Tuesday, July 31, 2012

ಗಜಲ್
oil paintings - Art - Collectibles
“ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು

ಸಂತಸದ ಹಬ್ಬವಿದು, ತಾನಿಂತು ಉಕ್ಕಿ, ಭೋರ್ಗರೆವ ಕಡಲಾಯಿತು

ಒಂದೆಡೆಗೆ ತೂಗಿ ತೊನೆಯುತ್ತಾ ಬಂತು ಋತು ವಸಂತದ ಉಲ್ಲಾಸ

ಒಂದೆಡೆಗೆ ಕಂಡ ಕನಸುಗಳ ಗೂಡಿಗೆ ಉರಿವ ಕೊಳ್ಲಿಗಳ ಇಡಲಾಯಿತು

‘ಶೀಲ-ದೀಪ’ ವ ಹೊತ್ತ ಹಣತೆಗಳ ಕಥೆಯನೆಂತು ಬಣ್ಣಿಸಲಿ ನಾನು?

ನಡುಬೀದಿಯಲ್ಲೇ ಎಣ್ಣೆಯನು ಚೆಲ್ಲಿ, ಕುಡಿಚಿವುಟಿ ಹೊಸಕಿ ಬಿಡಲಾಯಿತು

ಸಣ್ಣ ಮಕ್ಕಳ ಕಣ್ಣುಗಳು ನೋಡಲಾಗದೆ ನಾಚಿ ಮುಚ್ಚಿಕೊಂಡವು ಗೆಳೆಯ

ಅವರ ಆನಂದಗಳ ಹಗಲು ದರೋಡೆಯೇ ನಡೆದು ಕೊಳ್ಲಿಗಳ ರಾಶಿ ಇಡಲಾಯಿತು

ಇಂದಿನ ಈ ಸಮಯದೊಂದಿಗೆ, ಈ ನನ್ನ ಹೆಸರನು ಹೇ ನಾಸಿರ್

ಕಸ ಕಡ್ಡಿ ಕೊಳೆ ಮಾಡಿ, ಕೆಸರಲ್ಲಿ ಹೊಸಕಿ, ಕಾಲುವೆಗೆ ತಳ್ಳಿ ಬಿಡಲಾಯಿತು…”

-ಇಟಗಿ ಈರಣ್ಣ

ಕೋಡಗುಂಟಿ ಪ್ರಶಸ್ತಿ ೨೦೧೧ಕ್ಕೆ ಕರೆ

ಬಂಡಾರ ಪ್ರಕಾಶನ, ಮಸ್ಕಿ ಇವರು ಕ ಡ ಸಂಶೋದನೆಗೆ ಮೊದಲ ಆದ್ಯತೆಯನ್ನು ಕೊಟ್ಟು
ಕೆಲಸವನ್ನು ಮಾಡುತ್ತಿದ್ದಾರೆ. ಕನ್ನಡ ಸಂಶೋದನೆಯನ್ನು ಪ್ರೋತ್ಸಾಹಿಸುವ ಮತ್ತು ಯುವ ಸಂಶೋದಕರನ್ನು
ಗುರುತಿಸಿ ಅವರನ್ನು ಉತ್ತೇಜಿಸುವ ಉದ್ದೇಶಗಳಿಂದ ಕನ್ನಡ - ಕರ್ನಾಟಕಗಳಿಗೆ ಸಂಬಂದಿಸಿದ ಎಂ.ಪಿಲ್., ಪಿಎಚ್.ಡಿ.ಯಂತಾ
ಪದವಿಗಳಿಗಾಗಿ ಸಿದ್ದಡಿಸಿದ ಸಂಶೋದನಾ ಪಬಂದಗಳಿಗಾಗಿ ಕೋಡಗುಂಟಿ ಪಶಸ್ತಿಯನ್ನು ೨೦೦೬ರಿಂದ ಆರಂಬಿಸಿದೆ. ಪ್ರತಿವರ್ಷದಂತೆ ಈ ಸಾಲಿನ ಪ್ರಶಸ್ತಿಗೆ ೨೦೧೧ರಲ್ಲಿ ಪದವಿಯನ್ನು ಪಡೆದ ಕನ್ನಡ ಮಾತು, ಸಾಹಿತ್ಯ, ಸಂಸ್ಕ್ರತಿ, ಜನಪದ, ಕಲೆ, ಶಿಲ್ಪಕಲೆ, ರಂಗಬೂಮಿ, ಇತಿಹಾಸ, ನೀರು, ನೆಲ, ಗಾಳಿ, ಭೂಗೋಲಲ, ಪರಿಸರ ಹೀಗೆ ಒಟ್ಟಾರೆ ಕನ್ನ ಡ ಕರ್ನಾಟಕಕ್ಕೆ
ಸಂಬಂದಿಸಿದ ಸಂಶೋದನಾ ಪಬಂದಗಳನ್ನು ಪಶಸ್ತಿಗಾಗಿ ಕಳಿಸಿಕೊಡಲು ಕೋರಲಾಗಿದೆ. ಜಗತ್ತಿನ ಯಾವುದೆ
ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆರಬಹುದು. ಪ್ರಬಂಧ ಕನ್ನಡ ಇಲ್ಲವೆ ಇಂಗ್ಲೀಶಿನಲ್ಲಿ ಇರಬಹುದು.
ಉತ್ತಮವಾದ ಒಂದು ಪಬಂದನ್ನು ಪಶಸ್ತಿಗೆ ಆರಿಸಲಾಗುವುದು ಮತ್ತು ಅದನ್ನು ಪಕಾಶನದಿಂದ ಪಕಟಿಸಲಾಗುವುದು. ಅಲ್ಲದೆ ಉತ್ತಮ ಎಂದು ಪರಿಗಣಿಸಿದ ಪಬಂದಗಳನ್ನು ಪಕಟಣೆಗೆ ಆಯ್ಕೆ ಮಾಡಲಾಗುವುದು. ಪಶಸ್ತಿಗೆ ಪಬಂದದ ಒಂದು ಪ್ರತಿ, ಎರಡು ಪುಟಗಳ ಸಾರಾಲೇಕ ಮತ್ತು ಪದವಿ ಪಡೆದ ಪಮಾಣ ಪಡೆದ ಪ್ರತಿ ಇವುಗಳನ್ನು ಕಳಿಸಿಕೊಡಲು ಕೇಳಲಾಗಿದೆ. ಅಗಸ್ಟ್ ೩೦ರ ಒಳಗೆ ಪಬಂದನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಿ

ಪರಶುರಾಮ ಕೋಡಗುಂಟಿ
ಸಂಪಾದಕ
ಬಂಡಾರು ಪ್ರಕಾಶನ
ಮಸ್ಕಿ-584124,
ಸೆಲ್ : 9916053057, 8792465868

ಸೆಲ್ಯುಲಾರ್ ಜೈಲು : ನಡು ಹಗಲ ಕತ್ತಲು


ಡಾ.ಎಚ್.ಎಸ್.ಅನುಪಮಾ‘ಅಲ್ಲಿ ತಾರೆಗಳಿರಲಿಲ್ಲ, ನೆಲವಿರಲಿಲ್ಲ, ಕಾಲವಿರಲಿಲ್ಲ
ಬಂಧನವಿರಲಿಲ್ಲ, ಬದಲಾವಣೆಯಿರಲಿಲ್ಲ,
ಒಳ್ಳೆಯದಿಲ್ಲ, ಅಪರಾಧವಿಲ್ಲ,
ಅಲ್ಲಿ ಬದುಕಿನದೂ ಅಲ್ಲದ, ಸಾವಿನದೂ ಅಲ್ಲದ
ಮೌನ..
ಕಟ್ಟಿದ ಉಸಿರು..'

ಗಲ್ಲಿಗೇರುವ ಮುನ್ನ ಭಗತ್ ಸಿಂಗ್ ಜೈಲು ಡೈರಿಯಲ್ಲಿ ಉಲ್ಲೇಖಿಸಿರುವ ಈ ಸಾಲುಗಳು ಜಿನೀವಾ ಸರೋವರ ತಟದ ಷಿಲಾನ್ ಕೋಟೆಯಲ್ಲಿ ಬಂಧಿತನಾಗಿದ್ದ ಫ್ರಾಂಕೋಸ್ ಬೊನಿವಾರ್ಡ್ (೧೪೯೬-೧೫೭೦) ನೆನಪಿಗೆ ಲಾರ್ಡ್ ಬೈರನ್ ಬರೆದವು. ಜೈಲೆಂಬ ಮಾನವ ನಿರ್ಮಿತ ನರಕವನ್ನು ಈ ಸಾಲುಗಳು ಬಿಚ್ಚಿ ತೋರಿಸುತ್ತವೆ. ಅಷ್ಟಕ್ಕೂ ಸ್ವತಂತ್ರ ಮತ್ತು ಸಾಂಘಿಕ ಬದುಕನ್ನೇ ನಿರಾಕರಿಸುವ ಜೈಲನ್ನು ಮನುಷ್ಯ ಸೃಷ್ಟಿಸಿಕೊಂಡಿದ್ದಾದರೂ ಏಕೆ?

ಮಾನವ ವರ್ತನೆಗಳನ್ನು ನಿಯಂತ್ರಣದಲ್ಲಿಡಲು ಸೃಷ್ಟಿಯಾದ ಸರಿತಪ್ಪು ಪ್ರಮಾಣಕಗಳ ಲೋಕದಲ್ಲಿ ಉಲ್ಲಂಘನೆ ಅಪರಾಧ ಎನಿಸಿಕೊಂಡಿತು. ಅಪರಾಧ ತಡೆಗಟ್ಟಲು ಹಾಗೂ ಅಪರಾಧಿಯನ್ನು ಪರಿವರ್ತಿಸಲು ಶಿಕ್ಷೆ ಚಾಲ್ತಿಗೆ ಬಂತು. ಆದಿಮ ಸಮಾಜದ ಹಲವು ಕ್ರೂರ ಶಿಕ್ಷೆಗಳು ಇಂದು ಇಲ್ಲವಾದರೂ ಜೈಲುವಾಸ ಆಧುನಿಕ ಯುಗಕ್ಕೂ ದಾಟಿ ಬಂದಿದೆ. ಏಕಾಂತ ಸೆರೆವಾಸ ಯಾವುದೇ ಕ್ರಿಯಾಶೀಲ ವ್ಯಕ್ತಿಯನ್ನು ಯಶಸ್ವಿಯಾಗಿ ಇಂಚಿಂಚೇ ಕೊಲ್ಲಬಲ್ಲದು. ಇದು ಮಾನವಹಕ್ಕಿನ ನಿರಾಕರಣೆ. ಆದರೆ ಮಾನವೀಯತೆ-ನಾಗರಿಕ ಹಕ್ಕುಗಳು ಸಾಮ್ರಾಜ್ಯಶಾಹಿ-ಅಧಿಕಾರಶಾಹಿ ನಿಘಂಟಿನಲ್ಲಿಲ್ಲದ ಕಾರಣ ಏಕಾಂತ ಸೆರೆವಾಸ ಸಮರ್ಥನೆಯಿಲ್ಲದಿದ್ದರೂ ಉಳಿದುಕೊಂಡುಬಂದಿದೆ. ಗ್ವಾಂಟನಾಮೊ ಬೇ ಕ್ರೂರ ವೈಭವೀಕರಣಕ್ಕೊಳಗಾಗಿದೆ.

ಏಕಾಂಗಿಯಾಗಿ ನಾಲ್ಕು ಗೋಡೆಗಳ ನಡುವೆ ಕಾಲ ನೂಕುವುದು ಸಂಘಜೀವಿಗೆ ಕೊಡಬಹುದಾದ ಗರಿಷ್ಠ ಶಿಕ್ಷೆ. ಈ ಶಿಕ್ಷೆಗೆ ಒಂಟಿ ದ್ವೀಪಗಳಿಗಿಂತ ಸೂಕ್ತ ಸ್ಥಳವಿಲ್ಲ. ಏಕಾಂತ ಸೆರೆವಾಸಕ್ಕೆ ಕುಖ್ಯಾತವಾದ ಜೈಲುಗಳಲ್ಲಿ ಅಂಡಮಾನ್‌ನ ಸೆಲ್ಯುಲಾರ್ ಜೈಲು ಅತಿ ಭಯಾನಕವೆಂಬ ಹಣೆಪಟ್ಟಿ ಹೊತ್ತಿತ್ತು. ಅಂಡಮಾನ್ ಹೆಸರು ಚಾಲ್ತಿಗೆ ಬಂದಿದ್ದು, ಬೆಳೆದಿದ್ದು, ನಾಗರಿಕಗೊಂಡಿದ್ದು, ನಾಶವಾಗಿದ್ದು, ಈಗ ಆಕರ್ಷಣೆಯ ಕೇಂದ್ರವಾಗಿರುವುದು ಸೆಲ್ಯುಲಾರ್ ಜೈಲಿನಿಂದಲೇ. ಅಪರಾಧ ಸಂಹಿತೆಯ ಶಾಸ್ತ್ರೀಯ ಅಧ್ಯಯನ ನಡೆಸಿ, ಹೋದಹೋದಲ್ಲಿ ಕೋರ್ಟು-ಜೈಲು ಕಟ್ಟಿದ ಬ್ರಿಟಿಷ್ ವಸಾಹತುಶಾಹಿಯ ಕ್ರೌರ್ಯವನ್ನು ಸೆಲ್ಯುಲಾರ್ ಜೈಲಿನ ಮೂಲೆಗಳು ಇಂದಿಗೂ ಸಾರುತ್ತ ನಿಂತಿವೆ. ಸ್ವಾತಂತ್ರ್ಯ ಬಂದು ೬೫ ವರ್ಷ ಸಂದರೂ ಸಾವಿರಾರು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವ, ನಿಯಮ-ಉಲ್ಲಂಘನೆಯ ವ್ಯಾಖ್ಯಾನಗಳು ದಿನೇದಿನೇ ಬದಲಾಗುತ್ತಿರುವ ವರ್ತಮಾನ ಸಂದರ್ಭದಲ್ಲಿ ಪೋರ್ಟ್‌ಬ್ಲೇರಿನ ಅಟ್ಲಾಂಟಾ ಪಾಯಿಂಟಿನ ಸೆಲ್ಯುಲಾರ್ ಜೈಲು ವಸಾಹತುಶಾಹಿ ಕ್ರೌರ್ಯದ ಸ್ಮಾರಕವಾಗಿ ತೋರುತ್ತದೆ.

***

ಬಂಗಾಳಕೊಲ್ಲಿಯ ಈ ದೂರ ದ್ವೀಪದಲ್ಲಿ ಜೈಲು ನಿರ್ಮಿಸುವ ತುರ್ತು ಬ್ರಿಟಿಷರಿಗೆ ಬಂದೊದಗಿತ್ತು. ಅರಸೊತ್ತಿಗೆಯ ವಿರುದ್ಧ ಸಂಚು, ದಂಗೆ ನಡೆಸಿದವರನ್ನು, ಜೀವಾವಧಿ-ಗಡೀಪಾರು ಶಿಕ್ಷೆ ಪಡೆದ ಅಪಾಯಕಾರಿಗಳನ್ನು ಸಾವಿರಾರು ಕಿಮೀ ದೂರದ ಹೆಸರೇ ಕೇಳಿಲ್ಲದ ದ್ವೀಪದಲ್ಲಿ ಇಳಿಸಿ ಕ್ರಾಂತಿಯ ದನಿ ಅಡಗಿಸುವುದು ಅವರ ದೂರಾಲೋಚನೆಯಾಗಿತ್ತು.

