರ್ ಅವರನ್ನು ಅವಹೇಳನೆ ಮಾಡಲು ಹೊರಟರೆ, ಏಟು ತಿನ್ನಬೇಕಾಗುತ್ತದೆ ಎಂದು ಹೆದರಿ ಹೆಡಗೆವಾರ ಪಕ್ಕ ಅಂಬೇಡ್ಕರ್ ಅವರ ಫೋಟೋ ಇಟ್ಟು ಮೆರವಣಿಗೆ ಮಾಡುತ್ತದೆ. ಆದರೆ ಅದರ ಬದ್ಧತೆ ಇಂದಿಗೂ ಮನುವಾದಿ ಹಿಂದೂ ರಾಷ್ಟ್ರ ನಿಮರ್ಾಣಕ್ಕಿದೆ. ಇದು ಬರೀ ಬದ್ಧತೆಯಾಗಿ ಉಳಿದಿಲ್ಲ. ಈ ಗುರಿ ಸಾಧನೆಗಾಗಿ ಮಹಾತ್ಮಗಾಂಧೀಜಿಯವರ ಹತ್ಯೆ ನಡೆಯಿತು. ಅಯೋಧ್ಯೆ ಬಾಬ್ರಿ ಮಸೀದಿ ನೆಲಸಮಗೊಂಡಿತು. ಗುಜರಾತ್ ಹತ್ಯಾಕಾಂಡದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಬಲಿಯಾದರು. ಇವೆಲ್ಲ ಘಟನೆಗಳು ನಡೆಯದಿದ್ದರೆ, ಸಂಘ ಪರಿವಾರವನ್ನು ನಾವು ಈ ಪರಿ ವಿರೋಧಿಸುವ ಪ್ರಸಂಗ ಬರುತ್ತಿರಲಿಲ್ಲ. ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಈ ಪರಿವಾರ ಇಂದಿಗೂ ಸಿದ್ಧವಿಲ್ಲ. ಅಂತಲೇ ಮನೆಯಲ್ಲಿ ಗೋಮಾಂಸ ಇದೆಯೆಂಬ ನೆಪದಲ್ಲಿ ಅಕ್ಲಾಕ್ ಅಂತಹವರ ಹತ್ಯೆ ನಡೆಯುತ್ತಲೇ ಇದೆ.

ಆರ್ಎಸ್ಎಸ್ಗೆ ಅಂತರಂಗ ಮತ್ತು ಬಹಿರಂಗವಾಗಿ ಎರಡು ಕಾರ್ಯಸೂಚಿಗಳಿವೆ. ಅಂತರಂಗದಲ್ಲಿ ಶ್ರೇಣೀಕೃತ ಹಿಂದೂ ರಾಷ್ಟ್ರ ಕನಸು ಕಾಣುತ್ತ ಬಹಿರಂಗವಾಗಿ ಕಾಂಗ್ರೆಸ್ ವಿರೋಧಿ ರಾಜಕಾರಣದ ಮಾತುಗಳನ್ನಾಡಿ ಪ್ರತಿಪಕ್ಷಗಳನ್ನು ಬಲೆಗೆ ಹಾಕಿಕೊಳ್ಳಲು ಯತ್ನಿಸುತ್ತದೆ. ಈ ಮಾತನ್ನು ನಂಬಿ ಜಯಪ್ರಕಾಶ ನಾರಾಯಣ ಅಂತಹವರು 70ರ ದಶಕದಲ್ಲಿ ಕಾಂಗ್ರೆಸ್ ವಿರೋಧಿ ರಂಗದಲ್ಲಿ ಜನಸಂಘವನ್ನು ಸೇರಿಸಿಕೊಂಡರು. ಆಗ ಅಸ್ತಿತ್ವದಲ್ಲಿದ್ದ ಲೋಹಿಯಾ ಅವರ ಸಮಾಜವಾದಿ ಪಕ್ಷ ಸಂಸ್ಥಾ ಕಾಂಗ್ರೆಸ್ ಮತ್ತು ಸ್ವತಂತ್ರ ಪಕ್ಷಗಳ ಜೊತೆ ಜನಸಂಘವು ಸೇರಿ ಜನತಾ ಪಕ್ಷ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್ ವಿರುದ್ಧ ಒಂದೇ ಪಕ್ಷ ಅಸ್ತಿತ್ವಕ್ಕೆ ಬಂದಿದ್ದರಿಂದ 1977ರಲ್ಲಿ ಪ್ರಥಮ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸಕರ್ಾರ ಅಸ್ತಿತ್ವಕ್ಕೆ ಬಂತು. ಅಂದಿನ ಮೊರಾಜರ್ಿ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ ಮತ್ತು ಜೋಶಿ ಮಂತ್ರಿಗಳಾದರು. ಆರ್ಎಸ್ಎಸ್ನ ರಾಜಕೀಯ ವೇದಿಕೆ ಜನಸಂಘ ಜನತಾ ಪಕ್ಷದಲ್ಲಿ ವಿಲೀನಗೊಂಡರೂ ಆರ್ಎಸ್ಎಸ್ ಪ್ರತ್ಯೇಕವಾಗಿ ಉಳಿಯಿತು. ಆಗ ಸಂವಿಧಾನೇತರ ಅಧಿಕಾರ ಕೇಂದ್ರವಾಗಿ ತನ್ನ ಅಜೆಂಡಾ ಜಾರಿಗೆ ತರಲು ಯತ್ನಿಸಿತು. ಇದನ್ನು ಮಧು ಲಿಮಿಯೆ ಮುಂತಾದ ಸಮಾಜವಾದಿ ನಾಯಕರು ಪ್ರತಿಭಟಿಸಿದಾಗ ದೇಶದ ಪ್ರಥಮ ಕಾಂಗ್ರೆಸೇತರ ಸಕರ್ಾರ ಪತನಗೊಂಡಿತು. ತಮ್ಮ ಅಸ್ತಿತ್ವ ಕಳೆದುಕೊಂಡು ಜನತಾ ಪಕ್ಷದಲ್ಲಿ ವಿಲೀನಗೊಂಡಿದ್ದ ಸಮಾಜವಾದಿ ಪಕ್ಷ ಸಂಸ್ಥಾ ಕಾಂಗ್ರೆಸ್ ಮುಂತಾದ ಪಕ್ಷಗಳು ಮತ್ತೆ ಚೇತರಿಸಲೇ ಇಲ್ಲ. ಆದರೆ ಜನ ಸಂಘ ಭಾರತೀಯ ಜನತಾ ಪಕ್ಷವಾಗಿ ಮರುಹುಟ್ಟು ಪಡೆಯಿತು.

ಗಾಂಧಿ ಹಂತಕ ನಾಥುರಾಮ ಗೋಡ್ಸೆಗೂ ಮತ್ತು ತಮಗೂ ಸಂಬಂಧವಿಲ್ಲವೆಂದು ಬಹಿರಂಗವಾಗಿ ಹೇಳುತ್ತ ಅಂತರಂಗದಲ್ಲಿ ಗೋಡ್ಸೆ ಆರಾಧನೆ ಮಾಡುತ್ತ ಬಂದ ಆರ್ಎಸ್ಎಸ್ 90ರ ದಶಕದಲ್ಲಿ ಮತ್ತೆ ಮುಂಚೂಣಿಗೆ ಬಂತು. ದೇಶದಲ್ಲಿ ಜಾಗತೀಕರಣ ಪ್ರವೇಶವಾಗುವ ಕಾಲಘಟ್ಟದಲ್ಲೇ ಅಯೋಧ್ಯೆಗೆ ರಥಯಾತ್ರೆ ಆರಂಭಿಸಿದ ಅಡ್ವಾಣಿಯವರು ಹಿಂದೂ ಮುಸ್ಲಮಾನರಲ್ಲಿ ಅಪನಂಬಿಕೆಯ ಅಡ್ಡಗೋಡೆ ಕಟ್ಟುವಲ್ಲಿ ಯಶಸ್ವಿಯಾದರು. ಇದರ ಪರಿಣಾಮವಾಗಿ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ 80 ಸ್ಥಾನಗಳನ್ನು ಹೆಚ್ಚಿಸಿಕೊಂಡಿತು. ಈ ರಾಜಕಾರಣದಿಂದ ಅಧಿಕಾರ ಸುಲಭವಾಗಿ ದುಕ್ಕುವುದೆಂದು ಗೊತ್ತಾದಾಗ ಬಾಬ್ರಿ ಮಸೀದಿ ನಾಶ, ಗುಜರಾತ ಹತ್ಯಾಕಾಂಡ ಮುಂತಾದ ಘಟನೆಗಳು ನಡೆಯುತ್ತ ಬಂದವು. ಬಾಬ್ರಿ ಮಸೀದಿ ನಾಶವಾದಾಗ, ಹೀಗಾಗಬಾರದಿತ್ತು ಎಂದು ವಾಜಪೇಯಿ ಮತ್ತು ಅಡ್ವಾಣಿ ಗೊಣಗಾಡಿದರೂ ಕೂಡ ಅಶೋಕ ಸಿಂಘಾಲ ಮತ್ತು ಪ್ರವೀಣ್ ತೊಗಾಡಿಯಾ ಇದನ್ನು ಬಲವಾಗಿ ಸಮಥರ್ಿಸಿಕೊಂಡರು. ಬಾಬ್ರಿ ಮಸೀದಿ ನೆಲಸಮಗೊಂಡ ಡಿಸೆಂಬರ್ 6ರ ದಿನವನ್ನು ಶೌರ್ಯ ದಿನವೆಂದು ಸಂಘ ಪರಿವಾರ ಈಗಲೂ ಆಚರಿಸುತ್ತದೆ.

ಗುಜರಾತ ಹತ್ಯಾಕಾಂಡದ ನಂತರವೂ ಅದನ್ನು ದಕ್ಕಿಸಿಕೊಂಡು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸಂಘ ಪರಿವಾರಕ್ಕೆ ಹೊಸ ಉತ್ಸಾಹ ಬಂತು. 800 ವರ್ಷಗಳ ನಂತರ ದಿಲ್ಲಿಯ ಅಧಿಕಾರ ಹಿಂದೂಳಿಗೆ ಸಿಕ್ಕಿದೆಯೆಂದು ಅಶೋಕ ಸಿಂಘಾಲ್ ಹೇಳಿದರು. 1947ರಲ್ಲಿ ಬ್ರಿಟಿಷರನ್ನು ತೊಲಗಿಸಿ ದೇಶ ಸ್ವಾತಂತ್ರ್ಯ ಪಡೆದುದ್ದನ್ನು ಕೂಡ ಸಿಂಘಾಲ್ ಒಪ್ಪಿಕೊಂಡಿಲ್ಲ. ನೆಹರೂ, ಪಟೇಲ್ ಕೂಡ ಅವರ ಕಣ್ಣಲ್ಲಿ ಹಿಂದೂಗಳಲ್ಲ. ಸಿಂಘಾಲ್ ಮಾತ್ರವಲ್ಲ, ಮೋಹನ್ ಭಾಗವತ್ರು ಕೂಡ ರೋಮಾಂಚಿತರಾಗಿ ಆರ್ಯ ಸಂಸ್ಕೃತಿ ಪ್ರಧಾನ ಹಿಂದೂ ರಾಷ್ಟ್ರದ ಮಾತುಗಳನ್ನಾಡಿದರು.

ಗೋಳ್ವಲ್ಕರ್ ಶತ್ರುಗಳೆಂದು ಕಮ್ಯುನಿಸ್ಟರು, ಮುಸ್ಲಮಾನರು ಮತ್ತು ಕ್ರೈಸ್ತರ ಮೇಲೆ ಮಾತ್ರವಲ್ಲ ಪುಣೆಯ ಪೇಶ್ವೆ ಸಾಮ್ರಾಜ್ಯವನ್ನು ಧ್ವಂಸಗೊಳಿಸಿದ ದಲಿತರ ಮೇಲೆಯೂ ಕೂಡ ಸಂಘ ಪರಿವಾರ ಇಂದಿಗೂ ಕತ್ತಿ ಮೆಸೆಯುತ್ತಿದೆ. ತನ್ನ ಅಂತಿಮ ಗುರಿಯಾದ ಹಿಂದೂ ರಾಷ್ಟ್ರ ನಿಮರ್ಾಣಕ್ಕೆ ಮುಖ್ಯ ಅಡ್ಡಿಯಾಗಿರುವ ಸಂವಿಧಾನವನ್ನು ಬದಲಿಸುವ ಅದು ಕಾಯರ್ೋನ್ಮುಖವಾಗಿದೆ. ದಲಿತರಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದಾರೆ. ಬರೀ ಇದಷ್ಟೇ ಕಾರಣವಲ್ಲ, ಬಸವ, ಬುದ್ಧ, ಫುಲೆ, ಅಂಬೇಡ್ಕರ್, ಗಾಂಧೀಜಿ ಕಟ್ಟಿದ ಭಾರತವನ್ನು ಅಪಹರಿಸಿ ಮನು, ಗೋಳ್ವಲ್ಕರ್, ಗೋಡ್ಸೆ, ಸಾವರ್ಕರ್ ಭಾರತವನ್ನಾಗಿ ಮಾಡುವ ಯತ್ನವನ್ನು ಸಂಘ ಪರಿವಾರವು ಈಗಲೂ ತೀವ್ರವಾಗಿ ನಡೆಸಿರುವುದನ್ನು ನಾವು ವಿರೋಧಿಸಬೇಕಾಗಿದೆ. ಬಸವಣ್ಣ, ಗಾಂಧಿಯನ್ನು ಕೊಂದವರು ದಾಬೋಳ್ಕರ್, ಪಾನ್ಸಾರೆ ಮತ್ತು ಕಲಬುಗರ್ಿಯವರನ್ನು ಕೊಂದರು. ಇತಿಹಾಸದಲ್ಲಿ ಸಮಾನತೆಯ ಆಶಯಗಳಿಗಾಗಿ ಸಂತ ತುಕಾರಾಂ, ಚೋಕಾಮೇಳ, ಚಕ್ರತೀರ್ಥ ಹೀಗೆ ನೂರಾರು ಚೇತನಗಳು ತಮ್ಮನ್ನು ಸುಟ್ಟುಕೊಂಡು ಬೆಳಕನ್ನು ನೀಡಿವೆ. ಈ ಹೋರಾಟ ಇಂದಿಗೂ ನಡೆದಿದೆ. ಕೇರಳದಲ್ಲಿ ನಿತ್ಯವೂ ಕಮ್ಯುನಿಸ್ಟರ ಮೇಲೆ ದಾಳಿ ನಡೆಯುತ್ತಿದೆ.

ಆರ್ಎಸ್ಎಸ್ ತನ್ನ ಜೀವವಿರೋಧಿ ಕಾಯರ್ಾಚರಣೆ ನಿಲ್ಲಿಸುವವರೆಗೆ ನಾವು ಅದನ್ನು ವಿರೋಧಿಸಲೇಬೇಕಾಗುತ್ತದೆ. ಅಮಾಯಕ ಯುವಕರ ಮೆದುಳಲ್ಲಿ ಹಿಂದೂತ್ವದ ವಿಷವನ್ನು ತುಂಬಿ ಸರ್ವಜನಾಂಗದ ಶಾಂತಿಯ ತೋಟವಾದ ಭಾರತವನ್ನು ನಾಶ ಮಾಡಲು ಬಿಡುವುದಿಲ್ಲ. ಬಸವಣ್ಣ, ತುಕಾರಾಂರನ್ನು ನೀವು ಹೇಗೆ ಕೊಂದಿರಿಯೆಂದು ಗೊತ್ತಿದೆ. ಆ ಎಚ್ಚರ ಇಟ್ಟಕೊಂಡೇ ನಿಮ್ಮೊಂದಿಗೆ ರಾಜಿರಹಿತ ಹೋರಾಟ ಮುಂದುವರೆಸುತ್ತೇವೆ.

ಮೀಸಲಾತಿ ಮತ್ತು ಶೋಷಿತರು


Image result for ಡಾ. ಎಚ್.ಡಿ. ಉಮಾಶಂಕರ್,


 ಡಾ. ಎಚ್.ಡಿ. ಉಮಾಶಂಕರ್
Image result for ಬಿ. ಶ್ರೀಪಾದ್  ಭಟ್


ಬಿ. ಶ್ರೀಪಾದ್  ಭಟ್


ಸೌಜನ್ಯ : ಪ್ರಜಾವಾಣಿ
‘ಬಡ್ತಿ ಮೀಸಲಾತಿ: ತೀರ್ಪಿಗೆ ತಲೆಬಾಗಿ’ ಎನ್ನುವ ಶೀರ್ಷಿಕೆ ಹೊತ್ತ ಮಹೇಶ ಸಿ.ಎಚ್. ಅವರ ಲೇಖನಕ್ಕೆ  (ಪ್ರ.ವಾ., ಸಂಗತ, ಫೆ. ೧೭) ಪ್ರತಿಕ್ರಿಯೆ. ಇಡೀ ಲೇಖನದ ತಿರುಳು, ಮೀಸಲಾತಿಯನ್ನು ಅರೆಬೆಂದ ಮನಸ್ಸಿನಿಂದ ಅರ್ಥಮಾಡಿಕೊಂಡಂತಿದೆ.

‘ಶತಮಾನಗಳ ಕಾಲ ಕುಲೀನರಿಂದ ಶೋಷಣೆಗೊಳಗಾಗಿದ್ದಾರೆಂಬ ಭಾವನೆಯಿಂದ ದಲಿತರು, ಶೋಷಿತರನ್ನು ಸಮಾಜದ ಮೇಲ್‌ಸ್ತರಕ್ಕೆ ಕೊಂಡೊಯ್ಯುವ ಪ್ರಯತ್ನದ ಭಾಗವಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ’ ಎಂಬುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಮಾತುಗಳನ್ನು ಪ್ರಜ್ಞಾವಂತರು ಕೊಂಚ ಸೂಕ್ಷ್ಮವಾಗಿ ಅವಲೋಕಿಸಿದರೂ ಸಾಕು ಇದರ ಹಿಂದಿರುವ ದಲಿತ ಮತ್ತು ಶೋಷಿತರ ವಿರೋಧಿ ನೆಲೆಗಳು ಧುತ್ತನೆ ಎದುರು ನಿಲ್ಲುತ್ತವೆ.

