Sunday, September 30, 2012

ಶ್ರೇಷ್ಠ ವ್ಯಕ್ತಿಯ ಆಯ್ಕೆ ಎಂಬ ಪ್ರಹಸನ- ಡಾ. ಆನಂದ್ ತೇಲ್ತುಂಬ್ಡೆ
ಕನ್ನಡಕ್ಕೆ : ಡಾ .ಎಚ್ .ಎಸ್.ಅನುಪಮಾ 

Anupama in shimoga.JPG   ಅನಿಲ್ ಅಂಬಾನಿಯ ರಿಲಯನ್ಸ್ ಮೊಬೈಲ್, ಸಿಎನ್‌ಎನ್-ಐಬಿಎನ್ ಮತ್ತು ಹಿಸ್ಟರಿ ಚಾನೆಲ್‌ಗಳು ಸೇರಿ ಆಯೋಜಿಸಿದ್ದ ಮಾಧ್ಯಮ ತಮಾಷಾ ಒಂದು ಅಂತೂ ಕೊನೆಗೊಂಡಿದೆ. ನಿರೀಕ್ಷೆಯಂತೆ ಬಾಬಾಸಾಹೇಬ್ ಅಂಬೇಡ್ಕರ್ ‘ಶ್ರೇಷ್ಠತೆ’ಯ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಈಗವರು ‘ಗಾಂಧಿ ನಂತರ ಶ್ರೇಷ್ಠ ಭಾರತೀಯ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯಿಂದ ಗಾಂಧಿಯನ್ನು ಮೊದಲೇ ಹೊರಗಿಟ್ಟು ಅವರ ನಂತರದ ಶ್ರೇಷ್ಠ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಕ್ಕೆ ದಲಿತರಲ್ಲಿ ಮೊದಮೊದಲು ಅಸಮಾಧಾನವಿದ್ದರೂ ಈಗ ಶ್ರೇಷ್ಠ ವ್ಯಕ್ತಿಯೆಂದು ಘೊಷಿಸಿದ ನಂತರ ಅವರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಕೆಲವು ಪಂಡಿತರು ಈ ಫಲಿತಾಂಶವನ್ನು ವಿಶ್ಲೇಷಿಸುತ್ತಾ ಯುವಭಾರತ ಜಾತಿ ಪೂರ್ವಗ್ರಹದಿಂದ ಹೊರಬಂದಿದೆ ಎನ್ನಲು ಅಂಬೇಡ್ಕರ್ ಈ ಸ್ಪರ್ಧೆಯಲ್ಲಿ ಜಯ ಗಳಿಸಿರುವುದೇ ಸಾಕ್ಷಿ ಎನ್ನುತ್ತಿದ್ದಾರೆ. ನಿಜವಾಗಿಯೂ? ಇಂಥ ಸುದ್ದಿ ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ ನಡೆಯುತ್ತಿರುವಾಗ ಟಿವಿ ಪರದೆಯ ಕೆಳಭಾಗದ ಸಾಲುಗಳು ಅಂಬೇಡ್ಕರ್ ಮೂರ್ತಿಗೆ ಉತ್ತರಪ್ರದೇಶದ ಹಲವು ಕಡೆ ಅವಮಾನ ಎಂಬ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ವರ್ತಮಾನದ ವೈರುಧ್ಯವನ್ನು ಎತ್ತಿ ತೋರಿಸುತ್ತದೆ.

ಅಂಬೇಡ್ಕರರನ್ನು ಕನಿಷ್ಠಗೊಳಿಸುವುದು

ಇಂಟರ್‌ನೆಟ್ ಮತ್ತು ಮೊಬೈಲ್ ಬಳಸುವ ಅತಿ ಕಡಿಮೆ ಸಂಖ್ಯೆಯ ದಲಿತ ಯುವಕರೇ ಈ ವಿಜಯದ ಹಿಂದಿರುವುದು ಎಂದು ಊಹಿಸಲು ಯಾವ ವಿಶೇಷ ಜ್ಞಾನವೂ ಬೇಕಾಗಿಲ್ಲ. ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರಿಗೆ ಅಂಬೇಡ್ಕರ್ ಹೊರತಾಗಿ ಬೇರೆ ಆಯ್ಕೆಗಳಿರಲಿಲ್ಲ. ಈ ಕಾರಣದಿಂದಲೇ ಸಂಘಪರಿವಾರದ ಅವಶ್ಯಕತೆಗಳಿಗೆ ಹೊಂದಿಕೊಳ್ಳುವಂತಹ ಮುಸ್ಲಿಮರಾಗಿದ್ದ ಎಪಿಜೆ ಅಬ್ದುಲ್ ಕಲಾಂರಂಥವರು ಉಳಿದೆಲ್ಲರಿಗಿಂತ ಹೆಚ್ಚಿನ ಮತ ಗಳಿಸಿದರು. ಮೊದಲ ಅಸಮಾಧಾನದ ಹೊರತಾಗಿಯೂ ದಲಿತ ಯುವಜನತೆ ಅಂಬೇಡ್ಕರರನ್ನು ಗೆಲ್ಲಿಸಲೇಬೇಕೆಂದು ಒಗ್ಗಟ್ಟಿನಿಂದ ಮತ ಹಾಕುವಂತೆ ಒತ್ತಾಯಿಸಿತು. ಅಂಬೇಡ್ಕರರು ದಲಿತ ಯುವಜನತೆಯ ಬೆಂಬಲ ಪಡೆದಂತೆ ಯಾವ ಭಾರತೀಯ ಹೀರೋ ಕೂಡಾ ಅಂಥ ಬೆಂಬಲ ಪಡೆಯಲಿಲ್ಲ. ಹೀಗಿರುವಾಗ ಭಾರತದ ಯುವಜನತೆ ಜಾತಿ ಪೂರ್ವಗ್ರಹ ತೊರೆದಿದೆ ಎಂದು ಭಾವಿಸುವುದು ಶುದ್ಧ ಭೋಳೇತನ. ಅಂಬೇಡ್ಕರರನ್ನು ಶ್ರೇಷ್ಠ ಭಾರತೀಯ ಎಂದು ಕರೆದಿರುವುದು ಇನ್ನೆಷ್ಟೋ ಜನರಿಗೆ ನುಂಗಲಾರದ ತುತ್ತಾಗಿರಬಹುದು. ಈ ಫಲಿತಾಂಶ ದಲಿತ ವಿರೋಧಿ ಭಾವನೆಯನ್ನು ಇನ್ನಷ್ಟು ಉದ್ದೀಪಿಸಬಹುದು, ಉತ್ತರ ಪ್ರದೇಶದಲ್ಲಿ ಆದಂತೆ ಜಾತಿ ದೌರ್ಜನ್ಯ ಹೆಚ್ಚಿಸಬಹುದು. 

   ಹಾಗಿದ್ದರೆ ಇಂಥ ಸ್ಪರ್ಧೆಗಳಲ್ಲಿ ದಲಿತರೇಕೆ ಭಾಗವಹಿಸಬೇಕು? ಕಲಾಂ ಅಥವಾ ಯಾವುದೋ ಸಿನಿಮಾ ಹೀರೋ ಅಥವಾ ಕ್ರಿಕೆಟಿಗ ಗಾಂಧಿ ನಂತರದ ಗ್ರೇಟೆಸ್ಟ್ ವ್ಯಕ್ತಿ ಎನಿಸಿಕೊಂಡಿದ್ದರೆ ಏನಾಗುತ್ತಿತ್ತು? ಅದು ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಕ್ಷುಲ್ಲಕಗೊಳಿಸುತ್ತಿತ್ತೇ ಅಥವಾ ಅವರ ಮಹತ್ವವನ್ನು ಕಡಿಮೆ ಮಾಡುತ್ತಿತ್ತೇ? ಅವರು ಶ್ರೇಷ್ಠ ವ್ಯಕ್ತಿ ಎನ್ನಲು ಮಾಧ್ಯಮದ ಧೃಢೀಕರಣ ಅಗತ್ಯವಿದೆಯೆ? ಮಾಧುರಿ ದೀಕ್ಷಿತ್ ಅಥವಾ ಅಮಿತಾಭ್ ಬಚ್ಚನ್ ಸಲಾಮು ಮಾಡಿ ಹಾಗೆಂದು ಹೇಳಬೇಕಾದ ಅಗತ್ಯವಿದೆಯೆ? ನೆನಪಿಡಿ: ನಟ ದಿಲೀಪ್ ಕುಮಾರ್ ಅವರಿಂದ ದೇಣಿಗೆ ಪಡೆಯಲು ಅಂಬೇಡ್ಕರ್ ನಿರಾಕರಿಸಿದ್ದರು. ಅದಕ್ಕವರು ನೀಡಿದ ಕಾರಣ ಸಿನಿಮಾ ಹೀರೋಗಳಿಗೆ ಕ್ಯಾರೆಕ್ಟರ್ ಇರುವುದಿಲ್ಲ ಎನ್ನುವುದು! ಮರಾಠಿ ತಮಾಷಾದ ದಂತಕಥೆ ಎನಿಸಿರುವ ಪತ್ತೆ ಬಾಪುರಾವ್ ಅವರಿಂದಲೂ ಕೂಡಾ ಮಹಾರ್ ಹೆಣ್ಣುಗಳನ್ನು ಅವರ ನರ್ತನ ತಂಡಗಳಲ್ಲಿ ಕುಣಿಸುತ್ತಾರೆಂಬ ಕಾರಣ ಒಡ್ಡಿ ೧೯೨೭ರಲ್ಲಿ ಅವರ ದೇಣಿಗೆ ನಿರಾಕರಿಸಿದ್ದರು.

   ಪ್ರಾಯೋಜಕರು ಗಾಂಧಿ ಅಂಬೇಡ್ಕರರಿಗಿಂತ ದೊಡ್ಡವರೆಂದು ಮೊದಲೇ ಭಾವಿಸಿ ಅವರನ್ನು ಸ್ಪರ್ಧಾಕಣದಿಂದ ಹೊರಗಿಟ್ಟಿದ್ದರ ಬಗೆಗೆ ದಲಿತ ಮನಸ್ಸುಗಳು ತಕರಾರು ತೆಗೆದು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಅರ್ಥಮಾಡಿಕೊಳ್ಳಬಹುದು. ಸ್ಪರ್ಧೆ ಶುರುವಾದಾಗ ಯಾರ್‍ಯಾರದೋ ಜೊತೆ ಅಂಬೇಡ್ಕರ್ ಅವರನ್ನು ನಿಲಿಸಿದ್ದು ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸಿದಂತೇ ಆಯಿತು. ದಲಿತರು ಈ ವಿಷಯದಲ್ಲಿ ತಲೆ ಹಾಕದಿದ್ದರೆ ಆ ಮಹಾನುಭಾವರಲ್ಲಿ ಯಾರಾದರೂ ಒಬ್ಬರು ಆಯ್ಕೆಯಾಗುತ್ತಿದ್ದರು. ಅಂಬೇಡ್ಕರ್ ವ್ಯಕ್ತಿತ್ವ ಪ್ರಾಯೋಜಕರನ್ನು ಖಂಡಿತ ಕಸಿವಿಸಿಗೊಳಿಸಿರುತ್ತದೆ. ಆ ಯಾದಿಯಲ್ಲಿ ಗಾಂಧಿಯನ್ನು ಸೇರಿಸದೇ ಸ್ಪರ್ಧೆಯ ಪ್ರಾಯೋಜಕರು ತಮ್ಮ ಪೇಚಾಟ ಕಡಿಮೆ ಮಾಡಿಕೊಂಡಿದ್ದಾರೆನ್ನಬಹುದು. ಏಕೆಂದರೆ ಗಾಂಧಿ ಏನಾದರೂ ಅಲ್ಲಿದ್ದಿದ್ದರೆ ಅವರು ಖಂಡಿತ ಕೊನೆಯ ಸ್ಥಾನದಲ್ಲಿರುತ್ತಿದ್ದರು. ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿ ದಲಿತರು ಪ್ರಾಯೋಜಕರು ನಗೆಪಾಟಲಿಗೀಡಾಗದಂತೆ ಪಾರುಮಾಡಿದ್ದಾರೆ. ದಲಿತರ ಮಟ್ಟಿಗೆ ಹೇಳುವುದಾದರೆ ಅವರ ಐಡೆಂಟಿಟಿಯನ್ನು ಅದು ಮತ್ತಷ್ಟು ಗಟ್ಟಿಗೊಳಿಸಿತು. 

 

ಆದರೆ ಈ ಫಲಿತಾಂಶ ದಲಿತ ಯುವಜನತೆಯ ಆಶೋತ್ತರದಂತೆ ಅಂಬೇಡ್ಕರ್ ಅವರಿಗೆ ಯಾವ ಗೌರವವನ್ನೂ ತಂದಿಲ್ಲ. ಬದಲಾಗಿ ಅಂಬೇಡ್ಕರರನ್ನು ಗಾಂಧಿಯ ನಂತರ ಎಂದು ಪರಿಗಣಿಸಿರುವುದರಿಂದ; ಅಟಲ್ ಬಿಹಾರಿ ವಾಜಪೇಯಿ, ಲತಾ ಮಂಗೇಶ್ಕರ್ ಅಂಥವರ ಸಾಲಿನಲ್ಲಿ ನಿಲ್ಲಿಸಿರುವುದರಿಂದ ಅವರನ್ನು ತೃಣವಾಗಿಸಲು ಅವಕಾಶ ಮಾಡಿದಂತಾಯಿತು. ಈ ಮತದಾನವನ್ನು ದಲಿತರು ಸಂಪೂರ್ಣ ಬಹಿಷ್ಕರಿಸಿದ್ದರೆ ಕೊನೆಪಕ್ಷ ತಮ್ಮ ನಾಯಕನನ್ನು ಅಂಥವರ ಸಾಲಿನಲ್ಲಿ ನಿಲ್ಲಿಸಿ ಹೋಲಿಸುವುದನ್ನು ಅವರು ಇಷ್ಟಪಡುವುದಿಲ್ಲ ಎಂಬ ಸಂದೇಶವಾದರೂ ರವಾನೆಯಾಗುತ್ತಿತ್ತು. 

ಶ್ರೇಷ್ಠತೆಯ ಶ್ರೇಣೀಕರಣ

ಈ ಮಾಧ್ಯಮ ತಮಾಷೆ ಏನು ಮಾಡಿತೆಂದರೆ ಶ್ರೇಷ್ಠತೆಯನ್ನೇ ಕ್ಷುಲ್ಲಕಗೊಳಿಸಿತು. ಆ ಪಟ್ಟಿ ಬಿಂಬಿಸುವಂತೆ ವ್ಯಕ್ತಿತ್ವದ ಶ್ರೇಷ್ಠತೆ ಅವರ ಅತ್ಯುಚ್ಚ ಸಾಧನೆಯಲ್ಲಿದೆಯೆ? ಹಾಗಾದರೆ ಮಾಧ್ಯಮದ ಕಣ್ಣಿಗೇ ಬೀಳದ ಎಷ್ಟೋ ಸಾಧಕರು ನಮ್ಮಲ್ಲಿದ್ದಾರೆ. ಅದೇ ಮಾನದಂಡವಾಗಿದ್ದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ಅವರನ್ನಾಗಲೀ ಅಥವಾ ಒಲಿಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಅಭಿನವ್ ಬಿಂದ್ರಾ ಅವರನ್ನಾಗಲೀ ಆ ಪಟ್ಟಿಯಿಂದ ಹೇಗೆ ಕೈಬಿಟ್ಟರು?
 ತಮ್ಮ ಅಸ್ಪೃಶ್ಯ ಹಿನ್ನೆಲೆಯಿಂದ ಅವರು ವಿದ್ವತ್ತಿನ ಅತ್ಯುನ್ನತ ನೆಲೆ ತಲುಪಿದರೆಂದು ಅಂಬೇಡ್ಕರ್ ಶ್ರೇಷ್ಠ ವ್ಯಕ್ತಿಯೆ? ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಡಿಎಸ್‌ಸಿ ಪಡೆದ ಮೊದಲ ಭಾರತೀಯ ಅವರು ಎನ್ನುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ನಂತರವೂ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದ ಅವರ ಪಾಂಡಿತ್ಯದ ಬಗೆಗೆ ಎಷ್ಟು ಬೇಕಾದರೂ ಹೇಳಬಹುದು. ಜನಪ್ರಿಯ ಅಭಿಪ್ರಾಯದಂತೆ ಅವರು ಸಂವಿಧಾನ ರಚಿಸಿದರೆಂದು ಶ್ರೇಷ್ಠ ವ್ಯಕ್ತಿಯೆ? ವೈಸರಾಯ್ ಅವರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಭಾರತದ ಮೊತ್ತಮೊದಲ ಕಾನೂನು ಮಂತ್ರಿಯಾಗಿ ಆಡಳಿತದ ಅತ್ಯುಚ್ಚ ಸ್ಥಾನದವರೆಗೆ ಏರಿದರೆಂದು ಅವರು ಶ್ರೇಷ್ಠರೇ? ತಾವು ಹುಟ್ಟಿದ ಅಸ್ಪೃಶ್ಯ ಸಮುದಾಯದ ಏಳ್ಗೆಗೆ ದುಡಿದರೆಂದು ಅವರು ಶ್ರೇಷ್ಠರೇ? ಬೌದ್ಧಧರ್ಮವನ್ನು ಅದು ಹುಟ್ಟಿದ ನಾಡಿನಲ್ಲೇ ಪುನರುಜ್ಜೀವನಗೊಳಿಸಿದರೆಂದು ಅವರು ಶ್ರೇಷ್ಠ ವ್ಯಕ್ತಿಯೆ? ಅಥವಾ ಅವರ ಮೂರ್ತಿಗಳು ಪ್ರಪಂಚದ ಮತ್ಯಾರ ಪ್ರತಿಮೆಗಳಿಗಿಂತ ಅತಿಹೆಚ್ಚು ಸಂಖ್ಯೆಯಲ್ಲಿವೆಯೆಂದು; ಕಾಲಕ್ರಮೇಣ ಪ್ರಾಮುಖ್ಯತೆ ಹೆಚ್ಚುತ್ತಲೇ ಹೋಗುತ್ತಿರುವ ಏಕೈಕ ವ್ಯಕ್ತಿಯೆಂದು; ಅವರ ನೆನಪಿನ ಸಮಾರಂಭಗಳು ಲೆಕ್ಕವಿಲ್ಲದಷ್ಟು ಜನರನ್ನು ಆಕರ್ಷಿಸುವುದೆಂದು ಅವರು ಶ್ರೇಷ್ಠರೇ? ಇಲ್ಲ. ಅಂಬೇಡ್ಕರ್ ಈ ಯಾವುದೇ ಒಂದು ಕಾರಣದಿಂದ ಶ್ರೇಷ್ಠರೆನಿಸಿಕೊಳ್ಳುವುದಿಲ್ಲ. ನಾವು ಆ ತೆರನ ಸಾಧಕರಿಗೆ ಹಗುರವಾಗಿ ಶ್ರೇಷ್ಠ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತೇವಾದರೂ ವೈಯಕ್ತಿಕ ಸಾಧನೆ ಶ್ರೇಷ್ಠತೆಯ ಮಾನದಂಡವಾಗಲು ಸಾಧ್ಯವಿಲ್ಲ. ಏಕೆಂದರೆ ಮೂಲತಃ ವೈಯಕ್ತಿಕ ಸಾಧನೆಯು ತನ್ನತನದ ವಿಸ್ತರಣೆಯೇ ಆಗಿರುತ್ತದೆ. ಯಾರು ‘ಸ್ವ’ ಕಲ್ಪನೆಯಿಂದ ತಮ್ಮ ವ್ಯಕ್ತಿತ್ವವನ್ನು ಹೊರತಂದು ವಿಶ್ವಾತ್ಮಕ ಉದ್ದೇಶ ಹೊತ್ತು ಕೆಲಸ ಮಾಡುತ್ತಾರೋ ಅವರನ್ನು ಮಾತ್ರ ಶ್ರೇಷ್ಠ ಎಂದು ಕರೆಯಬಹುದು.

ಅಂಬೇಡ್ಕರ್ ಏಕೆ ಶ್ರೇಷ್ಠವ್ಯಕ್ತಿಯೆಂದರೆ ಈ ಭೂಗ್ರಹ ಬದುಕಲು ಉತ್ತಮ ಸ್ಥಳವಾಗಿರುವಂತೆ ಮಾಡಲು ಅವರು ಪ್ರಾಮಾಣಿಕವಾಗಿ ಯತ್ನಿಸಿದರು. ತಮ್ಮ ಜಾತಿಯ ಜನರ ಏಳ್ಗೆಗಾಗಿಯೇ ಹೋರಾಡಿದ ವ್ಯಕ್ತಿಯೆಂದು ಖಂಡಿತ ಅವರನ್ನು ಬಿಂಬಿಸಲಾಗದು. ಮನುಷ್ಯನ, ಅಷ್ಟೇಕೆ ಎಲ್ಲ ಜೀವಿಗಳ ನೈಸರ್ಗಿಕ ಪ್ರವೃತ್ತಿ ತಮ್ಮದೇ ಸಮುದಾಯಕ್ಕೆ ಒಳಿತನ್ನುಂಟುಮಾಡಲು ಯತ್ನಿಸುವುದು. ಅದು ಮೂಲಭೂತ ಬುಡಕಟ್ಟು ಗುಣ. ಅಂಥ ಸಾಮುದಾಯಿಕ ಕೆಲಸವನ್ನು ಸುತ್ತಲ ಬದುಕಿನೊಂದಿಗೆ ಅಂತರ್‌ಸಂಬಂಧ ಹೊಂದಿದ ತಮ್ಮ ವ್ಯಕ್ತಿತ್ವದ, ತಮ್ಮ ಕುಟುಂಬದ ವಿಸ್ತರಣೆಯಾಗಿ ಭಾವಿಸಿಯೂ ಮಾಡಬಹುದು. ಆದರೆ ಅಂಬೇಡ್ಕರರು ದಲಿತರ ಪರವಾಗಿ ತನ್ನ ಜಾತಿಯ ಜನ ಎಂದಷ್ಟೇ ನಿಂತಿದ್ದರೆ ಅವರನ್ನು ಶ್ರೇಷ್ಠ ವ್ಯಕ್ತಿಯೆಂದು ಹೇಳಲಾಗುತ್ತಿರಲಿಲ್ಲ. ಅವರ ದಲಿತ ಪ್ರಶ್ನೆ ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವವಾದಿಯನ್ನಾಗಿಸಿತು. ಇಲ್ಲದಿದ್ದರೆ ನಿಂತನೀರಾಗಿ ಕೊಳೆಯತೊಡಗಿದ್ದ ಅದು ಖಂಡಿತ ವಿನಾಶ ತಲುಪುತ್ತಿತ್ತು. ಶೋಷಣೆ ಮತ್ತು ವಂಚನೆಗಳಿಂದ ಮನುಷ್ಯನನ್ನು ಬಿಡುಗಡೆಗೊಳಿಸಲು ಅದು ಅತ್ಯಾವಶ್ಯಕ, ಅನಿವಾರ್ಯ ಕ್ರಮವಾಗಿತ್ತು. ಸಂಕುಚಿತ ರಾಷ್ಟ್ರೀಯತೆಯ ಧೋರಣೆಗಳಿಂದಾಚೆ ಅವರ ದೃಷ್ಟಿಕೋನ ಹರಡಿಕೊಂಡಿತ್ತು. ಮಾನವತ್ವವು ಸ್ವಾತಂತ್ರ್ಯ, ಸೋದರತೆ ಮತ್ತು ಸಮಾನತೆಗಳಲ್ಲಿದೆಯೆಂಬ ಧೃಢನಂಬಿಕೆ ಹೊಂದಿತ್ತು. ಕಮ್ಯುನಿಸ್ಟರಂತೆ ಮೊದಲೇ ಸಿದ್ಧಗೊಳಿಸಿದ ಚೌಕಟ್ಟಿನಲ್ಲಿ ಜಾತಿಯನ್ನು ಅರ್ಥಮಾಡಿಸಲು ಹೊರಡದೇ ಜಾತಿ ಪದ್ಧತಿಯನ್ನು ಅದರ ಅಸ್ತಿತ್ವದ ನೈಜ ರೂಪದಲ್ಲೇ ಮುಖಾಮುಖಿಯಾಗಿದ್ದರಲ್ಲಿ ಅವರ ಶ್ರೇಷ್ಠತೆಯಿದೆ. ಅವರ ದೃಷ್ಟಿಕೋನಕ್ಕೆ ಸಂಪೂರ್ಣ ವಿರುದ್ಧವಾಗಿದ್ದ ಜಾತಿಪದ್ಧತಿಯನ್ನು ಅವರು ಕಿತ್ತೊಗೆಯಲೇಬೇಕಿತ್ತು. ಜಾತಿ ಕಾಯಿಲೆಯ ರೋಗಪತ್ತೆ ಮತ್ತು ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿಲ್ಲದೇ ಇರಬಹುದು. ಆದರೆ ಅದು ಬೇರೆಯದೇ ವಿಷಯ. ಈ ದೃಷ್ಟಿಯಿಂದ ಪರಿಶೀಲಿಸಿದರೆ ಅವರು ಯಾವುದೇ ವ್ಯಕ್ತಿಗಿಂತ ಎತ್ತರದವರಾಗಿ ಕಾಣಿಸುತ್ತಾರೆ. ಆದರೂ ಅವರನ್ನು ಅತಿಶ್ರೇಷ್ಠ ಎಂದು ಶ್ರೇಣೀಕರಣಕ್ಕೊಳಪಡಿಸುವುದೇ ಸಂಕುಚಿತ ಮನೋಭಾವವಾಗಿ ಹಾಗೂ ತಪ್ಪು ಗ್ರಹಿಕೆಯಾಗಿ ಕಾಣಿಸುತ್ತದೆ.

