Tuesday, March 31, 2015

ಆಪ್ : ಒಂದು ಕಾರ್ಟೂನ್


ಇಂಗ್ಲಿಷ್‌ನ ಯಜಮಾನಿಕೆಗೆ ಇತಿಶ್ರೀ ಅನಿವಾರ್ಯ


  
 
 
 
 
 
 
 
 
 
 
ರಾಮಲಿಂಗಪ್ಪ ಬೇಗೂರು
ಸೌಜನ್ಯ: ವಿಜಯ ಕರ್ನಾಟಕ
 
 
 
 
 
 
3003-2-2-AKSHARA_PRESCHOOL_062_GRID7


ಕನ್ನಡವು ಕಲಿಕೆಯ ಮಾಧ್ಯಮ ಆಗಬೇಕು ಎಂಬ ನಮ್ಮ ಕನಸು ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿ ಮುಕ್ತಾಯ ಕಂಡಿದೆ. ಏಕೆಂದರೆ, ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯು ವಜಾ ಆಗಿದೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲಿ ಸೋತಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ. ನಮ್ಮಲ್ಲಿ ಅಭಿಮಾನ ಇದೆ, ಆದರೆ ಆ ಅಭಿಮಾನವನ್ನು ಕಾರ್ಯರೂಪಕ್ಕೆ ಇಳಿಸುವ ಯೋಜನೆಗಳಿಲ್ಲ. ಸರ್ಕಾರಕ್ಕೆ ಸರಿಯಾದ ಭಾಷಾನೀತಿಯಿಲ್ಲ. ಅದನ್ನು ಜಾರಿಗೊಳಿಸುವ ಭಾಷಾ ಯೋಜನೆಯೂ ಇಲ್ಲ. ಜನರಿಗಾದರೂ ಈ ಬಗ್ಗೆ ಒಂದು ಯೋಜನೆ, ಜಾರಿ ಚಳವಳಿ ಇದೆಯಾ? ಅದೂ ಇಲ್ಲ.

ನಮ್ಮ ಬದುಕನ್ನು ಖಾಸಗೀಕರಣ, ಐಷಾರಾಮೀಕರಣ, ದುಬಾರೀಕರಣ ಮತ್ತು ಆ ಮೂಲಕ ಜಾಗತೀಕರಣ ಮಾಡಿಕೊಳ್ಳುತ್ತ ಕನ್ನಡಿಗರಾಗಿ ಇರಲು ಹೇಗೆ ಸಾಧ್ಯ? ಬದುಕೇ ಅನ್ಯವಾಗುತ್ತ ಇರುವಾಗ ಭಾಷೆ ಅನನ್ಯವಾಗಲು ಹೇಗೆ ಸಾಧ್ಯ? ಕರ್ನಾಟಕದಲ್ಲೇ ಕನ್ನಡಿಗರಿಗೆ ಅನ್ನ ಹುಟ್ಟುವುದಿಲ್ಲ ಎಂದರೆ, ಕನ್ನಡ ಮಾಧ್ಯಮವನ್ನು ಸುಪ್ರೀಂ ಕೋರ್ಟ್ ರದ್ದು ಮಾಡುತ್ತದೆ ಎಂದರೆ ಏನು? ಇಂತಹ ಸ್ಥಿತಿಗೆ ಯಾರು ಕಾರಣ? ಇದನ್ನಿಂದು ನಾವೆಲ್ಲ ತೀವ್ರವಾಗಿ ಯೋಚಿಸಬೇಕಿದೆ.

ಬೆಲ್ಜಿಯಂನ ಭಾಷಾಶಾಸ್ತ್ರಜ್ಞೆ ತೊವ್ ಸ್ಕೂಟ್‌ನಬ್ ಕಾಂಗಾಸ್ ಮಾನವ ಹಕ್ಕುಗಳ ಪಟ್ಟಿಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಹಕ್ಕು ಇರಬೇಕೆಂದು ಹೋರಾಟ ಮಾಡಿದಾಕೆ. ಹಾಗೆಯೇ ನಾವೂ ಕೂಡ ನಮ್ಮನಮ್ಮ ಭಾಷೆಯನ್ನು ಶಿಕ್ಷಣದಲ್ಲಿ ಕಲಿಯುವ ಮತ್ತು ವ್ಯವಹಾರದಲ್ಲಿ ಬಳಸುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡುವ ಹಕ್ಕೊತ್ತಾಯ ಮಾಡಬೇಕಿದೆ. ಇದನ್ನು ಶಿಕ್ಷಣ ಹಕ್ಕು ಕಾಯಿದೆಯ ಅಂಗವಾಗಿಯೂ ಮೂಲಭೂತ ಹಕ್ಕುಗಳಲ್ಲಿ ಒಂದನ್ನಾಗಿಯೂ ಮಾಡಬೇಕಾದ ತುರ್ತು ಕೂಡ ಇದೆ. ಸಂವಿಧಾನ ತಿದ್ದುಪಡಿ ಒಂದರಿಂದಲೇ ಎಲ್ಲವೂ ಆಗುವುದಿಲ್ಲ. ಭಾಷೆಯನ್ನು ಜನ ಪ್ರೀತಿಸುವಂತೆ ಮೊದಲು ಆಗಬೇಕು. ಅದಕ್ಕೆಲ್ಲ ದೂರಗಾಮಿ ಭಾಷಾ ಯೋಜನೆಗಳು ಬೇಕು.

ಸಂಸ್ಕೃತದ ಗುಮ್ಮನಿಂದ ಬಿಡಿಸಿಕೊಳ್ಳಬಹುದು, ಆದರೆ ಇಂಗ್ಲಿಷ್ ದೈವದಿಂದ ಬಿಡುಗಡೆ ಇಲ್ಲ. ದೆವ್ವವಾದರೆ ಗುದ್ದಾಡಬಹುದು, ಉಚ್ಚಾಟಿಸಬಹುದು. ಆದರೆ ಇಂಗ್ಲಿಷ್ ದೆವ್ವವಲ್ಲ, ದೈವ. ಹಾಗಾಗಿಯೇ ಅದು ಆರಾಧನೀಯ. ಇಂಗ್ಲಿಷನ್ನು ಕೆಲವರಿಗೆ ಮಾತ್ರ ಇಂದು ಗಗಕುಸುಮ ಮಾಡಲಾಗಿದೆ! ಆಧುನಿಕೋತ್ತರ ಸಮಾಜದ ಅಸಮಾನತೆಯ ಹೊಸ ಅಸ್ತ್ರವಾಗಿ ಇಂಗ್ಲಿಷನ್ನು ಬಳಸಲಾಗುತ್ತಿದೆ.

ಇದನ್ನೆಲ್ಲ ನಿಜಕ್ಕೂ ನಮ್ಮದೇ ಭಾಷಾ ಯೋಜನೆಗಳು ಮತ್ತು ಅನುಷ್ಠಾನ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳುವ ಮೂಲಕ ಮೀರಲು ಸಾಧ್ಯವಿದೆ. ನಮ್ಮಲ್ಲಿ ಎಲ್ಲಕ್ಕೂ ಯೋಜನೆಗಳಿವೆ. ವಾರ್ಷಿಕವಾಗಿ ಹಣಕಾಸು ಸಂಗ್ರಹಿಸಲು ಯೋಜನೆಗಳಿವೆ, ಹಣಕಾಸು ಖರ್ಚು ಮಾಡಲು ಯೋಜನೆಗಳಿವೆ, ನಗರ ನಿರ್ಮಾಣಕ್ಕೂ ಯೋಜನೆಗಳಿವೆ, ಪಂಚವಾರ್ಷಿಕ ಯೋಜನೆಗಳಂತೂ ದಶಕಗಳಿಂದ ನಮ್ಮಲ್ಲಿ ಇವೆ. ಆದರೆ ಸರಿಯಾದ ಭಾಷಾನೀತಿ ಇಲ್ಲ ಮತ್ತು ಅದನ್ನು ಕಾಲಮಿತಿಯಲ್ಲಿ ಜಾರಿ ಮಾಡಬಹುದಾದ ಭಾಷಾ ಯೋಜನೆಗಳಿಲ್ಲ. ನಮಗೆ ಭಾಷಾಯೋಜನೆಗಳೇನೋ ಬೇಕು. ಆದರೆ ಅವನ್ನು ಯಾರು ತಯಾರು ಮಾಡಬೇಕು? ನಾಡಿನ ಭಾಷಾತಜ್ಞರ ಒಂದು ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು. ಚಿಂತನ-ಮಂಥನ ನಡೆಸಿ ಜನರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಆ ಸಮಿತಿ ಅವನ್ನು ತಯಾರು ಮಾಡಬೇಕು. ಅವನ್ನು ಸರ್ಕಾರ ಹಂತಹಂತವಾಗಿ ಜಾರಿ ಮಾಡಬೇಕು.

ನಮ್ಮ ಭಾಷಾಯೋಜನೆಗಳಲ್ಲಿ ಏನಿರಬೇಕು ಎಂದು ಸ್ವಲ್ಪ ಯೋಚಿಸಬೇಕಲ್ಲವೆ? ಎಂಥ ಯೋಜನೆಗಳು ಬೇಕು ಎಂಬ ಬಗ್ಗೆ ಮುಂದೆ ನೋಡೋಣ:

1. ಒಂದು ಪ್ರದೇಶದಲ್ಲಿ ಹಲವು ಭಾಷೆಗಳು ಬಳಕೆ ಆಗುತ್ತಿದ್ದರೆ ಅಲ್ಲಿ ನೆಲನುಡಿಗೆ ಪ್ರಾಶಸ್ತ್ಯ ಬೇಡವೇ? ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಎರಡನೇ ದರ್ಜೆ ಸ್ಥಾನಮಾನ ಇದ್ದರೆ ಏನರ್ಥ? ಭಾಷೆಗಳ ಸ್ಥಾನ ನಿರ್ಧಾರದ ಯೋಜನೆಗಳು ಖಂಡಿತ ನಮಗಿಂದು ಅವಶ್ಯವಾಗಿ ಬೇಕು. ಕರ್ನಾಟಕದಲ್ಲಿ ಇಂಗ್ಲಿಷ್, ತೆಲುಗು, ಹಿಂದಿ ಇತ್ಯಾದಿಗಳ ಸ್ಥಾನಮಾನಗಳು ಹೇಗಿರಬೇಕು? ಈ ಬಗ್ಗೆ ಸರ್ಕಾರದ ನೀತಿ ಏನು? ಭಾಷಾ ಯೋಜನೆ ಎಂಬುದು (ಅಭಿವೃದ್ಧಿ ಯೋಜನೆ ಎಂಬಂತೆ) ಭಾಷಾನೀತಿಯ ಭಾಗವೇ ಆಗಿರುವಾಗ ಈ ಬಗ್ಗೆ ಕ್ರಿಯಾಯೋಜನೆಗಳನ್ನು ಮತ್ತು ವಿಧಾನಗಳನ್ನು ಸರ್ಕಾರ ರೂಪಿಸಿಕೊಳ್ಳಬೇಕಾಗಿದೆ.

2. ವರ್ಣಮಾಲೆ, ಲಿಪಿ, ವ್ಯಾಕರಣ, ಪದಕೋಶಗಳು ಇವೆಲ್ಲವೂ ಭಾಷೆಯ ಪರಿಕರಗಳೇ. ಇವೆಲ್ಲವನ್ನೂ ಮತ್ತೆ ಮತ್ತೆ ಪರಿಶೀಲಿಸಿ ಮರು ರೂಪಿಸಿಕೊಳ್ಳಬೇಕಾಗುತ್ತದೆ. ಭಾಷೆ ನಿರಂತರ ಬದಲಾಗುವುದರಿಂದ ಇವೆಲ್ಲವೂ ಮರುರೂಪಣೆಗೆ ಗುರಿ ಆಗುತ್ತಿರಬೇಕಾಗುತ್ತದೆ. ಇಂತಹ ಹೊಣೆಯನ್ನು ಸಂಸ್ಥೆ, ಸರ್ಕಾರ ಹೊರಬೇಕಾಗುತ್ತದೆ. ಈ ಬಗ್ಗೆ ನೀತಿ, ಯೋಜನೆ ನಿರಂತರವಾಗಿ ಇರಬೇಕಾಗುತ್ತದೆ. ಈಗೀಗ ಋ, ಙ, ಞ, ಅಃ, ಷ, ಮಹಾಪ್ರಾಣ ಇವುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ವರ್ಣಮಾಲೆಯ ಪರಿಷ್ಕಾರ, ಕನ್ನಡದ್ದೇ ವ್ಯಾಕರಣ, ಪದಕೋಶಗಳ ರಚನೆ ಮತ್ತು ಬಳಕೆ ಈ ಕುರಿತ ಭಾಷಾಯೋಜನೆಗಳು ನಮ್ಮಲ್ಲಿಲ್ಲ. ಪರಿಕರಗಳ ನಿರಂತರ ನಿರ್ಮಾಣಕ್ಕೆ ನಿರಂತರ ಭಾಷಾಯೋಜನೆಗಳು ಆಗುತ್ತ ಇರಬೇಕಾಗುತ್ತದೆ.

3. ಕನ್ನಡದಲ್ಲಿ ಹಲವಾರು ಸಾಮಾಜಿಕ ಮತ್ತು ಚಾರಿತ್ರಿಕ ಒಳನುಡಿಗಳಿವೆ. ಅವುಗಳನ್ನೆಲ್ಲ ರಕ್ಶಿಸಬೇಕಾದ, ಅವುಗಳೊಂದಿಗೆ ಭಿನ್ನವಾಗಿ ಒಡನಾಡಬೇಕಾದ ಮತ್ತು ಅವುಗಳಲ್ಲಿ ಅಡಗಿರಬಹುದಾದ ಜ್ಞಾನಸಂಪತ್ತನ್ನು ವರ್ತಮಾನಕ್ಕೆ ತಂದುಕೊಳ್ಳಬೇಕಾದ ಅಗತ್ಯವಿದೆ. ಜೀವವೈವಿಧ್ಯವನ್ನು ಹೇಗೆ ಕಾಪಾಡಬೇಕೋ ಹಾಗೆಯೇ ಭಾಷಾವೈವಿಧ್ಯವನ್ನೂ ಕಾಪಾಡಿಕೊಳ್ಳಬೇಕಿದೆ. ಕನ್ನಡ ಜಾರಿ ಎಂದರೆ ಒಳನುಡಿಗಳ ಮತ್ತು ಒಡನುಡಿಗಳ ಮೇಲಿನ ದಬ್ಬಾಳಿಕೆ ಎಂದಾಗಬಾರದು. ಲಂಬಾಣಿ, ಕೊಡವ, ತುಳು, ಅರವ, ಸೋಲಿಗ ಹೀಗೆ ಇರುವ ಹಲವು ಒಳನುಡಿಗಳನ್ನೂ ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ.

4. ಇನ್ನು ಕಲಿಕೆಯಲ್ಲಿ ಮತ್ತು ಆಡಳಿತದಲ್ಲಿ ಕನ್ನಡವನ್ನು ಬಳಸುವ ಕಾನೂನು ಇದ್ದರೆ ಸಾಲದು. ಕೇವಲ ಸಂಕಲ್ಪ ಮಾತ್ರದಿಂದ ಜಾರಿ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇದಕ್ಕೆಲ್ಲ ನಿರಂತರ ಭಾಷಾಯೋಜನೆಗಳು ಬೇಕು. 1963ರಿಂದ ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ ಕಾನೂನು ಇದ್ದರೂ ಅದು ಸರಿಯಾಗಿ ಜಾರಿಯಾಗಿಲ್ಲ. ಆಡಳಿತ ಮತ್ತು ಕಲಿಕೆ ಎರಡೂ ಕಡೆ ಇಂಗ್ಲಿಷ್‌ನ ಬದಲು ಕನ್ನಡ ಎನ್ನುವ ಸ್ಥಿತಿಗಿಂತ ಇಂಗ್ಲಿಷ್‌ನ ಮೂಲಕ ಕನ್ನಡ ಮತ್ತು ಇಂಗ್ಲಿಷ್‌ನ ಜೊತೆಗೆ ಕನ್ನಡ ಎನ್ನುವಂತಹ ವಾತಾವರಣ ಮಾತ್ರ ಇದೆ. ಆಡಳಿತದಲ್ಲಿ ಕನ್ನಡವನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ಬಗೆಗಳನ್ನು ಕುರಿತ ಯೋಜನೆಗಳನ್ನು ತಜ್ಞರೊಂದಿಗೆ ಚರ್ಚಿಸಿ ಸಿದ್ಧಪಡಿಸಿಕೊಂಡು ಜಾರಿಗೊಳಿಸುವ ಅಗತ್ಯವಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಕಲಿಕೆಯಲ್ಲಿ ಇಂಗ್ಲಿಷನ್ನು ಪೋಷಕರ ಆಯ್ಕೆಗೆ ಬಿಟ್ಟಾಯಿತು. ಇನ್ನು ಮುಂದೆ ಇಂಗ್ಲಿಷ್ ಮಾರುವ ಅಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳಲಿವೆ. ಜನಸಮೂಹದ ಬ್ರೆ ನ್ ವಾಶ್ ಮಾಡಲು ಈಗ ಇನ್ನಷ್ಟು ಅವಕಾಶ ಆಗಿದೆ. ಸರಕಾರ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಕಾನೂನು ಮಾಡಲಿದೆ. 5ನೇ ತರಗತಿವರೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಲು ಕೂಡ ಹೊರಟಿದೆ. ಇದೆಲ್ಲ ಯಾರಿಗಾಗಿ? ಒಂದು ಕಡೆ ಇಂಗ್ಲಿಷ್ ಶಾಲೆಗೆ ಪರವಾನಗಿ ಕೊಡುತ್ತ ಇನ್ನೊಂದು ಕಡೆ ಹೀಗೆ ಕಾನೂನು ಮಾಡಿದರೆ ಏನು ಪ್ರಯೋಜನ? ಶಾಲಾ ಶಿಕ್ಷಣದಲ್ಲಿ ತಾರತಮ್ಯ ಇರುವವರೆಗೆ ಸಾಮಾಜಿಕ ತಾರತಮ್ಯ ತೊಲಗುವುದಿಲ್ಲ.

5. ಅನುವಾದದ ಸರಿಯಾದ ಯೋಜನೆಗಳು ಇಲ್ಲದೇ ಇರುವುದರಿಂದಲೇ ದೇಶದ ಯಾವ ರಾಜ್ಯದಲ್ಲೂ ಹಲವಾರು ವರ್ಷಗಳಿಂದ ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಸಂಪೂರ್ಣವಾಗಿ ಜಾರಿ ಮಾಡಲು ಆಗಿಲ್ಲ. ಗಣರಾಜ್ಯ ವ್ಯವಸ್ಥೆಯನ್ನು ನಾವು ಒಪ್ಪಿರುವುದರಿಂದ ರಾಜ್ಯ- ರಾಜ್ಯಗಳ ನಡುವೆ ಮತ್ತು ಕೇಂದ್ರದ ನಡುವೆ ನಿತ್ಯ ವ್ಯವಹಾರ ಮಾಡಬೇಕಾದ ಅಗತ್ಯ ಇರುವುದರಿಂದ, ಕೇಂದ್ರ ನೇಮಿಸುವ ಅಖಿಲ ಭಾರತೀಯ ಸೇವೆ ಇರುವುದರಿಂದ ನಮ್ಮಲ್ಲಿ ಬಹುಭಾಷೆಗಳ ನಡುವೆ ಸಂವಹನ ಭಾಷೆಯಾಗಿ (ದಲ್ಲಾಳಿಯಾಗಿ) ಇಂಗ್ಲಿಷ್ ಸ್ಥಾಪಿತವಾಗಿದೆ. ಇದೆಲ್ಲದರಿಂದ ಬಿಡುಗಡೆ ಸಿಗಬೇಕೆಂದರೆ ಸ್ಥಳೀಯ ರಾಜ್ಯಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿ ಮಾಡುವ ಮತ್ತು ಆಯಾ ರಾಜ್ಯಭಾಷೆಗಳನ್ನೇ ಆಡಳಿತ ಭಾಷೆಗಳಾಗಿ ಜಾರಿ ಮಾಡುವ ಭಾರತೀಯ ಭಾಷಾನೀತಿ ಮತ್ತು ಯೋಜನೆಗಳು ಕೂಡ ಬೇಕು.

ಅಂತಾರಾಜ್ಯ ಮತ್ತು ರಾಜ್ಯ-ಕೇಂದ್ರಗಳ ನಡುವಣ ಸಂವಹನವನ್ನು ಸದಾ ರಾಜ್ಯಭಾಷೆಗಳಿಂದ ಹಿಂದಿಗೆ ಅನುವಾದ ಮಾಡಿ ನಡೆಸುವ ಒಂದು ದೊಡ್ಡ ಜಾಲ ಸ್ಥಾಪನೆ ಆಗಬೇಕು. ಆಗ ಮಾತ್ರ ಭಾರತದಲ್ಲಿ ನಾವು ಇಂಗ್ಲಿಷ್‌ನ ಯಜಮಾನಿಕೆಯನ್ನು ಕೊಲ್ಲಲು ಸಾಧ್ಯ. ಇದಕ್ಕಾಗಿ ಅಖಿಲ ಭಾರತೀಯ ಮಟ್ಟದಲ್ಲಿ ಅನುವಾದದ ಮಿಷನ್ ಮತ್ತು ಆಯಾ ರಾಜ್ಯ ಮಟ್ಟಗಳಲ್ಲು ಅನುವಾದ ಮಿಷನ್‌ಗಳು ಸ್ಥಾಪನೆ ಆಗಬೇಕು. ಒಂದು ಕಾಲದ ಯಜಮಾನರ ಭಾಷೆಯಾದ ಇಂಗ್ಲಿಷ್ ಇಂದೂ ಯಜಮಾನಿಕೆ ಭಾಷೆಯಾಗಿ ಆಳುತ್ತಿದೆ. ಅದನ್ನು ಕುಲಗೆಡಿಸುವ ಯೋಜನೆಗಳ ಮೂಲಕ ಅದರ ಯಜಮಾನಿಕೆಯನ್ನು ಮುರಿಯಬೇಕಿದೆ.

ಈಗ ತುರ್ತು ಕಾಲ ಬಂದಿದೆ. ಅಪಾಯ ಬಂದಾಗ ಕೈಕಟ್ಟಿ ಕೂತರೆ ಬಂಡವಾಳಶಾಹಿಗಳು ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಭಾಷೆಯ ಮೂಲಕವೇ ಸಂಸ್ಕೃತಿ ಮತ್ತು ಸ್ಥಳೀಯತೆ ಹಾಗೂ ಸಮಾನತೆಯ ಪ್ರಶ್ನೆಗಳನ್ನು ಇನ್ನಷ್ಟು ವಿಸ್ತಾರವಾಗಿ ಕನ್ನಡಿಗರೆಲ್ಲರೂ ಒಟ್ಟಿಗೆ ಚಿಂತಿಸಬೇಕಿದೆ. ಆ ಚಿಂತನೆ ಇತರ ಭಾರತೀಯ ಭಾಷೆಗಳ ಉಳಿವಿಗೆ ಮಾರ್ಗಸೂಚಿಯೂ ಆಗುವಂತೆ ಮಾಡಬೇಕಿದೆ.

ಅಮಿತ್ ಶಾಗೆ ಸಂಘ ಪರಿವಾರ ಶಾಕ್!
ಧೀರೇಂದ್ರ ಕೆ.ಝಾ

ಅಮಿತ್ ಶಾಗೆ ಸಂಘ ಪರಿವಾರ ಶಾಕ್!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಹುಶಃ ನೋಟಿಸ್ ಅವಧಿಯಲ್ಲಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ನಿವಾಸದಲ್ಲಿ ಮಾರ್ಚ್ 23ರಂದು ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠ ಮಂಡಳಿ ಸಭೆಯಲ್ಲಿ ಅಮಿತ್‌ ಶಾರ ಸರ್ವಾಧಿಕಾರಿ ಕಾರ್ಯಶೈಲಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಕ್ಷದ ಅತ್ಯುನ್ನತ ಹುದ್ದೆಗೆ ಮರುನೇಮಕ ಮಾಡುವ ಸಾಧ್ಯತೆಯನ್ನು ಅಲ್ಲಗಳೆದಿದೆ. ಆದ್ದರಿಂದ ಬಹುಶಃ ಅಮಿತ್ ಶಾ ಒಂಬತ್ತು ತಿಂಗಳ ಬಳಿಕ ಈ ಹುದ್ದೆಯಲ್ಲಿ ಮುಂದುವರಿಯುವುದು ಅಸಂಭವ ಎಂದು ವಿಶ್ಲೇಷಿಸಲಾಗುತ್ತಿದೆ.

ಆರೆಸ್ಸೆಸ್ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಭಯ್ಯೆಜಿ ಜೋಶಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ, ಪಕ್ಷಾಧ್ಯಕ್ಷ ಹುದ್ದೆಗೆ ಸೂಕ್ತ ಅಭ್ಯರ್ಥಿಯ ತಲಾಶ್ ಆರಂಭಿಸಿ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಜೋಶಿಯವರ ಈ ಸೂಚನೆ ಬಗ್ಗೆ ಮತ್ತೆ ಚರ್ಚೆ ನಡೆದಿಲ್ಲ, ಆದರೆ ಎರಡನೆ ಅವಗೆ ಶಾರ ಮುಂದುವರಿಕೆಗೆ ಸಂಬಂಸಿದಂತೆ ಆರೆಸ್ಸೆಸ್ ನಿಲುವು ವ್ಯಕ್ತವಾದಂತಾಗಿದೆ. ಇದರಿಂದ ಬಿಜೆಪಿ ಅಧ್ಯಕ್ಷರಿಗೆ ಅವ್ಯಕ್ತ ಭಯ ಕಾಡಲಾರಂಭಿಸಿದೆ.

ಹೊಸ ಬಿಜೆಪಿ ತಂಡದಿಂದ ಹೊರಗೆ ಉಳಿದಿರುವ ಮನೋಭಾವವಿರುವ ಬಹಳಷ್ಟು ಮಂದಿ ನಾಯಕರನ್ನು ಪಕ್ಷದ ಆಡಳಿತ ವ್ಯವಸ್ಥೆಗೆ ಮತ್ತೆ ತರುವ ಪ್ರಯತ್ನದಲ್ಲಿ ನಾಗಪುರ ಈ ಸಂದೇಶ ರವಾನಿಸಿದೆ ಎಂದು ಆರೆಸ್ಸೆಸ್ ವಲಯದಲ್ಲಿ ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ. ಸರಕಾರ, ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಹೆಚ್ಚಿನ ಸಮನ್ವಯ ಸಾಸುವ ಪ್ರಯತ್ನವಾಗಿ ಮಾರ್ಚ್ 23ರ ಸಭೆ ಆಯೋಜಿಸಲಾಗಿತ್ತು. ಆರೆಸ್ಸೆಸ್ ಪರವಾಗಿ ಭಯ್ಯೆಜಿ ಜೋಶಿ ಅವರಲ್ಲದೇ ಸಹ ಸರಕಾರ್ಯವಾಹ (ಜಂಟಿ ಪ್ರಧಾನಕಾರ್ಯದರ್ಶಿ) ಕೃಷ್ಣಗೋಪಾಲ ಮತ್ತು ಸುರೇಶ್ ಸೋನಿ, ಬಿಜೆಪಿಯಿಂದ ಅಮಿತ್ ಶಾ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ಲಾಲ್ ಹಾಗೂ ರಾಮಮಾಧವ, ಸರಕಾರದ ಪ್ರತಿನಿಧಿಗಳಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜನಾಥ್‌ಸಿಂಗ್, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಭಾಗವಹಿಸಿದ್ದರು.

ಮಹತ್ವದ ಬಿಹಾರ ಸಮರ

ಈ ಬೆಳವಣಿಗೆಯ ತಕ್ಷಣ ಅಮಿತ್ ಶಾ ತಮ್ಮ ಇಮೇಜ್ ಬದಲಿಸಿಕೊಳ್ಳುವ ಸಾಹಸ ಆರಂಭಿಸಿದ್ದಾರೆ. ಪಕ್ಷದ ಚಟುವಟಿಕೆಗಳಿಂದ ಸಂಪರ್ಕ ಕಡಿದುಕೊಂಡ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರ ಮನವೊಲಿಕೆ ಕಸರತ್ತು ಶುರು ಮಾಡಿದ್ದಾರೆ. ಈ ಸಭೆ ನಡೆದ 24 ಗಂಟೆಯ ಒಳಗಾಗಿ ಅಮಿತ್ ಶಾ, ಆರೆಸ್ಸೆಸ್ ವರಿಷ್ಠರ ಜತೆಗೆ ಮೂಲೆಗುಂಪಾದ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ. ಇವರಿಬ್ಬರೂ ಪಕ್ಷದ ಮಾರ್ಗದರ್ಶಕ ಮಂಡಳಿ ಸದಸ್ಯರಾಗಿದ್ದು, ಈ ಮಂಡಳಿ ರಚನೆ ಬಳಿಕ ಒಂದು ಬಾರಿಯೂ ಮಂಡಳಿ ಸಭೆ ನಡೆದಿಲ್ಲ ಎನ್ನುವುದು ಗಮನಾರ್ಹ. ನಂತರ ತಾನು ಪ್ರತೀ ತಿಂಗಳ ಮೊದಲ ಹಾಗೂ ಮೂರನೆ ಸೋಮವಾರದಂದು ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಬಿಜೆಪಿ ಕೇಂದ್ರ ಕಚೇರಿಯಲ್ಲೇ ಲಭ್ಯ. ಈ ಅವಧಿಯಲ್ಲಿ ಪಕ್ಷದ ಯಾವುದೇ ಕಾರ್ಯಕರ್ತರು ನೇರವಾಗಿ ಭೇಟಿ ಮಾಡಬಹುದು ಎಂದು ಶಾ ಈ ಸಭೆಯ ಬಳಿಕ ಹೇಳಿಕೆ ನೀಡಿದ್ದಾರೆ.

ಈ ಕ್ರಮಗಳು ಅಮಿತ್ ಶಾ ಅವರ ಇಮೇಜ್ ಬದಲಿಸಲು ಮತ್ತು ತಮ್ಮ ಪ್ರಾಬಲ್ಯದ ಮರುಸ್ಥಾಪನೆಗೆ ಸಹಕಾರಿಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಅಮಿತ್ ಶಾ ಅವರು ಇನ್ನು ಮುಂದೆ ತಮ್ಮ ಹಳೆಯ ಕಾರ್ಯಶೈಲಿಯ, ಆತ್ಮವಿಶ್ವಾಸದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಲದ ಹಿಂದಿನ ಶಕ್ತಿಯಾಗಿ ಉಳಿಯುವ ಸಾಧ್ಯತೆ ವಿರಳ ಎನ್ನುವುದು ಈ ಬೆಳವಣಿಗೆಯಿಂದ ಗೊತ್ತಾಗುತ್ತದೆ.

