Wednesday, June 24, 2015

ಕವಿ ರಹಾತ್ ಇಂದೋರಿಯವರ ಸಾಲುಗಳು


.
‘‘ಜೋ ಆಜ್ ಸಾಹಿಬ್ ಎ ಮಸ್ನದ್ ಹೈ, ಕಲ್ ನಹಿ ಹೋಂಗೆ.
ಕಿರಾಯೆದಾರ್ ಹೈನ್, ಝಾತಿ ಮಕಾನ್ ತೋಡಿ ಹೈ..
ಸಬೀ ಕಾ ಖೂನ್‌ಹೈ ಶಾಮಿಲ್ ಯಹಾನ್ ಕಿ ಮಿಟ್ಟಿ ಮೇ ಕಿಸೀಕೆ ಬಾಪ್ ಕ ಹಿಂದೂಸ್ಥಾನ್ ತೋಡಿ ಹೈ’’

ಇಂದು ಅಧಿಕಾರದ ಸೂತ್ರ ಹಿಡಿದಿರುವವರು ನಾಳೆ ಇರಲಾರರು.
ಅವರು ಬಾಡಿಗೆದಾರರೇ ವಿನಃ ಅದು ಅವರ ಸ್ವಂತ ಮನೆಯಲ್ಲ.
ಈ ದೇಶದ ಭೂಮಿ ಪ್ರತಿಯೊಬ್ಬರ ರಕ್ತದಲ್ಲೂ ಮಿಳಿತವಾಗಿದೆ.
ಭಾರತ ಕೇವಲ ಒಬ್ಬ ವ್ಯಕ್ತಿಯ ಸ್ವತ್ತಲ್ಲ

ಕವಿ ರಹಾತ್ ಇಂದೋರಿಯವರ ಸಾಲುಗಳು

Monday, June 22, 2015

ಲಲಿತ್ ಮೋದಿ ಸುತ್ತ ವಿವಾದಗಳ ಹುತ್ತ... ಭಾಗ-1


ಅಲಮ್ ಶ್ರೀನಿವಾಸ್ಲಲಿತ್ ಮೋದಿ ಸುತ್ತ ವಿವಾದಗಳ ಹುತ್ತ... ಭಾಗ-1


ಇಂಡಿಯನ್ ಪ್ರಿಮಿಯರ್ ಲೀಗ್‌ನ ಮಾಜಿ ಮುಖ್ಯಸ್ಥ ಮತ್ತು ಬಿಸಿಸಿಐ ಪ್ರಮುಖ ಸದಸ್ಯ ಲಲಿತ್ ಮೋದಿ 1980ರ ದಶಕದಿಂದಲೂ ತಮ್ಮ ವೈಯಕ್ತಿಕ ಬದುಕು, ವ್ಯಾಪಾರ ವಹಿವಾಟು, ಕ್ರಿಕೆಟ್ ಆಡಳಿತ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗಣ್ಯವ್ಯಕ್ತಿಗಳ ಜೊತೆೆ ಒಂದಿಲ್ಲೊಂದು ಸಂಘರ್ಷದಲ್ಲಿ ಸಿಕ್ಕಿಹಾಕಿ ಕೊಂಡವರು. ಇಂಥ ತೀವ್ರ ಸಮಯದಲ್ಲಿ ಕೆಲವು ಬಾರಿ ಅಭೂತಪೂರ್ವ ಜಯ ಸಾಧಿಸಿದ್ದಾರೆ; ಹಲವು ಬಾರಿ ಮುಖಭಂಗ ವನ್ನೂ ಅನುಭವಿಸಿದ್ದಾರೆ.

ಕ್ರಿಕೆಟ್ ಆಟಕ್ಕೆ ಹೊಸ ಭಾಷ್ಯ ಬರೆದ ವ್ಯಕ್ತಿ ಎಂದೇ ಬಿಂಬಿತ ರಾದ ಲಲಿತ್ ಅವರ ಜೊತೆೆ ಸಂಪರ್ಕ ಹೊಂದಿ ಯಶಸ್ಸು ಸಾಧಿಸಿದ ವರೂ ಹಲವು ಮಂದಿ ಇದ್ದಾರೆ; ಅವರ ನಿಕಟ ವರ್ತುಲದಲ್ಲಿದ್ದ ಕಾರಣಕ್ಕೆ ಕಿರುಕುಳ ಅನುಭವಿಸಿದವರೂ ಇದ್ದಾರೆ.

ಸುಷ್ಮಾ ಸ್ವರಾಜ್, ವಸುಂಧರಾರಾಜೇ, ರೂಪಕ್ ಮರ್ಡೋಕ್, ಪಿ.ಚಿದಂಬರಂ, ಅರುಣ್ ಜೇಟ್ಲಿ, ಎನ್.ಶ್ರೀನಿವಾಸನ್, ರಾಜೀವ್ ಶುಕ್ಲಾ, ಶಶಿ ತರೂರ್ ಮತ್ತು ನರೇಂದ್ರ ಮೋದಿಯವರ ಹೆಸರು ಲಲಿತ್ ಮೋದಿ ಸುತ್ತ ಸುತ್ತಿಕೊಂಡಿರುವ ವಿವಾದದಲ್ಲಿ ಕೇಳಿಬ ರುತ್ತಿದೆ. ಬ್ರಿಟಿಷ್ ಪತ್ರಿಕೆ ಸಂಡೇ ಟೈಮ್ಸ್ ಕಳೆದ ವಾರಾಂತ್ಯ ದಲ್ಲಿ ಪ್ರಕಟಿಸಿದ ವರದಿಯಲ್ಲಿ, ಭಾರತೀಯ ಅಧಿಕಾರಿಗ ಳು ಲಲಿತ್ ಮೋದಿಯವರ ಪಾಸ್‌ಪೋರ್ಟ್ ವಶಪ ಡಿಸಿಕೊಂಡಿದ್ದರೂ, ಭಾರತದ ವಿದೇಶಾಂಗ ವ್ಯವಹಾ ರಗಳ ಸಚಿವೆ ಸುಷ್ಮಾ ಸ್ವರಾಜ್ ಅವರುಲಲಿತ್‌ಮೋದಿಯವರಿಗೆ ಇಂಗ್ಲೆಂಡ್ ಪ್ರವಾಸ ದಾಖಲೆಗಳ ನ್ನು ದೊರಕಿಸಿಕೊಡಲು ಸಹಕರಿಸಿದ್ದಾರೆ. ಭಾರತದ ಕಾನೂನು ಜಾರಿ ನಿರ್ದೇಶನಾಲಯ ಐಪಿಎಲ್ ಅವ್ಯವಹಾರದ ಸಂಬಂಧ ಅವರ ವಿಚಾರಣೆ ನಡೆಸುತ್ತಿದ್ದು, ಅವರ ವೈಯಕ್ತಿಕ ವಿಚಾರಣೆಗೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿತ್ತು ಎಂದು ಹೇಳಿದ ಬಳಿಕ ವಿವಾದ ಸ್ಫೋಟಗೊಂಡಿತ್ತು.


ಕುಟುಂಬ ಕಲಹ:
ಲಲಿತ್ ಮೋದಿ ಪತ್ನಿ ಮಿನಾ ಲ್, ಸ್ವರಾಜ್‌ಗೇಟ್ ಎಂದು ಕರೆಯಲ್ಪಟ್ಟ ಈ ವಿವಾದದ ಕೇಂದ್ರಬಿಂದು. ಈಕೆಯ ಕಾರ ಣಕ್ಕೆ ಲಲಿತ್ ಮೋದಿ ತಮ್ಮಪತ್ನಿಯ ಜೊತೆಯೂ ಜಗಳ ಮಾಡಿಕೊಂಡಿದ್ದರು. ಮಿನಾ ಲ್, ಲಲಿತ್ ಮೋದಿ ತಾಯಿ ಯ ಉತ್ತಮ ಸ್ನೇಹಿತೆ ಮತ್ತು ಲಲಿತ್‌ಗಿಂತ ಒಂಬತ್ತು ವರ್ಷ ಹಿರಿ ಯರು. ಮಿನಾಲ್‌ಳನ್ನು ವಿವಾಹವಾ ಗುವ ಇಂಗಿತ ವ್ಯಕ್ತಪಡಿಸಿದಾಗ ಲಲಿತ್ ತಾಯಿ ಹಲವು ವರ್ಷಗಳ ಕಾಲ ಮಗನ ಜೊತೆೆ ಮಾತು ಬಿಟ್ಟಿದ್ದರು.


1991ರ ಅಕ್ಟೋಬರ್‌ನಲ್ಲಿ ವಿವಾಹಕ್ಕೆ ಮುನ್ನ, ಗಾಡ್‌ಫ್ರೆ ಫಿಲಿಪ್‌ಟೊಬಾಕೊ ಕಂಪೆನಿಯ ಮಾಲಕ ಲಲಿತ್ ತಂದೆ ಕೆ.ಕೆ.ಮೋದಿ ಕೂಡಾ ಮಗನ ಜೊತೆೆ ವಿರಸ ಹೊಂದಿದ್ದರು. ಅವರೇ ಕೆಲ ವರ್ಷ ಗಳ ಹಿಂದೆ ಹೇಳಿದ್ದಂತೆ, ಪದವಿ ಶಿಕ್ಷಣಕ್ಕಾಗಿ ಲಲಿತ್ ಅಮೆರಿಕಕ್ಕೆ ತೆರಳಲು ಬಯಸಿದ್ದರು. ಆದರೆ ಸ್ನಾತಕೋತ್ತರ ಶಿಕ್ಷಣಕ್ಕೆ ತೆರಳಿದರೆ ಸಾಕು ಎನ್ನುವುದು ತಂದೆಯ ಅಭಿಪ್ರಾಯವಾಗಿತ್ತು.


ಪೋಷಕರ ಗಮನಕ್ಕೆ ತಾರದೇ ಲಲಿತ್, ಅಮೆರಿಕ ಕಾಲೇಜು ಪ್ರವೇಶಕ್ಕೆ ಅಗತ್ಯವಿದ್ದ ಸ್ಯಾಟ್ ಮತ್ತು ಟೊಲೆಪ್ ಪರೀಕ್ಷೆ ಬರೆದರು. 1983ರಲ್ಲಿ ಲಲಿತ್ ಮೋದಿ ಉತ್ತರ ಕ್ಯಾಲಿಫೋರ್ನಿಯಾದ ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದ ಸಂದರ್ಭದಲ್ಲಿ ಯಾವುದೇ ಭಾರತೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಈ ಕಾರಣದಿಂದ ತಂದೆಗೆ, ಮಗನ ಇಚ್ಛೆಗೆ ಅನುಗುಣವಾಗಿ ನಡೆಯುವುದು ಬಿಟ್ಟರೆ ಬೇರೆ ಆಯ್ಕೆಗಳೇ ಇರಲಿಲ್ಲ. ಆತನ ಬಾಲ್ಯದಿಂದಲೂ ಆತ ಹಠಮಾ ರಿ. ಆತನ ನಿರ್ಧಾರವನ್ನು ಯಾರೂ ಬದಲಿಸುವಂತಿರಲಿಲ್ಲ ಎಂದು ಕೆ.ಕೆ.ಮೋದಿ ವಿವರಿಸಿ ದ್ದರು. ಆತನನ್ನು ನಾವು ಒಪ್ಪಲೇ ಬೇಕಾದ ಅನಿವಾರ್ಯ ಸ್ಥಿತಿಯನ್ನು ಆತ ನಿರ್ಮಿಸುತ್ತಾ ನೆ. ಆತ ಕೆಲ ಸಮಸ್ಯೆಗಳಿಗೆ ಅಸಾಮಾನ್ಯ ಪರಿಹಾರವನ್ನೂ ಕಂಡುಕೊಳ್ಳುತ್ತಾನೆ ಎಂದು ಕೆ.ಕೆ.ಮೋದಿ ಹೇಳಿದ್ದರು.


ಡ್ಯೂಕ್ ವಿವಿಯಲ್ಲಿದ್ದಾಗ ಆರಂಭ ದಲ್ಲೇ ಅಲ್ಲಿನ ನ್ಯಾಯಾಂಗ ದ ಜೊತೆ ಸಂಘ ರ್ಷಕ್ಕೆ ಇಳಿದರು. 1985ರಲ್ಲಿ ಲಲಿತ್ ಹಾ ಗೂ ಅವರ ಸ್ನೇಹಿತರು ಪದವಿಯನ್ನು ಖರೀದಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂತು. ಇದರ ದಲ್ಲಾಳಿ ಡಕಾಯಿತನಾಗಿದ್ದು, ಇವರಿಂದ ಹತ್ತು ಸಾವಿರ ಡಾಲರ್ ಪಡೆದಿದ್ದ. ಈ ಪ್ರಕರಣದ ಆರೋಪಪಟ್ಟಿಯ ಪ್ರಕಾರ, ಮೋದಿಯವರ ವಿರುದ್ಧ ಮಾದಕವಸ್ತು ಕಳ್ಳಸಾಗಾಣೆ, ಅಪಹರಣ ಮತ್ತು ಹಲ್ಲೆ ಆರೋಪವೂ ಇತ್ತು. ಒಂದು ವರ್ಷ ಬಳಿಕ ಅಲ್ಲಿನ ಡೆಹ್ರಮ್ ಕೌಂಟಿ ನ್ಯಾಯಾಲಯ ಲಲಿತ್ ಮೋದಿ, ಮನವಿಯ ಮೇರೆಗೆ ಭಾರತಕ್ಕೆ ವಾಪಸಾಗಲು ಅನುಮತಿ ನೀಡಿತು.


ಇಪ್ಪತ್ತು ವರ್ಷ ಬಳಿಕ ಮೋದಿ ತಮ್ಮನ್ನು ಸಮರ್ಥಿಸಿಕೊಂಡು, ವಾಸ್ತವವಾಗಿ ಯಾವ ಮಾದಕವಸ್ತು ಕೂಡಾ ಇರಲಿಲ್ಲ. ಇದಕ್ಕೆ ಪುರಾವೆಯೂ ಇರಲಿಲ್ಲ. ಅಮೆರಿಕದಲ್ಲಿ ಪ್ರಕರಣಗಳ ಚೌಕಾಶಿಗೆ ಅವಕಾಶವಿದೆ. ನೀವು ತಪ್ಪು ಒಪ್ಪಿಕೊಂಡರೆ, ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ವ್ಯವಸ್ಥೆ ಇದೆ. ಆದ ಕಾರಣ ಅವರು ಕಡಿಮೆ ಶಿಕ್ಷೆಗಾಗಿ ಈ ಮನವಿ ಮಾಡಿಕೊಂಡಿದ್ದಾಗಿ ಹೇಳಿದ್ದರು.


ಮೋದಿ ಮತ್ತು ಮರ್ಡೋಕ್
ಮೋದಿಗೆ ಕ್ರೀಡಾ ವ್ಯವಹಾರದ ಹುಚ್ಚು ಅಂಟಿಕೊಂಡಿತು. ಅವರ ಮೊದಲ ವ್ಯವಹಾರ ಕುದುರಿದ್ದು ಇಎಸ್‌ಪಿಎನ್ ಕ್ರೀಡಾ ಚಾನೆಲ್ ಜೊತೆೆಗೆ. ಮೋದಿ ಇದರ ವಿತರಣೆಯ ಹಕ್ಕು ಖರೀದಿಸಿದರು. ಭಾರತದಲ್ಲಿ ಕ್ರಿಕೆಟ್ ಹುಚ್ಚು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ, ಕ್ರಿಕೆಟ್ ನೇರಪ್ರಸಾರದ ಹಕ್ಕನ್ನು ವಿಶ್ವಾದ್ಯಂತ ಖರೀದಿಸುವಂತೆ ಮೋದಿ ಸಲಹೆ ಮಾಡಿದರು. ಇಎಸ್‌ಪಿಎನ್ ಬಿಸಿಸಿಐ, ಇಂಗ್ಲೆಂ ಡ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗಳಿಂದ ಈ ಹಕ್ಕು ಖರೀದಿಸಿತು.


ಇದು ಮಾಧ್ಯಮ ದಿಗ್ಗಜ ಮತ್ತು ಸ್ಟಾರ್ ಸ್ಪೋರ್ಟ್ಸ್ ಸೇರಿದಂತೆ ಸ್ಟಾರ್ ಜಾಲದ ಮಾಲಕ ರೂಪಕ್ ಮರ್ಡೋಕ್ ಹಾಗೂ ಮೋದಿ ನಡುವೆ ಶೀತಲ ಸಮರಕ್ಕೆ ಕಾರಣವಾಯಿತು. ತಡವಾಗಿ ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮರ್ಡೋಕ್ ಕೇವಲ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆಯಲ್ಲಿ ಮಾತ್ರ ಪ್ರಸಾರದ ಹಕ್ಕು ಖರೀದಿಸುವಂತಾಯಿತು.


ಮರ್ಡೋಕ್ ಅವರನ್ನು ಅವರದ್ದೇ ಆಟದಲ್ಲಿ ಹೇಗೆ ಸೋಲಿಸ ಲು ಸಾಧ್ಯವಾಯಿತು ಎಂದು ಮೋದಿ ತಮ್ಮ ಮುಂದಿನ ಸಂದರ್ಶ ನದಲ್ಲಿ ಹೆಮ್ಮೆಯಿಂದ ಹೇಳಿಕೊಂಡರು. ಆದರೆ ನಾವು ಹಲವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಜಗನ್ಮೋಹನ ದಾಲ್ಮಿಯಾ ಅವರಂತೂ ನೀನು ಮೂರ್ಖ. ಅಷ್ಟೊಂದು ದೊಡ್ಡ ಮೊತ್ತವನ್ನು ನೀಡುತ್ತಿರುವೆ ಎಂದು ಹೇಳಿದ್ದರು. ನಾವು ಆಗ 12 ದಶಲಕ್ಷ ಡಾಲರ್ ವೌಲ್ಯದ ಗುತ್ತಿಗೆಗೆ ಬಿಸಿಸಿಐ ಜೊತೆೆ ಒಪ್ಪಂದ ಮಾಡಿ ಕೊಂಡಿದ್ದೆವು. ಭಾರತೀಯ ಕ್ರಿಕೆಟ್ ಎಂದೂ ಅಷ್ಟು ದೊಡ್ಡ ಮೊತ್ತವನ್ನು ನೋಡಿರಲಿಲ್ಲ ಎಂದು ಮೋದಿ ವಿವರಿಸಿದ್ದರು.


ಕೊನೆಗೂ ಅವರ ಆಸೆ ಫಲಿಸಿತು. ಎಲ್ಲ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆಯುವುದು ಸಾಧ್ಯವಾಯಿತು. ನಂತರ ಮೋದಿ ಇಎಸ್‌ಪಿಎನ್ ಹಾಗೂ ಸ್ಟಾರ್ ಸಮೂಹದ ವಿಲೀನಕ್ಕೆ ಮನವಿ ಮಾಡಲು ಮರ್ಡೋಕ್ ಜೊತೆೆ ಮಧ್ಯಸ್ಥಿಕೆ ವಹಿಸುವಂತೆ ಮೋದಿ ತಂದೆಯನ್ನು ಕೇಳಿಕೊಂಡರು. ಇದರಿಂದ ಎರಡು ಚಾನೆಲ್‌ಗಳ ನಡುವಿನ ಪೈಪೋಟಿ ಕಡಿಮೆಯಾಗಿ ಹರಾಜಿನಲ್ಲಿ ಕಡಿಮೆ ವೌಲ್ಯ ನಿಗದಿಪಡಿಸಬಹುದು ಎನ್ನುವುದು ಅವರ ಲೆಕ್ಕಾಚಾ ರವಾಗಿತ್ತು. ಇದರಿಂದ ಲಾಭ ಮತ್ತಷ್ಟು ಹೆಚ್ಚಲಿದೆ ಎನ್ನುವುದು ಅವರ ಚಿಂತನೆಯಾಗಿತ್ತು.


 ಮರ್ಡೋಕ್ ಒಪ್ಪಿಗೆ ನೀಡಿದರು. ಆದರೆ ಇಲ್ಲಿ ನಷ್ಟ ಅನುಭವಿಸಿದ್ದು ಮೋದಿ. ಸ್ವಾರ್ ಭಾರತದಲ್ಲಿ ವಿತರಣೆ ಜಾಲವನ್ನು ಹೊಂದಿ ದ್ದರಿಂದ, ಆ ಕಾರ್ಯವನ್ನು ಮಾಡಲು ಮೋದಿಯನ್ನು ಅವಲಂಬಿ ಸಲಿಲ್ಲ. ಈ ವಿಲೀನ ಮಾತುಕತೆ ಫಲಪ್ರದವಾಗುತ್ತಿದ್ದಂತೆ, ಭಾರತ ದಲ್ಲಿ ಇಎಸ್‌ಪಿಎನ್ ಪ್ರಸಾರದ ಹಕ್ಕನ್ನು ಮೋದಿಯವರಿಂದ ಕಸಿದುಕೊಳ್ಳಲಾಯಿತು. ಇದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಕೆ.ಕೆ.ಮೋದಿ ಹತಾಶೆಯಿಂದ ನುಡಿದಿದ್ದರು. ನಾವೇ ಈ ವ್ಯವಹಾರ ಕುದುರಿಸಿದರೂ, ನಮ್ಮ ಸಂರಕ್ಷಣೆಗೆ ಏನೂ ಮಾಡಿಕೊಂಡಿರಲಿಲ್ಲ ಎಂದು ಮೋದಿ ಹೇಳಿದ್ದರು.


ಟೆನ್ ಸ್ಪೋರ್ಟ್ಸ್ ಹಾಗೂ ದೂರದರ್ಶನ
ಈ ಕಾರಣದಿಂದ ಮೋದಿ ಮಾಡಿದ ಕ್ಷಿಪ್ರ ಕ್ರಾಂತಿ ಎಂದರೆ ಟೆನ್ ಸ್ಪೋರ್ಟ್ಸ್. ಇದರ ಪ್ರಸಾರದ ಹಕ್ಕು ಅವರ ಕೈಯಲ್ಲಿತ್ತು. 2004 ರಲ್ಲಿ ಭಾರತ- ಪಾಕಿಸ್ತಾನ ಸರಣಿಯನ್ನು ಪ್ರಸಾರ ಮಾಡುವ ಅವಕಾಶ ಪಡೆದರು. ಇದು ಕ್ರಿಕೆಟ್ ಪ್ರಸಾರದ ಹಕ್ಕಿನ ಸಮರಕ್ಕೆ ಕಾರಣವಾಯಿತು. ಟೆನ್ ಸ್ಪೋರ್ಟ್ಸ್ ವೀಕ್ಷಕರ ಸಂಖ್ಯೆ ಹಲವು ದಶಲಕ್ಷಗಳಿಗೆ ಹೆಚ್ಚಿತು. ದುರದೃಷ್ಟವೆಂದರೆ ಇದಕ್ಕೂ ಕಾನೂನು ತೊಡಕು ಎದುರಾಯಿ ತು. 1995ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ, ಗಾಳಿ ತರಂಗಗಳು ಸಾರ್ವಜನಿಕ ಆಸ್ತಿ. ಆದ್ದರಿಂದ ಇದನ್ನು ಸರಕಾರ ನಿಯಂತ್ರಿಸಬೇಕು. ಕ್ರಿಕೆಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರು ವುದರಿಂದ, ಯಾವ ಖಾಸಗಿ ಕಂಪೆನಿಗಳು ಕೂಡಾ ಇದರ ಪ್ರಸಾ ರದ ಹಕ್ಕಿನಲ್ಲಿ ಏಕಸ್ವಾಮ್ಯ ಸಾಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.


ರಾಷ್ಟ್ರದ ಹಿತಾಸಕ್ತಿಯ ಸಲುವಾಗಿ ಭಾರತ- ಪಾಕಿಸ್ತಾನ ಸರಣಿಯ ಪ್ರಸಾರದ ಹಕ್ಕನ್ನು ಸರಕಾರಿ ಸ್ವಾಮ್ಯದ ದೂರದರ್ಶನ ಪ್ರತಿಪಾ ದಿಸಿತು. ಟೆನ್‌ಸ್ಪೋರ್ಟ್ಸ್ ಕಾನೂನುಬದ್ಧವಾಗಿ ಪ್ರಸಾರದ ಹಕ್ಕನ್ನು ಹೊಂದಿದ್ದರೂ, ಇದನ್ನು ಪ್ರಸಾರ ಮಾಡಲು ದೂರದರ್ಶನಕ್ಕೂ ಅವಕಾಶ ನೀಡಬೇಕು ಎಂದು ವಾದ ಮಂಡಿಸಿತು. ಇದರಿಂದಾಗಿ ದೂರದರ್ಶನ ಮೊದಲ ಏಕದಿನ ಪಂದ್ಯವನ್ನು ಸ್ವಂತವಾಗಿ ಪ್ರಸಾರ ಮಾಡಿತು. ಆದರೆ ಎರಡನೇ ಏಕದಿನ ಪಂದ್ಯಕ್ಕೆ ಮುನ್ನ ದೂರ ದರ್ಶನ ನಿರ್ದೇಶನ ನೀಡಿ, ಜಾಹೀರಾತುಗಳೂ ಸೇರಿದಂತೆ ಟೆನ್‌ಸ್ಪೋರ್ಟ್ಸ್ ಫೀಡ್ ಮೂಲಕ ಪ್ರಸಾರ ಮಾಡುವಂತೆ ಸೂಚಿಸಿತು.