ನವ ಉದಾರವಾದದ ಅಜೆಂಡಾ

ಈ ಸ್ಪರ್ಧೆ ಶ್ರೇಷ್ಠತೆಯನ್ನು ಜನಪ್ರಿಯಗೊಳಿಸುವ ಒಂದು ಪ್ರಯತ್ನವಾಗಿದೆ. ಅದು ಸೂಕ್ಷ್ಮ ಅಂಶಗಳನ್ನು ಗಮನಿಸುವುದೇ ಇಲ್ಲ. ನಾವು ಶ್ರೇಷ್ಠರೆಂದುಕೊಂಡ ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರೂ ಸಹಾ ವಿಶ್ವಾತ್ಮಕ ದೃಷ್ಟಿಕೋನ ಹೊಂದಿಲ್ಲ. ಅವರ ಉದ್ದೇಶಗಳು ತಮ್ಮ ಜಾತಿ ಆಳ್ವಿಕೆಯನ್ನು ಪುನರ್ ಸ್ಥಾಪಿಸುವುದರಿಂದ ಹಿಡಿದು ವರ್ಗ ನಿಯಮಗಳನ್ನು ಹೊಸದಾಗಿ ಕಟ್ಟುವತನಕ ಹರಡಿಕೊಂಡಿದ್ದವು. ಬಹಳಷ್ಟು ಜನ ಸಂಕುಚಿತ ರಾಷ್ಟ್ರೀಯತೆಯಿಂದ ಪ್ರೇರಿತರಾಗಿದ್ದರೇ ಹೊರತು ವಿಶ್ವಾತ್ಮಕ ಚಿಂತನೆಗಳನ್ನು ಹೊಂದಿರಲಿಲ್ಲ. ಭಗತ್ ಸಿಂಗನಂತಹ ಎಲ್ಲೋ ಕೆಲ ವ್ಯಕ್ತಿಗಳಷ್ಟೇ ಇಂಥ ಕ್ಷುಲ್ಲಕ ವಿಷಯಗಳಿಂದಾಚೆ ಶೋಷಣೆಯಿಲ್ಲದ ಜಗತ್ತಿನ ಸ್ಥಾಪನೆಯತ್ತ ತಮ್ಮ ದೃಷ್ಟಿಕೋನ ವಿಸ್ತರಿಸಿಕೊಂಡರು. ಸದ್ಯ, ಭಗತ್ ಸಿಂಗ್ ಶ್ರೇಷ್ಠರ ಪಟ್ಟಿಯಲ್ಲಿ ಸೇರುವ ಅಗೌರವದಿಂದ ಪಾರಾಗಿದ್ದಾನೆ!

ಹೋಲಿಕೆ, ಸ್ಪರ್ಧೆ, ಚರ್ಚೆ ಇವೆಲ್ಲ ನವಉದಾರವಾದದಿಂದ ಉತ್ತೇಜಿತಗೊಂಡ ಮಾರುಕಟ್ಟೆ ಭಾಷೆಯ ಪದಗಳು. ಈ ಜಗತ್ತಿನ ಪ್ರತಿಯೊಂದನ್ನೂ ಸರಕಾಗಿಸಿ, ಬೆಲೆ ಕಟ್ಟಿ, ಶ್ರೇಣೀಕರಣಗೊಳಿಸಬಹುದು ಎನ್ನುವುದು ಅದರ ಮೂಲಭೂತ ಧೋರಣೆ. ಈ ನವಉದಾರವಾದಿಗಳು ಸೌಂದರ್ಯದ ಮಾಪಕವನ್ನು ಸಿದ್ಧಗೊಳಿಸಿ, ಹೆಣ್ಣಿನ ಸೌಂದರ್ಯವನ್ನೇ ರೂಪದರ್ಶಿಯಾಗಿ ಬಳಸಿಕೊಂಡು, ಸೌಂದರ್ಯ ಸ್ಪರ್ಧೆಗಳನ್ನು ಆಯೋಜಿಸಿದರು. ಕೊಳ್ಳುಬಾಕ ಸಂಸ್ಕೃತಿಯು ಹೆಣ್ಣಿನ ದೇಹವನ್ನು, ಅಷ್ಟೇ ಅಲ್ಲ ಪ್ರೀತಿ, ಭಾವನೆಗಳು, ವಿರಾಮ ಮತ್ತು ಖಾಸಗಿತನವನ್ನೂ ಬಳಸಿಕೊಂಡು ಎಲ್ಲರೂ ಮಾರುಕಟ್ಟೆ ಅವಲಂಬಿಸುವಂತೆ ಮಾಡುತ್ತದೆ. ಭಾರತದ ಶ್ರೇಷ್ಠ ವ್ಯಕ್ತಿಯನ್ನು ಆರಿಸುವುದೂ ಇದರ ಒಂದು ಭಾಗವೇ. ಜನರ ಪ್ರೀತಿ, ದ್ವೇಷ, ಸಿಟ್ಟನ್ನೂ ಮನರಂಜನಾ ಮೌಲ್ಯವುಳ್ಳ ಸರಕಾಗಿಸಿ ಅವರ ಗಮನವನ್ನು ಮುಖ್ಯ ವಿಷಯಗಳಿಂದ ಬೇರೆಡೆ ಸೆಳೆದು ಗ್ರಾಹಕ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ, ಅದೇ ವೇಳೆಗೆ ಅದರಲ್ಲಿ ಪಾಲ್ಗೊಂಡಿದ್ದ ವ್ಯಾಪಾರೀ ಸಮೂಹಗಳಿಗೆ ಲಾಭ ಗಿಟ್ಟಿಸುವುದು ಅದರ ಉದ್ದೇಶ. ಈ ಸ್ಪರ್ಧೆ ಅನವಶ್ಯ ಚರ್ಚೆ, ವಿವಾದ ಹುಟ್ಟುಹಾಕಿ ಚಾನೆಲ್‌ಗಳ ರೇಟಿಂಗ್ ಪಾಯಿಂಟ್ ಹೆಚ್ಚಿಸಿದ್ದನ್ನು ನೋಡಬಹುದು. ಈ ಚರ್ಚೆ ಮತ್ತು ವಿವಾದವನ್ನು ಜೀವಂತವಾಗಿರಿಸಲೆಂದೇ ಲಕ್ಷಾಂತರ ಫೋನ್ ಕರೆ ಮತ್ತು ಎಸ್ಸೆಮ್ಮೆಸ್‌ಗಳನ್ನು ಉತ್ತೇಜಿಸಲಾಯಿತು. ಅವು ನೇರವಾಗಿ ಫೋನ್ ಕಂಪನಿಗಳ ಲಾಭ ಹೆಚ್ಚಿಸಿದವು. ಈ ಸ್ಪರ್ಧೆಯ ಪರೋಕ್ಷ ಪರಿಣಾಮವೆಂದರೆ ಮಾರುಕಟ್ಟೆ ಪಿತಾಮಹರು ಮತ್ತು ಮಾಧ್ಯಮದವರಿಗೆ ದಲಿತ ಮಾರುಕಟ್ಟೆಯ ಆಳಗಲ ತಿಳಿದಿದ್ದು.  

ನವ ಉದಾರವಾದವು ಜಾತಿವಿನಾಶಕ್ಕೆ ಯಾವ ಕ್ರಮ ಕೈಗೊಳ್ಳದಿದ್ದರೂ ಆ ವಿಷಯದ ಬಗೆಗೆ ಮಾತನಾಡಲು ಅದಕ್ಕೆ ಇರುಸುಮುರುಸು. ಜಾತಿ ಈಗ ಇಲ್ಲವೇ ಇಲ್ಲ ಎಂದು ಸಾಧಿಸುವುದು ಅದಕ್ಕೆ ಅನುಕೂಲಕರ. ಈ ಕ್ಷುಲ್ಲಕ ಸ್ಪರ್ಧೆಯು ಅದರ ಉದ್ದೇಶ ಏನೆಂಬುದನ್ನು ಸ್ಪಷ್ಟಗೊಳಿಸಿದೆ. ಅಂಬೇಡ್ಕರ್ ಗೆಲುವಿನೊಂದಿಗೆ ಭಾರತದ ನವ ಉದಾರವಾದಿ ಗಣ್ಯರು ಭಾರತಕ್ಕೆ ಜಾತಿ ಪೂರ್ವಗ್ರಹವೇ ಇಲ್ಲವೆಂದು ಘೋಷಿಸುತ್ತಿದ್ದಾರೆ. ಮಾರುಕಟ್ಟೆಯ ದೊಡ್ಡ ಕೊರತೆಯೊಂದು ಇದರಿಂದ ನಿವಾರಣೆಯಾದಂತಾಗಿದೆ. ನವ ಉದಾರವಾದವು ಜಾಗತೀಕರಣದ ಆರಂಭದ ದಿನಗಳಿಂದಲೂ ದಲಿತರಿಗೆ ಅದು ಹೇಗೆ ಲಾಭದಾಯಕ ಎಂದು ಮನವೊಲಿಸಿ ಹೇಳುತ್ತಲೇ ಬಂದಿದೆ. ದಲಿತ ಗಣ್ಯರನ್ನು, ದಲಿತ ಚೇಂಬರ್ಸ್ ಆರ್ಫ ಕಾಮರ್ಸ್ ಸಂಸ್ಥೆಗಳನ್ನು ಅದು ಪ್ರೋತ್ಸಾಹಿಸುತ್ತ ಬಂದಿದೆ. ಆದರೆ ಇಂಥ ಯೋಚನೆಗಳನ್ನು ಅದರ ಮುಖಬೆಲೆಯಂತೆ ಪರಿಗಣಿಸಲು ಬರುವುದಿಲ್ಲ. ಈಗ ನವ ಉದಾರವಾದದ ಪ್ರತಿಪಾದಕರು ತಮ್ಮ ಬತ್ತಳಿಕೆಯಲ್ಲಿ ದಲಿತ ಮಾರುಕಟ್ಟೆ ಎಂಬ ಹೊಸದೊಂದು ಅಸ್ತ್ರವನ್ನು ಸೇರಿಸಿಕೊಂಡಂತಾಯಿತು ಅಷ್ಟೇ. 

ನರಹಂತಕ ಮೋದಿ ಕ್ರೂರಿ ಅಲ್ಲವೆ?- ಸನತ್‌ಕುಮಾರ ಬೆಳಗಲಿ

ವಾರ್ತಾಭಾರತಿ 


‘ವಾರ್ತಾಭಾರತಿ’ಗೆ ಹತ್ತು ವರ್ಷ ತುಂಬಿದ್ದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣ ಸಂಘಪರಿವಾರದ ಕೆಲವರಿಗೆ ಚುಚ್ಚಿದಂತಾಗಿದೆ. ಆ ದಿನ ಗುಜರಾತಿನ ನರಹಂತಕ ಮುಖ್ಯಮಂತ್ರಿಯನ್ನು ಅನಂತಮೂರ್ತಿ ಕ್ರೂರಿ ಎಂದು ಕರೆದಿದ್ದರು. ಆತನನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಇದರಿಂದ ಕೆರಳಿದ ರಾಜ್ಯದ ಎರಡು ಪತ್ರಿಕೆಗಳು ನಿತ್ಯವೂ ನಾಲ್ಕಾರು ಪುಟಗಳನ್ನು ಮೂರ್ತಿಯವರ ತೇಜೋ ವಧೆಗೆ ಮೀಸಲಾಗಿರಿಸಿವೆ. ಒಂದು ಪತ್ರಿಕೆಯಲ್ಲಂತೂ ಓದುಗರ ಪತ್ರಗಳನ್ನು ಸೃಷ್ಟಿಸಿ ಪ್ರಕಟಿಸಲಾಗುತ್ತಿದೆ. ಅತ್ಯಂತ ಕೆಟ್ಟ ಭಾಷೆಯಲ್ಲಿ ನಾಡಿನ ಹೆಮ್ಮೆಯ ಲೇಖಕನನ್ನು ಟೀಕಿಸಲಾಗುತ್ತಿದೆ. ನರೇಂದ್ರ ಮೋದಿಯನ್ನು ಕ್ರೂರಿ ಎಂದು ಬಣ್ಣಿಸಿದ ಅನಂತಮೂರ್ತಿ ಮಹಾಮೂರ್ಖ, ದರಿದ್ರ ಸಾಹಿತಿ, ಇವರಿಗೇಕೆ ಬೇಕು ರಾಜಕೀಯ, ಎಂದೆಲ್ಲ ಅತ್ಯಂತ ಅಸಭ್ಯ ಭಾಷೆಯಲ್ಲಿ ಬೈಗುಳಗಳ ಸುರಿಮಳೆ ಮಾಡಲಾಗುತ್ತಿದೆ. ಒಬ್ಬ ಅವಿವೇಕಿಯಂತೂ ಅನಂತಮೂರ್ತಿ ಅವರನ್ನು ಸುದ್ದಿಜೀವಿ ಎಂದು ಕರೆದಿದ್ದಾನೆ. ‘‘ಇಂಥ ಸಮಾಜದ್ರೋಹಿ, ದೇಶದ್ರೋಹಿಗಳನ್ನು ಜಾತ್ಯತೀತ ವಾದಿಗಳೇ ಹುಲುಸಾದ ಬೆಳೆಗಳ ಮದ್ಯದ ಕಳೆ(ಜೊಂಡಿ)ಯಂತೆ ಇಂಥವರನ್ನು ಬುಡಸಮೇತ ಕಿತ್ತು ಹಾಕಬೇಕೆಂದು’ ಬರೆದಿದ್ದಾನೆ.

ಕಳೆಯನ್ನು ಕಿತ್ತು ಹಾಕಿದಂತೆ ಇಂಥವರನ್ನು ಹೊಸಕಿ ಹಾಕುವುದು ಆರು ದಶಕಗಳ ಹಿಂದೆ ಇವರದೇ ಪರಿವಾರಕ್ಕೆ ಸೇರಿದ ನಾಥುರಾಮ ಗೋಡ್ಸೆ ಇದೇ ರೀತಿ ಮಹಾತ್ಮ ಗಾಂಧಿ ಅವರ ಜೀವ ತೆಗೆದಿದ್ದ. ಬಾಬರಿ ಮಸೀದಿ ನೆಲಸಮಗೊಳಿಸಿ ಇದೇ ರೀತಿ ಸಾವಿರಾರು ಜನರ ಜೀವ ತೆಗೆದ ಪರಂಪರೆ ಇವರದು. 2002ರಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಅಮಾಯಕ ಅಲ್ಪಸಂಖ್ಯಾತರನ್ನು ಕೊಂದವರು ಇವರದೆ ಸ್ಫೂರ್ತಿಯ ಚಿಲುಮೆ ನರೇಂದ್ರ ಮೋದಿ. ಇಂಥ ಪರಂಪರೆಗೆ ಸೇರಿದವರು ಈಗ ಮಾಧ್ಯಮಗಳ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತಿರುವುದರಿಂದ ಇಂಥ ಜೀವ ತೆಗೆಯುವಂಥ ಲೇಖನಗಳು ಪ್ರಕಟವಾಗುತ್ತವೆ.


ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನರಹಂತಕನೆಂಬುದು ಬರೀ ಆರೋಪವಲ್ಲ. ಅದು ಸಾಬೀತಾದ ಸತ್ಯ. ನರೋಡಾ ಪಾಟೀಯಾದಲ್ಲಿ 2002ರಲ್ಲಿ ನಡೆದ 97 ಅಲ್ಪಸಂಖ್ಯಾತರ ಕಗ್ಗೊಲೆಗೆ ಸಂಬಂಧಿಸಿದಂತೆ ಮಾಜಿ ಸಚಿವೆ ಹಾಲಿ ಶಾಸಕಿ ಮತ್ತು ಮೋದಿಗೆ ಆಪ್ತವಾಗಿರುವ ಮಾಯಾಬೆನ್ ಕೊಡ್ನಾನಿಗೆ 28 ವರ್ಷ ಮತ್ತು ಭಜರಂಗದಳದ ಮುಖಂಡ ಬಾಬು ಭಜರಂಗಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದ ನಂತರವೂ ಕರ್ನಾಟಕದ ಕೆಲ ಬಾಲಂಗೋಚಿಗಳು ಮೋದಿ ಪರ ವಕಾಲತ್ತು ವಹಿಸುತ್ತಿವೆ.


ಡಾ.ಯು.ಆರ್.ಅನಂತಮೂರ್ತಿ ನಾಡಿನ ಸಾಕ್ಷಿಪ್ರಜ್ಞೆ. ಅವರು ಬರೀ ಸಾಹಿತಿಯಲ್ಲ. ಈ ಸಮಾಜದ, ದೇಶದ ಆಗು ಹೋಗುಗಳ ಬಗ್ಗೆ ಚಿಂತಿಸುತ್ತ ಬಂದವರು. ಶೋಷಿತ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ, ಅನ್ಯಾಯ ವಾದಾಗ ಮಾತ್ರವಲ್ಲ, ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ರೈತರ ಭೂಮಿ ಕಿತ್ತು ಕೊಳ್ಳತೊಡಗಿದಾಗ, ಬಳ್ಳಾರಿಯಲ್ಲಿ ಗಣಿಗಾರಿಕೆ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿಯಾಗುತ್ತಿರುವಾಗ ದನಿಯೆತ್ತಿ ಪ್ರತಿಭಟಿಸಿದವರು. ಅಂಥವರ ಬಗ್ಗೆ ಬಾಯಿಗೆ ಬಂದಂತೆ ಕೆಟ್ಟ ಭಾಷೆಯಲ್ಲಿ ಬೈಯುವುದು ನೀಚತನವಾಗುತ್ತದೆ. ಗಣಿಧಣಿಗಳ ಎಂಜಲನ್ನು ಚಪ್ಪರಿಸುತ್ತಿರುವವರು ಮಾತ್ರ ಹೀಗೆ ಬೈಯಬಹುದಷ್ಟೆ.
ಈಗ ಪತ್ರಿಕೆಗಳಲ್ಲಿ ಅನಂತಮೂರ್ತಿ ಅವರ ವಿರುದ್ಧ ವಿಷ ಕಕ್ಕುತ್ತಿರುವವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಇವರೆಲ್ಲ ಆರೆಸ್ಸೆಸ್‌ಗಳಲ್ಲಿ ಕವಾಯಿತು ಮಾಡಿ ಬಂದವರು. ದೇಹವನ್ನು ಮಾತ್ರ ಬೆಳೆಸಿಕೊಂಡು ಮೆದುಳನ್ನು ಮರಗಟ್ಟಿಸಿ ಕೊಂಡವರು. ಕರ್ನಾಟಕದ ಬಿಜೆಪಿ ಸರಕಾರದ ಹಗರಣಗಳು ಹೊಲಸು ನಾರುತ್ತಿದ್ದಾಗ ಈ ದುರ್ವಾಸನೆ ಇವರ ಮೂಗಿಗೆ ಬೀಳಲಿಲ್ಲ. ಬಳ್ಳಾರಿಯ ಗಣಿಗಾರಿಕೆಯ ಧೂಳು ಇವರ ಕಣ್ಣನ್ನೆ ಕುರುಡಾಗಿಸಿತು. ಈ ನೆಲದ ವಿದ್ಯಮಾನಗಳ ಬಗ್ಗೆ ತೆಪ್ಪಗಿದ್ದವರು ಈಗ ನರೇಂದ್ರ ಮೋದಿ ಸಮರ್ಥನೆಗೆ ಇಳಿದಿದ್ದಾರೆ.

ನಾಥೂರಾಮ ಗೋಡ್ಸೆಯನ್ನು ಹಂತಕ ಎನ್ನುವದಾದರೆ, ವೀರಪ್ಪನ್‌ನ್ನು ಕೊಲೆಗಡುಕ ಎಂದು ಕರೆಯುವುದಾದರೆ, ಕಸಬ್‌ನನ್ನು ಭಯೋತ್ಪಾದಕ ಎಂದು ಕರೆಯುವುದಾದರೆ 2000ಕ್ಕೂ ಹೆಚ್ಚು ಜನರ ಕಗ್ಗೊಲೆಗೆ ಕಾರಣನಾದ ನರೇಂದ್ರ ಮೋದಿಯನ್ನು ಕ್ರೂರಿ ಎಂದು ಕರೆಯಬಾರದೇಕೆ? ಅಹ್ಮದಾಬಾದ್, ನರೋಡಾ ಪಾಟೀಯಾ ಸೇರಿದಂತೆ ಗುಜರಾತ್‌ನಲ್ಲಿ ಸಾವಿರಾರು ಜನರ ಹತ್ಯಾಕಾಂಡ ನಡೆಯುತ್ತಿರುವಾಗ ಕಾನೂನು ಶಿಸ್ತುಪಾಲನೆ ಮಾಡಬೇಕಾದ ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಆತನ ಸಂಪುಟದ ಸಚಿವರು ಕಂಟ್ರೋಲ್ ರೂಮಿನಲ್ಲಿ ಕುಳಿತು ಗಲಭೆಕೋರರನ್ನು ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಿದರು. ಇಂಥವರನ್ನು ಕ್ರೂರಿ ಎನ್ನದೇ ಇನ್ನೆನೆಂದು ಕರೆಯಬೇಕು.

ಸಂಘ ಪರಿವಾರದಿಂದ ಬಂದ ಬಿಜೆಪಿಯ ಬಹುತೇಕ ನಾಯಕರು ಭ್ರಷ್ಟಾಚಾರದ ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಈಗ ನರೇಂದ್ರ ಮೋದಿ ಒಬ್ಬರೆ ಈ ಮತಾಂಧರ ಹೀರೋ ಆಗಿ ಮಿಂಚುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಗುಜರಾತ್ ಭಾರೀ ಅಭಿವೃದ್ಧಿ ಸಾಧಿಸಿದೆ ಎಂದು ಇವರು ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದಾರೆ. ಆದರೆ ಪೌಷ್ಟಿಕಾಂಶಗಳ ಕೊರತೆಯಿಂದ ನರಳುವವರ ಸಂಖ್ಯೆ ರಾಜ್ಯದಲ್ಲಿ ಜಾಸ್ತಿ ಇದೆ ಎಂದು ಅಂಕಿ-ಅಂಶಗಳು ಸಾಬೀತು ಪಡಿಸಿವೆ.

ಗುಜರಾತ್‌ನಲ್ಲಿ ಮೋದಿ ಸ್ವರ್ಗವನ್ನೇ ಧರೆಗಿಳಿಸಿದ್ದಾರೆಂದು ಕಾರ್ಪೊರೇಟ್ ಮಾಧ್ಯಮ ಗಳೂ ಪ್ರಚಾರ ಮಾಡುತ್ತಿವೆ. ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ಏನೆಂದು ಎಲ್ಲರಿಗೂ ಗೊತ್ತಿದೆ. 2011ರ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ ಭಾರತದ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಕೈಗಾರಿಕಾ ಮುಷ್ಕರಗಳು ಗುಜರಾತ್‌ನಲ್ಲಿ ನಡೆದಿವೆ. ಇತ್ತೀಚಿಗಿನ ನರೋಡಾದ ರಿಲಯನ್ಸ್ ಜವಳಿ ಕಾರ್ಖಾನೆಯಲ್ಲಿ ಮುಷ್ಕರ ನಡೆಯಿತು. ಇಲ್ಲಿ 1,100 ಕಾಯಂ ಕೆಲಸಗಾರರಿದ್ದರೆ, ಗುತ್ತಿಗೆ ಕಾರ್ಮಿಕರ ಸಂಖ್ಯೆ 4,400. ಇಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾಯಂ ಕಾರ್ಮಿಕರಿಗೆ ಸಿಗುವ ಸಂಬಳ 5,000 ರೂ. ಮಾತ್ರ. ಇಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ರೂಪಾಯಿ 85ರಿಂದ 100 ಮಾತ್ರ ದಿನಗೂಲಿ. ಇಂಥವರು ಮತ್ತು ಇವರ ಹೆಂಡತಿ ಮಕ್ಕಳು ಎಂಥ ಪೌಷ್ಟಿಕ ಆಹಾರ ತಿನ್ನಲು ಸಾಧ್ಯ?

ಗುಜರಾತಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಸಾಕಷ್ಟು ದಾಖಲಾಗಿವೆ. ದಲಿತರ ಮೇಲೆ ದೌರ್ಜನ್ಯ ಮಿತಿ ಮೀರಿದೆ. ಆದರೂ ಕಾರ್ಪೋರೇಟ್ ಕಂಪೆನಿಗಳಿಗೆ ಈ ಮೋದಿ ಸಕಲ ಸವಲತ್ತು ಒದಗಿಸುತ್ತಿರುವುದರಿಂದ ಅಭಿವೃದ್ಧಿಯ ರೂವಾರಿಯಾಗಿ ಮಿಂಚುತ್ತಿದ್ದಾನೆ. ಸಂಘ ಪರಿವಾರದಲ್ಲಿ ಮೋದಿ ನಾಯಕತ್ವದ ಬಗ್ಗೆ ಒಮ್ಮತವಿಲ್ಲ. ಕರ್ನಾಟಕದ ಕೆಲ ತಲೆಯಲ್ಲಿ ಮೆದುಳಿಲ್ಲದ ವಿಚಿತ್ರ ಪ್ರಾಣಿಗಳು ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದರೂ ಬಿಜೆಪಿ ರಾಷ್ಟ್ರೀಯ ನಾಯಕತ್ವದಲ್ಲಿ ಮೋದಿಗೆ ತೀವ್ರ ವಿರೋಧವಿದೆ.
ಅಡ್ವಾಣಿಯಿಂದ ಹಿಡಿದು ಸುಶ್ಮಾ ಸ್ವರಾಜ್‌ವರೆಗೆ ಎಲ್ಲರೂ ಮೋದಿ ದಿಲ್ಲಿಗೆ ಬರುವುದನ್ನು ಸಹಿಸುವುದಿಲ್ಲ. ಅನಂತಮೂರ್ತಿ ಅವರ ಬಾಯಿ ಮುಚ್ಚಿಸಲು ಹೊರಟ ಕರ್ನಾಟಕದ ಮೋದಿಯ ಹೊಗಳುಭಟ್ಟರು ಮೊದಲು ತಮ್ಮ ಪರಿವಾರದ ಒಡಕನ್ನು ಸರಿಪಡಿಸಿಕೊಳ್ಳಲಿ.

