Tuesday, June 28, 2016

ಉರಿವ ಕುಡಿಯ ನಟ್ಟ ನಡುವೆ: ದರ್ಶನ ಕಾವ್ಯದ ಆಚೆ..

ಎಚ್ಚೆಸಾರ್ ಕೊಂಡಿಕೊಪ್ಪ
ಲಕ್ಷ್ಮೀಶ ತೋಳ್ಪಾಡಿಯವರು ಬರಿತಾ "ದರ್ಶನ ಎಂದರೆ ನೋಡೋದು. ಕಾಣ್ಕೆ. ಆದುದರಿಂದಲೇ ನೋಡಿದ್ದೆಲ್ಲ ದರ್ಶನವಲ್ಲ. ಹಾಗೆಂದು ನೋಡಿದೆ ದರ್ಶನವೇ ಇಲ್ಲ. ಒಮ್ಮೆ ನೋಡಿದ್ದನ್ನೇ ಇನ್ನೊಂದು ಬಗೆಯಿಂದ ನೋಡೋದು ದರ್ಶನ". ಎಂದಿದ್ದಾರೆ. ಇಲ್ಲಿ ರೂಮಿ ನಮಗೆ ಹೇಳ್ತಿದಾನೆ

"ಅಂತರಾಳದ ಎಷ್ಟು ಆಳ ಇಳಿಯಬಲ್ಲೆನೆಂದರೆ
ಕಣ್ಣಿರದೆಯು ನಿಚ್ಚಳವಾಗಿ ಕಾಣಬಲ್ಲೆ
ನನಗೆ ಕಣ್ಣುಗಳಾದರೂ ಯಾಕೆ,
ಅವನ ಕಣ್ಣುಗಳಿಂದ ನೋಡುತಿರುವಾಗ ಲೋಕವನ್ನೇ?" (೩೨) ಇದು ದರ್ಶನ ಎನಿಸಿದೆ ನನಗೆ. ಹಾಗೆ 'ಕಾಣಿಕೆ'ಯಲ್ಲಿ(೩೭) ಇಡೀ ಪುಸ್ತಕದಲ್ಲಿ ಹಲವಾರು ಕವಿತೆಗಳು ಕಂಡಿವೆ. ಇದೊಂದು ಕಾಣ್ಕೆಯ, ದರ್ಶನದ ಸಂಕಲನ ಅನಿಸ್ತದೆ.

ಇನ್ನೂ ಹೇಳುವುದಾದರೆ ನೀವು ಆಳವಾಗಿ ಇಳಿದಂತೆ ವಚನಗಳು ಕಾಣಬಹುದು ಮೀರಾನ ಒಲವು, ಪ್ರೇಮಿಯ ತುಡಿತ ಹಾಗೆ ಸಾಗಿದಂತೆ ಕಾಣ್ಕೆಗಳು ದರ್ಶನಗಳು ಎದುರಾಗುತ್ವೆ. ಇಲ್ಲಿ ಇಳಿಯುವುದು ಒಂದು ಹುಡುಕಾಟವೂ ಹೌದಾದರೆ ಮುಂದಿನದು ಪ್ರೇಮದ ಬಾಗಿಲು. ಅಂದ್ರೆ ಎಲ್ಲವೂ ಒಲವೇ ಆದ ಕಾರಣ ಹುಡುಕಾಟವೂ ಹೌದು. 


ನಿಧಾನವಾಗಿ ಓದಬೇಕಾದ ಕವಿತೆಗಳಿವು ಅನಿಸ್ತದೆ ಯಾಕಂದ್ರೆ ನಾನು ಅವಸರದಲ್ಲಿ ಓದಿದ್ದಕ್ಕೂ ನಿಧಾನವಾಗಿ ಓದಿದ್ದಕ್ಕೂ ಪರಿಣಾಮಗಳು ಬೇರೆ ಬೇರೆ ಇದೆ ಅದಕ್ಕೆ.


ಅನುವಾದಕರು 'ಈ ಕಿರು ಪ್ರಯತ್ನದ ಬೆವರ ಹನಿಗಳ ಮೇಲೆ ನಿನ್ನ ಹೆಸರು ಬರೆಯಲಾಗಿದೆ ' ಎಂದಿದ್ದಾರೆ ಈ ಮಾತು ಎಲ್ಲಿಗೆ ತಲುಪಿಸುತ್ತದೆ ಎಂದು ಹೇಳಲಾರೆ. ಅನುವಾದವನ್ನು ಅನುವಾದಿಸಿಕೊಳ್ಳುವ ಪ್ರಯತ್ನ ನನ್ನೊಳಗೆ ನಡೆದಿದ್ದು ದಿಟ.


ಒಳ್ಳೆಯ ಮುಖಪುಟ (ಕೃಷ್ಣ ಗಿಳಿಯಾರ್) ವಿನ್ಯಾಸ (ಅರುಣ್ ಜಿ) ಮುದ್ರಣ(ಇಳಾ ಮುದ್ರಣ) ಮಾಡಿದ್ದಾರೆ ಎಂದಿನಂತೆ ಲಡಾಯಿ ಬಸೂ ಸರ್ ಕಾಳಜಿಯೂ ಇದೆ.


ಇಲ್ಲಿ ಒಂದು ಮಾತು Zenದು
"sound of the rain needs no translation..." ಅಂತಾ ಆ "sound"ನ್ನು ಕೇಳಿಸುವುದು ಅಂದ್ರೆ ಆ ಧ್ವನಿ ಹೀಗೆ ಕೇಳಿ ಅನ್ನುವುದು ಅನುವಾದದ ಉದ್ದೇಶ ಅಂತಾ ನನ್ನ ತಿಳುವಳಿಕೆ. 


ಈ ಸಂಕಲನದ ಕುರಿತು ನಾನು ಹೇಳಬೇಕಾದ್ದು ಇನ್ನು ಏನೂ ಇಲ್ಲ ಒಂದು ವೇಳೆ ಹೇಳಿದರೆ ಇಲ್ಲಿಯ ಹಲವು ಕಾಣ್ಕೆಗಳಿಗೆ ದರ್ಶನಗಳ ಮುಕ್ಕಿಗೆ ನಾನೆ ಕಾರಣವಾಗುವ ಭಯವಿದೆ.
ಇಲ್ಲಿ ವಿಶಾಲ ಅರ್ಥಗಳಿವೆ ಓದಿ.


ಇನ್ನೂ ಒಂದು ಸಾಲು ಈ ಕವಿತೆಯ ಜೊತೆಗೆ


"ನಾನೇನು ಹೇಳಬೇಕೆಂದುಕೊಂಡೆ?
ಗೊತ್ತಿಲ್ಲ
ಕವಿತೆ, ನಾ ಯೋಚಿಸಿ ಬರೆಯುವುದಲ್ಲ
ಕವಿತೆ ಹೇಳುವ ಹಾಗೇ
ನಾನಿಲ್ಲವಾದಲ್ಲಿ
ಮೌನವಾಗುತ್ತೇನೆ
ಮಾತು ಮರೆಯುತ್ತೇನೆ."
-----------------
ಲಡಾಯಿ ಪ್ರಕಾಶನ, ಗದಗ
9480286844
ಬೆಲೆ 120
2016