ಇದರಿಂದಾಗಿ ಎರಡೂ ಸಂಸ್ಥೆಗಳಿಗೆ ನಷ್ಟವಾಯಿತು. ಇದರಿಂ ದಾಗಿ ಸುಮಾರು ಇನ್ನೂರು ಕೋಟಿ ರೂ. ನಷ್ಟ ಸಂಭವಿಸಿರಬಹುದು ಎಂದು ಮೋದಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ದೂರದರ್ಶನಕ್ಕೆ ಸ್ವಂತವಾಗಿ ಪ್ರಸಾರಕ್ಕೆ ಅವಕಾಶವಾಗಬಹುದು ಎಂಬ ಕಾರಣಕ್ಕೆ ದೂರದರ್ಶನ ಸುಮಾರು 100 ಕೋಟಿ ರೂ. ವೌಲ್ಯದ ಜಾಹೀರಾತು ಪ್ರಸಾರಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ದೂರದರ್ಶನ ಮೊದಲ ಪಂದ್ಯದಿಂದ 12 ಕೋಟಿ ರೂ. ಆದಾಯ ಗಳಿಸಿತು. ಎರಡು ವರ್ಷಗಳ ಹಿಂದೆ ಮೋದಿ ಹೇಳಿಕೆ ನೀಡಿ, ಈ ವಿವಾದದಿಂದ ಆಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ 500 ಕೋಟಿ ರೂ.ಗಳನ್ನು ತೆಗೆದಿಡುವಂತೆ ದೂರದರ್ಶನ ಹಾಗೂ ಪ್ರಸಾರಭಾರತಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಈ ಹಣವನ್ನು ಇನ್ನೂ ಪಾವತಿಸಿಲ್ಲ ಮತ್ತು ಪ್ರಕರಣದ ಅಂತಿಮ ವಿಚಾರಣೆಯೂ ನಡೆದಿಲ್ಲ ಎಂದಿದ್ದರು.

ಕ್ರಿಕೆಟ್ ಕಿರಿಕ್
ಮೋದಿ 1990ರ ದಶಕದಲ್ಲಿ ಕ್ರಿಕೆಟ್ ಆಡಳಿತ ಕ್ಷೇತ್ರವನ್ನು ಪ್ರವೇಶಿಸುವ ಪ್ರಯತ್ನ ಮಾಡಿ, ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದರು. ಆಗ ಇದರ ಮುಖ್ಯಸ್ಥರಾಗಿದ್ದ ರಾಜೇಂದ್ರ ಜಾರ್, ಮೋದಿ ಇದಕ್ಕಾಗಿ ಹಣ ಮತ್ತು ರಾಜಕೀಯ ಪ್ರಭಾವ ಬೀರುತ್ತಿದ್ದಾರೆ ಎಂದು ಆಪಾದಿಸಿದ್ದರು. ಆದರೆ ಇದಕ್ಕೆ ಮೋದಿ ತಂದೆ ಒಪ್ಪಿಗೆ ನೀಡಲಿಲ್ಲ. ಆದರೆ 1999ರಲ್ಲಿ ಪರಿಸ್ಥಿತಿ ಬದಲಾಯಿತು.


ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಮುಖ್ಯಸ್ಥರಾಗಿದ್ದ ರಘುವೀರ ಸಿಂಗ್ ಠಾಕೂರ್ ಹೇಳಿಕೆ ನೀಡಿ, ಸಂಕಷ್ಟದ ಸಂದರ್ಭದಲ್ಲಿ ಮೋದಿ ಎಚ್‌ಪಿಸಿಎಗೆ ನೆರವು ನೀಡಿದ್ದಾರೆ. 1999ರಲ್ಲಿ ಅವರು 12 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಕಾನೂನುಬದ್ಧವಾಗಿ ಎಚ್‌ಪಿಸಿಎ ಸದಸ್ಯತ್ವ ನೀಡಲಾಗಿದೆ. ಎಚ್‌ಪಿಸಿಎ ಅವರಿಂದ ದೇಣಿಗೆ ಪಡೆದಿರುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಸಮರ್ಥಿಸಿಕೊಂಡರು.


ಇದಾಗಿ ಒಂದೇ ವರ್ಷದಲ್ಲಿ ಮೋದಿ, ಅಲ್ಲಿನ ಮುಖ್ಯಮಂತ್ರಿ ಪ್ರೇಮ್‌ಕುಮಾರ್ ಧುಮಾಲ್ ಜೊತೆೆ ಸಂಘರ್ಷಕ್ಕೆ ಇಳಿದರು. ಕ್ರಿಕೆಟ್ ಜೊತೆೆ ಸಂಪರ್ಕ ಹೊಂದಿದ್ದ ಧುಮಾಲ್, ತಮ್ಮನ್ನು ಹೊರಹೋಗುವಂತೆ ಸೂಚಿಸಿದ್ದರು. ಇದೀಗ ಧುಮಾಲ್ ಪುತ್ರ ಅನುರಾಗ್ ಠಾಕೂರ್ ಬಿಸಿಸಿಐನ ಕಾರ್ಯದರ್ಶಿ ಎಂದು 2015ರ ಮೇ ತಿಂಗಳಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಅಕ್ರಮ ಬೆಟ್ಟಿಂಗ್ ದಂಧೆ ತನಿಖೆ ಆರಂಭಿಸಿದಾಗ ಮೋದಿ ಟ್ವೀಟ್ ಮಾಡಿದ್ದರು.


ಮೋದಿ ಅನಿವಾರ್ಯವಾಗಿ ಬೇರೆ ರಾಜ್ಯದ ಕ್ರಿಕೆಟ್ ಅಸೋಸಿಯೇಶನ್‌ನ ಸದಸ್ಯತ್ವ ಪಡೆಯಬೇಕಾಯಿತು. ಭಾರತೀಯ ಕ್ರಿಕೆಟ್‌ನಲ್ಲಿ ಕುಖ್ಯಾತ ಹೆಸರಾಗಿರುವುದರಿಂದ, ತಮ್ಮ ಕುಟುಂಬದ ಹೆಸರನ್ನು ಬಿಟ್ಟು, ಲಲಿತ್ ಕುಮಾರ್ ಹೆಸರಿನಲ್ಲಿ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದರು. ರಾಜಸ್ಥಾನದಲ್ಲಿ ರುಂಗ್ಟಾ ಕುಟುಂಬ ಅಲ್ಲಿನ ಕ್ರಿಕೆಟ್ ನಿಯಂತ್ರಣ ಹೊಂದಿದ್ದ ಹಿನ್ನೆಲೆಯಲ್ಲಿ ಇದು ಮತ್ತೊಂದು ವಿವಾದಕ್ಕೆ ಕಾರಣವಾಯಿತು. 


ರಾಜೇ ಜೊತೆೆಗೆ ನಂಟು
ಮೋದಿ ಅದೃಷ್ಟ 2003ರಲ್ಲಿ ಬದಲಾಯಿತು. ಲಲಿತ್ ಮೋದಿ ತಾಯಿ ಹಾಗೂ ಪತ್ನಿಗೆ ಆತ್ಮೀಯ ಸ್ನೇಹಿತೆಯಾಗಿದ್ದ ವಸುಂದರಾರಾಜೇ ಮುಖ್ಯಮಂತ್ರಿಯಾದರು. 2004ರ ಆಗಸ್ಟ್‌ನಲ್ಲಿ ಅವರು ರಾಜಸ್ಥಾನ ಕ್ರೀಡಾ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದರು. ರುಂಗ್ಟಾ ಕುಟುಂಬವನ್ನು ಆರ್‌ಸಿಎಯಿಂದ ಹೊರಹಾಕುವ ಸಲುವಾಗಿ ಮಾಡಿದ ಹುನ್ನಾರ ಇದು ಎನ್ನುವುದು ಜನಜನಿತವಾಗಿತ್ತು.


ಇದರ ಒಂದು ಕಲಂ ಪ್ರಕಾರ, ರಾಜ್ಯದಲ್ಲಿ ಎಲ್ಲ ಕ್ರೀಡಾಸಂಘಗಳೂ ಹೊಸದಾಗಿ ನೋಂದಾಯಿಸಿಕೊಳ್ಳಬೇಕು. ಯಾವ ವೈಯಕ್ತಿಕ ಸದಸ್ಯರು ಕೂಡಾ ಅಸೋಸಿಯೇಶನ್ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎನ್ನುವುದು ಇನ್ನೊಂದು ಕಲಂ. ಜಿಲ್ಲಾಮಟ್ಟದ ಕ್ರೀಡಾ ಸಂಘಗಳ ಪದಾಧಿಕಾರಿಗಳು ಮತ್ತು ಪ್ರಾಥಮಿಕ ಕ್ರೀಡಾ ಸಂಘಗಳ ಪದಾಧಿಕಾರಿಗಳು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು ಎನ್ನುವುದು ಮತ್ತೊಂದು ಕಲಂ.


ಈ ಕಲಂಗಳಿಂದಾಗಿ ಆರ್‌ಸಿಎನಲ್ಲಿ ರುಂಗ್ಟಾ ಕುಟುಂಬ ಹಾಗೂ ಅವರ ಬೆಂಬಲಿಗ 57 ಮಂದಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಯಿತು. ಇದರಿಂದಾಗಿ ಈವರೆಗೆ ಆರ್‌ಸಿಎ ನಿಯಂತ್ರಿಸುತ್ತಿದ್ದ ಕುಟುಂಬ ಮುಂದಿನ ಚುನಾವಣೆಯಲ್ಲಿ ಪ್ರಭಾವ ಬೀರಲಾಗದು ಎನ್ನುವುದು ಲೆಕ್ಕಾಚಾರವಾಗಿತ್ತು. ರುಂಗ್ಟಾ ಕುಟುಂಬ ಈ ಸುಗ್ರೀವಾಜ್ಞೆಯ ಕಾನೂನುಬದ್ಧತೆಯನ್ನು ಕೋರ್ಟ್ ನಲ್ಲಿ ಪ್ರಶ್ನಿಸಿತು. ಆದರೆ 2004ರ ಡಿಸೆಂಬರ್‌ನಲ್ಲಿ ರಾಜಸ್ಥಾನ ಹೈಕೋರ್ಟ್ ಈ ಅರ್ಜಿ ವಜಾ ಮಾಡಿತು.


2005ರಲ್ಲಿ ಮೋದಿ ಆರ್‌ಸಿಎ ಅಧ್ಯಕ್ಷರಾಗಲು ವೇದಿಕೆ ಸೃಷ್ಟಿಯಾಯಿತು. ರಾಜ್ಯದ ಕ್ರಿಕೆಟ್ ಭವಿಷ್ಯವನ್ನೇ ಬದಲಿಸುವುದಾಗಿ ಮೋದಿ ಆಶ್ವಾಸನೆ ನೀಡಿದರು. ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಅನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಜ್ಜುಗೊಳಿಸಿದರು ಮತ್ತು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್ ಲಾಭದಲ್ಲಿ ಮುನ್ನಡೆಯುವಂತೆ ಪರಿವರ್ತಿಸಿದರು.


2009ರ ಫೆೆಬ್ರವರಿಯಲ್ಲಿ ಔಟ್‌ಲುಕ್ ನಿಯತಕಾಲಿಕ ಇವರ ಬಗ್ಗೆ ಮುಖಪುಟ ಲೇಖನ ಪ್ರಕಟಿಸಿ, ಮೋದಿ ತಮ್ಮ ಪ್ರಭಾವ ಬೀರಿ, ಸೂಪರ್ ಚೀಪ್ ಮಿನಿಸ್ಟರ್ ಆಗಿದ್ದಾರೆ ಎನ್ನುವುದು ಮುಖ್ಯಾಂಶ. ರಾಮಭಾಗ ಪ್ಯಾಲೆಸ್ ಹೋಟೆಲ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ಈ ಲೇಖನದಲ್ಲಿ ಹಲವು ಆರೋಪಗಳನ್ನು ಮೋದಿ ವಿರುದ್ಧ ಮಾಡಲಾಗಿತ್ತು.


* ಮೋದಿ ರಾಜ್ಯದಲ್ಲಿ ದೊಡ್ಡ ನಿರ್ಮಾಣಶಕ್ತಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.


* ಪ್ರತಿಯೊಂದು ದೊಡ್ಡ ಭೂ ವ್ಯವಹಾರಗಳಿಗೂ ಅವರಿಂದ ಕ್ಲಿಯರೆನ್ಸ್ ಸಿಗಬೇಕು.


* ರಾಜ್ಯದ ಅಬ್ಕಾರಿ ನೀತಿ ಬದಲಿಸಿದ್ದು, ಹೆಚ್ಚುವರಿ ಮದ್ಯಮಾರಾಟ ಮಳಿಗೆಗಳನ್ನು ತೆರೆಯಲು ಕಾರಣರಾಗಿದ್ದಾರೆ.


* ಗಣಿಗಾರಿಕೆ ಸೇರಿದಂತೆ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಹೊಂದಿದ್ದಾರೆ.


* ಕಾನೂನನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ.


* ಐಷಾರಾಮಿ ಜೀವನಶೈಲಿ ಹೊಂದಿರುವ ಇವರು ಖಾಸಗಿ ಜೆಟ್ ಹೊಂದಿದ್ದಾರೆ.


* ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್ ಸದಸ್ಯರಾಗಲು ನಕಲಿ ಸಹಿ ಮಾಡಿದ್ದಾರೆ. ಲಲಿತ್ ಕುಮಾರ್ ಎಂಬ ಹೆಸರಿನ ಸಹಿ ಮತ್ತು ಲಲಿತ್ ಕುಮಾರ್ ಮೋದಿ ಹೆಸರಿನ ಸಹಿ ತಾಳೆಯಾಗುತ್ತಿಲ್ಲ ಎಂಬ ಆರೋಪವಿದೆ.


* ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್‌ನಲ್ಲಿ ಅವ್ಯವಹಾರ ನಡೆದ ದೂರು ದಾಖಲಾದ ಬಳಿಕ ಅವರು ಹಣವನ್ನು ಅಸೋಸಿಯೇಶನ್‌ಗೆ ತುಂಬಿದ್ದಾರೆ.

ಈ ಎಲ್ಲ ಆರೋಪಗಳನ್ನು ಮೋದಿ ನಿರಾಕರಿಸಿದ್ದರು. ಯಾವುದೇ ಭೂಮಿ ವಹಿವಾಟು ಅಥವಾ ಮದ್ಯ ನೀತಿಯಲ್ಲಿ ಪ್ರಭಾವ ಬೀರಿಲ್ಲ. ಕಳೆದ ವರ್ಷ ಕೇವಲ 30-35 ದಿನ ಮಾತ್ರ ರಾಜಸ್ಥಾನಕ್ಕೆ ಭೇಟಿ ನೀಡಿದ್ದೆ. ಅದು ಕೂಡಾ ಕ್ರಿಕೆಟ್ ಪಂದ್ಯಗಳಿಗಾಗಿ. ಹಳೆಯ ಹೆಲಿಕಾಪ್ಟರ್‌ಗಳನ್ನು ಖರೀದಿಸಿ ದುರಸ್ತಿ ಮಾಡಿಸಿದ್ದೇವೆ. ಆರ್‌ಸಿಎ, ಬಿಸಿಸಿಐ ಅಥವಾ ಐಪಿಎಲ್‌ನಿಂದ ಯಾವ ಹಣವನ್ನೂ ಪಡೆದಿಲ್ಲ. ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣ ದುರಸ್ತಿಗೆ ಬಳಕೆಯಾದ ಎಲ್ಲ ಹಣಕ್ಕೂ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಇದೆ ಎಂದು ಸಮರ್ಥಿಸಿಕೊಂಡಿದ್ದರು.
ಪವಾರ್ ಮತ್ತು ರಾಜಕೀಯ
ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್‌ನ ಪ್ರಬಲ ಶಕ್ತಿಯಾಗಿ ಲಲಿತ್ ರೂಪುಗೊಂಡದ್ದು ಇನ್ನೊಂದು ಶಕ್ತಿಸಮರಕ್ಕೆ ಕಾರಣವಾಯಿತು. 2004ರಲ್ಲಿ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಮಂಡಳಿಯಲ್ಲಿ ಬಿಗಿಹಿಡಿತ ಹೊಂದಿದ್ದ ಜಗನ್ಮೋಹನ ದಾಲ್ಮಿಯಾ, ರಣಬೀರ್‌ಸಿಂಗ್ ಮಹೇಂದ್ರ ಅವರ ವಿರುದ್ಧ ಪವಾರ್ ಅವರನ್ನು ಛೂಬಿಟ್ಟರು.

ಪವಾರ್ ಒಂದು ಮತದ ಅಂತರದಲ್ಲಿ ಜಯ ಸಾಧಿಸಿದರು. ಆ ಪ್ರಮುಖ ಮತ ದಾಲ್ಮಿಯಾ ಅವರದ್ದಾಗಿತ್ತು. ನಿರ್ಗಮನ ಅಧ್ಯಕ್ಷರಾಗಿ ಕಾನೂನು ಪ್ರಕಾರ ತಮಗೆ ಎರಡು ಮತದ ಹಕ್ಕು ಇದೆ ಎಂದು ದಾಲ್ಮಿಯಾ ವಾದಿಸಿದ್ದರು. 2005ರಲ್ಲಿ ಎರಡು ಬಣಗಳ ನಡುವಿನ ಸಮರ ಮುಂದುವರಿಯಿತು. ಈ ಬಾರಿ ಪವಾರ್, ಲಲಿತ್‌ಮೋದಿ ಎನ್.ಶ್ರೀನಿವಾಸನ್ ಅವರ ಬೆಂಬಲ ಪಡೆದು ಸುಲಭ ಜಯ ಸಾಧಿಸಿದರು.

ಮಂಡಳಿಯ ವಾಣಿಜ್ಯ ಗುತ್ತಿಗೆಯ ನಿರ್ವಹಣೆ ಹೊಣೆಯನ್ನು ಮೋದಿಗೆ ಉಡುಗೊರೆಯಾಗಿ ನೀಡಲಾಯಿತು. ಅವರ ವೈಯಕ್ತಿಕ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ, ಲಲಿತ್‌ಮೋದಿಯವರ ಸಮರ್ಥ ನಾಯಕತ್ವದಿಂದ ಭಾರತೀಯ ಕ್ರಿಕೆಟ್ ವಾಣಿಜ್ಯವಾಗಿ ಕ್ರಾಂತಿಯನ್ನೇ ಮಾಡಿದೆ. ನೈಕ್, ಸಹಾರ, ಸೋನಿ, ಇಎಸ್‌ಪಿಎನ್, ವಯಾಕಾಂ ಮತ್ತಿತರ ಪ್ರಮುಖ ಬ್ರಾಂಡ್‌ಗಳ ಜೊತೆೆ ಪಾಲುದಾರಿಕೆ ಸಾಧಿಸಿ, 2005-2008ರ ಅವಧಿಯಲ್ಲಿ ಬಿಸಿಸಿಐ ಆದಾಯ ಏಳುಪಟ್ಟು ಹೆಚ್ಚಿದೆ. 2008ರಲ್ಲಿ ದಾಖಲೆ 100 ಕೋಟಿ ರೂ. ಆದಾಯ ಗಳಿಸಿದೆ

ಕ್ರಿಕೆಟ್ ಮತ್ತು ವಾಣಿಜ್ಯ
ಐಪಿಎಲ್ ನನ್ನ ಕನಸಿನ ಕೂಸು ಎಂದು ಹಲವು ಸಂದರ್ಶನಗಳಲ್ಲಿ ಮೋದಿ ಹೇಳಿಕೊಂಡಿದ್ದರು. ಹಲವು ವರ್ಷಗಳಿಂದಲೇ ಆ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರೂ, ಹಿಂದಿನ ಬಿಸಿಸಿಐ ಅಧ್ಯಕ್ಷರಿಗೆ ಅದರ ಮಹತ್ವವನ್ನು ಮನವರಿಕೆ ಮಾಡಲು ಸಾಧ್ಯವಾಗಿರಲಿಲ್ಲ. 2007ರಲ್ಲಿ ಝೀ ಗ್ರೂಪ್ ಮಾಲಕ ಸುಭಾಷ್ ಚಂದ್ರ ಬಿಸಿಸಿಐ ಪಂದ್ಯಗಳ ಪ್ರಸಾರದ ಹಕ್ಕು ಪಡೆಯಲು ವಿಫಲರಾದರು. ಆದರೆ ಅವರು ಇದಕ್ಕೆ ಪ್ರತಿಯಾಗಿ ಇಂಡಿಯನ್ ಕ್ರಿಕೆಟ್ ಲೀಗನ್ನು ಇದೇ ಮಾದರಿಯಲ್ಲಿ ಆರಂಭಿಸಿದರು.

ಈ ಹಿನ್ನೆಲೆಯಲ್ಲಿ ಬಿಸಿಸಿಐ, ಐಪಿಎಲ್ ಆರಂಭಿಸುವಂತೆ ಸೂಚಿಸಿತು. ಐಪಿಎಲ್ ಮೊದಲ ಆವೃತ್ತಿಯ ಮೊದಲ ಪಂದ್ಯ ಕೇವಲ ಹನ್ನೊಂದು ತಿಂಗಳಲ್ಲಿ ಅಂದರೆ 2008ರ ಏಪ್ರಿಲ್‌ನಲ್ಲಿ ಆಡಲಾಯಿತು. ಮೋದಿ ನಿಯಮವೇ ಅಂತಿಮವಾಯಿತು. ಇದರಿಂದಾಗಿ ಬಿಸಿಸಿಐಗಿಂತ ದೊಡ್ಡ ಕುಳವಾಗಿ ಬೆಳೆದರು. ಅತ್ಯುನ್ನತಿಯಲ್ಲಿದ್ದಾಗ ಐಪಿಎಲ್ ವೌಲ್ಯ ನಾನ್ನೂರು ಕೋಟಿ ಡಾಲರ್‌ಗಿಂತಲೂ ಅಧಿಕವಾಗಿತ್ತು.

ದುರದೃಷ್ಟವೆಂದರೆ ಸಾಮಾಜಿಕ ಜಾಲತಾಣಗಳ ನಿಪುಣ, ತಮ್ಮ ಮೊಬೈಲ್‌ನಿಂದ ಬೆರಳುಗಳನ್ನು ಆಚೆಗೆ ತೆಗೆಯದ ಪರಿಸ್ಥಿತಿ ನಿರ್ಮಾಣವಾಯಿತು. 2010ರಲ್ಲಿ ಐಪಿಎಲ್ ವಿಸ್ತರಣೆಯಾಯಿತು. ಮೂಲ ಎಂಟು ತಂಡಗಳಿಗೆ ಎರಡು ತಂಡಗಳನ್ನು ಹೆಚ್ಚಾಗಿ ಸೇರಿಸಲಾಯಿತು. ಕೊಚ್ಚಿ ಫ್ರಾಂಚೈಸಿಯನ್ನು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ ಪಡೆಯಿತು. ಈ ಹೂಡಿಕೆದಾರರ ಗುಂಪಿಗೆ ಅಂದಿನ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿದ್ದ ಶಶಿ ತರೂರ್ ಅಭಯಹಸ್ತ ಚಾಚಿದರು.

ಮೋದಿ ಈ ಫ್ರಾಂಚೈಸಿಯನ್ನು ಇನ್ನೊಂದು ಗುಂಪಿಗೆ ನೀಡಲು ಉದ್ದೇಶಿಸಿದ್ದರು ಎಂದು ಭಾವಿಸಿದ ಕೊಚ್ಚಿ ಮಾಲಕರು, ವ್ಯವಹಾರವನ್ನು ವಿಳಂಬ ಮಾಡಿದರು. 2010ರ ಏಪ್ರಿಲ್ 11ರಂದು ಮೋದಿ ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಲೇಬೇಕಾಯಿತು. ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್‌ಹೆಸರನ್ನು ಟ್ವೀಟ್ ಮಾಡಿದರು. ಅದರ ಮಾಲಕಿ ಸುನಂದಾ ಪುಷ್ಕರ್. ನಂತರ ಪುಷ್ಕರ್, ಶಶಿ ತರೂರ್ ಅವರನ್ನು ವಿವಾಹವಾದರು.