ದ್ವಿಪದಿ ಹನಿಗಳು

-ಸಹಗಮನ 


Bird Nest PRINT ( Painting Robin Bird Nest Painting 8x10) Brown room decor brown wall hanging gold robin egg blue (Bird with nest print)

 
 
ಕಣ್ಣು ತೆರೆಯುತ್ತೀ ಬಣ್ಣವೇರುತ್ತೀ ತಣ್ಣಗಾಗುತ್ತೀ
ಅನಿ, ಇದು ನಿನ್ನದಷ್ಟೇ ಅಲ್ಲ, ಸೂರ್ಯನ ನಿತ್ಯದ ಕಥೆ

***

ಎಲ್ಲೆಲ್ಲಿಯದೋ ನಾರು ಎಲೆ ಕಡ್ಡಿ ಪವಣಿಸಿ ನೇಯ್ದ ಹಕ್ಕಿ ಗೂಡು
ಅನಿ, ಕಾಂಕ್ರೀಟು ಬಂಗಲೆಯಂತೆ ದಿನವೊಪ್ಪತ್ತಿನಲ್ಲಿ ಕಟ್ಟುವುದಲ್ಲ

***

ಅರಮನೆ, ಮಹಲು, ಇಮಾರತುಗಳಲ್ಲಿ ಪ್ರೇಮದ ಮೊಟ್ಟೆ ಒಡೆಯುವುದಿಲ್ಲ   
ಅನಿ, ರೆಕ್ಕೆ ಬಿಚ್ಚಿ ಅರಸಿ ತಂದೇ ಕಟ್ಟಬೇಕು  ಆ ಹಕ್ಕಿಗೂಡು

***

ಈ ಪದ, ಪುಂಜ, ಭಾಷೆ, ನಾಣ್ಣುಡಿ ಎಲ್ಲ ಹಳೆಯದಾಯಿತು 
ಅನಿ, ನಾಲಿಗೆಯಿಲ್ಲದ ಲೋಕಕ್ಕೆ ನಮ್ಮ ಪ್ರೇಮವೇ ಹೊಸ ಭಾಷೆಯಾಯಿತು

***

ದೀಪ ಹಚ್ಚುವುದಷ್ಟೇ ನಮ್ಮ ಕೆಲಸ
ಅನಿ, ಮಿಕ್ಕ ಮಾತು ಬೆಳಕಿಗೇ ಬಿಟ್ಟುಬಿಡುವ. 

***

ಮೊಗ್ಗು ಆಕಾಶಮುಖಿ ಹೂವು ಸೂರ್ಯಮುಖಿ ಉದುರುವ ಪಕಳೆ ನೆಲಮುಖಿ.
ಅನಿ, ಯಾರಿಗೂ ಇಲ್ಲ ದಿಕ್ಕು ಬದಲಿಸದೇ ಬೆಳೆಯುವ ರಿಯಾಯಿತಿ.

Saturday, September 29, 2012

ಮಂಜುಲ ಕಾರ್ಟೂನ್ಸ್

ಇಂಡಿಯಾದ ನಿಜ ಬದುಕು : ಎರಡು ಫೋಟೋ


1

 
2
 

 

ಉಗ್ರರನ್ನು ಸೃಷ್ಟಿಸುತ್ತಿರುವ ಪೊಲೀಸ್ ವ್ಯವಸ್ಥೆ


ವಾರ್ತಾಭಾರತಿ ಸಂಪಾದಕೀಯ 


ಇತ್ತೀಚೆಗೆ ಗುಜರಾತ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ, ಇಡೀ ದೇಶದ ಪೊಲೀಸರಿಗೆ ಅನ್ವಯಿಸುವಂತಹದು. ಒಬ್ಬನ ಹೆಸರು ‘ಖಾನ್’ ಎನ್ನುವ ಕಾರಣಕ್ಕಾಗಿಯೇ ‘ಆತ ಭಯೋತ್ಪಾದಕ ಎಂಬ ಅನುಮಾನಕ್ಕೆ ಗುರಿಯಾಗಬಾರದು’ ಎಂಬ ತೀಕ್ಷ್ಣ ನುಡಿಯನ್ನು ಸುಪ್ರೀಂಕೋರ್ಟ್ ಪೊಲೀಸರಿಗೆ ಸೂಚಿಸಿದೆ. ನಮ್ಮ ನ್ಯಾಯ ವ್ಯವಸ್ಥೆಯೇ ಇಂತಹದೊಂದು ಸೂಚನೆಯನ್ನು ಪೊಲೀಸರಿಗೆ ನೀಡಬೇಕಾದರೆ ಪರಿಸ್ಥಿತಿ ಎಲ್ಲಿಯವರೆಗೆ ತಲುಪಿರಬಹುದು ಎನ್ನುವುದನ್ನು ನಾವು ಊಹಿಸಬೇಕಾಗಿದೆ. ಇದನ್ನು ಸುಪ್ರೀಂಕೋರ್ಟ್ ಆಡು ಮಾತಾಗಿ ಹೇಳಿರುವು ದಲ್ಲ. 1994ರಲ್ಲಿ ಅಹ್ಮದಾಬಾದ್‌ನ ಜಗನ್ನಾಥ ಪುರಿ ಯಾತ್ರೆಯ ವೇಳೆ ಕೋಮು ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂದು ಆರೋಪಿಸಿ ಟಾಡಾ ಮತ್ತಿತರ ಕಾನೂನುಗಳಡಿ ಬಂಧಿಸಲಾಗಿದ್ದ 11ಅಮಾಯಕರನ್ನು ಬಿಡುಗಡೆಗೊಳಿಸಿ ಸುಪ್ರೀಂಕೋರ್ಟ್ ಈ ಸೂಚನೆಯನ್ನು ಪೊಲೀಸರಿಗೆ ನೀಡಿದೆ. ಇದು ಕೇವಲ ಗುಜರಾತ್ ಪೊಲೀಸರಿಗೆ ಮಾತ್ರ ನೀಡಿದ ಸೂಚನೆಯಲ್ಲ. 

ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮಾಯಕರನ್ನು ಉಗ್ರರ ಹೆಸರಿನಲ್ಲಿ ಬಂಧಿಸುವುದು ಪೊಲೀಸರಿಗೆ ಅತ್ಯಂತ ಸುಲಭದ ಕಾರ್ಯವಾಗಿದೆ. ಯಾವುದೇ ಒಬ್ಬ ಪಿಕ್‌ಪಾಕೆಟ್ ಮಾಡಿದವರನ್ನು ಹಿಡಿಯುವುದಕ್ಕಿಂತ, ಸುಲಭವಾಗಿ ಮತ್ತು ವೇಗವಾಗಿ ಇಂದು ಪೊಲೀಸರು ಉಗ್ರರನ್ನು ಹಿಡಿಯಬಲ್ಲರು. ಕೆಲವೊಮ್ಮೆ ಪೊಲೀಸರು ಕೆಲವು ರಾಜಕೀಯ ಒತ್ತಡಗಳಿಂದ ಮಾಡಿದರೆ, ಮತ್ತೆ ಕೆಲವೊಮ್ಮೆ ದುರುದ್ದೇಶಗಳಿಂದಲೇ ಇಂತಹ ಬಂಧನಗಳನ್ನು ನಡೆಸುತ್ತಾರೆ. 

ಯಾವುದೇ ಒಂದು ಸ್ಫೋಟ ನಡೆದಾಕ್ಷಣ ಪೊಲೀಸರಿಗೆ ಜನರನ್ನು ಸಮಾಧಾನ ಗೊಳಿಸುವ ಮತ್ತು ಕಾನೂನು ವ್ಯವಸ್ಥೆ ಸರಿಯಾಗಿದೆ ಎಂದು ತೋರಿಸುವ ಅನಿವಾರ್ಯತೆ ಒದಗುತ್ತದೆ. ಒಂದು ಸ್ಫೋಟದ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದು ತುಂಬಾ ದೀರ್ಘವಾದ ಕೆಲಸ. ಅಷ್ಟರಲ್ಲಿ ಜನ ಕಾನೂನಿನ ಕುರಿತಂತೆ ವಿಶ್ವಾಸವನ್ನು ಕಳೆದು ಕೊಳ್ಳುತ್ತಾರೆ. ಆಗ ಪೊಲೀಸರು ಮಾಡಬಹುದಾದ ಕೆಲಸವೆಂದರೆ, ಕೆಲವು ಸ್ಥಳೀಯ ಮುಸ್ಲಿಮ್ ಹುಡುಗರನ್ನು ವಿಚಾರಣೆಯ ವಶಕ್ಕೆ ತೆಗೆದು ಕೊಳ್ಳುವುದು. ಅದಕ್ಕೆ ಯಾವುದೇ ಕಾರಣಗಳೂ ಬೇಕಾಗಿಲ್ಲ. 

ತಕ್ಷಣ ಪತ್ರಿಕೆಗಳು ವಶಕ್ಕೆ ತೆಗೆದುಕೊಂಡ ಹುಡುಗರನ್ನು ಉದ್ದೇಶಿಸಿ ‘ಉಗ್ರರ ಬಂಧನ’ವೆಂದು ಬರೆದು ಬಿಡುತ್ತವೆ. ಇದೇ ಸಂದರ್ಭದಲ್ಲಿ ಆಗಾಗ ಉಗ್ರರ ಹೆಸರಿನಲ್ಲಿ ಮುಸ್ಲಿಮ್ ಹುಡುಗರ ಬಂಧನ ರಾಜಕೀಯ ಪಕ್ಷಗಳಿಗೂ ಅನಿವಾರ್ಯವಾಗುತ್ತದೆ. ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ಜನರಲ್ಲಿ ಭಯವನ್ನು ಬಿತ್ತಲು ಉಗ್ರರ ಬಂಧನ ಒಂದು ರಾಜಕೀಯ ತಂತ್ರಗಾರಿಕೆಯೇ ಆಗಿ ಪರಿಣಿಸಿದೆ. ಬಲಪಂಥೀಯ ರಾಜಕೀಯ ಪ್ರವರ್ಧಮಾನಕ್ಕೆ ಬಂದುದೇ ಇಂತಹ ಕಲ್ಪಿತ ಉಗ್ರರನ್ನು ಮುಂದಿಟ್ಟುಕೊಂಡು. ಹಾಗೆಯೇ ರಾಜಕೀಯದಲ್ಲಿ ಯಾವುದಾದರೂ ಅಕ್ರಮಗಳು ಸುದ್ದಿ ಮಾಡುತ್ತಿದ್ದಾಗ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕೂ ಈ ಉಗ್ರರ ಬಂಧನ ಒಂದು ಸುಲಭ ತಂತ್ರವಾಗಿದೆ. 

ಎಲ್ಲ ಪಕ್ಷಗಳೂ ಈ ತಂತ್ರವನ್ನು ಒಂದು ರಾಜಕೀಯ ಗುರಾಣಿಯಾಗಿ ಬಳಸುವಲ್ಲಿ ಯಶಸ್ವಿಯಾಗಿದೆ. ಕೇಸರಿ ಉಗ್ರರಂತೂ ಮುಸ್ಲಿಮ್ ಉಗ್ರರ ಮರೆಯಲ್ಲೇ ಬಲಾಢ್ಯವಾಗಿ ದೇಶದಲ್ಲಿ ಬೆಳೆದು ನಿಂತಿದ್ದಾರೆ ಕೇಸರಿ ಉಗ್ರರ ಬಣ್ಣವನ್ನು ಬಯಲುಗೆಳೆದ ಎಲ್ಲ ಹಿರಿಯ ಅಧಿಕಾರಿಗಳೂ ಅನುಮಾನಾಸ್ಪದವಾಗಿ ಕೊಲೆಗೈಯಲ್ಪಟ್ಟರು. ಇಂದಿಗೂ ಈ ಕೇಸರಿ ಉಗ್ರರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಮುಸ್ಲಿಮ್ ಕಲ್ಪಿತ ಉಗ್ರರನ್ನು ನೆಪ ಮಾಡಿ ಕೊಳ್ಳುತ್ತಾ ಬರುತ್ತಿದ್ದಾರೆ ಮತ್ತು ಬೆಳೆಯುತ್ತಿದ್ದಾರೆ. ಮಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿದಂತೆ ಅಮಾಯಕರು ಹಲವು ವರ್ಷ ಜೈಲಲ್ಲಿ ಕೊಳೆತು ಬಳಿಕ, ನಿರಪರಾಧಿಗಳೆಂದು ಬಿಡುಗಡೆ ಗೊಂಡರು. ಸರಕಾರ ಇದಕ್ಕಾಗಿ ಕ್ಷಮೆಯಾಚಿಸಿ ಪರಿಹಾರವನ್ನೂ ನೀಡಿತು. ಆದರೆ ಉಗ್ರರೆಂಬ ಕಳಂಕ, ಉಳಿದ ಆರೋಪಗಳಂತಲ್ಲ. ಅದು ಅಳಿಸಿದರೂ ಅಳಿಯಲಾಗದ ಆರೋಪ.

ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ಅಮಾಯಕರನ್ನು ಬಂಧಿಸುವ ಪೊಲೀಸರ ಕೃತ್ಯಗಳಿಂದ ಅದು ಬೀರುವ ಪರಿಣಾಮ ಎಷ್ಟು ಭಯಾನಕವಾದುದು ಎನ್ನುವುದನ್ನು ಎಷ್ಟು ಬೇಗ ಅರಿತುಕೊಂಡರೆ, ಅಷ್ಟು ದೇಶಕ್ಕೆ ಒಳ್ಳೆಯದು. ಇಂದು ಉಗ್ರರೆಂದು ಬಿಂಬಿಸಲ್ಪಟ್ಟ ಈ ಅಮಾಯಕ ಹುಡುಗರನ್ನು ಮುಂದಿಟ್ಟುಕೊಂಡೇ ವಿದೇಶಿ ಉಗ್ರವಾದಿ ಸಂಘಟನೆಗಳು ಭಾರತೀಯ ಮುಸ್ಲಿಮರಲ್ಲಿ ಒಂದಿಷ್ಟು ತರುಣರನ್ನು ದಾರಿ ತಪ್ಪಿಸುತ್ತಿವೆ. ಜೈಲಿನಿಂದ ಬಿಡುಗಡೆಯಾಗಿ ಬಂದರೂ ಈ ಅಮಾಯಕ ತರುಣರು ಸಮಾಜದಲ್ಲಿ ತಲೆಯೆತ್ತಿ ಬದುಕುವುದಕ್ಕೆ ಸಾದ್ಯವೆ? ಯಾರಾದರೂ ಅವರಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವೆ? ಅವರೊಂದಿಗೆ ಎಂದಿನಂತೆ ವ್ಯವಹರಿಸಲು ಸಾಧ್ಯವೆ? 

ಹೀಗೆ ಸಮಾಜದಿಂದ ಪ್ರತ್ಯೇಕಿಸಲ್ಪಟ್ಟ ಅಮಾಯಕರನ್ನು ಕೆಲವು ಮೂಲಭೂತವಾದಿ ಸಂಘಟನೆಗಳು ದುರ್ಬಳಕೆ ಮಾಡಿದರೆ ಅದಕ್ಕೆ ಹೊಣೆಗಾರರು ಯಾರು? ಗುಜರಾತ್, ಕರ್ನಾಟಕ ಸೇರಿದಂತೆ ದೇಶದ ಪೊಲೀಸ್ ವ್ಯವಸ್ಥೆಯೇ ಉಗ್ರವಾದಿಗಳನ್ನು ಸೃಷ್ಟಿಸುತ್ತಿದೆ. ಇದು ದುರಂತ. ತಕ್ಷಣದ ಉದ್ದೇಶಕ್ಕಾಗಿ, ಲಾಭಕ್ಕಾಗಿ ರಾಜಕಾರಣಿಗಳು ನಡೆಸುವ ಕಾರ್ಯಾಚರಣೆಗಳು ಬೀರುವ ಪರಿಣಾಮ ಇಡೀ ದೇಶವನ್ನೇ ದುರಂತಕ್ಕೆ ತಳ್ಳಬಹುದು. ಅಥವಾ ಈಗಾಗಲೇ ಇದರ ಪರಿಣಾಮವನ್ನು ದೇಶ ಅನುಭವಿಸುತ್ತಿದೆ. 

ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಪೊಲೀಸರೂ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸ ಬೇಕಾಗಿದೆ. ಗುಜರಾತ್ ಮಾದರಿ ಎಂದು ಘೋಷಿಸಿಕೊಂಡ ಸರಕಾರದ ಅಡಿಯಲ್ಲಿರುವ ಕರ್ನಾಟಕ ಪೊಲೀಸರೂ, ಅಮಾಯಕರ ಬಂಧನ ದಲ್ಲಿ ತಮ್ಮ ಸಾಹಸವನ್ನು ಮೆರೆಯುತ್ತಿದ್ದಾರೆ. ಆದರೆ ಈ ಸಾಹಸ ಉಗ್ರರನ್ನು ಮಟ್ಟ ಹಾಕುವ ಬದಲು ಇನ್ನಷ್ಟು ಉಗ್ರರನ್ನು ಸೃಷ್ಟಿಸುವುದಕ್ಕೆ ಕಾರಣವಾಗಬಹುದು ಎನ್ನುವುದನ್ನು ಪೊಲೀಸರು ನೆನಪಿನಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ಅಮಾಯಕ ತರುಣರನ್ನು ಒಂದು ಕ್ಷಣವೂ ಸೆರೆಯಲ್ಲಿಟ್ಟುಕೊಳ್ಳ ಬಾರದು. 

ಹಾಗೆಯೇ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡ ಅಮಾಯಕರ ಕುರಿತಂತೆ ಪತ್ರಿಕೆಗಳು ತೋಚಿದಂತೆ ಬರೆದಾಗ, ತಕ್ಷಣ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ನೀಡುವುದು ಪೊಲೀಸರ ಕರ್ತವ್ಯ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವುದೇ ನ್ಯಾಯ ವ್ಯವಸ್ಥೆಯ ಅತಿ ದೊಡ್ಡ ಹೊಣೆಗಾರಿಕೆ. ಈ ಕುರಿತಂತೆ ಹಿಂದೆಂದಿಗಿಂತ ಈಗ ಹೆಚ್ಚು ಜಾಗೃತವಾಗುವ ಅಗತ್ಯವಿದೆ.

‘ಮಾಲ್ಗುಡಿ ಕೂಡ ನನ್ನ ಹಾಗೇನೇ ಸಂಕರ’’

‘‘ಮಾಲ್ಗುಡಿ ಕೂಡ ನನ್ನ ಹಾಗೇನೇ ಸಂಕರ’’
 


- ಆರ್. ಕೆ. ನಾರಾಯಣ್

ನಾವಿಬ್ಬರೂ ಇಲ್ಲಿ ಭೇಟಿಯಾದಾಗ ಕನ್ನಡದಲ್ಲಿ ಮಾತಾಡಿದ್ದು, ನೀವು ನನಗೆ ಅಂದು ನಿಮ್ಮ ‘ನನ್ನ ದಿನಗಳು’ ಪುಸ್ತಕದ ಹಸ್ತಪ್ರತಿಯನ್ನು ಕೊಟ್ಟದ್ದು ನೆನಪಿಗೆ ಬರುತ್ತದೆ.
ಹೌದು. ಹೌದು.
.ಆ ಪುಸ್ತಕ ನನಗೆ ತುಂಬಾ ಇಷ್ಟವಾಯಿತು. ಅದನ್ನು ಪುನಃ ಓದಿದಾಗ ನನಗದು ಬಹಳ ಒಳ್ಳೆಯ ಪುಸ್ತಕ ಅನಿಸಿತು. ಯಾಕೆ ಹಾಗಾಯಿತು ಅಂದರೆ ಓರ್ವ ಲೇಖಕನಾಗಿ ನಾನು ಬಹಳಷ್ಟು ಬದಲಾಗಿದ್ದೇನೆ. ಆ ದಿನಗಳಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದು ನನಗೇನೇ ಸ್ಪಷ್ಟವಾಗಿರಲಿಲ್ಲ. ಆಗ ಕೆಲವೊಮ್ಮೆ ನೈಪಾಲ್ ಜೊತೆ ತಮ್ಮ ಬಗ್ಗೆ ವಿಚಾರ ಮಾಡುವಾಗ ತಾವು ಅಂಥ ಗಂಭೀರ ಲೇಖಕರಲ್ಲ ಎಂಬುದನ್ನು ನಾನು ಒಪ್ಪಿಕೊಂಡ ಸಂದರ್ಭಗಳಿವೆ. ತಾವು ಯಾವತ್ತೂ ಭಾರತದ ಬಗ್ಗೆ ಗಂಭೀರವಾಗಿ ದೂರಿದ್ದು ಕಂಡಿಲ್ಲ. ಭಾರತದ ಸಮಸ್ಯೆಗಳ ಬಗ್ಗೆ ನಾರಾಯಣ್ ಅವರು ಯಾವತ್ತೂ ವಿಚಲಿತರಾಗಿದ್ದಿಲ್ಲ ಎಂಬ ಮಾತು ಬಂದಾಗ ಅಂಥ ಸಂದರ್ಭಗಳಲ್ಲಿ ನಾನು ನೈಪಾಲ್‌ರವರ ಅಭಿಪ್ರಾಯಗಳನ್ನು ಒಪ್ಪಿದ್ದಿವೆ. ಆದರೆ ಒಬ್ಬ ಲೇಖಕನಾಗಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿ ವಿಷಯಗಳಲ್ಲಿ ಏನು ಮಾಡಬಹುದೆಂಬ ನನ್ನ ಅನಿಸಿಕೆಗಳನ್ನು ನಾನು ಈಗ ಬದಲಾಯಿಸಿಕೊಂಡಿದ್ದೇನೆ.
ಹೌದೇ? ಏನದು? ಅವರು ಏನು ಮಾಡಬಹುದು?
ಹಾ. ನಾನು ನಿಮ್ಮನ್ನು ಒಪ್ಪುತ್ತೇನೆ. (ನಗು) ನನಗೆ ಅನಿಸಿದ ಹಾಗೆ ಆ ದಿನಗಳಂದು ನನ್ನಲ್ಲಿ ಸಹನಾಶಕ್ತಿ ಬಹಳ ಕಡಿಮೆಯಾಗಿತ್ತು. ಆದರೆ ನಿಮ್ಮ ‘ನನ್ನ ದಿನಗಳು’ ಪುಸ್ತಕ ಓದಿದ ನಂತರ ನನ್ನ ಮನ ಮುಟ್ಟಿದ ಕೆಲವು ವಿಷಯಗಳೆಂದರೆ ಮೊದಲನೆಯದಾಗಿ ಆ ನಿಮ್ಮ ಧ್ವನಿ. ಆ ಧ್ವನಿ ನಿಮ್ಮ ಅನಿಸಿಕೆಗಳನ್ನು ಚಿತ್ರಿಸುತ್ತದೆ. ಅದು ನಿಜವಾಗಿ ಪ್ರಶಂಸನೀಯ. ಎರಡನೆಯದಾಗಿ ಅದಕ್ಕೆ ಕಾರಣವಾಗಿರುವ ಈ ನಮ್ಮ ಮೈಸೂರು ನಗರ.

ಹೌದು. ಅದು ತುಂಬಾ ಮುಖ್ಯವಾದುದು. ಎಲ್ಲದಕ್ಕಿಂತಲೂ . ಹೌದು. ಅದೇ ಮತ್ತೆ ನೀವು ರೂಪುಗೊಂಡಂಥ ಆ ಮಹಾರಾಜಾ ಕಾಲೇಜು. ನೀವು ಮಹಾರಾಜಾ ಕಾಲೇಜ್‌ನ ಕಿಟಕಿಯಿಂದ ಏನನ್ನು ನೋಡಿದ್ದೀರಾ?

ಅದನ್ನು ಬಿಬಿಸಿಯವರು ಪ್ರಸಾರ ಮಾಡಿದ್ದರು. ಅದು ತುಂಬಾ ಚೆನ್ನಾಗಿ ಮೂಡಿಬಂತು. ಅದನ್ನು ನೀವು ನೋಡಿದ್ದೇ ಆದರೆ ಅಚ್ಚರಿ ಏನೂ ಇಲ್ಲ. . ಇಲ್ಲ ಸರ್.
ನಿಮ್ಮಲ್ಲೆಲ್ಲಾದರು ವೀಡಿಯೊ ಪ್ರದರ್ಶನಕ್ಕೆ ಅನುಕೂಲವಿದ್ದರೆ ನಾನು ನಿಮಗೆ ಆ ಕ್ಯಾಸೆಟ್ ಕೊಡಬಹುದು.
. ಸರಿ. ನನಗೆ ಅದು ಬೇಕಿತ್ತು. ಅದು ತುಂಬಾ ಚೆನ್ನಾಗಿದೆ. ನಾನು ಕೂಡಾ ಅದೇ ಕಾಲೇಜ್‌ನಲ್ಲಿ ಓದಿದ್ದೆ. ಅದು ಸುಮಾರಾಗಿ ನೀವು ‘ನನ್ನ ದಿನಗಳು’ ಪುಸ್ತಕದಲ್ಲಿ ವರ್ಣಿಸಿದ ಹಾಗೆ ಇತ್ತು. ಆದರೆ ಈಗ ಕಾಲೇಜ್‌ನಲ್ಲಿ ತುಂಬಾ ಬದಲಾವಣೆಯಾಗಿದೆ.
ಕಟ್ಟಡದಲ್ಲಿ ಬದಲಾವಣೆಯೇ? ಅಥವಾ ಯಾವ ರೀತಿ?
. ಕಟ್ಟಡದಲ್ಲಿ ಅಲ್ಲ. ಆದರೆ ಅಲ್ಲಲ್ಲಿ ಗೋಡೆಗಳ ಮೇಲೆ ಬರೆದಿರುವುದು ಕಾಣಿಸುತ್ತದೆ.
ಹೌದಾ?
. ಆಗಿನ ಕಾಲದಲ್ಲಿ ಮೇಜಿನ ಮೇಲೆ ಬರೆದಿರುವುದು ಕಾಣಸಿಗುತ್ತಿತ್ತು.
ಹೌದು. ಹೌದು.
. ಆದರೆ ಈಗ ಗೋಡೆಗಳಲ್ಲಿ ಎಲ್ಲೆಂದರಲ್ಲಿ ದೊಡ್ಡಕ್ಷರಗಳಲ್ಲಿ ಚುನಾವಣೆ, ಜಾಹೀರಾತು ಇತ್ಯಾದಿ ಕಾಣಸಿಗುತ್ತವೆ.