ಜುಲೈ 1 ಧಾರವಾಡ : ನಕ್ಷತ್ರದ ಧೂಳು ನಾಟಕ ಪ್ರದರ್ಶನ ಮತ್ತು ಸಂವಾದಗೋಷ್ಠಿ

ಜುಲೈ 1ರಿಂದ 4 : ನಕ್ಷತ್ರದ ಧೂಳು - ಉತ್ತರ ಕರ್ನಾಟಕದಲ್ಲಿ ಒಂದು ಸುತ್ತು

ಸೈರಾಟ್: ಹಲವು ಕಣ್ಣುಗಳ ಒಂದು ನೋಟ.
ಎಚ್ಚೆಸಾರ್ ಕೊಂಡಿಕೊಪ್ಪ


 ಎಚ್ ಎಸ್ ರಾಮನಗೌಡ's photo.ನಾನು ಹಲವು ಕಾರಣಗಳಿಗಳಿಗಾಗಿ ಸೈರಾಟ್ ನೋಡಬಾರದು ಅಂತಾ ಮಾಡಿದ್ದೆ ಆದ್ರೆ ನನ್ನ ಹಲವು ಗೆಳೆಯರಿಂದ ಹೇಳಿಸಿಕೊಂಡೂ ಸುಮ್ಮನಿದ್ದೆ. ಹಿರಿಯ ಗೆಳೆಯರಾದ ಶಾಂತಕುಮಾರರ ಪ್ರೀತಿಯ ಒತ್ತಾಯಕ್ಕೆ ಹೋಗದೆ ಇರಲಾಗಲಿಲ್ಲ. ಹೋದೆ ಮೊದಲರ್ಧದ ಸನ್ನಿವೇಶಗಳಿಗೆ ತೇಲಾಡಿದೆ. ಉಳಿದರ್ಧ ಸನ್ನಿವೇಶಕ್ಕೆ ಕುಳಿತ ಕುರ್ಚಿಯ ಬಿಗಿಯಾಗಿ ಹಿಡಿದು ಕುಳಿತೆ. ನನ್ನ ಎದುರಿಗೆ ಕುಳಿತಿದ್ದ ಹುಡುಗ ಹುಡುಗಿಯರು ಚಡಪಡಿಸುತ್ತಿದ್ದರು. ನಾನಾಗಲೆ ಹೊರಬಂದಿದ್ದೆ.

ಅಲ್ಲಿ ಬಂದಿದ್ದ ನನ್ನ ವಯೋಮಾನದ ಹುಡುಗರಲ್ಲಿ ಮೌನವಿತ್ತು. ಹುಡುಗಿಯರಲ್ಲಿ ದುಃಖ ಮಡುಗಟ್ಟಿತ್ತು. ಇನ್ನೂ ಹಲವರು ಲೊಚಗುಡುತ್ತಿದ್ದರು. ಇನ್ನೊಂದು ಗುಂಪು ಏನೂ ಆಗಲಿಲ್ಲ ಎಂಬಂತೆ ನೆಡೆದು ಹೋದರು. ನನ್ನನ್ನು ಹಲವರು ಕೇಳಿದರು. ನೀವೇ ನೋಡಿ ಅಂದೆ. ನನ್ನ ಆಳದಲ್ಲಿ ಉಳಿದಿದ್ದು ರಕ್ತದ ಮಡುವಿನಲ್ಲಿ ಮಲಗಿದ್ದ ಆ ಪ್ರೇಮಿಗಳು. ರಕ್ತದ ಹೆಜ್ಜೆಗಳನ್ನು ಮೂಡಿಸುತ್ತಾ ಹೋದ ಆ ಮಗು. ದುಃಖ ಮಡುಗಟ್ಟಿಸಿಕೊಂಡಿದ್ದ ಹುಡುಗಿಯರು. ಆ ಹುಡುಗರು ಮಾತ್ರ.
ನಾನು ಸುಮ್ಮನೆ ಚಡಪಡಿಸುವುದು ಬೇಡ ಎನಿಸಿ ಕುಳಿತೆ. ಆ ಚಿತ್ರಗಳು ಸುಮ್ಮನೆ ಬಿಡಲಿಲ್ಲ. ನಮ್ಮನ್ನು ಹಿಂಸೆ ಕಾಡಿದಷ್ಟು ಸಂತೋಷ ಕಾಡಲಾರದೆನೋ ಅನಿಸ್ತದೆ. ಯಾಕಂದ್ರೆ ನೋಡಿ ನಮ್ಮ ನಡುವೆ ಇಂತಹವುಗಳಲ್ಲ ಮರ್ಯಾದೆಯ ಹೆಸರಲ್ಲಿ ಎಷ್ಟೊಂದು ನೆಡಿತಿವೆ. ನಮಗೆ ಇವೆಲ್ಲಾ ಸಹಜ ಬಿಡಿ ಅನಿಸ್ತಿದೆಯಲ್ಲ. ನಮ್ಮ ಒಳಗಿನ ಸಂವೇದನೆ ಕಳೆದು ಹೋಗಿದೆಯೇ? ನಮ್ಮನ್ನು ನಾವೇ ನೋಡಿಕೊಳ್ಳುವ ಕಾಲ ಇದಲ್ಲದೆ?.


ಈ ಸೈರಾಟ್ ನ್ನು ಪ್ರತಿಒಬ್ಬ ಪ್ರೇಮಿಗಳು, ಹುಡುಗ- ಹುಡುಗಿಯರು, ಪ್ರತಿಒಬ್ಬ ಅಪ್ಪ- ಅವ್ವಂದಿರು ನೋಡಬೇಕಿದೆ. ಪ್ರೀತಿಸೋರು ಅಂದ್ರೆ ಮುಗುಮರಿಯುವ ಗುಂಪು ನೋಡಬೇಕಿದೆ. ಪ್ರೀತಿಸಿದ ಅದೂ ಬರೊಂದು ಜಾತಿ ಧರ್ಮದ ಹುಡುಗ - ಹುಡುಗಿಯರು ಅರ್ಥಪೂರ್ಣವಾಗಿ ಬದುಕಬೇಕಿದೆ ನಾವುಗಳು ಅವರನ್ನು ಬದುಕಲು ಬಿಡಬೇಕಿದೆ.
ಇನ್ನೂ ಈ ಚಿತ್ರದ ಭಾಷೆ ನನಗೆ ಅರ್ಥವಾಗಲಿಲ್ಲ


ಆದ್ರೆ ಅಲ್ಲಿಯ ಭಾವನೆಗಳು ಅವರು ಏನನ್ನು ಹೇಳಬೇಕು ಅಂತಿದ್ರೊ ಅದು ತರಂಗ ತರಂಗವಾಗಿ ಬಂದು ತಲುಪಿದೆ. ಆ ಹುಡುಗಿಯ ಅಭಿನಯಕ್ಕೆ ನಾನು ಮಾರುಹೊದೆ. ಅವಳ ಉಢಾಪೆಯ ಮಾತುಗಳು, ನಗು, ನೋವುಗಳಿಗೆಲ್ಲ ಜೀವಕೊಟ್ಟಿದ್ದಾಳೆ. ಈ ಚಿತ್ರವೇ ಒಂದು ಸಹಜನೆಲೆಯದು. ಆ ಹುಡುಗ ಅವನ ತಾಯಿ ಗೆಳೆಯರು ಎಲ್ಲರದು ಉತ್ತಮ ಅಭಿನಯ. ಯಾವ ಆಡಂಬರವೂ ಇಲ್ಲದ ಈ ಚಿತ್ರದಿಂದ ಈಗಿನ ಹಲವು ನಿರ್ದೇಶಕರು ಏನು ಕಲಿಯುತ್ತಾರೊ?. ನೋಡಬೇಕು.
ಇನ್ನು , ಏನೆಲ್ಲಾ ಹೇಳಬೇಕು ಅಂತಿದ್ರೊ ಬೇಡ ಅನಿಸಿದೆ. ನನ್ನನ್ನು ಡಿಸ್ಟರ್ಬ್ ಮಾಡಿಸಿದ ಶಾಂತಕುಮಾರರಿಗೂ, ಚಿತ್ರ ನಿರ್ಮಿಸಿದ ಮಂಜುಳೆಯವರ ಟೀಮ್ಗೂ ಏನು ಹೇಳಬೇಕು ತಿಳಿಯುತ್ತಿಲ್ಲ . ಇರಲಿ. ನೋಡದವರು ನೋಡಿ. ನೋಡಿದವರು ಇನ್ನೊಬ್ಬರಿಗೆ ನೋಡಲು ಹೇಳಿ.Monday, June 27, 2016