ಕ್ರಿಕೆಟ್ ಅವಕೃಪೆ
ಎಲ್ಲವೂ ನಷ್ಟವಾಯಿತು. ಇದು ರಾಜಕೀಯ ವಿವಾದವಾಗಿ ಪರಿವರ್ತನೆಯಾಗಿ, ಸಂಸತ್ತಿನಲ್ಲೂ ಪ್ರತಿಧ್ವನಿಸಿತು. ತರೂರ್ ಅವರು ಮನಮೋಹನಸಿಂಗ್ ಸಂಪುಟದಿಂದ ತಮ್ಮ ಹುದ್ದೆ ಕಳೆದುಕೊಂಡರು. ಅವರು ಪ್ರೇಮಿಸುತ್ತಿದ್ದ ಮಹಿಳೆಗೆ 700 ದಶಲಕ್ಷ ರೂ. ಲಾಭ ಮಾಡಿಕೊಡಲು ಯತ್ನಿಸಿದ್ದಾರೆ ಎಂಬ ಆರೋಪ ಇದಕ್ಕೆ ಕಾರಣ. 2010ರ ಆಗಸ್ಟ್‌ನಲ್ಲಿ ತರೂರ್, ಸುನಂದಾ ಅವರನ್ನು ವಿವಾಹವಾದರು.

ಇದಾದ ಕೆಲ ವರ್ಷ ಬಳಿಕ ಪುಷ್ಕರ್ ತಮ್ಮ ಹಾಗೂ ತರೂರ್ ನಡುವಿನ ಸಂಬಂಧ ಅಷ್ಟೊಂದು ಸುಮಧುರವಾಗಿಲ್ಲ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿತ್ತು. ಐಪಿಎಲ್ ವ್ಯವಹಾರದ ವಿವರಗಳನ್ನೂ ಅವರು ಬಹಿರಂಗಪಡಿಸಿದರು. ಇದಾಗಿ ಕೆಲ ದಿನಗಳಲ್ಲಿ ಅವರು, ದಿಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವಿಗೀಡಾದರು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಯಿತು. ಆದರೆ ನಂತರ ದಿಲ್ಲಿ ಪೊಲೀಸರು, ಸುನಂದಾ ಹತ್ಯೆಯಾಗಿರುವುದನ್ನು ಖಚಿತಪಡಿಸಿಕೊಂಡರು.

ಮೋದಿ ಪತನ
ತರೂರ್ ರಾಜೀನಾಮೆಯ ಕೆಲವೇ ದಿನಗಳಲ್ಲಿ ಮೋದಿ ವಿರುದ್ಧ ಮಾಧ್ಯಮಗಳಲ್ಲಿ ಭ್ರಷ್ಟಾಚಾರ ಆರೋಪಗಳು ಸರಣಿಯೋಪಾದಿಯಲ್ಲಿ ಬಂದವು. ಐಪಿಎಲ್ ಪ್ರಸಾರದ ಹಕ್ಕು ಪಡೆದ ಸೋನಿ ಚಾನೆಲ್‌ನಿಂದಲೂ ಲಂಚ ಪಡೆದಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂತು. ಹಲವು ಮಂದಿ ಐಪಿಎಲ್ ಫ್ರಾಂಚೈಸಿ ಮಾಲಕರ ಜೊತೆೆ ಹೊಂದಿದ್ದ ಸಂಬಂಧಗಳಲ್ಲಿ ಹಿತಾಸಕ್ತಿಯ ವೈರುದ್ಧ್ಯ ಇದ್ದುದನ್ನೂ ಮಾಧ್ಯಮಗಳು ಬಹಿರಂಗಪಡಿಸಿದವು.

2010ರಲ್ಲಿ ಮೋದಿ ವಿರುದ್ಧ ಮೂರು ಶೋಕಾಸ್ ನೋಟಿಸ್ ಜಾರಿಯಾಯಿತು. ಬಿಸಿಸಿಐ ಜಾರಿ ಮಾಡಿದ ನೋಟಿಸ್‌ಗಳ ಅನ್ವಯ, ಮೋದಿ ದುರುದ್ದೇಶದಿಂದ ವರ್ತಿಸಿದ್ದಾರೆ ಮತ್ತು ತಮ್ಮ ಸ್ನೇಹಿತರಿಗೇ ಫ್ರಾಂಚೈಸಿ ಗುತ್ತಿಗೆ ನೀಡಿದ್ದಾರೆ. ಇದರಿಂದಾಗಿ ಮಂಡಳಿಗೆ ಭಾರೀ ನಷ್ಟವಾಗಿದೆ ಎಂದು ವಾದಿಸಲಾಗಿತ್ತು. ತಕ್ಷಣ ಎಲ್ಲರ ದೃಷ್ಟಿ ಮೋದಿ ಕಡೆಗೆ ಹರಿಯಿತು. ಅವರನ್ನು ಐಪಿಎಲ್ ಮತ್ತು ಬಿಸಿಸಿಐನಿಂದ ವಜಾ ಮಾಡಲಾಯಿತು. ಆದಾಯ ತೆರಿಗೆ, ಕಾನೂನು ಜಾರಿ ನಿರ್ದೇಶನಾಲಯ ಹೀಗೆ ಪ್ರತಿಯೊಂದು ತನಿಖಾ ಸಂಸ್ಥೆಗಳು ಅವರ ಸುತ್ತ ಸುಳಿದವು. ಜೊತೆೆಗೆ ಬಿಸಿಸಿಐ ಕೂಡಾ ತನ್ನದೇ ತನಿಖೆ ಆರಂಭಿಸಿತು. ಸುದೀರ್ಘ ವಿವರಣೆಗಳಲ್ಲಿ ಮೋದಿ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆದರು.

ಮೋದಿಯವರ ಸಮಸ್ಯೆಗಳನ್ನು ರಾಜಕೀಯ ದುರದೃಷ್ಟಗಳು ಸಂಕೀರ್ಣಗೊಳಿಸಿದವು. ಪವಾರ್ ಬಿಸಿಸಿಐನಿಂದ ಹೊರಕ್ಕೆ ಹೋಗಿದ್ದರು; ವಸುಂಧರಾರಾಜೇ ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿದ್ದರು; ಶ್ರೀನಿವಾಸನ್ ಕೂಡಾ ಮೋದಿಗೆ ವಿರುದ್ಧವಾಗಿದ್ದರು. ಕ್ರಿಕೆಟ್ ಜೊತೆೆ ಸಂಬಂಧ ಹೊಂದಿದ್ದ ಅರುಣ್ ಜೇಟ್ಲಿಯಂಥ ರಾಜಕಾರಣಿಗಳು ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಮೋದಿ ವಿರುದ್ಧದ ಹಲವು ಆರೋಪಗಳು ನಿಜ ಎನ್ನುವುದನ್ನು ಜೇಟ್ಲಿಯವರನ್ನೂ ಒಳಗೊಂಡಿದ್ದ ಶಿಸ್ತುಸಮಿತಿ ಒಪ್ಪಿಕೊಂಡಿತು.

ತಮ್ಮ ಭದ್ರತೆ ಹಾಗೂ ಬಂಧನದ ಭೀತಿಯಿಂದ ಮೋದಿ ಲಂಡನ್‌ಗೆ ಹಾರಿದರು. ಅದಾಗ್ಯೂ ವಸುಂಧರಾರಾಜೇ, ಸುಷ್ಮಾ ಸ್ವರಾಜ್ ಜೊತೆೆ ನಿಕಟ ನಂಟು ಮುಂದುವರಿಸಿದರು. ಇದರಿಂದಾಗಿ ಶ್ರೀನಿವಾಸನ್, ತರೂರ್, ಪಿ.ಚಿದಂಬರಂ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. 2009ರ ಸಾರ್ವತ್ರಿಕ ಚುನಾವಣೆ ಕಾರಣದಿಂದ ಭಾರತದಲ್ಲಿ ಐಪಿಎಲ್-2 ನಡೆಸಲು ಅವಕಾಶ ದೊರಕದಿದ್ದರೂ, ಅದನ್ನು ಯಶಸ್ವಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದರು.

2014ರ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್, ಮೋದಿ ಪಾಸ್‌ಪೋರ್ಟನ್ನು ಊರ್ಜಿತಗೊಳಿಸಿತು. ಆದರೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅನಿವಾರ್ಯತೆಗೆ ಕೇಂದ್ರ ಸರಕಾರ ಇದೀಗ ಸಿಕ್ಕಿಹಾಕಿಕೊಂಡಿದೆ.

ಜೂಜಿನ ಮೋಜು
ಮುಂದಿನ ಎರಡು ದಶಕಗಳ ಕಾಲ ಮೋದಿ ವ್ಯಾಪಾರ ಕ್ಷೇತ್ರ, ಆಡಳಿತ ಮತ್ತು ನ್ಯಾಯಾಲಯದಲ್ಲಿ ವ್ಯಾಪಾರಿ ವಿಷಯ ಗಳಿಗೆ ಸಂಬಂಧಿಸಿದಂತೆ ಸಂಘರ್ಷಕ್ಕೆ ಇಳಿದರು. ಭಾರತದಲ್ಲಿ ಫ್ಯಾಷನ್ ಟಿವಿ ವಿತರಣೆ ಹಕ್ಕುಹೊಂದಿದ್ದ ಮೋದಿ ಆ ಕಂಪೆನಿ ಮಾಲಕ ಮೈಕೆಲ್ ಆಡಂ ಜೊತೆೆ ಮುನಿಸು ಹೊಂದಿದ್ದರು. ಒಪ್ಪಂದವನ್ನು ಉಲ್ಲಂಘಿಸಿ, ಆಡಂ 2003ರಲ್ಲಿ ಎಪ್ ಟಿವಿಯ ನ್ನು ಉಚಿತ ಚಾನೆಲ್ ಮಾಡಿದರು ಎನ್ನುವುದು ಮೋದಿ ಆರೋಪ. ಎಫ್ ಟಿವಿಯನ್ನು ಪೇ ಚಾನೆಲ್ ಮಾಡುವ ಮೋದಿ ನಿರ್ಧಾರ ಸರಿಯಲ್ಲ ಎನ್ನುವುದು ಅವರ ವಾದವಾ ಗಿತ್ತು. ಅಂತಿಮವಾಗಿ ನ್ಯಾಯಾಲಯ ಈ ವಿವಾದವನ್ನು ಬಗೆಹರಿಸಿತು. ಆದರೆ ಇದರಿಂದ ಸಂಬಂಧ ಮಾತ್ರ ಹಳಸಿತು.

ಅವರ ಇನ್ನೊಂದು ವ್ಯವಹಾರ ಯೋಚನೆ ಎಂದರೆ ಭಾರತ ದಲ್ಲಿ ಆನ್ ಲೈನ್ ಲಾಟರಿ ಆರಂಭಿಸುವುದು. ಇದು ಗಾಡ್‌ರೇ ಫಿಲಿಪ್ಸ್ ಜಾಲಕ್ಕೆ ಲಾಭ ತಂದುಕೊಡುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಆದರೆ ಹಲವು ರಾಜ್ಯಗಳು ಇದನ್ನು ನಿಷೇಧಿಸಿ ದ್ದರಿಂದ ಮತ್ತು ತೆರಿಗೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಅದು ಬುಡಮೇಲಾಯಿತು. ಮೋದಿ ನಿವ್ವಳ ಲಾಭದ ಬದಲಾಗಿ ಒಟ್ಟು ಆದಾಯದ ಆಧಾರದಲ್ಲಿ ಮಾರಾಟ ತೆರಿಗೆ ನೀಡಬೇಕು ಎಂದು ಸೂಚಿಸಿದ್ದರಿಂದ ಸಮಸ್ಯೆ ಉದ್ಭವಿಸಿತು.
ಇದರಿಂದ ಈ ವ್ಯಾಪಾರ ಮಾದರಿ ಲಾಭದಾಯಕವಾಗ ಲಿಲ್ಲ. ಈ ವಹಿವಾಟನ್ನು ಸ್ಥಗಿತಗೊಳಿಸಬೇಕಾಯಿತು. ಆದರೆ ಇದರ ಜೊತೆೆಗೆ ಹೆಚ್ಚುವರಿ ಸಮಸ್ಯೆ ಉದ್ಭವಿಸಿತು. ಆನ್‌ಲೈನ್ ಲಾಟರಿಗಾಗಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಖರೀದಿಸಿದ ಬಹುತೇಕ ಮಂದಿ ಸಿಗರೆಟ್ ವಿತರಕರು ಅಥವಾ ಪರಿಚಿತರು. ಇದರಿಂದಾಗಿ ನಮ್ಮ ಮೂಲ ವ್ಯವಹಾರಕ್ಕೆ ಏಟು ಬೀಳಬಹು ದು ಎಂಬ ಭೀತಿಯಿಂದ ಈ ಎಲ್ಲ ಎಲೆಕ್ಟ್ರಾನಿಕ್ ಯಂತ್ರಗಳನ್ನು ವಾಪಸು ಖರೀದಿಸಿದೆವು. ಇದರಿಂದ ಸುಮಾರು ನೂರು ಕೋಟಿ ರೂ. ನಷ್ಟವಾಯಿತು ಎಂದು ಕೆ.ಕೆ.ಮೋದಿ ಹೇಳಿಕೊಂಡಿದ್ದರು.

                                                          ------------------ಮುಂದುವರಿಯುವುದು.

Friday, June 19, 2015

ಯಾರಿಗೂ ಬೇಡದವರು - ರೊಹಿಂಗ್ಯಾ ಮುಸ್ಲಿಮರು


ಡಾ ಎಚ್ ಎಸ್ ಅನುಪಮಾರಂಜಾನ್ ಉಪವಾಸ ಶುರುವಾಗಿದೆ. ಉಳ್ಳವರು, ಇಲ್ಲದವರು ಎನ್ನದೆ ಎಲ್ಲರೂ ಪುಣ್ಯಸಂಚಯದ ಸಂಭ್ರಮದಲ್ಲಿ ತಂತಮ್ಮದೇ ನೆಲೆಯಲ್ಲಿ ಉಪವಾಸದ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ನೀರಮೇಲೆ ತೇಲುತ್ತ ಎತ್ತ ಹೋಗುವುದೆಂದು ತಿಳಿಯದೆ ಎಲುಬು ಹಂದರವಾದ ದೇಹವನ್ನು ಎಳೆದೊಯ್ಯುತ್ತಿರುವ ಸಾವಿರಾರು ನಿರಾಶ್ರಿತ ಮುಸ್ಲಿಮರಿಗೆ ರಂಜಾನಿನ ನೆನಪು ಯಾವ ಭಾವ ಹುಟ್ಟಿಸುತ್ತದೆ!? ಹೌದು, ಈ ಭೂಮಿಯೆಂಬ ೭೦೦ ಕೋಟಿ ಜನ ವಾಸಿಸುತ್ತಿರುವ ಸುವಿಶಾಲ ಬಯಲಲ್ಲಿ ತಾವು ನೆಲೆಯಾಗಲು ಒಂದು ಮೆಟ್ಟು ಜಾಗವೂ ಸಿಗದೆ ಸಮುದ್ರದ ಮೇಲೆ ತೇಲುವ ನಿರಾಶ್ರಿತರಿದ್ದಾರೆ! ಅವರೇ ಬರ್ಮಾದ ರೊಹಿಂಗ್ಯಾ ಮುಸ್ಲಿಮರು. ವಿಶ್ವಸಂಸ್ಥೆಯಿಂದ ಪ್ರಪಂಚದಲ್ಲೆ ಅತಿ ಹೆಚ್ಚು ದಮನಿತ ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಲ್ಪಟ್ಟ, ಅರ್ಧಶತಮಾನದಿಂದ ಸ್ಥಳಾಂತರಗೊಳ್ಳುತ್ತಲೇ ಇರುವ ಅವರ ಬಿಕ್ಕಟ್ಟು ಎರಡನೆಯ ಸಹಸ್ರಮಾನ ದಾಟಿದ ಬಳಿಕ ತೀರ ಉಲ್ಬಣಿಸಿದೆ. ಅದರಲ್ಲೂ ಕಳೆದ ವರ್ಷ ಸುಮಾರು ೬೫,೦೦೦ ಜನ ಎಲ್ಲಿ ಇಳಿಯುವುದೆಂದೇ ಗೊತ್ತಿಲ್ಲದೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ಬರ್ಮಾದಿಂದ ನೆರೆಯ ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ ತೀರಗಳತ್ತ ಹೋಗಿದ್ದರೆ ಈ ವರ್ಷ ಇಷ್ಟು ಹೊತ್ತಿಗಾಗಲೇ ೩೦,೦೦೦ ಜನ ಬರ್ಮಾ ತೊರೆದಿದ್ದಾರೆ.

ಬುದ್ಧನ ಧರ್ಮ ರಾಷ್ಟ್ರೀಯ ಧರ್ಮವಾಗಿರುವ ದೇಶ ಬರ್ಮಾದಲ್ಲಿ ಕೋಮು ದ್ವೇಷವೆ! ಹೌದು. ಬರ್ಮಾದ ಕೋಮುಘರ್ಷಣೆಗೆ ಬರ್ಮಾ ಸ್ವಾತಂತ್ರ ಪಡೆದಷ್ಟೇ ವರ್ಷಗಳ ಇತಿಹಾಸವಿದೆ. ಅದು ಬೌದ್ಧ-ಮುಸ್ಲಿಂ ಘರ್ಷಣೆ ಅಥವಾ ಬರ್ಮೀ-ರೊಹಿಂಗ್ಯಾ ಬಿಕ್ಕಟ್ಟು.

ಬರ್ಮಾದಲ್ಲಿ ೧೦ ಲಕ್ಷ ಮುಸ್ಲಿಮರಿದ್ದು ಅವರಲ್ಲಿ ೮೦% ಜನ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮದ ರಖಿನೆ ಪ್ರಾಂತ್ಯದಲ್ಲಿದ್ದಾರೆ. ತಮ್ಮ ಭಾಷೆಯಲ್ಲಿ ರೂಯಿಂಗಾ ಎಂದರೆ ‘ಬೆಟ್ಟಪ್ರದೇಶದಿಂದ ಬಂದವರು’ ಎಂದು ಸೂಚಿಸುವ ರೊಹಿಂಗ್ಯಾ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಅವರು ಬರ್ಮಾದ ಬೌದ್ಧರಿಗಿಂತ ಜನಾಂಗೀಯವಾಗಿ, ಧಾರ್ಮಿಕವಾಗಿ, ಭಾಷಿಕವಾಗಿ ಭಿನ್ನರು. ಅವರಲ್ಲಿ ಬಹುಪಾಲು ಜನರಿಗೆ ಬರ್ಮಾ ಪೌರತ್ವ ನೀಡಲು ನಿರಾಕರಿಸಿದೆ. ೨೦೧೪ರಲ್ಲಿ ಬರ್ಮಾ ಜನಗಣತಿ ೩೦ ವರ್ಷ ಬಳಿಕ ನಡೆದಾಗ ಬಹುಸಂಖ್ಯಾತ ಬೌದ್ಧರ ಒತ್ತಡದ ಮೇರೆಗೆ ಮುಸ್ಲಿಮರು ತಮ್ಮನ್ನು ಬೆಂಗಾಲಿ ಎಂದು ಗುರುತಿಸಿಕೊಳ್ಳಲು ಮಾತ್ರ ಅವಕಾಶ ನೀಡಿ ರೊಹಿಂಗ್ಯಾ ಅಸ್ಮಿತೆ ನಿರಾಕರಿಸಲಾಯಿತು. ಫೆ. ೨೦೧೫ರಲ್ಲಿ ಅವರಿಗೆ ಕೊಟ್ಟ ತಾತ್ಕಾಲಿಕ ಗುರುತು ಕಾರ್ಡನ್ನು ಹಿಂತೆಗೆದುಕೊಂಡು ಮತದಾನ ಹಕ್ಕನ್ನೂ ನಿರಾಕರಿಸಲಾಯಿತು. ಬರ್ಮಾದ ೧೩೫ ಬುಡಕಟ್ಟು ಸಮುದಾಯಗಳಲ್ಲಿ ರೊಹಿಂಗ್ಯಾರಿಗೆ ಸ್ಥಾನ ಕೊಡಲು ನಿರಾಕರಿಸಲಾಯಿತು. ಬರ್ಮೀ ಮುಸ್ಲಿಂ ಮದುವೆಗಳಲ್ಲಿ ಸೈನ್ಯದ ಪ್ರತಿನಿಧಿಯಿರಬೇಕು; ಮೊದಲೇ ಗುರುತು ಚೀಟಿ ತೋರಿಸಿ ಒಪ್ಪಿಗೆ ಪಡೆಯಬೇಕು; ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ; ಕುಟುಂಬ ಯೋಜನೆ ಅನುಸರಿಸಬೇಕು ಮುಂತಾದ ಕಟ್ಟುಪಾಡುಗಳನ್ನು ಸರ್ಕಾರವೇ ವಿಧಿಸಿ ವ್ಯವಸ್ಥಿತವಾಗಿ ಅವರನ್ನು ಅಂಚಿಗೆ ತಳ್ಳುತ್ತಿದೆ. ಅತಿಕಡಿಮೆ ಕೂಲಿಯ, ಹೀನಾಯ ಕೆಲಸಗಳಷ್ಟೇ ಅವರಿಗುಳಿದು, ಒಲ್ಲೆನೆಂದರೆ ಅದೂ ಇಲ್ಲದ ಹೀನಾಯ ಬಡತನದಲ್ಲಿ ಬದುಕುತ್ತಿದ್ದಾರೆ.

ಅವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು, ೬೦ ವರ್ಷಗಳಿಂದೀಚೆಗೆ ಒಳನುಸುಳಿರುವವರಿಗೆ ಪೌರತ್ವ ಕೊಡಲು ಸಾಧ್ಯವಿಲ್ಲ; ರೊಹಿಂಗ್ಯಾ ಎನ್ನುವ ಹೆಸರನ್ನು ೫೦ರ ದಶಕದ ನಂತರ ಇತ್ತೀಚೆಗೆ ಬಳಸಲಾಗುತ್ತಿದೆಯೇ ಹೊರತು ಅದು ಅವರ ಸಾಂಸ್ಕೃತಿಕ ಅಸ್ಮಿತೆ ಅಲ್ಲ; ಅವರಿಗೆ ಅಸಲಿಗೆ ಬರ್ಮಾ ನೆಲದ ಮೇಲೆ ಹೃತ್ಪೂರ್ವಕ ಪ್ರೇಮವೇ ಇಲ್ಲ ಎನ್ನುವುದು ಬರ್ಮಾ ಸರ್ಕಾರ ನಾಗರಿಕ ಹಕ್ಕು ನಿರಾಕರಣೆಗೆ ಕೊಡುವ ಕಾರಣ. ಬರ್ಮಾ ಸರ್ಕಾರದ ವ್ಯಾಖ್ಯಾನಗಳು ಬಹುಸಂಖ್ಯಾತರ ಯಾಜಮಾನ್ಯ ನೆಲೆಯವಾದರೂ ಕೆಲ ಸಂಗತಿಗಳು ಸತ್ಯವೇ ಇರಬಹುದು. ಆದರೆ ಅದು ಇಷ್ಟು ಅಮಾನವೀಯವಾಗಿ ತನ್ನ ನೆಲದಲ್ಲಿರುವವರನ್ನು ನಡೆಸಿಕೊಳ್ಳಲು ಕಾರಣವಾಗಬಾರದು.


ಅಶಿನ್ ವಿರತು ಎಂಬ ೪೬ ವರ್ಷದ ಬೌದ್ಧ ಭಿಕ್ಕು ಎರಡು ದಶಕಗಳಿಂದ ಬುದ್ಧನ ಧರ್ಮವನ್ನು ಮೂಲಭೂತವಾದಿ ವ್ಯಾಖ್ಯಾನಗಳಿಗೆ ಸರಿ ಹೊಂದಿಸಿ ‘೯೬೯ ಚಳುವಳಿ’ ಕಟ್ಟಿದ್ದಾರೆ. ಅದು ಮುಸ್ಲಿಮರು ಬೌದ್ಧರಿಗಿಂತ ಸಂಖ್ಯೆಯಲ್ಲಿ ಮಿಗಿಲಾಗುವುದನ್ನು ತಪ್ಪಿಸುವ, ಅವರನ್ನು ಶಿಕ್ಷಿಸುವುದನ್ನು ಸಮರ್ಥಿಸುವ ಮೂಲಭೂತವಾದಿ ಧಾರ್ಮಿಕ ಚಳುವಳಿ. ಆತ ಕೋಮುಗಲಭೆ ಹುಟ್ಟುಹಾಕಿದ್ದಕ್ಕಾಗಿ ೭ ವರ್ಷ ಜೈಲುವಾಸ ಅನುಭವಿಸಿ ಬಂದರೂ ಬೌದ್ಧರ ಅಸಹನೆಗೆ, ಅಸಹಿಷ್ಣುತೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ೨೦೧೨ರಲ್ಲಿ ರೊಹಿಂಗ್ಯ ಯುವಕ ಬೌದ್ಧ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಂದ ಬಳಿಕ ಕೋಮುಘರ್ಷಣೆ ಹೆಚ್ಚಾಯಿತು. ನೂರಾರು ರೊಹಿಂಗ್ಯಾ ಮನೆಗಳನ್ನು ಸುಟ್ಟು, ೨೮೦ ಜನರನ್ನು ಕೊಲ್ಲಲಾಯಿತು. ಆ ವರ್ಷ ೧,೨೦,೦೦ ಜನ ಪ್ರಾಣಭಯದಿಂದ ಬರ್ಮಾ ತೊರೆದಿದ್ದಾರೆ. ಬರ್ಮಾದಲ್ಲಿಯೇ ತಮ್ಮ ಊರು, ಮನೆಮಠ ತೊರೆದು ಒಂದೂವರೆ ಲಕ್ಷ ರೊಹಿಂಗ್ಯಾ ಜನ ನಿರಾಶ್ರಿತರ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಜೀವಕಾರುಣ್ಯ ಬೋಧಿಸಿದವನ ನೆಲದಲ್ಲಿ ಸಿಗದ ಕರುಣೆಯನ್ನು ಹುಡುಕುತ್ತ ಎಲ್ಲೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪಾಯದ ಭಯವಿದ್ದರೂ ನಿರಾಶ್ರಿತರಾಗಿ ವಿದೇಶಗಳಿಗೆ ವಲಸೆ ಹೋಗತೊಡಗಿದ್ದಾರೆ.