ಹೌದು ಈಗಿನ ಭೀಕರವಾದ ಸನ್ನಿವೇಶ ಈ ಗೋಡೆಗಳನ್ನು ಮಾಧ್ಯಮವಾಗಿ ಉಪಯೋಗಿಸುವಂಥದ್ದು. ಕೆಲವೊಮ್ಮೆ ಹೀಗೆ ಬರೆದ ಮಾಹಿತಿಗಳು. . ಹೇಗನಿಸುತ್ತದೆ ನಿಮಗೆ, ಇಂಥ ವಿಷಯಗಳು ಇಷ್ಟವಾಗಲಿಕ್ಕಿಲ್ಲ.
ಹೌದು. ನಾನು ಈ ಜಾಹೀರಾತುಗಳನ್ನು ಇಷ್ಟಪಡುವುದಿಲ್ಲ. ಅದೂ ಕೂಡ ಅಶ್ಲೀಲವಾಗಿರುವ..
. ಹೌದು. ಹೌದು.
ನೀವು ಈಗ ಕಂಡಿರಬಹುದು. ಕೆಲವು ಜಾಹೀರಾತುಗಳು, ವಾರಪತ್ರಿಕೆಗಳಲ್ಲಿ ಇತ್ಯಾದಿ. ಅದು ಕೂಡಾ ಉಡುಪುಗಳ ಜಾಹೀರಾತುಗಳು. ಅಸಂಬದ್ಧ ರೂಪದರ್ಶಿಗಳು, ಯುವಕ ಯುವತಿಯರು ಒಬ್ಬರನ್ನೊಬ್ಬರು ಬಯಸುವ ದೃಶ್ಯಗಳು. ದೇಶದಲ್ಲಿ ಮೊದಲು ಸಿಗದಂಥ ಉಡುಪುಗಳು ಹಾಗೂ ದೃಶ್ಯಗಳು. ಇದನ್ನು ನೋಡುತ್ತಾ ಇದ್ದರೆ ಏನನ್ನಿಸುತ್ತೆ ಅಂದರೆ ನಮ್ಮ ದೇಶದಲ್ಲಿ ನೀರು ಕುದಿಸಲು ಅಥವಾ ಆಹಾರ ಬೇಯಿಸಲು ಏನು ಕಟ್ಟಿಗೆಗೆ ಬರಗಾಲ ಬಂದಿದೆ ಎಂಬುದು. ಇದರಿಂದ ಏನು ತೀರ್ಮಾನಕ್ಕೆ ಬರಬಹುದು ಎಂದರೆ ನಮ್ಮ ದೇಶ ಇರುವುದೇ ಜಾಹೀರಾತಿನಿಂದಾಗಿ. ಇದು ನಿಜವಾಗಿ ಆಶ್ಚರ್ಯಕರ.
. ಹೌದು..ನೀವು ಇಂಥ ವಿಷಯಗಳನ್ನು ಧ್ವನಿಸುವುದು ಭಾರೀ ಅಪರೂಪ.
ಹೌದು. ಈಗಿನ ಕಾಲ ನೋಡಿ, ನಾವು ತುಂಬ ಜೋರಾಗಿ ನಮ್ಮ ಅಭಿಪ್ರಾಯಗಳನ್ನು ಧ್ವನಿಸಲಾಗುವುದಿಲ್ಲ. ಕೆಲವೊಮ್ಮೆ ಅದು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತೆ.ಕೆಲವೊಮ್ಮೆ ಉಪಕಾರವಾಗುತ್ತೆ. ಅದು ಅಷ್ಟು ಸುಳ್ಳೂಂತ ಅಲ್ಲ.. ಈ ವ್ಯಾವಹಾರಿಕ ಬದುಕು ನಮ್ಮ ಪರಿಸರವನ್ನು ಲಾಭಕ್ಕೋಸ್ಕರ ಬಳಸುತ್ತಿದೆ. ಈಗಿನ ಔಷಧ ವ್ಯಾಪಾರಿಗಳು ಇಲ್ಲ ಸಲ್ಲದ ರೋಗಗಳನ್ನು ಹುಡುಕಿ ಹಾಕಿ ಅದಕ್ಕೆ ಔಷಧ ಕೊಡುತ್ತಾರೆ. ನಮ್ಮ ಈ ವೈದ್ಯರನ್ನೇ ತಗೊಳ್ಳಿ. ಈಗ ಕೊಟ್ಟ ಔಷಧಿ ಸ್ವಲ್ಪ ತಿಂಗಳ ನಂತರ ಅವರೇ ನೀವು ಅದನ್ನು ತೆಗೆದು ಕೊಳ್ಳಬಾರದಿತ್ತು,ಇನೊಂದನ್ನು ತಗೊಳ್ಳಿ ಎಂದು ಹೊಸ ಔಷಧಿಯೊಂದನ್ನು ಬರೆದುಕೊಡುತ್ತಾರೆ. ಹಾಗೆಯೇ ಉಡುಪುಗಳಲ್ಲಿ, ಆಗಿಂದಾಗ್ಗೆ ಬದಲಾವಣೆಯಾಗುತ್ತೆ. ಇಂಥ ವ್ಯಾವಹಾರಿಕ ಜೀವನಶೈಲಿ ನಮ್ಮಲ್ಲಿ ಬೆಳೆಯುತ್ತಿರುವುದು ನಿಜವಾಗಿ ಗಾಬರಿ ಉಂಟು ಮಾಡುತ್ತೆ.

.ನನಗೆ ಅರ್ಥವಾಗುತ್ತೆ. ನಿಮ್ಮ ಆ ಪುಸ್ತಕವನ್ನು ಓದಿರುವ ಕಾರಣ ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತೆ. ನಿಮಗೆ ಮೈಸೂರಿನ ಮೇಲೆ ಇರುವ ವ್ಯಾಮೋಹ. ಅಂದರೆ ಆ ರಸ್ತೆ, ಮರಗಳು, ಪ್ರೀತಿ, ವ್ಯಕ್ತಿಗಳು.ಮೈಸೂರನ್ನು ನೀವು ಹಳೆಯ ಗ್ರೀಕ್ ದೇಶಕ್ಕೆ ಹೋಲಿಸುತ್ತೀರಿ. ಹೌದು, ಅದು ಗ್ರೀಕ್ ದೇಶ.
.ಹಾಗೇನೇ ನೀವು ಒಬ್ಬ ಉತ್ತಮ ನಡಿಗೆಗಾರ ಎಂಬುದೂ ನನಗೆ ಗೊತ್ತು.
ಹೌದೌದು.
.ನಿಮ್ಮ ಪುಸ್ತಕ ಓದಿದ ನನಗೆ ನೀವು ಬಹಳಷ್ಟು ನಡೆದಾಡಿದವರು, ಸಂಚರಿಸಿ ದವರು ಎಂದು ಗೊತ್ತಾಗುತ್ತೆ. ಈಗ ನೀವು ನೋಡಿದರೆ ಆ ದಿನಗಳ ಆ ಪ್ರಶಾಂತ ವಾತಾವರಣ ಈಗ ಊಹಿಸಲೂ ಅಸಾಧ್ಯ.
ಹೌದು. ಅದು ವಾಸ್ತವಿಕವಾಗಿ ಸಾಧ್ಯವಿಲ್ಲ. ಯಾಕೆಂದರೆ ಎಲ್ಲ ಕಡೆಯಲ್ಲೂ ಬೆಳೆಯುತ್ತಿರುವ ಕಾರ್ಖಾನೆಗಳು. ನಿಮಗೆ ಗೊತ್ತಿರಬಹುದು, ನಮ್ಮ ಆಡಳಿತಗಾರರು ಆದಷ್ಟು ಜನರನ್ನು ನಗರ ಪ್ರದೇಶದಿಂದ ಓಡಿಸಲು ಪ್ರಯತ್ನಿಸುತ್ತಾರೆ.
.ಸರ್, ಅಂದ ಹಾಗೆ ಇದಕ್ಕೆ ತುಂಬಾ ತಡೆ ಇದೆ. ನಿಮಗೆ ಗೊತ್ತಿದ್ದ ಹಾಗೆ ಅಮೆರಿಕದಲ್ಲಿ ಪರಿಸರ ಮಾಲಿನ್ಯದ ಬಗ್ಗೆ ತುಂಬಾ ತಕರಾರುಗಳಿವೆ. ನನಗೆ ನೆನಪಿರುವ ಹಾಗೆ ನಾನು ಅಯೋವಾ ಯೂನಿವರ್ಸಿಟಿಯಲ್ಲಿ ಕಲಿಸುತ್ತಿರುವಾಗ ಅವರು ಒಂದು ಮರ ಕಡಿಯಬೇಕಾಗಿ ಬಂತು. ವಿದ್ಯಾರ್ಥಿಗಳು ಆ ಮರವನ್ನೇರಿದವನನ್ನು ಕೆಳಗೆ ಇಳಿಯಲು ಬಿಡಲಿಲ್ಲ.
ಹೌದಾ?
.ಮರ ಕಡಿಯಲಿಕ್ಕೆ ಬಿಡಲೇ ಇಲ್ಲ. ಅಲ್ಲಿ ಇನ್ನೇನೋ ಕಟ್ಟಡ ನಿರ್ಮಾಣ ಮಾಡಬೇಕು ಎಂದಿತ್ತು. ಅದನ್ನೂ ಕೂಡಾ ಬಿಡಲಿಲ್ಲ. ಇದೇ ಪರಿಸ್ಥಿತಿ ಈಗ ಭಾರತದಲ್ಲಿ ಕೂಡ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಮರಗಳನ್ನು ಹೋಗಿ ಅಪ್ಪಿ ಹಿಡಿಯುವ ಚಳವಳಿಗಳನ್ನು ಹಾಗೂ ಮರಗಳನ್ನು ಕಡಿಯಬೇಡಿ ಎಂಬ ಫಲಕಗಳನ್ನು ನೋಡುತ್ತಿದ್ದೇವೆ.
ಹೌದು. ನಮ್ಮ ಯುವ ಪೀಳಿಗೆಯನ್ನು, ಪರಿಸರವನ್ನು ಮಾಲಿನ್ಯದಿಂದ ಕಾಪಾಡಲು ಉಪಯೋಗಿಸಿಕೊಳ್ಳಬಹುದು. ನಾವು ಈ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸಾಧಿಸಬೇಕು.
.ನಾನು ನಿಮ್ಮ ಪುಸ್ತಕವನ್ನು ಓದುವಾಗ ಜಾನ್ ಮತ್ತು ಡೈಕ್ ಎಂಬವರು ನಿಮ್ಮ ಬಗ್ಗೆ ಹೀಗೆ ಹೇಳಿದ್ದಾರೆ. ನಾರಾಯಣ್ ಭಾರತದ ಲೇಖಕ. ಅವರೊಂದು ಮಾಯಾ ಕುಡಿ. ಇದು ನನ್ನ ಪ್ರಕಾರ ಸರಿಯಾದ ಮಾತು. ನಾನು ನಿಮ್ಮ ಪುಸ್ತಕ ಓದಿದಾಗ ಅದು ನಿಜವಾಗಿಯೂ ನನ್ನ ಮನಸ್ಸನ್ನು ಬಹಳ ಆಳವಾಗಿ ಕಲಕಿತು. ನೀವು ಅದರಲ್ಲಿ ಹೇಳಿದ ಮಾತು ನಿಮ್ಮ ವೃದ್ಧಾಪ್ಯದಲ್ಲಿ ಏನನ್ನಾದರೂ ಚಿಂತಿಸುವುದಿದ್ದರೆ ಅದು ಹೊರಗಿನ ಈ ಇಂಥ ವಿಷಯಗಳ ಬಗ್ಗೆ. ಸಾಮಾನ್ಯವಾಗಿ ನನಗೆ ಈ ಮುನ್ಸಿಪಾಲಿಟಿಯ ಆಗು ಹೋಗುಗಳ ಬಗ್ಗೆ ಹೆದರಿಕೆ. ರಸ್ತೆಗಳಲ್ಲಿ ಬೆಳಕಿಲ್ಲದಿದ್ದರೆ ನಾನು ಕೂಡಲೇ ಮೇಲಧಿಕಾರಿಗಳಿಗೆ ದೂರವಾಣಿಯ ಮೂಲಕ ಅಥವಾ ಕಾಗದದ ಮೂಲಕ ಪೀಡಿಸುತ್ತಾ ಇರುತ್ತೇನೆ. ನಾನು ಸ್ವತಃ ಮೈಸೂರಿನಲ್ಲಿರುವ ಸಾವಿರಾರು ಮರಗಳ ಸಂರಕ್ಷಣೆಗೋಸ್ಕರ ಒದ್ದಾಡಿದ್ದೇನೆ. . ನಿಮ್ಮ ಮನೆಯ ಮುಂದಿನ ಮರದ ವಿಷಯ ಬಿಡಿ. ಹೇಗೆ ಅದು ಉದ್ದ ಮತ್ತು ಅಗಲ ಬೆಳೆದಿದೆ. ಅದು ಬಹಳ ಕಾಲ ಉಳಿಯಬೇಕೆಂಬ ಕಾಳಜಿ ನಿಮಗಿದೆ. ಅದೇ ರೀತಿ ಕುಕ್ಕರಹಳ್ಳಿ ಕೆರೆ ಬಗ್ಗೆ ನೀವು ಕಾಳಜಿ ವಹಿಸಿ ಮಾತಾಡಿದ್ದು.
ಹೌದು, ಸ್ವಲ್ಪ ಮಟ್ಟಿಗೆ.
.ನಾನು ವಿದ್ಯಾರ್ಥಿಯಾಗಿದ್ದಾಗ ಕುಕ್ಕರಹಳ್ಳಿ ಕೆರೆ ಬಗ್ಗೆ ನನಗೆ ಅಪಾರ ಪ್ರೀತಿ. ನನಗನ್ನಿಸುತ್ತೆ ನಮ್ಮಿಬ್ಬರಲ್ಲಿ ಬಹಳ ಆಳವಾಗಿ ಹಂಚಿಕೊಳ್ಳುವಂಥ ವಿಷಯಗಳು ತುಂಬಾ ಇವೆ.
ಕುಕ್ಕರಹಳ್ಳಿ ಕೆರೆ ಇರುವ ಜಾಗ ಬಹಳ ಆಹ್ಲಾದಕರ. ಈ ಸ್ಥಳಕ್ಕೆ ಅದರದೇ ಆದ ಒಂದು ಪಾವಿತ್ರ್ಯ ಇದೆ. ಅಲ್ಲಿ ಸೂರ್ಯ ಮುಳುಗುವ ವೇಳೆಯಂತೂ ತುಂಬಾ ಸುಂದರ. ನಾನು ಶಾಸ್ತ್ರೀಯ ವರ್ಣಚಿತ್ರಕಾರ ವೆಂಕಟಪ್ಪನವರನ್ನು ಕಂಡಿದ್ದೆ. ಪ್ರತಿ ಸಾಯಂಕಾಲ 4 ಗಂಟೆ ಸುಮಾರಿಗೆ ಅವರು ಅಲ್ಲಿಯ ಕಲ್ಲು ಬೆಂಚ್‌ನಲ್ಲಿ ಕುಳಿತು ನಾಲ್ಕು ತಾಸು ಕಾಲ ಹಾಗೆಯೇ ಕಳೆದು ವೌನಿಯಾಗಿ ಮನೆಗೆ ಹಿಂದಿರುಗುತ್ತಿದ್ದರು. ಅವರು ಅಷ್ಟೂ ಹೊತ್ತು ಸೂರ್ಯಾಸ್ತ ಮತ್ತು ನಿಸರ್ಗ ಸೌಂದರ್ಯದಿಂದ ಉಲ್ಲಸಿತರಾಗಿ ಒಂದು ಕಲಾತ್ಮಕ ಚಿತ್ರವನ್ನೇ ಬಿಡಿಸಿದ್ದರು. ಈಗಿನ ಆಧುನಿಕ ಚಿತ್ರಕಾರ ಈ ಚಿತ್ರದಲ್ಲಿರುವ ವಾಸ್ತವಿಕತೆಯನ್ನು ಅಷ್ಟು ಬೇಗ ಒಪ್ಪಲಾರ. ಆದರೆ ಅವರು ತುಂಬಾ ಒಳ್ಳೆಯ ಚಿತ್ರಗಳನ್ನು ಬಿಡಿಸಿ ಅದಕ್ಕೆ ಬಣ್ಣ ಹಾಕಿ ಅದ್ಭುತವಾದ ಕಲಾಕೃತಿಗಳನ್ನು ಕೊಟ್ಟರು. ಹಾಗೆಯೇ ಮೈಸೂರಿನಲ್ಲಿ ಪಾಲ್‌ಬ್ರಂಟ್ ಎಂಬವರು ಇದ್ದರು.
. ಹೌದು. ದೇವರಂತಹ ಮನುಷ್ಯ
ಅವರು ಮೈಸೂರಿನ ಚೆಲುವಿಗೆ ಮನಸೋತು ಇಲ್ಲೇ ನೆಲೆಸಲು ಬಯಸಿದ ವ್ಯಕ್ತಿ. ನಾನು ನನ್ನ ಪುಸ್ತಕದಲ್ಲಿ ಅದರ ಬಗ್ಗೆ ಬರೆದಿದ್ದೇನೆ.
. ಹೌದು
ಬೇರೆ ಯಾವುದೇ ಸ್ಥಳಗಳಿಗೆ ಹೋಲಿಸಿದರೆ ಮೈಸೂರಿನಂಥ ಒಂದು ಸ್ಥಳ ಲೇಖಕನ ಮನೋವಿಕಾಸಕ್ಕೆ ತೀರಾ ಉಪಯೋಗವಾಗುವಂಥದ್ದು, ಬಹಳವಾಗಿ ದ್ಯಾನಸ್ಥವಾಗುವವನಿಗೆ.
. ನಿಮಗೆ ಚಾಮುಂಡಿ ಬೆಟ್ಟ ಕೂಡಾ ತುಂಬಾ ಪ್ರೀತಿ ಅಲ್ಲವೇ?

ಯಾವಾಗಲೂ. ಕೆಲವೊಮ್ಮೆ ಬರೀ ಕಾಲುನಡಿಗೆಯಲ್ಲಿ ನಾನು ಚಾಮುಂಡಿ ಬೆಟ್ಟ ತಿರುಗಿದ್ದುಂಟು. ನಾನು ಯಾವತ್ತೂ ನನ್ನ ಉಡುಪು ಅಥವಾ ನನ್ನ ಚಪ್ಪಲಿಗಳ ಆಲೋಚನೆ ಮಾಡಿದ್ದಿಲ್ಲ. ಯಾವುದೇ ನದೀ ತೀರ, ಬೆಟ್ಟ, ಅಡ್ಡದಾರಿ, ಎಲ್ಲಿ ಹೋದರೂ ಕೂಡ ಮೈಸೂರು ಬಹಳ ಚೆಂದ. . ಅಂದು, ದಸರಾ ಹಬ್ಬದ ದಿನಗಳಂದು ಚಾಮುಂಡಿ ಬೆಟ್ಟದಲ್ಲಿ ‘ಸುಸ್ವಾಗತಂ’ ಎಂಬ ಜಾಹೀರಾತಿನ ಬೋರ್ಡು ಕಂಡಾಗ ನಿಮಗೆ ಏನು ಅನಿಸುತ್ತಿತ್ತು? ನಿಮಗೆ ಅದು ಇಷ್ಟ ಆಗುತ್ತಿತ್ತಾ?

ಇಲ್ಲ, ನನಗೆ ಇಷ್ಟ ಆಗುತ್ತಿರಲಿಲ್ಲ. ಆದರೆ ಇಲ್ಲಿ ನಾನು ಅಭಿಪ್ರಾಯ ಹೇಳಿದರೆ ಅಧಿಕ ಪ್ರಸಂಗವಾಗುತ್ತದೆ. . ಹೌದು. ನೀವು ಜೋರಾಗಿ.
ನಮಗೆ ಅದು ಕಷ್ಟ ಆಗುತ್ತೆ. ಎಲ್ಲಾ ಕಾನೂನಿಗೂ ತಮ್ಮದೇ ಆದ ನೀತಿ ನಿಯಮಗಳಿವೆ. ನಮಗೆ ನಮ್ಮದೇ ಆದ ಕಟ್ಟುಪಾಡುಗಳಿವೆ.
. ಅಂದರೆ ಮಿರ್ಜಾ ಇಸ್ಮಾಯೀಲ್ ಥರ. ಅವರು ನಿಮಗೆ ತುಂಬಾ ಇಷ್ಟವಾದ ವ್ಯಕ್ತಿ.
ತುಂಬಾ ಅಪರೂಪ. ತುಂಬಾ ಅಪರೂಪ. ಅವರಂಥವರು ಬಹಳ ಅಪರೂಪ.
. ಅವರು ತುಂಬಾ ಮರಗಳನ್ನು ನೆಡಿಸಿದ್ದರು.
ಅಷ್ಟು ಮಾತ್ರವಲ್ಲ, ಅವರು ಈ ನಗರದಲ್ಲಿ ಕಟ್ಟಡ ನಿರ್ಮಿಸುವ ಒಳ್ಳೆಯ ಎಂಜಿನಿಯರ್‌ಗಳನ್ನು ಕರೆತಂದಿದ್ದರು. ನಾವು ಈಗ ಕುಳಿತು ಚರ್ಚಿಸುತ್ತಿರುವ ಎದುರಿನ ಕಟ್ಟಡ ಇದೆಯಲ್ಲ, ಅದನ್ನು ನಿರ್ಮಿಸಿರುವವರು ಕೆನ್ನೆಸ್ ಬರ್ಗರ್.
.ಹೌದಾ? ಆಗಿನ ಕಾಲದ ಗೌರವಾನ್ವಿತ, ಎಂಜಿನಿಯರ್‌ಗಳಲ್ಲಿ ಒಬ್ಬರು. ಬಹಳ ಯುನೀಕ್ ಆದ ಕಟ್ಟಡ. ಅವರಿಗೆ ಬೇರೆ ಎಷ್ಟೋ ಕೆಲಸ ಮಾಡುವ ಆಸಕ್ತಿ ಇದ್ದರೂ, ಅವರು ಅವಿರತವಾಗಿ ಗಿಡಗಳನ್ನು ನೆಟ್ಟರು. ಕೆಲವು ಗಿಡಗಳು ಸರಿಯಾಗಿ ಬೆಳೆಯದಿದ್ದರೆ, ಅವುಗಳನ್ನು ಕಿತ್ತು ಪುನಃ ಬೇರೆ ಗಿಡಗಳನ್ನು ನೆಡುತ್ತಿದ್ದರು. ಪ್ರತಿ ದಿನ ಅವರು ಮತ್ತು ಕೃಷ್ಣ ರಾಜ ಒಡೆಯರ್ ಕಾರಿನಲ್ಲಿ ಮೆಲ್ಲನೆ ನಗರವನ್ನು ಸುತ್ತಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದರಂತೆ ಮುನ್ಸಿಪಲ್ ಅಧ್ಯಕ್ಷರಿಗೆ ಅಥವಾ ಡಿ.ಸಿ.ಗೆ ಕರೆ ಮಾಡಿ ಸಂಬಂಧ ಪಟ್ಟ ಕ್ರಮಗಳನ್ನು ಕೈಗೊಳ್ಳಲು ಹೇಳುತ್ತಿದ್ದರು. ಅದರ ನಂತರ ತಾನು ಹೇಳಿದ ಕೆಲಸ ಆಗಿದೆಯೋ ಇಲ್ಲವೋ ಎಂದು ಖಾತ್ರಿಯಾಗಲು ಮತ್ತೊಮ್ಮೆ ನಗರ ಸುತ್ತಿ ಪರಿಶೀಲಿಸುತ್ತಿದ್ದರು. ಅಂದಿನ ಕಾಲದಲ್ಲಿ ಅವರು ತಮ್ಮ ಕೆಲಸದಲ್ಲಿ ಅಷ್ಟು ಭಾಗಿಯಾಗುತ್ತಿದ್ದರು.
ಈಗಿನವರಲ್ಲಿ ಅದು ಅಷ್ಟಾಗಿ ಕಾಣಸಿಗುವುದಿಲ್ಲ. ಈಗಿನ ಕಾಲದಲ್ಲಿ ಒಬ್ಬ ಕಮಿಷನರ್ ನೇಮಕ ಆಗಿ ಅವರು ಕೆಲಸಕ್ಕೆ ತೊಡಗುವಷ್ಟರಲ್ಲಿ ಅವರನ್ನು ವರ್ಗಾಯಿಸಲಾಗುತ್ತದೆ. ಇವತ್ತು ಕಮಿಷನರ್ ಆಗಿ ನೇಮಕ ಆದವರನ್ನು ಮರುದಿನ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗುತ್ತದೆ.
.ಆದರೆ ನಿಮ್ಮಂಥ ಕಾಳಜಿ ವಹಿಸುವ ಜನರಿದ್ದ ಕಾರಣ ಆ ಕಾಲಕ್ಕೂ ಈ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ನೀವು ಕುಕ್ಕರಹಳ್ಳಿ ಕೆರೆ ಉಳಿಸಿಕೊಟ್ಟವರು.
ನಾನು ಉಳಿಸಿದ್ದೀನಾ? ಎಷ್ಟರ ಮಟ್ಟಿಗೆ ಅಂತ ಗೊತ್ತಿಲ್ಲ(ನಗು)
. ಹೌದು ನೀವೇ ಮಾಡಿದ್ದು.
ಎಷ್ಟರ ಮಟ್ಟಿಗೆ ಅಂತ ಗೊತ್ತಿಲ್ಲ.
. ಮತ್ತೆ ನೀವು ಅದನ್ನು ಹೇಳಿದಾಗ
ನನ್ನ ಅನಿಸಿಕೆ ಪ್ರಕಾರ ಅದಕ್ಕೆ ಕಾರಣರಾದ ಇನ್ನೊಬ್ಬ ವ್ಯಕ್ತಿ ಎಂದರೆ ‘ಮೈಸೂರು ಮಿತ್ರ’ ಪತ್ರಿಕೆಯ ಗಣಪತಿಯವರು, ಬಹಳ ಕ್ರಿಯಾಶೀಲ ವ್ಯಕ್ತಿ.
.ಹೌದು ಜನರು ನಿಮಗೆ ಸಹಕಾರ ಬೆಂಬಲ ಕೊಟ್ಟಿದ್ದರು.
ಹೌದು. ಹೌದು ಜನರೂ ಬೆಂಬಲ ಕೊಟ್ಟಿದ್ದರು. ಪತ್ರಿಕೆಯವರೂ ಬೆಂಬಲ ಕೊಟ್ಟಿದ್ದರು
.ಸರ್. ನಿಮಗೆ ಗೊತ್ತು ಮೈಸೂರನ್ನು ನಾನು ಕಂಡಿದ್ದೀನಿ. ನಾನು ಕೂಡಾ ಮೈಸೂರಿನಲ್ಲಿ ನೆಲೆಸಿದ್ದೆ. ಆದರೆ ಅದು ಈಗ ತುಂಬಾ ಬದಲಾಗಿದೆ. ಈಗಿರುವ ವಾಯುಮಾಲಿನ್ಯ ಆಗಿರಲಿಲ್ಲ. ಯಾಕೆಂದರೆ ನಮ್ಮ ಶೈಲಿಯೇ ಈಗ ಬದಲಾಗಿದೆ. ನಮ್ಮ ಉಡುಪಿನಲ್ಲ್ಲಿ, ನಮ್ಮ ಧರ್ಮದಲ್ಲಿ, ಈಗ ನೋಡಿದರೆ ಭಜನೆ ಮಾಡುವಾಗ ಎಷ್ಟೊಂದು ಗಲಾಟೆ ಕೇಳಿಸುತ್ತದೆ. ನಮಗೆ ಮಲಗಲು ಕೂಡಾ ಆಗುತ್ತಿಲ್ಲ.