ಉರಿಯ ಪದವು : ಓದುಗರ ಒಂದು ಝಲಕ್
ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
ಉರಿಯ ಪದವು
ನಾಮದೇವ ಢಸಾಳ್ ಕವಿತೆಗಳು
ಬೆಲೆ : 150
ಲಡಾಯಿ ಪ್ರಕಾಶನ ಗದಗ
ಸಂಪರ್ಕ :9480286844ಕನ್ನಡಕ್ಕೆ ಇಂಥಹ ಒಳ್ಳೆಯ ಸಾಹಿತ್ಯವನ್ನು ತರ್ಜುಮೆ ಮಾಡಿದ ಅನುಪಮಾ ಮೆಡನ್ ಅವರ ಕಾವ್ಯ ಶಕ್ತಿಗೆ ನನ್ನದೊಂದು ಸಲಾಂ. ಅವರು ಬಳಸಿದ ಪದಗಳ ಲಾಲಿತ್ಯ, ಗಂಭೀರತೆ, ಮತ್ತು ಸ್ಪಷ್ಟವಾದ ಅರ್ಥಬರುವಂತೆ ಉಣಬಡಿಸಿದ್ದಾರೆ.
ನಾಮದೇವ ಡಸಾಳ್
ಮರಾಠಿ ಕವಿಯ ಈ ಕವಿತೆಗಳು ಕವಿತೆಯ ಎಲ್ಲ ದಿಕ್ಕುಗಳಲ್ಲಿ ಎದೆಗೆ ತಿವಿದು ತಿವಿದು ಬುದ್ದಿಹೇಳುವ ರೀತಿಯಲಿವೆ. ಜೊತೆಗೆ ಮಾಡುವ ಎಲ್ಲ ಕೆಲಸಗಳಿಗೂ ಕೂಡಾ ನಿಸರ್ಗ ಸಹಾಯ ಮಾಡ್ತಿದೆ ಇದು ಸರಿಯಲ್ಲ ಎನ್ನುತ್ತಾರೆ ಕವಿ. ಹೂಟ್ಟೋ ಸೂರ್ಯ ಹುಟ್ಟದೇ ಇದ್ದರೇ ಕಣ್ಣಿಂದ ಕಣ್ಮುಂದಿರುವ ಕಷ್ಟಗಳನ್ನಾದರೂ ಕತ್ತಲಲ್ಲಿಟ್ಟು ಕೂಡಬಹುದು ಎನ್ನುತ್ತಾರೆ.
ಹೋರಾಟಮಯ ಬದುಕಿನ ಕವಿತೆಗಳು ಮನಸಿಗಿಳಿದು ರೊಚ್ಚಿಗೆಬ್ಬಿಸುತ್ತವೆ. ವರ್ಣಿಸಲಸಾದ್ಯವಾದ ಬರಹ....
ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದ್ದು. ಸಂಪರ್ಕಿಸಿ ಓದಿ.

ಓದಿದವರಿಗೆ ಕವಿತೆಯ ಒಂದು ಗಟ್ಟಿಯಾದ ಆಯಾಮ ದೊರಕುವದಂತು ಕಂಡಿತ.

Saturday, June 25, 2016

ಮಾಂಸದಂಗಡಿಯ ನವಿಲು : ಓದುಗರ ಒಂದು ಝಲಕ್ಎನ್ಕೆಯಂಥವರನ್ನು ಇಡಿಯಾಗಿ ಓದಬೇಕು. ಅವರಿಲ್ಲಿ ಹೇಳೋದು ಒಂದು ಕವಿತೆಯಲ್ಲಿ ಮುಗಿಯುವುಂಥದ್ದನ್ನಲ್ಲ, ಬದಲಿಗೆ ಪ್ರತೀ ಕವಿತೆಯಲ್ಲೂ ಮತ್ತೆ ಮತ್ತೆ ಕಾಣಿಸಿಕೊಂಡು ಒಂದು ಗಾಢವಾದ ಪ್ರಭಾವವನ್ನು ಕೊನೆಯಲ್ಲಿ ಉಳಿಸುವಂಥದ್ದನ್ನ.
ಗರಿಗಳ ರಮ್ಯತೆಯನ್ನೇ ಉಡುಪಾಗಿ ತೊಟ್ಟ ನವಿಲನ್ನು ಕಣ್ತುಂಬಿಕೊಂಡು ಖುಷಿಪಡುವ ನಮಗೆ ಇಲ್ಲಿ ಮಾಂಸದಂಗಡಿ, ಗರಿ ಕಿತ್ತು ನೇತು ಹಾಕಿದ ಅದೇ ನವಿಲು ಭಿನ್ನವಾಗಿ ಕಾಣಿಸಿಕೊಂಡು ತನ್ನ ನೋವನ್ನು ಕವಿತೆಗಳ ಮೂಲಕ ನಮ್ಮೊಳಗೆ ಹರಿಸುತ್ತದೆ. ನವಿಲನ್ನು ಹಿಡಿದವರು ಯಾರು ಯಾಕೆ ಎಲ್ಲಿ ಹೇಗೆ...ಇವೆಲ್ಲ ಈಗ ನಮ್ಮ ತರ್ಕವಷ್ಟೆ. ಭೂತ ಮತ್ತು ಭವಿಷ್ಯದ ವಿಮರ್ಶೆ ನವಿಲಿಗೆ ಕೊಡುವಂಥದ್ದು ಏನನ್ನೂ ಇರಲಿಲ್ಲವೇನೋ... ಅದು ನವಿಲಾಗದೆ ಮತ್ತೇನೋ ಆಗಿದ್ದರೆ ಕಥೆ,ಕವಿತೆ ಬೇರೆಯೇ ಆಗುತ್ತಿತ್ತೇನೋ....

ಕಾವ್ಯ ವ್ಯಸನಿಗಳು ಮತ್ತೆ ಮತ್ತೆ ಓದಲೇಬೇಕಾದದ್ದು ಮಾತ್ರ ಇಲ್ಲಿದೆಯೆಂಬುದು ಸ್ಪಷ್ಟವಾಗಿ ಅನ್ನಿಸುತ್ತಿದೆ...

ಮಾಂಸದಂಗಡಿಯ ನವಿಲು
ಎನ್ಕೆ ಕವಿತೆಗಳು
ಲಡಾಯಿ ಪ್ರಕಾಶನ
ಬೆಲೆ : 140 ರೂ

-ಚಿನ್ಮಯಿ ಹೆಗಡೆ

Tuesday, June 21, 2016

ಕತ್ತೆ ಪುರಾಣ : ಓದುಗರ ಝಲಕ್


ನಾಗರಾಜನಾಯಕ ಡೊಳ್ಳಿನ
ಪ್ರೀತಿಯಿಂದ ಓದಿಸಿಕೊಂಡು ಹೋಗುವ ಪುಸ್ತಕ. ಓದುವ ಪ್ರೀತಿಯಿದ್ದರೆ ಓದಿ ಈ ಪುಸ್ತಕ ಒಂದೇ ಬಾರಿಗೆ ಓದಿ ಮುಗಿಸುತ್ತೀರಿ.
ಅಣ್ಣ ನ ಸಂಗ್ರಹದಲ್ಲಿ ನೂರಾರು ಉತ್ತಮ ಪುಸ್ತಕಗಳಿವೆ. ಅಂತಹ ಪುಸ್ತಕಗಳ ಸಂಗ್ರಹದಿಂದ ತೆಗೆದುಕೊಂಡು ಓದಿದ ಪುಸ್ತಕ
"ಕತ್ತೆ ಪುರಾಣ " ಇದು ನಾಟಕ , ಇದರ ಹಿಂದಿಮೂಲ ಬ್ರಜೇಶ್ ಶರ್ಮ ಅವರದ್ದು. ಕನ್ನಡಕ್ಕೆ ಅನುವಾದ ಪ್ರೊ ಗಂಗಾಧರ ಮೂರ್ತಿ ಯವರದು ಲಡಾಯಿ ಪ್ರಕಾಶನದ ಪುಸ್ತಕವಿದು.
ಇತಿಹಾಸವನ್ನು ನಿರ್ಮಿಸುವ ಸಲುವಾಗಿ ಕಿರೀಟದ ಸೈಜಿಗೆ ತಲೆಯನ್ನು ಬೆಳಸಿಕೊಳ್ಳಲು ಹಂಬಲಿಸುವ ರಾಜನ ಮಹತ್ವಾಕಾಂಕ್ಷೆ. ಗುರೂಜಿಯ ಸಲಹೆ ಸೂಚನೆಗಳು ಇವತ್ತಿನ ರಾಜಕೀಯ ನಡೆಗೆ ಕನ್ನಡಿಯಂತಿದೆ.