ಪ್ರಸ್ತುತ ೮೦೦೦ಕ್ಕೂ ಮಿಗಿಲು ರೊಹಿಂಗ್ಯಾ ಮುಸ್ಲಿಮರು ಸಣ್ಣಪುಟ್ಟ ದೊಡ್ಡ ದೋಣಿಗಳಲ್ಲಿ ಬರ್ಮಾ ತೀರದಿಂದ ಹೊರಗೆ ಸಮುದ್ರದಲ್ಲಿ ತೇಲುತ್ತಿದ್ದಾರೆ. ಕುಡಿಯುವ ನೀರೂ ಇಲ್ಲದೆ ಉಚ್ಚೆ ಕುಡಿಯುತ್ತಿದ್ದಾರೆ ಎಂದು ವಿದೇಶಿ ವರದಿಗಾರನೊಬ್ಬ ಅವರನ್ನು ಭೇಟಿಯಾಗಿ ಬಂದು ಬರೆದ. ಅಷ್ಟೇ ಅಲ್ಲ, ಬೋಟ್ ಜನರ ಅನೇಕ ಫೋಟೋ, ವೀಡಿಯೋಗಳು ಹರಿದಾಡುತ್ತ ಅದರಲ್ಲಿರುವವರ ಚಹರೆಗಳೇ ಅಪೌಷ್ಟಿಕತೆ, ಬದುಕಿನ ಪರಿಸ್ಥಿತಿ, ಭವಿಷ್ಯ ಕುರಿತ ಆತಂಕ ಎಲ್ಲವನ್ನು ಹೇಳಿಬಿಟ್ಟವು.

ಕರೆಯದೆ ಬಂದ ಈ ನೆಂಟರ ಮೇಲೆ ಯಾರಿಗೂ ಪ್ರೀತಿಯಿಲ್ಲ, ಇದ್ದರೆ ಅಷ್ಟಿಷ್ಟು ಕರುಣೆ ಮಾತ್ರ. ಫಿಲಿಪೀನ್ಸ್ ಒಂದಷ್ಟು ನಿರಾಶ್ರಿತರಿಗೆ ತನ್ನಲ್ಲಿ ಆಶ್ರಯ ಕೊಟ್ಟಿದೆ. ಬಾಂಗ್ಲಾದೇಶವು ನಿರಾಶ್ರಿತರನ್ನು ‘ಮಾನಸಿಕ ಅಸ್ವಾಸ್ಥ್ಯ’ರೆಂದು ಕರೆದು ಇನ್ನು ಒಳಬಿಟ್ಟುಕೊಳ್ಳಲು ಜಾಗವಿಲ್ಲವೆಂದು ಖಡಾಖಂಡಿತ ನಿರಾಕರಿಸಿದೆ. ಭಾರತದ ಹಲವು ನಗರಗಳಲ್ಲಿ ಅವರು ಕಂಡುಬರುತ್ತಾರೆ. ತೀರ ಇತ್ತೀಚೆಗೆ ಅಂತಾರಾಷ್ಟ್ರೀಯ ನಿರಾಶ್ರಿತರ ಸಂಸ್ಥೆಯ ಮಧ್ಯಪ್ರವೇಶದ ನಂತರ ಥೈಲ್ಯಾಂಡ್ ಹಾಗೂ ಮಲೇಷ್ಯಾ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿವೆ. ಎಲ್ಲರಿಗೂ ನಿರಾಶ್ರಿತರ ಪ್ರವಾಹ ಹರಿದು ಬಂದರೆ ಹೇಗೆ ನಿಯಂತ್ರಿಸುವುದು ಎಂಬ ಆಂತರಿಕ ಭದ್ರತೆಯ ಆತಂಕ.

ಮಲೇಷ್ಯಾದಲ್ಲಿ ಈಗಾಗಲೇ ೧,೪೦,೦೦೦ ನಿರಾಶ್ರಿತರಿದ್ದಾರೆ. ಮೇ ೨೦೧೫ರಲ್ಲಿ ಸಮುದ್ರದಲ್ಲಿ ಸರ್ಚ್ ಆಪರೇಷನ್ ನಡೆಸಿ ಸಣ್ಣಪುಟ್ಟ ದೋಣಿಗಳಲ್ಲಿ ತೇಲುತ್ತಿದ್ದವರನ್ನು ರಕ್ಷಿಸಿ ಕರೆತರಲಾಯಿತು. ಎಲ್ಲ ತೆರನ ಮಾನವ ಸಾಗಾಣಿಕೆಗೆ ಮೊದಲೇ ಕುಖ್ಯಾತವಾದ ಥೈಲ್ಯಾಂಡ್ ಈ ಬಿಕ್ಕಟ್ಟಿನಿಂದ ರೊಹಿಂಗ್ಯಾಗಳಿಗೆ ಪ್ರವೇಶ, ನಿರ್ಗಮನ, ಮಾರ್ಗ ಎಲ್ಲವು ಆಗಿ ಮಾರ್ಪಟ್ಟಿದೆ. ಬರ್ಮಾ ಸೇರಿದಂತೆ ಇವೆಲ್ಲ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಸದಸ್ಯರೇ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗಿದೆ.

ಜೀವಕಾರುಣ್ಯ ಬೋಧಿಸಿದ ಬುದ್ಧನ ಧಮ್ಮದ ಭಿಕ್ಕುಗಳೇ ಏಕೆ ರೊಹಿಂಗ್ಯಾರನ್ನು ಕತ್ತು ಹಿಡಿದು ಹೊರದಬ್ಬುವಂತಾಯಿತು? ಬರ್ಮಾ ಸಮಾಜದಲ್ಲಿ ಮುಸ್ಲಿಮರ ಮೇಲೆ ಇಷ್ಟು ಅನುಮಾನ, ಅಪನಂಬಿಕೆ ಬೆಳೆದದ್ದು ಹೇಗೆ? ವಿಶ್ವಾದ್ಯಂತ ಶಾಂತಿದೂತೆ ಎಂದೇ ಬಿಂಬಿಸಲ್ಪಟ್ಟ ಸೂಕಿ ಮಧ್ಯ ಪ್ರವೇಶಿಸದೆ ಏಕೆ ಸುಮ್ಮನಿದ್ದಾರೆ? ಸಾಮಾನ್ಯ ಮುಸ್ಲಿಮರಿಗೆ ಈ ಕಷ್ಟ ತಂದೊಡ್ಡಿದ್ದು ಯಾರು?

ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ರೊಹಿಂಗ್ಯಾ ಬಿಕ್ಕಟ್ಟಿನ ಇನ್ನೊಂದು ಮಗ್ಗುಲು ತಿಳಿಯುವುದೂ ಒಳ್ಳೆಯದೆನಿಸುತ್ತದೆ.

ಬರ್ಮಾದ ಕಾಶ್ಮೀರ ರಖಿನೆ ಪ್ರಾಂತ್ಯ

ಇದು ಒಂದು ಸಮುದಾಯದ ಭಾವನಾತ್ಮಕ/ಧಾರ್ಮಿಕ/ರಾಜತಾಂತ್ರಿಕ ಬಿಕ್ಕಟ್ಟು ಮಾತ್ರವಾಗಿರದೇ ಸಶಸ್ತ್ರ ಸಂಘರ್ಷದ ಹಿನ್ನೆಲೆಯನ್ನೂ ಹೊಂದಿದೆ.

೧೫ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ ೨೪ ವರ್ಷ ಬಂಗಾಳದಲ್ಲಿ ಕಳೆದು ನಂತರ ರಾಜ್ಯ ಪಡೆದ. ಆಗ ಅವನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ಬಂದರೆನ್ನಲಾಗುತ್ತದೆ. ೧೯, ೨೦ನೇ ಶತಮಾನದ ವಸಾಹತುಶಾಹಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಹೆಚ್ಚಿನವರು ವಲಸೆ ಬಂದರು. ಎರಡನೆಯ ಮಹಾಯುದ್ಧದ ವೇಳೆ ತಮ್ಮನ್ನು ಬೆಂಬಲಿಸಿದರೆ ಪ್ರತ್ಯೇಕ ರಾಜ್ಯ ರಚಿಸಿಕೊಡುವುದಾಗಿ ಹೇಳಿದ ಬ್ರಿಟಿಷರ ಮಾತು ನಂಬಿ ೧೯೪೨ರ ಸುಮಾರಿನಿಂದ ರೊಹಿಂಗ್ಯಾ ಮುಸ್ಲಿಮರ ಸಂಘಟನೆ ಮುಂಚೂಣಿಗೆ ಬಂದು ಶಸ್ತ್ರಸಜ್ಜಿತವಾಯಿತು. ಆದರೆ ಯುದ್ಧಾನಂತರ ೧೯೪೬ರಲ್ಲಿ ಬರ್ಮಾ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿದ್ದರೂ ತಮ್ಮ ಕನಸು ಕೈಗೂಡುವ ಲಕ್ಷಣಗಳಿಲ್ಲದೆ ಹೋದಾಗ ಬಾಂಗ್ಲಾದೇಶದ (ಪೂರ್ವ ಪಾಕಿಸ್ತಾನ)ದ ಗಡಿಭಾಗ ರಖಿನೆ ಪ್ರಾಂತ್ಯದ ಮುಸ್ಲಿಮರು ತಾವಿರುವ ಪ್ರದೇಶವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಹೋರಾಟ ಶುರುಮಾಡಿದರು. ಆ ಕುರಿತು ಮೊಹಮದ್ ಅಲಿ ಜಿನ್ನಾ ಬಳಿಯೂ ಮಾತನಾಡಿದರು. ಅಂದಿನ ಬರ್ಮಾ ಸರ್ಕಾರ ಆ ಪ್ರಾಂತ್ಯವನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಕೂಡಲೇ ಮುಜಾಹಿದೀನ್‌ಗಳು ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ೧೯೬೧ರವರೆಗೆ ಮುಜಾಹಿದೀನ್ ಬಂಡುಕೋರರು ಬಾಂಗ್ಲಾ ಜೊತೆಗೆ ವಿಲೀನವೇ ತಮ್ಮ ಗುರಿ ಎನ್ನುತ್ತಿದ್ದರು.

ಗಡಿಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಕಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದ ಅಕ್ರಮ ವಲಸಿಗರ ಪ್ರವೇಶವನ್ನು ಪ್ರೋತ್ಸಾಹಿಸಿದರು. ಬೌದ್ಧ ಆಸ್ತಿ, ವ್ಯಕ್ತಿಗಳನ್ನು ದಾಳಿಯ ಗುರಿಯನ್ನಾಗಿಸಿಕೊಂಡರು. ಇದರ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ನಂತರ ಮಿಲಿಟರಿಯು ಬೃಹತ್ ಕಾರ್ಯಾಚರಣೆ ನಡೆಸಿ ಬಂಡುಕೋರರನ್ನು ಸದೆಬಡಿಯಿತು. ೧೯೫೪ರಲ್ಲಿ ಕ್ಷೀಣಬಲರಾದ ಬಹುಪಾಲು ಮುಜಾಹಿದೀನ್ ಗುಂಪುಗಳು ಶಸ್ತ್ರ ತ್ಯಜಿಸಿ ಶಾಂತಿ ಮಾತುಕತೆಗೆ ಬಂದರೆ; ಉಳಿದ ಸಣ್ಣಪುಟ್ಟ ಬಂಡುಕೋರ ಗುಂಪುಗಳು ಗಡಿಯಲ್ಲಿ ಅಕ್ಕಿ/ಶಸ್ತ್ರಾಸ್ತ್ರ/ಮಾದಕವಸ್ತು/ಮಾದಕ ಕಳ್ಳಸಾಗಣೆಯನ್ನೆ ನೆಚ್ಚಿದರು. ವಿಪರ್ಯಾಸವೆಂದರೆ ೧೯೬೧ರವರೆಗೆ ಬರ್ಮಾದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವಿದ್ದು ಅದರಲ್ಲಿ ರೊಹಿಂಗ್ಯಾ ಮಂತ್ರಿಗಳು, ಪ್ರತಿನಿಧಿಗಳಿದ್ದರು!


೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತು. ಯುದ್ಧದ ವೇಳೆ ಗಡಿಯಲ್ಲಿ ಅಳಿದುಳಿದ ಶಸ್ತ್ರಾಸ್ತ್ರ ಸಂಗ್ರಹಿಸಿದ ಬಂಡುಕೋರರು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಕಟ್ಟಿದರು. ಅವರ ಹೊಸ ಗುಂಪುಗಳು ಕಾಣಿಸಿಕೊಂಡವು. ನಾಯಕರಾಗಿ ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಮುಂಚೂಣಿಗೆ ಬಂದರು. ೭೮ರ ವೇಳೆಗೆ ಬರ್ಮಾ ಮಿಲಿಟರಿಯು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬರ್ಮಾದ ಮುಸ್ಲಿಂ ಜನಸಮುದಾಯ ಬರ್ಮಾ ಬಾಂಗ್ಲಾ ಗಡಿಯಲ್ಲಿ ಜಮೆಯಾಗಿ ಹತ್ತಾರು ಸಾವಿರ ರೊಹಿಂಗ್ಯಾಗಳು ಬಾಂಗ್ಲಾಗೆ ವಲಸೆ ಹೋದರು. ಮಾದಕ ವ್ಯಸನ, ಅಪರಾಧ ಚಟುವಟಿಕೆಗಳು ಹೆಚ್ಚತೊಡಗಿದವು.

೧೯೮೦ರ ನಂತರ ಭಾರತ, ಬಾಂಗ್ಲಾ, ಪಾಕಿಸ್ತಾನ, ಆಫ್ಘನಿಸ್ತಾನ, ಮಲೇಷ್ಯಾದ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆತು ರೊಹಿಂಗ್ಯಾ ಸಾಲಿಡಾರಿಟಿ ಅಸೋಸಿಯೇಷನ್ ಬಲವಾಯಿತು. ಪತ್ಯೇಕ ದೇಶಕ್ಕಾಗಿ ಬೇಡಿಕೆ ಎದ್ದಿತು. ತಾಲಿಬಾನ್, ಅಲ್ ಖೈದಾ ಸೇರಿದಂತೆ ಹಲವು ಸಿರಿವಂತ ಮುಸ್ಲಿಂ ದೇಶ ಮತ್ತು ಸಂಘಟನೆಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಬರ್ಮಾದ ಬೌದ್ಧರ ಹಾಗೂ ಮಿಲಿಟರಿಯ ಕೆಂಗಣ್ಣಿಗೆ ಪದೇಪದೇ ಗುರಿಯಾದ ರೊಹಿಂಗ್ಯರು ಮತ್ತಷ್ಟು ಬೇರ್ಪಡುತ್ತ, ಅಂಚಿಗೆ ತಳ್ಳಲ್ಪಡುತ್ತ ಹೋದರು.ಅದೇವೇಳೆ ಬರ್ಮಾ ಸೈನ್ಯವು ಗಡಿದಾಟಿ ಬಂದು ಬಾಂಗ್ಲಾದೇಶದ ಬಂಡುಕೋರರ ನೆಲೆಯ ಮೇಲೆ ದಾಳಿ ಮಾಡಿತು. ರೋಹಿಂಗ್ಯಾ ಪೇಟ್ರಿಯಾಟಿಕ್ ಫ್ರಂಟ್, ರೋಹಿಂಗ್ಯಾ ನ್ಯಾಷನಲ್ ಕೌನ್ಸಿಲ್, ರೊಹಿಂಗ್ಯಾ ನ್ಯಾಷನಲ್ ಆರ್ಮಿ, ರೊಹಿಂಗ್ಯಾ ಸಾಲಿಡಾರಿಟಿ ಆರ್ಗನೈಸೇಷನ್ ಇನ್ನಿತರ ಲೆಕ್ಕವಿಲ್ಲದಷ್ಟು ಸಂಘಟನೆಗಳು ಹುಟ್ಟಿಕೊಂಡವು. ಕೋಮು ಸಂಘರ್ಷ, ಮಿಲಿಟರಿ ಜೊತೆ ಸಂಘರ್ಷ ಮುಂದುವರೆದು ೨೦೧೨ರಲ್ಲಿ ದೇಶಭ್ರಷ್ಟ ಬಂಡುಕೋರ ಗುಂಪುಗಳು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ರಹಮಾನ್ ಲ್ಯಾಂಡ್’ ಎಂದು ತಮ್ಮ ಪ್ರದೇಶವನ್ನು ಘೋಷಿಸಿಕೊಂಡಿವೆ. ಅದರ ಧ್ವಜವನ್ನು ಹಾರಿಸಿವೆ.


ಆದರೆ ರೊಹಿಂಗ್ಯಾ ಬಂಡುಕೋರರ ಸಶಸ್ತ್ರ ಸಂಘರ್ಷ ಬೌದ್ಧರೊಂದಿಗಿನ ಸೌಹಾರ್ದ ಸಂಬಂಧ ಹದಗೆಡಲು ಕಾರಣವಾಗಿ ಅವರು ದೇಶ ತೊರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಒಟ್ಟಾರೆ ಸಾಮಾನ್ಯ ರೊಹಿಂಗ್ಯಾ ಮುಸ್ಲಿಮರ ಪಾಲಿಗೆ ಬದುಕು ದುರ್ಭರವಾಗುವಂತೆ ಮಾಡಿರುವುದರಲ್ಲಿ ಬರ್ಮಾ ಸರ್ಕಾರದ ಪಾಲು ಎಷ್ಟಿದೆಯೋ ಅಷ್ಟೇ ಸಶಸ್ತ್ರ ಬಂಡಾಯದ ಕೊಡುಗೆಯೂ ಇದೆ.ಅನ್ನನೀರುಸೂರಿಲ್ಲದೆ ಸಾಗರದ ನಡುಮಧ್ಯ ಸಿಲುಕಿಕೊಂಡವರಿಗೆ; ತಾವು ಹುಟ್ಟಿ ಬೆಳೆದ ನೆಲದಲ್ಲೇ ಮಾನವ ಹಕ್ಕುಗಳಿಂದ ವಂಚಿತರಾದವರಿಗೆ ಕೂಡಲೇ ನ್ಯಾಯ ಸಿಗಬೇಕು. ಬೆಳೆಯುತ್ತಿರುವ ಸಿರಿಯಾದ ಐಎಸ್ ಉಗ್ರ ಸಂಘಟನೆಯ ಹಿನ್ನೆಲೆಯಲ್ಲಿ, ಬರ್ಮಾದ ಆಚೀಚಿನ ದೇಶಗಳೂ ಕೋಮುಆಧರಿತ ಸರ್ಕಾರಗಳನ್ನು ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಅಂತಾರಾಷ್ಟ್ರೀಯ ಸಮುದಾಯ ಚುರುಕಾಗಬೇಕಾದ ಅವಶ್ಯಕತೆಯಿದೆ.

ಆದರೆ ಬರ್ಮಾದ ರಖಿನೆ ಪ್ರಾಂತ್ಯ ಭಾರತದ ಕಾಶ್ಮೀರವಿದ್ದಂತೆ. ಇದಕ್ಕೆ ಉತ್ತರ ಅಷ್ಟು ಸುಲಭದಲ್ಲಿ ಸಿಗುವಂತಿಲ್ಲ. ಜನಸಾಮಾನ್ಯರ ಬದುಕಿಗಿಂತ ಧರ್ಮದ, ರಾಷ್ಟ್ರೀಯ ಅಸ್ಮಿತೆಯ, ಪಕ್ಷ ರಾಜಕಾರಣದ ಹಿತಾಸಕ್ತಿಗಳೇ ಮೇಲುಗೈ ಪಡೆದಿರುವುದು ಬಿಕ್ಕಟ್ಟು ಹುಟ್ಟಲು ಹಾಗೂ ಉಲ್ಬಣಿಸಲು ಕಾರಣವಾಗಿವೆ. ಅದರ ಪರಿಹಾರವನ್ನು ಬದುಕು ಕಲಿಸಿದ ಅನುಭವದಿಂದ ಜನಸಾಮಾನ್ಯರೇ ಪಡೆದುಕೊಳ್ಳಬೇಕು. ಅದಕ್ಕಿಂತ ಮುನ್ನ ಇನ್ನೆಷ್ಟು ಅಮಾಯಕ ಜನಸಾಮಾನ್ಯರು ಧರ್ಮಾಂಧರು ನಡೆಸುವ ಅವಿವೇಕದ ಧರ್ಮಯುದ್ಧಗಳಿಗೆ ಬಲಿಯಾಗಬೇಕು?!

ದೇವರೇ ಹೇಳಬೇಕು..

ಹುಲಿಹೈದರ್ ಚಲೋ - ಕರಪತ್ರಆರಂಭ ಶೂರತ್ವ: ಸಾಮಾಜಿಕ ಅಶುದ್ಧತೆ
ಸುರೇಶ ಭಟ್ ಬಾಕ್ರಬೈಲ್


ನಾವು ಏನೇ ಮಾಡಿದರೂ ಅದಕ್ಕೊಂದು ಕಾರ್ಯತತ್ಪರತೆಯ ನಿಷ್ಠೆ ಇರಬೇಕಾಗುತ್ತದೆ. ಒಂದು ದೃಷ್ಟಿಯಿಂದ ಇಂಥ ವಾಕ್ಯಗಳನ್ನು ಬರೆಯುವಾಗಲೂ; ಕ್ಲೀಷೆ ಅನ್ನಿಸಿ ಬಿಡುತ್ತದೆ. ಯಾಕೆಂದರೆ; ಎಷ್ಟೋ ಬಾರಿ ಬರೆದಿರುತ್ತೇವೆ, ಮಾತಾಡಿರುತ್ತೇವೆ. ಆದರೆ ಅದರ ಪ್ರತಿಫಲವಾಗಿ ಏನೇನು ಆಗಿರುವುದಿಲ್ಲ. ಆಗ ಇಲ್ಲಿ ಎಷ್ಟು ಮಾಡಿದರೂ ಅಷ್ಟೇ ಎಂಬ ಸಿನಿಕತನ ಆವರಿಸಿಕೊಂಡು ಬಿಡುತ್ತದೆ. ಎಲ್ಲರೂ ಇದು ಮಾಡಬೇಕು ಅದು ಮಾಡಬೇಕು ಎನ್ನುವಂಥವರೇ. ಕೆಲವು ಉದ್ಘಾಟನೆಯ ಮತ್ತು ಗುದ್ದಲಿ ಪೂಜೆಯ ಶಿಲಾಫಲಕಗಳು ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಂಡರೆ; ಅಯ್ಯೋ ಅನ್ನಿಸಿ ಬಿಡುತ್ತದೆ. ಅದಕ್ಕೆ ಬಿದ್ದ ಶ್ರಮ ಪ್ರಚಾರ ಹಾಗೂ ವೆಚ್ಚದ ಬಗ್ಗೆ ಹಿಂದಿರುಗಿಯೂ ಕೂಡ ನೋಡುವುದಿಲ್ಲ. ಬಹಳಷ್ಟು ಪ್ರಾಮಾಣಿಕ ವ್ಯಕ್ತಿಗಳು ಆರಂಭ ಶೂರತ್ವ ತೋರಿಸುತ್ತಾರೆ. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವ ಕಳಕಳಿಯನ್ನು ಹೊಂದಿರು ವುದಿಲ್ಲ. ಒಂದು ಹಂತದಲ್ಲಿ ಅದನ್ನು ಮರೆತೇ ಬಿಟ್ಟಿರುತ್ತಾರೆ. ಇದು ಯಾಕೆ ಹೀಗೆ ಆಗುತ್ತದೆ ಎಂದು ಎಚ್ಚರಿಸುವ ಮಂದಿಗೂ ನಿರ್ದಿಷ್ಟತೆ ಇರುವುದಿಲ್ಲ. ಇದರಿಂದ ಸಾಮಾಜಿಕ ಹಿನ್ನೆಲೆ ಇರುವಂಥ ನೂರಾರು ಸಂಘಟನೆಗಳು ಸತ್ತು ಹೋಗಿರುತ್ತವೆ. ಅಷ್ಟೇ ಅಲ್ಲದೆ ಪ್ರಭಾವಿ ಸರಕಾರಿ ಇಲಾಖೆಗಳೂ ಕೂಡ; ಮರೆವನ್ನು ಮೇಲೆಳೆದುಕೊಂಡು ಬಿಟ್ಟಿರುತ್ತವೆ. ಉದಾಹರಣೆಗೆ: ನಿನ್ನೆ ಮೊನ್ನೆಯ ದಿನಪತ್ರಿಕೆಗಳಲ್ಲಿ ಒಂದು ಸುದ್ದಿಯನ್ನು ಓದಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಂಕರವಾದ ಜನದಟ್ಟಣೆ ಇದೆ. ವಾಹನಗಳ ದಟ್ಟನೆಯಂತೂ ಊಹೆಗೂ ಮೀರಿರುವಂಥದ್ದು. ಜನ ನಿಯಮ ಬದ್ಧತೆ ಇಲ್ಲದೆ ರಸ್ತೆಯನ್ನು ದಾಟುತ್ತಿರುತ್ತಾರೆ. ಸಾವು ಸಂಭವಿಸುತ್ತಿರುತ್ತದೆ. 