ಈಗ ಎಲ್ಲ ರೀತಿಯ ಬದಲಾವಣೆ ಆಗಿದೆ. ನಮ್ಮ ಉಡುಪು, ನಡತೆ ತುಂಬಾ ಅಸಹ್ಯವಾಗಿದೆ.
ಬೇರೆಯವರ ಬಗ್ಗೆ ಯೋಚನೇನೇ ಮಾಡಲ್ಲ ಇವರು.
. ಬಹಳ ಗಟ್ಟಿಯಾಗಿ ಈ ಗೌಜಿ
ಹೌದು ತುಂಬಾ ಗಲಾಟೆ.
. ಹೌದು ಮೊದಲಿದ್ದ ಸೌಂದರ್ಯ ಪ್ರಜ್ಞೆನೂ ಕಳೆದುಕೊಂಡಿದ್ದೇವೆ. ನಾವು ಇದರ ಬಗ್ಗೆ ಏನು ಮಾಡಬಹುದು. ಇಲ್ಲಿ ನಮ್ಮಂಥ ಕೆಲವರಿಗೆ ನೀವು ದಾರಿ ತೋರಿಸಬೇಕಾಗಿದೆ. ಹೇಗೆ ಅಂತ?
 
ನನಗೆ ಅನಿಸುತ್ತದೆ. ಮೊದಲನೆಯದಾಗಿ ಈ ಧ್ವನಿವರ್ಧಕವನ್ನು ಬಹಿಷ್ಕರಿಸಬೇಕು. ಅದು ಜೋರಾಗಿ ಅಳವಡಿಸಲಿಕ್ಕೆ ಅವಕಾಶ ಕೊಡದೆ ತಮ್ಮದೇ ಆದ ವಠಾರಕ್ಕೆ ಸೀಮಿತಗೊಳಿಸಬೇಕು. ಆದರೆ ಯಾರೂ ಇದನ್ನು ಪಾಲಿಸುವುದಿಲ್ಲ. ಎಲ್ಲವನ್ನೂ ಉಲ್ಲಂಘಿಸಿ ಬಹಳ ಜೋರಾಗಿ ಮೈಲುಗಟ್ಟಲೆ ಕೇಳುವ ಹಾಗೆ ದಿನರಾತ್ರಿ ಅಳವಡಿಸುತ್ತಾರೆ. ಎರಡನೆಯದಾಗಿ ಕರ್ಕಶ ಹಾರ್ನ್, ಈಗಿನ ಕಾಲದ ಹೊಸ ಪ್ರಯೋಗ. ಇದನ್ನೂ ಬಹಿಷ್ಕರಿಸಬೇಕು. ನಗರದೊಳಗೆ ಮಾತ್ರವಲ್ಲದೆ, ಹೈವೇಯಲ್ಲೂ ಕೂಡಾ. ಆಕಸ್ಮಾತ್ ಲಾರಿ ಬರುವಾಗ ಎಲ್ಲಿಯಾದರೂ ಈ ಹಾರ್ನ್ ಬಳಸಿದರೆ ಅದು ಚಾಲಕನಿಗೆ ತೊಂದರೆಯಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಇಲ್ಲಿ ಸಿಟಿ ಬಸ್ಸು ಲಾರಿಗಳಲ್ಲೂ ಕೂಡಾ ಏರ್ ಹಾರ್ನ್ ಅಳವಡಿಸುತ್ತಾರೆ. ಅದರ ಶಬ್ದದಿಂದ ನಮ್ಮ ಮೆದುಳಿಗೆ ಬಹಳ ಹಾನಿಯಿದೆ. ಪೊಲೀಸರಲ್ಲಿ ತಿಳಿಸಿದರೆ ಆ ವಾಹನದ ನಂಬರನ್ನು ನಮಗೆ ತಿಳಿಸಿ ಅನ್ನುತ್ತಾರೆ. ಅದು ನಾವು ಹೇಗೆ ಮಾಡಲು ಸಾಧ್ಯ? ಅದು ನಮಗೆ ಸಂಬಂಧಿಸಿದ್ದಲ್ಲ. ಟ್ರಾಫಿಕ್ ಶಬ್ದ ಮತ್ತು ಟ್ರಾಫಿಕ್ ನಿಯಂತ್ರಣ ಬಹಳ ಪರಿಣಾಮಕಾರಿಯಾಗಿ ಮಾಡಬೇಕಾಗುತ್ತದೆ. ಹಾಗೆಯೇ ಮರಗಳ ರಕ್ಷಣೆ ಕೂಡ ಬಹಳ ಮುಖ್ಯ. ಅದರ ನಡುವೆ ಆಡು ಸಾಕಣೆ, ಹೀಗೆಲ್ಲ ಆದರೆ ಹಳ್ಳಿಗರು ಮೊದಲಿನ ಹಾಗೆ ಹಳ್ಳಿ ಬಿಟ್ಟು ನಗರದ ಕಡೆಗೆ ಹೋಗಲಿಕ್ಕಿಲ್ಲ.
. ಹೌದು.
ಈಗ ನೋಡಿ ಈ ಆಡು-ಕುರಿ ಸಾಕುವವರಿಗೆ ರಸ್ತೆ ಬದಿಯ ಮರಗಳ ಸೊಪ್ಪು ಕಡಿಯುವುದು, ರೆಂಬೆ ಕೊಂಬೆ ಕಡಿಯುವುದು ಬಹಳ ಸುಲಭವಾಗಿ ಕಾಣುತ್ತಿದೆ. ನಾನು ಇದನ್ನು ನಮ್ಮ ಮನೆ, ರಸ್ತೆ ಮುಂದೆ ಕಾಯುತ್ತೇನೆ. ಉಳಿದ ಕಡೆ ಇದನ್ನು ಯಾರೂ ಕ್ಯಾರೇ ಮಾಡುತ್ತಿಲ್ಲ.
. ಇನ್ನೇನು ಮಾಡಕ್ಕೆ ಸಾಧ್ಯ ಸರ್. ನೋಡಿ, ಏರ್ ಹಾರ್ನ್ ಬಗ್ಗೆ ನೀವು ಹೇಳಿದ್ದು ಬಹಳ ಮುಖ್ಯ ಅಂಶ.
ನಾವು ಮರ ರಕ್ಷಕರನ್ನು ಹೊಂದಬೇಕಾಗಿದೆ.
. ಏನು, ಮರ ರಕ್ಷಕರೇ ?
ಹಾ. ಮರ ರಕ್ಷಕರು.ಪ್ರತಿ ವಠಾರದಲ್ಲಿ. ಇದನ್ನು ಕಡಿಯಬೇಡಿ, ಅದನ್ನು ಕೀಳಬೇಡಿ ಅಂದರೆೆ ಅವರು ಮುಟ್ಟುವುದಿಲ್ಲ. ಅವರು ಜಗಳ ಮಾಡುವಂಥವರಲ್ಲ. ಭಾರೀ ಸೌಮ್ಯ ಸ್ವಭಾವದವರು. ಆದರೆ ಅವರಿಗೆ ನೆನಪಿಸುತ್ತಾ ಇರಬೇಕು ಅಷ್ಟೇ.
.ಹೌದು, ನೀವು ಬರೆದಿದ್ದೀರಿ. ಅವರು ಹೂವನ್ನು ನಿಮ್ಮ ಮರದಿಂದ ತೆಗೆಯಲು ಬಂದಾಗ ನೀವು ಅವರಿಗೆ ಹೇಳಿದ್ದೀರಿ. ಮರವನ್ನು ಅಲ್ಲಾಡಿಸಿ, ಆದರೆ ಗೆಲ್ಲುಗಳನ್ನು ತುಂಡು ಮಾಡಬೇಡಿ, ಇಷ್ಟು ಹೇಳಿದ ಮಾತ್ರಕ್ಕೆ ನೀವು ಅವರ ಜೊತೆಗೆ ಒಂದು ಬಗೆಯ ಸಂವಾದ ಮಾಡಿದಂತಾಯ್ತು.
ಅಲ್ವಾ, ಆ ಗುಲ್‌ಮೊಹರ್ ನಮ್ಮ ಮಾರ್ಗದ ತುದಿಯಲ್ಲಿರುವಂಥದ್ದು. ವಿವೇಕಾನಂದ ರಸ್ತೆಯ ಆ ತುದಿಯಿಂದ ಈ ತುದಿಯವರೆಗೆ ಕೆಲವು ಬಹಳ ಅಂದವಾದ ಮರಗಳಿವೆ. ಆದರೆ ಆ ಕುರಿ ಮೇಯಿಸುವವರು ಗುಂಪಿನಲ್ಲಿ ಬಂದು ಅದರ ಗೆಲ್ಲುಗಳನ್ನು ತುಂಡು ಮಾಡುವುದು ನೋಡಿದರೆ, ನಾನು ಅವರನ್ನು ತಡೆದು ನಿಲ್ಲಿಸುತ್ತಿದ್ದೆ. ಆದರೆ ಬೇರೆಯವರೂ ಕೂಡಾ ಅಂದರೆ ನನ್ನ ಆಸುಪಾಸಿನವರೂ ಕೂಡ ಅದನ್ನು ಮಾಡಬೇಕು. ಆಗ ಈ ಕುರಿ ಮೇಯಿಸುವ ಹುಡುಗರಿಗೂ ತಿಳುವಳಿಕೆ ಬರುತ್ತದೆ. ಈ ಎಚ್ಚರ ನಮ್ಮ ಹುಡುಗರಲ್ಲಿರಬೇಕು. ಮತ್ತು ಇನ್ನು ಮುಂದಿನ ದಿನಗಳಲ್ಲಿ ಇದನ್ನು ಅವರು ಬಹಳ ಸಂತೋಷದಿಂದ ಮಾಡಬೇಕು.
.ಆದರೆ ಈಗಿನ ಯುವ ಜನರು ತುಂಬಾನೇ ಈ ಜಾಹೀರಾತುಗಳಿಗೆ ಹಾಗೂ ವೇಗಗತಿಯ ಜೀವನಶೈಲಿಗೆ ಮಾರು ಹೊಗುತ್ತಾರೆ. ನಿಮಗೆ ಏನು ಅನಿಸುತ್ತದೆ. ಈ ಮಾಧ್ಯಮದಿಂದ ಅವರನ್ನು ದೂರ ಇರಿಸಲು ಸಾಧ್ಯವಿದೆಯೇ? ಆಗುತ್ತೆ.
.ಅವರು ಚಿಕ್ಕಂದಿನಲ್ಲಿ ನಿಮ್ಮ ಹಾಗೆ ಕೆಲವು ವಿಷಯಗಳಲ್ಲಿ ಗಮನ ಕೊಟ್ಟಿದ್ದಿರಬಹುದು. ಆದರೆ ನೀವು ಚಿಕ್ಕಂದಿನಲ್ಲಿ ಬಹಳ ಗಾಢವಾಗಿ ಒಂದು ವಿಷಯದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದೀರಿ. ಅದು ಬಹಳ ಮುಖ್ಯವಾದ ಸಂಗತಿ. ಅದು ನಿಮ್ಮ ಕಾದಂಬರಿಯಲ್ಲಿ ನಿಮ್ಮ ಒಂದು ರೇಖಾ ಚಿತ್ರವಾಗಿ ಬರುತ್ತದೆ. ಈಗ ಈ ಅಮೇರಿಕದವರು ಈ ನಿಮ್ಮ ಮಾಲ್ಗುಡಿ ರೇಖಾ ಚಿತ್ರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅವರು ಈ ಕುರಿತ ನಕ್ಷೆಯನ್ನೂ ಮಾಡಿಕೊಂಡಿದ್ದಾರೆ ಎಂಬುದನ್ನು ನಾನು ಕೇಳಿದ್ದೇನೆ. ಆ ನಕ್ಷೆಗೆ ಇನ್ನೂ ಹಲವು ಹಳ್ಳಿಗಳನ್ನು ಜೋಡಿಸುತ್ತಾ ಹೋಗಬಹುದು.
ಅದು ನನಗೆ ತುಂಬಾ ಸುಲಭವಾಗಿದೆ. ಅದಕ್ಕೆ ನನ್ನದೇ ಆದ ಹಿನ್ನೆಲೆ ಕೂಡಾ ಇದೆ.
.ನಿಮ್ಮ, ಮಾಲ್ಗುಡಿ ಹೆಚ್ಚೂ ಕಡಿಮೆ ಮೈಸೂರೇ ಅಲ್ವಾ?
 ಹೌದು. ನನ್ನ ಪ್ರಕಾರ ಅದು ಸೂಕ್ಷ್ಮವಾದ ಪ್ರದೇಶ. ನನ್ನನ್ನು ತೆಗೆದುಕೊಂಡರೆ ನಾನು ತಮಿಳು ಹಾಗೂ ಕನ್ನಡದ ಸಂಕರ ಆದವ. ಹಾಗೆಯೇ ಮಾಲ್ಗುಡಿ ಕೂಡ ನನ್ನ ಹಾಗೇನೇ ಒಂದು ಸಂಕರ ಪ್ರದೇಶ.
.ಸರ್ ನಾನು ಏನು ಹೇಳಲಿಕ್ಕೆ ಹೊರಟಿದ್ದೆ ಅಂದರೆ ಮೊದಮೊದಲಿಗೆ ನಾನು ನೀವೊಬ್ಬರು ಲಘು ದಾಟಿಯ ಬರಹಗಳನ್ನು ಬರೆಯುವ ಬರಹಗಾರರು ಅಂದುಕೊಂಡಿದ್ದೆ. ಮತ್ತೆ ತಾವು ಬಹಳ ಗಂಭೀರವಾಗಿ ಯೋಚನೆ ಮಾಡುವವರಲ್ಲ ಎಂದು. ಆದರೆ ನಿಮ್ಮ ಬರಹಗಳಲ್ಲಿರುವ ನಿಮ್ಮ ಧ್ವನಿಯನ್ನು, ತಮ್ಮ ಭಾವನೆಗಳನ್ನು ಓದಿದಾಗ ತಾವು ಒಬ್ಬ ಬಹಳ ಪ್ರೀತಿ ತುಂಬಿದ, ಪ್ರೀತಿ ತೋರಿಸುವ ವ್ಯಕ್ತಿ ಎಂದು ಅನಿಸುತ್ತದೆ ಮತ್ತು ಅದು ನಿಮ್ಮ ಎಲ್ಲ ಬರಹಗಳಲ್ಲಿಯೂ ಇವೆ.
ಹಳೆಯ ಕಾಲದ ನಮ್ಮ ಸಾಹಿತಿಗಳನ್ನು ಓದಿದಾಗ ಅಂದರೆ ಉದಾಹರಣೆಗೆ ಮಾಸ್ತಿಯವರನ್ನು ಓದಿದಾಗ ಅವರ ಜೀವನ ಮೌಲ್ಯ ಆಧರಿಸಿದ ಲೇಖನಗಳು ಮನುಷ್ಯ ನಾಗರಿಕತೆಯ ಬಗ್ಗೆ, ನಾಗರಿಕ ವರ್ತನೆಗಳ ಬಗ್ಗೆ ಅಪಾರ ಕಾಳಜಿಯಿಂದ ಹುಟ್ಟಿಕೊಂಡ ಹಾಗೆ ಕಾಣಿಸುತ್ತವೆ. ಮನುಷ್ಯನು ರೂಢಿಸಿಕೊಂಡ ಗುಣಗಳು ಆತ ಹೊಂದಿರುವ ಆತ್ಮ ಶಾಂತಿಯನ್ನು ಹೇಳುತ್ತವೆ. ಹಾಗಾಗಿ ನಾನು ನಿಮ್ಮಿಡನೆ ಮೈಸೂರು ನಗರದ ಬಗ್ಗೆ ಮಾತನಾಡಿದೆ. ಅದರ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳುವ ನಿಮ್ಮ ಕಾಳಜಿಯ ಬಗ್ಗೆ . ಆ ನಿಮ್ಮ ಕಾಳಜಿ ಹೀಗೆಯೇ ಮುಂದುವರಿಯಲಿ

ನಾವೆಲ್ಲರೂ ಅದನ್ನು ಮಾಡಬೇಕು. ಇನ್ನೊಂದು ಅಭಿಪ್ರಾಯ ಏನೆಂದರೆ ಕುಕ್ಕರಹಳ್ಳಿ ಕೆರೆ ಮತ್ತ್ತು ಕಾರಂಜಿ ಕೆರೆ ಒಂದು ಟ್ರಸ್ಟ್ ಆಗಿ ಪರಿವರ್ತನೆಗೊಳ್ಳಬೇಕು. ಅದನ್ನು ಗಂಧದ ಎಣ್ಣೆ ಫ್ಯಾಕ್ಟರಿ ಅಥವಾ ಯೂನಿವರ್ಸಿಟಿಗೆ ಕೊಡಬಾರದು. ಯೂನಿವರ್ಸಿಟಿಗೆ ಬೇಕಾದಷ್ಟು ಬೇರೆ ಕೆಲಸಗಳಿವೆ. ಹೌದು, ತುಂಬಾ ಒಳ್ಳೆಯ ಅಭಿಪ್ರಾಯ. ಹಾ. ಈ ಯೂನಿವರ್ಸಿಟಿ ಯವರಿಗೆ ಬೇಕಾದಷ್ಟು ಕೆಲಸಗಳಿವೆ. ಅವರು ಬೇರೆಲ್ಲಾದರು ಜಾಗ ಇದ್ದಲ್ಲಿ ಅವರಿಗೆ ಬೇಕಾಗುವ ಕ್ಲಾಸ್ ರೂಮುಗಳನ್ನು ಕಟ್ಕೋಬಹುದು.


.ನನಗೆ ತುಂಬಾ ಖುಷಿಯಾಯಿತು ನಿಮ್ಮ ಮಾತು ಕೇಳಿ. ಹೌದು, ಅವರು ಕುಕ್ಕರಹಳ್ಳಿ ಕೆರೆ ಹತ್ತಿರ ಏನೋ ಕಟ್ಟಲಿಕ್ಕೆ ಹೊರಟಿದ್ದಾರೆ. ನನಗನಿಸಿದ ಹಾಗೆ ನಾವು ಅದನ್ನು ತಡೆಯಬೇಕು. ಹೌದು. ನಾವು ಮೊನ್ನೆಯಷ್ಟೇ ಎಲ್ಲರೂ ಒಟ್ಟಾಗಿ ಅದಕ್ಕೆ ನಮ್ಮ ವಿರೋಧವನ್ನು ಸೂಚಿಸಿದ್ದೆವು.
. ನೀವು ಕಾಗದ ಬರೆದರೆ ಅದು ನಿಜಕ್ಕ್ಕೂ ಕೆಲಸ ಮಾಡುತ್ತೆ ಏನಂತೀರಿ.
ಆದರೆ ಎಷ್ಟರ ಮಟ್ಟಿಗೆ ನಾವು ಅದನ್ನು ಸಾಧಿಸುತ್ತೇವೆ ಎನ್ನುವುದು ಗೊತ್ತಿಲ್ಲ. ಅಲ್ಲಿ ಲೋಕೋಪಯೋಗಿ ಇಲಾಖೆಯವರು ಮತ್ತು ಯೂನಿವರ್ಸಿಟಿಯವರು ಬಹಳ ಕ್ರಿಯಾಶೀಲರಾಗಿದ್ದಾರೆ.
.ಅಂದರೆ ನಮ್ಮ ನಂಬಿಕೆ ಏನೆಂದರೆ ಲೋಕೋಪಯೋಗಿ ಇಲಾಖೆಯವರಿಗಿಂತ ನಮ್ಮ ಪೆನ್ನಿನ ಶಕ್ತಿಯೇ ಹೆಚ್ಚು. ಆದರೆ ಅವರು ಇನ್ನೂ ಯಾಕೆ ಕೆರೆ ಹತ್ತಿರಾನೇ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆದುದರಿಂದ ಇದನ್ನು ಟ್ರಸ್ಟ್‌ಗೆ ಕೊಡುವುದು ಉತ್ತಮ. ನಮ್ಮ ನಗರಕ್ಕೆ ಒಬ್ಬ ಆರ್ಟ್ ಕೌನ್ಸೆಲರ್ (ಕಲಾ ಸಲಹೆಗಾರ)ಬೇಕು ಅಂತ ಅನ್ನಿಸುತ್ತೆ. ಇವನ್ನೆಲ್ಲ ನೋಡಿ ಕೊಳ್ಳುವುದಕ್ಕೆ ಆ ಕಾರಂಜಿ ಟ್ಯಾಂಕ್ ನೋಡಿ, ಅದು ಬಹಳ ಸುಂದರವಾದದ್ದು. ಅದರ ಬಗ್ಗೆ ಇವರಿಗೇನಾ ದರೂ ಕಾಳಜಿ ಇದೆಯೋ ನನಗೆ ಗೊತ್ತಿಲ್ಲ. ಈಗ ಅದು ತುಂಬಾ ದೂರ ಆಗಿದೆ. ಈ ಹಿಂದೆ ನಾನು ಅಲ್ಲಿಗೆ ದಿನಾ ನಡೆದು ಹೋಗುತ್ತಿದ್ದೆ. ಅಲ್ಲಿ ಕೂತು ಒಂದೆರಡು ಸಿಗರೇಟ್ ಸೇದಿ ಗೆಳೆಯರೊಂದಿಗೆ ಹಿಂದೆ ಬರುತ್ತಿದ್ದೆ.(ನಗು)

. ಈಗಲೂ ನೀವು ದೀರ್ಘ ನಡಿಗೆ ಮಾಡುತ್ತಿರಬಹುದು.
 ಇಲ್ಲ. ಇಲ್ಲ. ಈಗ ತುಂಬಾ ನಡೆಯಲು ಸಾಧ್ಯ ಆಗುತ್ತಿಲ್ಲ. ಬಹಳ ಸುಸ್ತಾಗುತ್ತೆ. ಒಂದು ಕಿಲೋ ಮೀಟರ್‌ಗಿಂತ ಜಾಸ್ತಿ ನಡೆಯಕ್ಕಾಗಲ್ಲ.
. ಆದರೆ ಇಲ್ಲಿ ಕೆಲವೇ ಮಾರ್ಗಗಳಲ್ಲಿ ಮಾತ್ರ ನಿರಾಳವಾಗಿ ನಡೆಯ ಬಹುದು.
 ಹೌದು ,ನಾನು ಈಗ ಯಾದವ ಗಿರಿಯ ವಲಯದಲ್ಲಿ ಮಾತ್ರ ನಡೆಯುತ್ತಿದ್ದೇನೆ. ಆದರೆ ಸಿಟಿ ಯಲ್ಲಿ ಸಾಧ್ಯವೇ ಇಲ್ಲ ಅಂತ ಆಗಿದೆ. ನಮ್ಮ ಈ ಮಾತುಗಳನ್ನು ಯಾವುದಾದರೂ ದೇವತೆಗಳು ಕೇಳಿ, ಈ ಕುಕ್ಕೆರೆ ಹಳ್ಳಿ ಕೆರೆ ಮತ್ತು ಕಾರಂಜಿ ಕೆರೆಗಳನ್ನು ಯಾವು ದಾದರೂ ಆರ್ಟ್ಸ್ ಕೌನ್ಸೆಲರ್‌ಗೆ ವಹಿಸಿ, ಅಲ್ಲಿ ಇತರ ಕಟ್ಟಡಗಳು ನಿರ್ಮಾಣವಾಗದ ಹಾಗೆ ಅವರು ನಿಗಾವಹಿಸಿ, ಸಮ ರ್ಪಕ ವಾದ ರೀತಿಯಲ್ಲಿ ಅದನ್ನು ಕಾಪಾಡಲಿ.
.ಇದು ಒಳ್ಳೆಯ ಶುಭ ಆರಂಭವಾಗಲಿ. ಯಾಕೆಂದರೆ ಎಲ್ಲ ನಗರಗಳಲ್ಲಿ ಇಂಥ ಸ್ಥಳಗಳನ್ನು ಟ್ರಸ್ಟ್‌ಗೆ ವಹಿಸಬೇಕು
ಮದ್ರಾಸ್‌ನ ಮರೀನ ಬಹಳ ಸುಂದರವಾದ ಒಂದು ತಾಣ, ಇಡೀ ನಮ್ಮ ಏಷ್ಯಾದಲ್ಲಿ. ಆದರೆ ಈಗ ಅದು ಹಲವಾರು ಮೂರ್ತಿಗಳಿಂದ ಆಕ್ರಮಿಸಲ್ಪಟ್ಟು ಕಾಣೆಯಾಗಿ ಹೋಗಿದೆ.
.ನಾವು ಇಂಥ ಸಂಗತಿಗಳು ಆಗದ ಹಾಗೆ ನೋಡಿಕೊಳ್ಳಬೇಕು
ಹೌದು ಹೌದು.
.ಇಲ್ಲವಾದಲ್ಲಿ ಬಹಳಷ್ಟು ಮೂರ್ತಿಗಳೇ ಕಾಣಸಿಕ್ಕಿ ನಮಗೆ ನಡೆಯಲು ಸ್ವಲ್ಪವೂ ಜಾಗ ಇಲ್ಲದಂತಾಗಬಹುದು. (ನಗು) ವಂದನೆಗಳು ಮಿಸ್ಟರ್ ನಾರಾಯಣ್.
ನನಗೂ ಕೂಡ ಇದು ಬಹಳ ಸಂತೋಷದ ವಿಷಯ ಆಗಿತ್ತು. ವಂದನೆಗಳು.
***
ಅಕ್ಷರ ರೂಪ ಮತ್ತು ಭಾಷಾಂತರ: ಡಾ.ನಿತ್ಯಾನಂದ ಬಿ ಶೆಟ್ಟಿ
(1985ರ ಮಾರ್ಚ್ 16ರಂದು ಮೈಸೂರು ಆಕಾಶವಾಣಿಗಾಗಿ ನಡೆಸಿದ ಸಂವಾದ)

ರೂಮಿ :ಮತ್ತೆ ನಾಲ್ಕು ಪದ್ಯಗಳು


 

ಜಲಾಲುದ್ದೀನ್ ರೂಮಿ
ಅನು : ಡಾ .ಎಚ್ .ಎಸ್ ಅನುಪಮಾAnupama in shimoga.JPG

ಚತುಷ್ಪದಿ 

ಓ ಸಾಕಿ, ಮೊದಲು ನೀನಿತ್ತ ಮದಿರೆಯ
ಇನ್ನೆರೆಡು ಬಟ್ಟಲು ಇತ್ತ ಕೊಡು, ಸುಖದಮಲು ಏರಿಸು.
ರುಚಿ ತೋರಿಸಬಾರದು,
ಹೂಜಿಯ ಬಿರಡೆ ತೆರೆದಮೇಲೆ ಕುಡಿದು ನಾಶವಾಗುವಷ್ಟು ಕೊಡಬೇಕು.