ಬೆಲೆ : 40 ರೂ

Sunday, June 19, 2016

ನಮ್ಮ ಲಡಾಯಿ ಪ್ರಕಾಶನದ ಪುಸ್ತಕಗಳು


  
 
 ೧. *ಬಾಯಾರಿಕೆ (ಕಾವ್ಯ) ಡಾ. ವಿನಯಾ ರೂ ೩೫
(ಕರ್ನಾಟಕ ಸಾಹಿತ್ಯ ಅಕಾಡೆಮಿ, ಪು.ತಿ.ನ ಕಾವ್ಯ ಪ್ರಶಸ್ತಿ ಸೇರಿ ೬ ಪ್ರಶಸ್ತಿ ಪುರಸ್ಕೃತ ಕೃತಿ)

೨. ಬಿಳಿ ಮುಗಿಲ ಕೆಳಗೆ  (ಕಾವ್ಯ)  ಸಿ.ಜಿ. ಹಿರೇಮಠ  ರೂ ೩೦
 
೩. ತುಳುಕು: (ಕಾವ್ಯ) ಎಂ.ಡಿ. ಒಕ್ಕುಂದ ರೂ ೩೫
 
೪. ಬಂದೂಕಿನ ಮನುಷ್ಯ (ಕಾವ್ಯ)  ಡಾ. ಬಸವರಾಜ ಕುಂಬಾರ  ರೂ ೩೫
 
೫. *ಹಕ್ಕಿಗೂಡು: (ಕಾವ್ಯ) ಪೃಥ್ವಿ ರೂ ೨೦
(ಗಂಗಮ್ಮ ಬೊಮ್ಮಾಯಿ ಅರಳು ಪ್ರತಿಭೆ ಪುರಸ್ಕೃತ ಕೃತಿ) 
 
೬. *ತತ್ರಾಣಿ: (ಕಾವ್ಯ) ಬಸವರಾಜ ಹೂಗಾರ ರೂ ೩೦
(ಕರ್ನಾಟಕ ಸಾಹಿv ಅಕಾಡೆಮಿ, ಕಡೆಂಗೋಡ್ಲು, ಕಸಾಪ ದತ್ತಿ ನಿಧಿ ಪುರಸ್ಕೃತ)
 
೭. *ಕನ್ನಡ: ರಚನಾತ್ಮಕ ಮತ್ತು ಸಮಾಜೋಭಾಷಿಕ ಅಧ್ಯಯನ: ಡಾ. ಬಿ.ಎಸ್. ಗೊರವರ ರೂ ೮೦
 
೮. *ಉಮರ ಖಯ್ಯಾಮನ ಪದ್ಯಗಳು ಡಾ. ಎನ್. ಜಗದೀಶ ಕೊಪ್ಪ ರೂ  ೫೦
 
೯. *ಗೊಂಬೆಯಾಟ: (ಕಾವ್ಯ) ಶಂಕರಗೌಡ ಸಾತ್ಮಾರ ರೂ ೩೫
 
೧೦. *ಬೆತ್ತಲೆ ರಸ್ತೆಯ ಕನಸಿನ ದೀಪ: (ಕೈಫಿ ಆಜ್ಮಿ ಕವಿತೆಗಳು) ಅನು: ವಿಭಾ ರೂ  ೪೦
 
೧೧. *ಮುಂಡರಗಿ: ಬ್ರಿಟಿಷ್ ವಿರೋಧಿ ಹೋರಾಟ: ಹು. ಬಾ. ವಡ್ಡಟ್ಟಿ ರೂ ೩೦
 
೧೨. *ಜಂಗಮ ಫಕೀರನ ಜೋಳಿಗೆ: (ಕಾವ್ಯ) ಆರೀಫ್ ರಾಜಾ  ರೂ ೪೦
(ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕ.ಸಾ.ಪ. ಅರಳು ಪ್ರಶಸ್ತಿ,
ಗುಲಬರ್ಗಾ ವಿ.ವಿ. ಪ್ರಶಸ್ತಿ ಪುರಸ್ಕೃತ ಕೃತಿ)
 
೧೩. ದಲಿತ ತತ್ವ: ಕಂಚ ಐಲಯ್ಯ: ಅನು: ಸುಜ್ಞಾನಮೂರ್ತಿ ರೂ ೬೦ 
 
೧೪. ಜಾತಿ ವಿನಾಶ: ಕಂಚ ಐಲಯ್ಯ: ಅನು: ಸುಜ್ಞಾನಮೂರ್ತಿ ರೂ  ೫೦
 
೧೫. ನಮಗೆ ಗೋಡೆಗಳಿಲ್ಲ ಅನು: ಸುಜ್ಞಾನಮೂರ್ತಿ ರೂ ೮೦
 
೧೬. ಬಿ.ಟಿ. ಬದನೆ: ಬದುಕು ಬರಿದಾಗಿಸುವ ಕುಲಾಂತರಿ! ಸಂ. ಬಸೂ ರೂ  ೫೦
 
೧೭. *ಕಡಲ ತಡಿಯ ಮನೆ: (ಕಥೆ) ಡಾ. ಸಬಿಹಾ ಭೂಮಿಗೌಡ ರೂ ೫೦
 
೧೮. *ಮುಗ್ಗಲು ಮನಸಿನ ಪದರು: (ಕಥೆ) ಎಸ್.ಬಿ. ಜೋಗುರ ರೂ ೫೦
 
೧೯. ಮಾಯಕಾರತಿ: (ಕಥೆ) ಶರಣಪ್ಪ ವಡಿಗೇರಿ ರೂ  ೫೦ 
 
೨೦. *ಹರಿವ ನೀರೊಳಗಿನ ಉರಿ (ಅನುವಾದಿತ ಕಾವ್ಯ) ವಿಭಾ   ರೂ ೬೦
 
೨೧. ಕಾಣದಾಯಿತೋ ಊರುಕೇರಿ (ಕಥೆ) ಬಿ. ಶ್ರೀನಿವಾಸ  ರೂ ೬೦ 
 
೨೨. ಮನುಸ್ಮೃತಿ ಮತ್ತು ದಲಿತರು: ಜ ಹೊ ನಾ. ರೂ ೫೦
 
೨೩. *ಉರಿಯ ಪೇಟೆ: ಡಾ.ಕಾಂ.ವೆಂ. ಶ್ರೀನಿವಾಸಮೂರ್ತಿ ರೂ ೬೦
 
೨೪. ಕೋಮುವಾದಿ ಕಾರ‍್ಯಾಚರಣೆ*: ದಲಿತ ಪ್ರತಿಸ್ಪಂದನೆ ಸಂ: ಆನಂದ ತೇಲ್ತುಂಬ್ಡೆ
ಅನು, ಸಂಯೋಜನೆ: ಬಿ.ಗಂಗಾಧರಮೂರ್ತಿ, ಶಿವಸುಂದರ ರೂ ೧೫೦
 