ಶಾರವರ ಭವಿಷ್ಯ ಬಿಹಾರ ಚುನಾವಣೆಯ ಫಲಿತಾಂಶವನ್ನು ಆಧರಿಸಿದೆ ಎಂಬ ಅಭಿಪ್ರಾಯ ಬಿಜೆಪಿ ಮತ್ತು ಆರೆಸ್ಸೆಸ್ ವಲಯದಲ್ಲಿ ಕೇಳಿಬರುತ್ತಿದೆ. ಶಾರವರ ಅಕಾರಾವ 2016ರ ಜನವರಿಯಲ್ಲಿ ಮುಕ್ತಾಯವಾಗಲಿದ್ದು, ಇದಕ್ಕೆ ಎರಡು ತಿಂಗಳ ಮೊದಲು ಅಂದರೆ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಸಂಘ ಪರಿವಾರದ ದೃಷ್ಟಿಕೋನದಿಂದ ಭಯ್ಯಿಜಿ ಜೋಶಿಯವರ ಸೂಚನೆಯಲ್ಲಿ ಯಾವ ವಿಶೇಷವೂ ಇಲ್ಲ. ಪ್ರತಿ ಬಾರಿ ಬಿಜೆಪಿ ಅಧ್ಯಕ್ಷರ ನೇಮಕ ಅವಧಿಯಲ್ಲೂ, ಹಾಲಿ ಅಧ್ಯಕ್ಷರೂ ಸೇರಿದಂತೆ ಪಕ್ಷದ ಹಿರಿಯ ನಾಯಕರ ಅಭಿಪ್ರಾಯಗಳನ್ನು ಆರೆಸ್ಸೆಸ್ ಕ್ರೋಡೀಕರಿಸುತ್ತದೆ. ಈ ಮಾಹಿತಿ- ಅಭಿಪ್ರಾಯ ಹಾಗೂ ತನ್ನ ಸ್ವ ಮೌಲ್ಯಮಾಪನದ ಆಧಾರದಲ್ಲಿ ಆರೆಸ್ಸೆಸ್ ಬಿಜೆಪಿ ಅಧ್ಯಕ್ಷ ಹುದ್ದೆಗೆ ಹೆಸರು ಸೂಚಿಸುತ್ತದೆ. ನಂತರ ಬಿಜೆಪಿ ಇದನ್ನು ಅಧಿಕೃತವಾಗಿ ಅವಿರೋಧ ಆಯ್ಕೆ ಎಂದು ಘೋಷಿಸುತ್ತದೆ. ಹಾಲಿ ಅಧ್ಯಕ್ಷರಿಗೆ ಎರಡನೆ ಅವಧಿಯನ್ನು ನೀಡುವಾಗಲೂ ಈ ಪ್ರಕ್ರಿಯೆಯನ್ನು ಆರೆಸ್ಸೆಸ್ ನಡೆಸುತ್ತದೆ.

ಬಿಜೆಪಿ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷಗಳು. ಆದರೆ 2014ರ ಮೇ ತಿಂಗಳಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿದ ಹಿನ್ನೆಲೆಯಲ್ಲಿ ಅವರ ಹುದ್ದೆಗೆ ಮಧ್ಯಾವಧಿಯಲ್ಲಿ ಉತ್ತರಾಧಿಕಾರಿಯನ್ನು ನೇಮಿಸಲಾಗಿತ್ತು. ರಾಜನಾಥ್ ಸಿಂಗ್ ಅವರನ್ನು 2013ರ ಜನವರಿಯಲ್ಲಿ ಆಯ್ಕೆ ಮಾಡಿದ್ದರಿಂದ ಅವರ
ಅಧಿಕಾರಾವಧಿ 2016ರ ಜನವರಿವರೆಗೆ ಇತ್ತು. ಬಿಜೆಪಿ ಅಧ್ಯಕ್ಷ ಹುದ್ದೆಯ ಅರ್ಧ ಅವಧಿಯನ್ನು ರಾಜನಾಥ್‌ಸಿಂಗ್ ಪೂರ್ಣಗೊಳಿಸಿದ್ದರಿಂದ, ಮಧ್ಯಾವಧಿ ಅಧ್ಯಕ್ಷರ ಅವಧಿಯನ್ನೂ 2016ರ ಜನವರಿಗೇ ಸೀಮಿತಗೊಳಿಸಲಾಗಿತ್ತು.

ಫೆಲೆಸ್ತೀನಿಯನ್ನರಿಗೆ ಮತ್ತೊಂದು ಸುತ್ತಿನ ಅಗ್ನಿಪರೀಕ್ಷೆ?ಝೈದ್ ಜಿ. ತೋಡಾರ್

ಫೆಲೆಸ್ತೀನಿಯನ್ನರಿಗೆ ಮತ್ತೊಂದು ಸುತ್ತಿನ ಅಗ್ನಿಪರೀಕ್ಷೆ?


ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ನಾಲ್ಕನೆ ಅವಗೆ ಆಯ್ಕೆಯಾಗುವ ಮೂಲಕ ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆ ಇನ್ನಷ್ಟು ಕಷ್ಟದ ಹಾದಿಯನ್ನು ಮೈಮೇಲೆಳೆದು ಕೊಂಡಿದೆ. ನಮಗೆಲ್ಲ ತಿಳಿದಿರುವಂತೆ, ಬೆಂಜಮಿನ್ ನೆತನ್ಯಾಹು ಬಲಪಂಥೀಯ ರಾಜಕಾರಣಕ್ಕೆ ಹೆಸರಾದವರು. ‘ಒನ್ ಸ್ಟೇಟ್’ ನೀತಿಯ ಪ್ರಬಲ ಪ್ರತಿಪಾದಕರು. ಬಹುಕಾಲದಿಂದಲೂ ಫೆಲೆಸ್ತೀನರ ಅಸ್ತಿತ್ವವನ್ನೇ ನಿರಾಕರಿಸುತ್ತಾ ಬಂದವರು. ಮೇಲಾಗಿ ತಮ್ಮದೇ ರಾಷ್ಟ್ರದ ಜನಾಂಗೀಯ ಭಾವನೆಗಳನ್ನು ಉದ್ದೀಪಿಸಿ, ಜೀವಂತವಾಗಿಟ್ಟವರು. ಇಸ್ರೇಲ್‌ನಲ್ಲಿರುವ ಅರಬ್ ಮತದಾರರು ಝಿಯೋನಿಸ್ಟ್ ಪ್ರಭುತ್ವಕ್ಕೆ ಅಪಾಯವೆಂದು ಪದೇ ಪದೇ ಘೋಷಿಸುತ್ತಾ ಬಂದವರು. (ಮೊನ್ನೆಯ ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಅವರು ಎರಡು ಪ್ರಮುಖ ವಿಚಾರಗಳಿಗೆ ಒತ್ತು ನೀಡಿ ಮಾತಾಡಿದ್ದರು, ಫೆಲೆಸ್ತೀನನ್ನು ಈ ಭೂಪಟದಿಂದಲೇ ಅಳಿಸಿಹಾಕುವುದು ಮತ್ತು ಇಸ್ರೇಲ್ ಅರಬರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು) ಇಂತಹ ವಿಕ್ಷಿಪ್ತ ವ್ಯಕ್ತಿತ್ವದ ನೆತನ್ಯಾಹುರನ್ನು ನಾಲ್ಕನೆ ಅವಗೆ ಆಯ್ಕೆ ಮಾಡುವ ಮೂಲಕ ಇಸ್ರೇಲ್ ಜಾಗತಿಕವಾಗಿ ‘ಏಕಾಂಗಿ’ಯಾಗುವತ್ತ ಹೆಜ್ಜೆ ಇಟ್ಟಿದೆ.

ನೆತನ್ಯಾಹುರ ಮರು ಆಯ್ಕೆಯಿಂದ ಈಗ ತಲೆ ನೋವಾಗಿರುವುದು ಅಮೆರಿಕದ ಅಧ್ಯಕ್ಷರಾದ ಬರಾಕ್ ಒಬಾಮರಿಗೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ, ಕಳೆದ ಅರ್ಧ ಶತಮಾನದಿಂದ ಫೆಲೆಸ್ತೀನ್ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವಂತೆ ಇಸ್ರೇಲ್‌ಗೆ ಕುಮ್ಮಕ್ಕು ನೀಡುತ್ತಾ ಬಂದ ದೊಡ್ಡಣ್ಣ ಅಮೆರಿಕದ ಮಾತನ್ನೇ ತಳ್ಳಿಹಾಕುವ ಮಟ್ಟಕ್ಕೆ ಇಸ್ರೇಲ್ ಬೆಳೆದುನಿಂತಿದೆ. ಬಹಿರಂಗವಾಗಿ ತಮ್ಮದು ಎರಡು ರಾಷ್ಟ್ರಗಳ ನೀತಿಯ ಪರ ಎಂದು ಘೋಷಿಸುತ್ತಾ, ತೆರೆಯ ಹಿಂದಿನಿಂದ ಇಸ್ರೇಲ್ ಪ್ರಧಾನ ಮಂತ್ರಿಗಳ ಏಕರಾಷ್ಟ್ರ ಪರ ಸಿದ್ಧಾಂತಕ್ಕೆ, ಕಾನೂನು ಬಾಹಿರ ವಸಾಹತು ಶಾಹಿ ನಿರ್ಮಾಣಕ್ಕೆ ಬೆಂಬಲ ನೀಡುತ್ತಾ ಬಂದ ಅಮೆರಿಕ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಇರಿಸುಮುರಿಸಿಗೊಳಗಾಗಿದೆ. 2014ರಲ್ಲಿ ಕಾಂಗ್ರೆಸನ್ನುದ್ದೇಶಿಸಿ ಮಾತನಾಡುತ್ತಾ ಇಸ್ರೇಲ್ ಪ್ರಧಾನಮಂತ್ರಿಗಳು ತಮ್ಮ ‘ಏಕರಾಷ್ಟ್ರಪರ’ ಅಜೆಂಡಾವನ್ನು ಸ್ಪಷ್ಟಪಡಿಸಿದರು. ಫೆಲೆಸ್ತೀನ್ ನಾಗರಿಕರು ತಮ್ಮ ಸ್ವಾತಂತ್ರ್ಯ ಹೋರಾಟವನ್ನು ನಿಲ್ಲಿಸಿ ಎರಡನೆ ದರ್ಜೆಯ ಪ್ರಜೆಗಳಾಗಿ ಇರಲು ಬಯಸುವುದಾದರೆ ಶಾಂತಿ ಪ್ರಕ್ರಿಯೆಗೆ ಸಿದ್ಧ ಎನ್ನುವ ಅರ್ಥದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮತ್ತು ಆ ನಂತರ ಹಲವಾರಿ ವೇದಿಕೆಗಳಲ್ಲಿ ಅವರು ತಮ್ಮದು ಪ್ರಜಾಪ್ರಭುತ್ವವಾದಿ ಝಿಯೋನಿಸ್ಟ್ ಆಡಳಿತ ಎಂದು ಸ್ಪಷ್ಟಪಡಿಸುತ್ತಾ, ಇಸ್ರೇಲ್ ಎಂಬ ಏಕರಾಷ್ಟ್ರದ ಅಡಿಯಲ್ಲಿ ೆಲೆಸ್ತೀನ್ ಎಂಬ ಅತಂತ್ರ ರಾಷ್ಟ್ರ ಅಸ್ತಿತ್ವಕ್ಕೆ ಬರುವುದಾದರೆ ತಮ್ಮದೇನೂ ಅಡ್ಡಿಯಿಲ್ಲ ಎಂದರು. ಅಂದರೆ, ಫೆಲೆಸ್ತೀನ್ ಯಾವುದೇ ಸ್ವಾಯತ್ತತೆಯನ್ನು ಪಡೆಯದ ಎರಡನೆ ದರ್ಜೆಯ ರಾಷ್ಟ್ರವಾಗಿರುವುದು ಮಾತ್ರವಲ್ಲದೆ ಅದು ಎಂದೂ ತನ್ನ ರಕ್ಷಣೆಗೆ ಸೇನೆಯನ್ನಿಟ್ಟುಕೊಳ್ಳಬಾರದು ಎಂಬುದು ಅವರ ಮಾತಿನ ಒಟ್ಟಾರೆ ತಾತ್ಪರ್ಯ. ಅವರ ಪ್ರತಿಪಾದನೆ ಹೀಗಿದೆ, ಫೆಲೆಸ್ತೀನ್ ಸೇನೆಯನ್ನು ಇಟ್ಟುಕೊಂಡರೆ ಅದು ಅಪಾಯಕಾರಿ ಭಯೋತ್ಪಾದನೆ, ಇಸ್ರೇಲ್ ಇಟ್ಟುಕೊಂಡರೆ ಅದು ಸ್ವರಕ್ಷಣೆ, ಪ್ರಜಾಪ್ರಭುತ್ವ!

  ಆದರೆ, ತಮ್ಮನ್ನು ಬಲಿ ಯಜ್ಞಕ್ಕರ್ಪಿಸುವ ಈ ರೀತಿಯ ತೀರ್ಮಾನಕ್ಕೆ ಸ್ವಾತಂತ್ರ ಪ್ರಿಯರಾದ ಫೆಲೆಸ್ತೀನ್ ನಾಗರಿಕರು ಒಪ್ಪಿಕೊಳ್ಳುವುದಿಲ್ಲವೆಂದು ನೆತನ್ಯಾಹುರಿಗೂ ತಿಳಿದಿದೆ. ಅಂದರೆ, ಮಧ್ಯಪ್ರಾಚ್ಯದ ಶಾಂತಿಪ್ರಕ್ರಿಯೆ ಎಂದಿಗೂ ಅಂತಿಮ ಹಂತ ಮುಟ್ಟಬಾರದೆಂಬುದು ನೆತನ್ಯಾಹುರ ಬಲಪಂಥೀಯ ರಾಜಕೀಯ ಅಜೆಂಡ. ಹಾಗೊಂದು ವೇಳೆ, ಶಾಂತಿಪ್ರಕ್ರಿಯೆ ಪೂರ್ಣಗೊಂಡರೆ, ಪಶ್ಚಿಮ ದಂಡೆಯಲ್ಲಿ ಮುಂದುವರಿಯುತ್ತಿರುವ-ೆಲೆಸ್ತೀನ್ ಮತ್ತು ಇಸ್ರೇಲ್ ನಾಗರಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಏಕಕಾಲಕ್ಕೆ ಮಾರಕವಾಗಿರುವ, ಪಶ್ಚಿಮ ದಂಡೆಯ ಮೂಲ ನಿವಾಸಿಗಳನ್ನು ಬಹುಸಂಖ್ಯೆಯಲ್ಲಿ ಒಕ್ಕಲೆಬ್ಬಿಸಿ, ಆಸ್ತಿಪಾಸ್ತಿಗಳನ್ನು ಕಸಿದು, ಅಲ್ಲಿ ಇಸ್ರೇಲಿ ಪ್ರಜೆಗಳನ್ನು ತಂದು ಪ್ರತಿಷ್ಠಾಪಿಸುತ್ತಿರುವ-ಕಾನೂನು ಬಾಹಿರ ವಸಾಹತು ನಿರ್ಮಾಣವನ್ನು ನಿಲ್ಲಿಸಬೇಕಾಗುತ್ತದೆ. ಇದು ನೆತನ್ಯಾಹುರ ಬಲಪಂಥೀಯ ಝಿಯೋನಿಸ್ಟ್ ಮನಸ್ಥಿತಿಗೆ ಒಪ್ಪಿಗೆಯಾಗುವ ಸಂಗತಿಯಂತೂ ಖಂಡಿತ ಅಲ್ಲ.

ಇದೇನು ಹೊಸತಲ್ಲ. ಕಳೆದ ಹಲವಾರು ದಶಕಗಳಿಂದ ಬೆಂಜಮಿನ್ ನೆತನ್ಯಾಹು ಸಹಿತ ಇಸ್ರೇಲಿನ ಬಹುತೇಕ ರಾಜಕೀಯ ನಾಯಕರು ನೇರವಾಗಿ ಅಥವಾ ಪರೋಕ್ಷವಾಗಿ ಇದೇ ನೀತಿಯನ್ನು ಪ್ರತಿಪಾದಿಸುತ್ತಾ ಬಂದಿ ದ್ದಾರೆ. ಆದರೆ, ನೆತನ್ಯಾಹುರ ಇತ್ತೀಚಿನ ರಾಜಕೀಯ ಹೇಳಿಕೆಗಳು ಮಾತ್ರ ಅಮೆರಿಕದ ಗೋಸುಂಬೆತನಕ್ಕೆ ಬಲವಾದ ಸವಾಲಾಗಿದೆ. ಇಸ್ರೇಲ್ ಸೈನಿಕರಿಂದ ಏನೇ ಮಾನವ ಹಕ್ಕುಗಳ ಉಲ್ಲಂಘನೆಯಾದರೂ ಅಮೆರಿಕದ ಅಧ್ಯಕ್ಷರಿಗೆ ಜಾಗತಿಕವಾಗಿ ಮುಖ ಉಳಿಸಿಕೊಳ್ಳುವುದಕ್ಕೆ ಇಸ್ರೇಲಿನ ಸುರಕ್ಷತೆ ಎಂಬ ಪೊಳ್ಳು ರಕ್ಷಣಾತ್ಮಕ ಆಯುಧವೊಂದು ಸಿದ್ಧವಾಗಿರುತಿತ್ತು. ಇದಕ್ಕೆ ಹತ್ತಿರದ ಉದಾಹರಣೆ 2014ರಲ್ಲಿ ಇಸ್ರೇಲ್ ನಡೆಸಿದ ಮಾರಣ ಹೋಮ! ಈ ಮಾರಣಹೋಮವನ್ನು ಸಮರ್ಥಿಸುತ್ತಾ ಅಮೆರಿಕದ ಅಧ್ಯಕ್ಷರು, ಇಸ್ರೇಲ್ ಎಂಬ ರಾಷ್ಟ್ರಕ್ಕೆ ಅಪಾಯವಿದೆ. ಆದ್ದರಿಂದ ಇದು ಅನಿವಾರ್ಯ ಎಂಬ ಅರ್ಥದಲ್ಲೇ ಸಮಜಾಯಿಷಿಕೆ ನೀಡಿದ್ದರು. ಆದರೆ, ಯಾವ ಸಮಜಾಯಿಷಿಕೆಗೂ ಅವಕಾಶ ನೀಡದಂತೆ ಇಸ್ರೇಲ್ ಅಧ್ಯಕ್ಷರು ತನ್ನ ವಸಾಹತು ಉದ್ದೇಶವನ್ನು ನೇರವಾಗಿ ವ್ಯಕ್ತಪಡಿಸತೊಡಗಿದೊಡನೆ ಅಮೆರಿಕ ಜಾಗತಿಕ ಮಟ್ಟದಲ್ಲಿ ಇಸ್ರೇಲಿನ ನೀತಿಯನ್ನು ಖಂಡಿಸಲೇಬೇಕಾದ ಅನಿವಾರ್ಯತೆಗೆ ಸಿಕ್ಕಿ ಬಿತ್ತು. ಅದುವರೆಗೂ ಮೀನಮೇಷ ಎನಿಸುತ್ತಿದ್ದ ಬ್ರಿಟನ್ ಒಳಗೊಂಡಂತೆ ಐರೋಪ್ಯ ಒಕ್ಕೂಟವೂ ಕೂಡ ಇಸ್ರೇಲಿನಿಂದ ಒಂದು ಅಂತರವಿಟ್ಟುಕೊಳ್ಳುವುದು ಅನಿವಾರ್ಯ ಎಂದು ಭಾವಿಸಿತು. ಇಲ್ಲಿ ಇನ್ನೊಂದು ಸಂಗತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಮೆರಿಕದ ಈ ಅರೆಮನಸ್ಕ ಖಂಡನೆಯು ಯಾವುದೇ ರೀತಿಯ ಸಕಾರಾತ್ಮಕ ಬದಲಾವಣೆಯನ್ನು ಪ್ರಚೋದಿಸುವಂತದ್ದಾಗಿರಲಿಲ್ಲ. ಆದರೆ, ಅದು ಇಸ್ರೇಲಿನ ನೀತಿಯಿಂದ, ಝಿಯೋನಿಸ್ಟ್ ನ ಪ್ರಬಲ ಏಕರಾಷ್ಟ್ರ ಪ್ರತಿಪಾದನೆಯಿಂದ ಮುಜುಗರಕ್ಕೊಳಗಾಗಿತ್ತು ಎಂಬುದು ನಿಜ. ಈ ಮುಜುಗರವೇ ಅನ್ಯಾಯದ ಅಸ ಯಾರ ಜೊತೆಗಿದೆ ಎಂಬುದನ್ನು ತೋರಿಸುತ್ತದೆ. ಮೊನ್ನೆಯ ಚುನಾವಣೆಯ ಸಂದರ್ಭದಲ್ಲಂತೂ ಇದು ಇನ್ನಷ್ಟು ಪ್ರಬಲವಾಗಿ ಮೊಳಗತೊಡಗಿದವು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬೆಂಜಮಿನ್ ನೆತನ್ಯಾಹು ತಮ್ಮ ಏಕರಾಷ್ಟ್ರಪರವಾದವನ್ನು ಹಿಂದೆಂದಿಗಿಂತಲೂ ಸಮರ್ಥವಾಗಿ ಬಳಸಿ ಕೊಂಡರು. ಅದಾಗಲೇ, ತನ್ನ ಹಠಮಾರಿ ಧೋರಣೆಯ ಯುದ್ಧಕೋರತನದಿಂದ, ಭ್ರಷ್ಟಾಚಾರ, ಜನಾಂಗೀಯ ನೀತಿಗಳಿಂದ, ಪಶ್ಚಿಮ ದಂಡೆಯ ಕಾನೂನು ಬಾಹಿರ ವಸಾಹತು ನಿರ್ಮಾಣಗಳಿಂದ ಇಸ್ರೇಲಿ ನಾಗರಿಕರ ನಡುವೆ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದ ನೆತನ್ಯಾಹುಗೆ ಮರಳಿ ಅಕಾರಕ್ಕೇರಬೇಕಾದರೆ ಈ ರೀತಿಯ ಉಗ್ರ ಪ್ರತಿಪಾದನೆಗಳು ಅಗತ್ಯವಾಗಿದ್ದವು. ಚುನಾವಣಾ ಪ್ರಚಾರದುದ್ದಕ್ಕೂ ಆತ ಅರಬ್ ಭಾಷಿಗರಾದ ಇಸ್ರೇಲಿ ಪ್ರಜೆಗಳ ವಿರುದ್ಧ, ಫೆಲೆಸ್ತೀನ್ ನಾಗರಿಕರ ವಿರುದ್ಧ ಮತ್ತು ದ್ವಿರಾಷ್ಟ್ರ ಪ್ರತಿಪಾದಕರ ವಿರುದ್ಧ ಬಳಸಿದ ಉಗ್ರ ಭಾಷೆಗಳೇ ಇದಕ್ಕೆ ಸಾಕ್ಷಿ. ಈ ಚುನಾವಣೆಯಲ್ಲಿ ನೆತನ್ಯಾಹು ಪ್ರತಿನಿಸುತ್ತಿದ್ದ ಲಿಕುಡ್ ಪಕ್ಷ ಬಹುಮತ ಗಳಿಸದೆ ಇದ್ದರೂ, ಉಳಿದೆಲ್ಲಾ ಪಕ್ಷಗಳಿ ಗಿಂತ ದೊಡ್ಡ ಪಕ್ಷವಾಗಿ ಆಯ್ಕೆ ಯಾಗಿರುವುದು ಇಸ್ರೇಲಿನೊಳಗೆ ನೆತನ್ಯಾಹು ಪ್ರತಿಪಾದನೆಗೆ ಸಿಕ್ಕಿರುವ ಬೆಂಬಲವೆಂದು ವ್ಯಾಖ್ಯಾನಿಸಲಾಗುತ್ತಿದೆ. ಅದೇನೆ ಇದ್ದರೂ, ‘ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಪಂಚ ಪಿತ’ನಾಗಿರುವ ನೆತನ್ಯಾಹುವಿಗೆ ಸಿಕ್ಕಿರುವ ಈ ಅವಕಾಶವೂ ಝಿಯೋನಿಸ್ಟ್ ಜನಾಂಗೀಯ ನೀತಿಯ ಅಂತಿಮ ಘಟ್ಟವೂ ಆಗಿದೆ ಎಂದು ವ್ಯಾಖ್ಯಾನಿಸುತ್ತಿರುವವರೂ ಇದ್ದಾರೆ. ಅವರ ಪ್ರಕಾರ, ‘‘ನೆತನ್ಯಾಹು ಈ ಅವಯಲ್ಲಿ ಇಸ್ರೇಲಿನ ಜನಾಂಗೀಯ ನೀತಿಯನ್ನು ಅದರ ಶಿಖರ ಮಟ್ಟಕ್ಕೆ ಏರಿಸುತ್ತಾರೆೆ. ತನ್ನ ಮತದಾರರ; ಮುಖ್ಯವಾಗಿ ಝಿಯೋನಿಸ್ಟ್ ಪುರೋಹಿತರ ಆಂತರಿಕ ಒತ್ತಡವನ್ನು ಕಾರ್ಯರೂಪಕ್ಕೆ ತರುವುದು ಆತನಿಗೆ ಅನಿವಾರ್ಯವೂ ಆಗಿದೆ. ಯಾಕೆಂದರೆ, ಚುನಾವಣಾ ಪ್ರಚಾರದಲ್ಲಿ ನೆತನ್ಯಾಹುರ ಭರವಸೆಯೆಲ್ಲವೂ ಝಿಯೋನಿಸ್ಟ್ ಪುರೋಹಿತರ ಲಾಗಾಯ್ತಿತ ನೀತಿಗಳನ್ನೇ ಅನುಸರಿಸಿಕೊಂಡಿತ್ತು. ಆದ್ದರಿಂದ ಈ ಅವಯ ನೆತನ್ಯಾಹುರ ನೀತಿಗಳೆಲ್ಲವೂ ಹಿಂದೆಂದಿಗಿಂತಲೂ ಕಠಿಣವಾಗುವ ಸಾಧ್ಯತೆಯೇ ಹೆಚ್ಚು. ಇದು ನಿಜವಾದರೆ, ಮಧ್ಯಪ್ರಾಚ್ಯದ ಅನಿಶ್ಚಿತ ಅಶಾಂತಿಯ ವಾತಾವರಣವನ್ನು ಪಾತಾಳಕ್ಕೆ ದೂಡಿ ಹಾಕಲಿದೆ. ಇಸ್ರೇಲ್ ಪ್ರಜೆಗಳ ನೆಮ್ಮದಿಯ ಜೀವನವನ್ನು ನೆತನ್ಯಾಹು ಕಸಿದುಕೊಳ್ಳಲಿದ್ದಾರೆ. ಇದು ಇಸ್ರೇಲಿನ ಸರಹದ್ದಿನೊಳಗೆ ಬಹುದೊಡ್ಡ ಆಡಳಿತ ವಿರೋ ಅಲೆ ಏಳುವುದಕ್ಕೆ ಕಾರಣವಾಗಲಿದೆ.

ಒಂದು ವೇಳೆ ಹೀಗಾಗದಿದ್ದರೂ ಮುಂದಿನ ಚುನಾವಣೆಯ ಹೊತ್ತಿನಲ್ಲಾದರೂ ಈ ಅಲೆ ತನ್ನ ಹೆಡೆ ಬಿಚ್ಚುವುದಂತೂ ಖಂಡಿತ’’. ಇಸ್ರೇಲಿನಲ್ಲಿ ಅರಬ್ ಭಾಷಿಗರು ರಾಜಕೀಯವಾಗಿ ಪ್ರಬಲಗೊಳ್ಳುತ್ತಿರುವುದು ಈ ರೀತಿಯ ವ್ಯಾಖ್ಯಾನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಈ ಅರಬರು ನೆತನ್ಯಾಹುವಿನ ಹಠಮಾರಿ ಧೋರಣೆಯ ಧ್ವೇಷ ರಾಜಕಾರಣಕ್ಕೆ ಬಹುದೊಡ್ಡ ಸವಾಲಾಗಲಿದ್ದಾರೆ. ಇದರ ಅರಿವಿದ್ದೇ, ಚುನಾವಣಾ ಪ್ರಚಾರದುದ್ದಕ್ಕೂ ನೆತನ್ಯಾಹು ಅರಬ್ ಭಾಷಿಗರ ವಿರುದ್ಧ ಸಿಡಿದೆದ್ದಿದ್ದರು.
ಮೇಲಿನ ವ್ಯಾಖ್ಯಾನಕಾರರ ಭವಿಷ್ಯವಾಣಿ ನಿಜವೇ ಆಗಿದ್ದರೆ ೆಲೆಸ್ತೀನಿಯನ್ನರಿಗೆ ಇದೊಂದು ಕಹಿಸಿಹಿ ಸುದ್ದಿಯಾಗಲಿದೆ. ಕಹಿ ಏಕೆಂದರೆ, ಅವರ ಪಾಲಿನ ಸಿಹಿ ವಾಸ್ತವ ರೂಪ ಪಡೆಯುವುದಕ್ಕೂ ಮುನ್ನ ಇನ್ನಷ್ಟು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈಗಾಗಲೇ ತಮ್ಮ ಪಾಲಿನ ಭೀಕರ ಭೂತಕ್ಕೆ ಎದೆಯೊಡ್ಡಿ ವರ್ತಮಾನದ ರಾಜಕೀಯ ಅನಿಶ್ಚಿತತೆಯ ಕಾರ್ಮುಗಿಲಿನಿಂದ ಭರವಸೆಯ ಭವಿಷ್ಯಕ್ಕೆ ಮುಖಮಾಡಿ ನಿಂತಿರುವ ಸ್ವಾತಂತ್ರ್ಯ ಪ್ರಿಯರಾದ ೆಲೆಸ್ತೀನ್ ನಾಗರಿಕರಿಗೆ ನೆತನ್ಯಾಹು ವಿಜಯ ಮತ್ತೊಂದು ಸುತ್ತಿನ ಅಗ್ನಿ ಪರೀಕ್ಷೆಯಾಗಲಿದೆ.

ಬ್ರಾಹ್ಮಣರು ಏತಕ್ಕೆ ಮೀಸಲಾತಿಯನ್ನು ವಿರೋಧಿಸುತ್ತಾರೆ ?

ಮೂಲ : ಇ.ವಿ.ಪೆರಿಯಾರ್

ಅನುವಾದ : ಬಿ.ಶ್ರೀಪಾದ ಭಟ್
ಮತ,ಧರ್ಮ,ಜಾತಿಗಳ ಪ್ರತಿನಿಧತ್ವವನ್ನು ಪ್ರತಿಯೊಂದು ದೇಶದ,ಸರ್ಕಾರದ ಒಂದು ಅಧಿಕೃತ ಹಕ್ಕೆಂದು ಪರಿಗಣಿಸಲಾಗಿದೆ. ವಿವಿಧ ಜಾತಿ,ಸಮುದಾಯಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು ಎಲ್ಲಾ ನಾಗರಿಕರ ಸಮಾನ ಹಕ್ಕು. ಈ ಸಮಾನ ನಾಗರಿಕರ ನಡುವಿನ ಅಸಮಾನ ಪ್ರಾತಿನಿಧ್ಯವನ್ನು ನಿರ್ಮೂಲನೆ ಮಾಡುವುದೇ ಈ ಸಮುದಾಯ,ಜಾತಿ ಪ್ರಾತಿನಿಧತ್ವದ ಮೂಲ ಉದ್ದೇಶ. ಸಮ ಸಮಾಜದ ನಿರ್ಮಾಣಕ್ಕಾಗಿ ಈ ಸಮುದಾಯ,ಜಾತಿ ಪ್ರಾತಿನಿಧತ್ವವು ಒಂದು ವರವಾಗಿದೆ. ಕೆಲವೇ ಕೆಲವು ಬೆರಳಣಿಕೆಯಷ್ಟು ಮುಂದುವರೆದ ಸಮುದಾಯಗಳು ಕೇವಲ ತಮ್ಮ ಪ್ರಗತಿಯನ್ನು ಸಾಧಿಸುವುದರ ಮೂಲಕ ಸಮಾಜದ ಉಳಿದ ಸಮುದಾಯ,ಜಾತಿಗಳ ಕಲ್ಯಾಣ,ಪ್ರಗತಿಗೆ ನಿರ್ಭಂದ,ತಡೆಯೊಡ್ಡಿವೆ. ಈ ಅಸಮಾನತೆಯನ್ನು ತೊಡೆದು ಹಾಕಲು ಸಮುದಾಯ,ಜಾತಿಗಳ ಪ್ರಾತಿನಿಧ್ಯದ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಈ ಮಾದರಿಯ ಪ್ರಾತಿನಿಧ್ಯದ ಮೂಲಕವಾಗಿ ಶೋಷಿತ ಸಮುದಾಯಗಳು ತಮಗಾದ ಅನ್ಯಾಯ,ನೋವುಗಳಿಂದ  ಬಿಡುಗಡೆಗೊಳ್ಳಬಹುದು. ವ್ಯವಸ್ಥೆಯ ಎಲ್ಲಾ ಸಮುದಾಯಗಳ ನಡುವೆ ಸಮಾನತೆಯನ್ನು ಸಾಧಿಸುವುದರ ಮೂಲಕ ವಿವಿಧ ಸಮುದಾಯ,ಜಾತಿಗಳ ಪ್ರತಿನಿಧತ್ವದ ನೀತಿಗಳು ಅಂತ್ಯಗೊಂಡು  ಈ ಮಾದರಿಯ ಪ್ರಾತಿನಿಧ್ಯವು ಅನಿರ್ಭಂದಿತವಾಗಿ ಮುಂದುವರೆಯುವ ಸಾಧ್ಯತೆಗಳೂ ತಂತಾನೆ ಕ್ಷೀಣಿಸುತ್ತವೆ.