ಬೀದಿನಾಯಿಗಳ ಸಾವಂತೂ ಹೇಳತೀರದು. ಇದರಿಂದ ವಾಹನಗಳ ಅಪಘಾತ ಸಾಮಾನ್ಯವಾದುದು. ಇದಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಇಲಾಖೆಯವರು ಒಂದು ಕಾನೂನನ್ನು ಘೋಷಿಸಿದ್ದಾರೆ. ಅಷ್ಟೇ ಅಲ್ಲ ಅದನ್ನು ಪಾಲನೆಗೂ ತಂದಿದ್ದಾರೆ. ನೂರಾರು ಜನರು ರಸ್ತೆ ದಾಟುವಾಗ ಅವರನ್ನು ಹಿಡಿದು ದಂಡ ಹಾಕಿದ್ದಾರೆ. ಕೆಲವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಒಂದು ಕ್ಷಣ ಈ ಸುದ್ದಿಯನ್ನು ಓದಿ ಗಾಬರಿಯಾಯಿತು. ಜನರಿಗೆ ಅರಿವು ಮೂಡಿಸದೆ ಇದ್ದಕ್ಕಿದ್ದಂತೆ ಶಿಕ್ಷೆ ವಿಧಿಸಲು ಹೋಗುವುದು ಅತ್ಯಂತ ಅನಾಗರಿಕವಾದದ್ದು. ಪಾದಚಾರಿಗಳು ರಸ್ತೆ ದಾಟುವುದಕ್ಕೆ ಸುಸಜ್ಜಿತವಾದ ವ್ಯವಸ್ಥೆಯನ್ನು ಅರಿವಿನ ಜೊತೆಗೆ ಮೂಡಿಸಬೇಕು. ಅದು ಬಿಟ್ಟು ಒಂದು ದಿನ ಮಾಡಿ ಮತ್ತೆ ಕುಂಭಕರ್ಣ ನಿದ್ದೆಗೆ ಮರಳಿಬಿಟ್ಟರೆ; ಯಾವ ಕಾನೂನು ಅಥವಾ ಸುಧಾರಣೆ ಜೀವಂತವಾಗಿರಲು ಸಾಧ್ಯ.?

 ನಮ್ಮಲ್ಲಿ ನೂರಾರು ವರ್ಷಗಳಿಂದ ಒಂದು ಅಮೂಲ್ಯವಾದ ಗಾದೆ ಮಾತಿದೆ: ‘ಉತ್ತರನ ಪೌರುಷ ಒಲೆಯ ಮುಂದೆ’ ಎಂದು. ಎಷ್ಟು ಮುದ್ದಾದ ಮಾತು. ಆರಂಭ ಶೂರತ್ವ ಅಥವಾ ಪೌರುಷತ್ವವನ್ನು ಪ್ರದರ್ಶಿಸುವುದರಲ್ಲಿ ನಿಸ್ಸೀಮರಾಗಿರುತ್ತೇವೆ. ಇದಕ್ಕೆ ಪೂರಕವಾಗಿ ಒಂದು ಅನುಭವವನ್ನು ದಾಖಲಿಸಲು ಪ್ರಯತ್ನಿಸುವೆ. ಹಿಂದೆಯೂ ಬೇರೆ ಬೇರೆ ಸಂದರ್ಭದಲ್ಲಿ ಉಲ್ಲೇಖಿಸಿರಬಹುದು. ಆದರೂ ಇಲ್ಲಿ ಪ್ರಸ್ತುತಯೆನ್ನುವ ಕಾರಣಕ್ಕಾಗಿ ಹೇಳಬೇಕಾಗಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಚೀನಾ ಸ್ನೇಹಕೂಟದ ಆಹ್ವಾನದ ಪ್ರವಾಸವನ್ನು ಮುಗಿಸಿಕೊಂಡು ಥಾಯ್ಲೆಂಡ್‌ಗೆ ಬಂದಿದ್ದೆ. ಮನಸ್ಸಿನ ತುಂಬ ಬುದ್ಧನ ವೈವಿಧ್ಯಮಯವಾದ ಪ್ರತಿಮೆಗಳನ್ನು ತುಂಬಿಕೊಂಡಿದ್ದೆ. ಇಂಥ ಮನಸ್ಥಿತಿಯಲ್ಲಿಯೇ ಬ್ಯಾಂಕಾಕ್‌ನಲ್ಲಿ ರಸ್ತೆ ದಾಟುವಾಗ ಟ್ರಾಫಿಕ್ ಪೊಲೀಸಿನವರು ನನ್ನನ್ನು ಒಂದು ಮೂಲೆಯಲ್ಲಿ ನಿಂತಿದ್ದ ಇನ್‌ಸ್ಪೆಕ್ಟರ್ ಮುಂದೆ ನಿಲ್ಲಿಸಿದರು. ಅವರು ಹತ್ತು ಬಾಟ್ (ಅಲ್ಲಿಯ ಕರೆನ್ಸಿಯ ಹೆಸರು) ದಂಡ ವಿಧಿಸಿದರು. ನಾನು ಏನೋ ಸಬೂಬು ಹೇಳಲು ಹೋದೆ. ಮತ್ತೆ ಹತ್ತು ಬಾಟ್ ದಂಡ ಜಾಸ್ತಿ ಮಾಡಿದರು. ಹಾಗೆಯೇ ಮತ್ತೆ ಮಾತಾಡಲು ಹೋಗಿದ್ದಕ್ಕೆ ಹತ್ತು ಬಾಟ್ ಜಾಸ್ತಿಯಾಯಿತು. ಕೊನೆಗೆ ಆತ ಹೇಳಿದ: ನೀವು ಮಾತಾಡುತ್ತ ಹೋದಷ್ಟು ದಂಡ ಜಾಸ್ತಿಯಾಗುತ್ತದೆ. ಕಾನೂನು ಪಾಲಿಸದೆ ಸಬೂಬು ಹೇಳಲು ಇಲ್ಲಿ ಅವಕಾಶವಿಲ್ಲ. ಆದರೆ ನಾನು ಒಲ್ಲದ ಮನಸ್ಸಿನಿಂದ ದಂಡ ತೆತ್ತು ಹೊರಗೆ ಬಂದೆ. ಆದರೆ ಇಂದು ಆತ್ಮೀಯವಾಗಿ ನೆನಪುಮಾಡಿಕೊಂಡು ಖುಷಿಯನ್ನು ಅನುಭವಿಸುತ್ತೇನೆ. ಯಾಕೆಂದರೆ ಶಿಸ್ತು ಮತ್ತು ಕಾನೂನು ಪರಿಪಾಲನೆಯಲ್ಲಿ ಎಷ್ಟು ನಿರ್ದಾಕ್ಷೀಣ್ಯತೆಯನ್ನು ವಹಿಸಿರುತ್ತಾರೆ ಎಂದು. ನಮ್ಮಲ್ಲಿ ಕಾನೂನು ಮುರಿಯುವುದಕ್ಕೆ ನೂರಾರು ಅಡ್ಡದಾರಿಗಳು. ಆದರೆ ಟ್ರಾಫಿಕ್ ನಿಯಂತ್ರಣದ ಕೆಲಸ ಅತ್ಯಂತ ಹಿಂಸಾದಾಯಕವಾದದ್ದು. ಪ್ರತಿಕ್ಷಣದಲ್ಲೂ ತಾಳ್ಮೆಯನ್ನು ಪರೀಕ್ಷಿಸುವಂಥದ್ದು. ಯಾರಾದರೂ ಅಡ್ಡಾದಿಡ್ಡಿ ಗಾಡಿ ಓಡಿಸುತ್ತ ರಸ್ತೆ ನಿಯಮಗಳನ್ನು ಮೀರಿ ನಡೆದಾಗ ಟ್ರಾಫಿಕ್ ಕಾನ್‌ಸ್ಟೇಬಲ್ ಹಿಡಿದರೆ; ಯಾರ್ಯಾರದೋ ಪ್ರಭಾವ ತರುವರು ಪುಂಡಾಟಿಕೆಯಿಂದ. ಜೊತೆಗೆ ಹಿಂಸೆಯನ್ನು ಪ್ರದರ್ಶಿಸುವರು. ಈ ದೃಷ್ಟಿಯಿಂದ ಕೆಲವು ನಿಷ್ಠಾವಂತ ಕಾನ್‌ಸ್ಟೇಬಲ್‌ಗಳು ಕೊಲೆಯೂ ಆಗಿದ್ದಾರೆ. ಈ ಎಲ್ಲದರ ಮಧ್ಯೆ ‘ಕಟ್ಟುನಿಟ್ಟು’ ಎಂಬುದು ಎಲ್ಲ ಹಂತಗಳಲ್ಲೂ ಚಲಾವಣೆಯ ವಿಷಯವಾಗಬೇಕು. 


ಆಗ ನಿಧಾನವಾಗಿ ಪ್ರಭಾವ ಕಡಿಮೆಯಾಗುತ್ತದೆ. ಸಾರ್ವಜನಿಕರೇ ಶಿಸ್ತಿನ ಅಧಿಕಾರಿಯ ಬೆಂಬಲಕ್ಕೆ ನಿಲ್ಲುವರು. ಯಾಕೆಂದರೆ; ನೈತಿಕವಾಗಿ ನಮ್ಮ ಸಮಾಜ ಅಷ್ಟೊಂದು ಅನೈತಿಕವಾಗಿಲ್ಲ. ಪ್ರಾಮಾಣಿಕತೆ, ಸಜ್ಜನಿಕೆ ಹಾಗೂ ಸರಳತೆಗೆ ಬೆಲೆ ಇದ್ದೇ ಇದೆ.
 ಕಳೆದ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಬಾರದು. ಹಾಗೆಯೇ ಬೇರೆಯ ರೀತಿಯಲ್ಲಿ ಗಲೀಜು ಮಾಡಬಾರದು. ಮಾಡಿದರೆ ಐನೂರು ರೂ. ದಂಡ ಮತ್ತು ಬೇರೆ ರೀತಿಯ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಆಜ್ಞೆ ಮಾಡಿತು ಸರಕಾರ. ಅದರ ಬಗ್ಗೆ ನನ್ನ ಅರಿವಿನ ಮಟ್ಟಿಗೆ ಯಾವ ವಿಧವಾದ ಸುದ್ದಿಯೂ ಇಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆಯಾಗುತ್ತಲೇ ಇರುತ್ತವೆ. ಕೆಲವು ಕಡೆ ದೇವಸ್ಥಾನಗಳ ಬಳಿ ಹೂವು ಹಣ್ಣು ಮಾರುವ ಕಡೆಯೂ ಗಬ್ಬುನಾಥ ಮೂಗಿಗೆ ಬಡಿಯುತ್ತಿರುತ್ತದೆ. ಆರಾಮವಾಗಿ ಉಸಿರಾಡಲು ಸಹ ಆಗುವುದಿಲ್ಲ. ಅದರಲ್ಲೂ ಬೆಂಗಳೂರಿನ ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ರಸೆಲ್‌ಮಾರ್ಕೆಟ್ ಮುಂತಾದ ಕಡೆ ಗಲೀಜಿನ ನಡುವೆಯೇ ತರಕಾರಿ ಸೊಪ್ಪು ಮಾರುತ್ತಿರುತ್ತಾರೆ. ಅದು ಮಾರುವವರ ತಪ್ಪಲ್ಲ. ವ್ಯವಸ್ಥೆಯನ್ನು ಸರಿಪಡಿಸಿಕೊಡುವವರ ಜವಾಬ್ದಾರಿ ಅದು. ಇನ್ನು ಬೆಂಗಳೂರಿನ ಕಸದ ಬಗ್ಗೆ ಪ್ರಸ್ತಾಪಿಸುವುದೇ ಬೇಡ. ಆದರೂ ಪ್ರಸ್ತಾಪಿಸಲೇ ಬೇಕಾಗುತ್ತದೆ. ಈ ಲೇಖನ ಬರೆಯುವ ಸಮಯಕ್ಕೆ ಪತ್ರಿಕೆಗಳಲ್ಲಿ ಒಂದು ದೊಡ್ಡ ಸುದ್ದಿಯನ್ನು ನೋಡಿದೆ. ಬೆಂಗಳೂರಿನ ದೊಡ್ಡಬಳ್ಳಾಪುರ ಪ್ರದೇಶದ ಮೂರು ಹಳ್ಳಿಯ ಹೆಣ್ಣು ಮಕ್ಕಳು ಹಾಗೂ ರೈತರು ಪೊರಕೆ ಮತ್ತು ಇತರೆ ಪ್ರತಿಭಟನೆಯ ವಸ್ತುಗಳ ಮೂಲಕ ಇನ್ನೂರು ಕಸದ ಲಾರಿಗಳನ್ನು ತಡೆದು ನಿಲ್ಲಿಸಿದ್ದಾರೆ. ಈ ಕಸದ ಕಾರಣಕ್ಕಾಗಿ ಯಾರೂ ಇಲ್ಲಿ ಬದುಕಲು ಆಗುತ್ತಿಲ್ಲವೆಂದು. ಒಂದು ಪುಟ್ಟ ಪ್ರಶ್ನೆ ಇಲ್ಲಿ: ಈ ಸಮಸ್ಯೆ ಯಾವಾಗಲೂ ಯಾಕೆ ಮುಖಾಮುಖಿಯಾಗುತ್ತಿರುತ್ತದೆ. ಇದಕ್ಕೆ ಶಾಶ್ವತ ಪರಿಹಾರವೆಂಬುದು ಇಲ್ಲವೇ? ಅನ್ನಿಸುತ್ತದೆ.


ಎರಡು ವರ್ಷಗಳ ಹಿಂದೆ ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಸುತ್ತಾಡುವಾಗ; ಇಂಥ ಸಮಸ್ಯೆಯು ಎಲ್ಲಿಯೂ ಗೋಚರಿಸಲಿಲ್ಲ. ಎಲ್ಲಿ ನೋಡಿದರೂ ಹಸಿರಿನಿಂದ ನಳನಳಿಸುವ ಪ್ರದೇಶಗಳು. ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ರಸ್ತೆ ಮಗ್ಗಲುಗಳಲ್ಲಿ ಮೂತ್ರ ವಿಸರ್ಜನೆಗೆ ಎಲ್ಲಿಯೂ ಅವಕಾಶವಿಲ್ಲ. ಅಷ್ಟರಮಟ್ಟಿಗೆ ಸ್ವಚ್ಛತೆ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಮಾತಾಡದೆ ಅದನ್ನು ಪಾಲಿಸುತ್ತಿರುತ್ತಾರೆ. ಅವರೂ ಮನುಷ್ಯರೇ ನಾವೂ ಮನುಷ್ಯರೆ; ಆದರೆ ಯಾಕೆ ನಿಯಮಗಳನ್ನು ಪಾಲಿಸಲು ಆಗುವುದಿಲ್ಲ? ಅದು ಅಷ್ಟೊಂದು ಕ್ಲಿಷ್ಟಕರವೇ ಎಂದು ಎಂಥ ಸಾಮಾನ್ಯ ಮನುಷ್ಯನಿಗೂ ಅನ್ನಿಸುತ್ತಿರುತ್ತದೆ. ಆಡಳಿತದ ಚುಕ್ಕಾಣಿ ಹಿಡಿದಿಟ್ಟುಕೊಂಡಿರುವಂಥವರು ಸಣ್ಣಪ್ರಮಾಣದ ನೈತಿಕತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ ಸಾಕು. ಆಗ ಅವರಿಗೆ ಪಾಪಪ್ರಜ್ಞೆ ಕಾಡಲು ಸಾಧ್ಯ ಮತ್ತು ಕಡಿಮೆ ಪ್ರಮಾಣದಲ್ಲಿ ಭ್ರಷ್ಟರಾಗಲು ಪ್ರಯತ್ನಿಸುವರು. ಹಾಗೆಯೇ ತಾವು ಮಾಡುವ ಮತ್ತು ಮಾಡಿಸುವ ಕೆಲಸಗಳಿಗೆ ಸ್ಥಿರತೆ ಎಂಬುದು ಇರುತ್ತದೆ. ಮತ್ತೊಂದು ಮುಖ್ಯ ವಿಷಯ: ಪ್ರಾಮಾಣಿಕತೆ ಮತ್ತು ದಕ್ಷತೆ ಎಂಬುದು ಮಾನಸಿಕ ಸುಖ ಎಂಬುದನ್ನು ಅರಿಯಬೇಕು. ಸಿಕ್ಕಾಪಟ್ಟೆ ಭ್ರಷ್ಟರಾಗಿ ಎಲ್ಲೆಲ್ಲೋ ಭ್ರಷ್ಟ ಸಂಪತ್ತನ್ನು ಮುಚ್ಚಿಡುವುದರಲ್ಲಿ ಯಾವ ರೀತಿಯ ನೆಮ್ಮದಿಯನ್ನು ಕಾಣಲು ಸಾಧ್ಯ? ಹೀಗೆ ನಾನೇ ಬರೆಯುವಾಗ; ಎಲ್ಲ ವಾಕ್ಯಗಳೂ ಜೀವರಹಿತ ಎಂಬುದು ಧುತ್ತನೆ ಮುಂದೆ ನಿಲ್ಲುವುದು. ಆದರೂ ಬರೆಯಲೇಬೇಕಾಗಿದೆ. ಒಂದು ಉತ್ತಮ ಕೆಲಸವೆಂದರೆ; ಈಗಲೂ ನಮ್ಮ ಜನ ಸಂಭ್ರಮದಿಂದ ಭಾಗವಹಿಸುವರು. ನಾಲ್ಕು ಕಾಸು ಪ್ರೀತಿಯಿಂದ ಕಾಣ್ಕೆಯಾಗಿ ಹೋರಾಟಕ್ಕೆ ಅಥವಾ ಸಂಘಟನೆಗೆ ಕೊಟ್ಟು ಹೋಗುವರು. ಆದ್ದರಿಂದಲೇ ಜನಪರ ಸಂಘಸಂಸ್ಥೆಗಳು ಜೀವ ಉಳಿಸಿಕೊಂಡಿರುವುದು. ಎಷ್ಟೇ ಕಷ್ಟಕಾರ್ಪಣ್ಯ ಗಳಿದ್ದರೂ; ಸರಳವಾದ ನೆಮ್ಮದಿಗೆ ಜನ ತಹತಹಿಸುವರು.


 ಮೊನ್ನೆ ಯಾವುದೋ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವಾಗ; ಆಟೋದಲ್ಲಿ ಹೊಗೆ, ಶಬ್ದ ಇತರೆ ರಂಪಾಟಗಳನ್ನು ಸಿಗ್ನಲ್ ಬಳಿ ಇಪ್ಪತ್ತು ನಿಮಿಷ ಸುಮ್ಮನೆ ಅನುಭವಿಸಬೇಕಾಯಿತು. ಅದರಲ್ಲೂ ಗಾಡಿಗಳು ಮುಂದಕ್ಕೆ ಚಲಿಸದಿದ್ದರೂ ಒಂದೇ ಸಮನೆ ನೂರಾರು ವಾಹನಗಳು ಕ್ರೂರವಾಗಿ ಹಾರ್ನ್ ಮಾಡುತ್ತಿರುತ್ತವೆ. ಆಗ ಇದೆಂಥ ಆಧುನಿಕ ನರಕ ಅನ್ನಿಸಿಬಿಡುತ್ತದೆ. ಆಗ ಆಟೋ ಡ್ರೈವರ್ ಒಂದು ಅಮೂಲ್ಯ ಮಾತನ್ನು ನನಗೆ ಹೇಳಿದರು: ‘‘ನೋಡಿ, ನಾವಾಗಿಯೇ ನಾವು ಸಾಯಬಾರದು ಎಂದು ಉಸಿರು ಬಿಗಿ ಹಿಡಿದು ಬದುಕುತ್ತಿರುತ್ತೇವೆ

ಸುದ್ದಿ ತುಣುಕುಗಳು: ದಲಿತನ ಸಾವಿಗೆ ನ್ಯಾಯ ಕೇಳಿ ಪ್ರತಿಭಟನೆ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಘಂಟಿಚೋರ ಸಮುದಾಯಕ್ಕೆ ಸೇರಿದ ದಲಿತ ಜನಗಳ ಮೇಲೆ ಸವರ್ಣಿ ಜನಗಳಿಂದ ಹಲ್ಲೆಯಾಯಿತು. ಮುಖ್ಯವಾಗಿ ಈ  ಹಲ್ಲೆ ದಿಂಗಾಲೇಶ್ವರ ಸ್ವಾಮಿ ಮಾಡುವ ಗುಂಡಾಗಿರಿ, ಅನ್ಯಾಯವನ್ನು ಪ್ರತಿಭಟಿಸಿದ್ದಕ್ಕಾಗಿ ನಡೆದಿದೆ. ಪಂಚಾಯತ ಚುನಾವಣೆಯನ್ನು ನೆಪವಾಗಿ ಬಳಸಿಕೊಂಡ ಸ್ವಾಮಿ  ಸವರ್ಣಿಯ ಜನಗಳನ್ನು ಬಳಸಿಕೊಂಡು ತಾನೆ ಮುಂದೆ ನಿಂತು ಘಂಟಿಚೋರ ದಲಿತ ಸಮುದಾಯದ ಹೆಣ್ಣು ಗಂಡು ಮಕ್ಕಳುಮರಿ ಮುಖ ನೋಡದೆ ಮರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಹಂತಪ್ಪ ಗುಡಗೇರಿ ಗುರುವಾರ ಸಾವಿಗೀಡಾದ. ಈ ಸಾವಿಗೆ ನ್ಯಾಯ ಕೇಳಿ ಮತ್ತು ಪ್ರಕರಣದ ಪ್ರಮುಖ ಆರೋಪಿ ದಿಂಗಾಲೇಶ್ವರ ಸ್ವಾಮಿ ಬಂಧನಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಶವವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು. ಈ ಘೋರ ಅನ್ಯಾಯದ ಪ್ರತಿಭಟನೆ ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಪ್ರಕಟವಾಯಿತು. ಪ್ರತಿಭಟನೆ ಮುಂದುವರೆದಿದೆ. ಜೂನ 25 ರಂದು ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಪ್ರತಿಭಟನೆಯ ಸುದ್ದಿಗಳು ದಿನಪತ್ರಿಕೆಯಲ್ಲಿ ಬಂದದ್ದು ಹೀಗೆ.19.06.15
Saturday, June 13, 2015

ಕನಕ ಸಾಹಿತ್ಯ - ಮಹಿಳಾ ಪಾತ್ರಗಳು: ಹೆಣ್ತನದ ಕಣ್ಣಲ್ಲಿ..ಡಾ ಎಚ್ ಎಸ್ ಅನುಪಮಾ


೧೬ನೇ ಶತಮಾನದ ವೈಷ್ಣವ ಪಂಥದ ಭಕ್ತ ಕವಿ ಕನಕರ ವ್ಯಕ್ತಿತ್ವ ಮತ್ತು ಸಾಹಿತ್ಯ ಇತ್ತೀಚೆಗೆ ಬಹುಚರ್ಚಿತವಾಗುತ್ತಿದೆ. ಅಂತರಂಗ-ಬಹಿರಂಗವೆನ್ನದೆ ಮನುಷ್ಯ ಜೀವಿಯನ್ನು ಬಾಧೆಗೊಳಪಡಿಸುವ ಸಕಲ ವಿಷಯಗಳನ್ನೂ ಬಹುಸೂಕ್ಷ್ಮವಾಗಿ ವಿಮರ್ಶಿಸಿದ ಕನಕರು ವ್ಯವಸ್ಥೆಯ ತಾರತಮ್ಯ, ಜಾತಿವ್ಯವಸ್ಥೆಯ ಸಿಂಧುತ್ವವನ್ನು ನೇರವಾಗಿ, ಪರೋಕ್ಷವಾಗಿ ಇಷ್ಟದೈವದೆದುರು ದೂರಿದರು. ೧೧-೧೨ನೇ ಶತಮಾನದ ವಚನಕಾರರು ತಮ್ಮ ವಚನಗಳಲ್ಲಿ ತಾರತಮ್ಯವನ್ನು ನೇರವಾಗಿ ಹೇಳಿದ್ದರೆ; ಮೂರ‍್ನಾಲ್ಕು ಶತಮಾನ ನಂತರ ಬಂದ ಕನಕರು ಹೇಳಲೇಬೇಕಾದ ಸತ್ಯಗಳನ್ನು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಕೀರ್ತನೆಗಳಾಗಿ ಹಾಡಿದರು. ಜನಪದದ ಲಯ-ಮಟ್ಟು-ಪದ-ಪರಿಭಾಷೆಗಳನ್ನು ತಮ್ಮ ಕೀರ್ತನೆ ಮತ್ತು ಕಾವ್ಯಗಳಲ್ಲಿ ಯಶಸ್ವಿಯಾಗಿ ಅಡಕಗೊಳಿಸಿದ ಕನಕ ಸಾಹಿತ್ಯ ಒಂದೇಟಿಗೆ ಆಪ್ತವೂ, ಅರ್ಥಪೂರ್ಣವೂ ಎನಿಸಿಬಿಡುತ್ತದೆ. ಎಂದೇ ಕವಿಯಾಗಿ, ಕೀರ್ತನಕಾರರಾಗಿ ಅವರ ರಚನೆಗಳು ಇಂದಿಗೂ ಜನಪ್ರಿಯವಾಗಿವೆ.