‘ಅರ್ಹತೆ’ ಮತ್ತು ‘ಸಾಮಾಜಿಕ ನ್ಯಾಯ’ ಇವೆರಡನ್ನೂ ಏಕರೂಪಿಯಾಗಿ, ಹೊರಗಣವಾಗಿ ನೋಡುವ ಜೀವವಿರೋಧಿಯಾದ ದೋಷಪೂರಿತ ದೃಷ್ಟಿಕೋನವನ್ನು ಕಳಚಿಕೊಂಡು ಇವೆರಡಕ್ಕೂ ಬಹುರೂಪಿ ಆಯಾಮಗಳಿವೆ ಎನ್ನುವುದನ್ನು ಮನಗಾಣಬೇಕಿದೆ. ಒಂದನ್ನು ಬೆಂಬತ್ತಿ ಹೋಗುವುದರ ಮೂಲಕ ಮತ್ತೊಂದನ್ನು ತ್ಯಜಿಸಬೇಕು ಎನ್ನುವ ವಾದವನ್ನು ಅಸಮಾನತೆಯ ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಬುದ್ಧನಿಂದ ಮೊದಲುಗೊಂಡು ಅಂಬೇಡ್ಕರ್‌ ಅವರವರೆಗೆ ನಡೆದುಬಂದ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧದ ಸಾಮಾಜಿಕ ಕ್ರಾಂತಿಯನ್ನು ಪ್ರತಿ ಹಂತದಲ್ಲಿ ತೀವ್ರವಾಗಿ ವಿರೋಧಿಸಿದ ಪುರೋಹಿತಶಾಹಿಗಳು ಅಸಮಾನತೆಯ ಜಾತಿ ಪದ್ಧತಿಯನ್ನು ಇಂದಿಗೂ ಬೆಂಬಲಿಸುತ್ತಿದ್ದರೆ, ಹಿಂದೂ ಧರ್ಮದ ಸುಧಾರಣಾವಾದಿಗಳು ತಳ ಸಮುದಾಯಗಳ ಸಾಮಾಜಿಕ-ಶೈಕ್ಷಣಿಕ ಸಬಲೀಕರಣಕ್ಕಾಗಿ ಮೀಸಲಾತಿ ಎನ್ನುವ ನ್ಯಾಯದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಿರುಚಿ  ‘ಹರಿಜನ ಕಲ್ಯಾಣ’ ಎನ್ನುವ ಮರೆಮೋಸದ ಸಿದ್ಧಾಂತದ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ.

ಇಂದು ತಳಸಮುದಾಯಗಳು ಮೀಸಲಾತಿಯ ಮೂಲಕ ಸಾಮಾಜಿಕವಾಗಿ ಚಲನಶೀಲತೆ ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿ ಇದೇ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲಕ ಶತಮಾನಗಳ ಕಾಲ ಎಲ್ಲಾ ಬಗೆಯ ಸವಲತ್ತುಗಳನ್ನು, ಅಧಿಕಾರವನ್ನು ಅನುಭವಿಸಿದ ಮೇಲ್ಜಾತಿಗಳು ‘ಜಾತಿ ಎಲ್ಲಿದೆ?’ ಎನ್ನುವ ಶಿರೋನಾಮೆ ಅಡಿಯಲ್ಲಿ ವಿತಂಡವಾದ ಹೂಡುತ್ತಿರುವುದು ನಿಜಕ್ಕೂ ಖಂಡನೀಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ–ಧರ್ಮದವರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಡಳಿತದಲ್ಲಿ ಪ್ರಾತಿನಿಧ್ಯ ಹೊಂದಿರಬೇಕು ಎನ್ನುವುದು ಸಾಮಾಜಿಕ ನ್ಯಾಯದ ಮೂಲ ಸಿದ್ಧಾಂತ. ಈ ಮೀಸಲಾತಿಯ ಅಡಿಯಲ್ಲಿ ವ್ಯಕ್ತಿಯನ್ನು ಆದ್ಯತೆಯಾಗಿ ಪರಿಗಣಿಸುವುದಿಲ್ಲ. ಸಮುದಾಯವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ.

ತಳ ಸಮುದಾಯದ ವ್ಯಕ್ತಿಯೊಬ್ಬ ಆರ್ಥಿಕವಾಗಿ ಮೇಲಿನ ಸ್ತರಕ್ಕೇರಿದರೆ ಅದು ಸಾಮಾಜಿಕ ನ್ಯಾಯ ಜಾರಿಗೊಂಡಿದೆ ಎಂದು ಅನಿಸಿಕೊಳ್ಳುವುದಿಲ್ಲ. ಇಡೀ ಶೋಷಿತ ಸಮುದಾಯವೇ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ಆಗಲೇ ಸಾಮಾಜಿಕ ನ್ಯಾಯದ ಅನುಷ್ಠಾನ. ಇದು ಇಂಡಿಯಾದಲ್ಲಿ ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಸಾಧ್ಯವಾಗಿಲ್ಲ. ಈ ದೇಶದಲ್ಲಿ ಜಾತಿ ಮತ್ತು ಅಸಮಾನತೆ ಎಲ್ಲಿಯವರೆಗೆ ಮುಂದುವರೆಯುತ್ತದೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು.ಇದನ್ನು ಮೀಸಲಾತಿ ವಿರೋಧಿಗಳು ಅರಿತುಕೊಳ್ಳಬೇಕು 

ಮೀಸಲಾತಿಯನ್ನು ವಿರೋಧಿಸಲಿಕ್ಕೆ ಯಾರು ಮೀಸಲಾತಿಯನ್ನು ಜಾರಿಗೆ ತಂದರೋ ಅವರನ್ನೇ ಅಸ್ತ್ರವಾಗಿ ಬಳಸಿರುವುದು ಈ ಲೇಖನದ ಮತ್ತೊಂದು ಹಿರಿಮೆ! ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಮೀಸಲಾತಿಯನ್ನು ಸಂವಿಧಾನ ಜಾರಿಯಾದ ಹತ್ತು ವರ್ಷಗಳಲ್ಲಿ ಕೊನೆಗೊಳಿಸಬೇಕು’ ಎಂದು ಎಲ್ಲಿಯೂ ದಾಖಲಿಸಿಲ್ಲ. ಅದೂ ಮಾತಿಗೆಂಬಂತೆ ಬಂದ ರಾಜಕೀಯದಲ್ಲಿನ ಮೀಸಲಾತಿಯ ಮಾತಿನ ಜಾಡು ಹಿಡಿದು ಇಡೀ ಮೀಸಲಾತಿಗೇ ಕುತ್ತು ತರಲು ಹೊರಟಿರುವುದು ದಲಿತರ ವಿರೋಧಿ ನೀತಿಯಲ್ಲದೆ ಮತ್ತೇನೂ ಅಲ್ಲ.

ದೇಶದ ಭವಿಷ್ಯ, ಅಭಿವೃದ್ಧಿಗೆ ಮೀಸಲಾತಿ ತೊಡಕಾಗಿದೆ ಎನ್ನುವ ಇವರು ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಮೀಸಲಾತಿಯ ಪ್ರಮಾಣ ಎಷ್ಟು ಜಾರಿಯಾಗಿದೆ? ಅದರಲ್ಲಿ ಶೋಷಿತ ಸಮುದಾಯದವರ ಪಾಲೆಷ್ಟು ಅಥವಾ ಮೀಸಲಾತಿ ಇಲ್ಲವೆನ್ನುವ ಶೋಷಕ ಸಮುದಾಯಗಳು ಹೊಂದಿರುವ ಪ್ರಾತಿನಿಧ್ಯದ ಪಾಲೆಷ್ಟು  ಎಂಬುದನ್ನು ಮೊದಲು ತಿಳಿದುಕೊಳ್ಳಲಿ.

ಈ ದೇಶದಲ್ಲಿ ‘ಎ’ ದರ್ಜೆ ಹುದ್ದೆಗಳಲ್ಲಿ ಇಂದಿಗೂ ಮೇಲ್ಜಾತಿಗಳ ಪ್ರಾಬಲ್ಯ ಶೇಕಡ ೭೬.೮ ರಷ್ಟಿದೆ. ಹಾಗೆಯೇ ‘ಬಿ’ ದರ್ಜೆಯಲ್ಲಿ ಶೇ ೭೧.೮ರಷ್ಟು, ‘ಸಿ’ ದರ್ಜೆಯಲ್ಲಿ ಶೇ ೬೦, ಹಾಗೂ ‘ಡಿ’ ದರ್ಜೆಯಲ್ಲಿ ಶೇ ೫೩.೨ ರಷ್ಟು ಹುದ್ದೆಗಳನ್ನು ಮೇಲ್ಜಾತಿಗಳು ಪಡೆದುಕೊಂಡಿವೆ ಎನ್ನುವುದನ್ನು ಈ ಮೀಸಲಾತಿ ವಿರೋಧಿಗಳು ಬೇಕೆಂತಲೇ ಮರೆಯುವುದು ಜಾಣಕುರುಡು ಎಂದೇ ಕರೆಯಬೇಕಾಗುತ್ತದೆ.

ಸಾಮಾನ್ಯ ಕೆಟಗರಿ ಅಡಿಯಲ್ಲಿ ಶೇ ೫೦ರಷ್ಟು ಪ್ರಮಾಣದಲ್ಲಿ ಅವಕಾಶ ಹೊಂದಿರುವ ಮೇಲ್ಜಾತಿಗಳಿಗೆ ಅದು ಮೀಸಲಾತಿ ಅಂತ ಅನ್ನಿಸದೇ ಹೋಗುವುದು ಆತ್ಮವಂಚನೆಯಲ್ಲವೇ? ಈ ದೇಶದಲ್ಲಿ ಶೇ ೭೫ರಷ್ಟು ಹುದ್ದೆಗಳನ್ನು ಪಡೆದುಕೊಂಡು ದೇಶದ ನೀತಿ ನಿರೂಪಕ ಸ್ಥಾನದಲ್ಲಿ ಮೇಲ್ಜಾತಿಗಳೇ ಇಂದಿಗೂ ಇವೆ. ಆದರೂ ಈ ದೇಶ ಯಾಕೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೧೮೭ನೇ ಸ್ಥಾನದಲ್ಲಿದೆ? ಇದನ್ನು ಮೊದಲು ಕೇಳಿಕೊಳ್ಳಬೇಕಿದೆ.

ಸಾಮಾಜಿಕ ನ್ಯಾಯ ಎಂಬುದು ಪ್ರತಿಭೆ ಕೇಂದ್ರೀಕೃತ ಪ್ರಶ್ನೆಯಲ್ಲ. ಸಮಾಜದ ಸಮಾನತೆಯ ಅಸ್ತಿತ್ವದ ಪ್ರಶ್ನೆ. ಯಾರನ್ನೂ ಈ ದೇಶದಲ್ಲಿ ದಡ್ಡರೆಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ದಡ್ಡರಾದರೆ ಅವರಿಗೆ ತರಬೇತಿ ನೀಡಿಯಾದರೂ ಎಲ್ಲ ಕ್ಷೇತ್ರಗಳ ಒಳಗೆ ಸಕಲರೂ ಇರುವಂತೆ ನೋಡಿಕೊಳ್ಳಬೇಕು.

ಆಗಮಾತ್ರ ಈ ದೇಶದ ಮಾವನ ಸಂಪನ್ಮೂಲ ಸರಿಯಾಗಿ ಬಳಕೆಗೊಂಡು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಕಾಣಲು ಸಾಧ್ಯ. ಇದು ಬಡ್ತಿ ಮೀಸಲಾತಿಗೂ ಅನ್ವಯಿಸುತ್ತದೆ.


ಮೊದಲ ಪ್ರೀತಿ

ರುಕ್ಮಿಣಿ ಎನ್


ಯಾರನ್ನೂ ಕಣ್ಣೆತ್ತಿ ನೋಡದ ಹುಡುಗಿ ನಾನು. ಅದು ಹ್ಯಾಗ ಬಂದೆಯೊ ಹುಡುಗ ನನ್ನ ಕಣ್ಣೆದುರಿಗೆನೆ. ನಿನ್ನನ್ನ ನೋಡಿದ ಕ್ಷಣದಿಂದ ಹಿಡಿಗಾತ್ರದ ನನ್ನ ಹೃದಯವನ್ನೆಲ್ಲ ನೀನೆ ಆಕ್ರಮಿಸಿ ಬಿಡುವುದಾ? ಹ್ಮ.. ಆಗಿನಿಂದ ಶುರುವಾಯಿಗಿದ್ದು ನನಗೆ ಕುಂತ್ರು ನಿಂತ್ರು ನಿಂದೆ ಧ್ಯಾನ. ನಾನು ನೀನು ಒಂದೇ ಬಸ್ಸಿನಿಂದ ಕಾಲೇಜಿಗೆ ಹೋಗುತ್ತಿದ್ವಿ. ಉಸಿರುಗಟ್ಟಿಸುವಷ್ಟು ರಶ್ ಇರುವ ಬಸ್ಸಿಗೆ ನಾನು ಒಗ್ಗಿಕೊಳ್ಳಲೇ ಬೇಕಿತ್ತು. ಯಾಕೆ ಗೊತ್ತಾ? ನೀ ಅದೇ ಬಸ್ನಲ್ಲಿ ಅಲ್ವೆನೋ ಬರ್ತಿದ್ದು.. ನೀ ಯಾವಾಗಲೂ ಆ ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಬರ್ತಾ ಇದ್ದೆ. ಒಂದೊಂದು ಸಾರಿ  ನಿನ್ನ ಆ ಸ್ಥಿತಿ ನೋಡಲು ಆಗ್ತಾನೆ ಇರ್ಲಿಲ್ಲ. ಅಷ್ಟೊಂದು ಭೀಡಿರುವ ಜನಗಳ ಗದ್ದಲದಲ್ಲಿ ನೀನು ಬಿದ್ದುಬಿಟ್ಟರೆ? ಅಂತ ಆಗಾಗ ಈ ಹೆಣ್ಣೆದೆ ಢವ ಢವ ಎಂದು ಜೋರಾಗಿ ಹೊಡೆದುಕೊಳ್ತ ಇತ್ತು. ಅದಕ್ಕೇನೇ ಕಣೋ ಆ ನಿನ್ನ ಮುದ್ದಾದ ಮುಖ ಕಾಣುವಂತೆ ನಾನು ಕಿಟಕಿಗಳಿಗೆ ನೇರವಾಗಿ ನಿಲ್ಲುತ್ತಿದ್ದೆ. ಒಂದು ಕ್ಷಣ ಕೂಡ ನಿನ್ನನ್ನ ಕಾಣದೇ ಇದ್ರೆ  ಅದೆಷ್ಟು ತಳಮಳ!

ನಾನು ಕಾಲೇಜಿನಲ್ಲಿ ಯಾವಾಗಲೂ ಫಸ್ಟ್ ಬೆಂಚಿನಲ್ಲಿ ಕೂಡುತ್ತಿದ್ದೆ. ನೀನೋ.. ಲಾಸ್ಟ್ ಬೆಂಚರ್. ನಿನ್ನ ನೋಡಬೇಕು ಅನ್ಸಿದಾಗಲೆಲ್ಲ ಅದೇನೇನೋ ನೆಪ ಹುಡುಕಿ ನಿನ್ನ ಕಡೆಗೆ ಬರುತ್ತಿದ್ದೆ. ಒಂದು ಸಾರಿ ನಿನ್ನ ನೋಡೋಕೆ ಅಂತಾನೆ ನೀನಿರುವ ಕಡೆ ಬಂದಾಗ ಅಚಾನಕ್ಕಾಗಿ ನಿನ್ನ ಕೈ ನನ್ನ ಕೈಗೆ ತಾಕಿತ್ತು. ಎದೆಯಲ್ಲಿ ಮಿಂಚಿನ ವೇಗವೊಂದು ಸುಂಯೆಂದು ಹರಿದ ಅನುಭವ. ಲಬ್ ಡಬ್ ಎದೆಬಡಿತ ಪಕ್ಕದಲ್ಲಿರೋರಿಗೂ ಕೇಳಿಸಿರಬೇಕು. ಅಷ್ಟು ಜೋರಾಗಿ ಹೊಡೆದುಕೊಳ್ತ ಇತ್ತು. ಕೆಲವೊಮ್ಮೆ ನಿನ್ನನ್ನೇ ಹುಡುಕುತ್ತಿದ್ದ ನನ್ನ ಕಣ್ಣುಗಳಿಗೆ ಆಗಾಗ ನಿನ್ನ ಕಣ್ಣುಗಳು ನೇರವಾಗಿ ಕೂಡುವಾಗ ಸಿಕ್ಕಹಾಕೊಂಡೇನಾ? ಥತ್ತೇರಿ? ನಾಲಿಗೆ ಕಚ್ಚಿದವಳೇ ತಡ ನನ್ನ ಕಣ್ಣೆವೆಗಳು ನೆಲ ನೋಡುತ್ತಿದ್ದವು. ನಿನಗಾಗ ಈ ಪ್ರೀತಿ ಪ್ರೇಮದ ಘಮಲು ಹಿಡಿದಿರಲೇ ಇಲ್ಲ ಬಿಡು. ನೀನು, ನಿನ್ನ ಗೆಳೆಯರು ನಿನ್ನ ಪ್ರಪಂಚವೇ ಬೇರೆ ಇತ್ತು. ನೀನು ನಿನ್ನದೇ ಆದ ಹುಡುಗರ ಗ್ಯಾಂಗನಲ್ಲಿ ಬಾದಶಹ.
ಒಂದು ಕ್ಲಾಸ್ ಮುಗೀತು ಅಂತ ಅಂದ್ರೆ ಸಾಕು, ಗೆಳೆಯರೊಡನೆ ಹೊರನಡೆದು ಬೊಬ್ಬೆ ಹೊಡೆಯುವ ಚಾಳಿ ನಿನಗೆ. ಆವಾಗೆಲ್ಲ ಮನಸಲ್ಲಿ ಅದೆಷ್ಟು ಹಳಿತಿರ್ಲಿಲ್ಲ ನಾನು. ಕಣ್ಣೆದುರು ನೀನು ಇಲ್ವಲ್ಲ ಅಂತ ಕೋಪ ಬರ್ತಿತ್ತು. ಆ ಕೋಪ ನಿಂಗಷ್ಟೆ ಮೀಸಲು. ಹೋದರೇನು ಹುಡುಗ. ಆ ದೊಡ್ಡದಾದ ಕಿಟಕಿಯಲ್ಲಿ ನಿನ್ನ ತುಂಟತನ ಯಾವ ಕಷ್ಟವಿಲ್ಲದೆಯೂ ನನಗೆ ಕಾಣ ಸಿಗುತ್ತಿತ್ತು. ಅದೇನ್ ಹುಡುಗ್ರಪ್ಪ ನೀವು? ಅದೇನ್ ಮಾತಾಡ್ತಿದ್ರಿ ಅಷ್ಟೊಂದು? ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ರಲ್ಲ. ಕೆಲವು ಸಂಭಾಷಣೆಗಳನ್ನ ನಾನು ಕೇಳಿಸ್ಕೊಂಡು ಅದೆಷ್ಟು ಬಾರಿ ಒಳಗೊಳಗೆ ಮುಸಿ ಮುಸಿ ನಕ್ಕಿದ್ದಿದೆ.
ನಿನ್ನ ಮುಖ ನೋಡಿದಾಗಲೆಲ್ಲ ಹೂಮನಸು ಅರಳಿ ನಿಲ್ಲೋದು.. ನೀ ನಗುವಾಗಲೆಲ್ಲಾ ಕವಳಿಯಂತಹÀ ಕಣ್ಣುಗಳು ಇನ್ನಷ್ಟು ಹಿಗ್ಗಿ ನೀನು ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದೆ. ಅದನ್ನ ನೋಡೋದೆ ಸೊಗಸು! ಎಲ್ಲೂ ಕಾಣದ ಬೆವರು, ಕುಡಿಮೀಸೆಗಳ ಮಧ್ಯವೇ ಸೂರ್ಯರಶ್ಮಿಗೆ ವಜ್ರದ ಹರಳಂತೆ ಫಳಫಳ ಹೊಳೆಯುವುದು. ನೀನು ನಗೋವಾಗಲೆಲ್ಲ ಎಡಗಲ್ಲದ ಮೇಲೆ ಡಿಂಪಲ್ ಬೀಳೋದು. ನನ್ನ ಕಿರುಬೆರಳನ್ನು ನಿನ್ನ ಗಲ್ಲದ ಮೇಲೆ ಹೊರಳಾಡಿಸಬೇಕು ಅನಿಸೋದು. ಆಗೆಲ್ಲ ನಿನ್ನೊಟ್ಟಿಗೆ ಕಲ್ಪನಾ ಲೋಕಕ್ಕೆ ಜಾರಿದ್ದೂ ಇದೆ.