 ಇದಲ್ಲ

ಸತ್ಯವೇ ನೀನಾಗಬೇಕೆಂದರೆ ಧೈರ್ಯ ಬೇಕು.
ಪ್ರೇಮಿಯ ಬಳಿ ಬಿಚ್ಚಿ ತೆರೆದಿಟ್ಟ ಒಂದು ತಾವಿರುತ್ತದೆ.

ಲೋಕಕ್ಕೆ ಧೈರ್ಯ, ತೀವ್ರ ಅನುಕಂಪದ ಗುಣವೆಲ್ಲಿದೆ?
ಜಡ್ಡುಗಟ್ಟಿದ ಹಳೆ ಚಿಂತನೆಗಳಿಂದೇನು ಉಪಯೋಗವಿದೆ? 

ನನಗೊಂದು ಚೀರುವ ಗಾಯ ಬೇಕಾಗಿದೆ. 
ಚಿನ್ನ ತುಂಬಿಡುವ ತಿಜೋರಿಯಲ್ಲ, ತಾಮ್ರದ ಗೋಡೌನು.

ನಾವು ರಸವಿದ್ಯಾ ಚತುರರು. 
ಕಾದುಕಾದು ರೂಪ ಬದಲಿಸುವ ಗುಣವನ್ನೇ ಅರಸುತ್ತೇವೆ.

ಉಗುರು ಬೆಚ್ಚನೆಯ ಬಿಸಿ ಉಪಯೋಗವಿಲ್ಲ. 
ಅರೆಬರೆ ಮನಸ್ಸಿನ ಹಿಂಜರಿಯುವವರ ಜಾಗ ಇದಲ್ಲ.

 ಕಲ್ಪನೆಯ ಆಚೆಗೆ

ಸರಿ ತಪ್ಪುಗಳೆಂಬ ಕಲ್ಪನೆಯಾಚೆ
ಒಂದು ಬಯಲಿದೆ. ಅಲ್ಲಿ ನಿನ್ನನ್ನು ಸಂಧಿಸುತ್ತೇನೆ.

ಆತ್ಮವು ಆ ಬಯಲ ಗರಿಕೆ ಹಾಸಿನ ಮೇಲೆ ಒರಗಿದಾಗ
ಮಾತೇ ಬೇಡವೆನ್ನುವಷ್ಟು ಈ ಪ್ರಪಂಚ ತುಂಬಿಹೋಗಿದೆ.
ಕಲ್ಪನೆ, ಭಾಷೆ, ಸಂಬೋಧಿಸುವ ಪ್ರೇಮದ ನುಡಿ
ಎಲ್ಲವೂ ಅರ್ಥಹೀನವೆನಿಸುತ್ತಿವೆ.

ನೆರಳು ಬೆಳಕಿನ ಮೂಲ 

ಈ ಜಗದ ಒಂದು ಭಾಗ ಮತ್ತೊಂದನ್ನು ತೊರೆಯುವುದು ಹೇಗೆ?
ತೇವವು ನೀರನ್ನು ಅಗಲುವುದು ಹೇಗೆ?

ಬೆಂಕಿಗೆ ಮತ್ತಷ್ಟು ಬೆಂಕಿ ಸೇರಿಸಿ ಆರಿಸಲು ಯತ್ನಿಸಬೇಡ! 
ಗಾಯವನ್ನು ರಕ್ತದಲ್ಲಿ ತೊಳೆಯಬೇಡ.

ನೀನೆಷ್ಟೇ ವೇಗವಾಗಿ ಓಡು, ನಿನ್ನ ನೆರಳೂ
ಹಿಂಬಾಲಿಸುತ್ತದೆ. ಅದು ನಿನ್ನ ಸೇವಕ.

ನಿನ್ನ ಗಾಯಗೊಳಿಸಿದ್ದೇ ನಿನ್ನನ್ನು ಆಶೀರ್ವದಿಸುತ್ತದೆ. ಕತ್ತಲೆಯೇ
ನಿನ್ನ ಮೋಂಬತ್ತಿ. ಹುಡುಕಾಟವೇ ಗಡಿ ಗುರುತುಗಳು.

ನಾನಿದನ್ನು ವಿವರಿಸಬಲ್ಲೆ, ಆದರೆ ನಿನ್ನೆದೆಯ ಗಾಜಿನ
ಹೊರಕವಚ ಒಡೆದುಹೋದೀತು, ಮತ್ತದನು ಕೂಡಿಸಲಾಗದು. 

ನಿನ್ನ ಬಳಿ ನೆರಳು ಬೆಳಕು ಎರಡರ ಆಕರವೂ ಇರಬೇಕು.
ಕೇಳಿಲ್ಲಿ, ಭಯದ ಮರದಡಿ ನಿನ್ನ ತಲೆಯೂರು.

ಆ ಮರದಿಂದ ನಿನಗೆ ರೆಕ್ಕೆಪುಕ್ಕಗಳು ಮೂಡಿದಲ್ಲಿ,
ಪಾರಿವಾಳಕ್ಕಿಂತ ಶಾಂತನಾಗಿರು. ಬಾಯಿ ತೆರೆಯಬೇಡ
ಗುಟುರು ಹಾಕಲೆಂದೂ ಸಹಾ.

ಖೆರ್ಲಾಂಜಿ ನರಮೇಧದ ನೆನಪುಗಳು

 - ಡಾ.ಎನ್.ಜಗದೀಶ್ ಕೊಪ್ಪ

ವರ್ತಮಾನ 


ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಜಾತಿಯ ಅಮಲನ್ನುನ್ನು ನೆತ್ತಿಗೇರಿಸಿಕೊಂಡು ಮಾನವೀಯತೆಯನ್ನ ಮರೆತವರ ಬಗ್ಗೆ ಬರೆಯಲು ಈ ನೆಲದಲ್ಲಿ ಒಬ್ಬ ವ್ಯಕ್ತಿಗೆ ಅವನ ಪೂರ್ತಾ ಆಯಸ್ಸು ಸಾಲದು. ಈ ನೆಲದಲ್ಲಿ ನಿರಂತರ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಕ್ಕೆ, ವರ್ತಮಾನದ ಸಮಾಜದ ಅಸಹನೆಗೆ ಮತ್ತು ಅದರ ಜಾತೀಯ ಮನೋಭಾವಕ್ಕೆ ಹಾಳೆಯ ಮೇಲೆ ಅಕ್ಷರಗಳು ದಾಖಲಾಗಲು ಹೇಸಿಗೆ ಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಭಾರತದ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ದಲಿತ ಕುಟುಂಬವೊಂದರ ಸದಸ್ಯರ ನರಮೇಧ ನಡೆದು ಇಂದಿಗೆ ಆರು ವರ್ಷ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಖೆರ್ಲಾಂಜಿ ಗ್ರಾಮದಲ್ಲಿ 2006 ರ ಸೆಪ್ಟಂಬರ್ 29 ರಂದು ನಡೆದ ಈ ಅಮಾನುಷ ಘಟನೆ ಇಡೀ ಮನುಕುಲ ನಾಚಿಕೆಯಿಂದ ಮುದುಡಿಕೊಳ್ಳುವಂತಹದ್ದು. ಇಂದಿಗೂ ಸಮಾಜದಲ್ಲಿ ಜಾತಿ ಸಂಘಟನೆಗಳು ಎಷ್ಟು ಬಲಿಷ್ಟವಾಗಿವೆ ಮತ್ತು ಕ್ರೂರವಾಗಿವೆ ಎಂಬುದಕ್ಕೆ ಮನ ಕಲಕುವ ಈ ದುರಂತ ನಮ್ಮೆದುರು ಸಾಕ್ಷಿಯಾಗಿದೆ.
ಕಳೆದ ಜುಲೈ ತಿಂಗಳಿನಲ್ಲಿ ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಾದ ಗೊಂಡಿಯ ಮತ್ತು ಚಂದ್ರಾಪುರ್ ಮತ್ತು ಭಂಡಾರ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುತಿದ್ದಾಗ ಅನಿರಿಕ್ಷಿತವಾಗಿ ಈ ಹಳ್ಳಿಗೆ ಬೇಟಿ ನೀಡುವ ಸಂದರ್ಭ ಒದಗಿ ಬಂದಿತು. ನನಗೆ ಖೆರ್ಲಾಂಜಿ ಘಟನೆ ಗೊತ್ತಿತ್ತೇ ಹೊರತು, ಆ ಹಳ್ಳಿ ಭಂಡಾರ ಜಿಲ್ಲೆಯಲ್ಲಿ ಇದೆ ಎಂಬುದು ತಿಳಿದಿರಲಿಲ್ಲ.
ಜುಲೈ ಮೊದಲ ವಾರ ಭಂಡಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜೊಂದಕ್ಕೆ ಬೇಟಿ ನೀಡಿ, ಅಲ್ಲಿನ ಅಧ್ಯಾಪಕರ ಜೊತೆ ಭಂಡಾರ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹಬ್ಬಲು ಕಾರಣವಾದ ಅಂಶಗಳನ್ನು ಚರ್ಚಿಸುತಿದ್ದೆ. ಅಲ್ಲಿನ ಅಧ್ಯಾಪಕ ಮಿತ್ರರು ಭಂಡಾರ ಜಿಲ್ಲೆಯ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಕುರಿತು ಮಾತನಾಡುತ್ತಾ ಖೆರ್ಲಾಂಜಿ ಘಟನೆಯನ್ನು ವಿವರಿಸಿದಾಗ, ಭಾರತದ ಕಪ್ಪು ಇತಿಹಾಸದಲ್ಲಿ ಧಾಖಲಾಗಿರುವ ಈ ನತದೃಷ್ಟ ಗ್ರಾಮ ಭಂಡಾರ ಜಿಲ್ಲೆಯಲ್ಲಿದೆ ಎಂಬುದು ನನಗೆ ತಿಳಿಯಿತು. ಕಾಂಬ್ಳೆ ಎಂಬ ಮರಾಠಿ ಉಪನ್ಯಾಸಕ ಮಿತ್ರ ತನ್ನ ಮೋಟಾರ್ ಬೈಕ್‌ನಲ್ಲಿ ಈ ಗ್ರಾಮಕ್ಕೆ ಕರೆದೊಯ್ದು ಅಂದಿನ ಕರಾಳ ಕೃತ್ಯವನ್ನು ವಿವರಿಸಿದ.
ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಗೆ ಹೊಂದಿಕೊಂಡಿಂತೆ ಇರುವ ಭಂಡಾರ ಜಿಲ್ಲೆ ಇವತ್ತಿಗೂ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಚಂದ್ರಭಾಗ ಎಂಬ ನದಿಯ ಕಾರಣ ಒಂದಿಷ್ಟು ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಜಿಲ್ಲಾ ಕೇಂದ್ರವಾದ ಭಂಡಾರದಿಂದ 26 ಕಿಲೋಮೀಟರ್ ದೂರವಿರುವ ಖೆರ್ಲಾಂಜಿ ಗ್ರಾಮ ಬಹುತೇಕ ಹಿಂದುಳಿದ ಜಾತಿಯ ಜನರು ವಾಸಿಸುವ ಒಂದು ಕುಗ್ರಾಮ. ಕುಣಬಿ ಎಂಬ ಹಿಂದುಳಿದ ಜನಾಂಗದ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ಒಂದಿಷ್ಟು ಮಂದಿ ದಲಿತರಿದ್ದು ಅವರೆಲ್ಲಾ ವಿದ್ಯಾವಂತರಾಗಿರುವುದು ವಿಶೇಷ. ದಲಿತರ ಪಾಲಿನ ಸ್ವಾಭಿಮಾನ ಮತ್ತು ಆತ್ಮ ಸಾಕ್ಷಿಯಂತಿರುವ ಡಾ. ಅಂಬೇಡ್ಕರ್ ಇದೇ ನಾಗಪುರ ಪ್ರಾಂತ್ರಕ್ಕೆ ಸೇರಿದ ಮೂಲದವರು ಎಂಬ ಹೆಮ್ಮೆ ಈ ಭಾಗದ ದಲಿತರಿಗೆ ಇಂದಿಗೂ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ಅಂಬೇಡ್ಕರ್ ರವರಿಂದ ಪ್ರೇರಿತವಾಗಿರುವ ಪ್ರತಿಯೊಂದು ದಲಿತ ಕುಟುಂಬದಲ್ಲಿ ವಿದ್ಯಾವಂತ ಯುವ ತಲೆಮಾರು ಇರುವುದು ಇಲ್ಲಿಯ ವಿಶೇಷ.
ಖೆರ್ಲಾಂಜಿ ಗ್ರಾಮದ ಬಯ್ಯಲಾಲ್ ಬೂತ್‌ಮಾಂಗೆ ಎಂಬ ದಲಿತ ಕುಟುಂಬದ ಸದಸ್ಯರೆಲ್ಲರೂ ವಿದ್ಯಾವಂತರಾಗಿದ್ದು, ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿ ಹಳ್ಳಿಯ ಜನರ ನಡುವೆ ಸ್ವಾಭಿಮಾನದ ಬದುಕನ್ನು ಕಂಡುಕೊಂಡಿದ್ದರು. ಬಯ್ಯಾಲಾಲ್‌ಗೆ ಐದು ಎಕರೆ ನೀರಾವರಿ ಭೂಮಿ ಇದ್ದ ಕಾರಣ ತಮ್ಮ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಜೊತೆಗೆ ಪತ್ನಿ ಸುರೇಖ ಕೂಡ ಪಿ.ಯು.ಸಿ. ವರೆಗೆ ಓದಿದ್ದ ಹೆಣ್ಣುಮಗಳಾಗಿದ್ದಳು. ಯಾವುದೇ ಅನ್ಯಾದ ವಿರುದ್ಧ ಸಿಡಿದೇಳುವ ಶಕ್ತಿಯನ್ನು ಈ ದಲಿತ ಕುಟುಂಬ ಹೊಂದಿರುವುದನ್ನು ಕಂಡು ಕೆಲವು ಮೇಲ್ಜಾತಿ ಜನರ ಕಣ್ಣುಗಳು ಕೆಂಪಾಗಿದ್ದವು.
ಭಂಡಾರ ಜಿಲ್ಲೆಯಲ್ಲಿ ಇನ್ನೊಂದು ಹಿಂದುಳಿತ ಜಾತಿಗೆ ಸೇರಿದ ಕುಣುಬಿ ಜನಾಂಗ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿತ್ತು. ಬಹುತೇಕ ವಿಧಾನ ಸಭಾಕ್ಷೇತ್ರಗಳು, ಗ್ರಾಮ ಪಂಚಾಯಿತು, ತಾಲ್ಲೋಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ಈ ಜಾತಿಗೆ ಸೇರಿದ ಜನಪ್ರತಿನಿಧಿಗಳ ಸ್ವತ್ತಾಗಿದ್ದವು.
ಬಯ್ಯಾಲಾಲ್ ಬೂತ್‌ಮಾಂಗೆ ತನ್ನ ಜಮೀನಿಗೆ ಸಂಬಂಧಪಟ್ಟ ವಿವಾದಕ್ಕೆ ತನ್ನ ಹಳ್ಳಿಯ ಕುಣುಬಿ ಜನಾಂಗದ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸಿದ ಪರಿಣಾಮವಾಗಿ ಇತಿಹಾಸ ಕಂಡರಿಯದ ಅಮಾನವೀಯ ರೀತಿಯಲ್ಲಿ ಖೆರ್ಲಾಂಜಿಯಲ್ಲಿ ದಲಿತ ಕುಟುಂಬದ ನರಮೇಧವೊಂದು ನಡೆದು ಹೋಯಿತು.
2006 ರ ಸೆಪ್ಟಂಬರ್ 29 ರಂದು ಬಯ್ಯಾಲಾಲ್ ತನ್ನ ಜಮೀನಿಗೆ ಹೋದ ಸಂದರ್ಭದಲ್ಲಿ ನೇರವಾಗಿ ಅವನ ಮನೆಗೆ ನುಗ್ಗಿದ ಕುಣಬಿ ಜನಾಂಗದ ಸದಸ್ಯರು ಪತ್ನಿ ಸುರೇಖ ಮತ್ತು ಮಗಳು 19 ವರ್ಷದ ಪ್ರಿಯಾಂಕಳನ್ನು ಮನೆಯಿಂದ ಹೊರೆಗೆ ಎಳೆದು ತಂದು ಅವರನ್ನು ನಗ್ನಗೊಳಿಸಿ ಖೆರ್ಲಾಂಜಿ ಹಳ್ಳಿಯ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಇದನ್ನು ತಡೆಯಲು ಬಂದ ಇಬ್ಬರು ಗಂಡು ಮಕ್ಕಳಾದ ಕಿಶನ್ ಮತ್ತು ಸುಧೀರ್  ಅವರನ್ನು ಸಹ ಅರನಗ್ನಗೊಳಿಸಿ, ಥಳಿಸಿ ಮರೆವಣಿಗೆಯಲ್ಲಿ ಕೊಂಡೊಯ್ದರು. ಊರಿನ ಮಧ್ಯಭಾಗಕ್ಕೆ ಈ ಅಮಾಯಕರನ್ನು ಕರೆತಂದ ಜನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಜೀವ ಹೋಗುವವರೆಗೂ ತುಳಿದರು. ಕ್ಷಣದಲ್ಲಿ ಜಾತಿಯ ದೆವ್ವ ಮೆಟ್ಟಿದವರಂತೆ ವರ್ತಿಸುತಿದ್ದ ಕುಣಬಿ ಜನಾಂಗದ ಈ ಅಮಾನುಷ ಕೃತ್ಯವನ್ನು ತಡೆಯುವ ಶಕ್ತಿ ಆ ಹಳ್ಳಿಯಲ್ಲಿ ಯಾರಿಗೂ ಇರಲಿಲ್ಲ. ಎಲ್ಲರೂ ಮೌನವಾಗಿ ಈ ನರಮೇಧಕ್ಕೆ ಸಾಕ್ಷಿಯಾದರು. ಒಬ್ಬ ಮಗನ (ಸುಧೀರ್) ಶವವನ್ನು ಊರಾಚೆಗಿನ ಕಾಲುವೆಗೆ ತೆಗೆದುಕೊಂಡು ಹೋಗಿ ಬಿಸಾಡಿದರು. ಈ ಘಟನೆಯ ವೇಳೆ ಬಯ್ಯಾಲಾಲ್ ಮನೆಯಲ್ಲಿ ಇಲ್ಲದ ಕಾರಣ ಅವನ ಜೀವ ಮಾತ್ರ ಉಳಿಯಿತು. (ಅಲ್ಲಿ ಸಂಗ್ರಹಿಸಿಕೊಂಡು ಬಂದ ಚಿತ್ರಗಳೇ ಘಟನೆಯ ಭೀಕರತೆಯನ್ನು ಹೇಳುತ್ತವೆ.)
ದುರಂತವೆಂದರೆ, ಇಡೀ ಭಾರತವೇ ನಾಚಿ ತಲೆ ತಗ್ಗಿಸುವಂತಹ ಈ ಘಟನೆ ನಡೆದರೂ ಇದು ಯಾವುದೇ ಪತ್ರಿಕೆಯಲ್ಲಿ, ಅಥವಾ ದೃಶ್ಯ ಮಾಧ್ಯದಲ್ಲಿ ಮೊದಲ ನಾಲ್ಕು ದಿನಗಳ ಕಾಲ ಸುದಿಯಾಗಲಿಲ್ಲ. ನಾಗಪುರದ ಟೈಮ್ಸ್ ಆಪ್ ಇಂಡಿಯಾದ ಪ್ರತಿನಿಧಿ ಸಬ್ರಿನಾ ಬರ್‌ವಾಲ್ಟರ್ ಎಂಬುವರು ಈ ಹಳ್ಳಿಗೆ ತೆರಳಿ, ಅಲ್ಲಿನ ಕೆಲವು ದಲಿತ ಯುವಕರು ತೆಗೆದಿದ್ದ ಛಾಯಾ ಚಿತ್ರಗಳನ್ನು ಸಂಗ್ರಹಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ಧಿಮಾಡಿದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತು. ನಂತರ ನಾಗಪುರದಲ್ಲಿ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಹಿಂಸೆಗೆ ಇಳಿದಾಗ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಸರ್ಕಾರ ಘಟನೆಯನ್ನು ಸಿ.ಬಿ.ಐ. ಗೆ ವಹಿಸಿತು. ನಂತರ ರಾಷ್ಟ್ರ ಮಟ್ಟದಲ್ಲಿ ಅನೇಕ ಸ್ವತಂತ್ರ ತನಿಖಾ ಆಯೋಗಗಳು ಖೇರ್ಲಾಂಜಿ ಗ್ರಾಮಕ್ಕೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದವು. ಘಟನೆಯ ಹಿಂದೆ ಕುಣಭಿ ಜಾತಿಗೆ ಸೇರಿದ್ದ ಸ್ಥಳಿಯ ಬಿ.ಜೆ.ಪಿ. ಶಾಸಕ ಕುರ್ಡೆಯ ಕೈವಾಡವಿದೆ ಎಂದು ಸಹ ಅನೇಕ ಸಂಘಟನೆಗಳು ಆರೋಪಿಸಿದ್ದವು.
ಸಿ.ಬಿ.ಐ. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿತು. 2008ರಲ್ಲಿ ಭಂಡಾರ ಜಿಲ್ಲಾ ನ್ಯಾಯಾಲಯ 24 ಬಂಧಿತ ಆರೋಪಿಗಳಲ್ಲಿ ಎಂಟು ಮಂದಿಗೆ ಗಲ್ಲು ಶಿಕ್ಷೆ ಮತ್ತು ಆರು ಮಂದಿಗೆ 25 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ಉಳಿದವರನ್ನು ಸಾಕ್ಷಾಧಾರಗಳ ಕೊರತೆಯ ಮೇಲೆ ಖುಲಾಸೆಗೊಳಿಸಿತು. ಆರೋಪಿಗಳು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ನಾಗಪುರದ ವಿಭಾಗೀಯ ಹೈಕೋರ್ಟ್ ಪೀಠದ ಮೆಟ್ಟಿಲೇರಿದಾಗ, ವಿಭಾಗೀಯ ಪೀಠ ಭಂಡಾರದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು 2008ರ ಜುಲೈನಲ್ಲಿಎತ್ತಿ ಹಿಡಿಯಿತು. ಮತ್ತೇ ಅರೋಪಿಗಳು ಮುಂಬೈ ಹೈಕೋರ್ಟ್ ನ್ಯಾಯಾಲಯದ ಕದತಟ್ಟಿದರು. ಮುಂಬೈ ಉಚ್ಛ ನ್ಯಾಯಾಲಯ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಎಂಟು ಮಂದಿ ಆರೋಪಿಗಳಲ್ಲಿ ಆರುಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಕೇವಲ ಇಬ್ಬರಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸಿತು. ಈ ಕುರಿತು ಈಗ ನರಮೇಧದಲ್ಲಿ ಉಳಿದ ದಲಿತ ಬಯ್ಯಾಲಾಲ್ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಜೊತೆಗೆ ಜೀವ ಭಯದಿಂದ ತನ್ನೂರಾದ ಖೆರ್ಲಾಂಜಿಯನ್ನು ತೊರೆದಿದ್ದಾನೆ. ಇವನಿಗೆ ಮಹಾರಾಷ್ಟ್ರ ದ ದಲಿತ ಚಿಂತಕ ಹಾಗೂ ಲೇಖಕ ಆನಂದ್ ತೇಲ್ತುಬ್ಡೆ ಆಸರೆಯಾಗಿ ನಿಂತು ಹೋರಾಟ ನಡೆಸುತಿದ್ದಾರೆ.
ಜಾತಿಪದ್ಧತಿಯ ವಿನಾಶಕ್ಕೆ ಹನ್ನೊಂದನೇ ಶತಮಾನದ ಬಸವಣ್ಣ ನಿಂದ ಹಿಡಿದು 20ನೇ ಶತಮಾನದ ಗಾಂಧಿ, ಅಂಬೇಡ್ಕರ್, ಲೋಹಿಯಾ ವರೆಗೆ ಅನೇಕ ಮಹನೀಯರು ಜೀವನ ಪೂರ್ತಿ ಹೊರಾಡಿದರೂ ಅದು ಹಲವು ರೂಪಗಳಲ್ಲಿ ಮೈದಾಳುತ್ತ್ತಾ ಮನುಕುಲಕ್ಕೆ ಸವಾಲಾಗುತ್ತಾ ನಿಂತಿರುವುದಕ್ಕೆ ಈ ಖೆರ್ಲಾಂಜಿ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗಿನ ದಶಕದಲ್ಲಿ ಜಾತಿ ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಮಾಂಸ, ಮಜ್ಜೆ ಮತ್ತು ರಕ್ತವಾಗಿ ಎಲ್ಲಾ ಅಧಿಕಾರಸ್ಥ ಜನಗಳ ಮತ್ತು ಜನಪ್ರತಿನಿಧಿಗಳ ನರನಾಡಿಗಳಲ್ಲಿ ಹರಿಯುತ್ತಿರುವುದನ್ನು ಗಮನಿಸಿದರೆ, ಭವಿಷ್ಯ ಭಾರತದ ಬಗ್ಗೆ ಯಾವ ಆಶಯ ಮತ್ತು ಕನಸುಗಳು ಪಜ್ಞಾವಂತರ ಎದೆಯಲ್ಲಿ ಈಗ ಹಸಿರಾಗಿ ಉಳಿದಿಲ್ಲ. ಉಳಿಯುವ ಸಾಧ್ಯತೆಗಳು ಕೂಡ ಇಲ್ಲ.