ಮೂರೂ ಕಡೆ ಸಾವಿರಾರು ಕಿ.ಮೀ.ವರೆಗೆ ಸಮುದ್ರ, ಸುತ್ತ ದಟ್ಟಕಾಡು, ಭಯಾನಕ ಆದಿವಾಸಿಗಳ ನಡುವೆ ಪಾರಾಗಿ ತಪ್ಪಿಸಿಕೊಳ್ಳುವ ಅವಕಾಶವೇ ಇರದಿದ್ದರೂ ಬಂದೀಖಾನೆ ಕಟ್ಟಲಾಯಿತು. ಮೊದಲು ಆರು ತಿಂಗಳು ಜೈಲಿನಲ್ಲಿ ಅತಿಶಿಸ್ತು; ನಂತರ ಒಂದೂವರೆ ವರ್ಷ ಅತಿ ಕಠಿಣ ಕೆಲಸದ ಅಸೋಸಿಯೇಟೆಡ್ ಜೈಲುವಾಸ; ಆಮೇಲೆ ಮೂರು ವರ್ಷ ಬ್ಯಾರಕ್ ವಾಸ. ರಾತ್ರಿಯಿಡೀ ಸೂಪರ್‌ವೈಸರ್ ಕಾವಲಿನಡಿ ಕೆಲಸ ಮಾಡಬೇಕು. ಆಮೇಲೆ ಐದು ವರ್ಷ ಕಠಿಣ ಕೆಲಸದ ಜೊತೆ ಮೇಲ್ವಿಚಾರಣೆಯನ್ನೂ ನಿರ್ವಹಿಸಬೇಕು. ಹೀಗೆ ೧೦ ವರ್ಷ ಪೂರೈಸಿದ ನಂತರ ‘ಟಿಕೆಟ್ ಆಫ್ ಲೀವ್ ಸಿಗುತ್ತಿತ್ತು. ಆದರೆ ಬಂದಿ ಅಂಡಮಾನ್ ತೊರೆಯಲು ಸ್ವತಂತ್ರನಲ್ಲ, ನಾಗರಿಕ ಹಕ್ಕುಗಳೂ ಸಿಗುತ್ತಿರಲಿಲ್ಲ. ಜೈಲಿನಿಂದ ಹೊರಬಂದು ಕೃಷಿ, ದನಕರು ಸಾಕಣೆ ಮಾಡಬಹುದಿತ್ತು. ಮದುವೆಯಾಗಬಹುದಿತ್ತು ಅಥವಾ ಸಂಸಾರ ಕರೆಸಿಕೊಳ್ಳಬಹುದಿತ್ತು. ಬಿಡುಗಡೆಯಾದ ಮೊದಲಿಗೆ ವಾಸದಮನೆ, ಕೆಲ ಅಗತ್ಯ ಸಾಮಾನುಗಳನ್ನು ಕೊಟ್ಟರೂ ಮೂರ್ನಾಲ್ಕು ವರ್ಷಗಳ ನಂತರ ಸಹಾಯಧನ ನಿಲ್ಲಿಸಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದರು. ೨೦-೨೫ ವರ್ಷಗಳ ನಂತರವಷ್ಟೇ ಒಳ್ಳೆಯ ನಡತೆಯವರು ಬಿಡುಗಡೆ ಹೊಂದುತ್ತಿದ್ದರು. ಅಂಡಮಾನಿನ ಕ್ರೂರ ಶಿಕ್ಷೆ, ಕಠಿಣ ಕೆಲಸ, ಕಾಯಿಲೆಗಳನ್ನು ದಾಟಿ ವಾಪಸ್ ಹೋದವರು ಬೆರಳೆಣಿಕೆಯಷ್ಟು ಜನರಷ್ಟೇ.

ಅರಸೊತ್ತಿಗೆಯ ವಿರುದ್ಧ ಸೊಲ್ಲೆತ್ತಿದ ಅಪರಾಧ-ಅಪರಾಧಿಗಳನ್ನು ವರ್ಗೀಕರಿಸಿ, ಶ್ರೇಣಿಗನುಗುಣವಾದ ಶಿಕ್ಷೆ ಕೊಡುವುದರಲ್ಲಿ ಬ್ರಿಟಿಷರು ನಿಸ್ಸೀಮರು. ಚಕ್ರವರ್ತಿ ನೆಪೋಲಿಯನ್‌ಗೆ ಸೇಂಟ್ ಹೆಲೆನ್‌ನ ಏಕಾಂತ ವಾಸದಲ್ಲಿ ನಿಧಾನ ವಿಷವನ್ನೂ; ಬಹಾದ್ದೂರ್ ಷಾ ಜಫರ್‌ಗೆ ರಂಗೂನಿನಲ್ಲಿ ಜೈಲುಗೋಡೆ-ಇದ್ದಿಲುಗಳೆಂಬ ಪುಸ್ತಕ-ಪೆನ್ನುಗಳನ್ನೂ; ಭಗತ್‌ಸಿಂಗ್‌ನಂಥ ದಿಟ್ಟರಿಗೆ ನೇಣುಗಂಬವನ್ನೂ ದಯಪಾಲಿಸಿದ ಶಿಕ್ಷಾ ಸಂಹಿತೆ ಅವರದು. ತಮ್ಮ ವಿರುದ್ಧ ೧೮೫೭ರಲ್ಲಿ ಸಿಪಾಯಿ ದಂಗೆ ನಡೆದಾಗ ಅಪಾಯದ ಸೂಚನೆ ಗ್ರಹಿಸಿದ ಬ್ರಿಟಿಷರು ಅದರಲ್ಲಿ ಭಾಗಿಯಾದವರು, ಕುಮ್ಮಕ್ಕು ಕೊಟ್ಟವರು, ಮುಘಲ್ ದೊರೆ ಬಹಾದ್ದೂರ್ ಷಾ ಜಫರ್‌ಗೆ ಮನವಿ ಸಲ್ಲಿಸಿದವರು ಎಲ್ಲರನ್ನೂ ಬಂಧಿಸಿ ಅಂಡಮಾನಿಗೆ ಕಳಿಸಿದರು. ಹೀಗೆ ೧೮೫೮ ಜನವರಿಯಲ್ಲಿ ೨೦೦ ಜನ ‘ದಂಗೆಕೋರರನ್ನು ಅಂಡಮಾನಿಗೆ ಕಳಿಸಲಾಯ್ತು. ೧೮೬೮ರಲ್ಲಿ ೭೩೩ ಜನ ಗದರ್/ವಹಾಬಿಗಳನ್ನು ಕರಾಚಿಯಿಂದ, ದಂಗೆಯೆದ್ದ ಥೇರಾವಾದಿಗಳನ್ನು ಬರ್ಮಾದಿಂದ ಕಳಿಸಿದರು. ಬಂದವರಲ್ಲಿ ೨೩೮ ಜನ ತಪ್ಪಿಸಿಕೊಂಡರು. ತಪ್ಪಿಸಿಕೊಂಡವರಲ್ಲಿ ೧೪೦ ಜನ ಸತ್ತರೆ ಬದುಕುಳಿದವರನ್ನು ಮತ್ತೆ ಹಿಡಿಯಲಾಯಿತು. ಅವರಲ್ಲಿ ಒಬ್ಬ ಆತ್ಮಹತ್ಯೆ ಮಾಡಿಕೊಂಡ, ೮೭ ಜನರನ್ನು ಗಲ್ಲಿಗೇರಿಸಲಾಯಿತು.

ಗಡೀಪಾರಾಗಿ ಅಂಡಮಾನ್ ತಲುಪುವವರ ಸಂಖ್ಯೆ ಹೆಚ್ಚುತ್ತ ಹೋದಾಗ ೧೮೯೬ರಲ್ಲಿ ಸೆಲ್ಯುಲಾರ್ ಜೈಲು ಕಟ್ಟುವ ನಿರ್ಣಯ ತೆಗೆದುಕೊಂಡರು. ಬಹಳ ಜನರನ್ನು ಕಡಿಮೆ ಸ್ಥಳ-ಮೇಲ್ವಿಚಾರಣೆ-ಖರ್ಚಿನಲ್ಲಿ ದೀರ್ಘಕಾಲ ನಿಯಂತ್ರಣದಲ್ಲಿಡುವುದು ಇಂಥ ಜೈಲಿನ ಉದ್ದೇಶ. ೬೦೦ ಖೈದಿಗಳು ಹಿಡಿಯುವಂತಹ, ೫.೧೭ ಲಕ್ಷ ರೂಪಾಯಿ ವೆಚ್ಚದ ಜೈಲು ಕಟ್ಟಲು ಯೋಜಿಸಲಾಯಿತು. ೧೮೯೬ರಲ್ಲಿ ಶುರುವಾಗಿ ೧೯೦೬ರಲ್ಲಿ ಮುಗಿದ ನಿರ್ಮಾಣ ಕೆಲಸಕ್ಕೆ ೬೦೦ ಜನ ಬಂದಿಗಳು ಹಗಲುರಾತ್ರಿ ದುಡಿದರು. ವೈಪರ್ ದ್ವೀಪ, ನೇವಿ ಬೇ, ಫೀನಿಕ್ಸ್ ಬೇ, ಬ್ರಿಕ್‌ಗಂಜ್‌ಗಳಲ್ಲಿದ್ದ ಅಪರಾಧಿಗಳನ್ನೂ ಕೆಲಸಕ್ಕೆ ಕರೆಸಿಕೊಳ್ಳಲಾಗುತ್ತಿತ್ತು. ಜೈಲುಕಟ್ಟಡಕ್ಕೆ ಪ್ರತಿ ತಿಂಗಳೂ ೨೦ ಸಾವಿರ ಘನಅಡಿ ಕಲ್ಲನ್ನು ವೈಪರ್ ದ್ವೀಪದ ಬಂದಿಗಳು ಒಡೆಯಬೇಕಿತ್ತು. ಬರ್ಮಾದಿಂದಲೂ ನಿರ್ಮಾಣ ಸಾಮಗ್ರಿ ತರಿಸಿಕೊಳ್ಳಲಾಯಿತು.

ಹೀಗೆ ಬ್ಯಾರಕ್-ಡಾರ್ಮಿಟರಿಗಳಿಲ್ಲದ ೬೯೬ ಸೆಲ್‌ಗಳ ಜೈಲು ನಿರ್ಮಾಣವಾಯ್ತು. ಮೇಲಿಂದ ನೋಡಿದರೆ ನಕ್ಷತ್ರ ಮೀನಿನಂತೆ, ಚಕ್ರಾಕಾರದ ಕಟ್ಟಡದಂತೆ ತೋರುತ್ತಿದ್ದ ಅದು ನಡುಮಧ್ಯ ಕಾವಲು ಗೋಪುರ ಹೊಂದಿತ್ತು. ಕಾವಲುಗೋಪುರದಿಂದ ಮೂರಂತಸ್ತಿನ ಜೈಲು ಕಟ್ಟಡ ಏಳು ದಿಕ್ಕಿನಲ್ಲಿ ಚಾಚಿಕೊಂಡಿತ್ತು. ಪ್ರತಿಸೆಲ್ ೧೩.೫ ಅಡಿ ಉದ್ದ, ೭.೫ ಅಡಿ ಅಗಲವಿದ್ದು ೧೦ ಅಡಿ ಎತ್ತರದಲ್ಲಿ ಒಂದು ವೆಂಟಿಲೇಟರ್ ಹೊಂದಿತ್ತು. ಪ್ರತಿ ಮಹಡಿ ಸಾಲಿಗೂ ಒಬ್ಬ ವಾರ್ಡರನಂತೆ ಒಟ್ಟು ೨೧ ಜನರು ಕಾವಲು ಗೋಪುರದವನ ಜೊತೆ ರಾತ್ರಿ ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು.

ಸೆಲ್ಯುಲಾರ್ ಬದುಕು:

ಸ್ವಾತಂತ್ರ್ಯ ಹೋರಾಟದ ರಾಜಕೀಯ ಖೈದಿಗಳು ಹಾಗೂ ಕ್ರಾಂತಿಕಾರಿಗಳನ್ನು ಅಂಡಮಾನಿಗೆ ಕಳಿಸಲಾಗುತ್ತಿತ್ತು. ಅವರು ಪರಸ್ಪರ ಭೇಟಿಯಾಗದಂತೆ ನೋಡಿಕೊಳ್ಳುವುದು ಜೈಲಿನ ಮುಖ್ಯ ಆದ್ಯತೆ. ಅಲ್ಲಿದ್ದವರಲ್ಲಿ ಡಾ. ದಿವಾನ್ ಸಿಂಗ್ ಕಾಲೇಪಾನಿ, ಮೌಲಾನಾ ಫಜಲ್ ಇ ಹಕ್, ಯೋಗೇಂದ್ರ ಶುಕ್ಲಾ, ಬಟುಕೇಶ್ವರ್ ದತ್ತ, ವಿ.ಡಿ.ಸಾವರ್ಕರ್, ಜಿ.ಡಿ.ಸಾವರ್ಕರ್, ವಾಮನ್ ರಾವ್ ಜೋಶಿ, ಬರೀಂದ್ರ ಕುಮಾರ್ ಘೋಷ್, ಉಪೇಂದ್ರನಾಥ್ ಬ್ಯಾನರ್ಜಿ ಮೊದಲಾದವರು ಸೇರಿದ್ದಾರೆ.
ಜೈಲಿನಲ್ಲಿ ರಾಜಕೀಯ ಖೈದಿಗಳಿಗೆ ಕಠಿಣ ಶ್ರಮದ ಕೆಲಸ ಕೊಡಲಾಗುತ್ತಿತ್ತು. ಕೊಬ್ಬರಿಎಣ್ಣೆ ಗಾಣ, ನಾರು-ಹಗ್ಗ ತಯಾರಿ, ಕಾಡು ಕಡಿಯುವುದು, ನೇಯುವುದು, ಗುಡ್ಡ ಸವರುವುದು, ಗುಂಡಿ ಮುಚ್ಚುವುದು, ರಬ್ಬರ್ ಇಳಿಸುವುದು, ಇಟ್ಟಿಗೆ ತಯಾರಿಸುವುದು ಹೀಗೇ ಬಿರುಬಿಸಿಲಿನಲ್ಲಿ ಅವರು ಬೆವರು ಸುರಿಸಬೇಕಿತ್ತು. ಸುಖದ ಬದುಕನ್ನು ತ್ಯಜಿಸಿ ದೇಶಭಕ್ತಿಯಿಂದ ಪ್ರೇರಿತರಾಗಿ ಶಾಲಾಕಾಲೇಜು, ಮನೆಮಠ ತೊರೆದ ತರುಣರು ಕ್ರಿಮಿನಲ್‌ಗಳೆಂಬ ಅವಹೇಳನಕ್ಕೊಳಗಾಗಬೇಕಿತ್ತು. ರಾತ್ರಿಯೆಂದರೆ ಜೈಲುವಾಸಿಗಳಿಗೆ ನಡುಕ. ಸಂಜೆ ೪-೫ಕ್ಕೆಲ್ಲ ಕೋಣೆಯಲ್ಲಿ ಕೂಡಿ ಬಾಗಿಲು ಹಾಕಿದರೆ ಮರುದಿನ ಬೆಳಿಗ್ಗೆ ಆರರ ನಂತರವೇ ಬಾಗಿಲು ತೆರೆಯುವುದು. ಒಂದು ಬಾರಿ ಮೂತ್ರ ತುಂಬಲೂ ಸಾಲದಷ್ಟು ಪುಟ್ಟ ಕುಡಿಕೆ ಖೈದಿಯ ಇರುಳ ಶೌಚಾಲಯ. ಮೂತ್ರ ಬಂದೀತೆಂದು ಹೆದರಿ ನೀರು ಕುಡಿಯದೆ, ಮೂತ್ರ ತುಂಬಿ ನಿದ್ದೆ ಮಾಡಲಾಗದೇ, ಮೂತ್ರಬಾಧೆಯ ನಿರಂತರ ಹಿಂಸೆಗೇ ಎಷ್ಟೋ ಜನ ಮಾನಸಿಕ ಸಮತೋಲನ ಕಳೆದುಕೊಂಡರು.