ಸರ್ಕಾರದಲ್ಲಿ ಭಾರತೀಯರನ್ನು ಪ್ರನಿಧಿಸುವುದರ ಕುರಿತು ಮಾತುಕತೆಗಳು ಶುರುವಾದಾಗ ಭ್ರಾಹ್ಮಣ ಜಾತಿಯೊಂದನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಜಾತಿ,ಸಮುದಾಯಗಳು ತಮ್ಮ ತಮ್ಮ ಜಾತಿಗಳ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸತೊಡಗಿವೆ. ಕಳೆದ ಹಲವಾರು ದಶಕಗಳಿಂದ ಭ್ರಾಹ್ಮಣ ಜಾತಿಯೊಂದನ್ನು ಹೊರತುಪಡೆಸಿ ಮಿಕ್ಕೆಲ್ಲಾ ಜಾತಿ,ಸಮುದಾಯಗಳು ತಮ್ಮ ಜಾತಿಗಳ ಪ್ರಾತಿನಿಧಿಸುವ ನೀತಿನಿಯಮಗಳ ಜಾರಿಗಾಗಿ ಚಳುವಳಿಗಳನ್ನು ನಡೆಸಿವೆ. ಬ್ರಾಹ್ಮಣರು ಅದರಲ್ಲೂ ತಮಿಳುನಾಡು ಬ್ರಾಹ್ಮಣರು ವಿವಿಧ ಜಾತಿ,ಸಮುದಾಯಗಳ ಪ್ರಾತಿನಿಧತ್ವದ ಪಾಲಿಸಿಯನ್ನು ಜಾರಿಗೊಳಿಸುವುದನ್ನು ಅಡ್ಡ ಪಡೆಸುತ್ತಾ ಅದರ ವಿರುದ್ಧವಾಗಿ ಅನೇಕ ವಿಘ್ನಗಳನ್ನು,ಅಡಚಣೆಗಳನ್ನು ತಂದೊಡ್ಡುವ ಕೀಳು ಮಟ್ಟಕ್ಕೂ ಇಳಿದರು.ಎಲ್ಲಾ ತಳಸಮುದಾಯಗಳಿಗೆ ವರವಾಗುವ ಈ ಜಾತಿ,ಸಮುದಾಯಗಳ ಪ್ರಾತಿನಿಧತ್ವದ ಪಾಲಿಸಿಗಳ ವಿರುದ್ಧ ಈ ಬ್ರಾಹ್ಮಣರು ಕುಟಿಲೋಪಾಯಗಳನ್ನು,ಪಿತೂರಿಯನ್ನು ರೂಪಿಸಿದರು.

ಮಸಲ ತಮ್ಮ ವಾದಕ್ಕೆ ಪೂರಕವಾಗುವಂತೆ ಈ ಜಾತಿ,ಸಮುದಾಯಗಳ ಪ್ರಾತಿನಿಧತ್ವದ ಪಾಲಿಸಿಗಳ ನೀತಿಯ ದುಷ್ಪರಿಣಾಮಗಳನ್ನು ಪಟ್ಟಿಮಾಡಿ ಅದರ ಕುರಿತಾಗಿ ಎಚ್ಚರಿಸಲು ಈ ಬ್ರಾಹ್ಮಣರು ಮುಂದೆ ಬಂದಿದ್ದರೆ ಇವರ ವಿರೋಧವನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ವಿರೋಧಿಸುವವರೆಲ್ಲರೂ ಸುಮ್ಮನೇ ಒಂದೇ ಶಬ್ದದಲ್ಲಿ ’ನನ್ನ ಒಪ್ಪಿಗೆ ಇಲ್ಲ’ ಎಂದು ಹೇಳಿ ಅದಕ್ಕೆ ಸಮಜಾಷಿಯನ್ನೇ ಕೊಡದಿದ್ದರೆ ಹೇಗೆ? ಇಲ್ಲಿಯವರೆಗೂ ಯಾರೊಬ್ಬರೂ ತಮ್ಮ ವಿರೋಧಕ್ಕೆ ಕಾರಣಗಳನ್ನು ಪಟ್ಟಿ ಮಾಡಿಲ್ಲ.ಎಲ್ಲಾ ಸಮುದಾಯಗಳೂ ಸಮಾನರು ಎನ್ನುವ ವ್ಯವಸ್ಥೆಯ ನಿರ್ಮಾಣದಲ್ಲಿ ಏನು ತಪ್ಪಿದೆ?

ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರಲ್ಲಿ ಏನು ತಪ್ಪಿದೆ? ಒಂದು ವೇಳೆ ಸೋಷಿಯಲಿಸ್ಟ್ ಸಮಾಜದ ನಿರ್ಮಾಣದಲ್ಲಿ ಏನೂ ತೊಂದರೆ ಇಲ್ಲದಿದ್ದಲ್ಲಿ ಮತ್ತು ಈಗಿನ ಸಮಾಜವು ಅಸಮಾನ ಜಾತಿಪದ್ಧತಿಯಿಂದ ನಿರ್ಮಾಣಗೊಂಡಿರುವುದರ ಕುರಿತು ಯಾವುದೇ ತಕರಾರುಗಳು ಇಲ್ಲದಿದ್ದಲ್ಲಿ, ಈ ಅಸಮಾನ ಸಮಾಜವನ್ನು ಪ್ರಗತಿಪರಗೊಳಿಸಬೇಕಾದರೆ ವಿವಿಧ ಜಾತಿ,ಸಮುದಾಯಗಳ ಪ್ರಾತಿನಿಧ್ಯದ ಆಧಾರದ ಮೇಲೆ, ಅವರ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಕೊಡುವುದರ ಹೊರತಾಗಿ ಬೇರೆ ದಾರಿ ಏನಿದೆ? ಸಮಾಜದಲ್ಲಿ ಶೋಷಿತ ಸಮುದಾಯಗಳು ಇರುವುದರಲ್ಲಿ ಯಾವುದೇ ಭಿನ್ನಭಿಪ್ರಾಯಗಳಿಲ್ಲ ತಾನೆ?

ಒಂದು ಬಾರಿ ಈ ಸಮಾಜವನ್ನು ಧರ್ಮ,ಜಾತಿ,ಸಮುದಾಯಗಳ ಆಧಾರದ ಮೇಲೆ ವಿಭಜಿಸಿದ ನಂತರ ಈ ಶೋಷಿತ ಸಮುದಾಯಗಳು ಇದೇ ಧರ್ಮ,ಜಾತಿ,ಸಮುದಾಯಗಳ ಆಧಾರದ ಮೇಲೆ ತಮಗಾಗಿ ವಿಶೇಷ ಹಕ್ಕಿಗಾಗಿ ಒತ್ತಾಯಿಸಿದರೆ ಅದಕ್ಕೆ ನಾವು ಅದಕ್ಕೆ ಅಡ್ಡಪಡೆಸಬಾರದು. ಶೋಷಿತ ಸಮುದಾಯಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ತಪ್ಪಂತೂ ಅಲ್ಲವೇ ಅಲ್ಲ.ಅದರಲ್ಲಿ ನನಗೆ ಯಾವುದೇ ಬಗೆಯ ಅವಿಧೇಯತೆ ಕಂಡು ಬರುವುದಿಲ್ಲ

ಇಲ್ಲಿನ ಜಾತಿಪದ್ಧತಿಯು ಜನರನ್ನು ಹಿಂದುಳಿದವರನ್ನಾಗಿ ಮಾಡಿದೆ.ಜಾತಿಪದ್ಧತಿಯು ಸಮಾಜವನ್ನು ಮತ್ತಷ್ಟು ಧ್ವಂಸಗೊಳಿಸಿದೆ. ಜಾತಿಗಳು ನಮ್ಮನ್ನು ಎಲ್ಲಾ ಬಗೆಯ ಸೌಕರ್ಯದಿಂದ ವಂಚಿತರನ್ನಾಗಿ ಮಾಡಿದೆ ಮತ್ತು ಕೆಳಮಟ್ಟಕ್ಕಿಳಿಸಿದೆ. ಈ ಎಲ್ಲಾ ಅನಿಷ್ಠಗಳನ್ನು ನಿರ್ಮೂಲನೆಗೊಳಿಸುವವರೆಗೂ, ಸಮಾಜದ ಎಲ್ಲಾ ಸಮುದಾಯಗಳ ಜನರು ಸಮಾನತೆಯನ್ನು ಸಾಧಿಸುವವರೆಗೂ ಜನಸಂಖ್ಯೆಯನ್ನು ಆಧರಿಸಿದ ಠಿಡಿoಠಿoಡಿಣioಟಿಚಿಟ ಪ್ರಾತಿನಿಧ್ಯದ ಪಾಲಿಸಿ ಅತ್ಯಗತ್ಯವಾಗಿದೆ. ಅನೇಕ ಸಮುದಾಯಗಳು ತೀರ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಶಿಕ್ಷಣ ರಂಗಕ್ಕೆ ಅಡಿಯಿಟ್ಟಿವೆ. ಎಲ್ಲಾ ಜನರೂ ಅಕ್ಷರಸ್ಥರಾಗಬೇಕು,ನಾಗರಿಕರಾಗಬೇಕು. ಸಾರ್ವಜನಿಕ ರಂಗಗಳಲ್ಲಿ,ಸೇವಾ ವಲಯಗಳಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ಪ್ರಮಾಣದ ಅನುಸಾರ ನಮ್ಮ ಜನರು ತಮ್ಮ ಪಾಲನ್ನು ಪಡೆಯಬೇಕು

ಈ ದೇಶದಲ್ಲಿ ೧೦೦ ಜನರ ಪೈಕಿ ಕೇವಲ ೩ ಜನ ಮಾತ್ರ ಬ್ರಾಹ್ಮಣರು. ಶೇಕಡಾ ೧೬ರಷ್ಟು ಜನ ಆದಿ-ದ್ರಾವಿಡರು, ಶೇಕಡಾ ೭೨ರಷ್ಟು ಜನ ಅಬ್ರಾಹ್ಮಣರು. ಹಾಗಿದ್ದಲ್ಲಿ  ಜನಸಂಖ್ಯೆಯ ಪ್ರಮಾಣದ ಆಧಾರದಲ್ಲಿ ಠಿಡಿoಠಿoಡಿಣioಟಿಚಿಟ ಪ್ರಾತಿನಿಧ್ಯದ ಪಾಲಿಸಿಯನ್ನು ಆಧರಿಸಿ ಉದ್ಯೋಗಗಳನ್ನು ಕೊಡಬೇಕಲ್ಲವೇ?


ವಿಶ್ವ ಮಾನವರಿಗೆ ಜಾತಿ ಸಂಕೋಲೆಸನತಕುಮಾರ ಬೆಳಗಲಿ
ವಿಶ್ವ ಮಾನವರಿಗೆ ಜಾತಿ ಸಂಕೋಲೆ


ಬಸವಣ್ಣ ಕನಕದಾಸ, ಸಂಗೊಳ್ಳಿ ರಾಯಣ್ಣ, ದೇವರ ದಾಸಿಮಯ್ಯ, ವಾಲ್ಮೀಕಿ, ಕುವೆಂಪು ಇವರೆಲ್ಲ ತಮ್ಮ ತಮ್ಮ ಜಾತಿಯನ್ನು ಮೀರಿ ನಿಂತಿದ್ದರು. ಜಾತಿ, ಮತದ ಸಂಕುಚಿತ ಸೀಮೆ ದಾಟಿ ವಿಶ್ವಮಾನವರಾಗಿ ಅವರು ಬೆಳೆದಿದ್ದರು. ಮೈಸೂರು ಹುಲಿ ಟಿಪ್ಪು ಸುಲ್ತಾನರಿಗೆ ಜಾತಿ ಧರ್ಮದ ವ್ಯಾಮೋಹವಿರಲಿಲ್ಲ. ಟಿಪ್ಪು ಆಸ್ಥಾನದಲ್ಲಿ ಪೂರ್ಣಯ್ಯನಂಥ ಮಂತ್ರಿಗಳಿದ್ದರು. ಶಿಶುನಾಳೀಶನನ್ನೇ ದೇವರೆಂದು ನಂಬಿದ ಶರೀ ಸಾಹೇಬರನ್ನು ಈ ನಾಡೇ ತಮ್ಮವನೆಂದು ಒಪ್ಪಿಕೊಂಡಿದೆ. ಇಂಥ ಪರಂಪರೆ ಈ ನೆಲದ್ದು.

ಈ ಮಹಾಚೇತನಗಳೆಲ್ಲ ತೀರಿಕೊಂಡ ನೂರಾರು ವರ್ಷಗಳ ನಂತರ ಇವರನ್ನು ಜಾತಿ ಸಂಕೋಲೆಯಲ್ಲಿ ಕಟ್ಟಿ ಹಾಕುವ ಹುನ್ನಾರ ನಡೆದಿದೆ. ‘‘ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ’’ ಎಂದು ಹೇಳಿದ ಬಸವಣ್ಣನವರನ್ನು ಲಿಂಗಾಯತರು ತಮ್ಮ ಸೊತ್ತನ್ನಾಗಿ ಮಾಡಿಕೊಂಡಿದ್ದಾರೆ. ಕನಕದಾಸ, ಸಂಗೊಳ್ಳಿ ರಾಯಣ್ಣ, ಕುರುಬ ಸಮಾಜದ ಖಾಸಗಿ ಆಸ್ತಿಯಾಗಿದ್ದಾರೆ. ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅವರನ್ನು ಒಕ್ಕಲಿಗ ರಾಜಕಾರಣಿಗಳು, ಜಾತಿವಾದಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿ ಕೊಳ್ಳುತ್ತಿದ್ದಾರೆ. ಈಗ ದೇವರ ದಾಸಿಮಯ್ಯ ಯಾರು? ಎಂಬ ವಿವಾದ ಉಂಟಾಗಿದೆ. ರಾಜ್ಯ ಸರಕಾರ ಇತ್ತೀಚೆಗೆ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ನಡೆಸಿದ ಸಂದರ್ಭದಲ್ಲಿ ವಿವಾದಮೂರ್ತಿ ಎಂದೇ ಹೆಸರಾದ ಡಾ.ಚಿದಾನಂದ ಮೂರ್ತಿ ಹಾಗೂ ಸಂಗಡಿಗರು ಈ ಕಾರ್ಯಕ್ರಮ ನಡೆದ ಸಭಾಂಗಣಕ್ಕೆ ನುಗ್ಗಿ ‘ದೇವರ ದಾಸಿಮಯ್ಯ-ಜೇಡರ ದಾಸಿಮಯ್ಯ ಬೇರೆ, ದೇವರ ದಾಸಿಮಯ್ಯ ಶಿವಭಕ್ತ. ಆತ ವಚನಕಾರನಲ್ಲ. ವಚನಗಳನ್ನೇ ರಚಿಸದ ಆತನ ಜಯಂತಿ ಆಚರಿಸುವುದು ಸರಿಯಲ್ಲ ಎಂದು ಕ್ಕಾರದ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ಸಭಿಕರು ಚಿಮೂ ಗ್ಯಾಂಗ್‌ಗೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೊನೆಗೆ ಪೊಲೀಸರನ್ನು ಚಿಮೂ ಮತ್ತು ಸಂಗಡಿಗರನ್ನು ಸಭಾಂಗಣದಿಂದ ಹೊರದಬ್ಬಿದರು. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಎಂದು ಚಿ.ಮೂ. ಪ್ರತಿಪಾದಿಸುತ್ತಿದ್ದಾರೆ. ಆದರೆ ನಾಡಿನ ಖ್ಯಾತ ಸಂಶೋಧಕರಾಗಿದ್ದ ಡಾ.ಆರ್.ಸಿ.ಹಿರೇಮಠ, ಎಲ್.ಬಸವರಾಜು ಹಾಗೂ ಈಗ ನಮ್ಮ ನಡುವಿರುವ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರ ಪ್ರಕಾರ ದೇವರ ದಾಸಿಮಯ್ಯನನ್ನು ವಚನಕಾರನನ್ನಾಗಿ ಗುರುತಿಸಿದ್ದಾರೆ. ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಬೇರೆ ಅಲ್ಲ ಎಂದು ಹೇಳಿದ್ದಾರೆ. ಈ ಚಾರಿತ್ರಿಕ ವಿಷಯದ ಬಗ್ಗೆ ಪ್ರಾಜ್ಞರು ಪರಸ್ಪರ ಸಂವಾದ ಚರ್ಚೆ ನಡೆಸಿ ಒಂದು ಇತ್ಯರ್ಥಕ್ಕೆ ಬರಬೇಕು. ಈ ಬಗ್ಗೆ ಚರ್ಚೆಗೆ ಹೆಚ್ಚಿನ ಕಾಲಾವಕಾಶ ಬೇಕು. ಈಗ ಅಂಥ ಚರ್ಚೆ ನ್ಯಾಯವಾಗಿದೆ. ದೇವರ ದಾಸಿಮಯ್ಯ ನೇಕಾರ ಸಮುದಾಯಕ್ಕೆ ಸೇರಿದುದರಿಂದ ಆ ಸಮುದಾಯ ತಮ್ಮ ಆಸ್ಮಿತೆಯ ಸಂಕೇತವಾಗಿ ಈತನನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಈ ವಿವಾದ ಸರಕಾರಕ್ಕೆ ಮುಖ್ಯವಲ್ಲ. ಜಾತಿ ರಾಜಕಾರಣದ ಲೆಕ್ಕಾಚಾರದಂತೆ ಈ ಜಯಂತಿಗಳು ನಡೆಯುತ್ತಿವೆ. ಈ ಇಪ್ಪತ್ತು ವರ್ಷಗಳ ಹಿಂದೆ ವಾಲ್ಮೀಕಿ ಜಯಂತಿಯನ್ನು ಯಾರೂ ಆಚರಿಸುತ್ತಿರಲಿಲ್ಲ. ಹಿಂದಿನ ಬಿಜೆಪಿ ಸರಕಾರ ನಾಯಕ ಸಮುದಾಯದ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ವಾಲ್ಮೀಕಿ ಜಯಂತಿಯನ್ನು ಸರಕಾರದಿಂದ ಆಚರಿಸಿ ರಜಾ ಘೋಷಿಸಿತು. ಜಾತಿ ಮತವನ್ನು ಮೀರಿನಿಂತ ಬಸವಣ್ಣ, ಕುವೆಂಪು, ನಾರಾಯಣ ಗುರು ಅಂಥವರು ಜಾತಿ ರಾಜಕಾರಣಕ್ಕೆ ಎಂದೂ ಬಳಕೆಯಾಗಬಾರದು. ‘‘ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ’ ಎಂದು ಕರೆ ನೀಡಿದ ರಾಷ್ಟ್ರಕವಿ ಕುವೆಂಪು ೆಟೊಗಳನ್ನೇ ಒಕ್ಕಲಿಗ ಸಂಘದ ಚುನಾವಣೆಗಳಲ್ಲಿ ಒಕ್ಕಲಿಗರ ಸಮ್ಮೇಳನಗಳಲ್ಲಿ ಬಳಸಿಕೊಳ್ಳುವುದನ್ನು ನೋಡಿದಾಗ ಬೇಸರವಾಗುತ್ತದೆ. ವಾಸ್ತವವಾಗಿ ನಾಯಕ, ಕುರುಬ, ಅಗಸ, ನೇಕಾರ, ಪಿಂಚಾರ ಸೇರಿದಂತೆ ಎಲ್ಲ ಸಮುದಾಯಗಳ ಜನತೆ ಜಾತಿ ಮತಗಳ ಆಚೆಗೆ ನೀಡಿದ ತಮ್ಮ ಆರ್ಥಿಕ, ಸಾಮಾಜಿಕ ಬೇಡಿಕೆಗಳಿಗಾಗಿ ದನಿಯೆತ್ತಿ ಹೋರಾಡಬೇಕು. ಆದರೆ ಹಿಂದುಳಿದ ದುಡಿಯುವ ವರ್ಗದಲ್ಲಿ ಇಂಥ ಏಕತೆ ಬರಬಾರದೆಂದು ಅವರನ್ನು ವಿಭಜಿಸಲು ಜಾತಿಗೆ ಕಟ್ಟಿಹಾಕಿ ವಾಲ್ಮೀಕಿಯಂಥ ಸಂಕೇತ ಗಳಿಗೆ ಗಂಟು ಹಾಕಿದ್ದು ಸಂಘಪರಿವಾರದ ಪಿತೂರಿ. ಇದಕ್ಕೆ ಕಾರ್ಪೊರೇಟ್ ಬಂಡವಾಳಶಾಹಿಯ ಕುಮ್ಮಕ್ಕು ಇದೆ. ಬಸವಣ್ಣ, ಕುವೆಂಪು, ಕನಕದಾಸರಂಥ ಮಹಾ ಚೇತನಗಳಿಗೆ ಜಾತಿ ಸಂಕೋಲೆ ಬಿಗಿಯುವ ಹುನ್ನಾರ ಒಂದೆಡೆ ನಡೆದಿದ್ದರೆ ಇವರನ್ನು ಸೇರಿದಂತೆ ಭಗತ್‌ಸಿಂಗ್, ಅಂಬೇಡ್ಕರ್, ವಿವೇಕಾನಂದ, ಸುಭಾಷಚಂದ್ರ ಭೋಸ್, ನಾರಾಯಣಗುರು ಮುಂತಾದವರನ್ನು ಕೋಮುವಾದಿ ಹಿಂದುತ್ವದ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳುವ ಮಸಲತ್ತು ನಿರಂತರವಾಗಿ ನಡೆದಿದೆ. ವಿಶ್ವಹಿಂದೂ ಪರಿಷತ್ತಿನ ಸಮಾಜೋತ್ಸವಗಳಲ್ಲೂ ಈ ಮಹಾಚೇತನಗಳ ಭಾವಚಿತ್ರ ಬಳಸಿ ಕೊಳ್ಳಲಾಗುತ್ತಿದೆ.

ಈ ದೇಶಕ್ಕಾಗಿ ದುಡಿದ, ಬಲಿದಾನ ಮಾಡಿದ ಮಹಾ ಚೇತನಗಳನ್ನು ಎಲ್ಲೆಡೆ ಉಪಯೋಗಿಸಿ ಕೊಂಡರೂ, ಮೈಸೂರು ಹುಲಿ ಟಿಪ್ಪು ಸುಲ್ತಾನ, ಶಿಶುನಾಳ ಶರೀ ಸಾಹೇಬರನ್ನು ಬೇಕಂತಲೆ ಕಡೆಗಣಿಸಲಾಗುತ್ತಿದೆ. ಟಿಪ್ಪು ನೆನಪಿನ ಕಾರ್ಯಕ್ರಮ ನಡೆಸಲು ಸರಕಾರ ಮುಂದಾದರೆ ಸಂಘಪರಿವಾರ ಅದನ್ನು ವಿರೋಸುತ್ತದೆ. ಈ ಕೋಮುವಾದಿಗಳಿಗೆ ಹೆದರಿ ಟಿಪ್ಪು ಕಾರ್ಯಕ್ರಮ ನಡೆಸಲು ಸರಕಾರ ಹಿಂದೇಟು ಹಾಕಿತು.

ಬಸವಣ್ಣ, ಟಿಪ್ಪು ಸುಲ್ತಾನ್, ಅಂಬೇಡ್ಕರ್, ಶಿವಾಜಿ, ವಿವೇಕಾನಂದ, ಕನಕದಾಸ ಇವರೆಲ್ಲ ಈ ನಾಡಿನ ಹೆಮ್ಮೆಯ ಸಂಕೇತ. ಇವರಿಗೆ ಜಾತಿ ಮತವಿಲ್ಲ. ಇವರು ಎಲ್ಲ ಸಮುದಾಯಗಳಿಗೆ ಸೇರಿದವರು. ಇವರನ್ನು ಜಾತಿಗೆ ಕಟ್ಟಿಹಾಕುವುದು, ಟಿಪ್ಪುಸುಲ್ತಾನರನ್ನು ಮುಸ್ಲಿಂ ಎಂಬ ಕಾರಣಕ್ಕೆ ಪ್ರತ್ಯೇಕಿಸಿ, ರಾಷ್ಟ್ರದ್ರೋಹಿ ಎಂದು ಜರೆಯುವುದು ಇವೆಲ್ಲ ಜಾತ್ಯತೀತ ಭಾರತಕ್ಕೆ ಶೋಭೆ ತರುವುದಿಲ್ಲ. ಚರಿತ್ರೆಯ ಪುಟಗಳನ್ನು ತಿರುಚಿ ಹಾಕಿದಾಗ ಒಂದು ಸಂಗತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ದೇಶದ ಜನಸಮುದಾಯದಲ್ಲಿ ಒಡಕುಂಟಾದಾಗಲೆಲ್ಲ ಈ ದೇಶ ಸೋತಿದೆ. ವಿದೇಶಿ ಆಕ್ರಮಣಕ್ಕೆ ತುತ್ತಾಗಿದೆ. ದಾಸ್ಯದ ನೊಗ ಹೊತ್ತಿದೆ. ಈಗ ಮತ್ತೆ ಅಂಥ ಅಪಾಯ ಎದುರಾಗಿದೆ. ಆರೆಸ್ಸೆಸ್‌ನ ಹಿಂದು ರಾಷ್ಟ್ರ ಅಜೆಂಡಾ ಈ ದೇಶವನ್ನು ವಿಭಜಿಸಲಿದೆ.

ಆರೆಸ್ಸೆಸ್ ಅಜೆಂಡಾವನ್ನು ಚಾಚೂ ತಪ್ಪದೇ ಜಾರಿಗೆ ತರುತ್ತಿರುವ ನರೇಂದ್ರ ಮೋದಿ, ಈ ದೇಶವನ್ನು ಅಪಾಯದ ಅಂಚಿಗೆ ದೂಡುತ್ತಿದ್ದಾರೆ. ಈ ವಿಭಜನಕಾರಿ ಹುನ್ನಾರ ವಿಲಗೊಳಿಸಬೇಕಾಗಿದೆ.

ಭಾರತದಲ್ಲಿ ಜಾತಿಗಳು: ಡಾ.ಅಂಬೇಡ್ಕರ್ ವಿಶ್ಲೇಷಣೆ
-ಪ್ರೊ.ಎಂ.ನಾರಾಯಣ ಸ್ವಾಮಿ


 ಭಾರತದಲ್ಲಿ ಜಾತಿಗಳು: ಡಾ.ಅಂಬೇಡ್ಕರ್ ವಿಶ್ಲೇಷಣೆ

ಡಾ.ಬಿ.ಆರ್.ಅಂಬೇಡ್ಕರರು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ‘ಭಾರತದಲ್ಲಿ ಜಾತಿಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ್ದರು. ಅದೊಂದು ಚಾರಿತ್ರಿಕ ಮೈಲಿಗಲ್ಲು. ಡಾ.ಗೋಲ್ಡನ್‌ವೀಜರ್ ಅವರು ಆಯೋಜಿಸಿದ್ದ ಮಾನವಶಾಸದ (ಆ್ಯಂಥ್ರೋಪಾಲಜಿ) ವಿಚಾರಸಂಕಿರಣದಲ್ಲಿ ಮೇ 9, 1916ರಂದು ಜಾತಿಗಳ ಉಗಮ, ಬೆಳವಣಿಗೆ ಮತ್ತು ಅವುಗಳ ಪ್ರಭಾವ ಕುರಿತು ಅಂಬೇಡ್ಕರರು ಪರಿಣಾಮಕಾರಿಯಾಗಿ ಮಾತನಾಡಿದರು. ಆಗಿನ್ನೂ ಅಂಬೇಡ್ಕರರಿಗೆ ಕೇವಲ 25 ವರ್ಷ ವಯಸ್ಸು. ಅವರ ಪ್ರಬಂಧ ಇಂಡಿಯನ್ ಆಂಟಿಕ್ವರಿಯ ಮೇ, 1917ರ ಸಂಚಿಕೆಯಲ್ಲಿ ಪ್ರಕಟವಾಯಿತು. ಭಾರತದಲ್ಲಿ ಜಾತಿ ವ್ಯವಸ್ಥೆ ಕುರಿತ ಡಾ.ಅಂಬೇಡ್ಕರರ ವಿಶ್ಲೇಷಣೆಯ ಭಾವಾರ್ಥದ ಅತ್ಯಂತ ಸಂಕ್ಷಿಪ್ತರೂಪ ಈ ಲೇಖನದಲ್ಲಿದೆ.

‘ಮಾನವ ಜನಾಂಗ ಶಾಸಜ್ಞರ ಪ್ರಕಾರ ಆರ್ಯರು, ದ್ರಾವಿಡರು, ಮಂಗೋಲಿಯನ್ನರು ಮತ್ತು ಸಿಯನ್ನರ ಮಿಶ್ರಣವೇ ಭಾರತೀಯರು. ಇವರೆಲ್ಲಾ ವಿಭಿನ್ನ ಭೂಭಾಗ, ವಿಭಿನ್ನ ಸಂಸ್ಕೃತಿಯುಳ್ಳವರಾಗಿ ಶತಮಾನಗಳ ಹಿಂದೆಯೇ ಭಾರತಕ್ಕೆ ಬಂದರು. ಕಾಲಕ್ರಮೇಣ ಏಕಸಂಸ್ಕೃತಿಯನ್ನು ರೂಢಿಸಿಕೊಂಡರು. ಇಷ್ಟಾದರೂ, ಬಣ್ಣ ಹಾಗೂ ದೈಹಿಕವಾಗಿ ಭಾರತದ ಪೂರ್ವ ಭಾಗದ ಜನತೆ ಪಶ್ಚಿಮ ಭಾಗದ ಜನತೆಗಿಂತ ಭಿನ್ನ. ಹಾಗೆಯೇ, ದಕ್ಷಿಣದವರು ಉತ್ತರದವರಿಗಿಂತ ಭಿನ್ನ’. ‘ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಜಾತಿ ಎಂಬುದು ಒಂದು ಬೃಹತ್ ಸಮಸ್ಯೆ. ಜಾತಿ ವ್ಯವಸ್ಥೆ ಇರುವವರೆಗೆ ಮಾನವ ಸಹಜ ವಿವಾಹಗಳು ವಿರಳ. ಸಾಮಾಜಿಕವಾಗಿ ಒಳಗೊಳ್ಳುವಿಕೆಯು ಅತ್ಯಲ್ಪ. ಹಿಂದೂಗಳೇನಾದರೂ ಪೃಥ್ವಿಯ ವಿವಿಧ ಪ್ರದೇಶಗಳಲ್ಲಿ ಅಕ ಸಂಖ್ಯೆಯಲ್ಲಿ ನೆಲೆಗೊಂಡರೆ ಜಾತಿ ವ್ಯವಸ್ಥೆಯು ಒಂದು ಜಾಗತಿಕ ಸಮಸ್ಯೆಯಾಗಿ ಮಾರ್ಪಾಡಾಗುತ್ತದೆ. ಜಾತಿಯ ಉಗಮವು ಒಂದು ಗುಟ್ಟಿನ ನೆಲೆಯಾಗಿಯೇ ಉಳಿದಿದೆ. ಹಲವಾರು ತಜ್ಞ ಸಂಶೋಧಕರಿಗೆ ಜಾತಿಯ ಹುಟ್ಟು ಒಗಟಾಗಿ, ಬಿಡಿಸಲಾರದ ಕಗ್ಗಂಟಾಗಿ ಕಂಡುಬಂದಿದೆ’.