ನೆನಪುಗಳ ಅಲಂಕಾರದಲ್ಲಿ ವಿಷಾದ ಎಂಬ ಪರದೆ...- ಶೂದ್ರ ಶ್ರೀನಿವಾಸ್


ವಾರ್ತಾಭಾರತಿ


ಸೆಪ್ಟಂಬರ್ 15ರಂದು ಶನಿವಾರ 2012 ಹಳೆಯ ನೆನಪನ್ನು ಮುಂದಿಟ್ಟ ಸಂಜೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಇದನ್ನು ನೆನೆದಾಗ ತುರ್ತು ಪರಿಸ್ಥಿತಿಯ ನಂತರ ಜಯಪ್ರಕಾಶ್ ನಾರಾಯಣ ಅವರು ಇಲ್ಲಿ ಮುಖಾಮುಖಿಯಾದ ಸಂಜೆ. ಅಂದು ಅವರು ಪ್ರಜಾಪ್ರಭುತ್ವ, ರಾಜಕೀಯ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಮಾತಾಡಿದ್ದರು. ಅವರ ಅನಾರೋಗ್ಯದ ಕಾರಣಕ್ಕಾಗಿ ತುಂಬ ನಿಧಾನವಾಗಿ ಮೆಲುದನಿಯಲ್ಲಿ ಮಾತಾಡುತ್ತಿದ್ದರು; ಜನಸ್ತೋಮ ಗಂಭೀರವಾಗಿ ಆಲಿಸುತ್ತಿತ್ತು. ಯಾಕೆಂದರೆ ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ; ವರ್ತಮಾನ ಬದುಕಿಗೆ ಸಾಕ್ಷಿಭೂತವಾಗಿದ್ದವರು. ಬದುಕಿ ನುದ್ದಕ್ಕೂ ರಾಜಕೀಯ ನೈತಿಕತೆ ಕುರಿತಂತೆ ಗಟ್ಟಿ ಧ್ವನಿಯನ್ನು ದಾಖಲಿಸಿದವರು. ಒಂದು ಹಂತದಲ್ಲಿ ನೆಹರೂ ಅವರ ನಂತರ ಜಯಪ್ರಕಾಶ್ ನಾರಾಯಣ ಅವರು ಎಂಬುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದುದು ನೆನಪಾಗುತ್ತಿದೆ. ಅವರು ಆಗಬಹುದಾಗಿತ್ತು. ಆದರೆ ಆಗಲಿಲ್ಲ. ಯಾಕೆಂದರೆ: ಅವರು ರಾಜಕಾರಣದಲ್ಲಿಯೇ ಕಚ್ಚಿಕೊಳ್ಳಲಿಲ್ಲ.
ಅಲ್ಲಿ ಬೇಸರವಾದಾಗ ಭೂದಾನ ಚಳವಳಿ ಮತ್ತು ಸರ್ವೋದಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಆದ್ದರಿಂದ ಪೂರ್ಣ ಪ್ರಮಾಣದ ರಾಜಕಾರಣಿಯಾಗಲಿಲ್ಲ. ಇದು ಅವರ ವ್ಯಕ್ತಿತ್ವದಲ್ಲಿದ್ದ ವೈರುಧ್ಯವಾಗಿತ್ತು. ಒಂದು ದೃಷ್ಟಿಯಿಂದ ಇದರ ಮುಂದುವರಿದ ಭಾಗವಾಗಿಯೇ ಇತ್ತು: ನವನಿರ್ಮಾಣ ಕ್ರಾಂತಿಯಂಥ ಚಳವಳಿ. ಅವರ ಪ್ರಮಾಣಿಕತೆಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ರಾಷ್ಟ್ರದುದ್ದಕ್ಕೂ ಚುನಾಯಿತ ಪ್ರತಿನಿಧಿಗಳಿಗೆ ರಾಜೀನಾಮೆಯನ್ನು ಕೊಟ್ಟು ಹೊರಗೆ ಬಂದು ಚಳವಳಿಯಲ್ಲಿ ಭಾಗಿಯಾಗಿ ಎಂದು ಕರೆಕೊಟ್ಟರು. ಯಾವ ಅರ್ಥಪೂರ್ಣ ರಾಜಕೀಯ ಸಂಘಟನೆಗಳ ಜೊತೆ ಚರ್ಚಿಸಲಿಲ್ಲ. ಎಡಬಿಡಂಗಿತನದಿಂದ ತಮ್ಮ ಸುತ್ತಲೂ ಇದ್ದ ಆರೆಸ್ಸೆಸ್ ಕಾರ್ಯಕರ್ತರೇ, ದೊಡ್ಡಶಕ್ತಿ ಎಂಬ ವ್ಯಾಮೋಹಕ್ಕೆ ತುತ್ತಾದರು. ಇದು ಚಾರಿತ್ರಿಕ ವೈಪರೀತ್ಯವೂ ಹೌದು.

ಇದೆಲ್ಲವೂ ನೆನಪಾದದ್ದು: ನಾನಾ ಕಾರಣಗಳಿಗಾಗಿ ಜಯಪ್ರಕಾಶ್ ನಾರಾಯಣ ಅವರನ್ನು ಇಷ್ಟಪಡುತ್ತಿದ್ದ; ಕುಲದೀಪ ನಾಯರ ಅವರು ಗಾಂಧೀಜಿ ಯವರ ಧ್ಯಾನಸ್ಥ ಭಾವಚಿತ್ರದ ಮುಂದೆ ಕೂತಿದ್ದರು. ಅಲ್ಲಿಯೇ ಜಯಪ್ರಕಾಶ್ ನಾರಾಯಣ ಅವರು ‘ಪ್ರಜಾಪ್ರಭುತ್ವ, ರಾಜಕೀಯ ಮತ್ತು ಮಾನವ ಹಕ್ಕುಗಳು’ ಎಂಬ ಅಮೂಲ್ಯ ಧ್ವನಿಯನ್ನು ಕುರಿತು ಒತ್ತಿ ಒತ್ತಿ ಹೇಳಿದ್ದರು. ಇದರ ಮುಂದುವರಿದ ಭಾಗ ವೆನ್ನುವಂತೆ ಒಬ್ಬ ಪ್ರಮಾಣಿಕ ಪತ್ರಕರ್ತರಾಗಿ, ರಾಜಕೀಯ ಚಿಂತಕರಾಗಿ ಹೋರಾಡುತ್ತಲೇ ಬಂದಿದ್ದಾರೆ. ಹಾಗೆಯೇ ಭಾರತದ ಮತ್ತು ಪಾಕಿಸ್ತಾನದ ಸಂಬಂಧ ಮತ್ತೆ ಎಂದೆಂದಿಗೂ ಬೆಸುಗೆಯಾಗಲು ಸಾಧ್ಯವಿಲ್ಲ ಎಂಬ ಹಂತವನ್ನು ತಲುಪದಂತೆ ಹೋರಾಡುತ್ತ ಬಂದವರು. ಅದರ ಒಟ್ಟು ತಾತ್ಪರ್ಯವೆನ್ನುವಂತೆ; ಕುಲದೀಪ ನಯ್ಯರ್ ಅವರ ಇತ್ತೀಚಿನ ಮಹತ್ವಪೂರ್ಣ ಕೃತಿ ‘ಬಿಯಾಂಡ್ ದಿ ಲೈನ್ಸ್’ ಕನ್ನಡಕ್ಕೆ ಒಂದು ಉತ್ತಮ ಅನುವಾದವಾಗಿ ಡಾ. ಆರ್. ಪೂರ್ಣಿಮಾ ಅವರಿಂದ ಹೊರಗೆ ಬಂದಿದೆ.
ಅದು ‘ಒಂದು ಜೀವನ ಸಾಲದು’ ಎಂಬ ಅರ್ಥಪೂರ್ಣ ಶೀರ್ಷಿಕೆಯ ಮೂಲಕ ಹೊರಗೆ ಬಂದಿದೆ. ಅದರ ಬಿಡುಗಡೆಯ ದಿವಸ ತೊಂಬತ್ತು ವರ್ಷದ ಮಾನವ ಪ್ರೇಮಿ ಜಯಪ್ರಕಾಶ್ ನಾರಾಯಣ ಅವರ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಮಾನವ ಹಕ್ಕುಗಳ ದೊಡ್ಡ ಹೋರಾಟಗಾರರಾಗಿ ಎದ್ದು ಕಾಣುವಂತೆ ಕೂತಿದ್ದರು. ಜೆ.ಪಿ.ಯವರು ಎರಡು ಮುಖ್ಯ ಮಾನವ ಹಕ್ಕುಗಳ ಸಂಘಟನೆಗಳನ್ನು ಪ್ರಾರಂಭಿಸಿದರು.

ಒಂದು: ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್’ (ಪಿಯುಸಿಎಲ್) ಮತ್ತೊಂದು ‘ಸಿಟಿಜನ್ ಫಾರ್ ಡೆಮಾಕ್ರಸಿ’ (ಸಿಎಫ್‌ಡಿ) ರಾಷ್ಟ್ರಮಟ್ಟದಲ್ಲಿ ‘ಪಿಯುಸಿಎಲ್’ ಸಂಘಟನೆಯನ್ನು ನ್ಯಾಯಮೂರ್ತಿ ವಿ.ಎಂ.ತಾರ್ಕುಂಡೆ ಯವರು ‘ಸಿಎಫ್‌ಡಿ’ಯನ್ನು ಕುಲದೀಪ ನಯ್ಯರ್ ಅವರು ತೆಗೆದುಕೊಂಡರು. ಒಂದಷ್ಟು ವರ್ಷ ಈ ಎರಡೂ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸದಾವಕಾಶ ನನಗೆ ದೊರಕಿತ್ತು. ಹಾಗೆಯೇ ಕುಲದೀಪ ನಯ್ಯರ್ ಅವರ ಕಾರಣಕ್ಕಾಗಿ ‘ಭಾರತ ಮತ್ತು ಪಾಕಿಸ್ತಾನ’ದ ಸ್ನೇಹಕೂಟ ಸಂಘಟನೆಯಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಯಿತು.
ವರ್ಷಕ್ಕೆ ಮೂರು ನಾಲ್ಕು ಬಾರಿ ಸಿಕ್ಕಿದಾಗಲೆಲ್ಲ; ವಿಶ್ವದ ಮಟ್ಟದಲ್ಲಿ ಹಾಗೂ ಮುಖ್ಯವಾಗಿ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಎಂತೆಂಥ ಮಾಹಿತಿಯನ್ನು ನಮಗೆ ತಲುಪಿಸುತ್ತಿದ್ದರು. ಮೂರು ವರ್ಷ ನಾನು ಕರ್ನಾಟಕ ವಿಭಾಗದ ಸಿಎಫ್‌ಡಿಯ ಉಪಾಧ್ಯಕ್ಷನಾಗಿದ್ದಾಗ; ಮತೀಯ ಸಾಮರಸ್ಯಕ್ಕೆ ಅನ್ವಯಿಸಿ ಕೆಲವು ಅರ್ಥಪೂರ್ಣ ವರದಿಗಳನ್ನು ಸಿದ್ಧಪಡಿಸಲು ಪ್ರೇರೇಪಿಸಿದರು.ಈ ಕಾರಣಕ್ಕಾಗಿ ವಿಶ್ವಮಟ್ಟದ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ವೌಲಿಕ ಬುಲೆ ಬಿನ್‌ಗಳನ್ನು ಅಧ್ಯಯನ ಮಾಡಲು ಸಾಧ್ಯವಾಯಿತು. ಆಗ ‘ಪ್ರಜಾಪ್ರಭುತ್ವ, ರಾಜಕೀಯ ಮತ್ತು ಮಾನವ ಹಕ್ಕುಗಳ ಹೋರಾಟ’ ಒಟ್ಟೊಟ್ಟಿಗೆ ನಡೆಯು ವಂಥದ್ದು ಎಂದು ಗಂಭೀರವಾಗಿ ತಿಳಿಯಲು ಸಾಧ್ಯವಾಗಿದೆ.
ಈ ಹಂತದಲ್ಲಿಯೇ ಅಮೆರಿಕಾದ ನೋಮ್ ಜೋಮ್‌ಸ್ಕಿಯವರಂಥ ಭಾಷಾ ಶಾಸ್ತ್ರಜ್ಞ ಮತ್ತು ಇತಿಹಾಸಕಾರ ಸದಾ ಪ್ರಾತಃಸ್ಮರಣೀಯರಾಗಿ ಕಾಣುವುದು. ಸುಮಾರು ನಲವತ್ತು ವರ್ಷಗಳ ಹಿಂದೆ ಓದಿದ ಚೋಮ್‌ಸ್ಕಿ ಯವರ ‘ವಿಯಟ್ನಾಂ’ ಕುರಿತ ಕೃತಿ ಇಂದಿಗೂ ಅಪೂರ್ವ ದಾಖಲೆ ಎಂದು ಭಾವಿಸುವೆ. ಈ ದೃಷ್ಟಿಯಿಂದ ಗಾಂಧೀಜಿಯವರು ಪ್ರಸ್ತಾಪಿಸುವ ‘ಸ್ವರಾಜ್ಯ’ ಪರಿಕಲ್ಪನೆಯನ್ನು ನಮ್ಮ ಚಿಂತನಾಕ್ರಮ ದೊಳಗೆ ಬಿಟ್ಟುಕೊಳ್ಳದಿದ್ದರೆ; ಅದರ ಅರ್ಥ ಪೂರ್ಣತೆ ಅರಿವಾಗುವುದೇ ಇಲ್ಲ.
ಆ ಸ್ವರಾಜ್ಯದ ಸಾಲುಗಳು ಹೀಗಿವೆ: ‘‘ಸ್ವರಾಜ್ಯ ಬರೀ ಕನಸಲ್ಲ. ಸುಮ್ಮನೆ ನಿಷ್ಕ್ರಿಯನಾಗಿ ಕೂಡುವುದೂ ಅಲ್ಲ. ಒಂದು ಸಲ ನಮಗೆ ಸ್ವರಾಜ್ಯ ಅನುಭವವಾದರೆ ನಮ್ಮ ಜೀವನ ಪರ್ಯಂತ ಇತರರನ್ನೂ ಅದೇ ರೀತಿ ಮಾಡುವಂತೆ ಪ್ರೇರೇಪಿಸಲು ಯತ್ನಿಸಿಯೇವು-ಇಂಥದು ನಾನು ಚಿತ್ರಿಸುವ ಸ್ವರಾಜ್ಯ ಚಿತ್ರ. ಆದರೆ ಈ ಸ್ವರಾಜ್ಯವನ್ನು ಪ್ರತಿ ಯೊಬ್ಬನೂ ಅನುಭವಿಸಬೇಕು. ತಾನು ಮುಳುಗುವವನು ಪರರನ್ನು ಉಳಿಸಬಲ್ಲನೆ? ತಾನೇ ಗುಲಾಮನಾದವನು ಪರರನ್ನು ಹೇಗೆ ಬಿಡುಗಡೆ ಮಾಡಬಲ್ಲ?’’ ಗಾಂಧೀಜಿಯವರ ಈ ಸಾಲುಗಳು ‘ಪಿಯುಸಿಎಲ್’ ಮತ್ತು ‘ಸಿಎಫ್‌ಡಿ’ ಮೂಲಕ ಹೆಚ್ಚು ಅರ್ಥ ವಿಸ್ತಾರಗೊಂಡಿದೆ. ಇದಕ್ಕೆ ಪೂರಕವೆಂಬಂತೆ ನಮ್ಮ ನಮ್ಮ ಬದುಕಿನ ಬಾಹುಳ್ಯಕ್ಕೆ ಎಂತೆಂಥ ಮಹನೀಯರು ಬಂದು ಹೋಗಿರುತ್ತಾರೆ.
ಹಾಗೆ ನೋಡಿದರೆ ಬೆಂಗಳೂರಿನ ಗಾಂಧಿಭವನದಲ್ಲಿ ‘ಒಂದು ಜೀವನ ಸಾಲದು’ ಕೃತಿಯ ಬಿಡುಗಡೆಯ ದಿವಸ ಅವರ ಬಳಿಗೆ ಹೋಗಿ ಬಗ್ಗಿ ‘‘ಕುಲದೀಪಜೀ ನಾನು ಶೂದ್ರ’’ ಎಂದಾಗ. ತಲೆಯ ಮೇಲೆ ಕೈ ಇಟ್ಟು ‘‘ಆಯ್ ಶೂದ್ರ, ಎಷ್ಟು ದಿವಸವಾಯಿತು ನೋಡಿ’’ ಎಂದಾಗ ಖುಷಿಯಾಯಿತು. ಅವರ ಪಕ್ಕದಲ್ಲಿ ಭಾರತಿ ಕುಲದೀಪಜೀಯವರು ಕೂತಿದ್ದರು. ಸುಮಾರು ಹದಿನೇಳು ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಾವು ನೋಡಿದಾಗ ಯಾವ ನಗುವನ್ನು ತುಂಬಿ ಕೊಂಡಿದ್ದರೋ; ಅದೇ ನಗು ಗಾಂಧಿಭವನದಲ್ಲಿ ಕಂಡಾಗಲೂ ಇತ್ತು.
ನಾವು ಪಾಕಿಸ್ತಾನದ ಲಾಹೋರಿನಲ್ಲಿ ಶಾಂತಿ ಸಮ್ಮೇಳನ ಮುಗಿಸಿ ದಿಲ್ಲಿಗೆ ಬಂದಾಗ ಕುಲದೀಪ ನಯ್ಯರ್ ಅವರನ್ನು ಭೇಟಿಯಾಗಲು ಪ್ರೊ.ಹಸನ್ ಮನ್ಸೂರು ಅವರ ಜೊತೆ ನಾನು ಮತ್ತು ಜಿ.ಕೆ.ಸಿ.ರೆಡ್ಡಿ ಹೋಗಿದ್ದೆವು. ಸುಮಾರು ನಾಲ್ಕೈದು ಗಂಟೆ ಎಷ್ಟು ಚೆನ್ನಾಗಿ ಅವರ ಮನೆಯಲ್ಲಿ ಕಳೆದೆವು. ಭಾರತಿ ಕುಲದೀಪ್‌ಜೀಯವರು ಎರಡು ಬಾರಿ ತಿಂಡಿ ಮತ್ತು ಟೀ ಕೊಡುವಾಗ ಎಷ್ಟು ಅಕ್ಕರೆಯಿಂದ ನೋಡಿಕೊಂಡರು. ಈ ಅಕ್ಕರೆಯೂ ಕೂಡ ಮಾನವ ಹಕ್ಕುಗಳ ಚೈತನ್ಯದಿಂದ ಕೂಡಿರುವಂಥದ್ದು. ಯಾಕೆಂದರೆ ಕುಲದೀಪ ನಯ್ಯರ್ ಅವರಂಥ ಎತ್ತರದ ವ್ಯಕ್ತಿತ್ವವನ್ನು ಹೊಂದಿ ರುವಂಥವರು. ಜಗತ್ತಿನ ನಾನಾ ರೀತಿಯ ಮಹನೀಯರು ಬಂದು ಹೋಗಿರುತ್ತಾರೆ. ಆಗ ಅವರ ವಿವಿಧ ಮುಖಗಳನ್ನು ಆತ್ಮೀಯ ಗೃಹಿಣಿಯಾಗಿ ಭಾರತೀಯವರು ಕಂಡಿರುತ್ತಾರೆ.
ಪುಸ್ತಕ ಬಿಡುಗಡೆಯ ಸಮಯದಲ್ಲಿ ನಾವು ಅವರ ಪಕ್ಕದಲ್ಲಿ ಕೂತಿದ್ದಾಗ; ಅವರ ತಂದೆ ಭೀಮಸೇನಾ ಸಾಚಾರ್ ಅವರ ಬಗ್ಗೆ ಕೇಳೋಣ ಅನ್ನಿಸಿತು. ಯಾಕೆಂದರೆ ನ್ಯಾಯಮೂರ್ತಿ ಸಾಚಾರ್ ಭಾರತದ ಅಲ್ಪಸಂಖ್ಯಾತರ ಬಗ್ಗೆ ಅತ್ಯುತ್ತಮ ವರದಿಯನ್ನು ಸಿದ್ಧಪಡಿಸಿದವರು. ನಾವು ಕುಲದೀಪ ನಯ್ಯರ್ ಅವರ ಮನೆಯಿಂದ ಹೊರಟು ಸಾಚಾರ್ ಅವರ ಮನೆಗೂ ಹೋಗಿ ಬಂದೆವು. ಇಲ್ಲೆಲ್ಲ ಅವರ ಅನುಭವದ ತುಣುಕುಗಳನ್ನು ಒಂದಷ್ಟು ಧಾರೆಯೆರೆದಾಗ; ನಾನಂತೂ ನಿಜವಾಗಿಯೂ ಪುಳಕಿತನಾಗಿದ್ದೇನೆ. ಆ ಪುಳಕಿತವೆನ್ನುವುದು ಒಂದು ದಿನದ ಮಟ್ಟಿಗೆ ಸಂಬಂಧಿಸಿದ್ದು ಅಲ್ಲ. ನೆನಪು ಬಂದಾಗಲೆಲ್ಲ ಅನುಭವಿಸುವುದಕ್ಕೆ ಇರುವಂಥದ್ದು. ಅಂದು ಗಾಂಧಿ ಭವನದಿಂದ ನಾಯರ ಅವರ ಸರಳವಾದ ಭಾಷೆಯ ಇಪ್ಪತ್ತು ನಿಮಿಷಗಳ ಭಾಷಣವನ್ನು ಕೇಳಿ ಜಾಗ್ರತೆ ಹೊರಟಿದ್ದೆ. ಭಾರತಿ ನಾಯರ ಅವರ ಕ್ಷಮಾಪಣೆಯನ್ನು ಕೇಳಿ.