4 ಘಂಟೆಯವರೆಗೂ ಕ್ಲಾಸ್ ಇರೋದು. ನೀನು 2 ಘಂಟೆಯವರೆಗೂ ಮಾತ್ರ ಕ್ಲಾಸ್ ಅಟೆಂಡ್ ಮಾಡ್ತಿದ್ದೆ. ನೀನಿಲ್ಲದ ಉಳಿದೆರಡು ಕ್ಲಾಸ್ ಅದೆಷ್ಟ್ ಬೋರ್ ಹೊಡಿಯೋದು. ಮಧ್ಯಾಹ್ನ ನನ್ನ ಮುಖ ಆಲ್‍ಮೋಸ್ಟ್ ಬಾಡಿಯೇ ಹೋಗೋದು. ಕೆಲವೊಮ್ಮೆ ಅಪ್ಪಿ ತಪ್ಪಿ ನೀನು ಕಾಲೇಜಿಗೆ ಬರದೇ ಇದ್ದಾಗ ಕ್ಲಾಸ್ ಎಲ್ಲ ಖಾಲಿ ಖಾಲಿ ಅನಿಸಿದ್ದೂ ಇದೆ. ನಿನ್ನನ್ನು ಇಷ್ಟೊಂದು ಹಚ್ಚಿಕೊಂಡೆನಾ? ನನಗೆ ಆಶ್ಚರ್ಯ ಅನಿಸೋದು.
ನನ್ನ ಕಂಗಳ ತುಂಬ, ನೆನಪುಗಳ ತುಂಬ, ಮನಸಿನ ತುಂಬಾ ನೀನೇ ಇದ್ದೆಯೊ. ಅದ್ಯಾವಾಗ ನಿನ್ನ ಪ್ರೀತ್ಸೋಕೆ ಶುರುವಿಟ್ಟೆನೊ ನನ್ನರಿವಿಗೆ ಇಂದೂ ಬಂದಿಲ್ಲ. ಆದ್ರೆ ಆ ಎರಡು ವರುಷಗಳಿಂದ ನನ್ನ ದಿನಚರಿ ನಿನ್ನಿಂದ ಶುರುವಾಗಿ ನಿನ್ನಿಂದಲೇ ಕೊನೆಗೊಳ್ಳುತ್ತಿತ್ತು. ನನ್ನುಸಿರಿಗೆ ನಿನ್ನೆಸರೇ ಬೆರೆಯಿತು. ಎರಡು ವರುಷ ಅದ್ ಹ್ಯಾಗ್ ಕಳೆಯಿತೋ ಗೊತ್ತಾಗ್ಲೆ ಇಲ್ಲ. ಇನ್ನು ಮುಂದೆ ನೀನೆಲ್ಲೋ ನಾನೆಲ್ಲೋ.. ಇನ್ನು ನಿನ್ನ ನೋಡದೆ ಹೇಗಿರಲಿ ಅನ್ನೋ ಚಿಂತೆ. ಆಟೋಗ್ರಾಫ್‍ನಲ್ಲಿ ನಿನ್ನ ಸೆಲ್ ನಂಬರ್ ಮೆನಷನ್ ಮಾಡಿದ್ದೀಯ. ಥ್ಯಾಂಕ್ಸ್ ಕಣೋ. ಆಗಾಗ ಕಾಲ್ ಮಾಡಿ ಅಟ್ ಲೀಸ್ಟ್ ನಿನ್ನ ಧ್ವನಿ ಕೇಳುವ ಭಾಗ್ಯವಾದರೂ ನನಗೆ ದೊರಕಿತಲ್ಲ. ಐ ಆಡ್‍ಮೈರ್ ಯೂ ಅಂತ ಇದ್ದಲ್ಲಿ ಐ ಲೈಕ್ ಯುವರ್ ನೇಚರ್ ಬಿಕಾಸ್ ಯೂ ಆರ್ ಸೊ ಸ್ವೀಟ್ ಅಂಡ್ ಕ್ಯೂಟ್ ಅಂತ ಬರೆದಿದ್ದೀಯ. ಓದಿ, ಇಡೀ ದಿನ ಜಂಪ್ ಮಾಡಿ ಕುಣಿದು ಸಂಭ್ರಮಿಸಿದೆ ಕಣೋ.

ಪಾಪದ ಹುಡುಗ ನೀನು! ನನ್ನ ಪ್ರೀತಿ ಕುರಿತು ಒಂಚೂರು ನಿನಗರಿವಿರಲಿಲ್ಲ. ನಿನಗರಿವಿಲ್ಲದೆಯೇ ನೀ ನನ್ನ ಅದೆಷ್ಟು ಖುಷಿಯಾಗಿಡುತ್ತಿದ್ದೆ. ಎರಡು ವರುಷಗಳ ಪ್ರತಿ ಘಳಿಗೆಗಳು ನನ್ನಲ್ಲಿ ಸುರಿಸಿದ ಒಲವ ಮಳೆ ಅಷ್ಟಿಷ್ಟಲ್ಲ. ದಿನವೂ ನಾ ಒಲವ ಮಳೆಯಲಿ ಮಿಂದು ಹೋದವಳು  ಕಣೋ. ಗುಪ್ತವಾಗಿ ಪ್ರಾಣದಂತೆ ನಿನ್ನನ್ನು ಪ್ರೀತಿಸಿದೆ. ಆದರೆ ಅದೇಕೋ ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ಹಿಂಜರಿದು ಬಿಟ್ಟೆ. ಒಂದು ವೇಳೆ ನಿನಗೆ ನನ್ನ ಮೇಲೆ ಪ್ರೀತಿ ಇರದೆ ಹೋದರೆ? ಆ ಆತಂಕ ಬೇಡವೆಂದು. ಹೇಳಿಕೊಳ್ಳದಿದ್ದರೇನು ಹುಡುಗ, ಸ್ಡೀಟ್ ಸಿಕ್ಸಟೀನಿನ ನನ್ನ ಮೊದಲ ಪ್ರೀತಿ ಯಾವತ್ತೂ ಹಸಿರು.


Saturday, February 18, 2017

ಸಾರ್ವತ್ರಿಕ ಮೂಲಭೂತ ಆದಾಯ (UBI)- ಪ್ರಸ್ತಾಪ

Image result for ಶಿವಸುಂದರ್

ಅನು: ಶಿವಸುಂದರ್ಅಸ್ಥಿತ್ವದಲ್ಲಿರುವ ಎಲ್ಲಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದನ್ನು ಆಧರಿಸಿದ ಸತ್ವಹೀನ ಸಾರ್ವತ್ರಿಕ ಮೂಲಭೂತ ಆದಾಯ (Universal Basic Income- UBIಯೋಜನೆ ವಿನಾಶಕಾರಿಯಾದದ್ದು


ಪ್ರಭುತ್ವವೊಂದು ತಾನಾಗಿಯೇ ಯಾವುದೇ ಶರತ್ತಿಲ್ಲದೆ ಎಲ್ಲರಿಗೂ ಜೀವಿಸಲು ಬೇಕಾದಷ್ಟು ಆದಾಯವನ್ನು ಕೊಡುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದರ ಜೊತೆಗೆ ಸಕ್ಷಮವಾದ ಕಾರ್ಯನಿರ್ವಹಣೆ ಹೊಂದಿರುವ ಸಾರ್ವಜನಿಕ ಸೇವೆಗಳೂ ಇದ್ದುಬಿಟ್ಟರೆ, ಜೀನ್ ದ್ರೇಝ್ ಮಾತಿನಲ್ಲೇ ಹೇಳುವುದಾದರೆ, ಘನತೆಯುಳ್ಳ ಬದುಕನ್ನು ಖಾತರಿ ಮಾಡುವ ದೋಷರಹಿತ ದಾರಿ ಯಾಗಿಬಿಡುತ್ತದೆ. ೨೦೧೬-೧೭ ರ ಆರ್ಥಿಕ ಸರ್ವೇಕ್ಷಣೆಯಲ್ಲಿ ಈ ಅಧ್ಯಾಯ ಸಾರ್ವತ್ರಿಕ ಮೂಲ ಆದಾಯ -ಮಹಾತ್ಮನೊಂದಿಗೆ ಮತ್ತು ಮಹಾತ್ಮನೊಳಗಿನ ಒಂದು ಸಂವಾದ ಎಂದು ಪ್ರಾರಂಭವಾಗುತ್ತದೆ. ಆದರೆ, ದುರದೃಷ್ಟವಶಾತ್, ಸರ್ಕಾರದ ಸ್ವಯಂವಿಧಿತ ವಿತ್ತೀಯ ಜಾಗೃತಿ ಯಿಂದಾಗಿ ಸಾರ್ವತ್ರಿಕವೂ  ಅಲ್ಲದ ಮೂಲಭೂತವೂ ಅಲ್ಲದ ಈ ಸಾರ್ವತ್ರಿಕ ಮೂಲಭೂತ ಆದಾಯ- UBI (Universal Basic Income)-  ಯೋಜನೆಯು ಜಾರಿಯಾಗಬೇಕೆಂದರೆ ಈವರೆಗಿನ ಅತ್ಯವಶ್ಯಕ ಸಾಮಾಜಿಕ ಕಲ್ಯಾಣ ಯೋಜನೆಗಳಾದ ಸಾರ್ವತ್ರಿಕ ಪಡಿತರ ಯೋಜನೆ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಧಾಹ್ನದ ಬಿಸಿಯೂಟ ಯೋಜನೆಗಳಂಥವುಗಳನ್ನು ರದ್ದುಪಡಿಸುವುದನ್ನು ಪೂರ್ವಶರತ್ತಾಗಿಸುತ್ತದೆ. ಹೀಗಾಗಿ ಈ ಪ್ರಸ್ತಾಪಿತ UBI ಯೋಜನೆಯು ಹೆಚ್ಚೆಂದರೆ ಜನಸಂಖ್ಯೆಯ ಒಂದು ಸಣ್ಣ ವಿಭಾಗಕ್ಕೆ ಒಂದು ಸಣ್ಣ ಮೊತ್ತವನ್ನು ಪರಿಹಾರವಾಗಿ ವರ್ಗಾಯಿಸುವ ಯೋಜನೆಯಷ್ಟೇ ಆಗಿದೆ. ಮತ್ತು ಅದನ್ನು ಮಾಡಬೇಕೆಂದರೂ ಸರ್ಕಾರವು ಆಹಾg ಸರಬರಾಜನ್ನು, ಖಾತರಿ ಉದ್ಯೋಗದ ದಿನಗಳನ್ನು ಮತ್ತು ಇತರ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು  ಒಂದೋ ಕಡಿತಗೊಳಿಸುವ ಅಥವಾ ರದ್ದು ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಲಿದೆ.

ಇದರ ಹಿಂದಿನ ಆಶಯವೆಂದರೆ ಬಜೆಟ್ಟಿನ ತಟಸ್ಥತೆಯನ್ನು ಕಾಪಾಡಿಕೊಂಡೇ ಮತ್ತೊಂದನ್ನೂ ಸಾಧಿಸುವುದು. ಇದು UBI
ಯೋಜನೆಯ ಅತ್ಯಂತ ಅತಾರ್ಕಿಕ ಅಂಶವಾಗಿದೆ. ದೇಶವನ್ನು ಕಾಡುತ್ತಿರುವ ಭೀಕರ ಅಸಮಾನತೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಒಂದು ಸರಿಯಾದ UBI ಗೆ ಬೇಕಾದ ವಿತ್ತೀಯ ಸಂಪನ್ಮೂಲವನ್ನು ಅತಿ ಶ್ರೀಮಂತರ ಸಂಪತ್ತು ಮತ್ತು ಆದಾಯಗಳ ಮೇಲೆ ತೆರಿಗೆ ಹಾಕುವುದರ ಮೂಲಕ ಮತ್ತು ಸಾಮಾಜಿಕವಾಗಿ  ಅಷ್ಟು ಅಪೇಕ್ಷಿತವಲ್ಲದ ಆರ್ಥಿಕ ಚಟುವಟಿಕೆಗಳ ಮೇಲೆ ಪರೋಕ್ಷ ತೆರಿಗೆಯನ್ನು ವಿಧಿಸುವ ಮೂಲಕ ರೂಢಿಸಿಕೊಳ್ಳಬಹುದು. ಜಗತ್ತಿನಲ್ಲೇ ಭಾರತವು ತೆರಿಗೆ ಮತ್ತು ಒಟ್ಟಾರೆ ಅಂತರಿಕ ಉತ್ಪಾದನೆ (ಜಿಡಿಪಿ) ನಡುವಿನ ಅನುಪಾತ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಅತ್ಯಂತ ಕಡಿಮೆ. ಇದು ನೇರ ತೆರಿಗೆಯ ವಿಷಯದಲ್ಲಿ (ಕಾರ್ಪೊರೇಟ್ ತೆರಿಗೆ ಮತ್ತು ಆಸ್ತಿ ತೆರಿಗೆ ಎರಡು ಸೇರಿಕೊಂಡರೂ) ಇನ್ನೂ ಕಡಿಮೆ ಇದೆ. ಹೀಗಿರುವಾಗ ಏಕೆ ನಮ್ಮ ನೀತಿ ನಿರೂಪಕರು ಹೆಚ್ಚಿನ ತೆರಿಗೆ ಸಂಗ್ರಹಿಸಿಕೊಂಡು ಆ ಮೂಲಕ ವಿತ್ತೀಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಆಧಾರದ ಮೇಲೆ ಒಂದು UBI ಯನ್ನು ಕಲ್ಪಿಸಿಕೊಳ್ಳಲಾರರು ಎಂಬುದು ಅರ್ಥವಾಗುವುದಿಲ್ಲ.


ಬದಲಿಗೆ ಆರ್ಥಿಕ ಸರ್ವೇಕ್ಷಣೆಯಲ್ಲಿ ಪರಿಕಲ್ಪಿಸಿಕೊಂಡಿರುವ UBI,  ಈ ಬಾಬತ್ತಿಗೆ ತಗಲಬಹುದಾದ ವಿತ್ತೀಯ ವೆಚ್ಚವನ್ನು ಕನಿಷ್ಟಗೊಳಿಸಿಕೊಂಡು ಸಮಾಜ ಕಲ್ಯಾಣ ಇಲಾಖೆಯ ಆಡಳಿತ ಯಂತ್ರಾಂಗವನ್ನು ತೆಳ್ಳಗಾಗಿಸುವುದನ್ನು ನೆಚ್ಚಿಕೊಂಡಿದೆ. UBI ಕುರಿತಾದ ಅಧ್ಯಾಯವು- ಪ್ರಸ್ತುತ ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯು ಅತ್ಯಂತ ದೊಡ್ಡದಾಗಿದೆಯೆಂದೂ, ಅಸಮರ್ಥವಾಗಿದೆಯೆಂದೂ, ಬಹಳಷ್ಟು ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಅಸಮರ್ಪಕವಾಗಿ ವಿತರಿಸುತ್ತದೆಂದೂ, ಈ ವಾಸ್ತವಗಳು ಸಮಾಜ ಕಲ್ಯಾಣಕ್ಕೆ ಸರಿಯಾದ ರೀತಿಯಲ್ಲಿ ಹಣವನ್ನು ವೆಚ್ಚಮಾಡುವ ದಾರಿಗಳನ್ನು ಹುಡುಕಲು ಗಂಭೀರವಾದ ಚಿಂತನೆಗೆ ಹಚ್ಚುತ್ತದೆಂದು ವಾದಿಸುತ್ತದೆ. ಹೇಗೆ ಬಡತನದಲ್ಲಿರುವ ಜಿಲ್ಲೆಗಳಲ್ಲಿನ ಆರು ಸಮಾಜ ಕಲ್ಯಾಣ ಯೋಜನೆಗಳಲ್ಲಿ  ಆಗುತ್ತಿರುವ ಕಲ್ಯಾಣ ವೆಚ್ಚಗಳ ಅನುಪಾತವು ಆ ಜಿಲ್ಲೆಗಳ ಬಡಜನರ ಅನುಪಾತಕ್ಕಿಂತ ಕಡಿಮೆ ಇದೆ ಎಂದು ಎರಡು ಸರಳೀಕೃತ ಕೋಷ್ಟಕಗಳನ್ನು ಸಾದರಪಡಿಸಿ ಹೇಗೆ ಈ ಕಲ್ಯಾಣ ಯೋಜನೆಗಳಲ್ಲಿ ಸಂಪನ್ಮೂಲಗಳ ಅಸಮರ್ಪಕ ವಿತರಣೆಯಾಗುತ್ತಿದೆಯೆಂದು ಸಾಬೀತುಪಡಿಸಲು ಅದು  ಯತ್ನಿಸುತ್ತದೆ. ಆರ್ಥಿಕ ಸರ್ವೇಕ್ಷಣೆಯ ಲೇಖಕರ ಪ್ರಕಾರ ಆ ಅಸಮತೋಲನವನ್ನು UBI ಸರಿಪಡಿಸುತ್ತದೆ. ಆದರೆ ಅಂಥಾ ತಿದ್ದುಪಡಿಗಳು ನೇರ ಹಣ ವರ್ಗಾವಣೆಯನ್ನು  ನಿರೀಕ್ಷಿಸುತ್ತದೆಯೇ ವಿನಃ UBI ಯನ್ನಲ್ಲ.