ಪ್ರತಿ ತಿಂಗಳು ಸರಾಸರಿ ಮೂರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಉಲ್ಲಾಸಕರ ದತ್ತ ಎಂಬ ಕಟ್ಟುಮಸ್ತು ದೇಹದ ತರುಣ ಖೈದಿಯಿಂದ ಜೋಡೆತ್ತಿನ ಎಣ್ಣೆಗಾಣ ಎಳೆಸುತ್ತಿದ್ದರು. ಪುರುಸೊತ್ತೇ ಇಲ್ಲದೆ ಗಾಣ ಎಳೆದು, ಓದಿ ಬರೆಯದೆ, ಸ್ನೇಹಿತರ ಜೊತೆ ಬೆರೆಯದೆ, ಮಾತಿಗೊಬ್ಬರು ಜನವಿಲ್ಲದೆ ಒಂಟಿಸೆಲ್‌ನಲ್ಲಿ ಕೊರಗಿಕೊರಗಿ ಆತ ಹುಚ್ಚನಾದ. ಬಿಡುಗಡೆಯಾದರೂ ಜೀವಮಾನವಿಡೀ ಹುಚ್ಚಾಸ್ಪತ್ರೆಯಲ್ಲಿ ಕಳೆದ. ಕೆಲವರು ಆ ಬದುಕಿಗಿಂತ ಸಾವೇ ಮೇಲು ಎಂದು ನಿರ್ಧರಿಸಿದರು. ಇಂದುಭೂಷಣ ರಾಯ್ ತನ್ನ ಷರಟನ್ನೇ ಹರಿದು ವೆಂಟಿಲೇಟರ್‌ಗೆ ನೇಣು ಹಾಕಿಕೊಂಡ. ಸಾವರ್ಕರ್ ಸೋದರರಾದ ವಿನಾಯಕ ಹಾಗೂ ಗಣೇಶ ದಾಮೋದರ ಸಾವರ್ಕರ್ ಇದೇ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ಒಂದೇ ಜೈಲಿನಲ್ಲಿದ್ದರೂ ಎರಡು ವರ್ಷಗಳವರೆಗೆ ತಾವು ಒಂದೇ ಕಡೆ ಇರುವ ವಿಷಯ ಅವರಿಗೆ ಗೊತ್ತಾಗಿರಲಿಲ್ಲ. ಮುಂಬೈ, ರತ್ನಗಿರಿ ಹಾಗೂ ಅಂಡಮಾನ್ ಜೈಲುಗಳಲ್ಲಿ ಒಟ್ಟು ೨೭ ವರ್ಷ ಜೈಲುವಾಸ ಅನುಭವಿಸಿದ್ದ ವಿ.ಡಿ.ಸಾವರ್ಕರ್, ‘ದ ಸ್ಟೋರಿ ಆಫ್ ಮೈ ಟ್ರಾನ್ಸ್‌ಪೋರ್ಟೇಷನ್ ಫಾರ್ ಲೈಫ್' ಎಂಬ ಪುಸ್ತಕದಲ್ಲಿ ೧೦ ವರ್ಷಗಳ ಸೆಲ್ಯುಲಾರ್ ಜೈಲಿನ ಅನುಭವದ ಬಗ್ಗೆ ಬರೆದಿದ್ದು ಹೀಗೆ:

‘ದೇಹ ಮತ್ತು ಮನಸ್ಸುಗಳು ಅನುಭವಿಸುತ್ತಿದ್ದ ಯಾತನೆಯನ್ನು ಹೇಗೆ ವಿವರಿಸುವುದು? ಜೈಲಿನ ಬದುಕು, ಕಠಿಣ ಕೆಲಸ, ಕಡಿಮೆ ಊಟ, ಕಡಿಮೆ ಬಟ್ಟೆ, ಹೊಡೆತ ಇವೆಲ್ಲವಕ್ಕಿಂತಲೂ ಮಲಮೂತ್ರ ಬಾಧೆ ತೀರಿಸಿಕೊಳ್ಳುವುದೇ ಕಷ್ಟವಾಗಿತ್ತು. ಅದರ ವ್ಯವಸ್ಥೆಯಾಗುವ ತನಕ ಖೈದಿ ಕಾಯಬೇಕಿತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ದಿನಕ್ಕೆ ಮೂರು ಸಲ ಮಾತ್ರ ಅವಕಾಶವಿತ್ತು. ನಿಯಮಿತ ಸಮಯದ ನಡುವೆ ಹೋಗುವುದು ಕೆಟ್ಟ ನಡತೆಯೆಂದು ಭಾವಿಸಲಾಗುತ್ತಿತ್ತು. ರಾತ್ರಿ ಪುಟ್ಟ ಮಣ್ಣಿನ ಕುಡಿಕೆಯಲ್ಲಿ ಮೂತ್ರಬಾಧೆ ತೀರಿಸಿಕೊಳ್ಳಬೇಕು. ಜೈಲರ್ ಬ್ಯಾರಿ ಕೆಲವೊಮ್ಮೆ ಹೀಗೆನ್ನುತ್ತಿದ್ದ: ‘ಕೇಳಿ, ಖೈದಿಗಳೇ. ಇಡಿಯ ಜಗತ್ತಿಗೆ ಒಬ್ಬನೆ ದೇವರು. ಅವನು ಮೇಲೆ ಸ್ವರ್ಗದಲ್ಲಿದ್ದಾನೆ. ಆದರೆ ಇಲ್ಲಿ ಪೋರ್ಟ್‌ಬ್ಲೇರಿನಲ್ಲಿ ಇಬ್ಬರು ದೇವರು. ಆಕಾಶದಲ್ಲಿ ಅವನು, ನೆಲದ ಮೇಲಿನ ದೇವರು ನಾನು. ಆಕಾಶದ ದೇವರು ನೀವು ಸತ್ತ ನಂತರ ಬಹುಮಾನ ಕೊಡಬಹುದು, ಆದರೆ ನೆಲದ ಮೇಲಿನ ದೇವರು ಹಾಗಲ್ಲ, ನಾನು ಬದುಕಿರುವಾಗಲೆ ನಿಮಗೆ ಒಳ್ಳೆಯದು ಮಾಡುತ್ತೇನೆ. ಆದ್ದರಿಂದ ಖೈದಿಗಳಾಗಿ ಸನ್ನಡತೆ ತೋರಿಸಿ. ನನ್ನ ವಿರುದ್ಧ ಯಾವುದೇ ಮೇಲಧಿಕಾರಿಗೆ ನೀವು ದೂರಿತ್ತರೂ ಉಪಯೋಗವಿಲ್ಲ, ನೆನಪಿಡಿ.'

ಅರವಿಂದ ಘೋಷರ ತಮ್ಮ ಬರೀಂದ್ರ ಕುಮಾರ್ ಘೋಷ್ ತನ್ನ ನೆನಪಿನಲ್ಲಿ ಬರೆದಿದ್ದು ಇದು: ‘ಮರುದಿನ ಬೆಳಿಗ್ಗೆ ಹೊರಬಂದು ಮುಖ ತೊಳೆದು ಮೊಟ್ಟ ಮೊದಲ ಬಾರಿಗೆ ಅನ್ನದ ಗಂಜಿಯ ದರ್ಶನ ಮಾಡಿದೆವು. ಆದರೆ ಗಂಜಿ ಕೊಟ್ಟಿದ್ದೆಷ್ಟು? ತೆಂಗಿನ ಕರಟವನ್ನು ಬೆತ್ತಕ್ಕೆ ಕಟ್ಟಿ ಮಾಡಿದ ಕಚ್ಚಾ ಸೌಟು ಡಬ್ಬುವಿನಲ್ಲಿ ಒಂದು ಡಬ್ಬು. ಅದಕ್ಕೂ ಉಪ್ಪು ಸಾಲುತ್ತಿರಲಿಲ್ಲ. ಏಕೆಂದರೆ ಇಡೀ ದಿನಕ್ಕೆ ಚಿಟಿಕೆ ಉಪ್ಪು ಕೊಡುತ್ತಿದ್ದರು. ಅದು ಮಧ್ಯಾಹ್ನದ ದಾಲ್‌ಗೂ ಬೇಕಾಗುತ್ತಿತ್ತು. ರುಚಿಯಿದೆಯೋ ಇಲ್ಲವೋ ಉಪ್ಪಿಲ್ಲದ ಗಂಜಿಯನ್ನು ಶ್ರದ್ಧೆಯಿಂದ ತಿನ್ನುತ್ತಿದ್ದೆವು.

ಜೈಲಿನಲ್ಲಿ ನೆಮ್ಮದಿಯಿಂದ ಇರುವಂತೆಯೇ ಇಲ್ಲ. ರುಚಿಯೇ ಇಲ್ಲದ ಆಹಾರವನ್ನು ಅತಿ ಕಡಿಮೆ ಕೊಡುತ್ತಿದ್ದರು. ಬರವಣಿಗೆ ಸಾಮಗ್ರಿ ದೊರೆಯುತ್ತಿರಲಿಲ್ಲ. ವರ್ಷಕ್ಕೊಮ್ಮೆ ಬಂಧುಮಿತ್ರರೊಂದಿಗೆ ಪತ್ರ ವ್ಯವಹಾರ ಮಾಡಬಹುದಿತ್ತು. ಬಂದ ಪತ್ರಗಳನ್ನೂ ಹಂಚುತ್ತಿರಲಿಲ್ಲ. ರಾಜಕೀಯ ಬಂದಿಗಳು ಹಾಗೂ ಮೋಪ್ಳಾ ದಂಗೆಯ ಬಂದಿಗಳು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ೧೯೩೩ರಲ್ಲಿ ಜೈಲು ಸುಧಾರಣೆಗೆ ಒತ್ತಾಯಿಸಿ ೪೬ ದಿನ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ‘ಅವರ ಹೆಣ ಸಮುದ್ರದಲ್ಲಿ ತೇಲಿದರೂ ನಾನು ಒಂದಿಂಚೂ ನಿಯಮಗಳನ್ನು ಬದಲಿಸುವವನಲ್ಲ ಎಂದು ಜೈಲರ್ ಬ್ಯಾರಿ ಹೇಳಿದ್ದ. ಉಪವಾಸ ನಿಲ್ಲಿಸಲು ಬಲವಂತವಾಗಿ ಹಾಲು ಕುಡಿಸಿ ಮಹಾವೀರ್ ಸಿಂಗ್, ಮೋಹಿತ್ ಮೈತ್ರ, ಮೋಹನ್ ಕಿಶೋರ ನಾಮದಾಸ್ ಉಸಿರುಕಟ್ಟಿ ತೀರಿಕೊಂಡರು. ಮೃತದೇಹಗಳನ್ನು ಗುಟ್ಟಾಗಿ ಸಮುದ್ರಕ್ಕೆಸೆಯಲಾಯಿತು. ಅಂತೂ ಉಪವಾಸ ಸತ್ಯಾಗ್ರಹ ಕೊನೆಗೊಂಡಾಗ ರಾಜಕೀಯ ಬಂದಿಗಳು ಪರಸ್ಪರ ಭೇಟಿಯಾಗಲು ಅವಕಾಶ ನೀಡಲಾಯಿತು. ವೃತ್ತಪತ್ರಿಕೆ, ದಿನಪತ್ರಿಕೆ, ಬರೆವ ಸಾಮಗ್ರಿ ನೀಡಲಾಯಿತು. ರಾತ್ರಿ ದೀಪ ಒದಗಿಸಲಾಯಿತು. ಕೇರಂ, ಚೆಸ್, ಕಾರ್ಡ್ಸ್, ಫುಟ್‌ಬಾಲ್, ವಾಲಿಬಾಲ್ ಆಡುವ ಅವಕಾಶ ಒದಗಿಸಿದ್ದಲ್ಲದೆ ಲೈಬ್ರರಿ, ಪಾಠಗಳು ಶುರುವಾದವು. ಹಿಂದಿ ಮತ್ತು ಬಂಗಾಳಿಗಳಲ್ಲಿ ಪತ್ರಿಕೆ ಶುರುವಾದವು. ೧೯೩೫ರಲ್ಲಿ ಅಂಡಮಾನ್ ಬಂದಿಗಳಲ್ಲಿ ೩೯ ಜನ ಸೇರಿ ‘ಕಮ್ಯುನಿಸ್ಟ್ ಕನ್ಸಾಲಿಡೇಷನ್ ರಚಿಸಿಕೊಂಡರು. ‘ದಿ ಕಾಲ್ ಎಂಬ ಕೈ ಬರಹ ಪತ್ರಿಕೆ ಹೊರತರುತ್ತಿದ್ದ ಆ ಗುಂಪು ಭಾರತೀಯ ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿಕೊಂಡಿತ್ತು. ಈ ಗುಂಪಿನಲ್ಲಿ ಭಗತ್ ಸಿಂಗ್ ಸಹವರ್ತಿಯಾಗಿದ್ದ ಶಿವವರ್ಮ, ಹರೆ ಕೃಷ್ಣ ಕೊನಾರ್, ಅನಂತ್ ಚಕ್ರವರ್ತಿ, ನಳಿನಿ ದಾಸ್ ಮೊದಲಾದವರು ಇದ್ದರು.

ಸುಧಾರಣೆಗಳ ನಂತರ ಅಂಡಮಾನ್ ಜೈಲು ಖೈದಿಗಳ ಸ್ವರ್ಗವಾಗಿದೆ ಎಂದು ಬ್ರಿಟಿಷ್ ಸಚಿವರೊಬ್ಬರು ಹೇಳಿದಾಗ ಆ ಮಾತಿಗೆ ೧೯೩೭ರಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಶುರುವಾಯಿತು. ರಾಜಕೀಯ ಖೈದಿಗಳನ್ನು ವಾಪಸು ಕಳಿಸಬೇಕೆಂದೂ, ಬಿಡುಗಡೆಯ ನಂತರ ಎಲ್ಲ ಖೈದಿಗಳನ್ನು ಅವರವರ ರಾಜ್ಯಗಳಿಗೇ ಕಳಿಸಬೇಕೆಂದೂ, ಖೈದಿಗಳಿಗೆ ನಾಗರಿಕ ಸೌಲಭ್ಯ ಕೊಡಬೇಕೆಂದೂ ಬೇಡಿಕೆ ಇಡಲಾಯಿತು. ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರರ ಮಧ್ಯ ಪ್ರವೇಶದಿಂದ ೩೩ ದಿನಗಳ ನಂತರ ಸತ್ಯಾಗ್ರಹ ಕೊನೆಯಾಯಿತು. ಎಲ್ಲ ರಾಜಕೀಯ ಬಂದಿಗಳನ್ನೂ ಅವರವರ ರಾಜ್ಯಗಳಿಗೆ ಕಳಿಸಲಾಯಿತು. ಮತ್ತೆ ಕೆಲವರಿಗೆ ಕುಟುಂಬ ಕರೆಸಿಕೊಳ್ಳುವ ಅವಕಾಶ ನೀಡಲಾಯಿತು. ಹಲವು ಮೋಪ್ಳಾ ಕುಟುಂಬಗಳು ಅಂಡಮಾನಿನಲ್ಲಿ ನೆಲೆಯಾದವು. ಈಗ ಬಹುಸಂಖ್ಯಾತರಾಗಿರುವ ಮಲೆಯಾಳಿ ಜನ ಅಂಡಮಾನ್‌ನಲ್ಲಿ ನೆಲೆನಿಂತದ್ದು ಹೀಗೆ.

ಇಂದು:

ನಡೆದ ಎಲ್ಲಕ್ಕೂ ಸಾಕ್ಷಿಯಾಗಿ ಬಂಗಾಳಕೊಲ್ಲಿ ಜೈಲನ್ನು ಮೂರು ಕಡೆಯಿಂದ ಸುತ್ತುವರೆದು ಮೊರೆಯುತ್ತಿದೆ. ಆವರಣದೊಳಗಿರುವ ನೂರಾರು ವರ್ಷ ಹಳೆಯ ಹೆಮ್ಮರ ಋತುವಿಗೆ ತಕ್ಕಂತೆ ಚಿಗುರುತ್ತ, ಎಲೆಯುದುರಿಸುತ್ತ ಇಂದಿಗೂ ನಿಂತಿದೆ. ಸೆಲ್ಯುಲಾರ್ ಜೈಲು ೧೯೪೧ರ ಭೂಕಂಪಕ್ಕೆ ಹಾಗೂ ಎರಡನೆಯ ಮಹಾಯುದ್ಧದ ಜಪಾನಿನ ಬಾಂಬ್‌ಗೆ ಭಾಗಶಃ ನಾಶವಾಯಿತು. ಏಳು ವಿಂಗ್‌ಗಳಲ್ಲಿ ನಾಲ್ಕು ಬಿದ್ದುಹೋದವು. ಉಳಿದ ಮೂರರಲ್ಲಿ ಎರಡನ್ನು ಈಗ ಪ್ರವಾಸಿಗಳಿಗೆ ತೆರೆಯಲಾಗಿದೆ. ಮೂರನೆಯದು ಅಂಡಮಾನ್ ಕೇಂದ್ರಾಡಳಿತ ಪ್ರದೇಶದ ಏಕಮಾತ್ರ ಜೈಲಾಗಿದೆ. ಜೈಲಿಗಾಗಿ ಖ್ಯಾತಿವೆತ್ತ ಅಂಡಮಾನ್ ಭಾರತದಲ್ಲಿ ಅತಿ ಕಡಿಮೆ ಅಪರಾಧ ನಡೆಯುವ ಸ್ಥಳವಾಗಿದೆ. ಬಿದ್ದುಹೋದ ನಾಲ್ಕು ವಿಂಗ್‌ಗಳ ಜಾಗದಲ್ಲಿ ಅಂಡಮಾನಿನ ಅತಿದೊಡ್ಡ ಆಸ್ಪತ್ರೆ ‘ಗೋವಿಂದವಲ್ಲಭ ಪಂತ್ ಸಾರ್ವಜನಿಕ ಆಸ್ಪತ್ರೆ ಇದೆ.
ಭಾರತದ ಮೂಲೆಮೂಲೆಯ ತರುಣ ಕ್ರಾಂತಿಕಾರಿಗಳ ಬೆವರು, ನೆತ್ತರು, ಕಣ್ಣೀರು ಹೀರಿದ ಸೆಲ್ಯುಲಾರ್ ಜೈಲು ೧೯೭೯ರಲ್ಲಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲ್ಪಟ್ಟಿತು. ಜೈಲಿನಲ್ಲಿದ್ದವರು ಧರಿಸುತ್ತಿದ್ದ ಗೋಣಿ ಉಡುಪು, ದಿನಕ್ಕೆ ಕನಿಷ್ಟ ೩೦ ಪೌಂಡ್ ಎಣ್ಣೆ ತೆಗೆಯಲು ಕಾಯಿ ಒಡೆದು ರುಬ್ಬಬೇಕಿದ್ದ ಎಣ್ಣೆಗಾಣ, ನೇಣುಮನೆ, ಅಂತ್ಯಸಂಸ್ಕಾರ ವಿಧಿಯ ಪೀಠ, ಹೊಡೆತ ತಿನ್ನುವ ಸ್ಥಳ ಎಲ್ಲವೂ ಮೂಕಸಾಕ್ಷಿಗಳಾಗಿ ಆವರಣದಲ್ಲಿ ನಿಂತಿವೆ. ಜೈಲಿನಲ್ಲಿ ಪ್ರತಿದಿನ ಸಂಜೆ ನಡೆಯುವ ಸೌಂಡ್ ಅಂಡ್ ಲೈಟ್ ಶೋನಲ್ಲಿ ಜೈಲುವಾಸಿಗಳ ದನಿ ಹಾಗೂ ಜೈಲು ಆವರಣದ ಮರ ಮಾತನಾಡುವಂತೆ ನಿರೂಪಿಸುತ್ತ ನೋಡುಗರ ದೇಶಪ್ರೇಮವನ್ನು ರಿಚಾರ್ಜ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಅಂಡಮಾನ್ ಶಿಕ್ಷೆಯ ಕುರಿತೇ ೧೯೯೬ರಲ್ಲಿ ‘ಕಾಲಾಪಾನಿ ಚಿತ್ರ ತಯಾರಾಯಿತು. ಬಾಂಬ್ ದಾಳಿಗೆ ಕಾರಣನೆಂಬ ಸುಳ್ಳು ಆರೋಪ ಹೊರಿಸಿ ಅಂಡಮಾನ್ ಜೈಲಿಗೆ ಗಡೀಪಾರಾದ ಒಬ್ಬ ವೈದ್ಯ ಅಲ್ಲಿದ್ದ ನೂರಾರು ಭಾರತೀಯ ಖೈದಿಗಳ ಜೊತೆ ಅನುಭವಿಸಿದ ಯಮಯಾತನೆಯನ್ನು ಚಿತ್ರ ವಿವರಿಸುತ್ತದೆ. ಸಿನಿಮಾ ಬಾಕ್ಸಾಫೀಸಿನಲ್ಲಿ ಅಲ್ಲದಿದ್ದರೂ ಅಂಡಮಾನ್ ಅನ್ನು ಭಾರತೀಯರಿಗೆ ಮತ್ತೆ ನೆನಪಿಸಿಸುವಲ್ಲಿ ಯಶಸ್ವಿಯಾಯಿತು.