ಉಡುಪಿಯ ಕೃಷ್ಣನ ಮೂರ್ತಿಯನ್ನೇ ತಿರುಗಿಸಿದ ಭಕ್ತಿ ಮಹಿಮೆಯ ಜನಜನಿತ ಕತೆಯನ್ನು ಇಂದು ಹೊಸ ಬೆಳಕಿನಲ್ಲಿ ನೋಡಬೇಕಾದ ರಾಜಕೀಯ ಅನಿವಾರ್ಯತೆಯಿರುವ ಹೊತ್ತಿನಲ್ಲಿ ಕನಕರ ಕಾಲ, ಆ ಕಾಲದ ಸಾಮಾಜಿಕ ವಾತಾವರಣ, ಅವರ ಜೀವನಚರಿತ್ರೆ, ಕೃತಿಗಳನ್ನೆಲ್ಲ ಮತ್ತೆ ಅವಲೋಕಿಸಿ ಪುನರ್‌ರೂಪಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಅವರ ಮಾನವಪರತೆ, ಮಹಿಳಾಪರತೆ ವಿಶ್ಲೇಷಣೆಗೊಳಗಾಗುತ್ತಿವೆ.

ಕನಕರಷ್ಟೇ ಅಲ್ಲ, ಇವತ್ತು ನಮ್ಮೆಲ್ಲ ಪುರಾತನರು, ಅವರ ಕಲೆ-ಸಾಹಿತ್ಯ-ತತ್ವಗಳು ಜೀವಪರವಾಗಿವೆ ಎನ್ನಲು ಎರಡು ಅಗ್ನಿಪರೀಕ್ಷೆಗಳನ್ನು ಹಾದು ಬರಬೇಕಾಗಿದೆ:


 • ಅವರು/ಅವರ ಸಂವೇದನೆಗಳು ಶೋಷಿತಪರ, ಅಧಿಕಾರಹೀನರ ಪರವಾಗಿವೆಯೇ? 
 • ಅವು ಲಿಂಗ ಅಸಮಾನತೆ, ತಾರತಮ್ಯ ಗುರುತಿಸುವ ಲಿಂಗಸೂಕ್ಷ್ಮತೆಯನ್ನು ಹೊಂದಿವೆಯೇ? 


ಕನಕ ಸಾಹಿತ್ಯವನ್ನೂ ಈ ಎರಡು ನೆಲೆಗಳಿಂದ ನೋಡುವ ಅವಶ್ಯಕತೆಯಿದೆ.

ನ್ಯಾಯಸೂಕ್ಷ್ಮದ, ಸಾಮಾಜಿಕ ನ್ಯಾಯದ ಪ್ರಶ್ನೆಗಳನೆತ್ತುವ ಮೂಲಕ ಮೊದಲ ಅಗ್ನಿಪರೀಕ್ಷೆಯನ್ನು ಕನಕರು ಹಾದು ಬಂದಿದ್ದಾರೆ. ವೈಷ್ಣವ ಪಂಥ ಮತ್ತು ದಾಸಕೂಟ/ವ್ಯಾಸಕೂಟದ ಪ್ರಭಾವದಿಂದ ಅವರ ಚಿಂತನೆಗಳಿಗೆ ಕೊಂಚ ವೈದಿಕ ಮಿತಿ ಆವರಿಸಿಕೊಂಡಿದ್ದರೂ, ಜಾತಿ ಅಸಮಾನತೆಯ ವಿರುದ್ಧ ಉಳಿದವರಿಗಿಂತ ಭಿನ್ನವಾಗಿ, ಸ್ಫುಟವಾಗಿ ಆಡಿದ್ದಾರೆ. ಸಮಾಜದ ತಾರತಮ್ಯಗಳನ್ನು ಸೃಜನಶೀಲವಾಗಿ ರಾಮಧಾನ್ಯಚರಿತೆಯಲ್ಲಿ ಮಂಡಿಸಿದ್ದಾರೆ. ವಂಚಿತನಿಗೆ ಬೇಕಿರುವುದು ಕಾಲ ಮತ್ತು ಅವಕಾಶವೇ ಹೊರತು ಪಕ್ಷಪಾತವಲ್ಲ ಎಂದು ರಾಗಿಯ ಬಾಯಲ್ಲೇ ನುಡಿಸಿದ್ದಾರೆ.

ಆದರೆ ಇದೇ ಮಾನವಪರತೆ ಲಿಂಗಸೂಕ್ಷ್ಮ ವಿಷಯಗಳ ಬಗೆಗೆ ಕಾಣುವುದಿಲ್ಲ. ಕನಕರಲ್ಲಷ್ಟೇ ಅಲ್ಲ, ಸಾಮಾಜಿಕ ತಾರತಮ್ಯ ವಿರೋಧಿಸಿ, ಮೇಲ್ಜಾತಿ ಪಾರಮ್ಯವನ್ನು ಪ್ರಶ್ನಿಸಿ, ಜಾತಿನಾಶ ಪ್ರತಿಪಾದಿಸುವ ಬಹುತೇಕ ಪುರಾತನ ಹಾಗೂ ಸಮಕಾಲೀನ ಚೇತನಗಳು ಲಿಂಗತಾರತಮ್ಯ ವಿಷಯಕ್ಕೆ ಬಂದರೆ ಅದರ ವಿರುದ್ಧ ದನಿಯೆತ್ತುವುದಿರಲಿ, ಗ್ರಹಿಸಿರುವುದಕ್ಕೆ ಪುರಾವೆ ಸಿಗುವುದೂ ಕಷ್ಟವಾಗಿದೆ. ಏಕೆಂದರೆ ಪುರುಷಾಧಿಕಾರವನ್ನೆಲ್ಲ ಅನುಭವಿಸುವ ಗಂಡಿಗೆ ಲಿಂಗತಾರತಮ್ಯ ಅನುಭವಕ್ಕೆ ಬರುವುದು ಸುಲಭವಲ್ಲ. ಆ ದೃಷ್ಟಿಯಿಂದ ಚಳುವಳಿಯೊಂದನ್ನು ರೂಪಿಸುತ್ತಲೇ ಅದರಲ್ಲಿ ಎಲ್ಲ ಸಮುದಾಯದ ಮಹಿಳೆಯರನ್ನೊಳಗೊಂಡ ಬಸವಣ್ಣ, ಜ್ಯೋತಿಬಾ ಫುಲೆ ಮತ್ತು ಅಂಬೇಡ್ಕರ್ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ನಂತರ ಬುದ್ಧ, ಅಲ್ಲಮ, ರಾಮಕೃಷ್ಣ ಪರಮಹಂಸ ಇನ್ನಿತರರು ಕಣ್ಣೆದುರು ಸುಳಿಯುತ್ತಾರೆ.

ಇವರ ನಡುವೆ ಕನಕರು ಎಲ್ಲಿದ್ದಾರೆ? ನಮ್ಮೆದುರಿರುವ ಕನಕರ ಎರಡು ರೂಪಗಳಾದ ಭಕ್ತ ಕನಕ ಮತ್ತು ಕವಿ ಕನಕರು ಮಹಿಳಾ ವ್ಯಕ್ತಿತ್ವ ಪ್ರತಿಪಾದನೆಯನ್ನು ಹೇಗೆ ಮಾಡಿದ್ದಾರೆ? ಎಂದು ಪರಿಶೀಲಿಸುವುದು ಈ ಬರಹದ ಉದ್ದೇಶವಾಗಿದೆ.

೧೬ನೇ ಶತಮಾನದಲ್ಲಿ ಬದುಕಿದ ಕನಕರು ೨೧ನೇ ಶತಮಾನದ ಸ್ತ್ರೀಪರ ಧೋರಣೆಗಳನ್ನು ಹೊಂದಿರಬೇಕೆಂದು ಬಯಸುವುದು ಸರಿಯಲ್ಲ. ಅಥವಾ ಇವತ್ತಿನ ಸ್ತ್ರೀಕೇಂದ್ರಿತ ದೃಷ್ಟಿಕೋನದಿಂದ ಅವರನ್ನು, ಅವರ ಸಾಹಿತ್ಯವನ್ನು ಅಳೆಯುವುದೂ ಸರಿಯಲ್ಲ. ಆದರೆ ೨೧ನೇ ಶತಮಾನದಲ್ಲಿದ್ದರೂ ಹೆಜ್ಜೆಹೆಜ್ಜೆಗೂ ಲಿಂಗತಾರತಮ್ಯ ಅನುಭವಿಸುವಾಗ ಅದನ್ನು ಗುರುತಿಸುವ, ಮೂಲ ಎಲ್ಲಿದೆಯೆಂದು ಶೋಧಿಸುವ ನಾವು ಕನಕರನ್ನು ಪುರಾತನರೆಂಬ ಭಕ್ತಿಭಾವದಲ್ಲಷ್ಟೇ ನೋಡಬಾರದು. ಅಂದಿಗೆ ಕುಲಕುಲಕುಲವೆಂದು ಹೊಡೆದಾಡದಿರಿ ಎಂದು ಅಪರೂಪದ ತತ್ವ ಬೋಧಿಸಿದ ಕನಕರು ಹೆಣ್ಣನ್ನು ಹೇಗೆ ಪರಿಭಾವಿಸಿದ್ದರು ಎಂದು ಚಿಕಿತ್ಸಕ ದೃಷ್ಟಿಯಿಂದಲೇ ನೋಡಬೇಕು.

ಇದು ಸ್ತ್ರೀವಾದಿ ದೃಷ್ಟಿಕೋನ ಎಂದು ಒಂದು ‘ವಾದ’ಕ್ಕೆ ಸೀಮಿತಗೊಳ್ಳದಿರಲಿ. ಇದು ಹೆಣ್ತನದ ದೃಷ್ಟಿಕೋನ, ಜೀವಪರ ದೃಷ್ಟಿಕೋನ. ಹೆಣ್ತನ ಎನ್ನುವುದು ಜೈವಿಕ ಸತ್ಯವಷ್ಟೇ ಅಲ್ಲ, ತಿಳಿವಿನ ಸತ್ಯವೂ ಹೌದು. ಹೆಣ್ತನ ಎಂದರೆ ಪುರುಷ ದ್ವೇಷವಲ್ಲ. ಪುರುಷ ಪರಮಾಧಿಕಾರದ ಬದಲು ಮಹಿಳಾ ಪರಮಾಧಿಕಾರ ಸ್ಥಾಪಿಸಬಯಸುವ ಮನಸ್ಥಿತಿಯೂ ಅಲ್ಲ. ಹೆಣ್ತನವು ಗಂಡನ್ನು ಸದಾ ಬಯಸುತ್ತದೆ: ಗಂಡು ಇರುತ್ತಾನೆ, ಇರಬೇಕು ಜೊತೆಯಾಗಿ - ಸಖನಾಗಿ, ಮಗನಾಗಿ, ತಂದೆಯಾಗಿ, ಸಮನಾಗಿ; ಯಜಮಾನನಾಗಿ ಅಲ್ಲ. ಅಲ್ಲಿ ಗಂಡೆನ್ನುವುದು ಹೆಮ್ಮೆಯ ವಿಷಯವಲ್ಲ. ಹೆಣ್ಣೆನ್ನುವುದು ಅವಮಾನದ ವಿಷಯವೂ ಅಲ್ಲ.

***

ಜನಪದ ಸಂವೇದನೆಯಿರಲಿ, ವೇದಕಾಲದ ಮಾದರಿಯಿರಲಿ, ಇವತ್ತಿನ ಮಾನವ ಹಕ್ಕು ಪ್ರತಿಪಾದನೆಯ ಸಮಾಜವಿರಲಿ - ಹೆಣ್ಣನ್ನು, ಹೆಣ್ಣು ವ್ಯಕ್ತಿತ್ವವನ್ನು ಗ್ರಹಿಸುವ ಎರಡು ಮುಖ್ಯ ಮಾದರಿಯನ್ನು ಡಿ. ಆರ್. ನಾಗರಾಜ್ ಸೇರಿದಂತೆ ಬಹುಪಾಲು ವಿಮರ್ಶಕರು ಗುರುತಿಸಿದ್ದಾರೆ.

ಮೊದಲನೆಯದು ವೇದಕಾಲದ ಗೃಹದೇವತೆಯ ಮಾದರಿ ಅಥವಾ ಜನಪದರ ಗರತಿಯ ಮಾದರಿ ಅಥವಾ ಆಧುನಿಕ ಸಮಾಜದ ಫೀಲ್‌ಗುಡ್ ಹೌಸ್‌ವೈಫ್ ಮಾದರಿ. ಈ ಮಾದರಿಯ ಹೆಣ್ಣು ತನಗೆ ದತ್ತವಾಗಿರುವ ಪಾತ್ರವನ್ನು ಸಂಪೂರ್ಣ ಒಪ್ಪಿ ನಡೆಯುತ್ತಾಳೆ. ತನ್ನ ಪಾತ್ರವನ್ನು ತನ್ಮಯಳಾಗಿ ನಿಭಾಯಿಸುತ್ತಾಳೆ. ಮಗಳು, ತಂಗಿ, ಅಮ್ಮ, ಸತಿ, ಸಖಿ, ಯಜಮಾನಿ, ದೇವದಾಸಿ - ಹೀಗೆ ಯಾವ ಪಾತ್ರವೇ ದೊರೆಯಲಿ, ಎಲ್ಲ ಕಡೆ ಸಾಂಪ್ರದಾಯಿಕ ಚಹರೆಗಳನ್ನು ಪ್ರದರ್ಶಿಸಿ, ಪ್ರತಿಪಾದಿಸಿ ಹಾಗೇ ಬದುಕುತ್ತಾಳೆ.

ಎರಡನೆಯದು ವೇದ ಕಾಲದ ಗಾರ್ಗಿ ಮಾದರಿ, ಜನಪದರ ಗಯ್ಯಾಳಿ ಮಾದರಿ ಅಥವಾ ಇವತ್ತಿನ ಹಕ್ಕುಪ್ರಜ್ಞೆ ಜಾಗೃತಗೊಂಡ ಸ್ತ್ರೀವಾದಿ ಮಾದರಿ. ಅದು ಪ್ರಖರ ವೈಚಾರಿಕ ಮಾದರಿ. ಅದು ಅನ್ಯಾಯವೆನಿಸುವ ಎಲ್ಲವನ್ನು ಉಗ್ರವಾಗಿ ಪ್ರತಿಭಟಿಸುತ್ತದೆ, ಪ್ರಶ್ನಿಸುತ್ತದೆ, ವಿಷಾದಗೊಳ್ಳುತ್ತಲೇ ತನ್ನಂತಹ ಇತರರ ಬಗೆಗೆ ಯೋಚಿಸುತ್ತದೆ. ಅದಕ್ಕೆ ತನ್ನ ಬುದ್ಧಿವಂತಿಕೆ ಬಗೆಗೆ ಅಪಾರ ಹೆಮ್ಮೆ. ಅಧಿಕಾರವು ಯಾವುದನ್ನು, ಯಾವ ಗುಣ ಸ್ವಭಾವಗಳನ್ನು ಹೆಣ್ಣಿಗೆ ಶೋಭೆಯಲ್ಲ ಎಂದು ವಿವರಿಸುವುದೋ ಅದನ್ನು ಒಂದು ಅತಿಗೆ ಒಯ್ಯುತ್ತದೆ. ‘ಹೆಣ್ಣು ಚಂಚಲೆ, ಚಪಲೆ, ಅವರ ಬುದ್ಧಿ ಮೊಣಕಾಲ ಕೆಳಗೆ, ನೈತಿಕತೆ ಕಡಿಮೆ’ ಮುಂತಾದ ಗುಣವಿಶೇಷಣಗಳನ್ನು ಅಲ್ಲಗಳೆದು ಅಥವಾ ಅತಿಗೊಯ್ದು ಅದನ್ನೇ ಸರಿಯೆಂದು ಸಾಧಿಸಿತೋರುವ ಮಾದರಿ ಇದು.

ಈ ಎರಡು ಮಾದರಿಗಳಲ್ಲಿ ಗಾರ್ಗಿ-ಗಯ್ಯಾಳಿಯರ ಒಂದು ಉದಾಹರಣೆಯೂ ಕನಕರ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಭಕ್ತಿ ನೆಲೆಯಲ್ಲಿಯೂ ‘ಗಾರ್ಗಿ’ ಮಾದರಿಯ ಹೆಣ್ಣಿನ ಚಿತ್ರಣ ಸಾಧ್ಯವಿತ್ತು. ಆದರೆ ಅದನ್ನು ಕನಕರೇ ಕೈಯಾರ ಬಿಟ್ಟುಕೊಟ್ಟಿದ್ದಾರೆ. ದೇವನೆದುರು ಸಮಾನತೆಗಾಗಿ ಬಂಡೆದ್ದ ಹೆಣ್ಣು ಅವರ ಕಲ್ಪನೆಯಲ್ಲಿರಲಿಕ್ಕಿಲ್ಲ. ಅವರ ಹೆಣ್ಣು ಪಾತ್ರಗಳೆಲ್ಲ ಗರತಿಯ ಮಾದರಿಯವೇ.


ಕನಕರ ಭಕ್ತಿ ಸಾಹಿತ್ಯದಲ್ಲಿ ಹೆಣ್ಣು

ಹಾಗೆ ನೋಡಿದರೆ ಭಕ್ತಿಗೆ ನಿರ್ಲಿಂಗೀ ಸಂವೇದನೆಯಿರಬೇಕು. ಆದರೆ ಭಕ್ತಿಯನ್ನು ಸ್ತ್ರೀ ಸಂವೇದನೆ ಎಂದು ಗುರುತಿಸಲಾಗಿದೆ. ಹೆಣ್ಣೇ ಆಗಿಬಿಡುವುದು ಭಕ್ತಿ ಮಾರ್ಗದ ಮಾದರಿ. ದೇಶಕಾಲ ಭೇದವಿಲ್ಲದೆ ಹಾಫಿಜ್-ರೂಮಿ-ಬಸವಾದಿ ಶರಣರೆಲ್ಲ ತಮ್ಮನ್ನು ಹೆಣ್ಣೆಂದು, ದೇವರನ್ನು ಗಂಡೆಂದು ಭಾವಿಸಿದ್ದಾರೆ. ಆದರೆ ಅದರಲ್ಲೂ ಸಮಸ್ಯೆಗಳಿವೆ. ಏಕೆಂದರೆ ಭಕ್ತಿ ಎಂಬ ನೆಲೆಯೇ ಸಮರ್ಪಣಾಭಾವ, ಶರಣಾಗತಿ, ಅನುಯಾಯಿತ್ವವನ್ನು ಅಪೇಕ್ಷಿಸುವಂಥದು. ಭಕ್ತಿಯ ನೆಲೆ ಉದ್ದೀಪಿಸುವ ಶರಣಾಗತಿಗೆ ಅದನ್ನು ಸ್ತ್ರೀತ್ವದೊಡನೆ ಸಮೀಕರಿಸಿ ನೋಡುವುದು ಲಿಂಗರಾಜಕಾರಣದ ಇನ್ನೊಂದು ಮುಖ. ಶರಣ ಸತಿ, ಲಿಂಗಪತಿ ಎಂದು ವಚನಕಾರರು ಹೇಳಿದಂತೆ ಕನಕರ ಎಷ್ಟೋ ಕೀರ್ತನೆಗಳಲ್ಲಿ ತನ್ನನ್ನು ಹೆಣ್ಣೆಂದು, ಆದಿಕೇಶವ ಗಂಡೆಂದು ಭಾವಿಸಿ ವಿರಹದಿಂದ ಪರಿತಪಿಸುತ್ತಿರುವ ಹೆಣ್ಣೆಂಬಂತೆ ಚಿತ್ರಿಸಿಕೊಂಡ ರಚನೆಗಳಿವೆ. ಹೀಗೆ ಕನಕರು ‘ಅರಿವಿನ ಹೆಣ್ತನ’ ಅನುಭವಿಸಿದ್ದಾರೆ.

ಆದರೆ ‘ಅರಿವಿನ ಹೆಣ್ತನ’ ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆ ಹುಟ್ಟಿಸಲಿಲ್ಲ. ಅವರಿಗಿಂತ ಮೂರ್ನಾಲ್ಕು ನೂರು ವರುಷ ಮೊದಲು, ಜನಪದರ ನಡುವೆ ತಿರುಗಿ, ತತ್ವ ಹೇಳಿ ಬಾಳಿದ ಶಿವಶರಣ-ಶಿವಶರಣೆಯರ ನೆಲವೇ ಕನಕರ ಕರ್ಮಭೂಮಿಯಾಗಿದ್ದರೂ ಶಿವಶರಣರ ಚಿಂತನೆಯ ಪ್ರಭಾವ ಅವರ ಮೇಲೆ ಆದಂತಿಲ್ಲ. ಭಕ್ತಿಯಲ್ಲಾಗಲೀ, ಭವದಲ್ಲಾಗಲೀ ಶಿವಶರಣೆಯರು ಎತ್ತಿದ ಎಷ್ಟೊಂದು ವಿಷಯಗಳು ಕನಕರನ್ನು ಪ್ರಭಾವಿಸಿದಂತಿಲ್ಲ. ವಚನ ಚಳುವಳಿಯಲ್ಲಿ ಮೇಲುಕೀಳೆನ್ನದೆ ಇಡಿಯ ಸಮಾಜ, ವಿಶೇಷವಾಗಿ ತಳಸಮುದಾಯಗಳು ತೊಡಗಿಕೊಂಡದ್ದಿರುವಾಗಲೂ ಶೈವ-ವೈಷ್ಣವ ಪಂಥಗಳ ತಿಕ್ಕಾಟ ಅವರನ್ನು ಆ ಚಿಂತನೆಗಳಿಂದ ದೂರವಿರಿಸಿತೇ ಎಂಬ ಅನುಮಾನ ಸುಳಿಯುತ್ತದೆ. ಅವರ ಮೋಹನ ತರಂಗಿಣಿಯಲ್ಲಿ ತ್ರೇತಾಯುಗದ ದ್ವಾರಕಾಪುರಿಯ ವರ್ಣನೆಯಲ್ಲಿ ೧೧ನೇ ಶತಮಾನದ ರಾಮಾನುಜರು ಬರುತ್ತಾರೆ, ಆದರೆ ಶಿವಭಕ್ತ ಬಾಣಾಸುರನ ನಗರಿಯಲ್ಲಿ ಶರಣರ ಸುಳಿವಿಲ್ಲ.