ಅಷ್ಟೇ ಅಲ್ಲ.  ಈ ಪ್ರತಿಯೊಂದು ಸಮಾಜ ಕಲ್ಯಾಣ ಯೋಜನೆಗಳ ಸ್ವರೂಪಗಳಲ್ಲೇ ಮಾರುಕಟ್ಟೆಯ ಅನಿಶ್ಚತೆಗಳ ಎದಿರು ದುರ್ಬಲ ವರ್ಗಗಳಿಗೆ ರಕ್ಷಣೆ ನೀಡುವ ಕ್ರಮಗಳು ಅಂತರ್ಗತವಾಗಿವೆ ಎಂಬುದನ್ನು ಕಡೆಗಣಿಸಬಾರದು. ಸಾರ್ವಜನಿಕ ಪಡಿತರ ಪದ್ಧತಿಯು ಕೃಷಿ ಸರಕು ಮಾರುಕಟ್ಟೆಯಲ್ಲಿ ಸರ್ಕಾರವು ಮಧ್ಯಪ್ರವೇಶಿಸುವುದರ ಮೂಲಕ ಐತಿಹಾಸಿಕವಾಗಿ ಒಂದು ಬಗೆಯ ಬೆಲೆ ಸ್ಥಿರೀಕರಣವನ್ನು ಮತ್ತು  ರೈತರಿಗೆ ಒಂದಷ್ಟು ಆದಾಯ ಖಾತರಿಯನ್ನು ಮಾಡಿರುವುದನ್ನು ಒಳಗೊಂಡಿದೆ. ಸರ್ಕಾರವು ರೈತರ ಬೆಳೆಯನ್ನು ಕೊಂಡುಕೊಳ್ಳುವ ವ್ಯವಸ್ಥೆ ಮತ್ತು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಗಿರುವ ರಾಜಕೀಯ ಮಹತ್ವವೇ ಅಂಥಾ ಮಾರುಕಟ್ಟೆ ಮಧ್ಯಪ್ರವೇಶಗಳ ಮಹತ್ವದ ಅಭಿವ್ಯಕ್ತಿಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯು ಶಾಲಾ ನೊಂದಣಿಗೆ ಪ್ರೋತ್ಸಾಹ ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನೂ ಅಗತ್ಯವಿರುವ ವಯಸ್ಸಿನಲ್ಲಿ ದೊರಕಿಸುತ್ತದೆ.  ಮಹಾತ್ಮಗಾಂಧಿ ಗ್ರಾಮಿಣ ಉದ್ಯೋಗ ಖಾತರಿ ಯೋಜನೆಯು ಕನಿಷ್ಟ ದಿಗಳ ಕೂಲಿಯನ್ನು ಖಾತರಿಪಡಿಸುವುದು ಮಾತ್ರವಲ್ಲದೆ  ಸ್ಥಳೀಯವಾಗಿ ಯೋಜನೆಗೆ ತಕ್ಕಂತೆ ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುತ್ತದೆ ಮತ್ತು ನಿರ್ವಹಣೆ ಮಾಡುತ್ತದೆ, ಕೂಲಿಕೆಲಸ ಲಭ್ಯತೆಯು ಆಯಾ ಋತುನಿರ್ಧಾರಿತ ಕೆಲಸದ ಲಭ್ಯತೆಯ ಅತಂತ್ರತೆಯನ್ನು ತಪ್ಪಿಸುತ್ತದೆ ಮತ್ತು ಗ್ರಾಮೀಣ ಕೂಲಿ ವೇತನ ಮಾರುಕಟ್ಟೆಯಲ್ಲಿ ಕಾರ್ಮಿಕರಿಗೆ ಒಂದಷ್ಟು ಚೌಕಾಶಿ ಮಾಡುವಷ್ಟು ಬಲವನ್ನೂ ತಂದುಕೊಡುತ್ತದೆ.  ವಾಸ್ತವವಾಗಿ ಆರ್ಥಿಕ ಸರ್ವೇಕ್ಷಣೆಯು ಈ ವಿಷಯದ ಬಗ್ಗೆ  ಸಾರ್ವತ್ರಿಕ ಪಡಿತರ ಪದ್ಧತಿಯ ರದ್ಧತಿಯು ದ್ವಿದಳ ಧಾನ್ಯಗಳ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಬಹುದು, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಡಿತಗೊಳಿಸುವುದರಿಂದ ಗ್ರಾಮೀಣ ದಿನಗೂಲಿಗಳ ಮಾರುಕಟ್ಟೆ ಕೂಲಿಬೆಲೆಯನ್ನು ತಗ್ಗಿಸಬಹುದು ಎಂದು ಮೇಲುಮೇಲಕ್ಕೆ ಉಲ್ಲೇಖಿಸಿದರೂ  ಹಾಗೆಯೇ ಮುಂದುವರೆದು ಇಂಥಾ ಮಧ್ಯಪ್ರವೇಶಗಳಿಗೆ ತದ್ವಿರುದ್ಧ ತರ್ಕವನ್ನು ಮುಂದಿಡುತ್ತದೆ.

೨೦೦೪-೦೫ ಮತ್ತು ೨೦೧೧-೧೨ರ ನಡುವೆ ಭಾರತೀಯ ಆಹಾರ ನಿಗಮದಿಂದ ಆಹಾರಧಾನ್ಯಗಳನ್ನು ಕೊಂಡೊಯ್ಯುವ ಪ್ರಮಾಣ ಶೇ.೭೧ರಷ್ಟು ಏರಿಕೆ ಕಂಡಿತು. ಮತ್ತು ಸಮರ್ಥ ಮತ್ತು ಸಕ್ಷಮ ಹಂಚಿಕೆಯ ಮೂಲಕ ಪಡಿತರ ಪದ್ಧತಿಯ ಮೂಲಕ ಕುಟುಂಬವಾರು ಆಹಾರ ಖರೀದಿಯ ಪ್ರಮಾಣ ಶೇ.೧೧೭ರಷ್ಟು ಏರಿಕೆಯಾಯಿತು. ಅದೇ ಸಮಯದಲ್ಲಿ ಸಾರ್ವತ್ರಿಕ ಪಡಿತರ ಪದ್ಧತಿಯಲ್ಲಿನ ಸೋರಿಕೆ ಶೇ.೫೪ರಿಂದ ಶೇ.೩೫ಕ್ಕೆ ಇಳಿಯಿತು. ಆರ್ಥಿಕ ಸರ್ವೇಕ್ಷಣೆಯು  ಪಡಿತರ ಸೋರಿಕೆಯ ಇಳಿಕೆಯ ಪ್ರಮಾಣವನ್ನು ೨೦೧೬ರವರೆಗೆ ಮುಂದಂದಾಜು ಮಾಡಿ ಶೇ.೨೦.೮ರಷ್ಟು ಇಳಿಕೆಯಾಗಿದೆಯೆಂದು ಊಹಿಸುತ್ತದೆ. ಇದು ಐದು ವರ್ಷಗಳಲ್ಲಿ ಆಗಿರಬಹುದಾದ ತಂತ್ರಜ್ನಾನ ಸುಧಾರಣೆ ಮತ್ತು ಪಡಿತರ ವ್ಯಾಪ್ತಿಯ ವಿಸ್ತರಣೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲದಿದ್ದರೂ ಆಗಿರಬಹುದಾದ ಸೋರಿಕೆ ಇಳಿಕೆ. ಗ್ರಾಮೀಣ ಕೂಲಿದರದಲ್ಲಿ ಏರಿಕೆಯಾಗಿರುವುದರಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯ ಪಾಲೂ ಇದೆ. ಈ ಯೋಜನೆಯಡಿ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಗಳನ್ನು ಮತ್ತು ಇತ್ತೀಚಿನ ದಿನಗಳಲ್ಲಿ ಕೃಷಿ ಸಂಪತ್ತನ್ನೂ ಸೃಷ್ಟಿಸಲಾಗಿದೆಯೆಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಈಗ ಸಾಮಾಜಿಕ ಕಲ್ಯಾಣದ ಸರಕು ಮತ್ತು  ಸೇವೆಗಳನ್ನು ಒದಗಿಸುವುದು ಕೇವಲ ದಕ್ಷಿಣ ರಾಜ್ಯಗಳಲ್ಲದೆ ಉತ್ತರದ ರಾಜ್ಯಗಳಲ್ಲೂ ರಾಜಕೀಯ ಮಹತ್ವದ ಸಂಗತಿಯಾಗುತ್ತಿದೆ. ವಾಸ್ತವವಾಗಿ ಪಡಿತರ ಮತ್ತು ಉದ್ಯೋಗ ಖಾತರಿ ಯೋಜನೆಗಳು ನಿಗದಿತ ಸಮುದಾಯವನ್ನು  ಹೆಚ್ಚೆಚ್ಚು ತಲುಪುತ್ತಿರುವುದು ಮಾತ್ರವಲ್ಲದೆ ಅದರೊಳಗಿನ ಸೋರಿಕೆ ಮತ್ತು ಭ್ರಷ್ತಾಚಾರಗಳೂ ಕಡಿಮೆಯಾಗುತ್ತಾ ಬರುತ್ತಿವೆ. ಇದನ್ನು ಬೇರೆ ರಾಜ್ಯಗಳು ಅನುಸರಿಸಬೇಕಾದ ಅಗತ್ಯವಿದೆ. ಸಾಕಷ್ಟು ಹೋರಾಟದ ಮೂಲಕ ಗಳಿಸಿಕೊಂಡ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಿಂಪಡೆದುಕೊಳ್ಳುವ ಯೋಜನೆಯನ್ನು ಅಂತರ್ಗತವಾಗಿ ಹೊಂದಿರುವ  UBI ಬಗ್ಗೆ  ಗಂಭೀರ ಚರ್ಚೆಗೆ ಕಾಲ ಕೂಡಿ ಬಂದಿದೆ ಎಂದು ಹೇಳುವುದು ಹಿಂದಿನ ಸಾಮಾಜಿಕ ಅನುಭವಗಳ ಮೂಲಕ ಗಳಿಸಿಕೊಂಡ ಫಲಗಳ ಆಧಾರದ ಮೇಲೆ ಭವಿಷ್ಯವನ್ನು ಕಟ್ಟಿಕೊಳ್ಳುವುದನ್ನು ನಿರಾಕರಿಸುತ್ತದೆ.  ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು- ಫಲಾನುಭವಿಗಳನ್ನು ಪಾಲುದಾರರನ್ನಾಗಿ ಮಾಡುವ ಮೂಲಕ, ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತರಿಗೊಳಿಸುವ ಮೂಲಕ, ಸಂಬಂಧಪಟ್ಟ ಸರ್ಕಾರೇತರ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಮೂಲಕ, ಒಂದಷ್ಟು ರಾಜಕೀಯ ಇಚ್ಚಾಶಕ್ತಿ ಮತ್ತು ಕ್ರಿಯಾಶೀಲ ಸ್ಥಳೀಯ ಆಡಳಿತ ವ್ಯವಸ್ಥೆಯ ಮೂಲಕ ಉತ್ತಮಗೊಳಿಸಬಹುದೆಂಬುದನ್ನು ಹಿಂದಿನ ದಶಕದ ಅನುಭವಗಳು ಎತ್ತಿತೋರಿಸುತ್ತವೆ.


ಕೃಪೆ: Economic and Political Weekly

                                                                                                    February 11, 2017, Vol 52, No. 6

ಸಮ ಸಮಾಜಕ್ಕಾಗಿ ಸಂಘರ್ಷ

Image result for uma chakravarti


ಪ್ರೊ. ಉಮಾ ಚಕ್ರವರ್ತಿ

ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಹಿಂದಿ ಭಾಷೆ ನಿಮ್ಮೆಲ್ಲರಿಗೂ ತಿಳಿಯುವುದರಿಂದ ಹಿಂದಿಯಲ್ಲಿ ಮಾತನಾಡುತ್ತೇನೆ. ಹಲವಾರು ವರ್ಷಗಳಿಂದ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದುಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸಮಾಜದಲ್ಲಿರುವ ತಾರತಮ್ಯಗಳನ್ನು ನಾವು ಒಪ್ಪುವುದಿಲ್ಲ ಹಾಗಾಗಿ ಸಮಾನತೆಯ ಸಮಾಜಕಟ್ಟಲು ಹೋರಾಡುತ್ತಿದ್ದೇವೆ. ಎಲ್ಲಿಯವರೆಗೆ ಸಮಾಜದಲ್ಲಿ ತಾರತಮ್ಯ ಕೊನೆಯಾಗಿ ಸಮಾನತೆ ಬರುವುದಿಲ್ಲವೋ, ಅಲ್ಲಿಯವರೆಗೂ ಬದಲಾವಣೆಗಾಗಿ ನಾವು ಮತ್ತು ಯುವಪೀಳಿಗೆಯವರು ಸೇರಿ ಹೋರಾಡಲೇಬೇಕಾಗಿದೆ.

ಸಮಾಜ ನಿರ್ಮಾಣವಾಗುವುದು ರಾಜಕೀಯ, ಆರ್ಥಿಕ ವ್ಯವಸ್ಥೆಯ ಆಧಾರದ ಮೇಲೆ. ಅದಕ್ಕನುಗುಣವಾಗಿ ರೀತಿನೀತಿಗಳು ನಿರ್ಮಾಣವಾಗುತ್ತವೆ. ರಾಜಕೀಯ, ಆರ್ಥಿಕ ವ್ಯವಸ್ಥೆ ಬದಲಾದಂತೆ ಈ ರೀತಿ ನೀತಿಗಳು ಬದಲಾಗುತ್ತವೆ. ನಾನು ಒಬ್ಬ ಇತಿಹಾಸಕಾರಳಾಗಿ ಈ ಬದಲಾವಣೆಯನ್ನು ಗುರುತಿಸುತ್ತೇನೆ. ನಾನು ಬೌದ್ಧಧರ್ಮವನ್ನು ಕುರಿತು ಸಂಶೋಧನೆ ಮಾಡಿದ್ದೇನೆ. ಕಾರಣ, ನಾನು ಚಿಕ್ಕ ವಯಸ್ಸಿನಲ್ಲಿರುವಾಗಲೇ ಅಂದರೆ ಹದಿನೈದು ವರ್ಷದವಳಾಗಿದ್ದಾಗ ಬೌದ್ಧಧರ್ಮದ ಬಗ್ಗೆ ನನಗೆ ಆಸಕ್ತಿ ಹುಟ್ಟಿತು. ಆಸಕ್ತಿಗೆ ಪ್ರೇರಣೆಯಾಗಿದ್ದು ೧೯೫೬ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಬೌದ್ಧಧರ್ಮ ಸ್ವೀಕರಿಸಿದ ಘಟನೆ. ಆ ಘಟನೆಯ ಬಗ್ಗೆ ಮೇಲ್ಜಾತಿಯ ಜನರು ಕುಪಿತರಾಗಿದ್ದರು. ಬಾಬಾಸಾಹೇಬರು ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೋ ಅದೇ ಧರ್ಮದಲ್ಲಿ ಸಾಯುವುದಿಲ್ಲ ಎಂದು ಘೋಷಿಸಿದ್ದರು. ಹಾಗಾಗಿ ಅವರು ಅಪಾರ ಹುಡುಕಾಟ ನಡೆಸಿ ನೈತಿಕ ದಾರಿಯಾಗಿದ್ದ ಬೌದ್ಧಧರ್ಮವನ್ನು ಸ್ವೀಕರಿಸಿದ್ದರು. ಈ ವಿಷಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು. ಆದ್ದರಿಂದಲೆ ನಾನು ಬೌದ್ಧಧರ್ಮದಲ್ಲಿ ಸಂಶೋಧನೆ ಮಾಡಿದೆ. ಎಂತಹ ವರ್ಗದ ಜನರನ್ನುಈ ಧರ್ಮ ಆಕರ್ಷಿಸಿತು ಮತ್ತು ಯಾವ ಶಸ್ತ್ರಾಸ್ತ್ರಗಳೂ ಇಲ್ಲದೆ ಚೈನ, ಕೊರಿಯಾ, ಜಪಾನ್‌ವರೆಗೂ ಹಬ್ಬಿತು ಎಂಬ ಬಗ್ಗೆ ನನಗೆ ಕುತೂಹಲವಿತ್ತು. ಜಾತಿ ವಿರೋಧಿ ಧ್ವನಿಯನ್ನು ಹುಡುಕುವುದು ನನ್ನ ಆಸಕ್ತಿಯಾಗಿತ್ತು. ಬೌದ್ಧ ಧರ್ಮವು ಒಂದು ಹೊಸ ಸಮಾಜದ ಕನಸನ್ನು ಹೊಂದಿತ್ತು. ಅಂದಿನ ಜಾತಿ ವ್ಯವಸ್ಥೆಯ ಸ್ವರೂಪ ಇಂದಿನಂತಿರಲಿಲ್ಲ. ಬುದ್ಧ ಹೆಚ್ಚಾಗಿ ವಾದ ಮಾಡಿರುವುದು ಬ್ರಾಹ್ಮಣಶಾಹಿಯೊಂದಿಗೆ. ಬ್ರಾಹ್ಮಣರು ಹುಟ್ಟಿನಿಂದಲೆ ಭಿನ್ನವಾಗಿದ್ದಾರೆ, ಬುದ್ದಿವಂತರಾಗಿದ್ದಾರೆ, ಉನ್ನತವಾಗಿದ್ದಾರೆ ಮತ್ತು ಉತ್ತಮರು ಎಂಬ ವಾದವನ್ನು ಬುದ್ಧ ನಿರಾಕರಿಸುತ್ತಿದ್ದನು.