  ‘ನನ್ನ ದೃಷ್ಟಿಯಲ್ಲಿ, ಜಾತಿಯ ಉಗಮವನ್ನು ಪರಿಶೀಲಿಸುವುದೆಂದರೆ ಜನರು ತಮ್ಮ ತಮ್ಮ ಗುಂಪುಗಳನ್ನು ರಚಿಸಿಕೊಂಡು ಹಲವಾರು ನಿರ್ಬಂಧಗಳನ್ನು ಹೇರಿಕೊಂಡರು ಎಂಬುದಾಗಿದೆ’. ಇಂತಹ ಗುಂಪುಗಳನ್ನು ಡಾ.ಅಂಬೇಡ್ಕರರು ಆಂಗ್ಲ ಭಾಷೆಯ ಪದವಾದ ‘ಪಾರ್ಸೆಲ್’ನ ಕ್ರಿಯಾಪದ ಬಳಸಿ ‘ಪಾರ್ಸೆಲ್ಲಿಂಗ್’ ಎನ್ನುತ್ತಾರೆ. ‘ಜಾತಿಯ ಸದಸ್ಯತ್ವವು ಹುಟ್ಟಿನಿಂದಲೇ ಬರುತ್ತದೆ. ಸಾಮಾಜಿಕ ಕಟ್ಟುಪಾಡಿನಂತೆ ಇತರೆ ಜಾತಿಯವರೊಡನೆ ವಿವಾಹವಾಗುವುದು ನಿಷಿದ್ಧ’ ಎಂಬ ಹಲವಾರು ಮಾನವ ಶಾಸಜ್ಞರ ಜಾತಿ ವಿವರಣೆಗಳನ್ನು ಅಂಬೇಡ್ಕರರು ವಿಶ್ಲೇಷಿಸಿದ್ದಾರೆ. ಇದಕ್ಕಾಗಿ ಸೆನಾರ್ಟ್, ನೆಸ್‌ಫೀಲ್ಡ್, ಸರ್ ರಿಸ್ಲೆ, ಡಾ.ಕೇತ್ಕರ್‌ರವರ ಜಾತಿ ಪದದ ವಿವರಣೆಗಳನ್ನು ಬಳಸಿಕೊಂಡಿದ್ದಾರೆ. ಕುಲದೊಳಗೇ ವಿವಾಹ ಮಾಡಿಕೊಳ್ಳುವ ಪದ್ಧತಿಯಾದ ‘ಎಂಡೋಗ್ಯಾಮಿ’ಯನ್ನು ವಿರೋಸುವ ಅಂಬೇಡ್ಕರರು ಜಾತಿ ಹೊರಗಿನ ವಿವಾಹವಾದ ಎಕ್ಸೋಗ್ಯಾಮಿಯನ್ನು ಬೆಂಬಲಿಸುತ್ತಾರೆ. ಸತಿಪದ್ಧತಿಯನ್ನು ಖಂಡತುಂಡವಾಗಿ ವಿರೋಸುವ ಅವರು, ಒತ್ತಾಯಪೂರ್ವಕವಾಗಿ ‘ವಿಧವೆಯಾಗಿ ಉಳಿಸುವ’ ಸಾಮಾಜಿಕ ಕಟ್ಟುಪಾಡನ್ನು ಪ್ರಶ್ನಿಸುತ್ತಾರೆ. ವಿಧುರನು ಸನ್ಯಾಸಿಯಾಗುವ ಪ್ರಸಂಗವನ್ನು ವ್ಯಾಖ್ಯಾನಿಸುತ್ತಾರೆ. ‘‘ಜಾತಿಗೆ ಸಂಬಂಸಿದ ಎಲ್ಲಾ ವೌಢ್ಯಗಳು ಅವುಗಳ ನಿರಂತರ ಆಚರಣೆಯಿಂದಾಗಿ ಅಸ್ತಿತ್ವದಲ್ಲಿವೆ. ಆ ಮೂಲಕ ಜಾತಿಯನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಹದಿನೆಂಟನೇ ಶತಮಾನದಲ್ಲಿ ಉದಯಿಸಿದ ‘ವೈಯಕ್ತಿಕವಾದ’ವು ನನ್ನ ವಿಶ್ಲೇಷಣೆಯನ್ನು ಒಪ್ಪುತ್ತದೆಯೆಂದು ಭಾವಿಸಿದ್ದೇನೆ,’’ ಎಂದಿದ್ದಾರೆ ಅಂಬೇಡ್ಕರರು. ‘ಎಂಡೋಗ್ಯಾಮಿ ಪದ್ಧತಿಯೇ ಜಾತಿಯ ಉಗಮ ಮತ್ತು ಬೆಳವಣಿಗೆಗೆ ಕಾರಣವಾಗಿದೆ. ಯಾವುದೇ ಒಂದು ಸಮಾಜವೆಂದರೆ ಅಲ್ಲಿ ವರ್ಗಗಳು ಇದ್ದೇ ಇರುತ್ತವೆ. ಆರ್ಥಿಕ, ಬೌದ್ಧಿಕ ಮತ್ತು ಸಾಮಾಜಿಕ ವ್ಯತ್ಯಾಸಗಳಿಂದಾಗಿ ವರ್ಗಗಳು ಹುಟ್ಟಿಕೊಂಡಿರುತ್ತವೆ. ಪ್ರಾಚೀನ ಹಿಂದೂ ಧರ್ಮದಲ್ಲೂ ಕೂಡ ವರ್ಗಗಳಿದ್ದವು. ಈ ವರ್ಗಗಳಿಂದ ಹೇಗೆ ಜಾತಿಗಳು ಹುಟ್ಟಿಕೊಂಡವು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಒಂದು ವರ್ಗವನ್ನು ಬಂಸಿಟ್ಟಾಗ ಅದು ಜಾತಿಯಾಗಿದೆ (A Caste is an enclosed Class).’ ‘ವರ್ಗವನ್ನು ಬಂಸಿಟ್ಟ ಅಂಶ ಯಾವುದು ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಜಾತಿಗಳ ಉಗಮ ಮತ್ತು ಬೆಳವಣಿಗೆಯ ಹಿಂದಿರುವ ಬಲವಾದ ಕಾರಣವೇ ಹೀಗೆ ‘ವರ್ಗವೊಂದನ್ನು ಬಂಸಿಟ್ಟಿದ್ದು’. ಸಾಮಾಜಿಕವಾಗಿ ಮೇಲರಿಮೆ ಹೊಂದಿದ್ದ ಅರ್ಚಕ ವೃತ್ತಿಯವರು ಜಾತಿಯನ್ನು ಹುಟ್ಟುಹಾಕಿದ್ದಾರೆ. ಜಾತಿಯ ಕಟ್ಟುಪಾಡುಗಳನ್ನು ಸೃಷ್ಟಿಸಿ ಚಾಚೂ ತಪ್ಪದಂತೆ ಪಾಲಿಸುತ್ತಿದ್ದಾರೆ. ಮನು ಬರುವುದಕ್ಕಿಂತಲೂ ಮೊದಲೇ ಜಾತಿಯ ಉಗಮವಾಗಿತ್ತು. ಮನು ತಾನು ನೀಡಿದ ಮನು ಧರ್ಮಶಾಸದಲ್ಲಿ ಜಾತಿಗಳನ್ನು ಇನ್ನಷ್ಟು ಭದ್ರಪಡಿಸಿದ. ಶಾಸಗಳು ಹೇಳಿರುವುದೆಲ್ಲಾ ಸರಿಯೆಂದು ಜನರು ಭಾವಿಸುತ್ತಾರೆ. ನನ್ನ ಉದ್ದೇಶವೆಂದರೆ, ಜಾತಿಗಳಿಗೆ ಕಸುಬು ಆಧಾರಿತ ಸಮಜಾಯಿಷಿ ನೀಡುತ್ತ ವೈಜ್ಞಾನಿಕತೆಯ ಲೇಪ ಹಚ್ಚಿರುವುದರ ಹಿಂದಿನ ಸುಳ್ಳುಗಳನ್ನು ಬಯಲಿಗೆಳೆಯುವುದಾಗಿದೆ’. ‘‘ಪಾಶ್ಚಿಮಾತ್ಯ ತಜ್ಞರು ಭಾರತದಲ್ಲಿನ ಜಾತಿಗಳ ಹುಟ್ಟಿಗೆ ಕೊಡುವ ಕಾರಣಗಳೆಂದರೆ: ಕಸುಬು, ಬುಡಕಟ್ಟು ಜನರಾಗಿಯೇ ಉಳಿದಿದ್ದು, ಹೊಸ ನಂಬಿಕೆ-ಆಲೋಚನೆಗಳ ಉಗಮ, ವಲಸೆ ಇತ್ಯಾದಿ. ಇದೇ ಕಾರಣಗಳು ಭೂಮಿಯೆಂಬ ಈ ಗ್ರಹದ ಇತರೆ ದೇಶಗಳಲ್ಲಿಲ್ಲವೇ? ಅಲ್ಲಿ ಇದೇ ತೆರನಾಗಿ ಜಾತಿಗಳು ಯಾಕೆ ಹುಟ್ಟಿಕೊಳ್ಳಲಿಲ್ಲ? ಭಾರತದಲ್ಲಿ ಮಾತ್ರ ಒಂದು ‘ವೃತ್ತಿಯ ಗುಂಪು’ ಒಂದು ‘ವೃತ್ತಿಯ ಜಾತಿ’ ಆಗಿದ್ದು ಯಾಕಾಗಿ? ಚಾತುರ್ವರ್ಣ ಪದ್ಧತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಗಗಳಿದ್ದವು. ಮೊದಲನೇ ವರ್ಗವು ಜಾತಿಯಾಗಿ ರೂಪಾಂತರವಾಯಿತು. ಕ್ಷತ್ರಿಯ ವರ್ಗವು ಸೈನಿಕರು ಮತ್ತು ಆಡಳಿತಗಾರರಾದರು. ವೈಶ್ಯ ಮತ್ತು ಶೂದ್ರ ವರ್ಗಗಳು ಚೂರಾಗುತ್ತಾ ಹಲವಾರು ಜಾತಿಗಳಾದವು. ಮುಂದೆ, ಈ ಜಾತಿಗಳೆಲ್ಲವೂ ಯಾಕೆ ತಮ್ಮನ್ನು ತಾವೇ ಬಂಸಿಕೊಂಡವು? ಬಾಗಿಲುಗಳನ್ನು ಮುಚ್ಚಿಕೊಂಡವು? ಕುಲದೊಳಗೇ ಮದುವೆಯಾಗುವ ಪದ್ಧತಿಯನ್ನು ಅಪ್ಪಿಕೊಂಡವು? ಯಾಕೆಂದರೆ, ಮೊದಲನೇ ವರ್ಣವು ತನ್ನನ್ನು ತಾನು ಒಂದು ಚೌಕಟ್ಟಿನಲ್ಲಿ ಬಂಸಿಕೊಳ್ಳುತ್ತಿದ್ದಂತೆ, ಉಳಿದ ಜಾತಿಗಳು ಅದನ್ನೇ ಅನುಸರಿಸಿದವು. ಇದನ್ನು ‘ಅನುಕರಣೆಯ ಸೋಂಕು’ ಎನ್ನಬಹುದು. ವಾಲ್ಟರ್ ಬಾಗೆಹಾಟ್ ಚರ್ಚಿಸುವಂತೆ ‘ಅನುಕರಣೆಯು ಮೆದುಳಿನ ಅಗೋಚರ ಭಾಗದಲ್ಲಿ ಗುಪ್ತವಾಗಿ ನೆಲೆಗೊಂಡಿರುತ್ತದೆ’. ಗೇಬ್ರಿಯಲ್ ಟಾರ್ಡೆಯವರ ನಿಯಮಗಳಂತೆ ಜನರು ತಮ್ಮ ನಾಯಕರನ್ನು, ರಾಜರನ್ನು, ಚಕ್ರವರ್ತಿಗಳನ್ನು ಅನುಕರಣೆ ಮಾಡುತ್ತಾರೆ’. ಹೀಗೆ ಅನುಕರಣೆಯೇ ಮೇಲುಗೈ ಪಡೆದಿದ್ದರಿಂದ ಭಾರತದಲ್ಲಿ ಅಸಂಖ್ಯ ಜಾತಿಗಳು ಹುಟ್ಟಿಕೊಂಡಿವೆ’’. ‘ಭಾರತದಲ್ಲಿನ ಮೊಹಮ್ಮದೀಯ, ಜ್ಯೂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಧರ್ಮಗಳು ಜಾತಿರಹಿತ ಸಮಾಜಗಳಾಗಿವೆ. ಜಾತಿ ಅಧ್ಯಯನಕ್ಕೆ ಬಂದ ಯೂರೋಪಿನ ವಿದ್ಯಾರ್ಥಿಗಳು ಮೊದಲಿಗೆ ಚರ್ಮದ ಬಣ್ಣದಿಂದಾಗಿಯೇ ಭಾರತದಲ್ಲಿ ಜಾತಿಗಳು ಹುಟ್ಟಿಕೊಂಡಿವೆ ಎಂಬ ತಪ್ಪುತೀರ್ಮಾನಕ್ಕೆ ಬಂದಿದ್ದರು. ಜಾತಿಗಳು ನಿಂತ ನೀರಾಗಿವೆ. ‘ಜಾತಿಗಳ ಸಿದ್ಧಾಂತ’ವನ್ನು ನಾನು ಮಹತ್ವಾಕಾಂಕ್ಷೆಯಿಂದ ಮಂಡಿಸಿದ್ದೇನೆ. ನನ್ನ ಸಿದ್ಧಾಂತವು ಸಮರ್ಥನೀಯವಲ್ಲ ಎಂದು ನಿರೂಪಿಸಿದರೆ, ನನ್ನ ಸಿದ್ಧಾಂತವನ್ನು ನಾನು ಬಿಟ್ಟುಕೊಡಲು ಸಿದ್ಧನಿದ್ದೇನೆ’. ಪ್ರಖರವಾದ ವಿಶ್ಲೇಷಣೆಯ ಮೂಲಕ ‘ಭಾರತದಲ್ಲಿ ಜಾತಿಗಳು’ ವಿಷಯ ಕುರಿತು 1916ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಡಾ. ಅಂಬೇಡ್ಕರರು 1936ರಲ್ಲಿ ‘ಆ್ಯನ್ನಿಹಿಲೇಷನ್ ಆಪ್ ಕಾಸ್ಟ್’ (ಜಾತಿ ವಿನಾಶ) ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಜೀವಮಾನದುದ್ದಕ್ಕೂ ಜಾತಿ ಪದ್ಧತಿಯನ್ನು ತೀವ್ರವಾಗಿ ವಿರೋಸಿದ್ದ ಡಾ.ಅಂಬೇಡ್ಕರರು 1956ರಲ್ಲಿ ಮತಾಂತರವಾಗುವ ಮೂಲಕ ಜಾತಿಯನ್ನು ತ್ಯಜಿಸಿದರು. *ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಹೊಗಳಿ ಕೊಂಡಷ್ಟು ಅವರು ಸಮರ್ಥರಲ್ಲ.

ಏಪ್ರಿಲ್ 4-5 ಧಾರವಾಡ : ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ: ರಾಷ್ಟ್ರೀಯ ಚಿಂತನಾ ಶಿಬಿರ

Saturday, March 28, 2015

29 ಮಾರ್ಚ್ ಬೆಂಗಳೂರು : ಸಾವಿತ್ರಿಬಾಯಿ ಫುಲೆ-ಪ್ರಶಸ್ತಿ ಪ್ರದಾನ ಮತ್ತು ನಾಟಕ

ಚಂದ್ರನನ್ನು ಹೋಲಿಸುವ ಬಗೆಮಲಯಾಳಂ ಮೂಲ- ಸಾಬ್ಲು ಥಾಮಸ್ ವಿ.
ಕನ್ನಡಕ್ಕೆ -ಕಾಜೂರು ಸತೀಶ್
 

ಕೂಡಿಗೆ ಮೀನು ಮಾರ್ಕೆಟ್ ಬಳಿಯ
ಸೇತುವೆಯ ಕೆಳಗೆ
ಕತ್ತಲು ಬಿದ್ದೆದ್ದು ಹಾರಾಡಿದ ರಾತ್ರಿಯ ಹೊತ್ತು.

' ನೀರೊಳಗೆ ಬಿದ್ದು ಹೊಯ್ದಾಡುತ್ತಿರುವ ಚಂದ್ರ
ಥೇಟ್ ಮೀನಿನಂತಿದೆ'
ಎಂದೆ.

ನನ್ನ ಗೆಳೆಯ
ಸಸ್ಯಾಹಾರಿ .

ಅವನ ಪ್ರಕಾರ,
'ನಾನ್ವೆಜ್ ಉಪಮೆಯಲ್ಲಿ ಚಂದ್ರನಿರುವುದಿಲ್ಲ.
ನೀರೊಳಗೆ ಹೊಯ್ದಾಡುತ್ತಿರುವುದು ಬಿಂಬ ಮಾತ್ರ
ಒಂದು ಬೂದುಗುಂಬಳದಂತೆ.

ಇಬ್ಬರೂ
ತರ್ಕ-ಸಿದ್ಧಾಂತಗಳನ್ನೆಲ್ಲ ಕಲಿತದ್ದು
ಪಾರ್ಟಿ ಕ್ಲಾಸಿನಲ್ಲಿ,
ಕಾಲೇಜಿನಲ್ಲಿ.

'ಚಂದ್ರ ಪೂರ್ಣಬಿಂಬವಲ್ಲ,
ಅಮವಾಸ್ಯೆಯ ನಂತರದ
ತೆಳುವಾದ ಒಂದು ಗೆರೆ.
ಬಾಳೆಮೀನಿನ ಹಾಗೆ ಚಡಪಡಿಸುತ್ತದೆ ಅದು
ಕವಿತೆ,ಕಲ್ಪನೆಯೊಳಗೆಲ್ಲ'
ಎಂದೆ.

ಹೀಗೆಲ್ಲ ತರ್ಕಿಸಿದರೂ,
ಸೇತುವೆ ದಾಟುವಷ್ಟರಲ್ಲಿ
ನಮ್ಮಿಬ್ಬರಿಗೆ ಸುಸ್ತೋ ಸುಸ್ತು.

ದೂರದ ಮನೆಯಲ್ಲಿ
ಮತ್ತೊಬ್ಬಳು ಕಾಯುತ್ತಿದ್ದಾಳೆ-
ಚಂದ್ರನ ಮೈಪಡೆದವಳು.
ನನ್ನ ಹಸಿವು
ಸಾಂಬಾರಾಗಿ ಬೇಯುತ್ತಿದೆ ಅಲ್ಲಿ.

ಅವಳನ್ನು ಮಾತ್ರ
ಚಂದ್ರನೊಂದಿಗೆ ಹೋಲಿಸುವುದಿಲ್ಲ.
**

ಇರೋಮ್ ಶರ್ಮಿಳಾ ಆಗಿರುವುದು ಸುಲಭವಲ್ಲ..
ಡಾ ಎಚ್ ಎಸ್ ಅನುಪಮಾ

ವಿಶ್ವದಲ್ಲೇ ಅತಿ ದೀರ್ಘಕಾಲ ಉಪವಾಸ ಸತ್ಯಾಗ್ರಹ ನಡೆಸಿದ ವ್ಯಕ್ತಿ ಇರೋಂ ಶರ್ಮಿಳಾ. ಆಕೆ ಧೈರ್ಯಕ್ಕೆ, ಬದುಕುಳಿವ ಛಲಕ್ಕೆ, ಹೋರಾಟದ ಗುಣಕ್ಕೆ ಇನ್ನೊಂದು ಹೆಸರು. ಮಣಿಪುರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತು ಸಮಾಜದ ಗಮನ ಸೆಳೆದು ಅದನ್ನು ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತಂದಿದ್ದು ಇರೋಂ ಶರ್ಮಿಳಾ ಉಪವಾಸ. ಈ ಕಾರಣಕ್ಕಾಗಿಯೇ ಅವರಿಗೆ ಹಲವು ಪ್ರಶಸ್ತಿ-ಮನ್ನಣೆಗಳು ಸಂದಿವೆ.

ಆಕೆ ಉಪವಾಸ ಶುರುಮಾಡಿ ೧೫ ವರ್ಷಗಳಾದವು. ಅದು ನವೆಂಬರ್ ೨, ೨೦೦೦ನೇ ಇಸವಿ. ಮಣಿಪುರದ ಇಂಫಾಲ ಕಣಿವೆಯ ಒಂದು ಹಳ್ಳಿ ಮಾಲೋಮ್‌ನ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಹತ್ತು ಜನರನ್ನು ಅಸ್ಸಾಂ ರೈಫಲ್ಸ್ ಅರೆಸೇನಾ ಪಡೆಯ ಯೋಧರು ಗುಂಡು ಹಾರಿಸಿ ಕೊಂದರು. ಸತ್ತವರಲ್ಲಿ ೬೨ ವರ್ಷದ ಲಿಸಾಂಗ್ಬಮ್‌ನಿಂದ ಹಿಡಿದು ೧೯೮೮ರಲ್ಲಿ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ಪಡೆದ ಸಿನಮ್ ಚಂದ್ರಮಣಿ ಕೂಡಾ ಸೇರಿದ್ದರು. ೨೮ ವರ್ಷ ವಯಸ್ಸಿನ, ಪಶುವೈದ್ಯ ಇಲಾಖೆಯ ನೌಕರರ ಮಗಳಾದ ಇರೋಂ ಶರ್ಮಿಳಾ ಚಾನು ಪ್ರತಿ ಗುರುವಾರದಂತೆ ಅಂದೂ ಉಪವಾಸವಿದ್ದಳು. ಆಕೆ ಲಂಗುಲಗಾಮಿಲ್ಲದ ಸೇನೆಯ ಅಟಾಟೋಪಗಳ ಕುರಿತು ಕೇಳಿದ್ದಳು. ಮೆಯಿರಾ ಪೈಬಿ ಮಹಿಳಾಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಳು. ಈ ಹತ್ಯಾಕಾಂಡದ ನಂತರ ಎಷ್ಟು ನೊಂದುಕೊಂಡಳೆಂದರೆ ಸೈನ್ಯ ಮತ್ತು ಅರೆಸೇನಾಪಡೆಗಳಿಗೆ ವಿಶೇಷಾಧಿಕಾರ ನೀಡಿ, ಮನಬಂದಂತೆ ಕೊಲ್ಲುವ ಅವಕಾಶ ಕೊಟ್ಟ ಎಎಫ್‌ಎಸ್‌ಪಿಎ ಕಾಯ್ದೆ ವಾಪಸು ತೆಗೆದುಕೊಳ್ಳುವವರೆಗೆ ಉಪವಾಸ ಮಾಡುವುದಾಗಿ ಘೋಷಿಸಿದಳು.

ಉಪವಾಸ ಕುಳಿತ ಮೂರನೇ ದಿನಕ್ಕೆ ದೇಹಸ್ಥಿತಿ ಗಂಭೀರವಾಯಿತು. ಪೊಲೀಸರು ಆತ್ಮಹತ್ಯೆ ಪ್ರಯತ್ನವೆಂದು ಐಪಿಸಿ ಸೆ. ೩೦೯ರ ಅಡಿಯಲ್ಲಿ ಬಂಧಿಸಿದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬದುಕುಳಿಯಲೆಂದು ಆಕೆಯ ಮೂಗಿಗೆ ಒತ್ತಾಯವಾಗಿ ಆಹಾರ ನಳಿಕೆ (ರೈಲ್ಸ್ ಟ್ಯೂಬ್) ಏರಿಸಲಾಯಿತು. ಅಂದಿನಿಂದ ಆಹಾರ ಮತ್ತು ನೀರು ಎರಡೂ ನಳಿಕೆ ಮೂಲಕ ಆಕೆಯ ದೇಹ ಸೇರುತ್ತಿವೆ. ಆತ್ಮಹತ್ಯೆ ಪ್ರಯತ್ನಕ್ಕಾಗಿ ಗರಿಷ್ಠ ಒಂದು ವರ್ಷ ಕಾಲ ಮಾತ್ರ ಜೈಲು ಶಿಕ್ಷೆ ನೀಡಬಹುದು. ಆದ್ದರಿಂದ ಕಳೆದ ೧೫ ವರ್ಷಗಳಿಂದ ಪ್ರತಿ ವರ್ಷ ಶರ್ಮಿಳಾ ಬಿಡುಗಡೆಯಾಗುವುದು, ಆತ್ಮಹತ್ಯೆ ಪ್ರಯತ್ನವೆಂದು ಮತ್ತೆ ಮರುದಿನ ಬಂಧಿಸುವುದು, ಒಂದು ವರ್ಷದ ಬಳಿಕ ಮತ್ತೆ ಬಿಡುಗಡೆಯಾಗುವುದು ಮುಂದುವರೆದಿದೆ. ಬಂಧನದಲ್ಲಿರುವಾಗ ಪ್ರತಿ ೧೫ ದಿನಕ್ಕೊಮ್ಮೆ ಆಸ್ಪತ್ರೆಯಿಂದ ಕಮ್ಯಾಂಡೋಗಳ ರಕ್ಷಣೆಯಲ್ಲಿ ಕೋರ್ಟಿಗೆ ಹೋಗುವುದು; ಸೌಖ್ಯವೇ? ಉಪವಾಸ ನಿಲ್ಲಿಸುವೆಯಾ? ಎಂಬ ಪ್ರಶ್ನೆಗಳು ನ್ಯಾಯಾಧೀಶರಿಂದ ಬಂದಾಗ ಮಾಮೂಲಿಯಾಗಿ ನಿರಾಕರಿಸುವುದು ಪ್ರಹಸನದಂತೆ ನಡೆಯುತ್ತಲೇ ಇದೆ.

ಶರ್ಮಿಳಾ ಎಂಬ ಕೃಶದೇಹಿ ಮಣಿಪುರದ ಉಕ್ಕಿನ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ ಶರ್ಮಿಳಾ ಆಗುವುದು, ಆಗಿರುವುದು ಸುಲಭವಲ್ಲ.ಜಗಿಯುವ ಕ್ರಿಯೆ ಮನಸ್ಸನ್ನು ಪ್ರಫುಲ್ಲವಾಗಿಡುವ ಒಂದು ಮಾರ್ಗ. ಉಂಡ, ಚ್ಯೂಯಿಂಗ್ ಗಂ/ಕವಳ ಜಗಿದ ವ್ಯಕ್ತಿ ಫ್ರೆಷ್‌ನೆಸ್ ಅನುಭವಿಸುವುದು ಜಗಿಯುವಿಕೆಯಿಂದಲೇ. ಜಗಿಯುವುದನ್ನೇ ಮರೆತು ಬದುಕುವುದು, ನಾಲಿಗೆಯ ರುಚಿಯ ಸೆಳೆತವನ್ನು ನಿರಾಕರಿಸುವುದು, ಪೊಲೀಸು-ಆಸ್ಪತ್ರೆ ಸಿಬ್ಬಂದಿ-ಪತ್ರಕರ್ತರು-ಆಕ್ಟಿವಿಸ್ಟರ ನಡುವೆ ಆಸ್ಪತ್ರೆ ಕಂ ಜೈಲಿನಲ್ಲಿ ೧೫ ವರ್ಷ ಬದುಕುವುದು ಸುಲಭವಲ್ಲ. ಯಾರೊಡನೆಯೂ ಖಾಸಗಿ ಮಾತುಕತೆಯಿಲ್ಲದೆ ಬರೀ ಓದಿ, ಟಿವಿ ನೋಡಿ, ಪತ್ರ-ಚಿತ್ರ ಬರೆದು, ಸಂದರ್ಶನ ನೀಡುತ್ತ, ಕೋರ್ಟಿಗೆ ಹೋಗಿಬರುತ್ತ ಇರುವುದು ಭಾವಜೀವಿಗೆ ಇನ್ನೂ ಕಷ್ಟ. ಆದರೂ ತಾನು ಹಾಗೆ ಬದುಕಲೇಬೇಕಾಗಿದೆ ಎಂದು ಈ ಎಲ್ಲ ವರ್ಷಗಳಲ್ಲಿ ಶರ್ಮಿಳಾ ಮನಸ್ಸನ್ನು ಗಟ್ಟಿ ಮಾಡಿಕೊಂಡು ಬದುಕಿದ್ದರು.

ಅಥವಾ ನಾವು ಹಾಗಂದುಕೊಂಡಿದ್ದೆವು. ಈಗ ಉಪವಾಸ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಅವರಿಗೆ ಉಪವಾಸ ಸಾಕೆನಿಸುತ್ತಿದೆ. ತಾನು ಗೆದ್ದು, ಸರ್ಕಾರ ಆ ಕಾಯ್ದೆ ವಾಪಸು ಪಡೆದು, ಎಲ್ಲರೊಡನೆ ಊಟಮಾಡಬೇಕೆನಿಸತೊಡಗಿದೆ. ಕಳೆದ ೧೫ ವರ್ಷದಿಂದ ಊಟದ ರುಚಿಯನ್ನೇ ನೋಡದ ಬಾಯಿಗೆ ರುಚಿಯೇ ಮರೆತುಹೋಗಿದೆ. ಏನೇನನ್ನೋ ತಿನ್ನುವ ಬಯಕೆ. ಎಲ್ಲವನ್ನು ಬಾಯಿಗೆ ಹಾಕಿ ತಮ್ಮ ಕಳೆದುಕೊಂಡ ರುಚಿಯ ಸಂವೇದನೆಯನ್ನು ಮರಳಿ ಪಡೆಯುವ ಬಯಕೆ. ಅವರ ಬಳಿ ನಿಮ್ಮಿಷ್ಟದ ತಿನಿಸು ಯಾವುದು ಎಂದರೆ ಎಲ್ಲವನ್ನೂ ಕಣ್ಣೆದುರು ತಂದುಕೊಂಡು ಎಲ್ಲರೊಡನೆ ಎಲ್ಲವನ್ನೂ ತಿನ್ನಬೇಕೆನಿಸಿದೆ ಎನ್ನುತ್ತ ಸಂಭ್ರಮಿಸುತ್ತಾರೆ.