ಮುಕ್ತತೆಯ, ಆಧುನಿಕತೆಯ ಮಾತನಾಡುತ್ತಲೇ ನಿರ್ಬಂಧಗಳೂ ಹೆಚ್ಚುತ್ತಿವೆ. ನಿರ್ಬಂಧಗಳು ಹೆಚ್ಚಿದಂತೆ ಉಲ್ಲಂಘನೆಯೂ ಹೆಚ್ಚಾಗುತ್ತಿದೆ. ಮಾನವ ಹಕ್ಕು, ಪ್ರಜಾಪ್ರಭುತ್ವ, ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆಲ್ಲ ಮಾತನಾಡುವ ಈ ದಿನಗಳಲ್ಲೂ ಸಾವಿರಾರು ಅಮಾಯಕರ ಬದುಕು ಜೈಲಿನಲ್ಲಿ ಸೋರಿಹೋಗುತ್ತಿರುವ ವೈರುಧ್ಯ ನಮ್ಮ ಮುಂದಿದೆ. ಅಂಡಮಾನ್ ಜೈಲೇನೋ ಐತಿಹಾಸಿಕ ಸ್ಮಾರಕವಾಯಿತು, ಆದರೆ ಇಂಥ ಇನ್ನೆಷ್ಟೋ ಜೈಲುಗಳು ಪ್ರತಿ ದೇಶದಲ್ಲೂ ಭದ್ರತೆ-ಸಮಗ್ರತೆ-ರಾಷ್ಟ್ರೀಯತೆ ಹೆಸರಿನಲ್ಲಿ ತಲೆಯೆತ್ತಿವೆ.

ಅದರ ನಡುವೆಯೂ ಸ್ವಾತಂತ್ರ್ಯದ ಹಕ್ಕಿ ಜೈಲಿನಲ್ಲೇ ಗೂಡು ಕಟ್ಟುತ್ತಿದೆ!

ಸಾವಿನ ವ್ಯಾಪಾರಿಗಳ ಮಾನವ ಹಕ್ಕಿನ ಇತಿಹಾಸ

ಭಾಗ -2


- ಸಿ.ಶ್ರೀರಾಮ್, ಬೆಂಗಳೂರು

ಅಪಾರ ಸಂಖ್ಯೆಯ ಬುಡಕಟ್ಟು ಜನರು ವಸಾಹತುಶಾಹಿಗಳು ಪರಿಚಯಿಸಿದ ರೋಗಗಳಿಗೆ ಬಲಿಯಾಗಿದ್ದರಿಂದ ತೋಟಗಳಲ್ಲಿ ಕಾರ್ಮಿಕರ ಅಭಾವ ತಲೆದೋರಿತು. ಇದನ್ನು ನೀಗಿಸಲು ವಸಾಹತುಶಾಹಿಗಳು ಪಶ್ಚಿಮ ಆಫ್ರಿಕಾದಲ್ಲಿ ಹಲವಾರು ಶತಮಾನಗಳಿಂದ ನಡೆಯುತ್ತಿದ್ದ ನೀಗ್ರೋ ಜನರ ವ್ಯಾಪಾರದತ್ತ ಗಮನಹರಿಸಿದರು. ಲಕ್ಷಾಂತರ ನೀಗ್ರೋಗಳನ್ನು ಆಫ್ರಿಕಾದಿಂದ ತಂದು ಅಟ್ಲಾಂಟಿಕ್ ತೀರದ ಅಮೆರಿಕ ದೇಶದ ತೋಟದ ಮಾಲಕರಿಗೆ ಮಾರಾಟ ಮಾಡುತ್ತಿದ್ದರು. 15-19ನೇ ಶತಮಾನದಲ್ಲಿ ಈ ಅಟ್ಲಾಂಟಿಕ್ ತೀರದ ಗುಲಾಮರ ವ್ಯಾಪಾರವು 10ರಿಂದ 12 ಮಿಲಿಯನ್ ಕಪ್ಪು ಜನರನ್ನು ಹೊರಪ್ರಪಂಚಕ್ಕೆ ಕರೆತಂದಿತ್ತು. ಅಟ್ಲಾಂಟಿಕ್ ಸಮುದ್ರದಲ್ಲಿ ನೀಗ್ರೊ ಜನರನ್ನು ಸಾಗಣೆ ಮಾಡುವಾಗ 1.2 ರಿಂದ 2.4 ಮಿಲಿ ಯನ್ ಕಪ್ಪು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಕ್ಯಾರಿಬಿಯನ್ ದ್ವೀಪಗಳಲ್ಲಿ ಯೂರೋಪಿನ ಬಿಳಿಯ ಭೂಮಾಲಕರು ನೆಲೆಸಿದ್ದರು. ಈ ಬಿಳಿಯರ ತೋಟಗಳಲ್ಲಿ ನೀಗ್ರೋಗಳು ಕೆಲಸ ಮಾಡುತ್ತಿದ್ದರು. ಈ ಕಂದು ನೀಗ್ರೋ ಜನರನ್ನು ಶೋಷಣೆ ಮಾಡಿ ಗಳಿಸಿದ ಹಣದಿಂದ, ಯೂರೋಪಿನಲ್ಲಿ ಮೋಜಿನ ವಿಲಾಸೀ ಜೀವನ ನಡೆಸುವುದು ಐರೋಪ್ಯ ಬಿಳಿಯ ತೋಟದ ಮಾಲಕರ ಬಹುದಿನದ ಕನಸಾಗಿತ್ತು. ಇದು ಅಮೆರಿಕದ ಖಂಡದಲ್ಲಿ ಯೂರೋಪಿಯನ್ ಸಾಮ್ರಾಜ್ಯವಾದಿಗಳು ನಡೆದುಕೊಂಡ ಬಂದ ಕಟುಸತ್ಯಗಳು.

ಭಾರತದ ವಸಾಹತೀಕರಣ:ಇನ್ನು ಭಾರತದ ವಿಷಯಕ್ಕೆ ಬಂದರೆ ಇವರ ಚರಿತ್ರೆ ಭಿನ್ನವಾಗಿಲ್ಲ. 1498ಮೇ ತಿಂಗಳಲ್ಲಿ ಪೋರ್ಚುಗೀಸರು ಭಾರತ ಪ್ರವೇಶಿಸಿದರು. ಯೂರೋಪಿನ ವಸಾಹತು ದೇಶಗಳ ಮಧ್ಯೆ ತೀವ್ರ ಪೈಪೋ ಟಿಯ ನಡುವೆ ಡಚ್ಚರು, ಇಂಗ್ಲಿಷರು, ಫ್ರೆಂಚರು ಮತ್ತು ನಂತರ ಇತರರು ಆಗಮಿ ಸಿದರು. ರಾಜರ ಆಳ್ವಿಕೆಯಲ್ಲ್ಲಿದ್ದ ಪ್ರದೇಶ ಗಳನ್ನು ನಿಧಾನವಾಗಿ ತಮ್ಮ ಆಳ್ವಿಕೆಗೆ ತೆಗೆದುಕೊಂಡರು, ಮತ್ತು ಗುಲಾಮ ರಾಜ್ಯ ಗಳ ಮುಖಾಂತರ ಪರೋಕ್ಷವಾಗಿ ಆಳುತ್ತಿ ದ್ದರು. 1600ರಲ್ಲಿ ಭಾರತ ಮತ್ತು ಪೂರ್ವ ಏಶಿಯ ಜೊತೆ ವ್ಯಾಪಾರ ಮಾಡಲು ರಾಣಿ ಎಲಿಜಬೆತ್, ಈಸ್ಟ್ ಇಂಡಿಯಾ ಕಂಪೆನಿ ಪ್ರಾರಂಭಿಸುವುದಕ್ಕೆ ಅನುಮೋದನೆ ನೀಡುತ್ತಾರೆ. ಬ್ರಿಟಿಷರ ದಬ್ಬಾಳಿಕೆಯಿಂದ ನರಳಿದ್ದ ಭಾರತೀಯ ಜನತೆ 1876-78ರ ನಡುವೆ ಭೀಕರ ಬರಗಾಲದಿಂದ ತತ್ತರಿಸಿತು. ಈ ಬರಗಾಲವು 1.25-10 ಮಿಲಿಯನ್ ಜನರನ್ನು ಬಲಿತೆಗೆದುಕೊಂಡಿತು. 1850ರ ಸುಮಾರಿಗೆ ಚೀನಾದಲ್ಲಿ ಕಾಣಿಸಿಕೊಂಡ ಪ್ಲೇಗ್ ರೋಗ ಭಾರತ ಉಪಖಂಡಕ್ಕೆ ಹಬ್ಬಿ, ಭಾರತದಲ್ಲಿ ಹತು ಮಿಲಿಯನ್ ಜನ ರೋಗಕ್ಕೆ ಬಲಿಯಾಗುತ್ತಾರೆ.

ಭಾರತದ ಜನ ಆಗಾಗ್ಗೆ ಬರಗಾಲ ಮತ್ತು ವಸಾಹತುಶಾಹಿಗಳು ಪರಿಚಯಿಸಿದ ರೋಗ ಗಳಿಗೆ ತುತ್ತಾದರೂ, ಜನ ಸಂಖ್ಯೆಯು 1750ರಲ್ಲಿ 125 ಮಿಲಿಯನ್ ಇದ್ದರೆ, 1941ರ ಹೊತ್ತಿಗೆ 389 ಮಿಲಿಯನ್ ತಲುಪಿತ್ತು.ವಾಸ್ಕೋಡಿಗಾಮ 1498ರಲ್ಲಿ ಭಾರತಕ್ಕೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿ ಯುವ ಮೂಲಕ ಯೂರೋಪ್ ಮತ್ತು ಭಾರತದ ಮಧ್ಯೆ ನೇರವಾದ ವ್ಯಾಪಾರಕ್ಕೆ ಕಾರಣ ಕರ್ತನಾದ. ಪೋರ್ಚುಗೀಸರು ಗೋವಾ, ಡಿಯೂ, ಡಾಮನ್ ಪ್ರದೇಶಗಳಲ್ಲಿ, ವ್ಯಾಪಾರೀ ಕೇಂದ್ರಗಳನ್ನು ಸ್ಥಾಪಿಸಿದರು. ನಂತರ ಡಚ್ಚರು ಮತ್ತು ಫ್ರೆಂಚರು ವ್ಯಾಪಾರೀ ಕೇಂದ್ರಗಳನ್ನು ಸ್ಥಾಪಿಸಿದರು. 1619ರಲ್ಲಿ ಇಂಗ್ಲಿಷರು ಗೋವಾ ದಲ್ಲಿ ವ್ಯಾಪಾರೀ ಕೇಂದ್ರವನ್ನು ಸ್ಥಾಪಿಸಿದರು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ತೆರಿಗೆ , ಕ್ರೂರ ಆಳ್ವಿಕೆಯಿಂದ ರೋಸಿ ಹೋಗಿದ್ದ ಜನರು 1857ರಲ್ಲಿ ದಂಗೆ ಎದ್ದರು. ಒಂದು ವರ್ಷದ ದಂಗೆಯ ತರುವಾಯ ಈಸ್ಟ್ ಇಂಡಿಯಾ ಕಂಪೆನಿ ಇಂಗ್ಲೆಂಡಿನಿಂದ ಸೈನಿಕರನ್ನು ಕರೆತಂದು ದಂಗೆಯನ್ನು ಅಡಗಿಸುತ್ತದೆ. ಈ ದಂಗೆಯ ನಾಯಕತ್ವ ವಹಿಸಿದ್ದ ಮೊಗಲ್‌ದೊರೆ ಬಹಾದ್ದೂರ್ ಶಾ ಜಫಾರ್‌ರನ್ನು ಬರ್ಮಾ ದೇಶದಲ್ಲಿ ಬಂಧಿಸಿಡಲಾಯಿತು ಮತ್ತು ಅವರ ಮಕ್ಕಳ ತಲೆಯನ್ನು ಕತ್ತರಿಸಿ ರಾಜರ ಆಳ್ವಿಕೆಗೆ ವಾರಸುದಾರರು ಇಲ್ಲದಂತೆ ಮಾಡಲಾಯಿತು.

ಬ್ರಿಟಿಷರ ಆಳ್ವಿಕೆ ಅತ್ಯಂತ ಕೆಟ್ಟ, ಭಯಂಕರ ಮತ್ತು ಪರಮನೀಚತನದಿಂದ ಕೂಡಿತ್ತು. ಸಮುದ್ರ ಕಳ್ಳರಾಗಿದ್ದ ಬ್ರಿಟಿಷರು ಭಾರತವನ್ನು ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ಲೂಟಿ ಮಾಡಿ ನಾಶ ಮಾಡಿದರು. 17ನೇ ಶತಮಾನ ದಲ್ಲಿ ಭಾರತವು ವಿಶ್ವದ ಆರ್ಥಿಕತೆಯಲ್ಲಿ 2ನೇ ಸ್ಥಾನ ಹೊಂದಿತ್ತು. ವಿಶ್ವದ ಒಟ್ಟು ಸಂಪತ್ತಿನಲ್ಲಿ ಭಾರತದ ಪಾಲು 22%ದಷ್ಟಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ ಅದರ ಪಾಲು 0.1%ಕ್ಕೆ ಇಳಿದಿತ್ತು.ಮೊಗಲರ ಆಳ್ವಿಕೆಯಲ್ಲಿ ಭಾರತ ಚಿನ್ನದಿಂದ ಕಂಗೊಳಿಸುತ್ತಿತ್ತು. ಬ್ರಿಟಿಷರು ಚಿನ್ನದ ದೂಳನ್ನು ಬಿಟ್ಟು, ಅಪಾರ ಪ್ರಮಾಣದ ಚಿನ್ನವನ್ನು ತಾಯ್ನಿ ಡಿಗೆ ಕದ್ದೊಯ್ದರು. 1901-1910ರ ಕಡಿಮೆ ಅವಧಿಯಲ್ಲಿ ಕೋಲಾರದ ಚಿನ್ನದ ಗಣಿಯಿಂದ 1,70,000 ಕೆ.ಜಿ ಚಿನ್ನವನ್ನು ಜಾನ್‌ಟೇಲರ್ ಎಂಡ್ ಕಂಪೆನಿ ತಾಯ್ನೊಡಿಗೆ ರವಾನಿಸುತ್ತದೆ.