ಜಾತಿ ಕುರಿತ ವಿಮರ್ಶೆ ೬ನೇ ಶತಮಾನದಿಂದಲೇ ಆರಂಭವಾಯಿತು ಎಂಬುದು ಬೌದ್ಧ ಇತಿಹಾಸದಲ್ಲಿ ಕಂಡುಬರುತ್ತದೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗ ಒಂದಿದ್ದರೆ ಮತ್ತೊಂದು ಆಳುವ ವರ್ಗವಾಗಿರುತ್ತದೆ. ತಾರತಮ್ಯವನ್ನು ಆಚರಿಸುವ ಜಾತಿ ವ್ಯವಸ್ಥೆಯನ್ನು ಯಾರೂ ಮಾನ್ಯ ಮಾಡುವುದಿಲ್ಲ. ತುಳಿತಕ್ಕೊಳಪಡುವುದನ್ನು, ತಾವು ಹೀನ, ಕೀಳು ಎಂದು ಭಾವಿಸುವುದನ್ನು ಸಮಾಜದಲ್ಲಿ ಯಾರೂ ಇಚ್ಛಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದೂ ಇಲ್ಲ. ಅದನ್ನು ಅಧಿಕಾರದ ಬಲದಿಂದ ಜನರ ಮೇಲೆ ಹೇರಲಾಗಿದೆ, ಹಿಂಸೆಯ ಮೂಲಕ ಒಪ್ಪಿಸಲಾಗಿದೆ. ನಮ್ಮ ಸಮಾಜದಲ್ಲಿ ಅಧಿಕಾರ ಮತ್ತು ಬಲಪ್ರಯೋಗದಿಂದ ಅಮಾಯಕರನ್ನು ಹಿಂಸಿಸುವುದು ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಜಾತಿಯ ವ್ಯವಸ್ಥೆಗೂ, ಪಿತೃಪ್ರಧಾನತೆಗೂ ಮತ್ತು ಲಿಂಗತಾರತಮ್ಯಕ್ಕೂ ಇರುವ ಸಂಬಂಧವನ್ನು ನಾನು ನನ್ನ ಸಂಶೋಧನಾ ಹುಡುಕಾಟದಲ್ಲಿ ಕಂಡುಕೊಂಡೆ. ಲಿಂಗತಾರತಮ್ಯಕ್ಕೆ ಜಾತೀಯತೆಯ ಮಾದರಿಯೇ ಕಾರಣವಾಗಿದೆ ಎಂಬುದನ್ನು ಸ್ತ್ರೀವಾದಿಗಳಾದ ನಾವು ಕಂಡುಕೊಂಡೆವು. ಜಾತಿ ಪ್ರಶ್ನೆಯನ್ನು ಪಿತೃಪ್ರಧಾನತೆಯ ಆಯಾಮದಲ್ಲಿ ಚರ್ಚೆ ಮಾಡಿದ್ದು, ಜಾತಿಕುರಿತ ಬೌದ್ಧಿಕ ಚರ್ಚೆಗೆ ನಾವು ಕೊಟ್ಟ ಬಹು ದೊಡ್ಡ ಕೊಡುಗೆಯಾಗಿದೆ.

ನಮ್ಮ ಸಮಾಜವು ಈಗಲೂ ಅಸಮಾನತೆಯಿಂದ ಕೂಡಿದೆ. ಎಲ್ಲಾ ಸಮಾಜಗಳಲ್ಲಿಯೂ ಮಹಿಳೆಯರ ಮೇಲೆ ಪಿತೃಪ್ರಧಾನತೆಯ ನಿಯಂತ್ರಣವಿತ್ತು. ಪಾಶ್ಚಿಮಾತ್ಯ ವರ್ಗಸಮಾಜವೂ ಇದಕ್ಕೆ ಹೊರತಾಗಿರಲ್ಲಿಲ್ಲ. ಈ ನಿಯಂತ್ರಣವು ಮಹಿಳೆಯರ ಪ್ರಜನನ ಸಾಮರ್ಥ್ಯದ ಮೇಲೆ ಹಿಡಿತ ಹೊಂದಿದೆ. ಪಿತೃಪ್ರಧಾನ ಸಮಾಜಕ್ಕೆ ಇಂತಹ ಹಿಡಿತ ಅವಶ್ಯಕವೂ ಆಗಿತ್ತು, ಹಾಗಾಗಿ ಜಾತಿ ಮತ್ತು ಲಿಂಗವನ್ನು ಒಂದುಗೂಡಿಸಿದ ರಚನೆಯನ್ನು ಮಾಡಿಕೊಳ್ಳಲಾಯಿತು. ಈ ರಚನೆಯು ಮಹಿಳೆಯರ ಮೇಲೆ ಅನೇಕ ಬಗೆಯ ನಿಯಂತ್ರಣಗಳನ್ನು ಸಾಧಿಸಿಕೊಳ್ಳಲು ಸಹಾಯಕವಾಯಿತು. ಈ ನಿಯಂತ್ರಣವು ಸಮಾಜದಲ್ಲಿ ಒಂದು ಮಾದರಿಯಾಗಿ ಬೆಳೆಯಿತು. ಬೆಳೆಯುತ್ತ ಮುಂದೆ ಜಾತಿ, ಲಿಂಗ, ವರ್ಗದ ಆಧಾರದ ಮೇಲೆ, ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಸಾಧಿಸಹತ್ತಿತು. ಜಾತಿವಾದಿ ಸಮಾಜದಲ್ಲಿ ಸಂಪನ್ಮೂಲಗಳು ಕೆಲವರ ಕೈಯಲ್ಲಿ ಮಾತ್ರ ಕ್ರೋಢೀಕರಣಗೊಂಡವು. ಯಾರ ಕೈಯಲ್ಲಿ ಸಂಪತ್ತಿನ ಒಡೆತನವಿತ್ತೊ ಅವರು ಅಧಿಕಾರ ಚಲಾಯಿಸುತ್ತಿದ್ದರು. ಯಾರು ಸಂಪತ್ತನ್ನು ಹೊಂದಿರಲಿಲ್ಲವೋ ಅವರು ಅಧಿಕಾರಸ್ಥರಿಗೆ ಅಧೀನರಾಗಿ ದುಡಿಯಬೇಕಾಗಿತ್ತು. ಹಾಗಾಗಿ ನಮ್ಮ ವರ್ಗ ಸಮಾಜದಲ್ಲಿ ಧ್ರುವೀಕರಣವಿದೆ. ಅಲ್ಲದೆ ಇದು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದುಕೊಂಡು ಹೋಗುವಂತೆ ನಿರ್ದಿಷ್ಟ ಪಡಿಸಲಾಯಿತು. ಇದನ್ನು ಜಾತಿಯ ಹೆಸರಿನಲ್ಲಿ ಒಡೆತನ ಹೊಂದಿದವರು ಮುಂದುವರೆಸಿದರು. ಯಾವುದೇ ಅಧಿಕಾರವಾಗಲಿ, ಭೂಮಿಯ ಒಡೆತನವಾಗಲಿ ಇಲ್ಲದೆ ಭೂಮಿಯಲ್ಲಿ ದುಡಿಯಬೇಕಾದ ಜಾತಿಗಳಿಗೆ ಉತ್ಪಾದನಾ ಸಾಮಾಗ್ರಿಗಳ ಮೇಲೆ ಹಿಡಿತವಿರಲಿಲ್ಲ. ಅಧಿಕಾರ, ಭೂಮಿಯ ಒಡೆತನ, ಉತ್ಪಾದನಾ ಸಾಮಗ್ರಿಗಳ ಮೇಲಿನ ಹಿಡಿತ ಇಲ್ಲದವರು ಕೆಳವರ್ಗವಾಗಿ, ಕೆಳಜಾತಿಯಾಗಿ ಮೇಲ್ಜಾತಿಯ ಜನರ ಸೇವೆ ಮಾಡುವ ಗುಲಾಮರಾಗಿ, ದುಡಿಯುವ ವರ್ಗವಾಗಿ ಉಳಿಯುತ್ತವೆ. ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿಕೊಂಡಂತಹ ಜಾತಿಯವರು ಒಡೆತನದ ಹಿನ್ನೆಲೆಯಲ್ಲಿ ರೂಪಿಸಿದ ನಿಯಮಗಳಿಗೆ ಸಂಪನ್ಮೂಲ ರಹಿತ ಜಾತಿಗಳು ಒಳಗಾಗುವಂತೆ ಮಾಡಲಾಯಿತು. ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿರುವವರು ನಿಯಮಗಳನ್ನು ರೂಪಿಸುಂತಹ ವ್ಯವಸ್ಥೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದುಕೊಂಡು ಬಂದಿದೆ.

ಜಾತಿ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವೂ ತುಂಬಾ ಮಹತ್ವದ್ದಾಗಿದೆ. ಮಹಿಳೆಯರು ತಮ್ಮ ಜಾತಿಗನುಗುಣವಾಗಿ ಮದುವೆಯಾಗಿ, ಮಕ್ಕಳನ್ನು ಮಾಡಿಕೊಳ್ಳುವ ನಿಯಮಗಳನ್ನು ಮಾಡಲಾಯಿತು. ಹೆಣ್ಣುಮಕ್ಕಳು ಜಾತಿ ಬಿಟ್ಟು ಮದುವೆಯಾಗುವುದು, ಕೆಳವರ್ಗದ ಜನರುತಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಯುಗವೆಂದು ಕರೆಯಲಾಗುತ್ತದೆ. ಮಹಿಳೆಯರು ಮತ್ತು ಕೆಳವರ್ಗದ ಜನರು ತಮ್ಮ ಹಕ್ಕುಗಳಿಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಹೋರಾಡಲು ಸಿದ್ದರಾಗಿರುವ ಈ ಕಲಿಯುಗದಲ್ಲಿ ಅಂತಹ ಸಮಾಜ ನಿರ್ಮಾಣವಾದರೆ ಅಥವಾ ಅವರು ಪ್ರಬಲವಾಗಿ ಬೆಳೆದರೆ ಅದನ್ನು ಯಾವ ಧ್ವನಿಗಳು ವಿರೋಧಿಸುತ್ತವೆ ಎಂಬುದನ್ನು ಗಮನಿಸಬೇಕು. ಇಂತಹ ಕೆಳಜಾತಿಯ, ಮಹಿಳೆಯರ ಹೋರಾಟದ ಧ್ವನಿಗಳನ್ನು ಮುಖ್ಯವಾಹಿನಿಯ ವಿದ್ವಾಂಸರು, ಸಮಾಜ ಶಾಸ್ತ್ರಜ್ಞರು, ಚಿಂತಕರು, ಬರಹಗಾರರೆಲ್ಲರೂ ಗುರುತಿಸದೇ ಇರುವುದನ್ನು ನಾವು ಗಮನಿಸಬೇಕು. ನಾವು ಮಹಿಳಾವಾದಿಗಳು ಅಂತಹ ಧ್ವನಿಗಳನ್ನು ಎತ್ತಿಹಿಡಿಯಬೇಕು, ದಮನಿತರಿಗೆ ಧ್ವನಿ ನೀಡಬೇಕು. ನಮ್ಮ ಗ್ರಂಥಗಳಲ್ಲಿಯೂ ವಿರೋಧಿ ಧ್ವನಿಗಳಿವೆ, ಅವುಗಳನ್ನು ಗ್ರಂಥಗಳಲ್ಲಿಯೇ ಬಿಡಲಾಗಿದೆ.

ಒಂದು ವಿಷಯವನ್ನು ಕುರಿತಂತೆ ಸಂವಾದ ನಡೆಸುವ, ಯಾವುದೇ ವಿಷಯವನ್ನಾಗಲಿ ಚರ್ಚಿಸಿ ಅದಕ್ಕೆ ಎಲ್ಲರ ಸಮ್ಮತಿಯನ್ನು ಪಡೆಯುವ ಸಂಪ್ರದಾಯ ಬುದ್ಧನ ಕಾಲದಲ್ಲಿ ಇತ್ತು ಎಂಬುದನ್ನು ಬೌದ್ಧ ಗ್ರಂಥಗಳಲ್ಲಿ ಕಾಣಬಹುದು. ನಾನು ಬೌದ್ಧಧರ್ಮ ಕುರಿತು ಹೆಚ್ಚು ಓದಿರುವುದರಿಂದ, ತಿಳಿದುಕೊಂಡಿರುವುದರಿಂದ ಅಲ್ಲಿಯ ಉದಾಹರಣೆಗಳನ್ನೆ ತೆಗೆದುಕೊಳ್ಳುತ್ತೇನೆ. ಪ್ರಾಚೀನ ಕಾಲದಲ್ಲಿ ಸಮಾನತೆ ಇತ್ತೆಂದು ಹೇಳುವುದು ಅರ್ಥಹೀನ. ೬ನೇ ಶತಮಾನದಿಂದಲೇ ಮಹಿಳಾ ವಿರೋಧಿ ಧ್ವನಿಗಳು ಕೇಳಿಬಂದಿವೆ. ಹಾಗಾಗಿ ಮಹಿಳಾ ವಿರೋಧಿ ಧ್ವನಿ ಇವತ್ತಿನದಲ್ಲ ಅದಕ್ಕೆ ಪುರಾತನ ಇತಿಹಾಸವಿದೆ. ಈ ದಾಸ್ಯ ಪದ್ಧತಿ ಏಕಿದೆ? ಇದು ಏಕೆ ಭಿನ್ನವಾಗಿದೆ? ಎಂಬ ಪ್ರಶ್ನೆಗಳು ಮೊದಲಿನಿಂದಲೂ ಬಂದಿವೆ. ಮೈಲಿಗೆ ಮುಟ್ಟುವುದರಿಂದ ಮಾತ್ರ ಆಗುವುದಿಲ್ಲ. ಶೂದ್ರರು ತಮ್ಮನ್ನು ನೋಡಿದರು ಸಹ ಅಪವಿತ್ರರಾಗುತ್ತಾರೆಂದು ಬ್ರಾಹ್ಮಣರು ಭಾವಿಸುತ್ತಿದ್ದರು. ತಮ್ಮನ್ನು ತಾವು ಅತ್ಯಂತ ಜಾಣರೆಂದುಕೊಂಡ ಬ್ರಾಹ್ಮಣರು ಎಂತಹ ಮೂರ್ಖತನ ಮಾಡುತ್ತಾರೆಂದು ತಿಳಿಯಲು ಚಾಂಡಾಲನ ಕತೆಯನ್ನು ನೆನಪಿಸಿಕೊಳ್ಳಬಹುದು.

ಮತ್ತೊಂದು ಉದಾಹರಣೆಯನ್ನು ನೋಡಬಹುದು. ಒಬ್ಬ ದಾಸಿ ನೀರು ತುಂಬಲು ಬೆಳಗಿನ ಜಾವ ನದಿಗೆ ಹೋಗುತ್ತಿದ್ದಳು. ನದಿಯ ನೀರಿನಲ್ಲಿ ನಿತ್ಯವೂ ಒಬ್ಬ ಬ್ರಾಹ್ಮಣ ಮುಳುಗಿ ಸ್ನಾನ ಮಾಡುತ್ತಿದ್ದ. ಒಂದು ದಿನ ಆ ದಾಸಿ ಏಕೆ ಈ ಬೆಳಗಿನ ಥಂಡಿಯಲ್ಲಿ ದಿನವೂ ನದಿಯಲ್ಲಿ ಸ್ನಾನ ಮಾಡುತ್ತಿ ಎಂದು ಕೇಳಿದಳು. ಆಗ ಬ್ರಾಹ್ಮಣ ’ಪಾಪ ತೊಳೆದುಕೊಂಡು ಸ್ವರ್ಗಕ್ಕೆ ಹೋಗಲು’ ಎಂದು ಉತ್ತರಿಸಿದ. ಅದಕ್ಕವಳು ’ಓಹೋ, ಪಾಪ ಯಾವುದು, ಪುಣ್ಯ ಯಾವುದು, ಪಾಪವನ್ನಷ್ಟೇ ತೊಳೆಯಬೇಕು ಪುಣ್ಯವನ್ನಲ್ಲ ಎಂಬುದನ್ನು ತಿಳಿಯುವಷ್ಟು ಚಾಣಾಕ್ಷವಾಗಿದೆ ನೀರು! ಹಾಗಾದರೆ ನೀರಿನಲ್ಲಿರುವ ಕಡ್ಡಿ-ಕಸ, ಜಲಚರಗಳೆಲ್ಲವೂ ಸೀದಾ ಸ್ವರ್ಗಕ್ಕೆ ಹೋಗುವವರಲ್ಲವೇ?’ ಎಂದು ಕೇಳುತ್ತಾಳೆ.

ಆ ದಾಸಿಗೆ ಯಾರೂ ಏನನ್ನೂ ಹೇಳಿಕೊಟ್ಟಿರಲಿಲ್ಲ, ಅವಳೊಳಗಿನ ಸಾಮಾನ್ಯಜ್ಞಾನದಿಂದಲೇ ಪ್ರಶ್ನೆ ಮಾಡಿದ್ದಳು. ಅಂತಹ ಸಾಮಾನ್ಯಜ್ಞಾನ ನಮಗೆ ಸಿಕ್ಕ ಕೊಡುಗೆಯಾಗಿದೆ. ಜನ ಹೇಳುವುದನ್ನೆಲ್ಲ ನಾವು ಒಪ್ಪಬೇಕಾಗಿಲ್ಲ. ನಮಗೆ ಒಪ್ಪಿಗೆಯಾದರೆ ಮಾತ್ರ ಸ್ವೀಕರಿಸಬೇಕು. ನಾವೇ ಸ್ವಂತವಾಗಿ ಯೋಚಿಸುವ ಅಗತ್ಯವಿದೆ. ನಾನು ಹಿಂದೊಮ್ಮೆ ಸೂಫಿಗಳ ಕುರಿತು ಉಪನ್ಯಾಸ ನೀಡಿದ್ದೆ. ೧೪ನೇ, ೧೮ನೇ ಮತ್ತು ೨೦ನೇ ಶತಮಾನಗಳಲ್ಲಿ ಸಂತರು ಮತ್ತು ಸೂಫಿಗಳು ಸಾಮಾನ್ಯಜನರಲ್ಲಿನ ತಿಳುವಳಿಕೆ/ಜ್ಞಾನವನ್ನು ಬಳಸಿಕೊಂಡೇ ಬದಲಾವಣೆಯ ಬಗ್ಗೆ ಮಾತನಾಡಿದರು. ಜಾತಿತಾರತಮ್ಯವನ್ನು ಟೀಕೆ ಮಾಡಿದರು. ೧೨ ನೇ ಶತಮಾನದಲ್ಲಿಯೂ ಅಕ್ಕಮಹಾದೇವಿ ಮತ್ತು ಇತರ ಶರಣರು ಜಾತಿ, ಲಿಂಗ ತಾರತಮ್ಯವನ್ನು ಕಟುವಾಗಿ ಟೀಕಿಸಿದರು. ಹಾಲನ್ನು ಶುದ್ಧವೆನ್ನುತ್ತೇವೆ, ಕೆಲವು ಆಹಾರವನ್ನು ಶುದ್ಧವೆನ್ನುತ್ತೇವೆ, ಕೆಲವು ಆಹಾರವನ್ನು ಅಶುದ್ಧವೆನ್ನುತ್ತೇವೆ. ಜಾತಿಆಧಾರದ ಮೇಲೆ ಕೆಲವು ಆಹಾರಕ್ಕೆ ಅಶುದ್ಧತೆಯನ್ನು ತಗುಲಿಸಲಾಗಿದೆ. ಪಿತೃ ಪ್ರಧಾನತೆಯೂ ಸಹ ಲಿಂಗಾಧಾರಿತ ಶ್ರಮವಿಭಜನೆಯನ್ನು ಮಾಡಿ ಮಹಿಳೆಯರು ಮನೆಯೊಳಗೆ ಕೆಲಸ ಮಾಡಬೇಕು ಪುರುಷರು ಹೊರಗೆಕೆಲಸ ಮಾಡಬೇಕೆಂದು ನಿರ್ಬಂಧ ಹೇರಿತು. ಇದನ್ನು ವಿರೋಧಿಸುವ ಆಂದೋಲನ ಬುದ್ಧನ ಕಾಲದಿಂದಲೇ ಆರಂಭವಾಯಿತು.