ಇದರ ಜೊತೆಗೆ ಸದ್ಯದಲ್ಲೇ ಐಪಿಸಿಯ ಸೆಕ್ಷನ್ ೩೦೯ ರದ್ದಾಗಿ ಆತ್ಮಹತ್ಯೆ ಕ್ರಿಮಿನಲ್ ಅಪರಾಧವಲ್ಲ ಎಂಬ ತೀರ್ಮಾನವಾಗಲಿದೆ. ಹಾಗಾದಲ್ಲಿ ಶರ್ಮಿಳಾ ಜೈಲಾಗಿ ಪರಿವರ್ತನೆಗೊಂಡ ಆಸ್ಪತ್ರೆಯ ರೂಮಿನಿಂದ ಬಿಡುಗಡೆಯಾಗುತ್ತಾರೆ. ಆಗ ಅವರ ರೈಲ್ಸ್ ಟ್ಯೂಬ್ ತೆಗೆದು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗುತ್ತದೆ. ಆದರೆ ದಿನಕ್ಕೆ ೩ ಬಾರಿ ನಾಳದಲ್ಲಿ ಆಹಾರ ಒಳಹೋಗಿ ಹೋಗಿ ಶರ್ಮಿಳಾ ಊಟ ಮಾಡುವುದನ್ನು ಮರೆತಿದ್ದಾರೆ. ಅವರ ಬಾಯಿ ಜಗಿಯುವುದನ್ನು ಮರೆತಿದೆ, ಹಲ್ಲು ನಾಲಿಗೆ ತಂತಮ್ಮ ಕೆಲಸ ಮರೆತಿವೆ; ಅನ್ನನಾಳ, ಲಾಲಾಗ್ರಂಥಿಗಳು ಸ್ರವಿಸುವುದನ್ನು ಮರೆತಿವೆ. ತೂಕ ೬೫ ಕೆಜಿಯಿಂದ ೪೦ಕ್ಕೆ ಇಳಿದಿದೆ. ಅವರಿಗೆ ಬಿಪಿ, ಡಯಾಬಿಟೀಸ್ ಶುರುವಾಗಿದೆ. ಹೀಗೇ ಉಪವಾಸ ಮುಂದುವರೆಸಿದರೆ ಶ್ವಾಸಕೋಶದ ಸೋಂಕು ತಗಲುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ನರವ್ಯೂಹದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಶರ್ಮಿಳಾರನ್ನು ಇಷ್ಟು ದೀರ್ಘಕಾಲದ ಉಪವಾಸದ ಬಳಿಕವೂ ಜೀವಂತವಾಗಿ, ಆರೋಗ್ಯವಾಗಿ ಇಡಲು ಸರ್ಕಾರಕ್ಕೆ ಪ್ರತಿದಿನ ೧೦ ಸಾವಿರ ರೂ. ಖರ್ಚಾಗುತ್ತಲಿದೆ. ಆದರೆ ಬಿಡುಗಡೆಯಾದನಂತರ ಇಷ್ಟೆಲ್ಲ ಖರ್ಚುವೆಚ್ಚಗಳ ಶರ್ಮಿಳಾ ಭರಿಸಲಾರರು.ಎಲ್ಲಕ್ಕಿಂತ ಮಿಗಿಲಾದ ಬದಲಾವಣೆಯೊಂದು ಸಂಭವಿಸಿದೆ, ಶರ್ಮಿಳಾಗೆ ಉಳಿದೆಲ್ಲರಂತೆ ತನಗೂ ಮದುವೆಯಾಗಿ, ಸಂಸಾರ ನಡೆಸುವ ಆಸೆ ಬಂದಿದೆ. ಅವರೀಗ ಪ್ರೇಮಿಯಾಗಿದ್ದಾರೆ! ಗೋವಾ ಸಂಜಾತ ಬ್ರಿಟಿಷ್ ಪ್ರಜೆ, ಕಲಾವಿದ, ಆಕ್ಟಿವಿಸ್ಟ್, ಡೆಸ್ಮಂಡ್ ಕುಟಿನೊ ಅವರ ಪ್ರೇಮಿ. ಅಂಥ ಗಂಡಸನ್ನು ತಾನು ಇದುವರೆಗೆ ಭೇಟಿಯೇ ಆಗಿಲ್ಲ ಎನ್ನುವ ಶರ್ಮಿಳಾ ಆತನನ್ನು ಮದುವೆಯಾಗಬಯಸುತ್ತಾರೆ. ಆತ ಶರ್ಮಿಳಾಗೆ ಲೆಕ್ಕವಿಲ್ಲದಷ್ಟು ಪುಸ್ತಕಗಳನ್ನೂ, ಗೊಂಬೆಗಳನ್ನೂ, ರಮ್ಯ ಕನಸುಗಳನ್ನೂ ನೀಡಿದ್ದಾನೆ. ಈಗ ಶರ್ಮಿಳಾ ಜಗವೆಲ್ಲ ಡೆಸ್ಮಂಡ್ ಮಯ. ಆತ ಕೋರ್ಟಿನಲ್ಲಿ ತಾನೇ ವಾದಿಸಲು ಶರ್ಮಿಳಾಗೆ ಹೇಳಿ ಲಾಯರನ್ನು ನಿರಾಕರಿಸುವಂತೆ ಮನವೊಲಿಸಿದ್ದಾನೆ.


ಆದರೆ ಈ ಬೆಳವಣಿಗೆ ಯಾರಿಗೂ ಇಷ್ಟವಿಲ್ಲ! ಆಕೆ ಉಪವಾಸ ಬಿಡುವುದೂ ಇಷ್ಟವಿಲ್ಲ, ಮದುವೆಯಾಗುವುದೂ ಇಷ್ಟವಿಲ್ಲ!! ಡೆಸ್ಮಂಡ್ ಪದೇಪದೇ ಆಸ್ಪತ್ರೆಗೆ ಬಂದು ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಶರ್ಮಿಳಾ ಭೇಟಿ ನಿರಾಕರಿಸಲಾಗಿದೆ.


ಶರ್ಮಿಳಾ ಅವರ ತಾಯಿ ಸಖೀದೇವಿ ತಮ್ಮ ಮಗಳನ್ನು ಹೆತ್ತು ಮಣಿಪುರದ ಸಮಾಜಕ್ಕಾಗಿ ತ್ಯಾಗ ಮಾಡಿರುವುದಾಗಿಯೂ, ತಮ್ಮ ಕುಟುಂಬವೆಂದೂ ಅವಳ ಹಾಗೂ ಅವಳ ಹೋರಾಟದ ಮಧ್ಯ ನಿಂತಿರಲಿಲ್ಲವೆಂದೂ ಹೇಳುತ್ತ, ಅವಳು ಎಎಫ್‌ಎಸ್‌ಪಿಎ ಹಿಂದೆಗೆದುಕೊಳ್ಳುವವರೆಗೆ ಉಪವಾಸ ಮುಂದುವರೆಸಬೇಕು; ಸರ್ಕಾರಕ್ಕೆ ಒತ್ತಡ ಹಾಕಬೇಕು; ಇಲ್ಲದಿದ್ದರೆ ಅವಳ ಬದುಕೇ ವ್ಯರ್ಥ ಎನ್ನುತ್ತಾರೆ. ಗಂಡಸರ ದರ್ಪ, ದೌರ್ಜನ್ಯಗಳ ಗಮನಿಸಿ ತಾನೆಂದೂ ಜೀವಮಾನದಲ್ಲಿ ಮದುವೆಯಾಗುವುದಿಲ್ಲ ಎನ್ನುತ್ತಿದ್ದ ತಮ್ಮ ಮಗಳು ಈಗ ಯಾರೋ ದುಷ್ಟನ ಪ್ರಭಾವಕ್ಕೊಳಗಾಗಿ ಮದುವೆಯ ಮಾತನಾಡುತ್ತಿದ್ದಾಳೆಂದೂ; ಆ ಕಾಯ್ದೆ ರದ್ದಾದನಂತರ ಉಪವಾಸ ನಿಲಿಸಿದರಷ್ಟೇ ತಾವು ಮಗಳನ್ನು ನೋಡಬಯಸುವುದಾಗಿಯೂ ಹೇಳುತ್ತಾರೆ. ಶರ್ಮಿಳಾ ಸೋದರನದೂ ಹೆಚ್ಚುಕಮ್ಮಿ ಇದೇ ಅಭಿಪ್ರಾಯ.

ಶರ್ಮಿಳಾ ಉಪವಾಸ ಕುಳಿತ ನಂತರ ೨೦೦೩ರಲ್ಲಿ ತಂಗ್ಜಂ ಮನೋರಮಾ ಹತ್ಯೆ ಖಂಡಿಸಿ ನಗ್ನ ಪ್ರತಿಭಟನೆ ನಡೆಸಿದ ತಾಯಂದಿರ ಮುಖಂಡೆ ಸೋಯ್ಬಾಮ್ ಕೂಡಾ ಶರ್ಮಿಳಾ ಉಪವಾಸ ನಿಲ್ಲಿಸುವುದನ್ನು ಖಂಡತುಂಡ ವಿರೋಧಿಸುತ್ತಾರೆ. ಮಹಿಳೆಗೆ ರಸ್ತೆಯಲ್ಲಿ ಬೆತ್ತಲಾಗುವುದೂ ಒಂದೇ, ಸಾಯುವುದೂ ಒಂದೇ. ಹಾಗಿರುತ್ತ ಬೆತ್ತಲಾದರೂ ಸರಿ ಎಂದು ತಾವೆಲ್ಲ ನಗ್ನರಾಗಿ ಇಂಫಾಲದ ಬೀದಿಗಳಲ್ಲಿ ನಡೆದು ಹೋರಾಟ ಮುಂದುವರೆಸಿದ್ದೆವು; ಈಗ ಶರ್ಮಿಳಾ ಉಪವಾಸ ಮುಂದುವರೆಸಲು ಏನಡ್ಡಿ ಎಂದು ಕೇಳುತ್ತಾರೆ!

ಶರ್ಮಿಳಾ ಉಪವಾಸ ಮಣಿಪುರಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿ ಕೊಟ್ಟಿದೆ. ಅವರ ಹೆಸರಿನಲ್ಲಿ ರಾಜ್ಯಕ್ಕೆ ಮಿಲಿಯನ್ನುಗಟ್ಟಲೆ ಡಾಲರ್ ಹರಿದುಬಂದಿದೆ. ಕನಿಷ್ಠ ೪೦ ಎನ್‌ಜಿಒಗಳು ಕಳೆದ ಐದು ವರ್ಷಗಳಲ್ಲಿ ಅವರ ಬೆಂಬಲಕ್ಕೆಂದು ಶುರುವಾಗಿವೆ. ಅವು ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಜನರ ರಕ್ಷಣೆಯ ಸಲುವಾಗಿ ಕೆಲಸ ಮಾಡುತ್ತವೆ. ಸ್ವತಃ ಶರ್ಮಿಳಾ ಅವರದೂ ‘ಜಸ್ಟ್ ಪೀಸ್ ಫೌಂಡೇಷನ್’ ಎಂಬ ಎನ್‌ಜಿಒ ಇದೆ. ಅದಕ್ಕೆ ಹೊರಗಿನ ಧನಸಹಾಯ ಪಡೆಯುವುದಿಲ್ಲ, ಅವರಿಗೆ ಬಂದ-ಬರುವ ಹಣವೆಲ್ಲ ಅವರ ಎನ್‌ಜಿಒಗೆ ಹೋಗುತ್ತದೆ. ‘ಹಣ ಚಳುವಳಿಯನ್ನು ಕೊಲ್ಲುತ್ತದೆ. ನನಗೆ ಹಣ ಬೇಡ, ಜನರ ಬೆಂಬಲ ಬೇಕು’ ಎಂದು ಎಂದಿನಿಂದ ಶರ್ಮಿಳಾ ಹೇಳಿದ್ದಾರೆ. ಹೀಗೆ ಇಷ್ಟು ದೀರ್ಘಕಾಲ ಹೋರಾಡಿದಾಕೆ ಈಗ ನಡುಮಧ್ಯ ಉಪವಾಸ ನಿಲ್ಲಿಸಬಾರದು ಎನ್ನುವುದು ಸೋಯ್ಬಾಮ್, ವಿಧವೆಯರ ಸಂಘಟನೆಯ ಅಧ್ಯಕ್ಷೆ ರೇಣು ತಾಕೆಲ್ಲಂಬಂ ಹಾಗೂ ಇನ್ನಿತರರ ಅಭಿಮತ.

ಆದರೆ ಬಂಧುಗಳೂ, ಮಿತ್ರರೂ ಸರ್ಕಾರದ ಜೊತೆ ಕೈಜೋಡಿಸಿ ತನ್ನ ಬಿಡುಗಡೆಯಾಗದಂತೆ ನೋಡಿಕೊಂಡಿದ್ದಾರೆ; ತಾನು ಬಿಡುಗಡೆಯಾಗದೇ ಹೋರಾಡುತ್ತಲೇ ಇರಲಿ ಎನ್ನುವುದು ಅವರ ಆಸೆ ಎಂದು ಶರ್ಮಿಳಾ ಆಪಾದಿಸುತ್ತಾರೆ. ಉಳಿದಂತೆ ಇಡೀ ಮಣಿಪುರ ಯಾವ ಚಳುವಳಿ, ಹೋರಾಟವೂ ಇಲ್ಲದೆ ಬೆಚ್ಚಗೆ ಮನೆಯಲ್ಲಿ ಕುಳಿತಿರುವಾಗ ಕಳೆದ ೧೫ ವರ್ಷಗಳಿಂದ ಉಪವಾಸದ ಹೆಸರಿನಲ್ಲಿ ತನ್ನ ಯೌವನ, ಆರೋಗ್ಯ, ಸಮಯ ಎಲ್ಲವನ್ನೂ ಕಳೆದಾಗಿದೆ. ಇನ್ನೆಷ್ಟು ಕಾಲ ತಾನು ಮಾತ್ರ ಹೋರಾಡಬೇಕೆನ್ನುವುದು ಶರ್ಮಿಳಾ ಪ್ರಶ್ನೆ. ಎಂಟು ವರ್ಷದ ಕೆಳಗಿನ ಸಂದರ್ಶನದಲ್ಲಿ ‘ನನ್ನ ಹೋರಾಟದ ದಾರಿಯನ್ನು ನಾನೊಬ್ಬಳೇ ತುಳಿಯಬೇಕಾಗಿದೆ. ನನಗೆ ಯಾವ ರಾಜಕಾರಣಿ, ಆಕ್ಟಿವಿಸ್ಟರ ಬೆಂಬಲವೂ ಬೇಡ’ ಎಂದಾಕೆ ಇವತ್ತು ಮಣಿಪುರದ ಜನತೆ ತನ್ನನ್ನು ಬದುಕಲೂ ಬಿಡದೆ, ಸಾಯಲೂ ಬಿಡದೆ, ತನ್ನನ್ನು ಮಾತ್ರ ಚಳುವಳಿಯ ಹೆಸರಿನ ಮೂರ್ತಿಯಾಗಿಸಿ ತಾವು ಸುಖವಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ‘ಮಣಿಪುರದ ಜನತೆ ಹೀಗೇ ನಿಶ್ಚೇಷ್ಟಿತರಾಗೇ ಉಳಿದರೆ ಎಎಫ್‌ಎಸ್‌ಪಿಎ ಯಾವತ್ತೂ ರದ್ದಾಗುವುದಿಲ್ಲ ಬಹುಶಃ ಆಗ ಸಾವೇ ನನ್ನ ಹೋರಾಟದ ಕೊನೆಯಾಗಬಹುದು. ಸ್ತಬ್ಧವಾಗಿರುವ ಈ ಪೀಳಿಗೆಯಲ್ಲದಿದ್ದರೂ ಬರಲಿರುವ ಪೀಳಿಗೆಗಳಾದರೂ ನನ್ನ ಹೆಜ್ಜೆ ಗುರುತಿನಲ್ಲಿ ಸಾಗಬಹುದು’ ಎಂದು ವಿಷಾದದಿಂದ ಹೇಳುತ್ತಾರೆ.

ಸರಿಯುತ್ತಿರುವ ಯೌವನ; ಬಾಧಿಸುತ್ತಿರುವ ಕಾಯಿಲೆ; ಕೇವಲ ತನ್ನ ಉಪವಾಸವೊಂದನ್ನೇ ಹೋರಾಟವಾಗಿಸಿ ಉಳಿದಂತೆ ನಿಷ್ಕ್ರಿಯವಾಗಿರುವ ಜನತೆ; ಹಾರಾಡಬೇಕೆಂಬ ಮನಸು ೧೫ ವರ್ಷದಿಂದ ಮಲಗಿದಲ್ಲೇ ಮಲಗಿ, ಇದ್ದಲ್ಲೇ ಇದ್ದು ಹುಟ್ಟಿರುವ ಏಕತಾನತೆ; ಅದರ ನಡುವೆ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸಿದಾತನ ಒಂದು ಹಿಡಿ ಪ್ರೀತಿ ಪಡೆಯಲು ಸಮಾಜ ತೋರುತ್ತಿರುವ ವಿರೋಧ - ಇವೆಲ್ಲ ಶರ್ಮಿಳಾಗೆ ಹೀಗೆನಿಸುವಂತೆ ಮಾಡಿರಬಹುದು. ಅದು ಏನೂ ತಪ್ಪಲ್ಲ.


ಶರ್ಮಿಳಾ ಹೇಳಿದಂತೆ ಮಣಿಪುರದಲ್ಲಿ ತಾಯಂದಿರು ಬೆತ್ತಲಾದ ಹೋರಾಟದ ನಂತರ ಬೇರೆ ಯಾವ ಸಂಘಟಿತ ಹೋರಾಟವೂ ನಡೆಯಲಿಲ್ಲ. ಅಲ್ಲಿರುವ ಅಸಂಖ್ಯ ಬಂಡುಕೋರ ಗುಂಪುಗಳ ಕಾರಣದಿಂದ ಸೇನೆ ಸದ್ಯ ವಾಪಸು ಹೋಗುವ ಲಕ್ಷಣವೂ ಇಲ್ಲ. ಅಂತಾರಾಷ್ಟ್ರೀಯವಾಗಿ ಭಾರತದ ನೆರೆಹೊರೆ ಸಂಬಂಧಗಳು; ಬಾಂಗ್ಲಾದೇಶೀಯರ ಒಳನುಸುಳುವಿಕೆ; ಈಶಾನ್ಯ ರಾಜ್ಯಗಳ ಪರಸ್ಪರ ಕಾದಾಟ; ಮಾದಕ ದ್ರವ್ಯದ ಕಾಳಸಂತೆ ಜಾಲ - ಇವೆಲ್ಲದರಿಂದ ಆ ಪ್ರದೇಶ ಶಾಂತಿಯುತವಾಗಿರಬೇಕಾದರೆ ಅಲ್ಲಿ ಸೇನೆ ಇರಬೇಕೆಂದು ಜನರೇ ಭಾವಿಸುತ್ತಾರೆ. ಬೀದಿ, ಮಾಲ್, ಪಾರ್ಕಿಂಗ್ ಲಾಟ್ ಎಲ್ಲವನ್ನು ಹಫ್ತಾ ವಸೂಲಿಗೆಂದು ಹಂಚಿಕೊಂಡ; ಸರ್ಕಾರಿ ನೌಕರರನ್ನೂ ಹೆದರಿಸಿ ಅವರಿಂದ ಒಂದು ಪಾಲು ಸಂಬಳವನ್ನು ಹಫ್ತಾ ಆಗಿ ಪಡೆಯುವ ಬಂಡುಕೋರ ಗುಂಪುಗಳ ಪರಸ್ಪರ ಕಾದಾಟ ಸೇನೆಯಿಲ್ಲದಿದ್ದರೆ ಸಿವಿಲ್ ವಾರಿನಲ್ಲಿ ಕೊನೆಗೊಳ್ಳುತ್ತದೆ ಎಂದು ಚಿತ್ರಾ ಅಹೆಂತೆಮ್ ಎಂಬ ಮಣಿಪರದ ಪತ್ರಕರ್ತೆ, ಆಕ್ಟಿವಿಸ್ಟ್ ಅಭಿಪ್ರಾಯಪಡುತ್ತಾರೆ.

ಶರ್ಮಿಳಾ ದೀರ್ಘಕಾಲ ಬದುಕಬೇಕೆಂದರೆ ಉಪವಾಸ ಕೊನೆಯಾಗಬೇಕು, ಆಕೆ ಸಹಜವಾಗಿ ಆಹಾರ ತೆಗೆದುಕೊಳ್ಳುವಂತಾಗಬೇಕು. ಆಕೆ ಊಟಮಾಡಬೇಕೆಂದರೆ ಸೇನಾ ಕಾಯ್ದೆ ರದ್ದಾಗಬೇಕು. ಅದು ರದ್ದಾಗಬೇಕೆಂದರೆ ಮಣಿಪುರದ ಬಂಡುಕೋರ ಗುಂಪುಗಳು ತಣ್ಣಗಾಗಿ ಸಮಾಜದಲ್ಲಿ ಶಾಂತಿ ನೆಲೆಸಬೇಕು. ಆ ಕಾಲ ಬರುವುದು ಎಂದು? ಉರಿವ ಒಲೆಯ ಮೇಲಿನ ಬಾಣಲೆಯಲ್ಲಿ ಶರ್ಮಿಳಾ ಇನ್ನೆಷ್ಟು ಕಾಲ ಕಾಯುವುದು? ಉಪವಾಸ ಪ್ರತಿಭಟನೆಯ ಒಂದು ಮಾದರಿ ಅಷ್ಟೇ. ಮಾದರಿ ಪೂರಾ ಸಾಂಕೇತಿಕವಾದರೆ; ಒಂದಿಡೀ ರಾಜ್ಯದ ಚಳುವಳಿ ಒಬ್ಬ ವ್ಯಕ್ತಿಯ ಹೋರಾಟವನ್ನೇ ಕೇಂದ್ರೀಕರಿಸಿ ನಿಂತುಬಿಟ್ಟರೆ ಆಗುವ ಅಪಾಯ ಇದು.

ಈಗ ಅಲ್ಲಿನ ಪ್ರಜ್ಞಾವಂತರು ತುರ್ತಾಗಿ ಯೋಚಿಸಬೇಕು; ಹೋರಾಟದ ಗುರಿ-ರೂಪುರೇಷೆಗಳನ್ನು ಬದಲಿಸಿಕೊಳ್ಳಬೇಕು; ಇವತ್ತಿಗೆ ಅಲ್ಲಿ ಬೇಕಿರುವುದೇನು ಎಂದರಿತು ಬೇಡಿಕೆಯನ್ನು ಮರುಪರಿಶೀಲಿಸಬೇಕು. ಸೇನೆ ವಾಪಸಾತಿಗಿಂತ ಅದನ್ನು ಮಾನವೀಯಗೊಳಿಸುವ ಕುರಿತು, ಅದಕ್ಕೆ ನಾಗರಿಕ ಉತ್ತರದಾಯಿತ್ವ ಹೊರಿಸುವ ಕುರಿತು ಹೋರಾಡಬಹುದೇ ಎಂದು ಗಮನ ಹರಿಸಬೇಕು.

ಆಗ ಮಾತ್ರ ಶರ್ಮಿಳಾ ಆಧುನಿಕ ಗಾಂಧಾರಿಯಾಗುವ ಸಂಭವ ತಪ್ಪಬಹುದು.

29 ಮಾರ್ಚ್ ಗುಲಬುರ್ಗಾ : ಬಸು ಬೇವಿನಗಿಡದ ಕಥಾ ಸಂಕಲನ ಬಿಡುಗಡೆFriday, March 27, 2015

ಗೋಪಾಲಕೃಷ್ಣ ಗಾಂಧಿ: ಒಬ್ಬ ಅಪೂರ್ವ ಚಿಂತಕ
ಶೂದ್ರ ಶ್ರೀನಿವಾಸ

‘‘ಯಾವ ಮನಸ್ಸು ಭಯ, ಚಪಲ, ಹತಾಶೆಗಳಿಂದ ಮುಕ್ತವಾಗಿ ಉಳಿದಿದೆಯೋ ಅಂಥದಕ್ಕೆ ಮಾತ್ರ ಸರಿಯಾಗಿ ಯೋಚಿಸುವ ಶಕ್ತಿಯಿರುತ್ತದೆ.’’
-ರಾಮಮನೋಹರ ಲೋಹಿಯಾ

ಮೇಲಿನ ವಾಕ್ಯ ನನಗೆ ಅತ್ಯಂತ ಪ್ರಿಯವಾದದ್ದು. ಮತ್ತೆ ಮತ್ತೆ ಮನಸ್ಸಿನಲ್ಲಿ ಗುನುಗುನಿಸಿಕೊಳ್ಳಲು ಪ್ರಯತ್ನಿಸುವೆ. ಈ ವಾಕ್ಯದ ನೆಲೆಯಲ್ಲಿಯೇ ನಾನು ಎಷ್ಟೋ ವರ್ಷಗಳಿಂದ ಇಷ್ಟಪಡುವ ಗೋಪಾಲಕೃಷ್ಣ ಗಾಂಧಿಯವರನ್ನು ಭೇಟಿಯಾಗಿದ್ದೆ. ಎರಡು ಮೂರು ಬಾರಿ ಚೆನ್ನೈಗೆ ಹೋಗಿ ನೋಡುವ ಆಶಯವನ್ನು ತುಂಬಿಕೊಂಡಿದ್ದೆ. ಹಾಗೆ ನೋಡಿದರೆ ಈ ಬಾರಿಯ ‘ದಿ ಹಿಂದೂ’ ಪತ್ರಿಕೆಯು ಸಂಘಟಿಸುವ ಮೂರು ದಿನಗಳ ಸಾಹಿತ್ಯ ಸಮಾವೇಶಕ್ಕೆ ಹೋಗಬೇಕಾಗಿತ್ತು. ಒಂದು ದಿವಸ ಧಾರವಾಡ ಸಮಾವೇಶದಲ್ಲಿ ಭಾಗವಹಿಸಿ ಎರಡು ದಿವಸ ಚೆನ್ನೈನಲ್ಲಿ ಕಾಲ ಕಳೆಯಲು ಸಿದ್ಧತೆಯನ್ನು ಮಾಡಿಕೊಂಡಿದ್ದೆ. ಇದಕ್ಕೆ ನನ್ನ ಹೆಸರನ್ನೂ ರಿಜಿಸ್ಟರ್ ಮಾಡಿಸಿದ್ದೆ. ಆದರೆ ಕೊನೆಯ ಕ್ಷಣದಲ್ಲಿ ಗಂಟಲು ನೋವಿನಿಂದ ಹೋಗಲಾಗಲಿಲ್ಲ. ಅಲ್ಲೆಲ್ಲ ಯಾರ್ಯಾರನ್ನೋ ಪರಿಚಯ ಮಾಡಿಕೊಳ್ಳುವಾಗ ಮುಕ್ತವಾಗಿ ಮಾತಾಡಲು ತೊಡಗದಿದ್ದರೆ ಕಿರಿಕಿರಿಯಾಗುವುದೆಂದು ಅತ್ಯಂತ ವಿಷಾದದಿಂದ ತಟಸ್ಥನಾಗಿಬಿಟ್ಟೆ. ಇಷ್ಟಾದರೂ ಪ್ರತಿದಿವಸ ಎಲ್ಲ ಕಾರ್ಯಕ್ರಮಗಳ ಬಗ್ಗೆ ಕರಾರುವಾಕ್ಕಾಗಿ ಮೊಬೈಲ್‌ನಲ್ಲಿ ಮೆಸೇಜ್ ರೂಪದಲ್ಲಿ ಬಂದಾಗ ಒಂದು ರೀತಿಯಲ್ಲಿ ತಲ್ಲಣಗೊಂಡಿದ್ದೆ. ಅದರಲ್ಲೂ ಉದ್ಘಾಟನೆಯ ಗೋಷ್ಠಿಯಲ್ಲಿ ಗೋಪಾಲಕೃಷ್ಣ ಗಾಂಧಿಯವರು ಶಾಸ್ತ್ರೀಯ ಸಂಗೀತವನ್ನು ಕುರಿತು ಮಾತನಾಡುವುದನ್ನು ಕೇಳಿಸಿಕೊಳ್ಳಲು ತವಕದಿಂದಿದ್ದೆ. ಕೊನೆಗೆ ಪೆಚ್ಚಾಗಿ ಎಸ್ಸೆಮ್ಮೆಸ್‌ಗಳನ್ನು ಓದಿಕೊಳ್ಳಲು ಹೋಗಲಿಲ್ಲ. ಒಟ್ಟು ಸಾಹಿತ್ಯ ಸಮಾವೇಶದ ಸ್ವರೂಪವನ್ನು ಒಂದು ತಿಂಗಳಿಗಿಂತ ಮುಂಚೆಯೇ ‘ದಿ ಹಿಂದೂ’ವಿನಿಂದ ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಇರಲಿ, ಕೊನೆಗೆ ಈ ಪಾಪ ಪ್ರಜ್ಞೆಯಿಂದ ಬಿಡುಗಡೆ ಯಾಗಲು ಅವಕಾಶ ದೊರಕಿದ್ದು ಇದೇ ಮಾರ್ಚ್ 23ರಂದು ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಜನ್ಮದಿನದಂದು ‘ಎ ಸ್ಟೇಟ್ ಆಫ್ ಎಮರ್ಜೆನ್ಸಿ’ ಎಂಬ ವಿಷಯದ ಬಗ್ಗೆ ಗೋಪಾಲಕೃಷ್ಣ ಗಾಂಧಿಯವರು ಮಾತಾಡಲು ಬಂದಿದ್ದಾಗ.

 ಇದನ್ನು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ವ್ಯವಸ್ಥೆ ಮಾಡಿದ್ದರು. ಇದು ಜಯಪ್ರಕಾಶ ನಾರಾಯಣ್ ಅವರ 35ನೆಯ ನೆನಪಿನ ಉಪನ್ಯಾಸ. ಸಂಘಟಿಸಿದ್ದವರು ಮಾನವ ಹಕ್ಕುಗಳ ಮಹತ್ವಪೂರ್ಣ ಸಂಘಟನೆಯಾದ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್) ಗೆಳೆಯರು. ಕಳೆದ ಮೂರು ದಶಕಗಳಿಂದ ಈ ಸಂಘಟನೆಯ ಬಗ್ಗೆ ಮಾನಸಿಕವಾಗಿ ಬಿಡುಗಡೆಯಾಗಲು ಸಾಧ್ಯವಾಗದ ರೀತಿಯಲ್ಲಿ ಅವಿನಾಭಾವ ಸಂಬಂಧವು ಭಾವನಾತ್ಮಕವಾಗಿ ಬೆಳೆದುಬಿಟ್ಟಿದೆ. ಎರಡು ವರ್ಷ ಇದರ ರಾಜ್ಯಮಟ್ಟದ ಕಾರ್ಯದರ್ಶಿಯಾಗಿ ಹಿರಿಯರಾದ ಪ್ರೊ.ಹಸನ್ ಮನ್ಸೂರು ಅವರ ಜೊತೆಯಲ್ಲಿ ಎಲ್ಲೆಲ್ಲೋ ಸುತ್ತಾಡಿದ್ದೇನೆ. ಹಾಗೆಯೇ ಸದಾ ಗೌರವಿಸಬಹುದಾದ ಕೆಲವು ಮಹನೀಯರನ್ನು ಭೇಟಿಯಾಗಿದ್ದೇನೆ. ಅದರಲ್ಲೂ ಮುಂಬೈಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾದಾಗ ಯಾರ್ಯಾರೋ ಪರಿಚಯವಾದರು. ಅಲ್ಲಿ ನ್ಯಾಯಮೂರ್ತಿ ಶ್ರೀ ಕೃಷ್ಣ ಮತ್ತು ನ್ಯಾಯಮೂರ್ತಿ ಸುರೇಶ್ ಅವರನ್ನು ತುಂಬ ಹತ್ತಿರದಿಂದ ಮಾತುಕತೆಯ ಮೂಲಕ ಅರಿಯಲು ಸಾಧ್ಯವಾಯಿತು. ಇನ್ನು ಜಸ್ಟೀಸ್ ತಾರ್ಕುಂಡೆಯವರು ಹಾಗೂ ಹಿರಿಯ ನ್ಯಾಯವಾದಿ ಹೈದರಾಬಾದಿನ ಕನ್ನಾಬಿರನ್ ಅವರನ್ನು ಗ್ರಹಿಸಿಕೊಳ್ಳಲು ಸಾಕಷ್ಟು ಸಹಾಯವಾಯಿತು. ಬಹಳ ಮಹತ್ವಪೂರ್ಣ ಸಂಗತಿಯೆಂದರೆ, ಪಿಯುಸಿಎಲ್ ಮತ್ತು ‘ಸಿಎಫ್‌ಡಿ’ (ಸಿಟಿಜನ್ ಫಾರ್ ಡೆಮಾಕ್ರಸಿ) ಯಂಥ ಸಂಸ್ಥೆಗಳನ್ನು ಮಾನವ ಹಕ್ಕುಗಳಿಗಾಗಿ ಹುಟ್ಟು ಹಾಕಿದವರು ಜಯಪ್ರಕಾಶ ನಾರಾಯಣ್ ಅವರು. ಗಾಂಧೀಜಿಯವರ ವ್ಯಕ್ತಿತ್ವದಿಂದ ಪ್ರಣೀತಗೊಂಡ ಅವರು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಬಹುದೊಡ್ಡ ಚೈತನ್ಯ ಸ್ವರೂಪರಾಗಿದ್ದರು.