೨೫. * ಗೀತಾ ನಾಗಭೂಷಣ: ಮಹಿಳಾ ಮಾರ್ಗ, ಸಂ. ಕೆ. ಷರೀಫಾ, ಬಸೂ ರೂ ೮೦
 
೨೬. ಕೋರೆಗಾಂವ ಕದನ: ದಲಿತ ದಿಗ್ವಿಜಯ
ಸುಧಾಕರ ಖಾಂಬೆ ಅನು: ಡಾ. ಸಿದ್ರಾಮ ಕಾರಣಿಕ ರೂ ೫೦
 
೨೭. *ಗೋಹತ್ಯೆ ನಿಷೇಧ ಸುತ್ತಲಿನ ರಾಜಕೀಯ: ಬಿ. ಗಂಗಾಧರ ಮೂರ್ತಿ ರೂ ೩೦
 
೨೮. *ಯಾರೂ ನೆಡದ ಮರ: (ಕಾವ್ಯ) ಗಣೇಶ ಹೊಸ್ಮನೆ ರೂ  ೪೦
 (ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಪ್ರಶಸ್ತಿ ಪುರಸ್ಕೃತ ಕೃತಿ)
೨೯. ಜೀವ ಮಿಡಿತದ ಸದ್ದು (ಕಾವ್ಯ) ವಿಭಾ  ರೂ ೮೦
 (ಡಿ.ಎಸ್. ಕರ್ಕಿ, ಕಸಾಪ ಮಲ್ಲಿಕಾ ದತ್ತಿನಿಧಿ, ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ
ಹೆಗ್ಗಡೆ, ಹರಿಹರ ಶ್ರೀ ಪ್ರಶಸ್ತಿ ಪುರಸ್ಕೃತ ಕೃತಿ)
 
೩೦. *ಮನುಷ್ಯರನ್ನು ಹುಡುಕುತ್ತಾ (ಕಥೆ) ಗಾಯಕವಾಡ ಅನು: ವಿಜಯ ಕಾಂಬಳೆ  ರೂ ೫೦ 
 
೩೧. *ತೆರೆದರಷ್ಟೆ ಬಾಗಿಲು: (ಕಾವ್ಯ) ಡಿ.ಎಸ್. ರಾಮಸ್ವಾಮಿ ರೂ ೪೦
(೨೦೧೦ರ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
 
೩೨. *ದಲಿತತ್ವ: ಅಕ್ಷರವಾಗದ ಆತ್ಮಕಥಾನಕ: ಡಾ. ಕಾಂ.ವೆಂ.ಶ್ರೀನಿವಾಸಮೂರ್ತಿ ರೂ ೭೦
(ಕಸಾಪದ ಎಲ್. ಬಸವರಾಜು ದತ್ತಿನಿಧಿ, ದಸಾಪ ಪ್ರಶಸ್ತಿ ಪುರಸ್ಕೃತ)
 
೩೩. *ಸಾಹಿತ್ಯ ಸಂಗತಿ: ಡಾ. ಪ್ರಕಾಶ ಗ. ಖಾಡೆ ರೂ ೫೦
 
೩೪. *ಅಸಮಾನ ಭಾರತ: ಸಂ. ಡಾ. ಅನುಪಮಾ, ಡಾ. ಕೃಷ್ಣ, ಐಜೂರ್ ರೂ ೧೫೦ 
 
೩೫.ಅಮೆರಿಕಾ ಆ ಮುಖ: (ಪ್ರವಾಸ ಕಥನ) ಡಾ. ಸಿ.ಎಸ್. ದ್ವಾರಕಾನಾಥ್ ರೂ ೮೦
(ದಸಾಪ ಪ್ರಶಸ್ತಿ ಪುರಸ್ಕೃತ)
 
೩೬. ಇಲ್ಲಿ ಯಾರೂ ಮುಖ್ಯರಲ್ಲ: ಡಾ. ರಹಮತ್ ತರೀಕೆರೆ  ರೂ ೧೬೦ 
 
೩೭. ಖಲೀಲ್ ಗಿಬ್ರಾನ್ ಪ್ರೇಮಪತ್ರಗಳು: ಕನ್ನಡಕ್ಕೆ: ಕಸ್ತೂರಿ ಬಾಯರಿ  ರೂ  ೧೨೦
 
೩೮. ರಾಮದುರ್ಗ ಸಂಸ್ಥಾನ: ವಿಮೋಚನಾ ಹೋರಾಟ: ಡಾ. ಎ.ಬಿ. ವಗ್ಗರ, ಜರಕುಂಟೆ ರೂ  ೧೨೦
 
೩೯. ದೇವರ ರಾಜಕೀಯ ತತ್ವ: ಬ್ರಾಹ್ಮಣ್ಯಕ್ಕೆ ಬುದ್ಧನ ತಿರುಗುಬಾಣ ಕಂಚ ಐಲಯ್ಯ, ಅನು: ಜಾಜಿ ದೇವೇಂದ್ರಪ್ಪ ರೂ ೧೮೦
(ಬೇಂದ್ರೆ ಸಾಹಿತ್ಯ ಪುರಸ್ಕಾರ, ಗುಲಬುರ್ಗಾ ವಿವಿ ಪುರಸ್ಕಾರ ಪಡೆದ ಕೃತಿ)
 
೪೦. ಹಿಂಸಾಕಾರಣ: ಡಾ. ಐ.ಜೆ. ಮ್ಯಾಗೇರಿ ರೂ ೬೦
 
೪೧. ದೇವದಾಸಿ ಮತ್ತು ಬೆತ್ತಲೆಸೇವೆ: ಉತ್ತಮ ಕಾಂಬಳೆ, ಅನು: ಡಾ. ಸಿದ್ರಾಮ ಕಾರಣಿಕ ರೂ ೧೦೦
 
೪೨. ಜ್ಯೋತಿಬಾ ಫುಲೆ ಮತ್ತು ರೈತ ಚಳುವಳಿ: ಡಾ. ಅಶೋಕ ಚೌಸಾಳಕರ, ಅನು: ಡಾ. ಜೆ. ಪಿ. ದೊಡಮನಿ ರೂ ೬೦
 
೪೩. ನಾಗವಂಶ: ದಲಿತ ಅಸ್ಮಿತೆ - ಶ್ರೀನಿವಾಸ ಭಾಲೇರಾವ್, ಅನು: ಡಾ. ಸಿದ್ರಾಮ ಕಾರಣಿಕ ರೂ ೪೦
 
೪೪. ಮಹಿಳಾ ಮೀಸಲಾತಿ ಮತ್ತು ಲಿಂಗರಾಜಕಾರಣ: ಡಾ. ಎನ್. ಗಾಯತ್ರಿ ರೂ ೮೦
 
೪೫. *ನೂರು ಬಣ್ಣದ ಕಣ್ಣು: (ಕಾವ್ಯ) ವಿಜಯಕಾಂತ ಪಾಟೀಲ ರೂ ೫೦
 
೪೬. ಕಷ್ಟಕುಲದ ಕಥೆ: ದಲಿತರ ಸಬಲೀಕರಣ ಅಧ್ಯಯನ: ಡಾ.ಟಿ.ಆರ್.ಚಂದ್ರಶೇಖರ್  ರೂ ೮೦
 
೪೭. ಬೇಯುವ ಉಸಿರಿನ ಗುರುತು (ಕಥೆ) ಎ.ಆರ್. ಪಂಪಣ್ಣ ರೂ ೯೦
 
೪೮. ಚೆ: ಕ್ರಾಂತಿಯ ಸಹಜೀವನ ಅನು: ನಾ. ದಿವಾಕರ ರೂ ೧೬೦
 
೪೯.ಲೋಹಿಯಾ: ವ್ಯಕ್ತಿ ಮತ್ತು ವಿಚಾರ ಒಂದು ವಿಭಿನ್ನ ವಿಮರ್ಶೆ: ಬಾಪು ಹೆದ್ದೂರಶೆಟ್ಟಿ ರೂ ೨೦೦
 
೫೦. ಭಾರತದ ಬೌದ್ಧಿಕ ದಾರಿದ್ರ್ಯ: ವಿ. ಆರ್. ನಾರ‍್ಲಾ ಅನು: ಪ್ರೊ. ಬಿ. ಗಂಗಾಧರಮೂರ್ತಿ ರೂ  ೬೦ 
 
೫೧. ದಲಿತರು: ಭೂತ-ಭವಿಷ್ಯ: ಡಾ. ಆನಂದ ತೇಲ್ತುಂಬ್ಡೆ ಸಂ: ಬಸೂ, ಅನುಪಮಾ ರೂ  ೧೫೦
 
೫೨. ಜಾತಿ ವ್ಯವಸ್ಥೆ: ಸಮಸ್ಯೆ-ಸವಾಲುಗಳು: ಬಾಬು ಜಗಜೀವನ್‌ರಾಮ್ ಅನು: ರಾಹು ರೂ ೧೨೦ 
 
೫೩. ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ ಮೂಲ: ಕನಕ ಮುಖರ್ಜಿ, ಅನು: ರಾಹು ರೂ ೧೫೦
 