ನಾಲ್ಕು ಗೋಡೆಗಳ ನಡುವೆ ಮಹಿಳೆಯರ ಧ್ವನಿಯನ್ನು ಬಂಧಿಸಬೇಡಿ, ಗಂಡಸರಿಂದಲೂ, ಕುಟುಂಬದಿಂದಲೂ ನಮಗೆ ಬಿಡುಗಡೆ ಬೇಕು ಎಂದು ಮಹಿಳೆಯರು ಬಹಳ ಹಿಂದಿನಿಂದಲೇ ಹೋರಾಟ ಆರಂಭಿಸಿದರು. ಒಂದು ಕತೆ ಇದೆ. ಒಬ್ಬ ಮಹಿಳೆ ಮರದ ಕೆಳಗೆ ಕೂತು ಧ್ಯಾನ ಮಾಡುತ್ತಿದ್ದಳು. ಮಾರಾ ಒಬ್ಬ ಪುರುಷನ ರೂಪದಲ್ಲಿ ಬಂದು ಅವಳನ್ನು ನೋಡಿ ’ಈ ಧ್ಯಾನವೆಲ್ಲಾ ನಿನಗೇಕೆ ಬೇಕು? ತುಂಬಾ ಬುದ್ದಿವಂತರು ಮಾಡುವ ಕೆಲಸವಿದು ನೀನೇಕೆ ಮಾಡಬೇಕು? ಅನ್ನದ ಅಗಳು ಬೆಂದಿದೆಯೋ ಅಥವಾ ಇಲ್ಲವೋ ಎಂದು ನೋಡಲು ಎರಡು ಬೆರಳಷ್ಟು ಜ್ಞಾನ ಸಾಕು’ಎಂದು ಕೇಳಿದನು. ಆಗ ಆಕೆ ’ನನಗೆ ಎರಡು ಬೆರಳಿನಷ್ಟು ಜ್ಞಾನ ಬೇಡ. ಆಕಾಶವನ್ನು ಹಿಡಿಯುವಷ್ಟು, ಮುಕ್ತಿ ಪಡೆಯುವ ಜ್ಞಾನಬೇಕು’ ಎಂದು ಅಡುಗೆ ಮನೆಯಲ್ಲಿರು ಎಂದು ಹೇಳಿದ ಪುರುಷನಿಗೆ ಉತ್ತರ ನೀಡಿದಳು. ನಾವು ಪಡೆಯಬೇಕೆಂದಿರುವ ಸ್ವಾತಂತ್ರ್ಯವೆಂದರೆ, ಜಾತೀಯತೆಯಿಂದ ಸ್ವಾತಂತ್ರ್ಯ, ಲಿಂಗ ತಾರತಮ್ಯದಿಂದ ಸ್ಯಾತಂತ್ರ್ಯ, ಯೋಚಿಸುವ ಸ್ವಾತಂತ್ರ್ಯ ನಮಗೆ ಬೇಕು, ಪ್ರಶ್ನಿಸುವ ಸ್ವಾತಂತ್ರ್ಯ ಬೇಕು.

ಈ ರೀತಿಯ ಬಿಡುಗಡೆಯ ಹೋರಾಟವನ್ನು ಮಹಿಳೆ ತುಂಬಾ ಸಮಯದಿಂದ ಮಾಡುತ್ತಾ ಬರುತ್ತಿದ್ದಾಳೆ. ಈ ಜಾತಿ, ವರ್ಗ, ಧರ್ಮ ಮತ್ತು ಪಿತೃಪ್ರಧಾನತೆಯ ಬಂಧನಗಳಿಂದ ಮುಕ್ತಿ ಪಡೆಯಲು ಬಿಡುಗಡೆಯ ದಾರಿಯನ್ನು ಹುಡುಕುತ್ತಿದ್ದಾಳೆ. ಆದರೆ ಈ ಸಂಘರ್ಷವಿನ್ನೂ ಕೊನೆಗೊಂಡಿಲ್ಲ. ಸಾವಿತ್ರಿ ಬಾ ಫುಲೆಯವರು ಒಬ್ಬ ಅಪಾರ ತಿಳುವಳಿಕೆಯುಳ್ಳ ಮಹಿಳೆಯಾಗಿದ್ದರು. ಇವರು ಹೆಣ್ಣು ಮಕ್ಕಳಿಗಾಗಿ ಮೊಟ್ಟಮೊದಲ ಶಾಲೆಯನ್ನು ಪ್ರಾರಂಭಿಸಿದರು. ಮಹಿಳೆಯರಿಗೆ ಶಿಕ್ಷಣ ಕೊಡುವುದರ ಮೂಲಕ ಅವರ ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಹೋರಾಡಿದರು. ಜ್ಯೋತಿ ಬಾ ಫುಲೆಯವರು ಶಿಕ್ಷಣವನ್ನು ಮೂರನೇಕಣ್ಣು ಎಂದು ಹೇಳುತ್ತಿದ್ದರು. ವಿವೇಚನೆಯ ಕಣ್ಣನ್ನು ನಾವು ತೆರೆಯಬೇಕಾಗಿದೆ. ಶಿಕ್ಷಣವೆಂದರೆ ಅಕ್ಷರಜ್ಞಾನವಲ್ಲ, ಅದು ವಿವೇಚನಾ ಶಕ್ತಿಯನ್ನು ಬೆಳೆಸುವಂತದ್ದಾಗಬೇಕು. ಮೂರನೆ ಕಣ್ಣು ಎಂದರೆ ಬೌದ್ಧಿಕ ಶಕ್ತಿ. ವಿಶ್ವವಿದ್ಯಾಲಯದ ವೇದಿಕೆಯಿಂದ ಮಾತನಾಡುತ್ತಿದ್ದೇನೆ. ಇಂಥ ವೇದಿಕೆ ನಮಗೆ ಬಿಡುಗಡೆಯ ಹಾದಿಯನ್ನು ಹುಡುಕಲು ಬೇಕಾದ ವೈಚಾರಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೌದ್ಧಿಕ ಶಕ್ತಿಯನ್ನು ಬೆಳೆಸಲು ಮುಕ್ತವಾದ ವೇದಿಕೆ ಬೇಕು. ನಮ್ಮ ತಿಳುವಳಿಕೆಯನ್ನು ಬೆಳಸಿಕೊಳ್ಳಲು ಚರ್ಚೆ, ಸಂವಾದ, ವಿಮರ್ಶೆ ಬೇಕು. ಆದ್ದರಿಂದಲೇ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ, ಜವಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ, ಅಲಹಾಬಾದ್ ವಿಶ್ವವಿದ್ಯಾಲಯಗಳಲ್ಲಿ ಕೋಲಾಹಲ ಹುಟ್ಟಿಕೊಂಡಿದೆ. ಸಮಾನತೆಯ ಸಮಾಜ ಕಟ್ಟಬೇಕಾಗಿದೆ. ಜಾತಿವಾದ, ಪಿತೃಪ್ರಧಾನತೆ, ಅಧಿಕಾರಶಾಹಿ ಇಲ್ಲದ ಸಮಾಜಕ್ಕಾಗಿ ನಾವು ಸಂಘರ್ಷಮಾಡಬೇಕಿದೆ. ಎಲ್ಲದಮನಿತರನ್ನು ಮುಕ್ತಗೊಳಿಸಬೇಕು. ಅದಕ್ಕಾಗಿ ಒಂದುಗೂಡಿ ಮನ್ನಡೆಯಬೇಕಾಗಿದೆ. ಮಹಿಳಾ ದಿನಾಚರಣೆ ಪುರುಷಪ್ರಾಧಾನ್ಯತೆಯನ್ನಷ್ಟೇ ಅಲ್ಲ, ಎಲ್ಲಾ ಅಸಮಾನತೆಗಳನ್ನು ವಿರೋಧಿಸುತ್ತದೆ. ಆಗಲೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥಬರುವುದು.

ಕನ್ಹಯ್ಯಾನ ತಾಯಿ ಒಬ್ಬ ಅಂಗನವಾಡಿ ಕಾರ್ಯಕರ್ತೆ. ಆಕೆಯೂ ಹೋರಾಟ ಮಾಡುತ್ತಿದ್ದಾಳೆ, ಹೇಗಾದರೂ ಹೊಸ ಜೀವನಕ್ಕಾಗಿ, ಹೊಸ ಅವಕಾಶಕ್ಕಾಗಿ. ನಮ್ಮೆಲ್ಲರ ಹೋರಾಟ ನಾಳಿನ ಸಮಾಜವನ್ನು ಹೇಗೆ ಕಟ್ಟಬೇಕು, ಆ ಸಮಾಜದಲ್ಲಿ ನಾವು ತಲೆಎತ್ತಿ ಬದುಕುಬೇಕು ಎಂಬುದು. ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಸಂಘರ್ಷ ಮಾಡಬೇಕಾಗಿದೆ. ಇಂಥ ಭರವಸೆ, ಆಕಾಂಕ್ಷೆಯೊಂದಿಗೆ, ಸ್ತ್ರೀವಾದಿ ನೋಟ/ ದರ್ಶನದೊಂದಿಗೆ ಮುಂದೆ ಹೋಗೋಣ. ಆಗಲೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥಬರುವುದು ಎಂದು ಹೇಳಿ ನನ್ನ ಮಾತು ಮುಗಿಸುತ್ತೇನೆ.

(ಹಿಂದಿ ಭಾಷಣದ ಕನ್ನಡ ಬರಹ ರೂಪ: ಹಮೀದಾ ಬಾನು, ಅಥಣಿ)

Friday, February 17, 2017

ವಿಜಯಪುರದ ಜೀವಪರ ಮಹಿಳಾ ಪರಂಪರೆ


Image result for du saraswathi kannada poet

-ದು. ಸರಸ್ವತಿಕಾಖಂಡಕಿ ಕೆಂಚಮ್ಮನೆಂಬ ಹೆಣ್ಣುಮಗಳು ದೇವದಾಸಿಯಾಗಿದ್ದಳು. ಬಬಲೇಶ್ವರದ ಸ್ವಾಮಿಯೊಬ್ಬರಿಂದ ದೀಕ್ಷೆ ಪಡೆದುಕೊಂಡು ತಾನು ಸಂಪಾದಿಸಿದ ಸಂಪತ್ತನ್ನೆಲ್ಲಾ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟಳು. ಆಕೆ ತಾನು ಭಾಗವಹಿಸುತ್ತಿದ್ದ ಮದುವೆಯಲ್ಲಿ ಅದೆಷ್ಟು ದಾರಾಳವಾಗಿ ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದಳೆಂದರೆ ಅಷ್ಟು ಮೊತ್ತವನ್ನು ಕೊಡಲು ಮನಸ್ಸಿಲ್ಲದ ಶ್ರೀಮಂತರು ಅವಳು ಹೋಗುತ್ತಿದ್ದ ಮದುವೆಗಳಿಗೆ ಹೋಗುತ್ತಿರಲಿಲ್ಲವೆಂಬ ಕತೆಗಳಿವೆ.

ಇಟಗಿ ಭೀಮವ್ವ ಕಡುಬಡತನದ ಮನೆಯ ಹೆಣ್ಣುಮಗಳು. ಸಣ್ಣವಯಸ್ಸಿನಲ್ಲೇ ಆಕೆಯ ತಂದೆ ತೀರಿಹೋದಾಗ ಏನೂ ಅರಿಯದ ಭೀಮವ್ವ ಮತ್ತು ಅವಳ ತಾಯಿಯನ್ನು ಸಂಬಂಧಿಕರು ವಂಚಿಸಿ ಆಸ್ತಿಯನ್ನು ಕಿತ್ತುಕೊಂಡರು. ಸಾಕುವ ಶಕ್ತಿಯೂ ಇಲ್ಲದಂತಾದಾಗ ಅವಳ ತಾಯಿಯು ಮಗಳನ್ನು ಮಠದ ಶರಣರಿಗೆ ಒಪ್ಪಿಸುತ್ತಾಳೆ. ಅಲ್ಲಿ ಆಕೆ ದೀಕ್ಷೆ ಪಡೆದುಕೊಂಡು ಶಿವಶರಣೆಯಾಗುತ್ತಾಳೆ. ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಸ್ಥಳೀಯರಿಗೆ ನೂಲುವುದನ್ನು ಕಲಿಸುತ್ತಾಳೆ. ದೇಸಿ ವೈದ್ಯ ಮಾಡಿ ಕಾಯಿಲೆಗಳನ್ನು ವಾಸಿ ಮಾಡುತ್ತಾಳೆ. ಕಣ್ಣಿಲ್ಲದವರಿಗೆ ಕಣ್ಣು ಬರಿಸಿದಳೆಂಬ ಪ್ರತೀತಿಯೂ ಇದೆ. ಆಳವಾದ ಆಧ್ಯಾತ್ಮಿಕ ಹುಡುಕಾಟವಿದ್ದ ಆಕೆಯ ಮಾತುಗಳನ್ನು ಜನರು ಶ್ರದ್ದೆಯಿಂದ ಅನುಸರಿಸುತ್ತಿದ್ದರು.

ಸಂಖ್ ಗ್ರಾಮದ ಶಿವಶರಣೆ ದಾನಮ್ಮದೇವಿ ಜನಸೇವೆಗಾಗಿಯೇ ಪ್ರಸಿದ್ಧಳು. ವಿದ್ಯೆ ಕಲಿತ ಮೇಲೆ ಮನೆಯವರು ಮದುವೆಯಾಗಲು ಹೇಳಿದಾಗ ಕಲ್ಯಾಣದ ಬಸವಣ್ಣನನ್ನು ಕಂಡ ನಂತರ ನಾನು ಮದುವೆಯಾಗುವುದೆಂದು ಹೇಳಿ ಅಲ್ಲಿಗೆ ಹೊರಡುತ್ತಾಳೆ. ದಾರಿಯಲ್ಲಿ ಕಂಡ ಹುಷಾರಿಲ್ಲದ ವೃದ್ಧ ದಂಪತಿಗಳ ಸೇವೆಗೆಂದು ನಿಂತವಳು ಅಲ್ಲಿಯೇ ಜನರ ಸೇವೆ ಮಾಡಿಕೊಂಡು, ದಾಸೋಹ ಮಾಡಿಕೊಂಡು ಸಮೀಪದ ಗುಡ್ಡಾಪುರದಲ್ಲೆ ಉಳಿದುಬಿಡುತ್ತಾಳೆ. ವಿಷಯ ತಿಳಿದ ಬಸವಣ್ಣನೇ ಅವಳನ್ನು ನೋಡಲು ಅಲ್ಲಿಗೆ ಬರುತ್ತಾರೆ. ಪ್ರತೀಕಾರದ ಭಾವ ಎಳ್ಳಷ್ಟೂ ಇಲ್ಲದೆ ನಿಸ್ವಾರ್ಥ ಪ್ರೀತಿಯಿಂದ ಜನರನ್ನು ಹರಸುತ್ತಿದ್ದರಿಂದ ಬೇಡಿಕೊಂಡಿದ್ದನ್ನೆಲ್ಲ ನೆರವೇರಿಸುತ್ತಾಳೆ ಎಂಬ ನಂಬಿಕೆ ಜನಜನಿತವಾಗಿದೆ. ಈಗಲೂ ಗುಡ್ಡಾಪುರಕ್ಕೆ ಇಲ್ಲಿನ ಹೆಣ್ಣುಮಕ್ಕಳು ಕಾಲ್ನಡಿಗೆಯಲ್ಲಿ ನಡೆದು ಹೋಗುತ್ತಾರೆ. ನಡೆದು ಹೋಗುವವರೆಲ್ಲರಿಗೂ ತಿಂಡಿ, ಊಟ, ನೀರು, ಪಾನಕಗಳ ವ್ಯವಸ್ಥೆಯನ್ನು ಆಯಾ ಗ್ರಾಮದ ಜನರೇ ಉಚಿತವಾಗಿ ಒದಗಿಸುತ್ತಾರೆ.

ವಿಜಯಪುರದ ಬೀಳಗಿಯ ಅಮೀರಿಬಾಯಿ ಕರ್ನಾಟಕಿ ಹೆಸರಾಂತ ಹಿಂದೂಸ್ತಾನಿ ಹಾಗು ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರು. ಇವರು ಹಾಡಿದ ’ವೈಷ್ಣವ ಜನತೊ...’ ಹಾಡನ್ನು ಗಾಂಧೀಜಿಯವರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಇವರ ಹಾಡುಗಳು ಸ್ವಾತಂತ್ರ್ಯ ಹೋರಾಟದ ಪ್ರಭಾತ ಫೇರಿಗಳಲ್ಲಿ ಜನಪ್ರಿಯವಾಗಿದ್ದವು. ಇದಲ್ಲದೆ ಆಕೆ ಅದ್ಭುತವಾದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆಯಾಗಿದ್ದರು. ಇವರ ಮಧುರವಾದ ಗಾಯನದಿಂದಾಗಿ ’ಕಿಸ್ಮತ್’ ಎಂಬ ಹಿಂದಿ ಚಲನಚಿತ್ರ ೩ ವರ್ಷ ೮ತಿಂಗಳುಗಳ ಕಾಲ ಓಡಿತ್ತು.