 ‘ಎ ಸ್ಟೇಟ್ ಆಫ್‌ಎಮರ್ಜನ್ಸಿ’ ಕುರಿತು ಗೋಪಾಲಕೃಷ್ಣ ಗಾಂಧಿಯವರು ಏನು ಮಾತನಾಡುತ್ತಾರೆ ಎಂಬ ಉತ್ಸುಕತೆಯ ಜೊತೆಗೆ ಅವರ ಜೊತೆಯಲ್ಲಿ ಒಂದೆರಡು ನಿಮಿಷ ಮಾತಾಡಲೇಬೇಕು ಎಂದು ಬೆಂಗಳೂರಿನಿಂದ ನಲವತ್ತು ಕಿ.ಮೀ. ದೂರದಲ್ಲಿರುವ ಆನೇಕಲ್‌ಗೆ ಗೆಳೆಯರೊಡನೆ ಓಡಿಬಂದಿದ್ದೆ. ಹೋದ ತಕ್ಷಣ ಸಭಾಂಗಣದ ಮುಖ್ಯದ್ವಾರದಲ್ಲಿಯೇ ಪ್ರೀತಿಸ್ವರೂಪರಾದ ಇತಿಹಾಸಕಾರ ರಾಮಚಂದ್ರ ಗುಹಾ ಸಿಕ್ಕಿದರು. ಅವರ ಕೈ ಕುಲುಕಿ ಪಕ್ಕದ ಕೊಠಡಿಯಲ್ಲಿ ಕೆಲವು ಹಿರಿಯರೊಡನೆ ಕೂತಿದ್ದ ಗೋಪಾಲಕೃಷ್ಣ ಗಾಂಧಿಯವರನ್ನು ನೋಡಲು ಹೋದೆ. ಅವರು ಮಂದಸ್ಮಿತರಾಗಿ ಕೂತಿದ್ದರು. ನನ್ನ ಹಿಂದೆಯೇ ಬಂದ ರಾಮಚಂದ್ರ ಗುಹಾ ಅವರು ಅವರಿಗೆ ಪರಿಚಯಿಸುತ್ತ ‘‘ಹಿ ಈಸ್ ಶೂದ್ರ ಶ್ರೀನಿವಾಸ್ ದಿ ಗ್ರೇಟ್ ಲೆಜೆಂಡರಿ ಫಿಗರ್ ಡಿ. ಆರ್. ನಾಗರಾಜ್ಸ್ ಲೆಫ್ಟಿನೆಂಟ್’’ ಎಂದು ಹೇಳಿದಾಗ ಗೋಪಾಲಕೃಷ್ಣ ಗಾಂಧಿಯವರು ಕೈ ಕುಲುಕಿದಾಗ, ಖುಷಿಯಾಯ್ತ್ತು. ಅದಕ್ಕಿಂತ ಮಿಗಿಲಾಗಿ ಗೋಪಾಲಕೃಷ್ಣ ಗಾಂಧಿಯವರಿಗೂ ಡಿ.ಆರ್. ನಾಗರಾಜ್ ಪರಿಚಯವಾಗಿದ್ದಾನೆ ಎಂಬ ಅನನ್ಯ ಧ್ವನಿಯು ನನ್ನ ಮನಸ್ಸಿನ ತುಂಬ ಆವರಿಸಿಕೊಂಡಿತು. ಅವರ ಪಕ್ಕದಲ್ಲಿ ಹತ್ತು ನಿಮಿಷ ಕೂತಿದ್ದೆ ಎನ್ನುವುದರ ಜೊತೆಗೆ; ಗಾಂಧೀಜಿಯವರ ‘ಸ್ಟ್ರೆಂಗ್ತ್ ಆಫ್ ಸ್ಟೈಲ್ ಅಂಡ್ ಸೈಲೆನ್ಸ್’ ಬಗ್ಗೆ ಒಂದಷ್ಟು ಕೆಲಸ ಮಾಡುತ್ತಿರುವೆ ಎಂದಾಗ; ಅವರು ಮತ್ತೊಮ್ಮೆ ಕೈ ಕುಲುಕಿ ‘‘ನೈಸ್ ಸಬ್ಜೆಕ್ಟ್’’ ಎಂದರು. ಆಗ ಸಣ್ಣ ಪ್ರಮಾಣದ ಪುಳಕ ನನ್ನಲ್ಲಿ ಆವರಿಸಿಕೊಂಡಿತ್ತು. ಒಂದು ದೃಷ್ಟಿಯಿಂದ ಅವರನ್ನು ನೋಡುತ್ತಿದ್ದರೆ, ರಾಜ ಮೋಹನ್‌ಗಾಂಧಿ, ರಾಮಚಂದ್ರಗಾಂಧಿ ಮತ್ತು ಗೋಪಾಲಕೃಷ್ಣ ಗಾಂಧಿಯವರು ಅಪೂರ್ವ ಸೋದರರಂತೆ ಗೋಚರಿಸಿದರು. ರಾಮಚಂದ್ರಗಾಂಧಿಯವರ ಜೊತೆಯಲ್ಲಿ ಚಿಕ್ಕಮಗಳೂರಿನ ಚುನಾವಣೆಯ ಸಂದರ್ಭದಲ್ಲಿ ಕೆಲವು ಗಂಟೆ ಕಳೆಯುವ ಅವಕಾಶ ದೊರಕಿತ್ತು. ಹಾಗೆಯೇ ಗೆಳೆಯ ರಮೇಶ್ ಬಂದಗದ್ದೆ ಯವರ ಜೊತೆಯಲ್ಲಿ ರಾಜ ಮೋಹನ್‌ಗಾಂಧಿಯವರನ್ನು ಬೆಂಗಳೂರಿನ ಜನತಾ ಪಕ್ಷದ ಕಚೇರಿಯಲ್ಲಿ ಆರೇಳು ಗಂಟೆ ದೀರ್ಘ ಸಂಭಾಷಣೆಯಲ್ಲಿ ತೊಡಗಿದ್ದು, ಒಂದು ಚಾರಿತ್ರಿಕ ನೆನಪಾಗಿ ಉಳಿದಿದೆ. ಅಂದು ರಾಜ ಮೋಹನ್‌ಗಾಂಧಿಯವರು ಗಾಂಧೀಜಿಯವರನ್ನು ಕುರಿತು ಒಂದು ಅಮೂಲ್ಯ ಮಾತನ್ನು ಹೇಳಿದ್ದರು. ‘‘ಗಾಂಧೀಜಿಯವರು ಪ್ರತಿದಿವಸ ಹೊಸದಾಗಿ ಏಳುಜನ ಪರಿಚಯವಾಗದಿದ್ದರೆ ಊಟ ಮಾಡುತ್ತಿರಲಿಲ್ಲವಂತೆ. ಆಗ ಕಾರ್ಯಕರ್ತರು ಯಾರ್ಯಾರನ್ನೋ ಕರೆದುಕೊಂಡು ಬಂದು ಗಾಂಧೀಜಿಯವರ ಮುಂದೆ ಕೂರಿಸುತ್ತಿದ್ದರಂತೆ. ಗಾಂಧೀಜಿಯವರು ಅವರನ್ನು ಆತ್ಮೀಯವಾಗಿ ಪರಿಚಯ ಮಾಡಿಕೊಂಡು, ತಮ್ಮ ಹೋರಾಟದ ಬಳಗದ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದರಂತೆ. ಇದು ಗುಣಾತ್ಮಕವಾಗಿ ಒಂದು ರೀತಿಯಲ್ಲಿ ರೋಮಾಂಚನ ಅನ್ನಿಸಿತು. ಈ ಅಮೂಲ್ಯ ಮೆಸೇಜನ್ನು ಎಷ್ಟೋ ವರ್ಷಗಳಿಂದ ಬಾಪೂಜಿಯವರನ್ನು ಕುರಿತು ಮಾತನಾಡುವಾಗಲೆಲ್ಲ ಯಾರ್ಯಾರಿಗೋ ಸಂದೇಶ ರೂಪದಲ್ಲಿ ರವಾನಿಸಲು ಪ್ರಯತ್ನಿಸಿದ್ದೇನೆ. ಹೀಗೆ ರವಾನಿಸುವಾಗ ‘‘ಹೌ ಬ್ಯೂಟಿ ಫುಲ್’’ ಎಂಬ ಧ್ವನಿಯು ಆ ಮಹಾತ್ಮನನ್ನು ದೃಷ್ಟಿಯಲ್ಲಿಟ್ಟುಕೊಂಡು ಗುನುಗುನಿಸುತ್ತಲೇ ಇರುತ್ತದೆ.

ಗೋಪಾಲಕೃಷ್ಣ ಗಾಂಧಿಯವರನ್ನು ಅಂಥ ಸಂಕೇತದ ಮುಂದುವರಿದ ಭಾಗವೆಂದೇ ಭಾವಿಸಿರುವೆ. ಗಾಂಧೀಜಿಯವರ ಹಿರಿಯ ಮಗನಾದ ರಾಮದಾಸ್ ಗಾಂಧಿ ಯವರ ಕಿರಿಯ ಮಗನಾಗಿ ನಾನಾ ಹಂತಗಳಲ್ಲಿ ತಮ್ಮ ಕ್ರೆಡಿಬಿಲಿಟಿಯನ್ನು ಹೆಚ್ಚಿಸಿಕೊಂಡಿರುವಂಥವರು. ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿಯುತ್ತಿರುವಂಥವರು. ಓದು ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಬೆಳೆಸಿಕೊಂಡಿರುವಂಥವರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು 1968ರಲ್ಲಿ ಐ.ಎ.ಎಸ್. ಪಡೆದು ನಾನಾ ರೀತಿಯ ಅತ್ಯುನ್ನತ ಸ್ಥಾನಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದವರು. 

ಹೀಗೆ ನಿರ್ವಹಿಸುವಾಗ ತಮ್ಮ ಅಜ್ಜಂದಿರಾದ ಗಾಂಧೀಜಿಯವರು ಮತ್ತು ರಾಜಗೋಪಾಲಚಾರಿಯವರ ಒಟ್ಟು ವ್ಯಕ್ತಿತ್ವಕ್ಕೆ ಕಿಂಚಿತ್ತೂ ಧಕ್ಕೆ ಬರದಂತೆ ಬದುಕುತ್ತಾ ಬಂದಿರುವಂಥವರು. ‘ಇಂಥವರ ಮೊಮ್ಮಗನಂತೆ’ ಎಂದು ಭಾವನಾತ್ಮಕವಾಗಿ ಮಾತನಾಡಿಕೊಳ್ಳುವ ರೀತಿಯಲ್ಲಿ ಮೂರೂ ಜನ ಸೋದರರು ‘ಸಾಕ್ಷಿಭೂತ’ರಾಗಿ ಬೆಳೆದಂಥವರು. ಇಂದು ಭಾರತದ ಉದ್ದಗಲಕ್ಕ್ಕೂ ಇವರು ಮಾತನಾಡಿದರೂ, ಬರೆದರೂ ತನ್ಮಯತೆಯಿಂದ ಸ್ವೀಕರಿಸುವ ಸಾವಿರಾರು ಮಂದಿ ಇದ್ದಾರೆ.
ಹಾಗೆ ಸ್ವೀಕರಿಸಿದವರೂ ಕೂಡ ಪರೋಕ್ಷವಾಗಿ ನ್ಯೂಕ್ಲಿಯಸ್ಸಾಗಿ ದುಡಿಯಲು ಸಾಧ್ಯವಾಗುತ್ತಿದೆ ಎಂಬುದು ಅತ್ಯಂತ ಮಹತ್ವಪೂರ್ಣವಾದದ್ದು.

 ಮೊನ್ನೆ ‘ಎ ಸ್ಟೇಟ್ ಆಫ್‌ಎಮರ್ಜನ್ಸಿ’ ಎಂಬ ವಿಷಯದ ಬಗ್ಗೆ ಮಾತನಾಡಲು ಎದ್ದು ನಿಂತಾಗ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಭಿಕರು ಎಷ್ಟು ಆತ್ಮೀಯವಾಗಿ ಆಲಿಸಿದರು ಅನ್ನಿಸುತ್ತೆ. ರಾಜ್ಯಾಂಗ, ಸಂವಿಧಾನದ ಘನತೆಯನ್ನು ವಿಶ್ಲೇಷಿಸುತ್ತಲೇ ಪ್ರಜಾಪ್ರಭುತ್ವದ ನೆಲೆಯಲ್ಲಿ ‘ಅನ್ ಕಾಂಪ್ರಮೈಸ್ಡ್ ಡಿಸೆಂಟ್’ ಕುರಿತು ಒಂದು ಅಮೋಘವಾದ ವ್ಯಾಖ್ಯಾನ ಅರ್ಥಾತ್ ಸಂದೇಶವನ್ನು ಸಭಿಕರ ಮನಸ್ಸಿನಲ್ಲಿ ‘ರಿಜಿಸ್ಟರ್’ ಮಾಡಿದರು ಅನ್ನಿಸಿತು. ಯಾಕೆಂದರೆ ಪ್ರಜಾಪ್ರಭುತ್ವ ಶ್ರೀಮಂತವಾಗಿ ಉಳಿಯುವುದೇ ಅಲ್ಲಿ ಯಾವ ರೀತಿಯ ಆರೋಗ್ಯಪೂರ್ಣ ‘ಪ್ರತಿರೋಧ’ ಜೀವಂತವಾಗಿ ದಾಖಲಾಗಿರುತ್ತದೆಯೆಂಬುದರ ಮೇಲೆ ನಿರ್ಧಾರವಾಗಿರುತ್ತದೆ. ತಮ್ಮ ‘ಅನ್ ಕಾಂಪ್ರಮೈಸ್ಡ್ ಡಿಸೆಂಟ್’ ಎಂಬ ವಿಷಯದ ವ್ಯಾಖ್ಯಾನಕ್ಕೆ ಬಹುದೊಡ್ಡ ಗುಣಾತ್ಮಕತೆಯನ್ನು ಗೋಪಾಲಕೃಷ್ಣ ಗಾಂಧಿಯವರು ತಮ್ಮ ಉಪನ್ಯಾಸದಲ್ಲಿ ತಂದುಕೊಟ್ಟರು. ಮತ್ತೊಂದು ಗಂಭೀರವಾದ ಸಂಗತಿಯೆಂದರೆ, ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಇಬ್ಬರು ನ್ಯಾಯಮೂರ್ತಿಗಳ ವ್ಯಕ್ತಿತ್ವವನ್ನು ಎಷ್ಟು ಸೂಚ್ಯವಾಗಿ ವಿಶ್ಲೇಷಿಸಿದರು ಅನ್ನಿಸುತ್ತದೆ. ನ್ಯಾಯಮೂರ್ತಿ ಖನ್ನಾ ಮತ್ತು ನ್ಯಾಯಮೂರ್ತಿ ಬೇಗ್ ಅವರ ಪಾತ್ರದ ಬಗ್ಗೆ ಗೋಪಾಲಕೃಷ್ಣ ಗಾಂಧಿಯವರು ಹೇಳಿದ ಮಾತುಗಳೇ ಅಪೂರ್ವವಾದದ್ದು. ನ್ಯಾಯಮೂರ್ತಿ ಬೇಗ್ ಅವರನ್ನು ಉಲ್ಲೇಖಿಸಿ ಅವರ ಒಂದು ಹೇಳಿಕೆಯನ್ನು ಪ್ರಸ್ತಾಪಿಸಿದರು. ‘‘ಹೌದು ಇಂಥಿಂಥವರು ಸರ್ಕಾರಕ್ಕೆ ವಿರೋಧಿಗಳು ಎಂದು ಬಂಧಿಸಿ ಕಾರಾಗೃಹದಲ್ಲಿಡುತ್ತೀರಿ, ಆದರೆ ಅವರನ್ನು ಅಲ್ಲಿ ತಾಯಿ ಮಕ್ಕಳನ್ನು ನೋಡಿಕೊಳ್ಳುವಂತೆ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅದನ್ನು ಎಂದೂ ಮರೆಯಬಾರದು’’ ಎಂದು ರಾಜ್ಯಾಂಗದ ಚೌಕಟ್ಟನ್ನು ನೆನಪಿಸಿ ವಿಶ್ಲೇಷಿಸಿದರು.

ಈ ನೆಲೆಯಲ್ಲಿ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವ ಸರ್ಕಾರದಷ್ಟೇ, ವಿರೋಧ ಪಕ್ಷವವೂ ತನ್ನ ‘ಪ್ರತಿರೋಧ’ದ ಹೆಚ್ಚುಗಾರಿಕೆಯನ್ನು ಎಂದೂ ಮರೆಯಬಾರದು ಎನ್ನುವುದಕ್ಕೆ ‘ಅನ್ ಕಾಂಪ್ರಮೈಸ್ಡ್ ಡಿಸೆಂಟ್’ನ್ನು ಒಂದು ರೂಪಕವಾಗಿ ಪರಿವರ್ತಿಸಿ ಸ್ಮರಣೀಯಗೊಳಿಸಿದವರು ಗೋಪಾಲಕೃಷ್ಣ ಗಾಂಧಿಯವರು.

ಕೊನೆಗೂ ಇದೊಂದು ‘ಪಿಯುಸಿಎಲ್’ನ ಅಪೂರ್ವ ಕಾರ್ಯಕ್ರಮವಾಗಿತ್ತು. ಇದೇ ಸಮಯದಲ್ಲಿ ಈ ಸಂಘಟನೆಯು ‘ತುರ್ತುಪರಿಸಿ’್ಥಯಲ್ಲಿ ಪ್ರತಿರೋಧವನ್ನೊಡಿದ್ದ ವಿವಿಧ ಮೂಲಗಳ ಜನರನ್ನು ಭೇಟಿಯಾಗಿ, ಅವರ ಅಭಿಪ್ರಾಯ ಮತ್ತು ಅನುಭವವನ್ನು ದಾಖಲಿಸಿರುವ ಸಾಕ್ಷಚಿತ್ರವನ್ನು ಸಿದ್ಧಪಡಿಸಿದೆ. ಇರಲ್ಲಿ ‘ಸೈಂಟ್ ಜೋಸೆಫ್’ ಕಾಲೇಜಿನ ಪತ್ರಿಕೋದ್ಯಮದ ಹಾಗೂ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳು ಭಾಗಿಯಾಗಿರುವುದು ಮಹತ್ವಪೂರ್ಣವಾದದ್ದು.

Thursday, March 26, 2015

ಲೋಹಿಯಾ ಮತ್ತು ಭಗತ್ ಸುತ್ತ
ಜಿ.ಪಿ.ಬಸವರಾಜುಮಾರ್ಚ್ ೨೩ ಭಾರತೀಯ ಮನಸ್ಸುಗಳಿಗೆ ಬಹುದೊಡ್ಡ ದಿನ. ಮಹಾನ್ ಮಾನವತಾವಾದಿ, ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರು ಹುಟ್ಟಿದ್ದು ಮಾಚ್ ೨೩ರಂದು. ಹುತಾತ್ಮ ಭಗತ್‌ಸಿಂಗ್ ಗಲ್ಲಿಗೇರಿದ್ದು ಮಾರ್ಚ್ ೨೩ ರಂದು. ಈ ಇಬ್ಬರೂ ಮುಕ್ತ ಸಮಾಜಕ್ಕಾಗಿ ಹಂಬಲಿಸಿದವರು. ಎಲ್ಲ ಗುಲಾಮಗಿರಿಗಳನ್ನೂ ತೆಗೆದೆಸೆದು ಮನುಷ್ಯ ಮುಕ್ತವಾಗಿ ಬದುಕಬೇಕೆಂದು ಬಯಸಿ, ಅದಕ್ಕಾಗಿಯೇ ತಮ್ಮ ಬದುಕನ್ನು ಒಂದು ಹೋರಾಟವಾಗಿ ಪರಿವರ್ತಿಸಿದ ಮಹಾನ್ ಹೋರಾಟಗಾರರು ಇವರು. ಭಗತ್‌ಸಿಂಗ್ ಲೋಹಿಯಾ ಅವರಿಗಿಂತ ಮೂರು ವರ್ಷ ದೊಡ್ಡವನು. ಕೇವಲ ೨೪ ವರ್ಷಗಳ ಕಾಲ ಬದುಕಿದ್ದ ಭಗತ್‌ಸಿಂಗ್, ಬ್ರಿಟಿಷರ ಆಳ್ವಿಕೆಯನ್ನು ಕಿತ್ತೊಗೆಯುವ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಅಗತ್ಯವಾದಲ್ಲಿ ಕನಿಷ್ಠ ಪ್ರಮಾಣದ ಹಿಂಸೆಯನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂಬ ಮಾರ್ಗವನ್ನು ಒಪ್ಪಿಕೊಂಡಿದ್ದ ಭಗತ್‌ಸಿಂಗ್ ತನ್ನ ನಂಬಿಕೆಗೆ ನಿಷ್ಠನಾಗಿದ್ದ. ಅದಕ್ಕಾಗಿಯೇ ಆತ ಗಲ್ಲಿಗೇರಿ ಇತಿಹಾಸದಲ್ಲಿ ಉಳಿದು ಹೋದ. ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಎಂಬುದು ಕನಸಾಗಿದ್ದ ದಿನಗಳಲ್ಲಿಯೇ ಆತ ಗಲ್ಲಿಗೇರಬೇಕಾಯಿತು (೧೯೩೧ರ ಮಾರ್ಚ್ ೨೩). ಈ ತರುಣನ ತ್ಯಾಗ ಆಗ ಬ್ರಿಟಿಷ್ ಮುಷ್ಠಿಯಲ್ಲಿದ್ದ ಭಾರತದಲ್ಲಿ ಎಂಥ ಅಲೆಗಳನ್ನು ಏಳಿಸಿತು ಎಂದರೆ ಸೂರ್ಯಮುಳುಗದ ಸಾಮ್ರಾಜ್ಯವೂ ಒಂದು ಕ್ಷಣ ಬೆಚ್ಚಿತು. ಭಾರತೀಯ ತರುಣರಿಗೆ ಈ ತ್ಯಾಗ ಆದರ್ಶವಾಗಿ ಕಾಣಿಸಿತು. ರಾಷ್ಟ್ರಪ್ರೇಮ ಎಂದರೆ ಇದೇ ಎನ್ನಿಸಿತು. ಹೋರಾಟದ ಕೆಚ್ಚನ್ನು, ಸ್ವಾತಂತ್ರ್ಯದ ಹುಚ್ಚನ್ನು ಹಬ್ಬಿಸಿದ ಭಗತ್‌ಸಿಂಗ್ ಬದುಕಿಗೆ ಹೊಸ ಅರ್ಥವನ್ನು ತಂದುಕೊಡುವವನಂತೆ ಕಾಣಿಸಿದ.ರಾಷ್ಟ್ರಪ್ರೇಮದ ವಿಚಾರದಲ್ಲಿ ಲೋಹಿಯಾ ಅವರ ಚಿಂತನೆ ಸಣ್ಣದೇನೂ ಅಲ್ಲ. ಅವರು ಮಹಾನ್ ರಾಷ್ಟ್ರೀಯವಾದಿ; ಮಹಾನ್  ಮಾನವತಾವಾದಿ. ಅನೇಕ ಬಂಧನಗಳಿಂದ ಮನುಷ್ಯನ ಮನಸ್ಸು ಬಿಡುಗಡೆ ಪಡೆಯಬೇಕೆಂದು ಚಿಂತಿಸಿದವರು ಲೋಹಿಯಾ. ಗುಲಾಮಗಿರಿ ಎನ್ನುವುದು ಕೇವಲ ಬ್ರಿಟಿಷರ ಆಳ್ವಿಕೆಯಲ್ಲಿ ಮಾತ್ರ ಇಲ್ಲ, ಅನೇಕ ಮುಖಗಳಲ್ಲಿ ಅದು ನಮ್ಮನ್ನು ಸುತ್ತಿಕೊಂಡಿದೆ ಎಂಬುದನ್ನು ಲೋಹಿಯಾ ಚಿಂತನೆ ತೋರಿಸಿಕೊಡುತ್ತದೆ. ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ, ಅವರ ಭಾಷೆ, ಭಾಷೆಯ ಮೂಲಕ ಅವರು ಹೇರಿದ ಮೇಲರಿಮೆ, ಆಡಳಿತದ ಮೂಲಕ ಬಿಟ್ಟುಹೋದ ಅಧಿಕಾರ ಶಾಹಿಯ ದರ್ಪ-ಇವೆಲ್ಲವೂ ಭಾರತೀಯರನ್ನು ಗುಲಾಮಗಿರಿಗೆ ತಳ್ಳುತ್ತಿವೆ ಎಂಬುದನ್ನು ಲೋಹಿಯಾ ತೋರಿಸಿಕೊಟ್ಟರು. ಭಾರತದಂಥ ದೇಶದಲ್ಲಿ ಸಾವಿರಾರು ವರ್ಷಗಳಿಂದ ಉಳಿದುಬಂದ ಜಾತಿಪದ್ಧತಿ ಹೇಗೆ ಮನುಷ್ಯರ ಸಮಾನತೆಗೆ ಅಡ್ಡಿಯಾಗಿ ಬಂಡೆಗಲ್ಲಿನಂತೆ ಕುಳಿತಿದೆ ಎಂಬುದೂ ಅವರ ಚಿಂತನೆಯ ಬೆಳಕಿನಲ್ಲಿ ಕಂಡ ಸತ್ಯ. ಮಾರ್ಕ್ಸ್ ಹೇಳಿದ ವರ್ಗ ಎಂಬುದು ಭಾರತದಲ್ಲಿ ಜಾತಿಯಾಗಿ ಬದಲಾಗುತ್ತದೆ; ಜಾತಿ ಮತ್ತು ವರ್ಗಗಳು ಒಂದರೊಳಗೊಂದು ತಳುಕು ಹಾಕಿಕೊಂಡು ರೂಪ ಬದಲಾಯಿಸುತ್ತವೆ; ಮಾನವತಾವಾದಿಗಳು ಇದನ್ನು ಗುರುತಿಸಿಕೊಳ್ಳಬೇಕಾದದ್ದು ಎಷ್ಟು ಮುಖ್ಯ ಎಂಬುದನ್ನೂ ಲೋಹಿಯಾ ಹೇಳಿದರು. ಮನುಷ್ಯ ಮನುಷ್ಯರ ಹೃದಯಗಳನ್ನು ಬೆಸೆಯಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾದ ತುರ್ತಿನಲ್ಲಿರುವ ಮನುಷ್ಯರಿಗೆ ರಾಷ್ಟ್ರದ ಗಡಿಗಳೂ ಹೇಗೆ ಅಡ್ಡಿಯನ್ನುಂಟು ಮಾಡುತ್ತವೆ; ಗಡಿಗಳನ್ನೇ ಅಳಿಸಿಹಾಕಿ ಬದುಕುವುದನ್ನು ಕಲಿತರೆ ಎಷ್ಟೊಂದು ಹಿತ ಎನ್ನುವುದು ಲೋಹಿಯಾ ಚಿಂತನೆಯ ಇನ್ನೊಂದು ಮಗ್ಗುಲು. ನಮ್ಮ ಇತಿಹಾಸವನ್ನು ನೋಡಬೇಕಾದ ಕ್ರಮ, ಪುರಾಣಗಳನ್ನು ಗ್ರಹಿಸಬೇಕಾದ ರೀತಿ, ಶಿಕ್ಷಣ, ಆಡಳಿತ, ನ್ಯಾಯಾಂಗಗಳಲ್ಲಿ ನಾವು ಸ್ಥಾಪಿಸಬೇಕಾಗಿರುವ ಭಾಷೆಯನ್ನು ಕಟ್ಟಿಕೊಳ್ಳುವ ಬಗೆ ಇತ್ಯಾದಿ ಹಲವಾರು ಸಂಗತಿಗಳನ್ನು ತಮ್ಮ ಗಂಭೀರ ಚಿಂತನೆಯಲ್ಲಿ ಪರೀಕ್ಷಿಸಿದವರು ಲೋಹಿಯಾ. ಗಾಂಧಿಗೆ ಹತ್ತಿರದವರಂತೆ, ದೂರದವರಂತೆ, ಸಖನಂತೆ, ವಿರೋಧಿಯಂತೆ ಕಾಣಿಸುತ್ತಲೇ ಲೋಹಿಯಾ, ಗಾಂಧೀ ಚಿಂತನೆಯನ್ನು ಬೆಳಸಿದರು. ಅದಕ್ಕೆ ಹೊಸ ಚಲನೆಯನ್ನು ನೀಡಿದರು. ಒಂದು ಕಾಲಕ್ಕೆ ನೆಹರೂ ಅವರನ್ನು ಅಭಿಮಾನದಿಂದ ನೋಡುತ್ತಿದ್ದ ಲೋಹಿಯಾ, ಮುಂದೆ ನೆಹರೂ ಅವರ ಕಡು ವಿರೋಧಿಯಾದರು. ಈ ನೆಹರೂ ಚಿಂತನೆ ಭಾರತವನ್ನು ಮುನ್ನಡೆಸುವ ಬದಲು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಸಾರಿದರು. ಶೂದ್ರ-ಬ್ರಾಹ್ಮಣ ಎನ್ನುವುದು ಈ ದೇಶಕ್ಕಂಟಿದ ಬಹುದೊಡ್ಡ ರೋಗ ಎನ್ನುವುದನ್ನು ಕಂಡುಕೊಂಡ ಲೋಹಿಯಾ ಬ್ಯಾಹ್ಮಣ್ಯದ ವಿರುದ್ಧ ದೊಡ್ಡ ಸಮರವನ್ನೇ ಸಾರಿದರು. ಲೋಹಿಯಾ ರೂಪಿಸಿದ ಈ ಚಿಂತನೆ ಬಹುದೊಡ್ಡ ಚಿಂತನೆಯಾಗಿ ಭಾರತೀಯ ಮನಸ್ಸುಗಳನ್ನು ಬಹುಕಾಲ ಆವರಿಸಿತು. ಈಗಲೂ ಆ ಚಿಂತನೆಯ ಸಣ್ಣ ಸಣ್ಣ ಅಲೆಗಳು ದಡಕ್ಕಪ್ಪಳಿಸುತ್ತಿರುವುದನ್ನು ಕಾಣಬಹುದು.