 ಜಗತ್ತನ್ನು ಹಾಗೂ ಮನುಷ್ಯ ಸಂಬಂಧಗಳನ್ನು ಅರಿಯಲು ಎಷ್ಟು ಜೀವನಗಳಾದರೂ ಸಾಲದು. ಆದರೆ ನಾವು ನಮ್ಮ ಜೀವಿತದ ಕಾಲಾವಧಿಯಲ್ಲಿ; ಓದಲು, ತಿಳಿಯಲು ಮತ್ತು ಅನುಭವಿಸಲು ಎಷ್ಟೊಂದು ಅಮೂಲ್ಯ ಸಂಗತಿಗಳು ಮುಖಾ ಮುಖಿಯಾಗುತ್ತಿರುತ್ತವೆ. ಒಂದು ದೃಷ್ಟಿಯಿಂದ ಕುಲದೀಪ ನಾಯರ ಅವರ ‘ಬಿಯಾಂಡ್ ದಿ ಲೈನ್ಸ್’ ಅಥವಾ ‘ಒಂದು ಜೀವನ ಸಾಲದು’ ಕೃತಿಯನ್ನು ಓದುತ್ತಿದ್ದರೆ; ದಾಖಲಿಸಬಹುದಾದ ಅಪಾರ ಸಂಗತಿಗಳು ನಾಪತ್ತೆಯಾಗಿವೆ ಅನ್ನಿಸುತ್ತದೆ. ಹಾಗೆ ನೋಡಿದರೆ ಅವರ ಬಗೆಗಿನ ಒಟ್ಟು ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಅವರ ಜೀವನ ಚರಿತ್ರೆ ಬರೆದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನನಗೆ ನಾನೇ ಹೇಳಿಕೊಂಡಿದ್ದೇನೆ.
ಹತ್ತಾರು ಜೀವನ ಚರಿತ್ರೆಗಳಿಗೆ ಬೇಕಾದ ವ್ಯಕ್ತಿತ್ವ ಇರುವಂಥವರು. ಇಂಥ ನಾಯರ್ ಅವರು ಸುಮಾರು ವರ್ಷಗಳ ಹಿಂದೆ ಮುಂಬೈಯಲ್ಲಿ ನಡೆದ ಪಿಯುಸಿಎಲ್ ಸಮ್ಮೇಳನಕ್ಕೆ ಹೋಗಲು ಮರೆಯಬೇಡಿ ಎಂದು ಒತ್ತಾಯ ಮಾಡಿ ತಿಳಿಸಿದವರು. ಇದೇ ರೀತಿಯ ಒತ್ತಾಯದ ಕರೆ ಪಿಯುಸಿಎಲ್ಸಂಘಟನೆಯ ಚೈತನ್ಯವಾಗಿದ್ದ ನ್ಯಾಯಮೂರ್ತಿ ವಿ.ಎಂ. ತಾರ್ಕುಂಡೆಯವರಿಂದಲೂ ಬಂದಿತ್ತು. ನ್ಯಾಯಮೂರ್ತಿ ವಿ.ಎಂ.ತಾರ್ಕುಂಡೆಯವರೂ ಕೂಡ ಕುಲದೀಪ ನಾಯರ್ ಅವರ ರೀತಿಯ ಎತ್ತರದ ವ್ಯಕ್ತಿತ್ವವನ್ನು ಹೊಂದಿದ್ದವರು.
ತಮ್ಮ ಎಂಬತ್ತನೆಯ ವಯಸ್ಸಿನಲ್ಲಿಯೂ ಪಿಯುಸಿಎಲ್ ಮೂಲಕ ಮಾನವ ಹಕ್ಕುಗಳಿಗೆ ಸಂಬಂಧಿಸಿಂತೆ ಭಾರತದ ಉದ್ದಗಲಕ್ಕೂ ಎಷ್ಟು ಸುತ್ತಾಡುತ್ತಿದ್ದರು. ವಿಶ್ರಾಂತಿ ಇಲ್ಲದ ಬದುಕು. ಅದರ ಹಿಂದಿರುವ ಕಾಳಜಿ ಎಂಥ ಮಹತ್ವ ಪೂರ್ಣವಾದದ್ದು. ತಾರ್ಕುಂಡೆಯವರನ್ನು ಏಳೆಂಟು ಬಾರಿ ಭೇಟಿಯಾಗಿರಬಹುದು. ಪ್ರತಿ ಬಾರಿ ಭೇಟಿಯಾದಾಗಲೂ ಪಿಯುಸಿಎಲ್ ಬಗ್ಗೆ ಹತ್ತಾರು ಕನಸುಗಳನ್ನು ತುಂಬಿಕೊಂಡಿರುತ್ತಿದ್ದರು. ಅಧ್ಯಾಪಕರನ್ನು ನ್ಯಾಯವಾದಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಂಘಟನೆಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರು.
ಮೊದಲು ಇವರನ್ನು ಪರಿಚಯಿಸಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಷೀರ್ ಹುಸೇನ್ ಅವರಿಂದ. ಪ್ರೊ.ಹುಸೇನ್ ಅತ್ಯಂತ ಉತ್ಸಾಹದ ವ್ಯಕ್ತಿಯಾಗಿದ್ದರು. ಬೆಂಗಳೂರಿಗೆ ಯಾರೇ ನ್ಯಾಯ ವಾದಿಗಳು ಬಂದರೂ ಅವರ ಉಪನ್ಯಾಸ ಕೇಳಲು ಸೂಚಿಸುತ್ತಿದ್ದರು. ಒಂದು ದೃಷ್ಟಿಯಿಂದ ನನಗೆ ಅತ್ಯಂತ ಪ್ರಿಯರಾದ ನ್ಯಾಯವಾದಿ ಎಂ.ಸಿ.ಚಾಗ್ಲಾ ಅವರ ಉಪನ್ಯಾಸವನ್ನು ಕೇಳಿಸಿದ್ದರು.ತುಂಬ ಕ್ರೆಡಿಬಿಲಿಟಿ ಇದ್ದ ಚಿಂತಕರಾಗಿದ್ದರು. ಅವರು ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾಗಲೂ ಘನತೆಯನ್ನು ಉಳಿಸಿಕೊಂಡಿದ್ದರು.

ರುದ್ರಭೂಮಿ ಗುತ್ತಿಗೆ ನೌಕರರ ಸುಡುಗಾಡು ಬದುಕು


ವೈ.ಮರಿಸ್ವಾಮಿ, 
ಬೆಂಗಳೂರು

-ವಾರ್ತಾಭಾರತಿ 

ಸ್ಮಶಾಸನದ ದ್ವಾರದ ಬಳಿ ಅಂತ್ಯಕ್ರಿಯೆಗಾಗಿ ಬರುವ ಶವಗಳ ಆಗಮನಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಾ, ಆ ಶವಗಳನ್ನು ಮಣ್ಣು ಮಾಡಲು ಗುಂಡಿ ಅಗೆದು, ಶವಸಂಸ್ಕಾರದ ವೇಳೆ ಮೃತ ದೇಹದ ಮೇಲೆ ಹಾಕುವ ಅಕ್ಕಿ ಮತ್ತು ಚಿಲ್ಲರೆ ಕಾಸನ್ನೇ ನಂಬಿಕೊಂಡು ಬದುಕುವ ನೂರಾರು ಕುಟುಂಬಗಳು ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬದುಕುತ್ತಿವೆ. ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿಬಿಟಿ ಸಿಟಿ ಎಂದು ಜಗದ್ವಿಖ್ಯಾತವಾಗಿರುವ ಬೆಂಗಳೂರು ಎಂಬ ಮಾಯಾನಗರಿಯ ಗರ್ಭದಲ್ಲಿ, ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿ ಸ್ಮಶಾನದಲ್ಲಿ ವಾಸವಾಗಿರುವ ಈ ಕುಟುಂಬಗಳ ಬದುಕು ಅಕ್ಷರಶಃ ಸುಡುಗಾಡಾಗಿದೆ.ಹುಟ್ಟು ಆಕಸ್ಮಿಕ-ಸಾವು ನಿಶ್ಚಯ ಎನ್ನುವುದು ಪ್ರಚಲಿತದಲ್ಲಿರುವ ಮಾತು. ತಾಯಿಯ ಗರ್ಭದಿಂದ ಭೂಮಿಗೆ ಕಾಲಿಡುವ ಶಿಶು ಕ್ರಮೇಣ ಜೀವನದ ವಿವಿಧ ಹಂತಗಳನ್ನು ದಾಟಿ, ಒಂದಲ್ಲ ಒಂದು ದಿನ ಭೂ ತಾಯಿಯ ಗರ್ಭ ಸೇರಲೇಬೇಕು ಎನ್ನುವುದು ಪ್ರಕೃತಿ ನಿಯಮ. ತಾಯಿ ಗರ್ಭದಿಂದ ಮಗುವನ್ನು ಹೆರಿಗೆ ಮಾಡಿಸುವ ವೈದ್ಯರಿಗಿಂದು ಸಮಾಜದಲ್ಲಿ ಗೌರವವಿದೆ. ಆದರೆ ಮೃತದೇಹವನ್ನು ಭೂ ತಾಯಿಯ ಮಡಿಲಲ್ಲಿ ಅಂತ್ಯಕ್ರಿಯೆ ಮಾಡುವ, ಗುಂಡಿ ಅಗೆಯುವ ಕಾಯಕಜೀವಿಗಳಿಗೆ ಸಮಾಜದಲ್ಲಿ ಅಸಡ್ಡೆಯ ಮನೋಭಾವನೆಯಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಸ್ಮಶಾನಗಳಿವೆ. ಇವುಗಳಲ್ಲಿ ವಂಶ ಪಾರಂಪರ್ಯವಾಗಿ ಗುಂಡಿ ತೆಗೆದು ಶವಗಳಿಗೆ ಮುಕ್ತಿ ಕಾಣಿಸುವ ಕಾಯಕದಲ್ಲಿ ತೊಡಗಿರುವ ನೂರಾರು ಕುಟುಂಬಗಳಿವೆ. ಹಲವು ದಶಕಗಳಿಂದ ಇಂತಹ ಪವಿತ್ರ ಕಾರ್ಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಈ ರುದ್ರಭೂಮಿ ನೌಕರರನ್ನು ಖಾಯಂ ಗೊಳಿಸುವತ್ತ ಬಿಬಿಎಂಪಿಯಾಗಲಿ, ಪಾಲಿಕೆ ಜನಪ್ರತಿನಿಧಿಗಳಾಗಲಿ ಇದುವರೆಗೆ ಯೋಚನೆ ಯನ್ನೇ ಮಾಡಿಲ್ಲ.

ಅನಾಥ ಶವಗಳು, ಅಪಘಾತಗಳಲ್ಲಿ ನುಜ್ಜುಗಜ್ಜಾದ ಮೃತದೇಹಗಳು, ಹಾವುಕಚ್ಚಿ, ವಿಷ ಕುಡಿದು ಮೃತಪಟ್ಟ ಶವಗಳು, ಕೀವು-ರಕ್ತ ಸೋರುವ ಹಾಗು ದುರ್ವಾಸನೆ ಬೀರುವ ಹೆಣಗಳಿಗೆ ಯಾವುದೇ ತಾರತಮ್ಯ ಮಾಡದೇ, ತಾಯಿ ಸ್ಥಾನದಲ್ಲಿ ನಿಂತು ಮುಕ್ತಿ ಕಾಣಿಸುವ ರುದ್ರಭೂಮಿ ನೌಕರರ ಆಕ್ರಂದನ ಅರಣ್ಯರೋಧನವಾಗಿದೆ. ಕಿತ್ತು ತಿನ್ನುವ ಬಡತನ, ಅನಕ್ಷರತೆ, ಹಸಿವು ಮತ್ತು ಅವಮಾನ ಇವರ ಆತ್ಮಸ್ಥೈರ್ಯವನ್ನೇ ಕಸಿದುಕೊಂಡಿವೆ. ಇವರ ಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಿ ಸುಡುಗಾಡಿನಲ್ಲಿ ಕಳೆದು ಹೋಗುತ್ತಿದ್ದಾರೆ. ಶಿಕ್ಷಣ ಹಕ್ಕು ಮೂಲಭೂತ ಹಕ್ಕಾಗಿದ್ದರೂ ಈ ಮಕ್ಕಳ ಪಾಲಿಗೆ ಅದು ಮರೀಚಿಕೆಯಾಗೇ ಉಳಿದಿದೆ.
ಶವಗಳ ಮೇಲೆ ಹಾಕುವ ಅಕ್ಕಿಯಿಂದಲೇ ಅನ್ನ ಮಾಡಿಕೊಂಡು ತಿನ್ನುವ ಪರಿಸ್ಥಿತಿಯಲ್ಲಿ ಈ ಕುಟುಂಬಗಳು ತಮ್ಮ ತುತ್ತಿನ ಚೀಲ ತುಂಬಿಸಿ ಕೊಳ್ಳಬೇಕಾಗಿದೆ ಎನ್ನುವುದು ನಮ್ಮ ಸಾಮಾಜಿಕ ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ಕಡೆ ಹೆಣ ಸುಡುತ್ತಿದ್ದರೆ ಮತ್ತೊಂದು ಕಡೆ ಈ ಕುಟುಂಬಗಳ ಒಲೆಯ ಮೇಲೆ ತಾಯಂದಿರು ಅನ್ನ ಬೇಯಿಸುತ್ತಿರುತ್ತಾರೆ ಎನ್ನುವ ಕಹಿ ಸತ್ಯ ಯಾವುದೇ ನಾಗರಿಕ ಸಮಾಜಕ್ಕೆ ಶೋಭೆಯಲ್ಲ.

ರುದ್ರಭೂಮಿಯಲ್ಲಿ ತಲತಲಾಂತರಗಳಿಂದ ಮೃತದೇಹಗಳಿಗೆ ಮುಕ್ತ ಕಾಣಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಈ ಕುಟುಂಬಗಳು ದಲಿತ ಮತ್ತು ದಲಿತ ಕ್ರೈಸ್ತ ಕುಟುಂಬಗಳಿಗೆ ಸೇರಿದುದರಿಂದಲೇ ಬಿಬಿಎಂಪಿ ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳು ತಾತ್ಸಾರದ ಮನೋಭಾವನೆ ತೋರುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರುದ್ರಭೂಮಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತಿರುವ ಬಿಬಿಎಂಪಿ ಆರಂಭದಲ್ಲಿ 500 ರೂಪಾಯಿ ಭಿಕ್ಷೆಯ ರೂಪದಲ್ಲಿ ಎಸೆಯುತ್ತಿತ್ತು. ನಂತರ ಕಳೆದ ಎರಡು ವರ್ಷಗಳ ಹಿಂದೆ ಆ ಮೊತ್ತವನ್ನು 1,000 ರೂಪಾಯಿಗಳಿಗೇರಿಸಿತು ಮತ್ತು ಆ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ನಾಚಿಕೇಡಿನ ಸಂಗತಿಯೇನೆಂದರೆ, ಕಳೆದ ಹಲವಾರು ತಿಂಗಳುಗಳಿಂದ ಅದಕ್ಕೂ ಕತ್ತರಿ ಹಾಕುತ್ತಿರುವ ಬಿಬಿಎಂಪಿ ಅಧಿಕಾರಿಗಳು, ತಮ್ಮ ಮನಸ್ಸಿಗೆ ಬಂದಷ್ಟು ಗುಂಜಿಕೊಂಡು ಉಳಿದ ಹಣವನ್ನು ಕೈಗೆ ಕುಕ್ಕುತ್ತಿದ್ದಾರೆ. ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ಸ್ಮಶಾನಗಳಲ್ಲಿ ಶವಸಂಸ್ಕಾರ ಮಾಡಲು ಸ್ಥಳದ ಅಭಾವವಿದೆ. ಇದರಿಂದ ಹೆಣಗಳ ಮೇಲೆ ಹೆಣಗಳನ್ನು ಹೂಳುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ವಿದ್ಯುತ್ ಚಿತಾಗಾರದಲ್ಲಿ ಮೃತದೇಹಗಳನ್ನು ಸುಡುವ ಪದ್ಧತಿ ವ್ಯಾಪಕವಾಗಿ ಬೆಳೆಯುತ್ತಿದೆ.
ವಿದ್ಯುತ್ ಚಿತಾಗಾರದಲ್ಲಿ ಕೆಲಸ ಮಾಡುವ ರುದ್ರಭೂಮಿ ನೌಕರರನ್ನು ಖಾಯಂ ನೌಕರರನ್ನಾಗಿ ಪರಿಗಣಿಸಿರುವ ಸರಕಾರ ಅವರಿಗೆ ತಿಂಗಳಿಗೆ 15ರಿಂದ 16 ಸಾವಿರ ರೂಪಾಯಿ ಸಂಬಳ ಕೊಡುತ್ತಿದೆ. ವಿದ್ಯುತ್ ಚಿತಾಗಾರದಲ್ಲಿ ಕೇವಲ ಬಟನ್ ಒತ್ತುವ ನೌಕರರಿಗೆ ಉತ್ತಮ ಸಂಬಳ-ಸೌಲಭ್ಯ ಒದಗಿಸುವ ಸರಕಾರ, ಮೈ ಮುರಿದು ಬೆವರು ಹರಿಸಿ ಗುಂಡಿ ತೆಗೆಯುವ ಶ್ರಮಜೀವಿಗಳಿಗೆ ಕನಿಷ್ಠ ವೇತನವನ್ನೂ ನೀಡದೇ ವಂಚಿಸುತ್ತಿದೆ. ಜಾಗದ ಅಭಾವದಿಂದಾಗಿ ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಸ್ಮಶಾನಗಳಲ್ಲಿ ಗುಂಡಿ ತೆಗೆಯುವ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಗೋರಿ ಕಟ್ಟುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಗುಂಡಿ ತೆಗೆಯುವ ಗುತ್ತಿಗೆ ನೌಕರರು ಕಂಗಾಲಾಗಿದ್ದಾರೆ.
ಪ್ರತಿ ಸ್ಮಶಾನದಲ್ಲೂ ನಾಲ್ಕೈದು ಮಂದಿ ಗುಂಡಿ ತೆಗೆಯುವ ಗುತ್ತಿಗೆ ಕೆಲಸಗಾರ ರಿದ್ದು ಅಂತ್ಯಸಂಸ್ಕಾರಕ್ಕಾಗಿ ಬರುವ ಮೃತದೇಹಗಳಿಗಾಗಿ ಕಾಯುತ್ತಿರುತ್ತಾರೆ. ಸ್ಮಶಾನಕ್ಕೆ ಬರುವ ಬೆರಳೆಣಿಕೆಯಷ್ಟು ಮೃತದೇಹಗಳಿಗೆ ಗುಂಡಿ ತೆಗೆಯಲು ಅವರಲ್ಲಿಯೇ ಪೈಪೋಟಿ ಏರ್ಪಡುತ್ತದೆ. ದಿನಕ್ಕೆ ಒಂದೆರಡು ಗುಂಡಿ ತೆಗೆದರೆ, ಅದರಲ್ಲಿ ಬರುವ, ಅಂದರೆ ಮೃತವ್ಯಕ್ತಿಯ ಸಂಬಂಧಿಕರು ಕೊಡುವ ಅಥವಾ ಮೃತದೇಹದ ಮೇಲೆ ಹಾಕುವ ಅಕ್ಕಿ ಮತ್ತು ಚಿಲ್ಲರೆ ಕಾಸನ್ನು ಹಂಚಿಕೊಳ್ಳುತ್ತಾರೆ. ಹೆಣದ ಮೇಲೆ ಬೀಳುವ ಅಕ್ಕಿ ಮತ್ತು ಚಿಲ್ಲರೆ ಕಾಸಿನಿಂದಲೇ ಈ ಕಾರ್ಮಿಕರು ಸಂತೃಪ್ತಿಯಾಗಿ ಬದುಕುತ್ತಿದ್ದಾರೆ ಎಂಬ ಉಡಾಫೆ ಉತ್ತರ ಕೆಲವು ಬಿಬಿಎಂಪಿ ಅಧಿಕಾರಿಗಳಿಂದ ಮತ್ತು ಜನಪ್ರತಿನಿಧಿಗಳಿಂದ ಬರುತ್ತಿರುವುದು ಅವರ ‘ಸುಡುಗಾಡು’ ವ್ಯಕ್ತಿತ್ವವನ್ನು ಸೂಚಿಸುತ್ತದೆ.
ಕೆಲವು ಬಿಬಿಎಂಪಿ ಸಿಬ್ಬಂದಿ ಎಷ್ಟೊಂದು ಹೊಟ್ಟೆಬಾಕರಾಗಿದ್ದಾರೆಂದರೆ, ಮೃತರ ಸಂಬಂಧಿಕರು ರುದ್ರಭೂಮಿ ಕಾರ್ಮಿಕರಿಗೆ ಕೊಡುವ ಹಣದಲ್ಲೂ ಒಂದಷ್ಟು ಗೆಬರಿ ಕೊಳ್ಳುತ್ತಾರೆ. ಅವರಿಗೆ ಲಂಚ ಕೊಡಲು ನಿರಾಕರಿಸುವವರಿಗೆ ಮಾರನೆ ದಿನ ಗುಂಡಿ ತೆಗೆಯಲು ಅವಕಾಶವನ್ನೇ ನೀಡುವುದಿಲ್ಲ. ಮೊದಲೇ ಅಭದ್ರತೆಯಲ್ಲಿ ಬದುಕುತ್ತಿರುವ ಗುತ್ತಿಗೆ ಪೌರ ಕಾರ್ಮಿಕರು, ಸುಡುಗಾಡನ್ನೇ ನುಂಗಿ ಜೀರ್ಣೀಸಿಕೊಳ್ಳುವಷ್ಟು ಸಾಮರ್ಥ್ಯ ಇರುವ ಬಿಎಎಂಪಿ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳಲು ಹೋಗುವುದಿಲ್ಲ. ಸ್ಮಶಾನದಲ್ಲೇ ಹಂದಿಗೂಡಿನಂತಹ ಸೂರುಗಳಡಿಯಲ್ಲಿ ಬದುಕುವ ಇವರು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಿಎಫ್ ಮತ್ತು ಇಎಸ್‌ಐ ಇತ್ಯಾದಿ ಸೌಲಭ್ಯಗಳ ಬಗ್ಗೆ ಇವರಿಗೆ ತಿಳುವಳಿಕೆಯಿಲ್ಲ.
ಕೋಮುವಾದಿಗಳು ಸುಡುಗಾಡಿನಲ್ಲಿ ಮೂರಾಬಟ್ಟಿಯಾಗಿ ಬದುಕು ಸವೆಸುತ್ತಿರುವ ಈ ಗುಂಡಿ ತೆಗೆಯುವ ಕಾರ್ಮಿಕರ ಕುಟುಂಬಗಳನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಧರ್ಮದ ಆಧಾರದ ಮೇಲೆ ಅವರನ್ನು ಒಡೆದಾಳುವ ಕುಯುಕ್ತಿ ನಡೆಸಿದ್ದಾರೆ. ಬೆಂಗಳೂರಿನ ಫ್ರೇಜರ್‌ಟೌನ್ ವ್ಯಾಪ್ತಿಗೆ ಬರುವ ಕಲ್‌ಲ್ ಳ್ಳಿ ಹಿಂದೂ ರುದ್ರಭೂಮಿಯಲ್ಲಿ ಶೌರಿರಾಜ್ ಎನ್ನುವ ಗುತ್ತಿಗೆ ರುದ್ರಭೂಮಿ ನೌಕರ, ಹಿಂದೂ ರುದ್ರಭೂಮಿಯಲ್ಲಿ ಮತೀಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಹಿಂದೂ ರುದ್ರಭೂಮಿಯಲ್ಲಿ ಕ್ರೈಸ್ತ ಸಮಾಧಿಗಳು ತಲೆ ಎತ್ತಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದೂ ಪದ್ಧತಿಯ ಪ್ರಕಾರ ಶವಸಂಸ್ಕಾರ ನೆರವೇರಿಸಲು ಅಡ್ಡಿಪಡಿಸುತ್ತಿದ್ದು, ಪುರಾತನ ಸತ್ಯಹರಿಶ್ಚಂದ್ರನ ವಿಗ್ರಹ ತೆರವುಗೊಳಿಸಿದ್ದಾನೆ.
ಅನಾಥ ಶವಗಳನ್ನು ತೆಗೆದುಕೊಂಡು ಬಂದು ಅದರಿಂದ ಬರುವ ಮೂಳೆಗಳನ್ನು ಮಾರಿ ಅವ್ಯವಹಾರ ನಡೆಸುತ್ತಿದ್ದಾನೆ. ಇನ್ನೂ ಹಲವಾರು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದು ಸಮಾಜಕ್ಕೆ ಕಂಟಕ ಪ್ರಾಯವಾಗಿದ್ದಾನೆ. ಆದುದರಿಂದ ಇವರ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ ಕೂಡಲೇ ಬಂಧಿಸಬೇಕಾಗಿ ತಮ್ಮಲ್ಲಿ ಆಗ್ರಹಪಡಿಸುತ್ತಿದ್ದೇವೆ’’ ಎಂದು ಹಿಂದೂ ಜಾಗರಣ ವೇದಿಕೆ ಸದಸ್ಯನೊಬ್ಬ ನೀಡಿದ ದೂರನ್ನು ಕಣ್ಣು ಮುಚ್ಚಿಕೊಂಡು ಸ್ವೀಕರಿಸಿ, ಕೇಸು ದಾಖಲಿಸಿರುವ ಫ್ರೇಜರ್‌ಟೌನ್ ಪೊಲೀಸರು ಕೋಮುವಾದಿಗಳ ಏಜೆಂಟರಂತೆ ವರ್ತಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಬೆಂಗಳೂರು ಪೂರ್ವ ಉಪ ಆರೋಗ್ಯಾಧಿಕಾರಿ ಸುರೇಶ್ ಮತ್ತು ಜಂಟಿ ಆಯುಕ್ತರು, ಶೌರಿರಾಜ್ ವಿರುದ್ಧ ತನಿಖೆಯ ನಾಟಕವಾಡಿಸಿ 2011ರ ಮಾರ್ಚ್ 22ರಿಂದ ಗುಂಡಿ ತೆಗೆಯುವ ಕೆಲಸದಿಂದ ತೆಗೆದುಹಾಕಿ, ರುದ್ರಭೂಮಿಯಲ್ಲಿರುವ ಪಾಲಿಕೆಯ ಮನೆಯನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಅಂದಿನಿಂದ ಇಂದಿನವರೆಗೆ ಶೌರಿರಾಜ್ ಮತ್ತವರ ಐದು ಮಕ್ಕಳ ಕುಟುಂಬ ಯಾವುದೇ ಆದಾಯ ಮೂಲವಿಲ್ಲದೆ ಹಸಿವಿನಿಂದ ಕಂಗೆಟ್ಟಿದೆ. ಮಕ್ಕಳು ತಮ್ಮ ಶಿಕ್ಷಣಕ್ಕೆ ತಿಲಾಂಜಲಿಯಿತ್ತಿದ್ದಾರೆ. ಕೋಮುವಾದಿಗಳ ಕುತಂತ್ರದಿಂದ ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಷಡ್ಯಂತ್ರದಿಂದ ಇಂದು ಶೌರಿರಾಜ್ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಬೀದಿಗೆ ಬೀಳುವ ಆತಂಕದಲ್ಲಿದೆ. ಈಗಲಾದರೂ ಬಿಎಎಂಪಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜವಾಬ್ದಾರಿಯಿಂದ ವರ್ತಿಸುವುದರ ಜೊತೆಗೆ ಸ್ಮಶಾನಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಗುಂಡಿ ಅಗೆಯುವ ಕಾಯಕದಲ್ಲಿ ತೊಡಗಿರುವ ರುದ್ರಭೂಮಿ ನೌಕರರನ್ನು ನಾಲ್ಕನೆ ದರ್ಜೆ ನೌಕರರನ್ನಾಗಿ ಪರಿಗಣಿಸಿ ಸೂಕ್ತ ಸೌಲಭ್ಯ ಮತ್ತು ಭದ್ರತೆ ಒದಗಿಸುವುದರ ಮೂಲಕ ತನ್ನ ಘನತೆ ಹೆಚ್ಚಿಸಿಕೊಳ್ಳಬೇಕಾಗಿದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...