ಆಗ ಈ ಗಣಿಯಲ್ಲಿ ಒಂದು ಟನ್ ಅದಿರಿಗೆ 40 ಗ್ರಾಂ ಚಿನ್ನ ದೊರೆಯುತ್ತಿತ್ತು. 1956ರಲ್ಲಿ ಗಣಿ ರಾಷ್ಟ್ರೀಕರಣ ಮಾಡುವವರೆಗೂ ಇಂಗ್ಲಿ ಷರು ಪ್ರತೀ ತಿಂಗಳು ಅವರ ದೇಶದ ಖಜಾನೆಗೆ ಚಿನ್ನ ರವಾನಿಸುತ್ತಿದ್ದರು. ಬ್ರಿಟಿಷರ ಭಾರತದ ಆಳ್ವಿಕೆ ಒಂದು ಸಂಘ ಟಿತ ದರೋಡೆಕೋರರ ದರೋಡೆಯಾಗಿತ್ತು. ಈ ಸಂಘಟಿತ ದರೋಡೆ ಬ್ರಿಟಿಷರ ಕೈಗಾರಿಕಾ ಕ್ರಾಂತಿಗೆ ಸಹಾಯವಾಗಿತ್ತು. ಕೊನೆಯ 200ವರ್ಷಗಳ ಬ್ರಿಟೀಷರ ಆಳ್ವಿಕೆಯಲ್ಲಿ ಚಿನ್ನ, ಬೆಳ್ಳಿ,ವಜ್ರ ಹೊರತುಪಡಿಸಿ ಒಂದು ಟ್ರಿಲಿಯನ್ ಡಾಲರ್ ಹಣದ ಮೊತ್ತವನ್ನು ಲೂಟಿ ಮಾಡಿದರು. ಕೊಹಿನೂರ್ ವಜ್ರವೊಂದೇ 10 ಬಿಲಿ ಯನ್ ಪೌಂಡ್ ಬಾಳುತ್ತದೆ. ಭಾರತದಿಂದ ಲೂಟಿ ಮಾಡಿದ ಹಣವು 1770ರ ಮಧ್ಯ ಭಾಗದ ಪಶ್ಚಿಮ ರಾಷ್ಟ್ರಗಳ ಕೈಗಾರಿಕಾ ಕ್ರಾಂತಿಗೆ, ಅದರಲ್ಲೂ ಬ್ರಿಟಿಷ್ ಕೈಗಾರಿಕಾ ಕ್ರಾಂತಿಗೆ ಸಂಪೂರ್ಣವಾಗಿ ಸಹಾಯವಾಗಿತ್ತು.

18ನೇ ಶತಮಾನದ ಸಂಪತ್ತು ಬ್ರಿಟಿಷ್ ಮತ್ತು ಫಾನ್ಸ್ ದೇಶದ ವ್ಯಾಪಾರೀ ಕಳ್ಳರನ್ನು ಆಕರ್ಷಿಸುತ್ತದೆ. ಸುಮಾರು 350 ವರ್ಷಗಳ ಕಾಲ ಬ್ರಿಟಿಷರ ಹಿಂಸಾತ್ಮಕ ಆಳ್ವಿಕೆಗೆ ಒಳ ಪಟ್ಟ ಭಾರತದಲ್ಲಿ ಭೀಕರ ಬರಗಾಲ, ರೋಗ ಮತ್ತು ಗುಂಡೇಟಿಗೆ ಬಲಿಯಾಗಿ 40 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ.ಬ್ರಿಟಿಷರು ಭಾರತದಿಂದ ಹಣದ ಜೊತೆಗೆ ತಂತ್ರಜ್ಞಾನವನ್ನು ಕೊಂಡೊಯು ತ್ತಾರೆ. ವಿಲ್ ಡ್ಯೂರೆಂಟ್ ಅಮೆರಿಕದ ಇತಿಹಾಸ ತಜ್ಞ ಈ ರೀತಿ ಬರೆಯುತ್ತಾರೆ. ಭಾರತವು ಹಡಗು ನಿರ್ಮಾಣದಲ್ಲಿ ಮತ್ತು ಉಕ್ಕು ಬಟ್ಟೆ ಉದ್ಯಮದಲ್ಲಿ ಕಂಗೊಳಿಸುತ್ತಿತ್ತು. ಬ್ರಿಟಿಷರ ಪ್ರವೇಶದ ನಂತರ ಎಲ್ಲಾ ನಾಶವಾಯಿತು. ವಸಾಹತುಶಾಹಿ ಆಳ್ವಿಕೆ ಜನಾಂಗೀಯ ಬಣ್ಣ ದಿಂದ ಕೂಡಿರುತ್ತದೆ. ಬ್ರಿಟಿಷ್ ಸರ್ವಾಧಿಕಾರಿ ಆಳ್ವಿಕೆ ವಸಾಹತು ದೇಶಗಳಲ್ಲಿ ಜನರನ್ನು ಹತ್ತಿಕ್ಕಲು ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಹಿಂಸೆಯನ್ನು ಬಳಸುತ್ತಿದ್ದರು.

ಲಂಡನ್ನಿನ ತಮ್ಮ ಕಚೇರಿಯಿಂದಲೇ ವಸಾಹತುಗಳನ್ನು ನಿಯಂತ್ರಿ ಸುತ್ತಿದ್ದರು. ತಾವು ಆಳುತ್ತಿದ್ದ ವಸಾಹತು ಗಳಲ್ಲಿ ಅಲ್ಪಸಂಖ್ಯಾತ ಜನಾಂಗೀಯ ಗುಂಪೊಂದನ್ನು ಪ್ರೋತ್ಸಾಹಿಸಿ ಬಹು ಸಂಖ್ಯಾತ ಜನರ ಮೇಲೆ ಎತ್ತಿಕಟ್ಟುತ್ತಿದ್ದರು. ಸಾಮಾನ್ಯವಾಗಿ ಸಂಪ್ರದಾಯವಾದಿ ಅಲ್ಪ ಸಂಖ್ಯಾತರಿಗೆ ಆದ್ಯತೆ ನೀಡುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳು ನಿರೂ ಪಿಸಿದ 1947ರ ಜನಾಂಗೀಯ ಹಿಂಸೆಗೆ ಒಂದು ಕೋಟಿಗೂ ಹೆಚ್ಚು ಜನರು ಭಾರತದಲ್ಲಿ ಬಲಿಯಾಗುತ್ತಾರೆ. ಆಫ್ರಿಕಾದ ವಸಾಹತೀಕರಣ: ಆಫ್ರಿಕಾ ಖಂಡವು 1870ರ ಮಧ್ಯೆೆ ಯೂರೋಪಿ ಯನ್ ವಸಾಹತುಗಳಿಂದ ಹಲವಾರು ರೀತಿಯ ದಾಳಿಗಳನ್ನು ಎದುರಿಸಿದವು.

ಮುಖ್ಯವಾಗಿ ರಾಜತಾಂತ್ರಿಕ ಒತ್ತಡ, ವಸಾಹತು ದಾಳಿ, ಸೈನಿಕ ದಾಳಿ. ಅಂತಿಮ ವಾಗಿ ಸೈನಿಕ ಆಕ್ರಮಣ ವಸಾಹತೀಕರಣ ದಲ್ಲಿ ಅಂತ್ಯಗೊಳ್ಳುತ್ತದೆ. ವಿದೇಶಿ ಆಳ್ವಿಕೆಗೆ ಆಫ್ರಿಕಾದ ಬುಡಕಟ್ಟು ಜನಾಂಗಗಳು ತೀವ್ರ ಪ್ರತಿರೋಧವನ್ನು ಒಡ್ಡುತ್ತವೆ. 20ನೇ ಶತಮಾನದ ಆರಂಭಕ್ಕೆ ಬಹುತೇಕ ಆಫ್ರಿಕಾ ಖಂಡವು ಯುತೋಫಿಯಾ, ಲೈಬೀರಿಯಾ, ಹೊರತು ಪಡಿಸಿ ವಸಾಹತು ಆಳ್ವಿಕೆಗೆ ಒಳಪಡುತ್ತದೆ.

ಆಫ್ರಿಕಾ ಖಂಡವನ್ನು ಆಕ್ರಮಿಸಿಕೊಳ್ಳುವುದಕ್ಕೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿತ್ತು. ಗುಲಾಮರ ಮಾರಾಟ ಕುಸಿದಿದ್ದರಿಂದ ಮತ್ತು ಕೈಗಾರಿಕಾ ಕ್ರಾಂತಿಯ ಬೆಳವಣಿಗೆಯಿಂದ ಮೇಲಿನ ಸಮಸ್ಯೆಗಳು (ಕಾರಣಗಳು) ಹುಟ್ಟಿಕೊಳ್ಳುತ್ತವೆ. ಬಂಡವಾಳಶಾಹಿ ಕೈಗಾರಿಕೆಗಳಿಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಕಚ್ಚಾ ಸಾಮಾಗ್ರಿಗಳು, ಖನಿಜಗಳು ಮಾರುಕಟ್ಟೆ ಮತ್ತು ಲಾಭದಾಯಕ ಉದ್ದಿಮೆಗಳು ಯೂರೋಪಿನ ವಸಾಹತುಶಾಹಿಗಳು ಆಫ್ರಿಕಾ ಖಂಡವನ್ನು ಆಕ್ರಮಿಸಿಕೊಳ್ಳಲು ಪ್ರೇರೇಪಿಸಿದವು. ಆರ್ಥಿಕ ಕಾರಣವು ಆಫ್ರಿಕಾವನ್ನು ಆಕ್ರಮಿಸಿಕೊಳ್ಳಲು ಪ್ರಮುಖ ಕಾರಣವಾಗಿತ್ತು.

ವಾರ್ತಾಭಾರತಿ ಕೃಪೆ

The shameful news of Mangalore and police

Mangalore: Following the assault on youths on 28 July 2012 eight assailants have been arrested by the police. Along with the eight assailants associated with the Hindu Jagarana Vedike police case has been booked on a reporter named Naveen Soorinje from Kasturi News 24 channel (Crime no 229 of 12 of Mangalore Rural Police Station under section 13 a&b of Unlawful Activities Prevention Act 143, 147, 148, 447, 448, 341, 323, 324, 504, 506, 354, 395 read with section 149 of IPC).
While ethical debates on the manner in which such an event should be portrayed by the visual media are not to be undermined, there is no denying that in this particular case there is a clear attempt to fix the reporter.
Here is a detailed account by Naveen Soorinje. It is very important to hear his version of the story considering that he is being made out to be the villain of the piece by the police.

At 6.45 in the evening on July 28, one of my news sources from Padil (in Mangalore) called me. This was all he told me: "Naveen, around 30 men have gathered near the Timber Yard in Padil Junction and I overheard them talking to someone trying to coax them to gather some more people. They were instructing someone to be prepared with their motorbikes. It looks like they are planning to attack the guest house in Padil. I overheard them saying something like Muslim boys and Hindu girls.”

I asked him to find out which organization the men belonged to. All he could gather was that they were from some Hindutva organization, though he could not find out the name of the exact organization they belonged to.

The immediate thought that crossed my mind was this: “Should I inform the police right away or should I not?” The dilemma was because there was no accurate information as to who belonging to which organization was to attack whom and where. I just had very rudimentary information on hand. If the members of the organization had called me themselves, I could have indeed informed the police instantly. As the news came from a my source, I thought I should inform the police only after confirming the news. Having come to this decision, I set out on my bike to Padil along with my cameraman.

In a while, my cameraman and I were outside the guest house/ home stay named Morning Mist located on the hill in Padil. None of the attackers who eventually turned up were present at the spot then.We stood there for five minutes unable to understand why anyone would plan to attack that particular home stay which is located half a kilometer away from the highway cutting through Padil. The home stay is surrounded by a tall compound wall on all four sides. There is only one gate and 60 meters from the gate is the home stay. I stood near the gate and watched. There was nothing happening inside that could conceivably provoke an attack. A girl was sitting outside on a chair and two boys in another corner of the bungalow were absorbed in their mobile games. They were not indulging in any activity which can be considered illegal. That is the reason why I did not inform the police at that point of time. If my information turned out to be wrong, it would be an unnecessary anxiety for the entire police department.

While I was making all these calculations in my mind, I saw a group of over 30 people marching towards the home stay. Out of curiosity I asked them in Tulu: “Do you know what the matter is? What is happening here?” Some boys in the group pointed to the girl sitting outside saying: “Look, there is the girl and there are the guys…” They ran towards them, all set for attack. The girl, who realized that the group was there to attack, ran inside the bungalow and tried to close the door unsuccessfully. The group of 30 managed to run to the door and open it before the girl could close it completely.

Only at that point was I completely aware of what was happening and my conscience was also awakened. I immediately called Ravish Nayak, Inspector, Mangalore (Rural) (+91-948085330) from my official number (+91-9972570044). That must have been around 7.15 p.m. Ravish Nayaka did not receive my call. On the other hand, the assault had just begun. The girls started running helterskelter failing to understand what was happening. The police personnel were not receiving the calls being made. I asked my friend Rajesh Rao of TV-9 to call the police and Ravish Nayak did not receive the call made by Rajesh Rao either.

While I was trying to get in touch with the police inspector, the cameraman ran behind the attackers and got started on his duty of recording the action. Till then only my cameraman and I were present at the spot but were soon joined by the cameraman of Sahaya TV, Sharan, and a photographer, Vinay Krishna. I was a mute witness to all that was happening there, with the guilt of not being able to do anything. More than half the attackers had consumed alcohol and were not in a position to listen to anything. I have been witness to violent incidents in my life, but never before violence of this scale and nature. Our cameraman was running wherever the group was attacking individuals. I was watching it and screaming and requesting, “Don’t hit the girls.” My request reached the camera sound recorder but did not reach the attackers.The boys who were attacked were pleading, “Please leave us. We are having a birthday party here. Please…” and were falling at the feet of the attackers. But nothing moved the attackers. If it were to be just this, probably I could have forgotten the incident. But I saw something much more terrible and shocking.
The girls who saw the boys being trashed were shocked at the sight and ran in all directions only to be followed by the attackers. Believe it or not, one of the girls jumped down from the first floor but was caught by nearly 20 attackers who began to pull out her clothes. They slapped her and pushed her to the wall. By then the girl in pink clothes managed to run away. When the attackers caught her, she was literally stripped naked. Leaving her with only one piece of cloth the assailants molested her. This sight sent a chill down my spine. Never in my life had I seen something as horrific as this, though I had heard of such things. These were the scenes which could not become visuals for the news. Only a portion of the incident was shot. Later on, all the boys and girls partying there were locked inside a room. All this happened in a matter of 15 minutes.

When the attackers were done with one round of their planned action, Inspector Ravish along with Police S.I. Manikantha Neelaswamy and others arrived at the spot. It appeared as though the police had a tie-up with the attackers. For over half an hour the police were in conversation with the attackers. I was utterly shocked by the scene of police conversing with the them. While they were conversing, one boy who was in the partying group tried to escape, but was caught by the police. When in the custody of the police, the attackers trashed him.

By then many media persons had arrived at the spot. My cameraman and I returned to the office and uplinked all the visuals to the Bangalore office. At 8:45 p.m. the news was aired. Within no time the visuals of our channel was used by national channels and thus the incident became national news. This angered city police Commissioner Seemanth Kumar who called my friend Rajesh Rao of TV-9 who then was with me. Rajesh put the call on loud speaker while Seemanth Kumar was saying: “Why should Naveen have reported the incident? I will teach him a lesson. He not only compared this incident to the Assam incident, but also said that Mangalore is being Talibanized. This time he will be taught a lesson. We will fix him in this case and none of his contacts at any level will be of any help.” It is crystal clear from the words of Seemanth Kumar that his concern was not the attack itself, but the fact of the attack being reported.

This morning I received yet another shock. The attacked boys and girls had given statements against me at the Mangalore Rural Police Station. I was sure that those statements were given under pressure. I guess the boys and girls had heard me requesting the assailants not to trash them. By evening my doubt was cleared. Speaking to the media the attacked boys and girls said: “We haven’t complained against the media. They have stood in our support.”

Mangalore (Rural) police have filed a case against me under the Indian Penal Code and Unlawful Activities Prevention Act. The police have arrested eight of the assailants with the help of our visuals. The incident we have reported is shameful, not the visuals we have shown. The 28 July incident at Mangalore is neither a stray incident nor are such attacks in Mangalore a new phenomenon. Every week such incidents take place. Fundamentalists not only attack boys and girls mixing with the boys and girls of another religions but also take them to the police station. This incident would have taken place even if I had not shot it. Our recording has revealed the inhuman face of the fascists and has led to the arrest of eight attackers. No matter what is said and what cases are booked against me, I believe I have done my duty as a reporter and that is the only satisfaction to my hurt self.
It doesn’t matter to me that there are complaints filed against me and an FIR has been lodged. I will be happy if the attackers are punished because of the FIR lodged against me. If I am to be freed of these charges because of some pressure and if that is going to benefit the the attackers in any way, then I do not need such freedom. No matter what punishment is given to the attackers, it will never do justice to those girls who were assaulted right in front of my eyes. Yet they need to be punished.

There is more to write, but time does not permit. If any individual or association needs more information to fight the cause or if any investigation team needs more information, I can be contacted at any time of the day.

My address:
Naveen Soorinje
Reporter
Kasturi News 24
Mangalore
Mobile: +91-9972570044. +91-8971987904

--
B.A. Samvartha ('Sahil')
'Sahtyashree'
MIG, 4th Cross, 6th Main,
KHB Colony, HUDCO,
Manipal- 576104

Mobile: +919844121911 (Karnataka)

History Repeats. But With Some Difference…


Samvartha 'Sahil'

History repeats, they say.