ಅವರ ರಚನೆಗಳಲ್ಲಿ ಪದೇಪದೇ ಪರಪುರುಷನಲ್ಲಿ ಅನುರಕ್ತಳಾದ ನಾರಿ, ಅಂಥವಳ ನಿಂದಿಸುವ ಮಾತು ಬರುತ್ತದೆ. ಅದರಲ್ಲೂ ಯಾರದೋ ಸ್ವತ್ತಾದ ಪರಸತಿ, ಪರಸ್ತ್ರೀಯರ ಕುರಿತೇ ಹೇಳಲಾಗಿದೆ. ಯಾರದೂ ಅಲ್ಲದ ಅಥವಾ ‘ಪರ’ನ ಸ್ವತ್ತಲ್ಲದ ಹೆಣ್ಣು ಕೇವಲ ಭೋಗದ ವಸ್ತು. ಇದು ವಚನಗಳಲ್ಲೂ, ಬುದ್ಧನ ಬೋಧನೆಗಳಲ್ಲೂ ಕಂಡುಬರುವುದು ನೋಡಿದರೆ ಎಷ್ಟೆಲ್ಲ ಸಾಮಾಜಿಕ ನಿರ್ಬಂಧಗಳ ನಡುವೆಯೂ, ಮದುವೆಯೆಂಬ ಸಂಸ್ಥೆ ಹೆಣ್ಣಿಗೆ ಹೊರಿಸಿರುವ ಜವಾಬ್ದಾರಿ ಕಟ್ಟುಪಾಡುಗಳ ನಡುವೆಯೂ ‘ಪರಪುರುಷ’ನೊಡನೆ ಸತಿ ಕೂಡುವುದು ಸರ್ವೇಸಾಮಾನ್ಯವಾಗಿದ್ದಿರಬೇಕು ಮತ್ತು ಅದು ಎಲ್ಲ ಕಾಲದ ಮಾನವ ಸಮಾಜದ ತಲ್ಲಣವಾಗಿರಬೇಕು ಎನಿಸುತ್ತದೆ. ಒಟ್ಟಾರೆ ಪ್ರಭಾವ, ಪಂಥಗಳ ಮಾತು ಒತ್ತಟ್ಟಿಗಿಟ್ಟು ನೋಡಿದರೂ ಭಕ್ತ ಕನಕರದು ಸಾಂಪ್ರದಾಯಿಕ, ಸನಾತನ ಮಹಿಳಾ ಮಾದರಿಯಾಗಿಯೇ ಕಂಡುಬರುತ್ತದೆ.

ಒಟ್ಟಾರೆ ಭಕ್ತ ಕನಕನನ್ನು ಐಹಿಕವಾಗಿಯೋ, ಆಧ್ಯಾತ್ಮಿಕವಾಗಿಯೋ ಲಿಂಗ ಅಸಮಾನತೆ/ಲಿಂಗ ಪ್ರಶ್ನೆ ಕಾಡಿದಂತಿಲ್ಲ. ಅವರ  ಕೆಲವು ಕೀರ್ತನೆ, ಕವಿತೆಗಳ ಸಾಲು ಹೀಗಿವೆ:


 • ಸೋತು ಹೆಣ್ಣಿಗೆ ಹೆದರಿ ನಾಚುವ ಪುರುಷನ್ಯಾತಕೆ/ಸನ್ನೆಯನರಿತು ನಡೆಯದಿರುವ ಸತಿಯು ಯಾತಕೆ
 • ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು
 •       ಗಂಡಗಂಜದ ನಾರಿ ಅವಳೇ ಹೆಮ್ಮಾರಿ
 • ಪತಿವ್ರತೆಯರೆಂಬುವರು ಶತ ಸಹಸ್ರಕೊಬ್ಬರು/ಮಿತಿಮೀರಿ ಇಹರಯ್ಯ ಇತರ ಜನರು/ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ/ಗತಿಗೆಟ್ಟು ಹೋಗುವರು ಮೂರು ತೊರೆದು
 • ಶರೀರ ಸೌಖ್ಯ ಶಮನಕ್ಕಾಗದ ಹೆಣ್ಣು/ ಊರಲಿದ್ದರೇನು ತೌರೂರಲಿದ್ದರೇನು?
 • ಮಾನಿನಿಯ ಮನಸು ನಿಧಾನವಿರದಿರೆ/ಮಾನಾಭಿಮಾನಗಳುಳಿದೀತೇ?
 • ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು
 • ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ/ಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿ
 • ಪತಿ ಸೇವೆಗಿಂದಧಿಕ ಸೇವೆಯುಂಟೆ?


ಇಂಥ ಸಾಲುಗಳು ಹೇರಳವಾಗಿದ್ದು ಇಲ್ಲೆಲ್ಲ ಸಾಂಪ್ರದಾಯಿಕ ಯೋಚನಾಕ್ರಮಕ್ಕಿಂತ ಕನಕರ ಗ್ರಹಿಕೆ ಭಿನ್ನವಾಗಿಲ್ಲ. ಮಗನಿಂದೆ ಗತಿಯುಂಟೆ ಜಗದೊಳು ಎಂಬ ಕೀರ್ತನೆಯಲ್ಲಿ ಪುತ್ರನಿಲ್ಲದೆ ಗತಿಯಿಲ್ಲ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಪ್ರಶ್ನಿಸಿ ಅದರಲ್ಲಿ ಹುರುಳಿಲ್ಲವೆಂದವರು, ತತ್ವಾಗಮಗಳ ಓದಿನಿಂದ ಗತಿ ದೊರೆಯುವುದೆಂದು ಪ್ರತಿಪಾದಿಸುತ್ತಾರೆ. ಒಂದುವೇಳೆ ಮಗಳಿಂದಲೂ ಗತಿಯುಂಟು ಜಗದೊಳು ಎಂದು ಕನಕರೇನಾದರೂ ಹೇಳಿದ್ದರೆ ಆ ಒಂದೇಒಂದು ಸಾಲು ಸಾಕಿತ್ತು, ಅವರು ಆದರ್ಶ ಪುರಾತನರಾಗಿಬಿಡುತ್ತಿದ್ದರು.

ಆದರೂ,

 • ಸಂಸಾರ ಸಾಗರಮನುತ್ತರಿಸುವಡೆ/ಕಂಸಾರಿ ನಾಮವೊಂದೇ ಸಾಕು/ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ/ವನಿತೆಯನು ಬಿಟ್ಟು ತಪವಿರಲು ಬೇಡ ಎನ್ನುತ್ತಾರೆ.
 • ಡಣಾಯಕನಾಗಿ ಯುದ್ಧ ಸೋತು, ವಿಜಯನಗರದವರ ಜೊತೆ ತನ್ನ ದೇಶಕೋಶ ಕಳಕೊಂಡು, ಹೆಂಡತಿಯ ತೌರಿನಲ್ಲಿದ್ದಾಗ ಅವಳೇ ಇವರ ತಳಮಳ ನೋಡಲಾರದೇ ದಾಸನಾಗಿಬಿಡು ಎಂದು ಹೇಳಿದಳೆಂದು ಜೀವನಚರಿತ್ರೆ ಹೇಳುತ್ತದೆ. ಆದದ್ದೆಲ್ಲ ಒಳಿತೇ ಆಯಿತು ಎಂಬ ಕೀರ್ತನೆಯಲ್ಲಿ ದಂಡಿಗೆ ಬೆತ್ತವ ಹಿಡಿದು ಆದಿಕೇಶವನ ದಾಸನಾಗಿಬಿಡು ಎಂದು ಹೇಳಿದ ಹೆಂಡತಿ ಕುರಿತು ಗೋಪಾಲ ಬುಟ್ಟಿ ಹಿಡಿವುದಕೆ/ಭೂಪಾಲನೆಂದು ಗರ್ವಿಸುತಿದ್ದೆ/ಆ ಪತ್ನೀ ಕುಲ ಸಾಸಿರವಾಗಲಿ/ಗೋಪಾಲ ಬುಟ್ಟಿ ಹಿಡಿಸಿದಳಯ್ಯಾ ಎಂದು ಹಾರೈಸುತ್ತಾರೆ.


ಎಂದೇ ಇಷ್ಟು ಹೇಳಬಹುದು, ಕನಕರು ಖಂಡಿತ ಮಹಿಳಾ ವಿರೋಧಿಯಲ್ಲ..


ಕವಿ ಕನಕರ ಕಣ್ಣಲ್ಲಿ ಹೆಣ್ಣು 

ಎಂದಿನಿಂದ ಹೆಣ್ಣಿನ ಕುರಿತು ಗಂಡಿಗಿರುವ ಕಾಮಾಸಕ್ತಿ, ಭೋಗಾಸಕ್ತಿಯ ನಿಲುವೇ ಕನಕರದೂ. ಅವರು ರಸಿಕ ಮತ್ತು ಸೌಂದರ್ಯಗ್ರಾಹಿ ಕವಿ. ಹೆಣ್ಣನ್ನು ಅವಳ ಅಂಗಾಂಗಗಳಿಂದಲೇ - ಮಿಕ್ಕೆಲ್ಲದಕ್ಕಿಂತ ಮೊಲೆಯ ಗಾತ್ರ, ಸ್ವರೂಪಗಳಿಂದಲೇ ಅಳೆಯುತ್ತಾರೆ. ದಾಸರಾದ ಮೇಲೂ ಒಂದು ಕೀರ್ತನೆಯಲ್ಲಿ ‘ಪೋಗದೋ ಚಳಿ ಪೋಗದೋ/ನಳಿನಾಕ್ಷಿಯ ತನ್ನ ತೊಡೆ ಮೇಗಡೆ ಇಟ್ಟು/ಕಳಸಕುಚದ ಮೇಲೆ ಕೈಯಿಕ್ಕಿದಲ್ಲದೆ’ ಎನ್ನುತ್ತಾರೆ! ಉಬ್ಬಿದ ಕುಚದ್ವಯದಲ್ಲಿ ತಾನು ಮೂಡಿಸಿದ ನಖಚಂದ್ರನ ಲಾಂಛನವನ್ನು ಅವರ ಗಂಡುಪಾತ್ರಗಳು ಹೆಮ್ಮೆಯಿಂದ ನೋಡುತ್ತಾವೆ.

ಅವರ ಮೋಹನ ತರಂಗಿಣಿ ಒಂದು ಶೃಂಗಾರ ಕಾವ್ಯ. ಅಲ್ಲಿ ಹೆಣ್ಣು ಎಂದರೆ ಸೌಂದರ್ಯಾತಿಶಯ ಮತ್ತು ಗುಣಾತಿಶಯಗಳ ಮೊತ್ತ. ಅದನ್ನು ಬರೆದಾಗ ಅವರಿನ್ನೂ ದಾಸರಾಗಿರಲಿಲ್ಲ. ‘ಹೆಣ್ಣು ಮಾಯೆ’ಯೆನಿಸಿರಲಿಲ್ಲ. ಸ್ತನದ್ವಯಗಳ ವಿವರಿಸಲಂತೂ ಕನ್ನಡದ ಎಷ್ಟೆಷ್ಟು ಉಪಮೆ, ಅಲಂಕಾರ, ಪದ, ನೆಪ ಹುಡುಕಿ ಎಳತಂದಿದ್ದಾರೋ?! ಕೊಡಮೊಲೆ, ಗಡಿಗೆ ಮೊಲೆ, ನುಣ್ಮೊಲೆ, ಬಿಳ್ಮೊಲೆ, ಹೊನ್ನಮೊಲೆ, ದುಂಡುಮೊಲೆ, ಬಟ್ಟ ಬಲ್ಮೊಲೆ, ತೋರಮೊಲೆ, ಹೊಂದಾವರೆ ಮೊಗ್ಗು ಮೊಲೆ.. ಹೀಗೇ ಸಂಸ್ಕೃತ ನಾಚುವಷ್ಟು ಕನ್ನಡದ ನಾಮಪದ, ನಾಮವಿಶೇಷಣ, ಗುಣವಿಶೇಷಣಗಳು ಸುಳಿದುಹೋಗಿವೆ. ಆ ದೇಹಭಾಗದ ರೂಪ, ಗಾತ್ರ ಎಷ್ಟು ಮುಖ್ಯವೆಂದರೆ ರುಕ್ಮಿಣಿ ಕೃಷ್ಣನ ಬಳಿ, ‘ಪುತ್ರನಿಲ್ಲದೆ ಸದ್ಗತಿಯಿಲ್ಲ, ನನಗೊಬ್ಬ ಪುತ್ರನ ಕೊಡು’ ಎಂದು ಕೇಳಿದರೆ ಆ ಮಹರಾಯ, ‘ಮಗುವಾದರೆ ಬಿರುಮೊಲೆ ಜರಿದು ಜೋಲು ಬೀಳುತ್ತಾವೆ’ ಎಂದು ಬೇಡವೆನ್ನುತ್ತಾನೆ. ಅದಕ್ಕವಳು ಮಗು ಹಾಲು ಕುಡಿಯತೊಡಗಿದಾಗ ಸೊರ ಬಿಟ್ಟು ಮೊಲೆ ಇನ್ನೂ ಬಿಗಿಗೊಂಡು ದುಂಡಗೆ ಆಕರ್ಷಿಸುವುದು ಎಂದು ಅವನ ಒಪ್ಪಿಸಿ ಮಗುವನ್ನು ಪಡೆಯುತ್ತಾಳೆ! ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ? ಎಂದು ಹೆಣ್ಣನ್ನು ಹಳಿಯಲು, ನಿರಾಕರಿಸಲು ಸ್ತನಕಾರಣ ಹೇಳುತ್ತಾರೆ. ತಮ್ಮ ಸಖಿಯರನಾಯ್ದುಕೊಳುವ ರಾಣಿಯರೂ ಗಮನ ಕೊಡುವುದು ತನ್ನಿನಿಯನನ್ನು ಸೆಳೆಯುವಂತಹ ಕೊಡಮೊಲೆಗಳು ಅವರಿಗಿವೆಯೇ ಇಲ್ಲವೇ ಎಂಬ ಬಗ್ಗೆ! ಒಟ್ಟಾರೆ ಗಂಡಿಗೆ ಎಣೆಯಿಲ್ಲದಷ್ಟು ಕಾಮಲೀಲೆಯ ಅವಕಾಶ, ಅವಶ್ಯಕತೆ ಎರಡೂ ಇದೆ; ಅದಕ್ಕೆಂದೇ ಹೆಣ್ಣುಗಳು ಸೃಷ್ಟಿಯಾಗಿದ್ದಾರೆ; ಹೆಣ್ಣಿನ ದೇಹ, ಬದುಕು, ಕ್ರಿಯೆಗಳೆಲ್ಲ ಕಾಮದಾಹ ತಣಿಸುವತ್ತಲೇ ಕೇಂದ್ರಿತವಾಗಿವೆ ಎನ್ನುವುದು ಕವಿ ಕನಕರ ಕಲ್ಪನೆ.

ಮೋಹನ ತರಂಗಿಣಿಯ ಸೌರಾಷ್ಟ್ರ ವರ್ಣನೆ, ದ್ವಾರಕಾಪುರ ವರ್ಣನೆಗಳಲ್ಲಿ ಹಸ್ತಿನಿ-ಚಿತ್ತಿನಿ-ಶಂಖಿನಿ-ಪದ್ಮಿನಿ ಜಾತಿಯ ಸ್ತ್ರೀಯರ ವರ್ಣನೆ ತುಂಬಿದೆ. ಆ ಪುರಗಳು ಹೇಗಿವೆ? ಅಲ್ಲಿ ಏನೇನಿವೆ? ಯಾರ‍್ಯಾರಿದ್ದಾರೆ? ಏನು ಮಾಡುತ್ತಿದ್ದಾರೆ?


 • ಸಡಿಲಿದ ಮುಡಿ, ಬೆವರ್ಮನಿ ತುಂಬಿ ತೊಟ್ಟಿಕ್ಕುವ ಮುಖ, ಅಲುಗಾಡುವ ಮೊಲೆಗಳ ಗಂಧ ತೇಯುವ ಹೆಣ್ಣುಗಳಿರುವ ಅಂಗಡಿ..
 • ರಾಗರಸದೊಳನವರತ ಕಾದಲರು ಸಂಭೋಗಕ್ಕೆ ಸಮವಾಗಲೆನುತ ಇರುವ ಪೋಡಿಯಡಕೆ ಅಂಗಡಿಗಳು
 • ಕಾಂತಿಯುಕ್ತ ಕನ್ನೆಯರ ಚಿಗುರು ಮೊಲೆ ನೋಡಿ ನಗುನಗುತ್ತ ಎಳೆವೆರಳ ಚಿಟುಕೊತ್ತಿ ಬಳೆ ತೊಡಿಸುವ ಬಳೆಗಾರರು
 • ಕೊಂಕು ಕಾಣಬೇಕಾದರೆ ಕೂದಲಿನಲ್ಲಿ, ತೊಂಡೆ ಹಣ್ತುಟಿಯಲ್ಲಿ, ಕುಟಿಲ ಕಾಂತೆಯರ ಗಡಿಗೆ ಮೊಲೆಗಳಲ್ಲಿ ಕಾಣಬಹುದೇ ವಿನಾ ಬೇರೆಡೆ ಕಂಡುಬರುವುದಿಲ್ಲ
 • ವೇಶ್ಯೆಯರ ಬಲ್ಮೊಲೆ ಹಿಡಿವರು, ಚೆಂದುಟಿಗಳ ಕಡಿವರು, ಚಿಗುರು ತುಟಿಯವರ ನಿರಿಗೆ ಸುಲಿವರೇ ವಿನಹ ಗರತಿಯರ ಮುಟ್ಟುವುದಿಲ್ಲ
 • ಕಳಶಮೊಲೆ, ಬಾಹುಮೂಲದ ಕಂಕುಳು ಕಾಣುವಂತೆ ತೋಳೆತ್ತಿ ನೀರೆರೆವಾಗ ದಾಹ ಅಡಗಿದ್ದರೂ ಇನ್ನೂ ಕುಡಿವ ನೆಪದಲ್ಲಿ ಹೆಂಗಳ ಮುದ್ದುಮುಖ ನೋಡುವರು
 • ಕಂಕುಳು ಒಡೆಯುವಂತಿರುವ ಭಾರಿ ಮೊಲೆಗಳ ಹೆಣ್ಣಾಳುಗಳ ರುಕ್ಮಿಣಿ ಸತ್ಯಭಾಮೆಯರು ತಮಗೆ ತಕ್ಕವರೆನಿಸಿದವರನ್ನು ತಂತಮ್ಮ ಪಕ್ಷಕ್ಕೆ ಹಂಚಿಕೊಂಡರು.
 • ಉಟ್ಟಬಟ್ಟೆ ತೊಯ್ದು ಬೊಗಸೆಗಣ್ಣ ಅಬಲೆಯರು ಶೈತ್ಯದಿಂದ ಗಡಗಡ ನಡುಗಿದರು ಮೊಲೆಗಳು ನರ್ತಿಸುವಂತೆ
 • ಪ್ರಿಯಕರನ ಎದೆಯ ಧೈರ್ಯವನ್ನು ಮೊಲೆಗೊಡದಿಂದ ಮೊಗೆಯುವಂತೆ ಮೇಲಕ್ಕೆ ಹತ್ತಿ ಬಂದರು ಅಬಲೆಯರು
 • ದುಂಬಿಗುರುಳ ಮೂರು ಸೀಳಾಗಿಸಿ ಗೋಪಾಂಗನೆಯರು ಜಡೆ ಹೆಣೆಯೆ ಅವು ಕೊಡಮೊಲೆಯ ಕೊಪ್ಪರಿಗೆಯ ನಿಧಿ ಕಾಯುವ ಸರ್ಪಗಳಂತೆ ಬೆನ್ನೇರಿದವು.
 • ಆಯಿತು, ಪುರದ ಕನ್ಯೆಯರು, ಅರಮನೆಯ ನಾರಿಯರು ಹೀಗಿದ್ದರು. ಕನ್ನೈದಿಲೆಯ ಕರಿ ಬಣ್ಣದಬಲೆಯರು, ವನದ ಚಿಂಚಿತಿಯರು, ರೈತ ಮಹಿಳೆಯರು ಹೇಗಿದ್ದರು? 
 • ಮದನ ಮಂದಿರದ ಬಾಗಿಲಿಗೆ ತೋರಣ ಕಟ್ಟಿದಂತೆ ತಳಿರ ಉಡುಗೆ ಕಂಗೊಳಿಸಲು ಹೃದಯ ಗೋಪುರದ ಜೋಡಿ ಕಳಶಗಳಂತೆ ಜೋಡಿ ಮೊಲೆಗಳಿದ್ದವು.
 • ಕಲ್ಲರೆಗಳ ಮೇಲೆ ಧುಮ್ಮಿಕ್ಕಿ ನೃತ್ಯವಾಡುವ ಬಿದಿರಕ್ಕಿ ಕುಟ್ಟುವ ಹೆಣ್ಣುಗಳ/ ತೋರ ನುಣ್ಮೊಲೆಯೆದೆ ದಿಗಿಲಾಂತು ಕಂಪಿಸಿತು
 • ಹಾಡುವರು ಅಕ್ಕಿ ಮಾಡುವರು ಬೇಟೆ ನೋಡುವರು ಬಿಲ್ಲುಬಾಣ ಹಿಡಿದು ನಿಂತರು. ಬಗೆಬಗೆಯ ಭಂಗಿಗಳಲಿ ನಿಂದ ಚಂದದ ಹೆಣ್ಣುಗಳು ಅನಿರುದ್ಧನ ಕಂಡದ್ದೇ ಅವರಿಗೆ ತಂತಮ್ಮ ಗಂಡಂದಿರ ಮೇಲಿನ ಪ್ರೀತಿ ಮುರಿದು ಮೂರು ತುಂಡಾಯಿತು.
 • ತುರುಬು ಹಾಗೂ ತೋರಮೊಲೆಯ ಭಾರದಿಂದ ಸಸಿಮಡಿ ಕಾವ ಬೇಡತಿಯರ ಬಡ ನಡು ಬಳುಕುತಿಹುದು


ಪುರವೋ, ವನವೋ, ಎಲ್ಲೂ ಹೆತ್ತುಹೆತ್ತು ಹೈರಾಣಾದ ಹೆಣ್ಣುಗಳು; ಗೇಯ್ದು ಮಾಸಿದ ಚಹರೆಗಳು; ಅಂಗವಿಕಲ, ಸುಂದರಿಯರಲ್ಲದ, ವೃದ್ಧ ಹೆಣ್ಣುಗಳು ಇಲ್ಲವೇ ಇಲ್ಲ. ವಾರಾಂಗನೆಯರ ಹಾಗೂ ವೇಶ್ಯೆಯರ ನಡೆನುಡಿ, ದೇಹಸಿರಿಯ ವರ್ಣನೆ ನೋಡಿದರೆ ದೇವದಾಸಿ ಪದ್ಧತಿ ಬಗೆಗಾಗಲೀ, ಆ ಹೆಣ್ಣುಗಳ ಕೊನೆಗಾಲದ ದುರಂತದ ಬಗೆಗಾಗಲೀ ಕವಿಗೆ ನೆನಪೇ ಇರುವಂತಿಲ್ಲ. ಯುದ್ಧ ಕುರಿತು, ವೀರ ರಸ, ಶೌರ್ಯದ ಕುರಿತು ವರ್ಣನೆಗಳಿವೆ, ಸತಿ ಹೋಗುವ ಹೆಂಗಸರ, ಆ ಕುಟುಂಬಗಳ ಬವಣೆ ಕಾಣುವುದಿಲ್ಲ. ಅವರು ಚೆನ್ನಕೇಶವನನ್ನು ಎದುರುಗೊಂಡು ತಿರುಗಾಡಿದ ಹಾಸನ, ಬೇಲೂರುಗಳ ಜನಮನದ ಬಾಯಲ್ಲಿರುವ ಮಾಸ್ತಿ ಕಥನಗೀತೆಗಳೆಂಬ ದುಃಖಾರ್ತ ಹಾಡುಗಳು ಅವರಿಗೆ ಮುಖಾಮುಖಿಯಾದವೋ ಇಲ್ಲವೋ ಗೊತ್ತಿಲ್ಲ.

ಆಯಿತು. ಕವಿತೆಯಲ್ಲಿ ಶೃಂಗಾರ-ಸೌಂದರ್ಯವಲ್ಲದೆ ಕುಂಟ-ಕುರುಡಿ-ಗೂನಿ-ಉಬ್ಬಲ್ಲು ಸುಬ್ಬಿಯರ ಸಂಕಟಗಳ ಬಗೆಗೆ ಬರೆಯಲಾದೀತೇ? ಇರಲಿ. ಅವರು ಸೃಷ್ಟಿಸಿದ ಮಹಿಳಾ ಪಾತ್ರಗಳ ಗಟ್ಟಿತನ ಯಾವುದರಲ್ಲಿದೆ?