೫೪. ಜಾಗತೀಕರಣ ಮತ್ತು ದಲಿತರು: ಡಾ. ಆನಂದ ತೇಲ್ತುಂಬ್ಡೆ ಅನು: ನಾ. ದಿವಾಕರ ರೂ ೬೦
 
೫೫. ಹರಿದ ಪತ್ರ: (ಕಥೆ) ಡಾ. ಅನಸೂಯಾ ಕಾಂಬಳೆ ರೂ ೯೦
 
೫೬. ಇಬ್ಬನಿಯ ಕಾವು (ಪ್ರಬಂಧಗಳು) ಬಾನು ಮುಷ್ತಾಕ್ ರೂ ೯೦
 
೫೭. ಅಂಬೇಡ್ಕರ್ ಮತ್ತು ಮುಸ್ಲಿಮರು: ಡಾ. ಆನಂದ ತೇಲ್ತುಂಬ್ಡೆ ಅನು: ಪ್ರೊ. ಬಿ. ಗಂಗಾಧರಮೂರ್ತಿ ರೂ ೮೦
 
೫೮. ಮಹಿಳೆ: ಇಂದಿನ ಸವಾಲುಗಳು: ಡಾ. ಸಬಿಹಾ ಭೂಮಿಗೌಡ ರೂ ೧೨೦
 
೫೯. ಪುರುಷ ಅಹಂಕಾರಕ್ಕೆ ಸವಾಲು: ತಾರಾಬಾಯಿ ಶಿಂಧೆ, ಅನು: ಸುಜ್ಞಾನಮೂರ್ತಿ ರೂ ೮೦
 
೬೦. ನವಿಲುಗರಿ: ಸಂ. ಡಾ. ಸಬಿಹಾ ಭೂಮಿಗೌಡ ರೂ ೫೦
 
೬೧. ನನ್ನ ಪ್ರೀತಿಯ ಅಪ್ಪ: ಶಬಾನಾ ಅಜ್ಮಿ ಅನು: ರಾಹು, ವಿಭಾ ರೂ ೪೦
 
೬೨. ಅಸಮಾನತೆಯ ಜಾಗತೀಕರಣ: ಪಿ.ಸಾಯಿನಾಥ ಅನು: ಸಿಂಚನ ತಂಡ ರೂ ೧೫
 
೬೩. ಭಗವದ್ಗೀತೆ ವರ್ಸಸ್ ಬೌದ್ಧತತ್ವ: ಡಾ. ಬಿ. ಆರ್. ಅಂಬೇಡ್ಕರ್ ರೂ ೩೦
 
೬೪. ಭಗವದ್ಗೀತೆ: ಸಾಮಾಜಿಕ, ಆರ್ಥಿಕ ಸಂಗತಿಗಳ ಒಳನೋಟ: ಡಿ. ಡಿ. ಕೋಸಾಂಬಿ, ಅನು: ಟಿ. ಎಸ್. ವೇಣುಗೋಪಾಲ, ಶೈಲಜಾ ರೂ ೧೫
 
೬೫. *ಬಾಡು ತಿಂದ ಬ್ರಾಹ್ಮಣರು: ಡಾ. ಬಿ. ಆರ್. ಅಂಬೇಡ್ಕರ್ ಅನು: ಮಹಾದೇವ ಶಂಕನಪುರ ರೂ ೦೫ 
 
೬೬. ಹರಿದು ಕೂಡುವ ಕಡಲು:(ಗಜಲ್‌ಗಳು) ಗಣೇಶ ಹೊಸ್ಮನೆ ರೂ ೬೦ 
 
೬೭. ಕೋಮುಹಿಂಸಾ ನಿಯಂತ್ರಣಾ ಮಸೂದೆ ೨೦೧೧: ಫಕೀರ ಮುಹಮ್ಮದ್ ಕಟ್ಪಾಡಿ ರೂ ೪೦
 
೬೮. ಭೂಮಿ ತಿರುಗುವ ಶಬ್ಧ (ಕಾವ್ಯ) ಚನ್ನಪ್ಪ ಅಂಗಡಿ  ರೂ ೬೦
(ಕರ್ನಾಟಕ ಸಾಹಿತ್ಯ ಅಕಾಡೆಮಿ, ವಿಭಾ ಸಾಹಿತ್ಯ ಪ್ರಶಸ್ತಿ - ೨೦೧೧ ಪುರಸ್ಕೃತ ಕೃತಿ)
 
೬೯. ವಿದ್ಯುತ್‌ಕ್ಷೇತ್ರದ ರಾಜಕಾರಣ: ಅರುಂಧತಿ ರಾಯ್ ಅನು: ಪ್ರೊ. ಬಿ. ಗಂಗಾಧರಮೂರ್ತಿ ರೂ ೩೦
 
೭೦. ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ: ಡಾ. ಎಚ್. ಎಸ್. ಅನುಪಮಾ ರೂ ೧೨೦
(ಕನ್ನಡ ಸಾಹಿತ್ಯ ಪರಿಷತ್ತಿನ ಲಕ್ಷ್ಮೀದೇವಿ ಶಾಂತರಸ ಹೆಂಬೆರಾಳ ಪ್ರಶಸ್ತಿ ಪುರಸ್ಕೃತ ಕೃತಿ)
 
೭೧. ಭೀಮಯಾನ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು : ಡಾ. ಎಚ್. ಎಸ್. ಅನುಪಮಾ, ಬಸೂ ರೂ ೭೦
 
೭೨. ಉರಿವ ಒಲೆಯ ಮುಂದೆ: (ಕಾವ್ಯ) ಬಿ. ಶ್ರೀನಿವಾಸ ರೂ ೬೦
 
೭೩. ಉರಿಯ ಪದವು (ಕಾವ್ಯ) ನಾಮದೇವ್ ಢಸಾಳ್ ಅನು: ಡಾ. ಎಚ್. ಎಸ್. ಅನುಪಮಾ ರೂ ೧೫೦
(ಶಿವಮೊಗ್ಗದ ಕರ್ನಾಟಕ ಸಂಘ, ದಸಾಪ ಪ್ರಶಸ್ತಿ ಪುರಸ್ಕೃತ ಕೃತಿ) 
 
೭೪. ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ: ಸಂ: ಬಸೂ, ಎಚ್. ಎಸ್. ಅನುಪಮಾ ರೂ ೧೦೦
 
೭೫. ಉರಿವ ಏಕಾಂತ ದೀಪ (ಕಾವ್ಯ) ಲಕ್ಕೂರು ಸಿ. ಆನಂದ ರೂ ೬೦
(ವಿಭಾ ಸಾಹಿತ್ಯ ಪ್ರಶಸ್ತಿ - ೨೦೧೨ ಪುರಸ್ಕೃತ ಕೃತಿ) 
 
೭೬. ಹಾದಿ ಜಂಗಮ (ಕಾವ್ಯ) - ಬಸವರಾಜ ಹೂಗಾರ, ರೂ ೬೦
(ಕಸಾಪ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಕೃತಿ)
 
೭೭. ಬೀದಿ ಬೆಳಕಿನ ಕಂದೀಲು (ಲೇಖನಗಳು) ಬಸವರಾಜ ಹೂಗಾರ, ರೂ ೬೦
 
೭೮. ಬಾಡೂಟದ ಜೊತೆಗೆ ಗಾಂಧಿ ಜಯಂತಿ! ಮತ್ತು ಇತರ ಲೇಖನಗಳು ಬಿ. ಎಂ. ಬಶೀರ್ ರೂ ೧೨೦. 
 
೭೯. ಮರಗುದುರೆ - ನಗ್ನಮುನಿ ಮಾತು-ಕವಿತೆ ಅನು: ಡಾ. ಎಚ್. ಎಸ್. ಅನುಪಮಾ, ರೂ ೪೦.
 