From the moment the news channels started telecasting the news of the attack in Padil, Mangalore on 28 July 2012 the memories of the infamous 2009 Mangalore pub attack (24 Jan) was invoked.

A few youngsters were partying at a resort in Padil, Mangalore and 50 members of the vigilante group Hindu Jagarana Vedike have attacked the boys and girls at the private party. The girls were manhandled assaulted and so were the boys.

The private party was called “rave party” by the media and was believed to be one by the vigilante group for which the private party was attacked. The problem the vigilante group had with ‘rave party’ was not legal but cultural, which is an insight to the fact that these groups are not concerned about law. In 2009 the attack on women in a pub in Mangalore was also for “cultural” reasons. In both cases law was taken into hand by the vigilante group and law was broken.

There are more similarities between the two incidents that have occurred in a gap of three and a half years.

Like always, in Mangalore, the attackers have claimed, proudly, that the members of their group have attacked. (On Sunday they have also protested the arrest of their group members). Like always, questions have been raised about the victim to justify the acts of violence.

History repeats. Yes. But with some difference.

In the 2009 incident the camera persons from various channel had assembled at the to-be attacked pub even before all of the attackers arrived! The camera persons called “action” only after which the pub was attacked! The police were not informed! In the 2012 incident the media did make calls to the police as and when they walked with the assailants into the resort. The police did not receive the call and finally when the assault was reported, cases were booked on the reporters! The inefficiancy of the police makes them target the reporter. (an interview of the reporter Naveen Soorinje can be found here and his account of the incident can be found here)

The 2009 attack made national news within no time. The 2012 one also did. But the 2009 images were censored the faces blurred. The images aired by Public TV and Suvarna (may be others too) were not even censored. The faces not blurred.

Discussions were held in almost all the Kannada channels. There were arguments in support of the attack and there were arguments condemning the attack too. The argument of those condemning the attack would be like, “Yes they shouldn’t be partying like that, they shouldn’t be dressing like that, they shouldn’t be drinking like that… but you see attacking them in this manner is not right….”

These arguments were disturbing because they, heart in heart, seem to hold the view that drinking is “not good”, wearing clothes of choice is “not good”, partying is “not good” and moreover gives the authority of individuals to their family while saying, “Who are these people to teach them a lesson? Only their families have that right…”- which goes on to accept that these boys and girls deserve to be taught a “lesson” but by a different teacher. But yeah they deserve to learn a lesson because they are wrong!

When the pub was attacked in 2009 in Mangalore there were arguments which asked, “What is wrong if the girls drink and dance?” Sadly in 2012 even those condemn the attacks seem to have subscribed to some of the basic arguments of the vigilante groups that certain things are going wrong and that needs to be mended. While the vigilante groups take it on themselves to become the teachers the ones condemning the attack seem to make the family members the teachers while accepting that a lesson is to be taught.

In the 2009 incident there was one brave Pavan who fought the vigilante groups, all alone, though with less success. But in 2012 there was no one like Pavan.

In 2009 there were mute spectators for the violence. In 2012 after the attack when the police arrived, the common men and women of Padil staged protest against the victims and not against the attackers or the attack. If being a silent spectator is also considered as being party to the acts of violence here in Padil the most common men and women extended their support openly to the attack and also welcomed it openly, not in silence being mute spectators. They also were crying the slogan, “Bolo bharath maata ki… JAI.”

Saffronization and Talibanization of the collective consciousness. Legitimization of violence.

A closer look at the video makes us realize that one of the difference between the 2009 incident and the 2012 incident is that the earlier was more of an attack while the latter one more of a sexual assault. While in 2009 the attack was in the name of “culture” and the justification was in the lines of “we acted like elder brothers by slapping them when they were slipping.” In 2012 the elder brother has vanished and fascism doesn’t require wearing the mask of a brother and even sexual assault is accepted, in the name of “culture.”

The way in which the girls were manhandled in Padil makes us think if the goons were doing what they were doing f just for some “sexual thrills,” and some “violent thrill,” in the name of culture! It makes us doubt if these men are grounded even in the periphery of any ideology. It appears like the devil has resided independent of fascist ideology in the subconscious and unconscious. But one can never ignore the fact that the devil was planted by fascism. In 2009 the members of vigilante group held a mass prayer before attacking the women in the pub. In 2012 there was no mass prayer as such. The violent mentality is independent now. It requires no support of ideology. The mentality which once held the little finger of fascist ideology now seems to have learnt to walk on its leg by itself.

The orange (read saffron) color of the sky has turned black while the sun has drowned in the coast of Mangalore. Darkness has settled on Mangalore.

ಯುವತಿಯರ ಮೇಲೆ ದಾಳಿ:ಪ್ರಾಯೋಜಿಸಿದವರು ಪೊಲೀಸರೇ?

ವಾರ್ತಾಭಾರತಿ ಸಂಪಾದಕೀಯ

ನಿಜಕ್ಕೂ ಮಂಗಳೂರಿನ ಪಡೀಲ್‌ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವನ್ನು ಪ್ರಾಯೋಜಿಸಿರುವುದು ಸಂಘಪರಿವಾರವೋ ಅಥವಾ ಇಲ್ಲಿನ ಕೆಲ ಪೊಲೀಸ್ ಅಧಿಕಾರಿಗಳೋ ಎಂಬಂತಹ ಅನುಮಾನವೊಂದು ಜಿಲ್ಲೆಯ ಜನರಲ್ಲಿ ತಲೆಯೆತ್ತಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆಯಾದರೂ, ಇವರ ಜೊತೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಸದ್ಯದ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ನಡೆ ಅನುಮಾನಸ್ಪದವಾಗಿರುವುದರಿಂದ, ಮತ್ತು ಹೆಚ್ಚಿನ ಇಂತಹ ಕೃತ್ಯಗಳು ಮಾಧ್ಯಮಗಳ ಸಮ್ಮುಖದಲ್ಲೇ ನಡೆದಿರುವುದರಿಂದ, ಅವರನ್ನು ಅನುಮಾನ ಪಡುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಅನುಮಾನಕ್ಕೆ ಹತ್ತಿರವಾದ ವರ್ತನೆಗಳು ಅವರಲ್ಲಿ ಕಂಡರೆ ಪ್ರಕರಣ ದಾಖಲಿಸುವುದೂ ಅನಿವಾರ್ಯ. ವಿಚಾರಣೆಯ ಬಳಿಕ ಸತ್ಯಾಸತ್ಯ ಹೊರ ಬಿದ್ದೇ ಬೀಳುತ್ತದೆ. ಆದರೆ ಇಲ್ಲಿ ನಡೆದಿರುವುದು ಅದಲ್ಲ. ಪೊಲೀಸರಿಗೆ ಕೃತ್ಯ ನಡೆಸಿದ ದುಷ್ಕರ್ಮಿಗಳ ಮೇಲೆ ಇರುವ ಆಕ್ರೋಶಕ್ಕಿಂತ, ಕೃತ್ಯವನ್ನು ಸಮಾಜದ ಮುಂದಿಟ್ಟ ಪತ್ರಕರ್ತರ ಮೇಲೆಯೇ ಇದ್ದಂತಿದೆ. ಯಾಕೆಂದರೆ, ಇಡೀ ಘಟನೆಯಲ್ಲಿ ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿ ಮಾಧ್ಯಮ ಪ್ರತಿನಿಧಿಗಳು ಮಾತನಾಡಿದ್ದಾರೆ. ಇದು ಪೊಲೀಸರಿಗೆ ಸಹಿಸಲಾಗದಷ್ಟು ಸಿಟ್ಟು ತಂದಿದೆ.

ಸಂಘಪರಿವಾರದ ಕಾರ್ಯಕರ್ತರು ಯಾವುದೋ ಸಂಚು ನಡೆಸುತ್ತಿದ್ದಾರೆ ಎಂದು ಸಿಕ್ಕಿದ ಸಣ್ಣ ಮಾಹಿತಿಯ ಆಧಾರದ ಮೇಲೆ ಮಾಧ್ಯಮ ಪ್ರತಿನಿಧಿಗಳು ಅಲ್ಲಿಗೆ ತೆರಳಿದ್ದರು. ಯಾರೋ ಮುಸ್ಲಿಮ್ ತರುಣರನ್ನು ಗುರಿಯಾಗಿಸಿ, ಸಂಘಪರಿವಾರದ ದುಷ್ಕರ್ಮಿಗಳು ಹಲ್ಲೆ ನಡೆಸುವುದಕ್ಕೆ ಜನರನ್ನು ಸಂಘಟಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪತ್ರಕರ್ತರು ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲಿ ಕಂಡುದು ಮಾತ್ರ ಭಯಾನಕ. ಹಾಗೆ ನೋಡಿದರೆ ಆ ಹೋಮ್ ಸ್ಟೇಯ ಸಮೀಪ ಪಾರ್ಟಿ ನಡೆಯುವ ಯಾವ ವಾತಾವರಣವೂ ಇರಲಿಲ್ಲ ಎನ್ನುವುದನ್ನು ಮಾಧ್ಯಮ ಪ್ರತಿನಿಧಿಯೇ ಹೇಳುತ್ತಾರೆ.

ಮೂಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮೊಬೈಲ್‌ನಲ್ಲಿ ಆಟವಾಡುತ್ತಿದ್ದರು. ಇನ್ನೊಬ್ಬ ತರುಣಿ ಕುರ್ಚಿಯಲ್ಲಿ ಕುಳಿತಿದ್ದಳು. ಅಷ್ಟರಲ್ಲಿ ತಂಡವೊಂದು ಅಲ್ಲಿಗೆ ನುಗ್ಗಿದೆ. ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಬಳಿಕ ಹೋಮ್‌ಸ್ಟೇಯ ಒಳಗೂ ನುಗ್ಗಿ ಬರ್ಬರವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಓರ್ವ ಯುವತಿ ಒಂದನೆ ಮಹಡಿಯಿಂದ ಕೆಳಗೆ ಹಾರಿದ್ದಳಂತೆ. ಎಲ್ಲ ಯುವತಿಯರ ಬಟ್ಟೆಯನ್ನು ಕಳಚಿ, ಅವರನ್ನು ಅರೆನಗ್ನಗೊಳಿಸಿ ಕೋಣೆಗೆ ತಳ್ಳಿದ್ದಾರೆ. ಓರ್ವ ತರುಣಿಯನ್ನಂತೂ ಭಾಗಶಃ ನಗ್ನಗೊಳಿಸಿದ್ದರಂತೆ. ಟಿ.ವಿಯಲ್ಲಿ ನಾವು ಏನು ನೋಡಿದ್ದೇವೆಯೋ ಅದಕ್ಕಿಂತಲೂ ಭೀಕರವಾಗಿ ತರುಣರು ಮಹಿಳೆಯರ ಜೊತೆ ವರ್ತಿಸಿದ್ದಾರೆ. ಇದನ್ನು ತಡೆಯಲು ಪತ್ರಕರ್ತರೂ ಯತ್ನಿಸಿದ್ದಾರೆ. ಆದರೆ ಅಷ್ಟು ಜನರ ಮುಂದೆ ಅಸಹಾಯಕ ರಾಗಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ, ಏಕಾಏಕಿ ಈ ತಂಡದ ಪ್ರವೇಶವಾದಂತೆಯೇ ಮಾಧ್ಯಮ ಪ್ರತಿನಿಧಿ ಮತ್ತು ಛಾಯಾಗ್ರಾಹಕರಿಬ್ಬರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯ್ಕರ ದೂರವಾಣಿ ಸಂಖ್ಯೆ 9480805330ಯನ್ನು ಎರಡು ಬಾರಿ ಸಂಪರ್ಕಿಸಿದ್ದರು. ಇದು ಸಂಜೆ 7:30ರ ಹೊತ್ತಿಗೆ ಸರಿಯಾಗಿ. ಇಬ್ಬರು ಮಾಧ್ಯಮ ಪ್ರತಿನಿಧಿಗಳು ರವೀಶ್ ನಾಯ್ಕರನ್ನು ಸಂಪರ್ಕಿಸಿದರೂ ಅವರು ಕರೆಯನ್ನು ಸ್ವೀಕರಿಸಿರಲಿಲ್ಲ. ಈಗ ಮಾಧ್ಯಮ ಪ್ರತಿನಿಧಿಗಳ ಕೆಲಸವೇನು? ಅಲ್ಲಿಂದ ಬರಿಗೈಯಲ್ಲಿ ಹಿಂದಿರುಗುವುದೇ? ಅದನ್ನು ತಡೆಯಲಂತೂ ಇವರಿಂದ ಸಾಧ್ಯವಿಲ್ಲ. ಕನಿಷ್ಠ ಅದನ್ನು ವರದಿ ಮಾಡಿದ್ದಾರೆ. ಅಲ್ಲಿ ಹಿಂದೂಜಾಗರಣಾ ವೇದಿಕೆಯ ಮೃಗಗಳು ನಡೆಸಿದ ಕೃತ್ಯವನ್ನು ಇಡೀ ನಾಡಿಗೆ ತಿಳಿಸಿದ್ದಾರೆ.

ಇಂತಹ ಸಂದರ್ಭದಲ್ಲೂ ಅತ್ಯಂತ ಅಮಾನವೀಯ ದೃಶ್ಯಗಳನ್ನು ಪ್ರಸಾರ ಪಡಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತುಸು ಹೊತ್ತಲ್ಲೇ ಅಲ್ಲಿಗೆ ಪೊಲೀಸರು ಬಂದಿದ್ದಾರೆ. ಆದರೆ ಒಳಗಿರುವವರನ್ನು ರಕ್ಷಿಸುವ ಬದಲು ಹೊರಗಿರುವವರ ಬಳಿ ಮಾತುಕತೆಯಲ್ಲಿ ಅವರು ಮಗ್ನರಾಗಿದ್ದರು. ಇದರರ್ಥವೇನು? ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸುವ ಬದಲು ಮಾಧ್ಯಮ ಪ್ರತಿನಿಧಿಗಳ ಮೇಲೆ ಸಿಟ್ಟುಕೊಂಡಿರುವುದು ಇನ್ನೊಂದು ವಿಶೇಷ. ಅವರು ಮಾಡುವ ಕೃತ್ಯಗಳನ್ನು ಮಾಧ್ಯಮಗಳು ಮುಚ್ಚಿಟ್ಟು ಸಾಧಿಸುವುದೇನನ್ನು? ಅದರ ಪ್ರಯೋಜನವನ್ನು ಪಡೆಯುವವರು ಯಾರು? ನಿಜ.

ಟಿಆರ್‌ಪಿ, ಪೈಪೋಟಿ ಇತ್ಯಾದಿಗಳು ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಮಾಧ್ಯಮಗಳಲ್ಲೂ ಇರುತ್ತದೆ. ಕೆಲವೊಮ್ಮೆ ಇದನ್ನು ಕಾಯ್ದುಕೊಳ್ಳುವ ಭರದಲ್ಲಿ ಪತ್ರಕರ್ತರು ತಮ್ಮ ಗೆರೆಗಳನ್ನು ದಾಟುವುದೂ ಇದೆ. ಆದರೆ ಇಲ್ಲಿ ಹಾಗಾಗಿಲ್ಲ. ಪೊಲೀಸರಿಗೆ ಮಾಹಿತಿಯನ್ನು ಪತ್ರಕರ್ತರೇ ನೀಡಿದ್ದಾರೆ. ಆದರೆ ಪೊಲೀಸರು ಅದನ್ನು ನಿರ್ಲಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಸ್ಥಳಕ್ಕೆ ಪೊಲೀಸರು ಬಂದ ಬಳಿಕವೂ ಅವರು ಒಳ ಹೋಗಿ ತಕ್ಷಣ ಹಲ್ಲೆಯನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ. ಅಂದರೆ ಪೊಲೀಸ್ ಇಲಾಖೆ ಪರೋಕ್ಷವಾಗಿ ಇಡೀ ಕೃತ್ಯಕ್ಕೆ ತನ್ನ ಬೆಂಬಲವನ್ನು ನೀಡಿದೆ.