ಚರಿತ್ರೆ ದಮಯಂತಿಯದೇ ಆಗಿದ್ದರೂ ಅದಕ್ಕೆ ನಳ ಚರಿತ್ರೆ ಎಂದು ಹೆಸರಿಡುವುದೇ ಪುರುಷ ಪರಮಾಧಿಕಾರ. ಏಕೆಂದರೆ ನಳ ಒಬ್ಬ ದುರ್ಬಲ ರಾಜ, ದುರ್ಬಲ ಗಂಡ. ಆತ ಅಶ್ವ ಹೃದಯ ಬಲ್ಲವನು. ಆದರೆ ಹೆಂಡತಿಯ ಹೃದಯ ಬಲ್ಲವನಲ್ಲ. ಅವ ಅಡಿಗೆಯ ಸೂಕ್ಷ್ಮಾತಿಸೂಕ್ಷ್ಮ ರಹಸ್ಯ ಅರಿತವನು. ಆದರೆ ಅಡಿಗೆ ಮಾಡುವ ಹೆಂಗಸರ ಒಳತೋಟಿ, ಒಳಸುಳಿಗಳ ಅರಿತವನಲ್ಲ. ನಮ್ಮ ಸಂಸ್ಕೃತಿಯಲ್ಲಿ ಹೊತ್ತುಗೊತ್ತಿಲ್ಲದೆ ಜೂಜಾಡಿ, ಸೋಲನ್ನು ವಿಧಿ-ರಾಕ್ಷಸರ ತಲೆಗೆ ಕಟ್ಟಿ, ತನ್ನದೆಲ್ಲವನ್ನು ಕಳೆದುಕೊಂಡು, ನಡುರಾತ್ರಿಯಲ್ಲಿ ಸತಿಸುತರ ಬಿಟ್ಟು ನಡೆದವರು ಮಹಾಪುರುಷರಾಗಿಬಿಟ್ಟಿದ್ದಾರೆ. ಅಂಥವರಲ್ಲಿ ನಡುರಾತ್ರಿಯಲ್ಲಿ ಹೆಂಡತಿಯನ್ನು ಕಾಡೆನ್ನದೆ, ಗುಡ್ಡಗವಿಯೆನ್ನದೆ ಬಿಟ್ಟು ನಡೆದ ಬೇಜವಾಬ್ದಾರಿಯ ನಳನೂ ಸೇರುತ್ತಾನೆ.

ದ್ಯೂತದಲ್ಲಿ ಸೋತು, ಎಲ್ಲವನ್ನು ಕಳಕೊಂಡು, ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಟ್ಟು, ಹೆಂಡತಿಯೊಡನೆ ಕಾಡಿಗೆ ಬಂದ ನಳ ಉಟ್ಟ ದಟ್ಟಿ ಬಳಸಿ ಹಕ್ಕಿ ಹಿಡಿಯಲು ಹೋಗಿ ದಟ್ಟಿಯನ್ನೂ ಕಳಕೊಂಡು ನಗ್ನನಾಗುತ್ತಾನೆ. ಗಂಡನ ಮಾನ ಮುಚ್ಚಲು ದಮಯಂತಿ ಉಟ್ಟ ಸೀರೆ ಹರಿದು ಅರ್ಧ ಅವನಿಗೆ ಕೊಡುತ್ತಾಳೆ. ನಡುರಾತ್ರಿ ಅವಳ ಸೀರೆಯನುಟ್ಟ ನಳ ಅವಳನಲ್ಲೇ ಬಿಟ್ಟು ನಡೆಯುತ್ತಾನೆ. ಸರ್ಪದ ಬಳಿ ಕಚ್ಚಿಸಿಕೊಂಡು, ವಿಕೃತ ರೂಪದ ಬಾಹುಕನಾಗಿ, ಹೆಂಡತಿ ಮಕ್ಕಳ ಮರೆತು, ಸತಿಸುತರ ಜವಾಬ್ದಾರಿಯಿಲ್ಲದೆ ನಳ ಋತುಪರ್ಣ ರಾಜನ ಆಸ್ಥಾನದಲ್ಲಿ ಕುದುರೆತಜ್ಞನಾಗಿರುತ್ತಾನೆ. ಇತ್ತ ದಮಯಂತಿ ಅವನಿಗಾಗಿ ಜಗವೆಲ್ಲ ಹುಡುಕಾಡುತ್ತಾಳೆ. ಇನ್ನೇನು ಸರ್ಪದ ಬಾಯಿ ಹೊಗಲಿರುವ ಅವಳನ್ನು ಬೇಡನೊಬ್ಬ ರಕ್ಷಿಸಿ ಕಾಮಾತುರ ತೋರಿದಾಗ ಕನಕರ ದಮಯಂತಿ ಪುರಾಣದ ದಮಯಂತಿಗಿಂತ ಪ್ರಗತಿಪರ ನಡವಳಿಕೆ ತೋರುತ್ತಾಳೆ. ಅವಳು ತನ್ನ ಪಾತಿವ್ರತ್ಯ ಶಕ್ತಿಯಿಂದ ಬೇಡನನ್ನು ಸುಟ್ಟು ಹಾಕುವುದಿಲ್ಲ. ಬದಲಾಗಿ, ‘ಪ್ರಾಣ ರಕ್ಷಿಸಿದ ನೀನು ನನ್ನ ತಂದೆಗೆ ಸಮಾನ’ ಎಂದು ಬೇಡನ ಬಳಿ ವಾದಿಸಿ ಕೊನೆಗೆ ಕೋಪ ಬಂದರೆ ಶಪಿಸುವುದಾಗಿ ಧಮಕಿ ಹಾಕಿ ಪಾರಾಗುತ್ತಾಳೆ!

ಇಂಥ ಗಟ್ಟಿಗಿತ್ತಿ ಹೆಂಗಸು ಗಂಡನ ಮೈಮರೆವಿನಿಂದ, ಬೇಜವಾಬ್ದಾರಿತನದಿಂದ ಬಂದ ದುಸ್ಥಿತಿಯ ಲೋಪವನ್ನು ಮರೆಮಾಚಲು ವಿಧಿಯೆಂಬ ಅನೂಹ್ಯ ಶಕ್ತಿಯನ್ನು ನಂಬುತ್ತಾಳೆನ್ನುವಂತೆ ಚಿತ್ರಿಸಲಾಗಿದೆ. ಕರುಣಾಳು ನಳನ ತಪ್ಪಿಲ್ಲ, ಎಲ್ಲ ವಿಧಿಯಾಟ ಎಂದು ಅವಳ ಬಾಯಲ್ಲಿ ಹೇಳಿಸಲಾಗಿದೆ. ಅವಳ ಗಟ್ಟಿತನವೆಲ್ಲ ಗಂಡನನ್ನು ಹೇಗಾದರೂ ಮರಳಿ ಪಡೆಯಲು ಪ್ರಯತ್ನಿಸುವುದರಲ್ಲೇ ಖರ್ಚಾಗುತ್ತದೆ. ಒಮ್ಮೆ ಬಾಹುಕ, ‘ಪತಿಯ ತಪ್ಪೆಣಿಸುವ ಸತಿ ಪತಿವ್ರತೆಯೆ?’ ಎನ್ನುತ್ತಾನೆ. ನಮ್ಮ ಸತಿ ದಮಯಂತಿಯಾದರೋ, ಪತಿಯ ತಪ್ಪೆಣಿಸುವುದಿರಲಿ, ಉಳಿದ ಪಂಚಮಹಾಪತಿವ್ರತೆಯರು ಕಷ್ಟನಷ್ಟದಲಿ ಬೆಂದು ಒಂದಲ್ಲ ಒಮ್ಮೆ ತಂತಮ್ಮ ಪತಿರಾಯರಿಗೆ ಬಿರುನುಡಿಯನಾಡಿದ್ದರೂ ಇವಳೆಂದೂ ಒಂದೇ ಒಂದು ಅಂತಹ ಮಾತು ಆಡುವುದಿಲ್ಲ. ಸತಿಪತಿ-ಹೆಣ್ಣುಗಂಡು ಸಮಾನರೆಂದು ಕನಕರು ಚಿತ್ರಿಸಬೇಕಿರಲಿಲ್ಲ. ಕೊನೆಪಕ್ಷ ಹೆಣ್ಣಿಗೆ ಗಂಡಿನ ಹೊರತಾದ, ವ್ಯವಸ್ಥೆಯ ಚೌಕಟ್ಟಿನ ಹೊರತಾದ ಒಂದು ಸಫಲ ಬದುಕನ್ನು ಕಲ್ಪಿಸಿಕೊಳ್ಳಬಹುದಿತ್ತು, ಅದೂ ಅವರಿಗೆ ಸಾಧ್ಯವಾಗಿಲ್ಲ.

ಮೋಹನ ತರಂಗಿಣಿ ಯಲ್ಲಿ ಅನಿರುದ್ಧನ ಮೋಹಿಸಿದ ಕಥಾನಾಯಕಿ ಉಷೆಯ ಸಖಿ ಚಿತ್ರಲೇಖೆ ಎಂಬ ಒಂದು ಪಾತ್ರವಿದೆ. ವಿವಾಹದ ಚೌಕಟ್ಟನ್ನು ಉಲ್ಲಂಘಿಸಿ ಪ್ರೇಮಿಗಳನ್ನು ಒಂದುಮಾಡಿದ ಚಿತ್ರಲೇಖೆ ಸತ್ವಶೀಲ ವ್ಯಕ್ತಿತ್ವವುಳ್ಳ ಪಾತ್ರವಾಗಿ ಮಾತಿನಲ್ಲೂ ಕೃತಿಯಲ್ಲೂ ಚಿತ್ರಿಸಲ್ಪಟ್ಟಿದ್ದಾಳೆ. ಆದರೆ ಚಿತ್ರಲೇಖೆಯೂ ಸೇರಿದಂತೆ ಅಂತಃಪುರದಲ್ಲಿ ತುಂಬಿಕೊಂಡ ಸಾವಿರಾರು ದಾಸಿಯರ ದೇಹ ಕುರಿತ ವಿವರವಾದ ವರ್ಣನೆಯಿದೆಯೇ ಹೊರತು ಅವರಿಗೆಲ್ಲ ದಾಸಿತನದ ಹೊರತಾದ ಅಸ್ತಿತ್ವವೇ ಇಲ್ಲ. ಇಲ್ಲಿ ಕವಿಯ ಮಾನವೀಯ ಮತ್ತು ಸೃಜನಶೀಲ ಕಲ್ಪನೆ ವಿಸ್ತಾರಗೊಂಡಿಲ್ಲ.

ಒಟ್ಟಾರೆ ಕನಕರು ಸೃಷ್ಟಿಸಿದ್ದೆಲ್ಲ ಪ್ರಶ್ನೆಗಳೇ ಇಲ್ಲದ ಗೃಹದೇವತೆಗಳನ್ನು ಅಥವಾ ಗರತಿಯರನ್ನು. ಅದರಲ್ಲೂ ಹಿಂದುಮುಂದು ಮಾಂಸ ತುಂಬಿಕೊಂಡ ಮಾನಿನಿಯರನ್ನು. ಆದರೆ ಈ ಪಾತ್ರಗಳ ಒಳಾಂತರಂಗ ಬಗೆಯುವ ಯಾವ ಪ್ರಯತ್ನವನ್ನೂ ಅವರು ಮಾಡಿಲ್ಲ. ನಿಜಜೀವನದ ಹೆಂಡತಿಯರನ್ನು ಹತ್ತಿರದಿಂದ ನೋಡಿದರೇ ಗೊತ್ತಾಗುತ್ತದೆ: ಅವರಲ್ಲೂ ಪ್ರತಿರೋಧದ ಅಂಶವಿರುತ್ತದೆ. ಗರತಿಯೂ ಕೂಡಾ ಯಾವುದನ್ನೂ - ಪುರುಷಾಧಿಕಾರವನ್ನೂ ಸಹಾ ಒಂದು ಮಿತಿಯಾಚೆ ಹೋಗಲು ಬಿಡುವುದಿಲ್ಲ. ಅಕಸ್ಮಾತ್ ಅವಳ ತ್ಯಾಗ ವ್ಯರ್ಥವೆನಿಸಿದರೆ; ತಾನು ಆಹುತಿಗೊಳ್ಳುತ್ತಿರುವ ಭಾವ ಹುಟ್ಟಿದರೆ ತನ್ನ ಜೊತೆಗೆ ತನ್ನೊಡನಿರುವ ವ್ಯವಸ್ಥೆಯನ್ನೂ ಆಹುತಿಯಾಗಿಸುತ್ತಾಳೆ. ಹೆಣ್ಣಿನ ಈ ಒಳಸೂಕ್ಷ್ಮ ಕನಕರ ಅರಿವಿಗೆ ಬಂದಿಲ್ಲ.

ಮಹಿಳೆಯ ಅಥವಾ ಯಾವುದೇ ಶೋಷಿತ ವರ್ಗದ ಶಕ್ತಿ ಎಂದರೆ ಸ್ಥಾಪಿತ ಯಾಜಮಾನ್ಯದ ವಿರುದ್ಧ ಪ್ರತಿರೋಧವೇ ಆಗಬೇಕೆಂದಿಲ್ಲ. ಪ್ರತಿರೋಧಕ್ಕಿರುವಷ್ಟೇ ಶಕ್ತಿ ಸ್ವಾಯತ್ತತೆಯ ಬದುಕಿನಲ್ಲೂ ಇದೆ. ರೂಢಿ ವಿರೋಧಿ ಜೀವನ ಕ್ರಮ ಮತ್ತು ಉಲ್ಲಂಘನೆ - ಇವೂ ಪ್ರತಿರೋಧಗಳೇ. ಜನಪದ ರಾಮಾಯಣದ ಸೀತೆ ಪಟ್ಟವೇರಿದ ರಾಮ ಕಂಡವರ ಮಾತು ಕೇಳಿ ಬೆಂಕಿ ಹಾಯ್ದ ತನ್ನನ್ನು ಅನುಮಾನಿಸಿದಾಗ ರಾಜ್ಯ ಬಿಟ್ಟು ಹೋಗುತ್ತಾಳೆ. ರಾಮನ ಬಿಟ್ಟು ಕಾಡಿಗೆ ಹೋಗುತ್ತಾಳೆ. ಅವಳಿ ಮಕ್ಕಳ ಹೊತ್ತುಹೆತ್ತುಬೆಳೆಸಿ, ರಾಮನಿಲ್ಲದ ಒಂದು ಸ್ವಾಯತ್ತ ಬದುಕನ್ನು ಸಾಧ್ಯವಾಗಿಸಿಕೊಳ್ಳುತ್ತಾಳೆ. ಇನ್ನೊಂದು ಜನಪದ ರಾಮಾಯಣದಲ್ಲಿ ಶೂರ್ಪನಖಿ ಮೊಲೆಮೂಗುಗಳ ಕಳಕೊಂಡರೂ ಸುಂದರ ಉದ್ಯಾನವನ ನಿರ್ಮಿಸಿ, ವನಪಾಲಕಿಯಾಗಿ ಏಕಾಂಗಿಯಾಗಿ, ಸ್ವಾಯತ್ತವಾಗಿ ಬದುಕಿದಳು. ಅದನ್ನು ನೋಡಿಬಂದು ನಿಬ್ಬೆರಗಾದ ಲವಕುಶರು ತಮ್ಮಮ್ಮನ ಬಳಿ ಮೊಲೆಮೂಗುಗಳಿರದ ವಿಕಾರರೂಪದ ರಕ್ಕಸಿಯೊಬ್ಬಳ ಅತಿಸುಂದರ ಉದ್ಯಾನ ತಾವು ನೋಡಿದೆವೆಂದು ಬಣ್ಣಿಸುತ್ತಾರೆ. ಹೀಗೆ ಜನಪದದ ಸೀತೆ/ಶೂರ್ಪನಖಿಯರಿಗಿರುವ ಸ್ವಾಯತ್ತ ಬದುಕಿನ ಯಾವ ಅವಕಾಶವೂ ಕನಕರ ದಮಯಂತಿಗಳಿಗೆ ಸಿಗುವುದಿಲ್ಲ. ಬಹುಶಃ ಮಹಾಕಾವ್ಯ ಬರೆದವರೆಲ್ಲ ಪುರುಷರೇ ಆದ ಕಾರಣ ಅವರಿಗೆ ಪತಿವ್ರತೆಯರನ್ನು ಸೃಷ್ಟಿಸಲು ಸಾಧ್ಯವಾಯಿತೇ ಹೊರತು ಬಂಡಾಯದ ಹೆಣ್ಣನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ.

ಹಾಗೆ ನೋಡಿದರೆ ನಿಜಜೀವನದಲ್ಲಿ ಭಾರತೀಯ ಸಮಾಜದ ತಳಸಮುದಾಯದ ಹೆಣ್ಣುಗಳು ಹೆಚ್ಚು ಸ್ವಾಯತ್ತ ಬದುಕು ಸಾಗಿಸಿದ್ದಾರೆ, ಅದನ್ನು ಸಾಧ್ಯಮಾಡಿಕೊಂಡಿದ್ದಾರೆ. ಅದನ್ನು ತಳಸಮುದಾಯದ ಕವಿ ಕನಕ ಗ್ರಹಿಸಿರಬೇಕಿತ್ತು. ಕೊನೆಪಕ್ಷ ತಮ್ಮ ರಾಮಧಾನ್ಯ ಚರಿತೆಯಲ್ಲಿ ಧಾನ್ಯಗಳನ್ನು ಪುರುಷರ ಬದಲಾಗಿ ಸ್ತ್ರೀಯರಂತೆ ಸೃಷ್ಟಿಸಿದ್ದರೆ; ಬಿಳ್ಮೊಲೆಯ ವರ್ಸಸ್ ಕನ್ನೈದಿಲೆಯಂಥ ಕರಿಮೊಲೆಯ ಅಬಲೆಯರನ್ನು ಭತ್ತ-ರಾಗಿಗಳಂತೆ ಚಿತ್ರಿಸಿದ್ದರೆ ಆ ಕಾವ್ಯ ಬೇರೆಯದೇ ನೆಲೆಗೆ ಹೋಗಿ ಮುಟ್ಟುತ್ತಿತ್ತು. ಆದರೆ ಜಾತಿಪ್ರಶ್ನೆಯೊಂದನ್ನು ಹೊರತುಪಡಿಸಿ ಮಿಕ್ಕಂತೆ ವೈದಿಕ ಮತ್ತು ಸನಾತನ ಮೌಲ್ಯಗಳಿಗೇ ಕಟ್ಟುಬಿದ್ದ ಕನಕರು ಹೆಣ್ಣಿನ ವಿಷಯದಲ್ಲಿ ಜನಪದದ ಸ್ಮೃತಿ, ವಿವೇಚನೆಗಳನ್ನು ಕಡಿಮೆ ಬಳಸಿದ್ದಾರೆ. ಹೀಗೆ ಕನಕರ ಹೆಣ್ಣು ಪಾತ್ರಗಳು ದಾಸಿ, ಸಖಿ, ಪತಿವ್ರತೆಯ ಚೌಕಟ್ಟಿನಾಚೆ ಬೆಳೆಯದೇ ಪಾರಂಪರಿಕ ಮೌಲ್ಯಗಳನ್ನು ಗಟ್ಟಿಗೊಳಿಸುವುದರಲ್ಲೇ ಮಗ್ನವಾಗಿಬಿಡುತ್ತವೆ.


ಕನಕರೇ, ನೀವು ಸಖಿಗೀತ ಬರೆದಿರಿ. ಅವಳ ಪರವಾಗಿ ಹಾಡಿದಿರಿ, ಆಡಿದಿರಿ. ಆದರೆ ಸಖಿ ಮೌನವಾಗುಳಿದದ್ದನ್ನು ಗುರುತಿಸದೆ ಹೋದಿರಿ. ಎಂದೇ ಅವಳು ಒಳಮನಸು ತೆರೆಯದೆ ಮೊಲೆಜಘನಗಳ ತೋರಿಸುತ್ತ ಸುಮ್ಮನಿದ್ದುಬಿಟ್ಟಳು.

ಕ್ಷಮಿಸಿ, ಸಖಿಸತಿಯರಿಗೀಗ ಎದೆಬಿಚ್ಚಿ ಆಡಲೇಬೇಕಾದ ಕಾಲ ಬಂದಿದೆ..

Wednesday, June 10, 2015

'ಭಗತ್ ಸಿಂಗ್ ಜೈಲ್ ಡೈರಿ' ಪುಸ್ತಕದ ಮುಖಪುಟ ಯಾವುದಿರಲಿ

 

ನಮ್ಮ ಪ್ರಕಾಶನದ 100 ನೇ ಪುಸ್ತಕವಾಗಿ ಭಗತ್ ಸಿಂಗ್ ಜೈಲ್ ಡೈರಿ ಹೊರಬರುತ್ತಿದೆ. ಚಮನ್ ಲಾಲ ಸಂಪಾದಿಸಿದ್ದ ಈ ಪುಸ್ತಕವನ್ನು ಡಾ ಎಚ್ ಎಸ್ ಅನುಪಮಾ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕಕ್ಕೆ ಜಿ. ರಾಮಕೃಷ್ಣ ಅವರು ತುಂಬ ಅಭ್ಯಾಸಪೂರ್ಣ ಮಾತುಗಳನ್ನು ಬರೆದಿದ್ದಾರೆ. ಭಗತ್ ಸಿಂಗ್ ಕುರಿತಾಗಿ ಕನ್ನಡದಲ್ಲಿ ಮೊದಲ ಬಾರಿಗೆ ಪುಸ್ತಕ ತಂದವರು ಅವರು. ಡೈರಿ ಪುಸ್ತಕವು ಮುಂದಿನ ವಾರದ ಹೊತ್ತಿಗೆ ಓದುಗರ ಕೈಗೆ ತಲುಪಲಿದೆ. ಈ ಪುಸ್ತಕಕ್ಕೆ ನನ್ನ ಇಷ್ಟದ ಚಿತ್ರಕಾರ ಜಿ ಅರುಣಕುಮಾರ 5 ಮುಖಪುಟ ಮಾಡಿದ್ದಾರೆ. ನಿಮಗೆ ಯಾವುದು ಇಷ್ಟವಾಯಿತು. ತಿಳಿಸಿ

Tuesday, June 09, 2015

ನಾನು ಭಯೋತ್ಪಾದನೆಯ ಪರ..


ನಿಜಾರ್ ಖಬ್ಬಾನಿ
 
ಅನು: ಡಾ ಎಚ್ ಎಸ್ ಅನುಪಮಾ


ನಮ್ಮ ನೆಲ ಸೀಳುವ, 
ನಮ್ಮ ಇತಿಹಾಸ ಒರೆಸಿಹಾಕುವ
ಇಸ್ರೇಲಿನ ಬುಲ್ಡೋಜರುಗಳಿಗೆ ತಲೆಕೊಟ್ಟು 
ಸಾಯಲು ನಿರಾಕರಿಸಿದೆವಾದರೆ
ಭಯೋತ್ಪಾದನೆಯ ಗುನ್ನೆ ನಮ್ಮ ತಲೆಗೆ ಕಟ್ಟಲಾಗುತ್ತದೆ..

ಈ ಬುವಿಯ ಮೇಲಿಂದ
ಉಜ್ಜಿ ಒರೆಸಿ ಅಳಿಸಿ ನಾಶಮಾಡಿಕೊಳಲು  
ನಾವು ನಿರಾಕರಿಸಿದರೆ
ಭಯೋತ್ಪಾದನೆಯ ಅಪರಾಧ ನಮ್ಮದಾಗುತ್ತದೆ..

ಸೀಸರನ ಸೀಸರನು 
ತನ್ನ ಬೇಳೆ ಬೇಯಿಸಿಕೊಳಲು
ಭದ್ರತಾ ಮಂಡಳಿಯೆಂಬ ಗಾಜಿನ ಮನೆಯ 
ವಶಮಾಡಿಕೊಂಡಿರುವಾಗ 
ಕಲ್ಲೊಗೆದ ನಮಗೆ
ಭಯೋತ್ಪಾದನೆಯ ಪಟ್ಟ ದೊರೆಯುತ್ತದೆ..

ತೋಳದೊಡನೆ ಒಪ್ಪಂದ ನಿರಾಕರಿಸಿದರೆ
ಭಯೋತ್ಪಾದನೆಯ ಗುನ್ನೆ ತಲೆಗೇರುತ್ತದೆ..

ನಮ್ಮ ನೆಲ, ಅದರ ಧೂಳಿನ ಮಾನ
ನಾವು ಕಾದುಕೊಂಡರೆ;
ನಮ್ಮವರ ಅತ್ಯಾಚಾರ 
ನಮ್ಮದೇ ಅತ್ಯಾಚಾರವ 
ದಿಟ್ಟವಾಗಿ ವಿರೋಧಿಸಿದರೆ;
ನಮ್ಮ ಆಗಸದ ಕೊನೆಯ ತಾರೆಗಳ
ಮುಚ್ಚಿಟ್ಟು, ಕಾಪಿಟ್ಟುಕೊಂಡರೆ;
ಭಯೋತ್ಪಾದನೆಯ ಕಿರೀಟ ತೊಡಿಸಲಾಗುತ್ತದೆ

ಇದು, ಇವು, ಈ ಭಯೋತ್ಪಾದನೆ
ಪಾಪವೇ ಆದಲ್ಲಿ
ಭಯೋತ್ಪಾದನೆ ಎಷ್ಟು ಸುಂದರ!
ನಾನು ಭಯೋತ್ಪಾದನೆಯ ಪರ.
ಎಲ್ಲಿಯವರೆಗೆ ಹೊಸ ಜಗತ್ತು
ನನ್ನ ಸಂತತಿಯ ಕೊಚ್ಚಿ ಕಡಿದು
ನಾಯಿಪಾಲು ಮಾಡುವುದೋ,
ನಾನು ದನಿಯೆತ್ತಿ ಹೇಳುವವನಿದ್ದೇನೆ ಅಲ್ಲಿಯತನಕ 
ನಾನು ಭಯೋತ್ಪಾದನೆಯ ಪರ..

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...