೮೦. ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಡಾ. ಆನಂದ ತೇಲ್ತುಂಬ್ಡೆ ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ, ರೂ ೬೦
 
೮೧. ಅಭಿವ್ಯಕ್ತಿ ಸ್ವಾತಂತ್ರ್ಯ: ವಿವಿಧ ಆಯಾಮಗಳು ಸಂ: ಬಸೂ, ಎಚ್.ಎಸ್. ಅನುಪಮಾ ರೂ ೧೨೦. 
 
೮೨. ನನ್ನ ಶಬ್ದ ನಿನ್ನಲಿ ಬಂದು (ಕಾವ್ಯ) ಕೆ.ಪಿ. ಮೃತ್ಯುಂಜಯ ರೂ ೧೦೦
(ವಿಭಾ ಸಾಹಿತ್ಯ ಪ್ರಶಸ್ತಿ - ೨೦೧೩ ಪುರಸ್ಕೃತ ಕೃತಿ)
 
೮೩. ನೆನಪಿನ ಹಕ್ಕಿ (ದಲಿತ ಆತ್ಮಕತೆ) ಮರಾಠಿ ಮೂಲ: ಪ್ರ. ಈ. ಸೋನಕಾಂಬಳೆ ಅನು: ಚಂದ್ರಕಾಂತ ಪೋಕಳೆ ರೂ ೧೪೦ 
 
೮೪. ಹೆಣ್ಣು: ಸಂಕರ ಕಾಲದ ಆತ್ಮಪ್ರಜ್ಞೆ ಡಾ. ಎಚ್. ಎಸ್. ಅನುಪಮಾ, ರೂ ೧೩೦.
(ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ ಪುರಸ್ಕೃತ ಕೃತಿ) 
 
೮೫. ಅಂಡಮಾನ್: ಕಂಡ ಹಾಗೆ (ಪ್ರವಾಸ) ಡಾ. ಎಚ್. ಎಸ್. ಅನುಪಮಾ, ರೂ ೮೦.
(ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ)
 
೮೬. ಹುಲಿಯ ನೆರಳಿನೊಳಗೆ ಅಂಬೇಡ್ಕರ್‌ವಾದಿಯ ಆತ್ಮಕಥೆ ನಾಮದೇವ ನಿಮ್ಗಾಡೆ ರೂ ೯೦
 
೮೭ ಸೂಫಿ ಕಥಾಲೋಕ - ಅನು: ಪ್ರೊ. ಬಿ ಗಂಗಾಧರಮೂರ್ತಿ ರೂ ೨೫೦ 
 
೮೮. ಮೌಢ್ಯ ವಿರೋಧಿ ಹೋರಾಟಗಾರ ಎಚ್ಚೆನ್: ಪ್ರೊ. ಬಿ.ಗಂಗಾಧರಮೂರ್ತಿ ರೂ ೯೦
 
೮೯. ಮೋಟಾರ್ ಸೈಕಲ್ ಡೈರಿ: ಪ್ರವಾಸಿಯ ಟಿಪ್ಪಣಿಗಳು. ಚೆ. ಅನು: ಡಾ ಎಚ್ ಎಸ್ ಅನುಪಮಾ ರೂ ೧೫೦
 
೯೦ ಒಳ ಮೀಸಲಾತಿ: ಮುಟ್ಟಲಾರದವನ ಒಡಲಾಳ ಮರಡ್ಡಿ, ವೆಂಕಟೇಶ ಬೇವಿನಬೆಂಚಿ, ಗುಂಜಳ್ಳಿ, ರಮೇಶ ಅರೋಲಿ ರೂ ೧೦೦
 
೯೧. ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ ಡಾ ಎಚ್. ಎಸ್. ಅನುಪಮಾ ರೂ ೧೧೦
 
೯೨. ಮುಳ್ಳ ಮೇಲಿನ ಸೆರಗು-ಅತ್ಯಾಚಾರ ಮತ್ತು ಕಾನೂನು: ಡಾ ಎಚ್. ಎಸ್. ಅನುಪಮಾ ರೂ ೬೦
 
೯೩ ದಲಿತ ಸಮಾಜ: ಇಂದಿನ ಸವಾಲುಗಳು ಜಿಯಾಲಾಲ ಆರ್ಯ, ಅನು: ಆರ್. ಪಿ. ಹೆಗಡೆ ರೂ ೮೦
 
೯೪ ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ: ಓಂ ಪ್ರಕಾಶ ವಾಲ್ಮೀಕಿ, ಅನು: ಆರ್. ಪಿ. ಹೆಗಡೆ ರೂ ೧೦೦
(ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪುರಸ್ಕಾರ ಪಡೆದ ಕೃತಿ)
 
೯೫ ಆರೆಸ್ಸೆಸ್ ಮತ್ತು ಬಿಜೆಪಿ: ಒಂದೇ ಹಾದಿ:ಭಿನ್ನ ಶ್ರಮ ಎ. ಜಿ. ನೂರಾನಿ, ಕನ್ನಡಕ್ಕೆ: ಸುರೇಶ ಭಟ್, ಬಾಕ್ರಬೈಲು. ರೂ ೧೫೦ 
 
೯೬ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ: ಡಾ ಎಚ್. ಎಸ್. ಅನುಪಮಾ ರೂ ೬೦
 
೯೭ ಪುರೋಹಿತಶಾಹಿ ಮತ್ತು ಗುಲಾಮಗಿರಿ: ಜ್ಯೋತಿಬಾ ಫುಲೆ ಅನು: ಬಿ ಶ್ರೀನಿವಾಸ ರೂ ೧೦೦
 
೯೮ ಸಾಕಾರದತ್ತ ಸಮಾನತೆಯ ಕನಸು: ಸಂ: ಪ್ರೀತಿ ಶುಭಚಂದ್ರ ಮತ್ತು ಎಂ. ಎನ್. ಸುಮನಾ,ರೂ ೧೨೦ 
 
೯೯ ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು-ರಿಚರ್ಡ್ ಎಂ. ಈಟನ್ ಅನು: ಸುರೇಶ ಭಟ್, ಬಾಕ್ರಬೈಲ್ ರೂ ೬೦
 
೧೦೦ ಭಗತ್‌ಸಿಂಗ್ ಜೈಲಿನ ಡೈರಿ ಸಂ. ಚಮನ್‌ಲಾಲ ಅನು: ಡಾ. ಎಚ್. ಎಸ್. ಅನುಪಮಾ ರೂ ೧೭೦
 
೧೦೧ ಕತ್ತೆ ಪುರಾಣ: (ನಾಟಕ) ಬ್ರಿಜೇಶ್ ಶರ್ಮಾ ಮತ್ತು ಕಲಾವಿದರ ತಂಡ ಅನು: ಪ್ರೊ. ಬಿ. ಗಂಗಾಧರಮೂರ್ತಿ  ರೂ ೪೦
 
೧೦೨ ಚಿತ್ತ ಭಿತ್ತಿ (ಕವನ) ರೂಪಶ್ರೀ ಕಲ್ಲಿಗನೂರ ರೂ ೯೦
(೨೦೧೪ ರ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
 
೧೦೩ ಮನು v/s ಅಂಬೇಡ್ಮರ್: ಜಿ. ಕೆ. ಗೋವಿಂದರಾವ್ ರೂ ೩೦
 
೧೦೪ ವೀಸಾದ ನಿರೀಕ್ಷೆಯಲ್ಲಿ ನೆನಪುಗಳು ಡಾ ಬಿ.ಆರ್.ಅಂಬೇಡ್ಕರ್, ಅನು : ಸದಾಶಿವ ಮರ್ಜಿ  ರೂ ೯೦
 
೧೦೫ ಡಾ ಬಿ ಆರ್ ಅಂಬೇಡ್ಕರ್ -ವರ್ತಮಾನದೊಂದಿಗೆ ಮುಖಾಮುಖಿ ಸಂ ಬಿ ಯು ಸುಮಾ ರೂ ೧೫೦
 
೧೦೬ ಸಂತೆಯೊಳಗೊಂದು ಮನೆ : ಬಿ ಯು ಸುಮಾ ರೂ ೧೪೦ 
 
೧೦೭. ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನಗಳು: ಡಾ ರಂಜಾನ್ ದರ್ಗಾ ರೂ ೧೩೦
 