ಭಗತ್ ಚಿಂತನೆಗಳು ರೂಪ ಪಡೆಯುವ ಮುನ್ನವೇ ಆತ ಗಲ್ಲಿಗೇರಬೇಕಾಯಿತು. ಕೇವಲ ೨೪ ವರ್ಷಗಳ ಬದುಕು ಎಂದರೆ ಎಷ್ಟು ಚಿಕ್ಕ ಕಾಲಾವಧಿ. ತನ್ನ ಧೀರ, ದಿಟ್ಟ ನಡೆಯಿಂದ ಆತ ಚರಿತ್ರೆಯಲ್ಲಿ ಉಳಿದು ಹೋದ. ಏರು ಜವ್ವನ ಸಹಜವಾಗಿಯೇ ಪ್ರತೀಕಾರಕ್ಕೆ ಹಾತೊರೆಯುತ್ತದೆ. ತನ್ನ ೧೨ನೇ ವಯಸ್ಸಿನಲ್ಲಿಯೇ ಭಗತ್ ಜಲಿಯನ್‌ವಾಲಾ ಬಾಗ್‌ಗೆ ಹೋಗಿಬಂದಿದ್ದ. ಅಲ್ಲಿನ ಮಣ್ಣನ್ನು ಬಹಳ ಕಾಲ ತನ್ನ ಜೇಬಿನಲ್ಲಿಯೇ ಇರಿಸಿಕೊಂಡಿದ್ದ. ನೂರಾರು ಜನ ಅಮಾಯಕರನ್ನು ಗುಂಡಿಕ್ಕಿ ಕೊಂದ ಬ್ರಿಟಿಷರ ವಿರುದ್ಧ ಅವನ ಮನಸ್ಸು ಕುದಿಯುತ್ತಿತ್ತು. ಸೈಮನ್ ಕಮೀಷನ್ ಸದಸ್ಯರು ಲಾಹೋರಿಗೆ ಬಂದಾಗ ನಡೆದ ದೊಡ್ಡ ಪ್ರತಿಭಟನೆಯಲ್ಲಿ ಭಗತ್ ಭಾಗವಹಿಸಿದ್ದ. ಅಲ್ಲಿ ಲಾಲಾ ಲಜಪತರಾಯ್ ಅವರನ್ನು ಪೊಲೀಸರು ಅಮಾನುಷವಾಗಿ, ರಕ್ತ ಕಾರುವಂತೆ ಹೊಡೆದ ರೀತಿ ಅವನ ಎದೆಯೊಳಗಿನ ಕೋಪದ ಜ್ವಾಲೆಯನ್ನು ಹೆಚ್ಚುಮಾಡಿತ್ತು. ಬ್ರಿಟಿಷ್ ಪೊಲೀಸ್ ಅಧಿಕಾರಿ ಸ್ಯಾಂಡರ್ಸ್ ಸ್ವತಃ ಲಾಲಾ ಲಜಪತರಾಯ್ ಅವರನ್ನು ಭೀಕರವಾಗಿ ಥಳಿಸಿದ್ದನ್ನು ಭಗತ್ ನೋಡಿದ್ದ. ಅವನ ಕ್ರಾಂತಿಕಾರಿ ಪಕ್ಷ ಇದಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದಾಗ ಸ್ಯಾಂಡರ್ಸ್‌ಗೆ ಗುಂಡಿಕ್ಕುವ ನಿರ್ಣಯ ಮಾಡಲಾಯಿತು. ಈ ಕೆಲಸವನ್ನು ಮೂವರಿಗೆ ಒಪ್ಪಿಸಲಾಯಿತು. ಅದರಲ್ಲಿ ಭಗತ್‌ಸಿಂಗ್ ಒಬ್ಬ. ಭಗತ್ ಇದನ್ನು ಪಕ್ಷ ತನಗೊಪ್ಪಿಸಿದ ಕೆಲಸ ಎಂದು ನಿಷ್ಠೆಯಿಂದ, ಶ್ರದ್ಧೆಯಿಂದ ಮಾಡಿದ. ತನ್ನ ಪ್ರಾಣವನ್ನು ಫಣವಾಗಿ ಒಡ್ಡಲೂ ಆತ ಹಿಂದುಮುಂದು ನೋಡಲಿಲ್ಲ.

ಭಗತ್ ಭಾಗವಹಿಸಿದ ಇನ್ನೊಂದು ಸಂದರ್ಭವೆಂದರೆ ಅಸೆಂಬ್ಲಿ ಹಾಲ್‌ನಲ್ಲಿ ಬಾಂಬನ್ನು ಸಿಡಿಸಿದ್ದು. ’ಕಿವುಡರಿಗೆ ಕೇಳಬೇಕಾದರೆ ದೊಡ್ಡ ಸದ್ದನ್ನೇ ಮಾಡಬೇಕಾಗುತ್ತದೆ’ ಎಂಬ ನಂಬಿಕೆಯಲ್ಲಿ ಈ ಬಾಂಬನ್ನು ಕ್ರಾಂತಿಕಾರಿಗಳು ಸಿಡಿಸಿದರು. ಯಾರೊಬ್ಬರೂ ಕುಳಿತಿರದ ಜಾಗವನ್ನು ನೋಡಿ, ಎಚ್ಚರಿಕೆಯಿಂದ ಬಾಂಬನ್ನು ಸಿಡಿಸಿದ್ದರೆಂಬುದು ಅವರ ಉದ್ದೇಶವನ್ನು ನಿಚ್ಚಳವಾಗಿ ಕಾಣಿಸುವಂತಿತ್ತು. ಜೀವಗಳನ್ನು ಬಲಿಗೊಳ್ಳದೆ, ಹಿಂಸೆಗೆ ದಾರಿಮಾಡದೆ, ಆಳುವವರ ಗಮನವನ್ನು ಸೆಳೆಯುವುದು ಮತ್ತು ಈ ಸನ್ನಿವೇಶವನ್ನು ಬಳಸಿಕೊಂಡು, ಕರಪತ್ರವನ್ನು ತೂರಿ ತಮ್ಮ ಕ್ರಾಂತಿಕಾರಿ ಪಕ್ಷದ ಉದ್ದೇಶವನ್ನು ಜನರಿಗೆ ತಿಳಿಸುವುದು ಕ್ರಾಂತಿಕಾರಿಗಳ ಕಾರ್ಯಸೂಚಿಯಾಗಿತ್ತು. ದತ್ ಮತ್ತು ಭಗತ್ ಈ ಕಾರ್ಯವನ್ನು ಮಾಡಿ ಮುಗಿಸಿ, ಅಲ್ಲಿಯೇ ನಿಂತಿದ್ದರು. ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ಅವರು ಅದಕ್ಕೆ ಮುಂದಾಗದೆ, ತಮ್ಮನ್ನು ಬಂಧಿಸುವಂತೆ ಪೊಲೀಸರಿಗೆ ವಿನಂತಿಸಿದರು. ತಮ್ಮ ಬಳಿ ಶಸ್ತ್ರಾಸ್ತ್ರಗಳಿಲ್ಲ ಎಂಬುದನ್ನೂ ಅವರು ಪೊಲೀಸರಿಗೆ ಹೇಳಬೇಕಾಯಿತು.
ಭಗತ್‌ಸಿಂಗ್ ಕಿರಿಯ ವಯಸ್ಸಿನಲ್ಲಿಯೇ ಕ್ರಾಂತಿಕಾರಿ ಮಾರ್ಗದತ್ತ ಆಕರ್ಷಿತನಾದವನು. ಯೂರೋಪಿನ ಕ್ರಾಂತಿಕಾರಿ ಚಳವಳಿಗಳನ್ನು ಆತ ಶ್ರದ್ಧೆಯಿಂದ ಓದಿ, ತಿಳಿದುಕೊಂಡಿದ್ದ. ಅರಾಜಕವಾದ ಮತ್ತು ಮಾರ್ಕ್ಸ್ ಸಿದ್ಧಾಂತಗಳನ್ನು ಆತ ಅಧ್ಯಯನ ಮಾಡಿದ್ದ. ಮಾರ್ಕ್ಸ್, ಲೆನಿನ್, ಟ್ರಾಟ್‌ಸ್ಕಿ, ಬಕುನಿನ್, ಬರ್ಟ್ರಂಡ್ ರಸೆಲ್, ಏಂಗೆಲ್ಸ್, ಅರಿಸ್ಟಾಟಲ್, ಪ್ಲೆಟೊ ಮೊದಲಾದವರ ಚಿಂತನೆಗಳಲ್ಲದೆ ಹಲವರ ಕಾವ್ಯವನ್ನೂ ಆತ ಇಷ್ಟಪಡುತ್ತಿದ್ದ. ಭಗತ್‌ನ ಓದಿನ ದಾಹಕ್ಕೆ ಪುಸ್ತಕಗಳನ್ನು ಒದಗಿಸುವುದೇ ದೊಡ್ಡ ಸಮಸ್ಯೆಯಾದದ್ದೂ ಇದೆ.

ಭಗತ್ ನಿರೀಶ್ವರವಾದಿಯಾಗಿ ರೂಪಗೊಂಡದ್ದು ಕೂಡಾ ಕುತೂಹಲದ ಸಂಗತಿಯೇ. ಭಗತ್‌ನ ತಂದೆ ಧರ್ಮದಲ್ಲಿ ಆಳವಾದ ನಂಬಿಕೆ ಇಟ್ಟವರು. ಅಜ್ಜ ನಂಬಿದ್ದು ದಯಾನಂದ ಸರಸ್ವತಿ ಅವರ ಆರ್ಯ ಸಮಾಜದ ತತ್ವಗಳನ್ನು. ಬಾಲ್ಯದಲ್ಲಿ ಪ್ರಾರ್ಥನೆ, ಗಾಯತ್ರಿ ಮಂತ್ರಗಳ ಮಡಿಲಲ್ಲೇ ಬೆಳೆದ ಭಗತ್, ಓದಿನ ನೆರವಿನಿಂದ ವೈಚಾರಿಕತೆಯತ್ತ ಹೊರಳಿದ. ದೇವರ ಅಸ್ತಿತ್ವವೂ ಸೇರಿದಂತೆ ಪರಂಪರಾಗತ ನಂಬಿಕೆಗಳನ್ನು ಪ್ರಶ್ನೆಮಾಡಿದ. ಅನೇಕ ಪೊಳ್ಳುತನಗಳು ಬಯಲಾದವು.

ಭಾರತವನ್ನು ಧರ್ಮಗಳ ಆಧಾರದ ಮೇಲೆ ಒಡೆಯುವುದನ್ನು ಭಗತ್ ಎಂದೂ ಒಪ್ಪಲಿಲ್ಲ. ಈ ಕಾರಣಕ್ಕಾಗಿಯೇ ಆತ ಲಾಲಾ ಲಜಪತರಾಯ್ ಅವರ ವಿಚಾರಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದ. ಹಿಂದೂ ಮುಸ್ಲಿಮರು ಸೋದರರಂತೆ ಬಾಳಿ ಬದುಕುತ್ತಿದ್ದುದನ್ನು ಆತ ಅನುಭವದಿಂದ ಕಂಡುಕೊಂಡಿದ್ದ. ಭಾರತ ಅಖಂಡವಾಗಿಯೇ ಉಳಿಯಬೇಕು, ಸ್ವತಂತ್ರ ರಾಷ್ಟ್ರವಾಗಿ ತಲೆ ಎತ್ತಬೇಕು ಎಂಬುದು ಅವನ ಕನಸಾಗಿತ್ತು. ಭಾರತ ಸ್ವತಂತ್ರವಾಯಿತು; ಆದರೆ ದೇಶ ತುಂಡಾಯಿತು.


-ಜಿ.ಪಿ.ಬಸವರಾಜು
೯೪೮೦೦ ೫೭೫೮೦


3,4,5 ಎಪ್ರಿಲ್ ಕಲ್ಹಳ್ಳಿ : ಕಾಜಾಣ ಕಾವ್ಯ ಕಮ್ಮಟ-2015


ಜಾತಿ ಗಣತಿ ಮತ್ತು ಪರಿಶಿಷ್ಟರು

ರಘೋತ್ತಮ ಹೊ.ಬ

ಗಣತಿಯಲ್ಲಿ ಜಾತಿಯನ್ನು ನಮೂದಿಸುವುದರ ವಿರುದ್ಧ ಹಿಂದೂಗಳಿಂದ ಈಗಿನಂತೆ ಆಗಲೂ ತೀವ್ರ ವಿರೋಧ ಎದ್ದಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಜನಗಣತಿ ಆಯುಕ್ತರು ‘‘ಜಾತಿ ಈಗಲೂ ಭಾರತೀಯ ಸಾಮಾಜಿಕ ಸಂರಚನೆಯ ಆಧಾರಸ್ತಂಭ ಮತ್ತು ಅದರ ದಾಖಲೀಕರಣ ಭಾರತೀಯ ಸಮಾಜದಲ್ಲಿ ವಿವಿಧ ಸಾಮಾಜಿಕ ವರ್ಗಗಳ ಶ್ರೇಣಿಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗುರುತಿಸುವ ಸ್ಪಷ್ಟ ಮಾರ್ಗದರ್ಶಿಯಾಗುತ್ತದೆ’ ಎಂಬ ಅಭಿಪ್ರಾಯಕ್ಕೆ ಬಂದರು.

ರಾಜ್ಯದಲ್ಲಿ ಈಗ ಜಾತಿ ಗಣತಿ ನಡೆಯುತ್ತಿದೆ. ಹಾಗೆ ಅದರ ಪರ ವಿರೋಧ ಚರ್ಚೆಗಳಿಗೇನು ಕೊರತೆ ಇಲ್ಲ. ಆದರೆ ದಾಖಲಾಗಬೇಕಾದ ವಾಸ್ತವವೆಂದರೆ 100 ವರ್ಷಗಳ ಹಿಂದೆ (1911) ಇದೇ ಮಾದರಿಯ ಗಣತಿ ನಡೆದದ್ದು ಮತ್ತು ಅದರಿಂದ ಒಡಮೂಡಿದ ಫಲಿತಾಂಶದಿಂದಾಗಿ ಪರಿಶಿಷ್ಟರು ಸಾಂವಿಧಾನಿಕ ಅನುಕೂಲಗಳನ್ನು ಪಡೆಯುವಂತಾಯಿತು ಎಂಬುದು. ಹೌದು, ಸ್ವತಃ ಇದನ್ನು ದಾಖಲಿಸುತ್ತಾ ಬಾಬಾಸಾಹೇಬ್ ಅಂಬೇಡ್ಕರರು ತಮ್ಮ ‘‘ಅಸ್ಪಶ್ಯರು ಅಥವಾ ಭಾರತದ ಕೊಳೆಗೇರಿಗಳ ಮಕ್ಕಳು’’ ಎಂಬ ಕೃತಿಯಲ್ಲಿ ಭಾರತದಲ್ಲಿ ಜನಗಣತಿ ಆರಂಭವಾದ ಬಗೆ ಹೇಗೆ ಮತ್ತು ಅದರಲ್ಲಿ ಜಾತಿಯನ್ನು ನಮೂದಿಸುವುದು ಯಾವಾಗ ಆರಂಭವಾಯಿತು ಎಂಬುದನ್ನು ವಿವರಿಸಿದ್ದಾರೆ. ಅಂಬೇಡ್ಕರರ ಆ ವಿವರಣೆಯನ್ನು ಇಲ್ಲಿ ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1881ರಲ್ಲಿ ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಜನಗಣತಿ ನಡೆಯಿತು. ಆ ಗಣತಿಯಲ್ಲಿ ಬರೀ ಜಾತಿಗಳನ್ನು, ಪಂಥಗಳನ್ನು ಗುರುತಿಸಿ ಹಿಂದೂಗಳ ಸಂಖ್ಯೆ ಇಷ್ಟು ಎಂದು ಹೇಳಲಾಯಿತೇ ಹೊರತು ಜಾತಿಗಳ ಪ್ರತ್ಯೇಕ ಗಣತಿ ನಡೆಯಲಿಲ್ಲ. ಆದರೆ 1891ರ 2ನೆ ಗಣತಿಯಲ್ಲಿ ಪ್ರಥಮವಾಗಿ ಜಾತಿಗಣತಿ ನಡೆಯಿತು. ಆದರೆ ಈ ದಿಸೆಯಲ್ಲಿ ಬರೀ ಅದೊಂದು ಪ್ರಯತ್ನವಾಗಿತ್ತಷ್ಟೆ. ಆದರೆ 1901ರ ಮೂರನೆ ಗಣತಿಯಲ್ಲಿ ಗಣತಿಗಾಗಿ ಒಂದು ತತ್ವವನ್ನು ಅಳವಡಿಸಿಕೊಳ್ಳಲಾಯಿತು. ಅದೆಂದರೆ ‘ಸ್ಥಳೀಯ ಸಾರ್ವಜನಿಕ ಅಭಿಪ್ರಾಯ ಗುರುತಿಸುವಂತೆ ಸಾಮಾಜಿಕ ಪ್ರಾಧಾನ್ಯತೆಯ ಆಧಾರದ ಮೇಲೆ ವರ್ಗೀಕರಣ’. ‘ಸಾಮಾಜಿಕ ಪ್ರಾಧಾನ್ಯತೆ?’ ಈ ನಿಟ್ಟಿನಲ್ಲಿ ಹೇಳುವುದಾದರೆ ಗಣತಿಯಲ್ಲಿ ಜಾತಿ ಪ್ರಥಮವಾಗಿ ಆದ್ಯತೆ ಪಡೆಯಿತು. ಅಂದಹಾಗೆ ಇದರ ವಿರುದ್ಧ ಅಂದರೆ ಗಣತಿಯಲ್ಲಿ ಜಾತಿಯನ್ನು ನಮೂದಿಸುವುದರ ವಿರುದ್ಧ ಹಿಂದೂಗಳಿಂದ ಈಗಿನಂತೆ ಆಗಲೂ ತೀವ್ರ ವಿರೋಧ ಎದ್ದಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಜನಗಣತಿ ಆಯುಕ್ತರು ‘‘ಜಾತಿ ಈಗಲೂ ಭಾರತೀಯ ಸಾಮಾಜಿಕ ಸಂರಚನೆಯ ಆಧಾರಸ್ತಂಭ ಮತ್ತು ಅದರ ದಾಖಲೀಕರಣ ಭಾರತೀಯ ಸಮಾಜದಲ್ಲಿ ವಿವಿಧ ಸಾಮಾಜಿಕ ವರ್ಗಗಳ ಶ್ರೇಣಿಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗುರುತಿಸುವ ಸ್ಪಷ್ಟ ಮಾರ್ಗದರ್ಶಿಯಾಗುತ್ತದೆ’ ಎಂಬ ಅಭಿಪ್ರಾಯಕ್ಕೆ ಬಂದರು. 

ಜನಗಣತಿ ಆಯುಕ್ತರ ಇಂತಹ ತೀರ್ಮಾನವನ್ನು ಖಂಡಿಸುತ್ತಾ ಅಂದಿನ ಹಿಂದೂಗಳು ‘‘ಇದು ಹಿಂದೂ ಸಮಾಜವನ್ನು ಒಡೆದು ದುರ್ಬಲಗೊಳಿಸುವ ಬ್ರಿಟಿಷ್ ಸರಕಾರ ಮತ್ತು ಮುಸ್ಲಿಮರ ಒಟ್ಟಾರೆ ತಂತ್ರ. ಮತ್ತಿದರ ಹಿಂದೆ ಅಸ್ಪಶ್ಯರ ಸಂಖ್ಯೆ ತಿಳಿಯುವ ಸದುದ್ದೇಶವಿಲ್ಲ ಬದಲಿಗೆ ಸ್ಪಶ್ಯರಿಂದ ಅಸ್ಪಶ್ಯರನ್ನು ಬೇರ್ಪಡಿಸಿ ಹಿಂದೂ ಸಮಾಜದ ಐಕ್ಯತೆಯನ್ನು ಒಡೆಯುವ ಉದ್ದೇಶವಿದೆ’’ ಎಂದರು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು.232). ಅಂದಹಾಗೆ ಹೀಗೆ ಹಿಂದೂಗಳು ಆರೋಪಿಸಲು ಕಾರಣವೂ ಇತ್ತು. ಅದೆಂದರೆ ಅಂದಿನ ಪ್ರಾಂತೀಯ ಶಾಸನ ಸಭೆಗಳಲ್ಲಿ ವಿವಿಧ ಜನಾಂಗಗಳಿಗೆ ಅವುಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕ ಮತದಾನ ಪದ್ಧತಿ ಮೂಲಕ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿದ್ದ ಮುಸ್ಲಿಮರು ಈ ನಿಟ್ಟಿನಲ್ಲಿ ಹಿಂದೂಗಳ ಪಟ್ಟಿಯಲ್ಲಿ ಸ್ಪಶ್ಯ ಸಮುದಾಯದವರ ಜೊತೆ ಅಸ್ಪಶ್ಯ ಸಮುದಾಯದವರು ಇದ್ದಾರೆ. ಅಸ್ಪಶ್ಯ ಸಮುದಾಯದವರು ಹಿಂದೂಗಳಲ್ಲ. ಆದ್ದರಿಂದ ಈಗಿರುವ 1901ರ ಜನಗಣತಿಯ ಪ್ರಕಾರ ಸ್ಥಾನಗಳನ್ನು ನೀಡದೆ ಅಸ್ಪಶ್ಯರನ್ನು ಸ್ಪಶ್ಯರಿಂದ ಬೇರ್ಪಡಿಸಿ ನಂತರ ಸ್ಥಾನಗಳನ್ನು ನಿಗದಿಪಡಿಸಿಬೇಕೆಂದು ಒತ್ತಾಯಿಸಿ 1910 ಜನವರಿ 27 ರಂದು ‘ಮಾರ್ಲೆ-ಮಿಂಟೋ ಸುಧಾರಣೆ’ ಖ್ಯಾತಿಯ ಲಾರ್ಡ್ ಮಿಂಟೋ ರವರಿಗೆ ಮನವಿ ಸಲ್ಲಿಸಿದ್ದರು. ಪ್ರಶ್ನೆಯೇನೆಂದರೆ ಬ್ರಿಟಿಷರು ಮುಸ್ಲಿಮರ ಈ ಮನವಿಗೆ ತಲೆಬಾಗಿದರೆ? ‘‘ಇದರ ಬಗ್ಗೆ ನಿರ್ದಿಷ್ಟ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ’’ ಎನ್ನುವ ಅಂಬೇಡ್ಕರರು, ಜನಗಣತಿ ಆಯುಕ್ತರು ಹಿಂದಿನವರು. 1901ರಲ್ಲಿ ಅನುಸರಿಸಿದ್ದನ್ನು 1911ರಲ್ಲಿಯೂ ಮುಂದುವರಿಸಿದರು ಎನ್ನುತ್ತಾರೆ. ಒಟ್ಟಾರೆ ತೀರ್ಮಾನದಂತೆ 1911ರಲ್ಲಿ ಜಾತಿ ಆಧಾರದಲ್ಲಿ ಗಣತಿಯ ಜೊತೆಗೆ ಸ್ಪಶ್ಯರು ಮತ್ತು ಅಸ್ಪಶ್ಯರನ್ನು ಬೇರ್ಪಡಿಸುವ ಕ್ರಿಯೆ ಸಹ ನಡೆಯಿತು. ಅಂದಹಾಗೆ ಹೀಗೆ ಬೇರ್ಪಡಿಸುವುದೇನು ಸುಲಭದ ಕ್ರಿಯೆಯಾಗಿರಲಿಲ್ಲ! ಈ ಹಿನ್ನೆಲೆಯಲ್ಲಿ ಸ್ಪಶ್ಯರಿಂದ ಅಸ್ಪಶ್ಯರನ್ನು ಬೇರ್ಪಡಿಸಲು ಅಂದಿನ ಜನಗಣತಿ ಆಯುಕ್ತರು ಕೆಲವು ಮಾನದಂಡಗಳನ್ನು ಇಟ್ಟರು. ಅವುಗಳೆಂದರೆ

 1. ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು.
2. ಬ್ರಾಹ್ಮಣ ಅಥವಾ ಹಿಂದೂ ಗುರುಗಳಿಂದ ಮಂತ್ರ ಸ್ವೀಕರಿಸದವರು.
3. ವೇದಗಳ ಶ್ರೇಷ್ಠತೆಯನ್ನು ನಿರಾಕರಿಸು ವವರು
4. ಪ್ರಮುಖ ಹಿಂದೂ ದೇವತೆಗಳನ್ನು ಪೂಜೆ ಮಾಡದವರು.
5. ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದವರು.
6. ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದವರು.
7. ಸಾಮಾನ್ಯ ದೇವಾಲಯಕ್ಕೆ ಪ್ರವೇಶ ಇಲ್ಲದವರು.
8. ಕೇವಲ ಸ್ಪರ್ಶದಿಂದ ಮಾತ್ರ ಮಾಲಿನ್ಯ ಉಂಟುಮಾಡುವವರು.
9. ಸತ್ತವರನ್ನು ಹೂಳುವವರು.
10.ಗೋವನ್ನು ಪೂಜಿಸದವರು ಮತ್ತು ಗೋಮಾಂಸ ತಿನ್ನುವವರು.

   ಖಂಡಿತ, ಇಂತಹ ಮಾನದಂಡಗಳ ಆಧಾ ರದ ಮೇಲೆ ಸ್ಪಷ್ಟವಾಗಿ ರೂಪುಗೊಂಡ ಅಂಶ ವೆಂದರೆ 1911ರ ಗಣತಿಯಲ್ಲಿ ಅಸ್ಪಶ್ಯರ ಒಟ್ಟು ಸಂಖ್ಯೆ 4.19ಕೋಟಿ ಎಂಬುದು. ಮುಂದುವರಿದು 1921ರ ಗಣತಿ 1911ರ ಗಣತಿ ವಿಧಾನವನ್ನೇ ಎತ್ತಿಹಿಡಿಯಿತು. ಅಂತೆಯೇ 1931ರಲ್ಲೂ ಕೂಡ ಇದು ಮುಂದುವರಿಯಿತು ಮತ್ತು 1931ರ ಈ ಗಣತಿಯಲ್ಲಿ ಅಸ್ಪಶ್ಯರ ಒಟ್ಟು ಸಂಖ್ಯೆ 5 ಕೋಟಿ ಎಂದು ತಿಳಿದುಬಂದಿತು. ಈ ನಡುವೆ ಹೀಗೆ ಜಾತಿಗಣತಿಯೇನೋ ನಡೆದಿತ್ತು. ಆದರೆ ಇದರ ಹಿಂದೆಯೇ ನಡೆದು ಬರುತ್ತಿದ್ದ ಸಾಮಾಜಿಕ ಮತ್ತು ರಾಜಕೀಯ ಹೋರಾಟ? ಹೌದು, ಭಾರತದ ಸಾಮಾಜಿಕ ಅಂಶಗಳನ್ನು ಅಧ್ಯಯನ ಮಾಡಲು 1929ರಲ್ಲಿ ಸೈಮನ್ ಆಯೋಗದ ಆಗಮನ... ತತ್ಫಲವಾಗಿ ನಡೆದ 1930, 31, 32ರ ಲಂಡನ್ನಿನ ದುಂಡು ಮೇಜಿನ ಸಭೆಗಳು... ಆಶ್ಚರ್ಯವೆಂದರೆ ಇದು ವರೆಗೆ ಕೇವಲ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರಷ್ಟೇ ಅಂತಹ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಜಾತಿಗಣತಿ ಪರಿಣಾಮವಾಗಿ 1931ರಲ್ಲಿ ಅಸ್ಪಶ್ಯರ ಸಂಖ್ಯೆ 5 ಕೋಟಿ ಎಂಬ ಅಂಶ ಹೊರಬಿದ್ದದ್ದೇ ತಡ ಅಸ್ಪಶ್ಯರೂ ಕೂಡ ದುಂಡುಮೇಜಿನ ಸಭೆ ಗಳಿಗೆ ಪ್ರಪ್ರಥಮವಾಗಿ ಪ್ರತಿನಿಧಿಗಳಾಗಿ ಹೋದರು! ಅಂತಹ ಪ್ರತಿನಿಧಿಗಳಲ್ಲಿ ಅಂಬೇಡ್ಕರರು ಕೂಡ ಒಬ್ಬರು ಎಂಬುದೀಗ ಇತಿಹಾಸ! ಈ ನಿಟ್ಟಿನಲ್ಲಿ ಮುಂದಿನ ಈ ಇತಿಹಾಸದ ಕತೆಗಳನ್ನು ಹೇಳಬೇಕಾಗಿಲ್ಲ. ಆದರೂ ದಾಖಲಿಸುವುದಾದರೆ ಅಸ್ಪಶ್ಯರು ಜಾತಿಗಣತಿಯಿಂದ ಹೊರಬಿದ್ದ ತಮ್ಮ ಈ ಜನಸಂಖ್ಯೆಯನುಸಾರ ಶಾಸನ ಸಭೆಗಳಲ್ಲಿ 151 ಸ್ಥಾನಗಳನ್ನು ಮೀಸಲಾಗಿ ಪಡೆದರು! ಮುಂದೆ ಭಾರತದ ಸ್ವಾತಂತ್ರ್ಯ, ಅದರಲ್ಲೂ ಮುಂದುವರಿದ ಅಸ್ಪಶ್ಯರ ಜನಸಂಖ್ಯಾವಾರು ಸ್ಥಾನ ಮೀಸಲಾತಿ. ಹಾಗೆಯೇ ಜನಸಂಖ್ಯೆ ಯಂತೆ ಔದ್ಯೋಗಿಕ ಹಾಗೂ ಶೈಕ್ಷಣಿಕ ಮೀಸ ಲಾತಿ, ಮಂತ್ರಿ ಪದವಿಗಳು, ಬಜೆಟ್‌ನಲ್ಲಿ ನಿರ್ದಿಷ್ಟ ಮೊತ್ತ! ಖಂಡಿತ, ಜಾತಿವಾರು ಜನಗಣತಿಯ ಕಾರಣದಿಂದಾಗಿ ಅಸ್ಪಶ್ಯರಿಗೆ ತಮ್ಮ ಸ್ಪಷ್ಟ ಸಂಖ್ಯೆ ಇಷ್ಟು ಎಂದು ತಿಳಿದು ಅವರಿಗೆ ಏನೇನು ಬೇಕೋ ಅದೆಲ್ಲವೂ ಸಿಕ್ಕಿತು. ಹಾಗೆ ಸ್ವಾತಂತ್ರಾ ನಂತರವೂ ಗಣತಿಯಲ್ಲಿ ಹಾಗೆ ಅಸ್ಪಶ್ಯರನ್ನು ಎಣಿಸುವ ಅಂತಹ ಸಂಪ್ರದಾಯ ಮುಂದುವರಿಯಿತೆಂದರೆ... ಅದರ ಅನುಸಾರ ಸಂವಿಧಾನ ಸಭೆಯಲ್ಲಿ 1949 ಆಗಸ್ಟ್ 23 ರಂದು ಅಂಗೀಕಾರಗೊಂಡ ‘ಶಾಸನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರಿಗೆ ಅವರ ಜನಸಂಖ್ಯಾವಾರು ಪ್ರಾತಿನಿಧ್ಯ’ ಎಂದು ಉಲ್ಲೇಖಿಸಿದ ಭಾರತದ ಸಂವಿಧಾನದ ಅನುಚ್ಛೇದ 330ಅನ್ನು ನಾವಿಲ್ಲಿ ದಾಖಲಿಸಬಹುದು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.13, ಪು.846). ಒಟ್ಟಾರೆ ಭಾರತದ ಚರಿತ್ರೆಯಲ್ಲಿ, ಪರಿಶಿಷ್ಟರ ಹೋರಾಟದ ಇತಿಹಾಸದಲ್ಲಿ ಜಾತಿಗಣತಿ ಮಹತ್ವದ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಅಂತಹ ಗಣತಿಯಿಂದ ಪರಿಶಿಷ್ಟರಿಗೆ ಅವರ ಜನಸಂಖ್ಯೆಯನುಸಾರ ಅಗತ್ಯ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಾತಿನಿಧ್ಯ ಸಿಕ್ಕಿದೆ ಎಂಬುದು ಖಂಡಿತ ಸುಳ್ಳಲ್ಲ.

29 ಮಾರ್ಚ ಧಾರವಾಡ : ಸಾಹಿತಿ ದಂಪತಿ ಪ್ರಶಸ್ತಿ ಪ್ರದಾನ

28,29 ಮಾರ್ಚ ಬೆಂಗಳೂರು: ನಾಟಕ ಮತ್ತು ವಿಚಾರ ಸಂಕಿರಣ


Wednesday, March 25, 2015

ಈ ಮತಾಂತರ ಎಷ್ಟು ಸರಿ?