ಸಾಮರಸ್ಯ, ಸರ್ವಧರ್ಮ ಸಹಿಷ್ಣುತೆಯ ಪರಂಪರೆ

ದೇವಾಲಯಗಳು, ಮಸೀದಿಗಳು, ಬೌದ್ಧ-ಜೈನ ಚೈತ್ಯಾಲಯಗಳು, ಬಾವಿಗಳು, ಸ್ಮಾರಕಗಳ ನಗರವಾದ ವಿಜಯಪುರ ಸಾಮರಸ್ಯ ಹಾಗೂ ಸಹಿಷ್ಣುತೆಗೆ ಮನೆಮಾತಾಗಿದೆ. ವಚನಕಾರರು ಮತ್ತು ಸೂಫಿ ಸಂತರ ಬೀಡಾಗಿದೆ. ಹಿಂದೊಮ್ಮೆ ಐದು ನದಿಗಳ ನಾಡಾಗಿದ್ದ ವಿಜಯಪುರ ಹತ್ತಿ, ಜೋಳ, ದಾಳಿಂಬೆ ಮತ್ತು ದ್ರಾಕ್ಷಿಗೆ ಹೆಸರುವಾಸಿಯಗಿದೆ. ’ಡೋಣಿ ನದಿ ತುಂಬಿ ಹರದ್ರ ಓಣೆಲ್ಲ ಜ್ವಾಳ’ ಎಂಬ ಗಾದೆ ಇಲ್ಲಿ ಪ್ರಚಲಿತವಿದೆ.

ಇತಿಹಾಸ ಹೇಗಿರಬೇಕೆಂಬುದಕ್ಕೆ ಉದಾಹರಣೆಯಾಗಿ, ಮುಂಬೈ ನ್ಯಾಯಾಲಯದ ಇತಿಹಾಸವನ್ನು ಮುಂಬೈ ಗೆಜೆಟಿಯರ್‌ನಲ್ಲಿ ಬರೆಯುವ ಸಂದರ್ಭದಲ್ಲಿ ವಿಜಯಪುರ ರಾಜ ಆದಿಲ್ ಶಾಹಿಯ ಮಾತುಗಳನ್ನು ಉಲ್ಲೇಖಿಸಲಾಗಿದೆ. ಎತ್ತಣಿಂದೆತ್ತ ಸಂಬಂಧವಯ್ಯಾ ಎನಿಸಬಹುದು. ಅಲ್ಲಿ ಪ್ರಸ್ತಾಪಿಸಿರುವುದರ ಹಿಂದಿರುವ ಉದ್ದೇಶ ಮಹತ್ವವಾದುದು. ವಿಜಯಪುರದ ಇತಿಹಾಸವನ್ನು ಬರೆಯಲು ಇಬ್ರಾಹಿಂ ಆದಿಲ್ ಶಾಹಿಯು ಫರಿಷ್ತ ಎಂಬ ಇತಿಹಾಸಕಾರನನ್ನು ಕರೆಸಿ ಭಯ ಮತ್ತು ಹೊಗಳಿಕೆಯನ್ನು ಬಿಟ್ಟು ಇತಿಹಾಸವನ್ನು ಬರೆಯಬೇಕೆಂದು ಕೇಳಿದ. ಭಯ ಮತ್ತು ಹೊಗಳಿಕೆಯಿಂದ ಮುಕ್ತವಾಗಿದ್ದರೆ ಮಾತ್ರ ಇತಿಹಾಸ ವಸ್ತುನಿಷ್ಠವಾಗಬಲ್ಲದು ಎಂಬ ಅರಿವು ಆತನಿಗಿತ್ತು.

ಇಂತಿಪ್ಪ ಮಹಿಳಾ ಪರಂಪರೆ ಹಾಗೂ ಸಾಮರಸ್ಯದ ಇತಿಹಾಸ ಇರುವ ವಿಜಯಪುರದಲ್ಲಿ ಈ ಸಲದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ನಡೆಯುತ್ತಿದೆ. ಸೋದರಿತ್ವ, ಸಮಾನತೆ, ವೈವಿಧ್ಯತೆಯನ್ನು ನಂಬುವ ಮಹಿಳಾ ಚಳವಳಿ ಮಹಿಳೆಯರ ಆತ್ಮಘನತೆ ಮತ್ತು ಮಾನವ ಹಕ್ಕುಗಳಿಗಾಗಿ ದನಿ ಎತ್ತುತ್ತಲೇ ಬಂದಿದೆ. ಅನ್ಯಾಯ, ಅಸಮಾನತೆಯ ವಿರುದ್ಧ ಪ್ರಬಲವಾದ ಪ್ರತಿರೋಧವನ್ನು ಒಡ್ಡಿದೆ. ಸಮಸಮಾಜದ ಆಶಯದತ್ತ ನಡೆಯಲು ಘನವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ನಡೆದ ದಾರಿ, ಪಡೆದ ಅನುಭವ, ಎದುರಿಸಿದ ಸಾಹಸ, ಗಳಿಸಿದ ಸಾರ್ಥಕತೆ ಇವೆಲ್ಲವನ್ನು ಒಟ್ಟು ಮಾಡಿ ಮಹಿಳಾ ಚೈತನ್ಯದ ದಿನವಾಗಿ ಮಾರ್ಚ್ ೮ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಡೆಸಿಕೊಂಡು ಬರುತ್ತಿದೆ. ಒಕ್ಕೂಟವು ಭಿನ್ನತೆ, ಭಿನ್ನಾಭಿಪ್ರಾಯಗಳೊಂದಿಗೆಯೇ ಒಟ್ಟಿಗೆ ಹೆಜ್ಜೆ ಇಡುತ್ತಿರುವುದು ಮಹತ್ವದ ವಿಷಯವಾಗಿದೆ. ವಿಚಾರ ಸಂಕಿರಣ, ಮೌನ ಪ್ರತಿಭಟನೆ, ರ‍್ಯಾಲಿ ಹಾಗು ಸಾರ್ವಜನಿಕ ಸಭೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತಿದೆ. ವಿಚಾರ ಸಂಕಿರಣಗಳಲ್ಲಿ ಯುವ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.


Image result for du saraswathi kannada poet


ಎಡರುತೊಡರುಗಳ ನಡುವೆಯೂ, ಭಿನ್ನಾಭಿಪ್ರಾಯಗಳ ನಡುವೆಯೂ, ದ್ವೇಷ, ಕ್ರೌರ್ಯ, ಹಿಂಸೆಯ ಕತ್ತಲಿಗೆ ಪ್ರೀತಿಯ ದೊಂದಿ ಹಿಡಿದು ಜೊತೆಯಾಗಿ ನಡೆಯಲು ಆರಂಭಿಸಿದ್ದೇವೆ. ನಡಿಗೆ ಮುಂದುವರೆದಿದೆ. ಈ ಸಲ ದೊಂದಿ ಹಿಡಿದು ನಡೆಸುತ್ತಿರುವವರು ವಿಜಯಪುರದ ಸೋದರಿಯರು.

ಆರೂ ಇಲ್ಲದವಳೆಂದು ಆಳಿಗೊಳಲು ಬೇಡ ಕಂಡೆಯಾ?
ಏನು ಮಾಡಿದಡೂ ಆನಂಜುವಳಲ್ಲ
ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು.
ಮನಮೆಚ್ಚದಭಿಮಾನಕ್ಕೆ ಆವುದು ಮರೆ ಹೇಳಾ? ಉಡಿಗೆಯ
ಸೆಳೆದುಕೊಂಡೆಡೆ, ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ?
ಚೆನ್ನಮಲ್ಲಿಕಾರ್ಜನಂಗೆ ಶರಣೆಂದು ನಂಬಿ ಮರೆಹೊಕ್ಕಡೆ
ಅಂಜಿ ನಿಂದುದಲ್ಲಾ!

ಎಂದ ನಾಡಿನ ಮಹಿಳೆಯರ ಸ್ಥೈರ್ಯ, ಚೈತನ್ಯಗಳ ಸಂಕೇತವಾದ ಅಕ್ಕಮಹಾದೇವಿ ಹಾಗೂ ವಿಜಯಪುರದ ಸಮರ್ಥ ಆಡಳಿತಗಾರಳಾಗಿದ್ದ ಚಾಂದ್ ಬೀಬೀ ಇವರ ನೆನಪಿಗೆ ಈ ಸಲದ ಮಹಿಳಾ ದಿನಾಚರಣೆಯನ್ನು ಅರ್ಪಿಸಲಾಗಿದೆ. ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮಹಿಳೆಯರು ಹೋರಾಡುತ್ತಿರುವ ಈ ಸಂದರ್ಭದಲ್ಲಿ ವಿಜಯಪುರ ನಗರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ, ಮಗನನ್ನು ಉತ್ತಮ ಅಭಿರುಚಿಯುಳ್ಳವನಾಗಿ ಮಾಡುವುದರಲ್ಲಿ ಮಹತ್ತರ ಪಾತ್ರವಹಿಸಿದ, ಕನ್ನಡ, ದಖ್ಖನಿ, ಪರ್ಷಿಯಾ, ಅರೆಬಿಕ್, ಟರ್ಕಿಷ್, ಮರಾಠಿ ಭಾಷೆಗಳನ್ನು ಬಲ್ಲವಳಾಗಿದ್ದ, ಉತ್ತಮ ಚಿತ್ರಕಲಾವಿದೆ ಹಾಗೂ ಸಿತಾರ್ ವಾದಕಿಯಾಗಿದ್ದ, ಮೊಗಲ್ ಸಾಮ್ರಾಜ್ಯದ ವಿರುದ್ಧ ಸ್ವಾಯತ್ತತೆಗಾಗಿ ವೀರಾವೇಶದಿಂದ ಹೋರಾಡಿದ, ಸಮರ್ಥಳಾಗಿದ್ದ ಕಾರಣಕ್ಕಾಗಿ ತನ್ನ ಆಸ್ಥಾನದ ಅಧಿಕಾರ ವಲಯದವರಿಂದಲೇ ಹತಳಾದ ಚಾಂದ್ ಬೀಬೀ ಬಹಳ ಮುಖ್ಯವಾಗುತ್ತಾಳೆ.

ಈ ಇಬ್ಬರು ಮಹಿಳೆಯರ ನೆನಪಿಗೆ ಈ ಸಲದ ಮಹಿಳಾ ದಿನಾಚರಣೆಯನ್ನು ವಿಜಯಪುರದ ಸೋದರಿಯರು ಅರ್ಪಿಸಿದ್ದಾರೆ. ಕೃಷಿ ಬಿಕ್ಕಟ್ಟಿನಲ್ಲಿ ನಲುಗುತ್ತಿರುವ ರೈತ ಮಹಿಳೆಯರು, ಅಪರಾಧೀಕರಣದಲ್ಲಿ ಸಿಲುಕಿಕೊಂಡಿರುವ ದೇವದಾಸಿ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು, ಬಾಲ್ಯವಿವಾಹ-ಮಾನವ ಸಾಗಣೆ-ಹಿಂಸೆಯಲ್ಲಿ ಸುರುಟುತ್ತಿರುವ ಮಕ್ಕಳು, ಭದ್ರತೆ ನೀಡಬೇಕಿದ್ದ ಕುಟುಂಬಗಳಲ್ಲೇ ಭೀತಿಯಿಂದ ಉಸಿರುಗಟ್ಟುತ್ತಿರುವ ಮಹಿಳೆಯರು, ಸಾಮರ್ಥ್ಯವಿದ್ದರೂ ರಾಜಕೀಯ ಪ್ರಾತಿನಿಧ್ಯ ಪಡೆಯದ ಮಹಿಳೆಯರನ್ನು ಕುರಿತ ವಿಚಾರ ಸಂಕಿರಣವನ್ನು ಮಾರ್ಚ್ ೮ರಂದು ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸುಮಾರು ಐದು ಸಾವಿರ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರೆಲ್ಲರಿಗು ಊಟ-ವಸತಿಯ ವ್ಯವಸ್ಥೆ ಒದಗಿಸಲು, ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲು ಸಿದ್ಧತೆ ನಡೆದಿದೆ. ಸಿದ್ಧತಾ ಸಭೆಗಳು ನಡೆಯುತ್ತಿರುವುದು, ತನಗೆ ಸೂರೇ ಇರಬಾರದೆಂದು ಹೇಳಿದ, ವಿಜಯಪುರಕ್ಕೆ ಬಂದ ಮೊದಲ ಸಂತ ಹಜರತ್ ಕ್ವಾಜ ಸೈದ್ ಹಾಜಿ ರೂಮಿ ಬಾಬಾ ದರ್ಗಾದಲ್ಲಿ. ಸಹೃದಯರ, ಸಮಾನ ಮನಸ್ಕರ ಧನ ಸಹಾಯ ಹಾಗೂ ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಮಾನತೆ, ಜಾತ್ಯತೀತತೆಯನ್ನು ನಂಬುವ, ಈ ನಾಡಿನ ಬಹು ವೈವಿಧ್ಯತೆಯನ್ನು ಗೌರವಿಸುವ ಸುಮಾರು ಇನ್ನೂರಕ್ಕೂ ಹೆಚ್ಚಿನ ಸಂಘಟನೆಗಳು, ಸಂಸ್ಥೆಗಳು ಮತ್ತು ಹಲವಾರು ವ್ಯಕ್ತಿಗಳು ಒಕ್ಕೂಟದೊಂದಿಗೆ ಕೈಜೋಡಿಸಿವೆ. ಹಿಂಸೆ ಮುಕ್ತ, ಸಮಸಮಾಜದ ಕನಸಿರುವ, ಪ್ರೀತಿ ಕರುಣೆಯಲ್ಲಿ ನಂಬಿಕೆ ಇರುವವರೆಲ್ಲರಿಗೂ ಆತ್ಮೀಯ ಸ್ವಾಗತ.

ನಮ್ಮೊಂದಿಗೆ ಹೆಜ್ಜೆ ಹಾಕಲು ಸಹಸ್ರಾರು ಸಂಖ್ಯೆಯಲ್ಲಿ ಬನ್ನಿ.

ಪರಿಸರದ ಮೇಲೆ ಟ್ರಂಪ್ ಧಾಳಿImage result for ಶಿವಸುಂದರ್


ಅನು: ಶಿವಸುಂದರ್ ಪರಿಸರ ಕಾಲುಷ್ಯದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯನ್ನು ವೈಟ್ ಹೌಸ್ ನಿರಾಕರಿಸುತ್ತಿರುವುದು ವಿಶ್ವಕ್ಕೊಂದು ಕೆಟ್ಟ ಸುದ್ದಿ.

Image result for tramp


ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬ್ಯ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು ೯೦/೧೨೦ ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ ೨೭ ರ ಮುಸ್ಲಿಂ ಪ್ರತಿಬಂಧ ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧೀ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು ಜನರ ಗಮನವನ್ನು ತಪ್ಪಿಸಿಕೊಂಡುಬಿಟ್ಟವು. ಯಾವರೀತಿ ವೀಸಾ ಬ್ಯಾನ್ ಎಂಬುದು ಪ್ರಪಂಚಾದ್ಯಂತ ತನ್ನ ಪರಿಣಾಮವನ್ನು ತೋರಬಲ್ಲದೋ, ಅದೇರೀತಿ ಪರಿಸರಕ್ಕೆ ಸಂಬಂಧಪಟ್ಟಂತೆ ಅವರ ಕೆಲವು ಕ್ರಮಗಳು ಜಾಗತಿಕ ಪರಿಣಾಮವನ್ನುಂಟು ಮಾಡಲಿವೆ. ಅದರಲ್ಲೂ ಹಸಿರು ಮನೆ ಅನಿಲ (Green House Gas- GHG) ಸೂಸಿಕೆಗೆ ಸಂಬಂಧಪಟ್ಟಂತೆ ಅವರು ಸದ್ಯ ತೆಗೆದುಕೊಳ್ಳುತ್ತಿರುವ ಮತ್ತು ಊಹಿಸಬಲ್ಲಂತೆ ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು ವಿಶೇಷವಾಗಿ ಕಳವಳಕಾರಿಯಾಗಿವೆ. ಅಮೆರಿಕವು ಈ ಸದ್ಯಕ್ಕೆ ಉಗುಳುತ್ತಿರುವ GHG ಯ ಪ್ರಮಾಣವನ್ನು ನೋಡುತ್ತಿದ್ದರೆ ಅದರಲ್ಲಿ ಯಾವುದೇ ಹೆಚ್ಚಳವಿರಲಿ ಈಗಿರುವ ಮಟ್ಟದಲ್ಲೇ ಉಳಿದುಕೊಂಡರೂ ಅದು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳವನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ.