೧೦೮ ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ ಶೂದ್ರ ಶ್ರೀನಿವಾಸ ರೂ ೬೦
 
೧೦೯. ಯು. ಆರ್. ಎಂಬ ನೀವು - ಒಂದು ನೋಟ ಶೂದ್ರ ಶ್ರೀನಿವಾಸ ರೂ ೮೦
 
೧೧೦. ಅವಳ ನಡೆದಂತೆ- ಗಜಲ್‌ಗಳು : ಶೂದ್ರ ಶ್ರೀನಿವಾಸ ರೂ ೮೦
 
೧೧೧..ಕಳಸಾ-ಬಂಡೂರಿ: ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ : ಸಿರಿಮನೆ ನಾಗರಾಜ್ ರೂ ೨೫
 
೧೧೨..ಮೊಳಕೆಯೊಡೆಯದ ಬೀಜ(ಕಾವ್ಯ): ವಸು ಮಳಲಿ ರೂ ೯೦ 
 
೧೧೩. ಉರಿವ ಕುಡಿಯ ನಟ್ಟ ನಡುವೆ ರೂಮಿ ಕವಿತೆಗಳು ಅನು: ಡಾ ಅನುಪಮಾ ರೂ ೧೨೦ 
 
೧೧೪. ಕಾಲನ ಕಾಲಂದುಗೆ (ಕಾವ್ಯ) ಪ್ರಜ್ಞಾ ಮತ್ತಿಹಳ್ಳಿ ರೂ ೯೦ 
(೨೦೧೫ರ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
 
೧೧೫. ಗೀತೆ : ಒಳಗಿನ ಸತ್ಯ ಎನು? ಡಾ. ವಿ ಆರ್ ನಾರ‍್ಲಾ ಅನು: ಪ್ರೊ . ಬಿ ಗಂಗಾಧರಮೂರ್ತಿ  ರೂ ೩೩೦ 
 
೧೧೬. ದಲಿತ ಸಂವೇದನೆ : ಡಾ. ಅಪ್ಪಗೆರೆ ಸೋಮಶೇಖರ್ ರೂ ೧೫೦ 
 
೧೧೭. ಸಾರಾ ಶಗುಫ್ತಾ : ಜೀವನ ಮತ್ತು ಕವಿತೆ ಅಮೃತಾ ಪ್ರೀತಂ ಅನು: ಹಸನ್ ನಯೀಂ ಸುರುಕೋಡ ರೂ ೧೫೦
 
೧೧೮. ಬ್ರಾಹ್ಮಣವಾದಿ ಭಾರತ v/s ದಲಿತ ಭಾರತ ಸನತಕುಮಾರ ಬೆಳಗಲಿ ರೂ ೧೬೦ 
 
೧೧೯. ಓದಿನ ಜಾಡು- ಸಾಹಿತ್ಯ ಸಾಂಸ್ಕೃತಿಕ ಲೇಖನ ಡಾ ರಂಗನಾಥ ಕಂಟನಕುಂಟೆ ರೂ ೧೬೦ 
 
೧೨೦. ಮಾಂಸದಂಗಡಿಯ ನವಿಲು ಎನ್ಕೆ ಕವಿತೆಗಳು ರೂ ೧೪೦ 
 
೧೨೧. ಜಾತಿ : ಸಾಮಾಜಿಕ ಪ್ರತ್ಯೇಕತೆ ಮತ್ತು ಬಡತನ ಸುಖದೇವ ಥೋರಾಟ ಅನು: ಬಿ. ಶ್ರೀಪಾದ ರೂ ೪೦ 
 
೧೨೨. ತಿಗುರಿ ತಿರುಗಿಸು ನೇಗಿಲು ಉಳು: ಶ್ರಮ ಗೌರವ ಪಾಠಗಳು ಕಂಚ ಐಲಯ್ಯ ಅನು: ಸುಜ್ಞಾನಮೂರ್ತಿ ರೂ ೧೨೦ 
 
೧೨೩. ದಲಿತ ರಾಜಕೀಯ- ರಾಂ ಪುನಿಯಾನಿ ಅನು: ಸುಜ್ಞಾನಮೂರ್ತಿ ರೂ ೧೨೦
 
೧೨೪. ಮನುಸ್ಮೃತಿ: ಅಪರಾಧ-ಶಿಕ್ಷೆ- ಕೆ. ಬಾಲಗೋಪಾಲ್- ಅನು: ಸುಜ್ಞಾನಮೂರ್ತಿ ರೂ ೮೦
 
೧೨೫. ಎಸ್ಸಿ/ಎಸ್ಟಿ ಅನುದಾನ: ಹಂಚಿಕೆ-ವಾಪಸಾತಿ ಬೊಜ್ಜಾ ತಾರಕಂ ಅನು: ಸುಜ್ಞಾನಮೂರ್ತಿ ರೂ ೭೦
 
೧೨೬. ಭಾರತದ ಚರಿತ್ರೆಯಲ್ಲಿ ರೈತ- ಇರ್ಫಾನ್ ಹಬೀಬ್- ಅನು: ಸುಜ್ಞಾನಮೂರ್ತಿ ರೂ ೬೦ 
 
೧೨೭. ಅಸ್ಪೃಶ್ಯತೆ: ವೈಕಂ ಹೋರಾಟ ಚರಿತ್ರೆ- ಪೆರಿಯಾರ್- ಅನು: ಸುಜ್ಞಾನಮೂರ್ತಿ ರೂ ೬೦ 
 
೧೨೮. ಅಸಮರ್ಥನ ಜೀವನಯಾತ್ರೆ(ಕಾದಂಬರಿ)- ತ್ರಿಪುರನೇನಿ ಗೋಪೀಚಂದ್- ಅನು: ಸುಜ್ಞಾನಮೂರ್ತಿ ರೂ ೧೦೦ 
 
೧೨೯. ಸ್ವಾಭಿಮಾನದ ಮದುವೆಗಳು- ಪೆರಿಯಾರ್ ಅನು: ಸುಜ್ಞಾನಮೂರ್ತಿ ರೂ ೭೦
 
೧೩೦. ಆಕಾಶ ದೇವರು- ನಗ್ನಮುನಿ ಅನು ಅನು: ಸುಜ್ಞಾನಮೂರ್ತಿ ರೂ ೮೦ 
 
೧೩೧. ನೀಲಿಬಾನಿನಲ್ಲಿ ಕೆಂಪುಸೂರ್ಯ : ಜೆಎನ್ಯೂನ - ಆಜಾದಿ ಭಾಷಣಗಳು ಅನು: ಚೇತನಾ ತೀರ್ಥಹಳ್ಳಿ ರೂ ೧೦೦ 
 
೧೩೨. ಬಹುಜನ ಸಂಸ್ಕೃತಿವಾದ ಮತ್ತು ಲೇಖಕ ಜಯಂತ ಪವಾರ ಅನು: ಚಂದ್ರಕಾಂತ ಪೋಕಳೆ ರೂ ೪೦
 
೧೩೩. ಬಿ.ಟಿ ಹತ್ತಿ : ರೈತರ ಕೊರಳ ಕುಣಿಕೆಗೆ ಬಿಗಿಗೊಳಿಸಿದ ಬೆಳೆ : ಕೆ. ಪಿ. ಸುರೇಶ ಮತ್ತು ತಂಡ ರೂ ೩೦
 
೧೩೪. ದೇವರ ಜನ್ಮ ರಹಸ್ಯ : ಗೋರಾ ಅನು : ಸಿದ್ರಾಮರೆಡ್ಡಿ ಇಟಗಿ ರೂ ೫೦

------------
* ಪ್ರತಿಗಳು ಮುಗಿದಿವೆ. 
 
ಪ್ರಕಾಶನದ ಪುಸ್ತಕಗಳಿಗಾಗಿ
ಸಂಪರ್ಕ ನಂ : 9480286844
8970045554ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...