ಬಿ ಎಂ ಬಶೀರ್ 
ಇತ್ತೀಚೆಗೆ ನನ್ನ ಊರಿನಲ್ಲಿರುವ ಬಾಲ್ಯದ ಸಹಪಾಠಿಗೆ ಮದುವೆಯಾಯಿತು. ಸಿಕ್ಕಿದಾಗಲೆಲ್ಲ  "ಮದುವೆಯಾಯಿತಾ" ಎಂದು ಕೇಳಿದರೆ ‘‘ಈ ತೋಟ ಕಾಯುವ ಮಾಣಿಯನ್ನು ಯಾರು ಮದುವೆಯಾಗುತ್ತಾರೆ ಮಾರಾಯ...ಒಳ್ಳೆಯ ಬ್ರಾಹ್ಮಣ ಹುಡುಗಿ ನಿನಗೆ ಗೊತ್ತಿದ್ದರೆ ಹೇಳು...ಮದುವೆಯಾಗುವೆ’’ ಎನ್ನುತ್ತಿದ್ದ. ನಾನೂ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದೆ. ‘‘ಲವ್ ಮ್ಯಾರೇಜ್ ಆಗು’’ ಎಂದರೆ, ‘‘ತೋಟ ಕಾಯುವ ಮಾಣಿಯನ್ನು ಯಾರು ಲವ್ ಮಾಡ್ತಾರೆ ಮಾರಾಯ... ನಿನಗಾದರೆ ಪರವಾಗಿಲ್ಲ... ಹುಡುಗಿಯ ಜೊತೆಗೆ ಕೆಜಿಗಟ್ಟಳೆ ಚಿನ್ನವನ್ನೂ ಹಾಕ್ತಾರೆ.... ಅತ್ಲಾಗಿ ಬ್ಯಾರಿಯಾಗಿ ಕನ್ವರ್ಟ್ ಆದ್ರೆ ಹೇಗೆ ಎಂದು ಯೋಚಿಸುತ್ತಿದ್ದೇನೆ...’’ ಎಂದು ನಕ್ಕಿದ್ದ. ಆದರೆ ಅವನ ನಗುವಿನ ಆಳದಲ್ಲೊಂದು ಸಣ್ಣ ವಿಷಾದವೊಂದು ಹೆಪ್ಪುಗಟ್ಟಿರುವುದು ತೀರ ತಡವಾಗಿ ತಿಳಿಯಿತು. 
ಇತ್ತೀಚೆಗೆ ನನ್ನ ಆ ಸಹಪಾಠಿಗೆ ಮದುವೆಯಾಯಿತಂತೆ. ಅಷ್ಟು ಆತ್ಮೀಯನಾಗಿದ್ದ ಅವನು ತನ್ನ ಮದುವೆಯ ವಿಷಯವನ್ನು ನನಗೆ ತಿಳಿಸಿಯೇ ಇರಲಿಲ್ಲ. ಇನ್ಯಾರದೋ ಮೂಲಕ ತಿಳಿಯಿತು. ನನಗೇ  ಅಚ್ಚರಿ ಉಂಟು ಮಾಡುವಂತೆ ಅವನು ಅಂತರ್ಜಾತೀಯ ವಿವಾಹವಾಗಿದ್ದ. ಆದರೆ ಮದುವೆಗೆ ಮುನ್ನ ಹುಡುಗಿಯನ್ನು ಶುದ್ಧೀಕರಣ ಮಾಡಿ ಬ್ರಾಹ್ಮಣಳನ್ನಾಗಿ ಮತಾಂತರ ಮಾಡಲಾಯಿತಂತೆ. ನನಗೆ ಎರಡು ರೀತಿಯಲ್ಲಿ ಖುಷಿಯಾಯಿತು. ಒಂದು, ಕೊನೆಗೂ ನನ್ನ ಸಹಪಾಠಿಗೆ ವಿವಾಹವಾಯಿತು. ಎರಡನೆಯದು, ತೀರಾ ಸಂಪ್ರದಾಯಸ್ಥನಾಗಿದ್ದ ಅವನು ಅಂತರ್ಜಾತಿಯ ವಿವಾಹವಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಕೆಳಜಾತಿಯ ತರುಣಿಯನ್ನು ತನ್ನ ಜಾತಿಯ ಸ್ಥಾನಮಾನಕೊಟ್ಟು ‘ಔದಾರ್ಯ’ ಮೆರೆದಿದ್ದ. ಮದುವೆಯ ಸುದ್ದಿ ತಂದ ಆ ಇನ್ನೊಬ್ಬ ಗೆಳೆಯನಲ್ಲಿ ಪ್ರಶ್ನೆ ಹಾಕಿದೆ ‘‘ಎಂತ, ಲವ್ ಮ್ಯಾರೇಜಾ?’’ 
ಅವನು ಕಿಸಕ್ಕನೆ ನಕ್ಕ ‘‘ಎಂಥ ಲವ್? ಅವನು ಯಾವಾಗ ಲವ್ ಮಾಡ್ಲಿಕ್ಕೆ? ಬ್ರಾಹ್ಮಣರಲ್ಲೀಗ ಸಿಕ್ಕಾಪಟ್ಟೆ ಹುಡುಗಿಯರ ಶಾರ್ಟೇಜು. ಕಲಿತ ಹುಡುಗಿಯರು, ಹಳ್ಳಿಯಲ್ಲಿ ತೋಟ ನೋಡಿಕೊಂಡು ಇರುವ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪುವುದಿಲ್ಲವಂತೆ. ಅದಕ್ಕೆ ಕೆಳವರ್ಗದ, ಬಡ ಹುಡುಗಿಯನ್ನು ಶುದ್ಧೀಕರಣ ಮಾಡಿ ಮದುವೆಯಾಗಿದ್ದಾನೆ...’’

ಇದು ಗೊತ್ತಿಲ್ಲದ ವಿಷಯವೇನೂ ಆಗಿರಲಿಲ್ಲ. ಹೆಣ್ಣಿನ ಕುರಿತಂತೆ ಗಂಡಿನ ದರ್ಪ, ದುರಹಂಕಾರಕ್ಕೆ ಪ್ರಕೃತಿಯೇ ನೀಡಿದ ಶಾಪದಂತೆ ತರುಣಿಯರ ಸಮಸ್ಯೆ ಹಲವು ಜಾತಿಗಳನ್ನು ಕಾಡುತ್ತಿದೆ. ಒಂದೆಡೆ ತಮ್ಮ ಜಾತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಇನ್ನೊಂದೆಡೆ ಮದುವೆಯಾಗಿ ಸಕುಟುಂಬಸ್ಥನಾಗಬೇಕು. ಈ ಸಂಘರ್ಷ ಹಲವು ಜಾತಿಗಳ ಹುಡುಗರನ್ನು  ಕಾಡುತ್ತಿದೆ. ಹೆಣ್ಣಿನ ಕುರಿತಂಥ ತಾತ್ಸಾರ ಹೀಗೆ ಮುಂದುವರಿದರೆ ಇದು ಕೇವಲ ಬ್ರಾಹ್ಮಣ ಸಮಾಜವನ್ನು ಮಾತ್ರವಲ್ಲ, ಇಡೀ ಗಂಡು ಜಾತಿಯನ್ನೇ ಕಾಡಲಿದೆ. ಬ್ರಾಹ್ಮಣ ಸಮುದಾಯದಲ್ಲಿ ಅದರ ಒಂದು ಗ್ರಾಂಡ್ ರಿಹರ್ಸಲ್ ನಡೆಯುತ್ತಿದೆ ಅಷ್ಟೇ. ಬಹುಶಃ ಈ ಸಮಸ್ಯೆ ಬ್ರಾಹ್ಮಣ ತರುಣರಿಗೆ ಒಂದು ಹೊಸ ಅವಕಾಶವನ್ನೂ ತೆರೆದುಕೊಟ್ಟಿದೆ. ಜಾತಿ ಅಸಮಾನತೆಯ ಪಾಪಪ್ರಜ್ಞೆಯಿಂದ ಕಳಚಿಕೊಳ್ಳುವುದಕ್ಕೆ ಪೂರಕವಾಗಿ, ಈ ಅಂತರ್ಜಾತೀಯ ವಿವಾಹವನ್ನು ಬಳಸಿಕೊಳ್ಳಬಹುದಾಗಿದೆ. ನಿಧಾನಕ್ಕೆ ಇದು ಜಾತಿ ಅಸಮಾನತೆಯನ್ನೇ ಅಳಿಸುವುದಕ್ಕೆ ಸಹಾಯ ಮಾಡಬಹುದಾಗಿದೆ. ಆದುದರಿಂದ, ಈ ಕಾರಣಕ್ಕಾಗಿಯಾದರೂ ನನ್ನ ಸ್ನೇಹಿತ ಜಾತಿಯನ್ನು ಮೀರುವಂತಾಯಿತಲ್ಲ ಎಂದು ನನಗೆ ನಾನೇ ಖುಷಿ ಪಟ್ಟುಕೊಂಡಿದ್ದೆ.

ಆದರೆ ಇತ್ತೀಚೆಗೆ ಮುಂಬೈಯಿಂದ ಬಂದ ನನ್ನ ಗೆಳೆಯರಾದ ಕೆ. ಕೆ. ಸುವರ್ಣ ಅವರು ಬಿಚ್ಚಿಟ್ಟ ಸಂಗತಿ, ನನ್ನನ್ನು ಒಂದು ಕ್ಷಣ ತಲ್ಲಣಕ್ಕೀಡು ಮಾಡಿತು. ನಾನು ಬ್ರಾಹ್ಮಣ ತರುಣರ ಅಂತರ್ಜಾತೀಯ ವಿವಾಹದ ಕುರಿತಂತೆ ಮಾತಾಡಲು ತೊಡಗಿದಾಗ ಸುವರ್ಣ ಒಮ್ಮೆಲೆ ಸ್ಫೋಟಿಸಿದರು. ‘‘ಯಾರು ಹೇಳಿದ್ದು ಇದು ಅಂತರ್ಜಾತೀಯ ವಿವಾಹ ಅಂತ. ಇದು ಹಣದ ಆಮಿಷವೊಡ್ಡಿ ಕೆಳವರ್ಗದ ತರುಣಿಯರನ್ನು ಬ್ರಾಹ್ಮಣರ ತೊತ್ತಾಗಿಸುವ ಒಂದು ಭಾಗವೇ ಹೊರತು ಇನ್ನೇನು ಅಲ್ಲ...’’ ಎಂದು ಬಿಟ್ಟರು.  ಅವರು ಬಿಚ್ಚಿಟ್ಟ ಸಂಗತಿಯನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬ್ರಾಹ್ಮಣರೊಳಗೆ ಇತ್ತೀಚೆಗೆ ತರುಣಿಯರ ಕೊರತೆಯಿಂದಾಗಿ, ಮದುವೆ ದಲ್ಲಾಳಿಗಳಿಗೆ ವಿಪರೀತ ಬೆಲೆ ಬಂದು ಬಿಟ್ಟಿದೆ. ಎಲ್ಲಿ, ಯಾವ ಮೂಲದಲ್ಲಿ ಬ್ರಾಹ್ಮಣ ಸಮುದಾಯದ, ಅದರಲ್ಲೂ ತಮ್ಮದೇ ಪಂಗಡದ ಹುಡುಗಿಯಿದ್ದಾರೆಂದು ಹುಡುಕಿ ತೆಗೆದು, ಕೈ ತುಂಬಾ ದುಡ್ಡು ಬಾಚುವ ದಲ್ಲಾಳಿಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರಭಾರತದಿಂದ ಅದರಲ್ಲೂ ಕಾಶ್ಮೀರದಿಂದ ಹುಡುಗಿಯರನ್ನು ಕರಾವಳಿಗೆ ಕರೆತಂದು ಬ್ರಾಹ್ಮಣ ಹುಡುಗರಿಗೆ ಕಟ್ಟುವ ಕೆಲಸವನ್ನೂ ದಲ್ಲಾಳಿಗಳು ಮಾಡುತ್ತಿದ್ದಾರೆ. ಹಲವು ದಲ್ಲಾಳಿಗಳು ಇದನ್ನೇ ಬಳಸಿಕೊಂಡು ಹಲವು ಬ್ರಾಹ್ಮಣ ಕುಟುಂಬಕ್ಕೆ ವಂಚಿಸಿದ್ದಾರೆ.ಅನ್ಯ ಜಾತಿಯ ಹುಡುಗಿಯನ್ನೇ ಬ್ರಾಹ್ಮಣ ಹುಡುಗಿಯೆಂದು ತಲೆಗೆ ಕಟ್ಟಿ, ಅದು ರಾದ್ಧಾಂತವಾಗಿ, ವಿವಾಹವೇ ಮುರಿದ ಪ್ರಸಂಗಗಳಿವೆ. ಕೆಲವು ಕುಟುಂಬಗಳಂತೂ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕುಳಿತಿದ್ದಾರೆ. ಲಕ್ಷಾಂತರ ಹಣ ಪಡೆದು ಬ್ರಾಹ್ಮಣ ಕುಟುಂಬಗಳಿಗೆ ವಂಚಿಸಿದ ಪ್ರಕರಣಗಳಂತೂ ನೂರಾರು ಇವೆ. ಇಂತಹ ಸಂದರ್ಭದಲ್ಲೇ ಅವರು ಒಂದಿಷ್ಟು ಉಸಿರು ಬಿಡುವಂತಾದುದು ‘‘ಶುದ್ಧೀಕರಣ’’ದ ಮೂಲಕ ಕೆಳ ಜಾತಿಯ ತರುಣಿಯರನ್ನು ಮನೆತುಂಬಿಸಿಕೊಳ್ಳುವ ಪದ್ಧತಿ ಸಮಾಜದಲ್ಲಿ ಪ್ರಚಾರ ಪಡೆದ ಮೇಲೆ. ಹಾಗೆಂದು ಬ್ರಾಹ್ಮಣ ತರುಣರು ಕೇಳಿದಾಕ್ಷಣ ಯಾರೂ ತಮ್ಮ ಮನೆಯ ಮಗಳನ್ನು ಇಕೋ ಎಂದು ಕೊಡುವುದಿಲ್ಲ. ಹೆಣ್ಣು ಮಕ್ಕಳು ಹೆಚ್ಚಿರುವ ತೀರಾ ಬಡ ಕುಟುಂಬಕ್ಕೆ ಒಂದಿಷ್ಟು ವಧುದಕ್ಷಿಣೆಯನ್ನು ಕೊಟ್ಟು, ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ಕುಟುಂಬದ ಸೊಸೆಯಾಗಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಗೋ ವನಿತಾಶ್ರಮ’ ಎನ್ನುವುದೊಂದಿದೆ. ಇದರ ಮುಖಂಡರು ಬಹಿರಂಗ ಸಭೆಯಲ್ಲೇ ಈ ಕುರಿತಂತೆ ಹೇಳಿಕೆ ನೀಡಿದ್ದರು. ‘‘ನಮ್ಮಲ್ಲಿ ವಿವಿಧ ತಳಿಯ ಅಪರೂಪದ ಗೋವುಗಳನ್ನು ಸಾಕಲಾಗುತ್ತದೆ. ಹಾಗೆಯೇ ಇಲ್ಲಿ, ಬಡ ವನಿತೆಯರಿಗೂ ಆಶ್ರಯ ನೀಡಲಾಗುತ್ತದೆ. ಕೆಳಜಾತಿಯ ತೀರಾ ಬಡ ಕುಟುಂಬದ ಹೆಣ್ಣು ಮಕ್ಕಳು ಇದ್ದರೆ, ನಿಮಗೆ ಸಾಕಲು ಕಷ್ಟವಾಗುತ್ತಿದೆಯಾದರೆ, ಅನಾಥ ಹೆಣ್ಣು ಮಕ್ಕಳು ಇದ್ದರೆ ಈ ಆಶ್ರಮಕ್ಕೆ ಸೇರಿಸಿ. ಈ ವನಿತೆಯರು ಗೋವುಗಳ ಸೇವೆಯನ್ನು ಮಾಡಿದಂತಾಗುತ್ತದೆ. ಹಾಗೆಯೇ ಇವರ ಮದುವೆಯ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ. ಈ ಆಶ್ರಮದಲ್ಲಿದ್ದ ಹಲವು ಕೆಳಜಾತಿಯ ಹೆಣ್ಣು ಮಕ್ಕಳನ್ನು ಬ್ರಾಹ್ಮಣರಂತಹ ಮೇಲ್ಜಾತಿಯ ತರುಣರಿಗೆ ಮದುವೆ ಮಾಡಿಕೊಟ್ಟಿದ್ದೇವೆ...’’ ಈ ಮಾತಿನ ರಹಸ್ಯ ಇಷ್ಟೇ. ಈ ಗೋವುಗಳ ಸೇವೆಗೆ ವೇತನವೇ ಇಲ್ಲದೆ ಬಡ ಹೆಣ್ಣು ಮಕ್ಕಳು ದೊರಕುತ್ತಾರೆ. ಅವರಿಗೆ ಒಂದಿಷ್ಟು ವೈದಿಕ ಆಚರಣೆ ಕಳಿಸಿ ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡುವುದಷ್ಟೇ ಅಂತಿಮ ಉದ್ದೇಶ. ತೀರಾ ಅನಾಥ ಹೆಣ್ಣು ಮಕ್ಕಳಾದರೆ ಇದರಿಂದ ಪ್ರಯೋಜನವಿದೆ. ಆದರೆ ಬಡತನದ ಕಾರಣದಿಂದ ಬಂದ ಹೆಣ್ಣು ಮಕ್ಕಳ ಕುಟುಂಬಕ್ಕೆ ಹಣದ ಆಮಿಶ ತೋರಿಸಿ ಅವರನ್ನು ಶುದ್ಧೀಕರಣಗೊಳಿಸಿ, ಆ ಕುಟುಂಬದಿಂದಲೇ ಬೇರ್ಪಡಿಸಿ, ಬ್ರಾಹ್ಮಣರ ತರುಣರಿಗೆ ವರ್ಗಾಯಿಸುವುದನ್ನು ಮದುವೆ ಎಂದು ಕರೆಯಲಾಗುತ್ತದೆಯೆ? ಈ ಪ್ರಶ್ನೆಯನ್ನು ಸುವರ್ಣ ಅವರು ಕೇಳುವುದಕ್ಕೂ ಒಂದು ಕಾರಣವಿತ್ತು. ಅವರ ದೂರದ ಸಂಬಂಧಿಕರ ಹುಡುಗಿಯೊಬ್ಬರನ್ನು ಇದೇ ರೀತಿ ಶುದ್ಧೀಕರಣ ಮಾಡಿ ಬ್ರಾಹ್ಮಣ ಕುಟುಂಬಕ್ಕೆ ಕೊಡಲಾಗಿತ್ತು. ಆನಂತರದ ಬಿಕ್ಕಟ್ಟು, ಅದು ವಧುವಿನ ಮೇಲೆ ಮತ್ತು ಆಕೆಯ ಕುಟುಂಬದ ಮೇಲೆ ಬಿದ್ದ ಪರಿಣಾಮಗಳೇ ಸುವರ್ಣರ ಆಕ್ರೋಶಕ್ಕೆ ಕಾರಣ.

ಮದುವೆ ಎಂದರೆ ಒಂದು ಹೆಣ್ಣು ಮತ್ತು ಗಂಡು ಒಂದಾಗುವುದಷ್ಟೇ ಅಲ್ಲ, ಎರಡು ಕುಟುಂಬಗಳು ಜೊತೆಯಾಗುವುದು. ಗಂಡಿಗೆ ಹೆಣ್ಣು ಮಾತ್ರ ದೊರಕುವುದಲ್ಲ, ಅವಳ ಜೊತೆಗೆ ತಾಯಿ ಸಮಾನಳಾದ ಅತ್ತೆ ಮತ್ತು ತಂದೆ ಸಮಾನರಾದ ಮಾವನೂ ದೊರಕುತ್ತಾರೆ. ಹಾಗೆಯೇ ಹೆಣ್ಣಿಗೂ ಕೂಡ. ಆದರೆ ಇಲ್ಲಿ ಹಾಗಲ್ಲ. ಬ್ರಾಹ್ಮಣ ಕುಟುಂಬಕ್ಕೆ ಬೇಕಾಗಿರುವುದು ಬರೇ ಹೆಣ್ಣು ಮಾತ್ರ. ಅವಳ ಕುಟುಂಬ ಅಂದರೆ ಆಕೆಯ ತಂದೆ, ತಾಯಿ ಯಾರೂ ಬೇಕಾಗಿಲ್ಲ. ಒಂದು ರೀತಿಯಲ್ಲಿ ಆಕೆ ತನ್ನ ಕುಟುಂಬದ ಜೊತೆಗೆ ಸಂಬಂಧವನ್ನೇ ಕಡಿದು ಕೊಳ್ಳುತ್ತಾಳೆ. ತನ್ನ ಸಂಸ್ಕೃತಿ, ಆಹಾರ, ಆಚಾರ, ವಿಚಾರ ಎಲ್ಲವನ್ನು ಬಲಿಕೊಟ್ಟು, ಆಕೆ ಬ್ರಾಹ್ಮಣ ಕುಟುಂಬವನ್ನು ಪ್ರವೇಶಿಸಬೇಕಾಗುತ್ತದೆ. ಆಕೆ ಇದೆಲ್ಲವನ್ನು ಮಾಡಬೇಕಾಗಿರುವುದು ಬಡ ಕೆಳಜಾತಿಯ ಕುಟುಂಬದಲ್ಲಿ ಹುಟ್ಟಿದ್ದೇನೆನ್ನುವ ಒಂದೇ ಕಾರಣಕ್ಕಾಗಿ. ಬಡ ಹಿಂದುಳಿದ ವರ್ಗದ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿ, ಹಣದ ಆಮಿಷ ತೋರಿಸಿ ಆ ಹೆಣ್ಣನ್ನು ಶುದ್ಧೀಕರಣದ ಹೆಸರಲ್ಲಿ ಬ್ರಾಹ್ಮಣ ಕುಟುಂಬಕ್ಕೆ ಒಪ್ಪಿಸುವುದು ಅದು ಹೇಗೆ ವಿವಾಹ ಸಮ್ಮತಿಯನ್ನು ಪಡೆದುಕೊಳ್ಳುತ್ತದೆ? ಒಂದು ವೇಳೆ ಅವರಿಗೆ ಹೆಣ್ಣು ಒಪ್ಪಿಗೆಯಾದರೆ, ಆಕೆಯ ಇಡೀ ಕುಟುಂಬವನ್ನೇ ಬ್ರಾಹ್ಮಣ ಜಾತಿಗೆ ಶುದ್ಧೀಕರಣ ಮಾಡಿ ಸೇರಿಸಬಹುದಲ್ಲ? ಆಕೆಯ ತಂದೆ ತಾಯಿ ಬೇಡ. ಆಕೆಯ ಕುಟುಂಬ ಬೇಡ. ಬರೇ ಆಕೆ ಮಾತ್ರ, ಗಂಡಿನ ತೆವಲಿಗೆ, ಮನೆಯ ಚಾಕರಿಗೆ ಬೇಕು. ಇದು ಮದುವೆಯೆ? ಅಥವಾ ದಂಧೆಯೆ? ಎಂದು ಸುವರ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೆಣ್ಣಿನ ಸಮ್ಮತಿಯನ್ನು ಮೀರಿ, ಬರೇ ದಲ್ಲಾಳಿಗಳ ಹಣದಾಸೆಗೆ ಬಡ ಬಿಲ್ಲವ, ಮೊಗವೀರ ತರುಣಿಯರನ್ನು ಶುದ್ಧೀಕರಣಗೊಳಿಸಿ ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡಲಾಗುತ್ತದೆ. ಅಲ್ಲಾದರೂ ಆಕೆ ಸುಖವಾಗಿರಲು ಹೇಗೆ ಸಾಧ್ಯ? ತನ್ನದಲ್ಲದ ಸಂಸ್ಕೃತಿ. ಆಚರಣೆ. ಹಣತೆತ್ತು ಕೊಂಡುಕೊಂಡ ಹೆಣ್ಣನ್ನು ಗಂಡಾಗಲಿ ಆತನ ತಂದೆತಾಯಿಯಾಗಲಿ ಮಾನಸಿಕವಾಗಿ ಪತ್ನಿ, ಸೊಸೆ ಎಂದು ಒಪ್ಪಿಕೊಳ್ಳಲು ಸಾಧ್ಯವೆ? ಆಕೆ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಾಂಸ ತಿನ್ನಬೇಕು ಎನ್ನುವ ಆಸೆಯಾದರೂ ಅದನ್ನು ಅದುಮಿಟ್ಟುಕೊಳ್ಳಬೇಕು.  ಅನೇಕ ಸಂದರ್ಭದಲ್ಲಿ ಅಪರೂಪಕ್ಕೆ ತವರು ಮನೆಗೆ ಹೋಗುವ ಅವಕಾಶವೂ ಆಕೆಗಿರುವುದಿಲ್ಲ. ಕಾರಣವೆಂದರೆ, ಅಲ್ಲಿ ಆಕೆ ಮೀನು, ಮಾಂಸ ತಿಂದು ಬಂದರೆ? ಮನೆಯ ಆಚರಣೆಯನ್ನು ಕೆಡಿಸಿ ಬಂದರೆ? ಹೆಣ್ಣನ್ನು ಶುದ್ಧೀಕರಣ ಮಾಡಲಾಗಿದೆ. ಆದರೆ ಆಕೆಯ ಕುಟುಂಬವನ್ನು ಶುದ್ಧೀಕರಣ ಮಾಡಲಾಗಿಲ್ಲವಲ್ಲ? ಇಂತಹ ಬಿಕ್ಕಟ್ಟನ್ನು ಎದುರಿಸುತ್ತಾ, ಒಲ್ಲದ ಗಂಡನೊಂದಿಗೆ ಸಂಸಾರ ಮಾಡುವ, ವೈದಿಕೀಕರಣ ಅಥವಾ ಬ್ರಾಹ್ಮಣೀಕರಗೊಂಡ ಹೆಣ್ಣಿನ ಮಾನಸಿಕ ಸ್ಥಿತಿ ಅದೆಷ್ಟು ಭೀಕರವಾಗಿರಬೇಡ?

ಯಾವುದೇ ಧರ್ಮಕ್ಕೆ ಸ್ವ ಒಪ್ಪಿಗೆಯಿಂದ, ಯಾವ ಕಾರಣಕ್ಕೆ ಇರಲಿ ಮತಾಂತರವಾಗುವುದನ್ನು ನಾನು ಒಪ್ಪುತ್ತೇನೆ. ಹಣಕ್ಕಾಗಿ ಒಬ್ಬ ತಂದೆ ತಾನು ಶುದ್ಧೀಕರಣಗೊಂಡು ಬ್ರಾಹ್ಮಣನಾಗಲಿ, ಕ್ರೈಸ್ತನಾಗಲಿ, ಮುಸ್ಲಿಮನಾಗಲಿ. ಅದಕ್ಕೆ ಸಮಾಜದ ಅಭ್ಯಂತರವಿಲ್ಲ. ಆದರೆ ಹಣಪಡೆದು, ತನ್ನ ಮಗಳನ್ನು ಒಬ್ಬ ಇನ್ನೊಂದು ಧರ್ಮದ ಅಥವಾ ಜಾತಿಯ ಗಂಡಿಗೆ ಒಪ್ಪಿಸಿ ಕೈತೊಳೆದುಕೊಳ್ಳುವುದನ್ನು ಮದುವೆ ಎಂದು ಕರೆಯಲಾಗುವುದಿಲ್ಲ. ಶುದ್ಧೀಕರಣ ಎಂದು ಕರೆಯಲೂ ಆಗುವುದಿಲ್ಲ. ಜಾತಿಯನ್ನು ಮೀರಲು ಸಾಧ್ಯವಿಲ್ಲವೆಂದಾದರೆ ಬ್ರಾಹ್ಮಣ ತರುಣರು ಅನ್ಯ ಜಾತಿಯ ತರುಣಿಯರನ್ನು ಮರೆತು ತಮ್ಮ ತಮ್ಮ ಜಾತಿಯಲ್ಲೇ ಹುಡುಗಿಯನ್ನು ಹುಡುಕುವುದು ಹೆಚ್ಚು ಶೋಭೆ ತರುವ ವಿಷಯ. ಜಾತಿಯನ್ನು ಮೀರುವ ಎದೆಗಾರಿಕೆಯಿದ್ದರೆ, ಕೆಳಜಾತಿಯ ಕುಟುಂಬವನ್ನು ಮೇಲ್‌ಜಾತಿಗೆ ತರುವುದು ಮಾತ್ರವಲ್ಲ, ತಾನು ತನ್ನ ಮೇಲ್‌ಜಾತಿಯಿಂದ ಕೆಳಜಾತಿಗಿಳಿಯಲು ಸಿದ್ಧನಾಗಿರಬೇಕು. ಆಕೆಯ ತಂದೆತಾಯಿಯನ್ನು ಮಾವ, ಅತ್ತೆ ಎಂದು ಸ್ವಾಗತಿಸಲೂ ಸಿದ್ಧನಾಗಿರಬೇಕು. ಇಲ್ಲವಾದರೆ ಅದು ನಾಗರಿಕ ವ್ಯವಸ್ಥೆಯಲ್ಲಿ ಅಮಾನವೀಯವಾಗುತ್ತದೆ. ಹಾಗೆಯೇ ಕೈಯಲ್ಲಿ ಹಣದ ಕಟ್ಟು ಹಿಡಿದುಕೊಂಡು ಬ್ರಾಹ್ಮಣ ಹುಡುಗರಿಗಾಗಿ ಬಿಲ್ಲವ, ಮೊಗವೀರ, ಬಂಟ ಮೊದಲಾದ ಕೆಳಜಾತಿಯ ಬಡಹುಡುಗಿಯರನ್ನು ಹುಡುಕುತ್ತಾ ಓಡಾಡುವ ದಲ್ಲಾಳಿಗಳನ್ನು ಮದುವೆ ದಲ್ಲಾಳಿಗಳು ಎಂದು ಕರೆಯಲಾಗುವುದಿಲ್ಲ. ಅವರಿಗೆ ಬೇರೆ ಬೇರೆ ಹೆಸರುಗಳನ್ನು ಸಮಾಜ ನೀಡುತ್ತವೆ. ಆದುದರಿಂದ ವಿವಿಧ ಜಾತಿ ಸಂಘಟನೆಗಳು ಇಂತಹ ಸಮಾಜ ಬಾಹಿರ ದಲ್ಲಾಳಿಗಳಿಗೆ, ಇವರು ನಡೆಸುವ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಬಡ ಹೆಣ್ಣು ಮಕ್ಕಳನ್ನು ಹಣಕ್ಕಾಗಿ ಪರೋಕ್ಷವಾಗಿ ಮಾರಾಟ ಮಾಡುವ ಈ ವ್ಯವಸ್ಥೆಗೂ ಕಡಿವಾಣ ಹಾಕಬೇಕಾಗಿದೆ. ಹಾಗೆಯೇ ಬಲವಂತದ ಮತಾಂತರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಪೇಜಾವರಶ್ರೀ ಗಳೂ ಈ ವಿಷಯದವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಹಣಕೊಟ್ಟು ಬಡ ಹೆಣ್ಣು ಮಕ್ಕಳನ್ನು ಬಲವಂತವಾಗಿ ಬ್ರಾಹ್ಮಣೀಕರಿಸಿ, ಮನೆ ಚಾಕರಿಗೆ ಬಳಸಿಕೊಳ್ಳುವ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ. ಅವರು ಅದನ್ನು ಹೇಳುತ್ತಾರೆ ಎಂದು ನಾವೆಲ್ಲ ಬಯಸೋಣ. ಆದರೆ ಅವರು ಅಂತಹ ಹೇಳಿಕೆಯನ್ನು ನೀಡುತ್ತಾರೆ ಎಂಬ ಬಗ್ಗೆ ಸುವರ್ಣ ಅವರಿಗೆ ಯಾವ ನಂಬಿಕೆಯೂ ಇಲ್ಲ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...