ಪರಿಸರವಾದಿಗಳ ಬಗ್ಗೆ ಟ್ರಂಪ್‌ಗೆ ಇದ್ದಂಥ ತಿರಸ್ಕಾರ ಮನೋಭಾವ ಅವರ ಚುನಾವಣಾ ಪ್ರಚಾರದ ಸಂದರ್ಭದಿಂದಲೂ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಯಾರನ್ನು ಅವರು ತಮ್ಮ ಸಲಹೆಗಾರರನ್ನಾಗಿ ನಿಯುಕ್ತಗೊಳಿಸಿಕೊಳ್ಳುತ್ತಿದ್ದಾರೆ ಎಂಬುದು ಅಂಥಾ ಆಶ್ಚರ್ಯವನ್ನೇನೂ ತರುತ್ತಿಲ್ಲ. ಉದಾಹರಣೆಗೆ ಸ್ಕಾಟ್ ಪ್ರುಯಿಟ್ ಅವರು ಪರಿಸರ ರಕ್ಷಣಾ ಏಜೆನ್ಸಿಯ (Environment Protection Agency-EPA) ಕಾರ್ಯಭಾರವನ್ನು ವಹಿಸಿಕೊಳ್ಳುವವರೆಗೆ ಮಾತ್ರ ಅದರ ಹಂಗಾಮಿ ಮುಖ್ಯಸ್ಥರಾಗಿರುವ ಮೈರಾನ್ ಎಬೆಲ್ ಅವರನ್ನು ಟ್ರಂಪ್ ತಮ್ಮ ಸಲಹೆಗಾರರನ್ನಾಗಿ ಮಾಡಿಕೊಂಡಿದ್ದಾರೆ. ಎಬೆಲ್ ಅವರು ಎಂಥಾ ಮಹಾಶಯರೆಂದರೆ ಅಮೆರಿಕದ ಅತ್ಯಂತ ಪ್ರತಿಗಾಮಿ ಕಾಂಪಿಟೇಟೀವ್ ಎಂಟರ್ಪ್ರೈಸ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಲ್ಲೊಬ್ಬರಾಗಿದ್ದು ಪರಿಸರ ಚಳವಳಿಯನ್ನು ಆಧುನಿಕ ಜಗತ್ತಿನಲ್ಲಿ ಸ್ವಾತಂತ್ರ್ಯ ಮತ್ತು ಸಮೃದ್ಧಿಗೆ ಅತ್ಯಂತ ದೊಡ್ಡ ಅಪಾಯವೆಂದು ಬಣ್ಣಿಸಿರುವುದು ದಾಖಲಾಗಿದೆ. ಮತ್ತೊಬ್ಬರಾದ ಪ್ರುಯಿಟ್ ಅವರು ಹವಾಮಾನ ಬದಲಾವಣೆಯನ್ನು ನಿರಾಕರಿಸುತ್ತಾರಲ್ಲದೆ ಒಕ್ಲಾಹಾಮ ರಾಜ್ಯದ ಅಟಾರ್ನಿ ಜನರಲ್ ಆಗಿದ್ದ ಕಾಲದಲ್ಲಿ ತೈಲ ಕಂಪನಿಗಳ ಪರವಾಗಿ  ಪರಿಸರ ರಕ್ಷಣಾ ಏಜೆನ್ಸಿಯ (EPA) ವಿರುದ್ಧವೇ ೧೪ ದಾವೆಗಳನ್ನು ಹೂಡಿದ್ದರು. ಇಂಥಾ ಜನಗಳೇ ಪರಿಸರವನ್ನು ಕಾಪಾಡಲು ನಿಯುಕ್ತರಾಗಿದ್ದಾರೆಂಬುದು ಭವಿಷ್ಯದಲ್ಲಿ ಏನು ಕಾದಿದೆ ಎಂಬುದಕ್ಕೆ ಸೂಚನೆಗಳಾಗಿವೆ.

ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ತರುಣದಲ್ಲೇ ಟ್ರಂಪ್ ತೆಗೆದುಕೊಂಡ ಕ್ರಮಗಳೆಂದರೆ EPA ಗೆ ಅನುದಾನ ತಡೆಹಿಡಿದಿದ್ದು (ವಾಸ್ತವವಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಈ ಸಂಸ್ಥೆಯನ್ನೇ ರದ್ದು ಮಾಡಬೇಕೆಂದು ಘೋಷಿಸಿದ್ದರು) ಮತ್ತು ೧೫೦೦೦ ಇಂಜನಿಯರ್ ಮತ್ತು ವಿಜ್ನಾನಿಗಳಿರುವ ಆ ಸಂಸ್ಥೆಯ ಸಿಬ್ಬಂದಿ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಲು ಸೂಚಿಸಿರುವುದು. ಅಲ್ಲದೆ EPA ಸಿಬ್ಬಂದಿಗಳು ತಮ್ಮ ಸಂಶೋಧನೆಯ ಬಗ್ಗೆ ಮತ್ತದರ ಫಲಿತಾಂಶಗಳ ಕುರಿತು ಮಾಧ್ಯಮವನ್ನೂ ಒಳಗೊಂಡಂತೆ ಯಾರಜೊತೆಗೂ ಮಾತಾಡಬಾರದೆಂದು ಸಿಬ್ಬಂದಿಗಳ ಬಾಯಿಗೆ ಬೀಗ ಹಾಕುವ ಮತ್ತೊಂದು ಕಟ್ಟಪ್ಪಣೆಯನ್ನೂ ಹೊರಡಿಸಿದ್ದಾರೆ. ಇದರ ಅರ್ಥವೇನೆಂದರೆ, ಉದಾಹರಣೆಗೆ, GHG ಯ ಹೊರಸೂಸುವಿಕೆಯ ಇತ್ತೀಚಿನ ಪ್ರಮಾಣವೆಷ್ಟು ಎಂಬುದು ಸಾರ್ವಜನಿಕರಿಗೆ ಎಂದಿಗೂ ತಿಳಿಯುವುದೇ ಇಲ್ಲ. ಹಾಗೆಯೇ ವೈಟ್ ಹೌಸಿನ ಹವಾಮಾನ ಬದಲಾವಣೆಯ ಕುರಿತಾದ ಅಂತರ್ಜಾಲ ಪುಟದ ತಲೆಬರಹವನ್ನು An  America  First  Energy  Plan”  (ಮೊದಲು ಅಮೆರಿಕ- ಶಕ್ತಿ ಇಂಧನ ಯೋಜನೆ) ಎಂದು ಬದಲಾಯಿಸಲಾಗಿದೆಯಲ್ಲದೆ ಅದರಲ್ಲಿ ಹವಾಮಾನ ಬದಲಾವಣೆಯ ಪ್ರಸ್ತಾಪವೇ ಇಲ್ಲ. ಟ್ರಂಪ್ ಪ್ರಕಾರ ಈ ಶಕ್ತಿ ಇಂಧನ ಯೋಜನೆಯು, ಈವರೆಗೆ ನೆನೆಗುದಿಗೆ ಬಿದ್ದಿದ್ದ  ಅಮೆರಿಕ ಒಕ್ಕೂಟದ ಭೂಭಾಗದಲ್ಲಿರುವ ಸುಮಾರು ೫೦ ಟ್ರಿಲಿಯನ್ ಡಾಲರ್ ಮೌಲ್ಯದ ಜೇಡಿಪದರಗಲ್ಲು, ತೈಲ ಮತ್ತು ನೈಸರ್ಗಿಕ ಸಂಪನ್ಮೂಲ ಬಳಕೆಗೆ ಚಾಲ್ತಿ ನೀಡುತ್ತದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಈ ಹಿಂದಿನ ಆಡಳಿತವು ಹವಾಮಾನ ಕ್ರಿಯಾ ಯೋಜನೆ ಮತ್ತು ಪರಿಶುದ್ಧ ಶಕ್ತಿಇಂಧನ ಯೋಜನೆಯಡಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತ್ತೋ ಅವೆಲ್ಲವನ್ನು ಟ್ರಂಪ್ ಆಡಳಿತ ಅತ್ಯಂತ ತ್ವರಿತವಾಗಿ ಕಿತ್ತುಹಾಕುತ್ತಿದೆ ಮತ್ತು  ಅಮೆರಿಕನ್ನರಿಗೆ ಹೆಚ್ಚೆಚ್ಚು ಉದ್ಯೋಗ ಮತ್ತು ಅತ್ಯಧಿಕ ಲಾಭಗಳನ್ನು ದಕ್ಕಿಸಿಕೊಳ್ಳಬಹುದೆಂಬ ನೆಪವೊಡ್ಡಿ ಭೂಗರ್ಭದ ಇಂಧನ ಉದ್ಯಮದ ಲಾಬಿಯು ಹೆಚ್ಚಿನ ನಿರ್ಬಂಧಗಳಿಲ್ಲದೆ ವ್ಯವಹಾರ ನಡೆಸಿಕೊಳ್ಳಲು ದಾರಿ ಮಾಡಿಕೊಡುತ್ತಿದೆ.

ಇದು ಕೇವಲ ಅಮೆರಿಕದ ಮೇಲೆ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ. ಹಸಿರುಮನೆ ಅನಿಲಗಳು (GHG) ಈ ಪ್ರಮಾಣದಲ್ಲಿ ಸಂಗ್ರಹವಾಗಲು ಔದ್ಯೋಗಿಕ ದೇಶಗಳೆ ಕಾರಣವೆಂದು ಗುರುತಿಸಿ ಆ ದೇಶಗಳ GHG ಹೊರಸೂಸುವಿಕೆಯ ಪ್ರಮಾಣದ ಮೇಲೆ ನಿರ್ಬಂಧ ಹೇರುತ್ತಿದ್ದ ಮತ್ತು ಕಾನೂನಾತ್ಮಕವಾಗಿ ಎಲ್ಲರೂ ಬದ್ಧರಿರಬೇಕಿದ್ದ ಕ್ಯೋಟೋ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಲೇ ಇಲ್ಲ. ಆದರೆ ೨೦೧೫ರಲ್ಲಿ, ಒಬಾಮಾ ಆಡಳಿತಾವಧಿಯಲ್ಲಿ ಹಸಿರುಮನೆ ಅನಿಲ ಸೂಸಿಕೆಯನ್ನು ಕಡಿತಗೊಳಿಸುವಲ್ಲಿ ಪ್ರತಿ ದೇಶವು ತನಗೆ ತಾನೇ ನಿಗದಿ ಪಡಿಸಿಕೊಳ್ಳುವ ಉದ್ದೇಶಿತ ರಾಷ್ಟ್ರೀಯವಾಗಿ ನಿಗದಿತಗೊಂಡ ಬದ್ಧತೆ (Intended Nationally Determined Commitments- INDCಒಪ್ಪಂದವನ್ನು ಮುಂದಿಟ್ಟ  ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕವು ಒಳಪಟ್ಟಿತು. ಅದರ ಪ್ರಕಾರ ಅಮೆರಿಕವು ೨೦೩೦ರ ವೇಳೆಗೆ ೨೦೦೫ರ ತನ್ನ ಕಾರ್ಬನ್ ಡಯಾಕ್ಸೈಡ್ ಸೂಸಿಕೆಯ ಶೇ.೩೦ರಷ್ಟನ್ನು ಕಡಿತಗೊಳಿಸುವುದಾಗಿ ವಚನವಿತ್ತಿದ್ದಲ್ಲದೆ ವರದಿಗಳ ಪ್ರಕಾರ ಈಗಾಗಲೇ ಈ ಗುರಿಯ ಶೇ.೨೭ರಷ್ಟನ್ನು ಸಾಧಿಸಿದೆ.

ಆದರೆ ಶೇ.೨೬ರಷ್ಟು GHG ಯನ್ನು ಹೊರಸೂಸುವ ಸಾರಿಗೆ ವ್ಯವಸ್ಥೆಯ ಮತ್ತು ಶೇ.೯ ರಷ್ಟು ಸೂಸಿಕೆಗೆ ಕಾರಣವಾಗುವ ಕೃಷಿ ಪದ್ಧತಿಯ ವಿಷಯದಲ್ಲಾಗಲೀ ಈವರೆಗೆ ಯಾವುದೇ ಗಣನೀಯ ಸುಧಾರಣೆಯಾಗಿಲ್ಲ.

ಟ್ರಂಪ್ ತನ್ನ ಚುನಾವಣಾ ಪ್ರಚಾರದಲ್ಲಿ ಬೆದರಿಸಿದಂತೆ ಅಮೆರಿಕ ಪ್ಯಾರಿಸ್ ಒಪ್ಪಂದದಿಂದ ಹೊರಬರದಿದ್ದರೂ, ಅದು ತನ್ನ ಬದ್ಧತೆಗಳಿಂದ ಹಿಂದೆ ಸರಿಯುವ ಎಲ್ಲಾ ಸಾಧ್ಯತೆಗಳಿವೆ. ವಿಶ್ವ ಸಂಪನ್ಮೂಲ ಸಂಸ್ಥೆ (World Resource Institute- WRIಪ್ರಕಾರ ಪ್ರಪಂಚದ ಎಲ್ಲಾ ದೇಶಗಳು ತಮ್ಮ ತಮ್ಮ ದೇಶಗಳ GHG ಸೂಸಿಕೆಯ ಪ್ರಮಾಣ ನಿಯಂತ್ರಣದ ಬಗ್ಗೆ ನೀಡಿದ ವಚನದಂತೆ ನಡೆದುಕೊಂಡರೂ ಜಗತ್ತಿನ ತಾಪಮಾನವೂ ೨ ಡಿಗ್ರಿ ಸೆಲ್ಷಿಯಸ್ನಷ್ಟು ಏರದಂತೆ ತಡೆಹಿಡಿಯುವುದು ಕಷ್ಟವಿದೆ. ಹೀಗಿರುವಾಗ ವಿಶ್ವದ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವು ತನ್ನ ಬದ್ಧತೆಗಳ ಬಗ್ಗೆ ನಿಷ್ಕಾಳಜಿ ತೋರಲು ನಿರ್ಧರಿಸುವುದು ಅತ್ಯಂತ ಅಪಾಯಕಾರಿ ಪರಿಣಾಮವನ್ನುಂಟು ಮಾಡಲಿದೆ.

ಹವಾಮಾನ ಬದಲಾವಣೆಯನ್ನು ತಡೆಯುವದರ ಬಗೆಗೆ ಟ್ರಂಪ್ ತೋರುತ್ತಿರುವ ನಿಷ್ಕಾಳಜಿಯಷ್ಟೇ ಅಪಾಯಕಾರಿಯಾದದ್ದು ಈ ಸಂಬಂಧೀ ನಿಧಿಗೆ ತನ್ನ ಕೊಡುಗೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಪ್ಯಾರಿಸ್ ಒಪ್ಪಂದದ ವೇಳೆ ಬಡ ದೇಶಗಳು ಹವಾಮಾನ ಬದಲಾವಣೆಗಳಿಗೆ ಹೊಂದಿಕೊಂಡು ಪರಿಶುದ್ಧ ಇಂಧನಗಳನ್ನು ಅಳವಡಿಸಿಕೊಳ್ಳಲು ಸಮರ್ಥರನ್ನಾಗಿಸುವ ಉದ್ದೇಶದಿಂದ ಸ್ಥಾಪಿಸಲಾಗುತ್ತಿರುವ ೧೦೦ ಬಿಲಿಯನ್ ಡಾಲರ್‌ಗಳ ವಿಶ್ವಸಂಸ್ಥೆಯ ಹಸಿರು ಹವಾಮಾನ ನಿಧಿಗೆ ೨೦೨೦ರ ವೇಳೆಗೆ ೩ ಬಿಲಿಯನ್ ಡಾಲರ್ ಕೊಡುಗೆ ನೀಡಲು ಅಮೆರಿಕ ಒಪ್ಪಿಕೊಂಡಿತ್ತು. ಈವರೆಗೆ ಅದು ಕೇವಲ ೫೦೦ ಮಿಲಿಯನ್ ಡಾಲರ್‌ಗಳನ್ನು ಮಾತ್ರ ಪಾವತಿಸಿದೆ. ಇದಕ್ಕೆ ಒಂದು ಕಾರಣ ರಿಪಬ್ಲಿಕನ್ನರೇ ಹೆಚ್ಚಿರುವ ಅಮೆರಿಕದ ಕಾಂಗ್ರೆಸ್ ಇದಕ್ಕೆ ತೋರುತ್ತಿರುವ ವಿರೋಧ. ಹವಾಮಾನ ಬದಲಾವಣೆಯ ವಿದ್ಯಮಾನದ ಕುರಿತು ಟ್ರಂಪ್ ಆಡಳಿತದ ಧೋರಣೆಯನ್ನು ನೋಡಿದರೆ ನಿಧಿಯ ಕೊಡುಗೆಯ ವಿಷಯದಲ್ಲಿ ಅಮೆರಿಕವು ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ತೋರುವುದಿಲ್ಲ.

ಹವಾಮಾನ ಬದಲಾವಣೆಯ ವಿದ್ಯಮಾನವನ್ನೇ ನಿರಾಕರಿಸುವ ವ್ಯಕ್ತಿ ವೈಟ್ ಹೌಸಿನಲ್ಲಿ ಕೂತಿರುವುದು ಜಗತ್ತಿಗೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕೆಟ್ಟ ಸುದ್ದಿಯೆಂಬುದು ಹಲವು ರೀತಿಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ.  ಮೊದಲಿಗೆ ಟ್ರಂಪ್ ಆಡಳಿತವು ಭೂಗರ್ಭ ಇಂಧನಗಳ ಬಳಕೆಯ ಹೆಚ್ಚಳವನ್ನು ಪ್ರೋತ್ಸಾಹಿಸುತ್ತದೆ. ಮತ್ತು ಆ ಮೂಲಕ ಎಲ್ಲಾ ಪರಿಸರ ಸಂಬಂಧೀ ನಿಯಂತ್ರಣಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡುವುದಿಲ್ಲ.  ಹೀಗಾಗಿ ಪ್ಯಾರಿಸ್ ಒಪ್ಪಂದದಲ್ಲಿ ಅಮೆರಿಕವು GHG ಸೂಸಿಕೆಯ ನಿರ್ಬಂಧ ಪ್ರಮಾಣದ ಕುರಿತು ತನಗೇ ತಾನೇ ನಿಗದಿಪಡಿಸಿಕೊಂಡ ಮಟ್ಟವನ್ನು ಮುಟ್ಟುವುದಿಲ್ಲ. ಎರಡನೆಯದಾಗಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಾರಂಭಗೊಂದು ಈಗಾಗಲೇ ಮನೆಬಾಗಿಲನ್ನು ತಟ್ಟುತ್ತಿರುವ ಮಹಾನ್ ಪರಿಸರ ವಿಪತ್ತನ್ನು ತಡೆಯಲು ಜಾರಿಯಲ್ಲಿದ್ದ ಜಾಗತಿಕ ಪ್ರಯತ್ನಗಳಿಗೆ ಇದು ದೊಡ್ಡ ಹಿನ್ನೆಡೆಯನ್ನುಂತೂ ಮಾಡುತ್ತದೆ.

ಆಂಶಿಕವಾಗಿ ತಾನೂ ಕಾರಣವಾಗಿರುವ ಯುದ್ಧಗಳಿಂದ ಜರ್ಝರಿತವಾದ ದೇಶಗಳನ್ನು ತೊರೆದು ಆಶ್ರಯ ಕೋರಿ ಬರುತ್ತಿರುವ ಜನರಿಗೆ ಬಾಗಿಲು ಮುಚ್ಚಿ ವಾಪಸ್ ಅಟ್ಟುತ್ತಿರುವ ದೇಶವೇ, ಬಡದೇಶಗಳ ಕೋಟ್ಯಾಂತರ ಜನತೆಯನ್ನು ಪರಿಸರ ನಿರಾಶ್ರಿತರನ್ನಾಗಿಯೂ ಮಾಡುತ್ತಿರುವುದು ಎಂಥಾ ವಿಪರ್ಯಾಸ..

ಕೃಪೆ: Economic and Political Weekly
                                                                                                February 11, 2017, Vol 52, No. 6


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...