ಎಲ್ಲ ಮುಗಿದ ಬಳಿಕ, ಬಂಧಿಸುವ ನಾಟಕವಾಡಿದೆ.ಪೊಲೀಸರು ದುಷ್ಕರ್ಮಿಗಳ ಮೇಲೆ ಸಿಟ್ಟಾಗುವುದಕ್ಕಿಂತ ಹೆಚ್ಚಾಗಿ ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ. ಯಾಕೆಂದರೆ ಪೊಲೀಸರ ವೈಫಲ್ಯವನ್ನು ಸಾರುವುದಕ್ಕೆ ಇರುವ ಅತಿ ದೊಡ್ಡ ಸಾಕ್ಷಿಯೆಂದರೆ ಪತ್ರಕರ್ತರು ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ನಡೆದಿರುವುದು ಏನು ಎನ್ನುವುದನ್ನು ಮಾಧ್ಯಮಗಳು ಚಿತ್ರೀಕರಿಸಿ ಕೊಂಡಿವೆ. ನಿಜಕ್ಕೂ ಹಿರಿಯ ಪೊಲೀಸರಿಗೆ ಕೃತ್ಯದ ಕುರಿತಂತೆ ಅಸಹನೆಯಿದ್ದರೆ, ಕನಿಷ್ಠ ಇಬ್ಬರು ಪೊಲೀಸರು ಅಮಾನತುಗೊಳ್ಳುತ್ತಿದ್ದರು. ಆದರೆ ಈವರೆಗೆ ಯಾವ ಪೊಲೀಸರ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ. ಪತ್ರಕರ್ತರಿಗೆ ಸಿಗುವ ಮಾಹಿತಿ ಪೊಲೀಸರಿಗೆ ಯಾಕೆ ಸಿಗುವುದಿಲ್ಲ? ಯಾಕೆಂದರೆ ಸಂಘಪರಿವಾರದ ಒಂದು ಗುಂಪು ಸ್ವತಃ ಪೊಲೀಸ್ ಇಲಾಖೆಯೊಳಗೇ ಕಾರ್ಯಾಚರಿಸುತ್ತಾ ಇದೆ.

ಈ ಹಿಂದಿನ ಹಲವು ದಾಳಿಗಳಲ್ಲಿ ಅದು ಸಾಬೀತಾಗಿದೆ. ಅದರ ಮುಂದುವರಿಕೆಯೇ ಇದು.ಪೊಲೀಸರು ಮೊತ್ತಮೊದಲಾಗಿ ಪತ್ರಕರ್ತರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಕೈಬಿಡಬೇಕು. ಬಳಿಕ ಅವರ ಸಾಕ್ಷವನ್ನು ಬಳಸಿಕೊಂಡು ವಿಫಲ ಪೊಲೀಸ್ ಅಧಿಕಾರಿಗಳಿಗೂ, ದುಷ್ಕರ್ಮಿಗಳಿಗೂ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈಗಾಗಲೇ ಮಾಧ್ಯಮ ಪ್ರತಿನಿಧಿಗಳು ಆರೋಪಿಗಳಿಗೆ ಶಿಕ್ಷೆಯಾಗುವುದಾದರೆ ಸಾಕ್ಷ ಹೇಳಲು ಎಲ್ಲಿಯೂ ಸಿದ್ಧ ಎಂದಿದ್ದಾರೆ. ಇನ್ನೂ ಪೊಲೀಸರು ತಮ್ಮ ನಿಷ್ಕ್ರಿಯತೆಯನ್ನು ಪ್ರದರ್ಶಿಸಿದರೆ, ಇಡೀ ಕೃತ್ಯವನ್ನು ಪ್ರಾಯೋಜಿಸಿದುದೇ ಪೊಲೀಸ್ ಇಲಾಖೆ ಎಂಬ ನಿರ್ಧಾರಕ್ಕೆ ಸಾರ್ವಜನಿಕರು ಬರುವ ಸಾಧ್ಯತೆಯಿದೆ.

ಸಾವಿನ ವ್ಯಾಪಾರಿಗಳ ಮಾನವ ಹಕ್ಕಿನ ಇತಿಹಾಸ

ಭಾಗ-೧


ಸಿ. ಶ್ರೀರಾಮ್, ಬೆಂಗಳೂರು


21ನೇ ಶತಮಾನದಲ್ಲಿ ಮಾನವ ಹಕ್ಕು ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿಷಯವಾಗಿದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಖನಿಜ ಸಂಪತ್ತುಗಳು ಬರಿದಾಗುತ್ತಿವೆ. ತೃತೀಯ ಜಗತ್ತಿನ ಅಗಾಧ ವಾದ ಖನಿಜ ಸಂಪತ್ತುಗಳನ್ನು ಲೂಟಿಮಾಡಲು ಮಾನವ ಹಕ್ಕನ್ನು ರಕ್ಷಿಸುವ ನೆಪದಲ್ಲಿ, ಆ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿ, ಬುಡಮೇಲು ಕೃತ್ಯಗಳನ್ನು ನಡೆಸಿ ಸರಕಾರಗಳನ್ನು ಐರೋಪ್ಯ ಮತ್ತು ಅಮೆರಿಕದ ಸಾಮ್ರಾಜ್ಯವಾದಿಗಳು ಬದಲಾಯಿಸಿ ಕೈಗೊಂಬೆ ಸರಕಾರಗಳನ್ನು ಸ್ಥಾಪಿ ಸುತ್ತವೆ. ಮಾನವ ಹಕ್ಕು ಮುಖವಾಡ ಧರಿಸುವ ಈ ಸಾಮ್ರಾಜ್ಯವಾದಿ ತೋಳಗಳ ಅದರಲ್ಲೂ ಯೂರೋಪಿಯನ್ ಸಾಮ್ರಾಜ್ಯವಾದಿ ತೋಳಗಳ ಇತಿಹಾಸದತ್ತ ನಾವು ಗಮನ ಹರಿಸಬೇಕಾಗಿದೆ.ಯೂರೋಪಿನ ವಸಾಹತೀಕರಣ ಅಥವಾ ಸಾಮ್ರಾಜ್ಯವಾದವು 15ನೇ ಶತ ಮಾನದಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ದೇಶಗಳು ಅಮೆರಿಕ, ಆಫ್ರಿಕ ತೀರ, ಮಧ್ಯ ಪ್ರಾಚ್ಯ, ಭಾರತ ಮತ್ತು ಪೂರ್ವ ಏಶ್ಯಾಗಳ ಅನ್ವೇಷಣೆಯ ಮೂಲಕ ಪ್ರಾರಂಭವಾಯಿತು. ಇದನ್ನು ‘ಅನ್ವೇಷಣೆಯ ಯುಗ’ (Age Of Discovery)ವೆಂದು ಕರೆಯುತ್ತಾರೆ. 16ನೆ, 17ನೆ ಶತಮಾನದಲ್ಲಿ ತೀವ್ರ ಪರಸ್ಪರ ಪೈಪೋಟಿ ಗಳ ನಡುವೆ ಇಂಗ್ಲೆಂಡ್, ಫ್ರಾನ್ಸ್, ಹಾಲೆಂಡ್ ದೇಶಗಳು ತಮ್ಮದೇ ಆದ ವಸಾಹತುಗಳನ್ನು (colony) ಸ್ಥಾಪಿಸಿದವು.

18ನೇ ಶತಮಾನದ ಕೊನೆಯಲ್ಲಿ ಮತ್ತು 19ನೇ ಶತಮಾನದ ಪ್ರಾರಂ ಭದಲ್ಲಿ ವಸಾಹತು ಆಳ್ವಿಕೆಯಲ್ಲಿದ್ದ ಅಮೆರಿಕ ಖಂಡದ ದೇಶಗಳು ತಾಯ್ನಿಡು (Metro polis )ಗಳ ನೇರ ಆಡಳಿತದಿಂದ ಹೊರ ಬಂದವು. ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳು ಈ ಕಾರಣದಿಂದ ಬಲಹೀನ ವಾದವು. ಆದರೆ ಇಂಗ್ಲೆಂಡ್, ಫ್ರಾನ್ಸ್, ಹಾಲೆಂಡ್ ದೇಶಗಳು ದಕ್ಷಿಣ ಆಫ್ರಿಕ, ಭಾರತ, ದಕ್ಷಿಣ ಪೂರ್ವ ಏಶಿಯಾಗಳ ಕಡಲ ತೀರ ಪ್ರದೇಶಗಳಲ್ಲಿ ಈಗಾಗಲೇ ಸ್ಥಾಪಿಸಿದ್ದ ಪರಾವೃತ ಪ್ರದೇಶಗಳತ್ತ ಗಮನವನ್ನು ಕೇಂದ್ರೀಕರಿಸಿದವು.


19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯು ಸಾಮ್ರಾಜ್ಯವಾದದ ಉಗಮಕ್ಕೆ ನಾಂದಿಯಾಯಿತು ಮತ್ತು ಆಫ್ರಿಕ ಖಂಡ ವನ್ನು ಕಿತ್ತು ಹಂಚಿಕೊಳ್ಳುವುದಕ್ಕೆ ಬೆಲ್ಜಿಯಂ ಮತ್ತು ಜರ್ಮನಿ ದೇಶಗಳ ಮಧ್ಯೆ ಪ್ರಮು ಖವಾಗಿ ಕಿತ್ತಾಟ ಪ್ರಾರಂಭವಾಯಿತು. ಇಪ್ಪತ್ತನೆಯ ಶತಮಾನದಲ್ಲಿ ಮೊದಲನೇ ಮಹಾ ಯುದ್ಧದಲ್ಲಿ ಸೋತವರ ಕಡಲಾ ಚೆಯ ವಸಾಹತುಗಳನ್ನು ಗೆದ್ದವರು ಹಂಚಿ ಕೊಂಡರು. ಯೂರೋಪಿನ ಪೂರ್ವ ಮತ್ತು ಪಶ್ಚಿಮದ ವಸಾಹತೀಕರಣಕ್ಕೆ ಪೋರ್ಚುಗೀಸರ ಅನ್ವೇಷಣೆ ಯು ಪ್ರಮುಖ ಕಾರಣವಾಗಿದೆ. ಅನ್ವೇಷಣೆಗೆ ಪ್ರಮುಖವಾಗಿ ಹಣಕಾಸು ಮತ್ತು ಧರ್ಮದ ಕಾರಣಗಳಿವೆ. ಸಾಂಬಾರ ವಸ್ತುಗಳನ್ನು ಪತ್ತೆ ಹಚ್ಚುವುದರ ಮೂಲಕ ಪೋರ್ಚುಗೀಸರು ಸುಲಭವಾಗಿ ಹಣವನ್ನು ಸಂಪಾದಿಸುವ ಮಾರ್ಗ ವನ್ನು ಕಂಡು ಕೊಂಡರು.

ಅಮೆರಿಕ ಖಂಡದ ವಸಾಹತೀಕರಣ:

ಯೂರೋಪಿನ ವಸಾಹತುಶಾಹಿಗಳು ಐರೋಪ್ಯ ಜನರನ್ನು ಅಮೆರಿಕ ಖಂಡಕ್ಕೆ ಕರೆತಂದು ಅಲ್ಲಿನ ಫಲವತ್ತಾದ ಭೂಮಿಯನ್ನು ಆಕ್ರಮಿಸಿಕೊಂಡರು. ಅಲ್ಲಿನ ಮೂಲನಿವಾಸಿಗಳನ್ನು ಶೋಷಣೆ ಮಾಡ ತೊಡಗಿದರು. ಮೂಲನಿವಾಸಿಗಳು ಐರೋಪ್ಯ ಸಾಮ್ರಾಜ್ಯಶಾಹಿಗಳ ಆಧುನಿಕ ತಂತ್ರಜ್ಞಾನ, ಕ್ರೂರತನವನ್ನು ಎದುರಿಸಲಾಗಲಿಲ್ಲ. ಕೊಲಂಬಸ್ ಅಮೆರಿಕಾಕ್ಕೆ ಕಾಲಿಡುವ ಮುಂಚಿನ ಮೂಲ ನಿವಾಸಿಗಳ ನಿರ್ಧಿಷ್ಠ ಸಂಖ್ಯಾ ದಾಖಲೆ ಯಿಲ್ಲ. 12 ದಶಲಕ್ಷ ಮೂಲನಿವಾಸಿಗಳು ವಾಸ ವಿದ್ದರೆಂದು ಚರಿತ್ರಾಕಾರ ಡೇವಿಡ್ ಸ್ಟಾನ್ನರ್ಡ್ ಹೇಳುತ್ತಾರೆ. 1800ರ ಸುಮಾರಿಗೆ ಅಮೆರಿಕದ ಜನಸಂಖ್ಯೆಯು 6,00,000 ತಲುಪಿದರೆ, 1890 ರಲ್ಲಿ ಮೂಲನಿವಾಸಿಗಳ ಸಂಖ್ಯೆಯು 25,000 ತಲುಪುತ್ತದೆ. ಯುದ್ಧ, ಮೋಸಗಾರಿಕೆ, ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುವುದರ ಮೂಲಕ ಅಮೆರಿಕದ ಮೂಲನಿವಾಸಿಗಳನ್ನು ಯೂರೋಪಿನ ವಲಸೆಗಾರರು ಸಂಪೂರ್ಣ ನಾಶಪಡಿಸಿದರು.

1493ರಲ್ಲಿ ಕೊಲಂಬಸ್ 17 ಹಡಗುಗಳಲ್ಲಿ ಪಡೆಗಳನ್ನು ಅಮೆರಿಕ ಖಂಡಕ್ಕೆ ಕರೆತರುತ್ತಾನೆ. ಸ್ಥಳೀಯ ಮೂಲನಿವಾಸಿಗಳನ್ನು ಗುಲಾಮಗಿರಿಗೆ ಒಳಪಡಿಸುವುದು ಮತ್ತು ಸಾಮಾಜಿಕವಾಗಿ ಕ್ಯಾರಿಬಿಯನ್ ದ್ವೀಪದ ಟಯುನೋ ಮೂಲ ನಿವಾಸಿಗಳನ್ನು ನೇಣು ಹಾಕುವುದನ್ನೂ ಜಾರಿಗೆ ತರುತ್ತಾನೆ. ಮೂರು ವರ್ಷದಲ್ಲಿ ಐವತ್ತು ಲಕ್ಷ ಮೂಲ ನಿವಾಸಿಗಳು ಪ್ರಾಣ ಬಿಡುತ್ತಾರೆ. ಸಾಮೂಹಿಕವಾಗಿ ನೇಣು ಹಾಕುವುದು, ಹಳ್ಳಿ ಗಳಲ್ಲಿ ಮೂಲನಿವಾಸಿಗಳನ್ನು ಜೀವಂತವಾಗಿ ಸುಡುವುದು, ಮಕ್ಕಳನ್ನು ಸಣ್ಣ ಸಣ್ಣ ತುಂಡು ಗಳಾಗಿ ಕತ್ತರಿಸಿ ನಾಯಿಗಳಿಗೆ ಆಹಾರವಾಗಿ ಉಪಯೋಗಿಸುವುದು ಮತ್ತು ಇನ್ನಿತರ ಕ್ರೂರ ತನದ ಮೂಲಕ ಸ್ಪೇನ್ ಸಾಮ್ರಾಜ್ಯವಾದಿಗಳು ಮೂಲ ನಿವಾಸಿಗಳನ್ನು ನಾಶಪಡಿಸಿದರೆಂದು ವಸಾಹತುಕಾಲದ ಚರಿತ್ರಕಾರ ಲ್ಯಾಸ್‌ಕ್ಯಾಸಸ್ ಬರೆಯುತ್ತಾರೆ.

ಮೂಲನಿವಾಸಿಗಳನ್ನು ನಾಶಪಡಿಸಲು ಸಾಮೂಹಿಕ ನೇಣು ಮಾತ್ರವಲ್ಲದೇ ಇನ್ನೂ ಹಲವಾರು ತಂತ್ರಗಳನ್ನು ಬಳಸುತ್ತಾರೆ. ಮೂಲನಿವಾಸಿಗಳ ಹಳ್ಳಿಗಳನ್ನು ಸಂಪೂರ್ಣವಾಗಿ ನಾಶಪಡಿಸುವುದು, ಮೂಲನಿವಾಸಿಗಳ ತಲೆಗಳಿಗೆ ಬಹುಮಾನ ನೀಡುವುದು ಮತ್ತು ಜೈವಿಕ ಯುದ್ಧಗಳ ಮೂಲಕ ಸಾಮೂಹಿಕ ಕೊಲೆ ಮಾಡುವುದನ್ನು ಅನುಸರಿಸಿದರು. ಬ್ರಿಟಿಷ್ ಗೂಡಾಚಾರರು ಮೂಲನಿವಾಸಿಗಳಿಗೆ ಸಿಡುಬು ರೋಗ ಮಿಶ್ರಿತ ಹೊದಿಕೆಗಳನ್ನು ರೋಗವನ್ನು ಹಬ್ಬಿಸುವುದಕ್ಕಾಗಿ ನೀಡುತ್ತಾರೆ. ಮಿಂಗೋ, ಡೆಲ್‌ವೇರ್, ಶಾನೀ ಬುಡಕಟ್ಟುವಿಗೆ ಸೇರಿದ ಲಕ್ಷಾಂತರ ಜನರು ಮತ್ತು ಒಹಿಯೋ ನದಿ ಪಾತ್ರದ ದೇಶಗಳ ಜನರು ಈ ರೋಗಕ್ಕೆ ಬಲಿ ಯಾಗುತ್ತಾರೆ. ಸ್ವತಂತ್ರ ನಂತರ ಅಮೆರಿಕ ಸೈನ್ಯವು ಈ ತಂತ್ರವನ್ನು ಬಳಸಿ ಉಳಿದ ಮೂಲ ನಿವಾಸಿಗಳ ಮಾರಣ ಹೋಮ ನಡೆಸುತ್ತದೆ. ಈಗ ಅಮೆರಿಕದ ಮೂಲ ನಿವಾಸಿಗಳ ಜನ ಸಂಖ್ಯೆ 0.9-1.5 ಮಾತ್ರ ವಿದೆ.

ಕೊಲಂಬಸ್ ಅಮೆರಿಕ ಖಂಡಕ್ಕೆ ಬರುವುದಕ್ಕೆ ಮೊದಲು ಯೂರೊಪಿಯನ್ ಸಾಮ್ರಾಜ್ಯವಾದಿಗಳು ಭಯಾನಕ ಮಲೇ ರಿಯಾ, ಟೈಪಾಯಿಡ್, ಪ್ಲೇಗ್ ಮತ್ತು ಇನ್ನಿತರ ಜೈವಿಕ ರೋಗಗಳನ್ನು ಕೃತಕವಾಗಿ ಹಬ್ಬಿಸುವುದರ ಮೂಲಕ ಸ್ಥಳೀಯ ಮೂಲ ನಿವಾಸಿಗಳ ಸಾಮೂಹಿಕ ಮಾರಣ ಹೋಮ ನಡೆಸಿದರು.ಸ್ಥಳೀಯ ಮೂಲ ನಿವಾಸಿಗಳನ್ನು ಸೆರೆ ಹಿಡಿದು ಯೂರೋಪಿನಲ್ಲಿ ಅವರನ್ನು ಗುಲಾಮರಾಗಿ ದುಡಿಸಿಕೊಳ್ಳವುದು ಕೊಲಂಬಸ್‌ನ ಆಲೋಚನೆಯಾಗಿತ್ತು. ಲಕ್ಷಾಂತರ ಸ್ಥಳೀಯ ಮೂಲನಿವಾಸಿಗಳನ್ನು ಯೂರೋಪಿನ ಸಾಮ್ರಾಜ್ಯಶಾಹಿಗಳು ಕೊಂದು ಹಾಕಿದರು. ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಅತಿಯಾದ ಕೆಲಸದಿಂದ ದಣಿದು ಪ್ರಾಣ ಬಿಡುತ್ತಾರೆ. ಇನ್ನೂ ಕೆಲವರನ್ನು ಗುಲಾಮರನ್ನಾಗಿ ದುಡಿಸಿಕೊಳ್ಳುವುದಕ್ಕೆ ಸೆರೆಹಿಡಿ ಯಲಾಗುತ್ತದೆ.

ತಲೆತಪ್ಪಿಸಿಕೊಂಡು ಬೆಟ್ಟದಲ್ಲಿ ಅವಿತುಕೊಂಡಿರುವವರನ್ನು ಬೇಟೆ ನಾಯಿಗಳ ಸಹಾಯದಿಂದ ಬೇಟೆಯಾಡಲಾಗುತ್ತಿತ್ತು. ಬಂಧನದಿಂದ ತಪ್ಪಿಸಿಕೊಂಡವರು ರೋಗ ಮತ್ತು ಹಸಿವಿನಿಂದ ಸಾಯುತ್ತಿದ್ದರು.ಸಾವಿರಾರು ಜನರು ಕ್ಯಾಸವಾದಿಂದ ತಯಾರಿಸಿದ ವಿಷ ಕುಡಿದು ಪ್ರಾಣ ಬಿಡುತ್ತಿದ್ದರು. ಪೋಷಕರು ತಮ್ಮ ಮಕ್ಕಳನ್ನು ಸ್ಪೇನ್ ಸಾಮ್ರಾಜ್ಯವಾದಿಗಳ ಅಡಿಯಲ್ಲಿ ಜೀವಂತವಾಗಿ ಸಾಯುವುದನ್ನು ತಪ್ಪಿಸಲು ತಾವೇ ಕೊಲ್ಲುತ್ತಿದ್ದರು. ಕೇವಲ ಎರಡು ವರ್ಷಗಳಲ್ಲಿ ದ್ವೀಪದ ಎರಡು ಲಕ್ಷದ ಐವತ್ತು ಸಾವಿರ ಜನ ಸಂಖ್ಯೆಯ ಅಧರ್ದಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. 1548ರಲ್ಲಿ ಕೇವಲ 500 ಜನರು ಮಾತ್ರ ಜೀವಂತವಾಗಿರುತ್ತಾರೆ. ಮೂಲ ನಿವಾಸಿಗಳನ್ನು ನಿರ್ನಾಮ ಮಾಡಲು ಸ್ಪೇನ್ ಸರಕಾರ ಬಹುಮಾನ ನೀಡುತ್ತಿತ್ತು. ಮೂಲ ನಿವಾಸಿಯ ಕತ್ತರಿಸಿದ ತಲೆಗೆ 7 ಡಾಲರ್ ನಿಂದ 80 ಡಾಲರ್‌ವ ರೆಗೂ ಹಣವನ್ನು ನೀಡಲಾಗುತ್ತಿತ್ತು.

ಕಡಲಾಚೆಯ ವಸಾಹತುಗಳಿಂದ ಸ್ಪೇನ್ ಮತ್ತು ಪೊರ್ಚುಗಲ್ ದೇಶಗಳು ಅಪಾರವಾದ ಲಾಭವನ್ನು ಗಳಿಸಿದುವು. ಅಮೆರಿಕದ ನ್ಯೂ ಸ್ಪೇನ್‌ನ ಪಟೋಸಿ ಮತ್ತು ಜಟಕದಲ್ಲಿ ಅಪಾರ ಚಿನ್ನ ಬೆಳ್ಳಿ ನಿಕ್ಷೇಪದಿಂದ ಸ್ಪೇನ್ ದೇಶ ತುಂಬಾ ಲಾಭ ಪಡೆದರೆ ಪೋರ್ಚುಗೀಸರು ವ್ಯಾಪಾರದ ಮಧ್ಯವರ್ತಿಗಳಾಗಿ ಅಪಾರ ಹಣ ಸಂಪಾದಿಸಿದರು. ಪಶ್ಚಿಮ ಅಮೆರಿಕದಿಂದ ಬಂದ ಚಿನ್ನ ಮತ್ತು ಬೆಳ್ಳಿಗಳನ್ನು ಸ್ಪೇನ್ ದೇಶವು ದುಬಾರಿ ಧರ್ಮಯುದ್ಧಗಳಿಗೆ ವ್ಯಯಮಾಡಿ ಹಣದುಬ್ಬರ ಮತ್ತು ಸಾಲಗಳಲ್ಲಿ ಸಿಲುಕಿಕೊಂಡರು.

ಚಿನ್ನ, ಬೆಳ್ಳಿಯಿಂದ ಸ್ಪೇನ್ ಅಪಾರ ಸಂಪತ್ತು ಗಳಿಸಿದರೆ, ಇಂಗ್ಲೆಂಡ್, ಫ್ರೆಂಚ್, ಡಚ್ಚರು ಆಳುವ ಪ್ರದೇಶಗಳಲ್ಲಿ ಇವಾವೂ ದೊರೆಯುತ್ತಿರಲಿಲ್ಲ. ಆದರೆ ಅಮೆರಿಕದಲ್ಲಿ ದೊರೆಯುವ ಇತರ ಸರಕುಗಳನ್ನು ಯೂರೋಪಿನಲ್ಲಿ ದುಬಾರಿ ಬೆಲೆಗೆ ಮಾರಿ ಅತಿಯಾದ ಲಾಭ ಸಂಪಾದಿಸುತ್ತಿ ದ್ದು ದರಿಂದ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಬಂದರು. ಕೆನಡದಲ್ಲಿ ಉಣ್ಣೆ , ವರ್ಜೀನಿಯಾ ದಲ್ಲಿ ಹತ್ತಿ , ಹೊಗೆಸೊಪ್ಪು ಮತ್ತು ಕ್ಯಾರೆಬಿಯನ್ ದ್ವೀಪ ಮತ್ತು ಬ್ರಜಿಲ್ ದೇಶಗಳಲ್ಲಿ ದೊರೆ ಯುವ ಸಲ್ಲರೆಗಳನ್ನು ಅಗ್ಗದ ಬೆಲೆಯಲ್ಲಿ ಕೊಂಡು ಯೂರೋಪಿನಲ್ಲಿ ದುಬಾರಿ ಬೆಲೆಗೆ ಮಾರಿ ಹಣ ಸಂಪಾದಿಸುತ್ತಿದ್ದರು.

ವಾರ್ತಾಭಾರತಿ ಕೃಪೆ

ಎಲ್ಲವನ್ನೂ ನುಂಗಿ ಮುಗಿಸಿದ ಮೇಲೆ ಈಗ ಹೆಣ್ಣು ಮಕ್ಕಳ ಮೇಲೆ ಕಣ್ಣುವೈದೇಹಿ

ಕೆಂಡಸಂಪಿಗೆನೆನಪಿದೆಯೆ, ಇದೇ ಮಂಗಳೂರಿನಲ್ಲಿ ಎರಡು ವರ್ಷಗಳ ಕೆಳಗೆ ನಡೆದ ಪಬ್ ಗಲಾಟೆ? ಶ್ರೀ ರಾಮಸೇನೆ ಎಂಬ ವಿಕೃತರ ಗುಂಪೊಂದು ಪ್ರಜಾಪ್ರಭುತ್ವದ ಸರಕಾರ ಇರುವಲ್ಲಿ ಏನು ಮಾಡಬಾರದೋ ಅದನ್ನು ಮಾಡಿ ಕೇಕೆ ಹಾಕಿತು. ವಾಸ್ತವವಾಗಿ ಪುರುಷ ಎನಿಸಿಕೊಂಡವರೆಲ್ಲ ನಾಚಿ ತಲೆತಗ್ಗಿಸುವಂತಹ ಘಟನೆ ಅಂದು ನಡೆದು ಹೋಯಿತು. ಶ್ರೀ ರಾಮನ ಹೆಸರು ಹೇಳಲು ಕೂಡ ಯೋಗ್ಯತೆ ಇಲ್ಲದ ಮಂದಿ ಅವನ ಹೆಸರಿನಲ್ಲಿ ನಡೆಸಿದ ದಾಂಧಲೆ ಅದು. ಶ್ರೀ ರಾಮ ಮರ್ಯಾದಾ ಪುರುಷೋತ್ತಮ ಎಂದೇ ಹೆಸರಾದವನು. ಅವನ ಹೆಸರಿಟ್ಟುಕೊಂಡ ಈ ಸೇನೆ ಸ್ತ್ರೀದ್ವೇಷಿ ಸೇನೆಯಂತೆ ವರ್ತಿಸಿತು. ಇನ್ನೊಂದೆಡೆಯಲ್ಲಿ ಇಡೀ ಪುರುಷ ಕುಲದ ಮರ್ಯಾದೆಯನ್ನೂ ಅದಕ್ಕೆ ಗೋಚರವೇ ಇಲ್ಲದೆ ಕಳೆದು ಗಾಳಿಗೆ ತೂರಿತು.

ಈಗಷ್ಟೆ ಇಂಥದೇ ಇನ್ನೊಂದು ಘಟನೆ ನಡೆದು ಹೋಗಿದೆ. ಮಂಗಳೂರಿನ ಪಡೀಲಿನಲ್ಲಿ ಯುವಕ ಯವತಿಯರು ನಡೆಸುತಿದ್ದ ಸಂತೋಷಕೂಟಕ್ಕೆ ಹಿಂದೂ ಜಾಗರಣೆಯ ಹೆಸರಿನಲ್ಲಿ ಕೆಲ ಗೂಂಡಾಗಳು ನುಗ್ಗಿ ದೈಹಿಕ ಹಲ್ಲೆ ನಡೆಸಿದ್ದಾರೆ. ಇದು ಧರ್ಮ ಜಾಗರಣೆಯೆ? ಅಥವಾ ತಮ್ಮ ಸುಪ್ತ ಕಾಮನೆಗಳನ್ನು ತೀರಿಸಿಕೊಳ್ಳಲು ಮಾಡಿಕೊಂಡ ವೇದಿಕೆಯೆ? ಹೆಣ್ಣಿನ ಮೇಲೆ ಕೈ ಹಾಕುವ ಎಲ್ಲಂದರಲ್ಲಿ ಮುಟ್ಟುವ ಇವರೆಲ್ಲ ಯಾರು ನಿಜಕ್ಕೂ? ಇಷ್ಟು ಧೈರ್ಯವಾಗಿ ನಿರ್ಭೀತಿಯಿಂದ ಗೂಂಡಾಗಿರಿಮಾಡಿ ಅದನ್ನು ಸಮರ್ಥಿಸಿಕೊಳ್ಳುವ ದಾರ್ಷ್ಟ್ಯವಾದರೂ ಈ ಮೃಗಗಳಿಗೆ ಎಲ್ಲಿಂದ ಬಂತು? ಸರಕಾರ ಇದೆಯೆ ನಮಗೆ? ಪೋಲಿಸ್ ಇಲಾಖೆ, ಕಾನೂನು ಅಂತೇನಾದರೂ ಇದ್ದದ್ದೇ ಹೌದಾದರೆ ಅವತ್ತು ಪಬ್ ಗಲಾಟೆ ನಡೆದ ಮೇಲೆ ಮತ್ತೆ ಇಂತಹದು ನಡೆಯಲೇ ಬಾರದಿತ್ತು. ಆದರೂ ನಡೆದಿದೆ. ಮತ್ತು ಅದರಲ್ಲಿ ಭಾಗವಹಿಸಿದ ತಂಡದ ಕೋತಪ್ಪ ನಾಯಕರು ಟಿ.ವಿ. ಯಲ್ಲಿ ಕಾಣಿಸಿಕೊಳ್ಳುತಿದ್ದಾರೆ, ಹೆಣ್ಣುಮಕ್ಕಳು ಹೇಗಿರಬೇಕೆಂದು ಸೂಚಿಸುತಿದ್ದಾರೆ. ಸಮಾನತೆ ಸಮಾನತೆ ಎಂದು ಬೊಬ್ಬಿಡುತ್ತೀರಲ್ಲ, ಗಂಡು ಮಕ್ಕಳಿಗೆ ಹೊಡೆದರೆ ನೀವು ಈ ಪ್ರಮಾಣದಲ್ಲಿ ಪ್ರತಿಭಟಿಸುವುದಿಲ್ಲ, ಹೆಣ್ಣುಮಕ್ಕಳಿಗೆ ಹೊಡೆದರೆ ಯಾಕೆ ಪ್ರಸಂಗವನ್ನು ದೊಡ್ಡದು ಮಾಡುತ್ತೀರಿ? ಅಂತೊಬ್ಬ ಕಾವಿವೇಷದ ಕಾಮಿ ಕೇಳುತಿದ್ದಾನೆ, ಮುಸಿಮುಸಿ ನಗುತಿದ್ದಾನೆ. ಆಶ್ಚರ್ಯ, ಕಂಬಿಯೊಳಗೆ ಇರಬೇಕಾದ ಇವರೆಲ್ಲ ಹೇಗೆ ಟಿ.ವಿ. ಪರದೆಗೆ ಬಂದು ಹೇಳಿಕೆ ಕೊಡುತಿದ್ದಾರೆ?

ಇತ್ತೀಚೆಗಂತೂ ನಾಗರಿಕರಾದವರು ತಲೆತಗ್ಗಿಸುವಂತಹ ಘಟನೆಗಳು ನಮ್ಮ ಕರಾವಳಿಯಲ್ಲಿ ನಡೆಯುತ್ತಲೇ ಇವೆ. ದಿನನಿತ್ಯದ ಬಾಳಿನ ಕಷ್ಟಸುಖಗಳಲ್ಲಿ ಮುಳುಗಿರುವ ನಮ್ಮಂಥವರಿಗೆ ಒಂದೊಂದು ಘಟನೆ ನಡೆದಾಗಲೂ ಒಮ್ಮೆ ಬೆಚ್ಚಿ ಬೀಳುವಂತಾಗುತ್ತದೆ. ಏನು, ಯಾಕೆ ಹೀಗಾಯಿತು, ಎಂದು ಅತ್ತಿತ್ತ ನೋಡುವುದರೊಳಗೆ ಅಂತಹ ಇನ್ನೊಂದು ಘಟನೆ ನಡೆದಿರುತ್ತದೆ. ಒಂದೆಡೆ ಹೆಣ್ಣುಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಇನ್ನೊಂದೆಡೆ ಹೆಣ್ಣಿನ ಮೇಲೆ ನಡೆಯುವ ಈ ನಿರಂತರ ಅತ್ಯಾಚಾರ, ಅನಾಚಾರ. ಅಯ್ಯಬ್ಬ ಹೆಣ್ಣುಮಕ್ಕಳು ಬೇಕು ಅಂತ ಎಷ್ಟೇ ಆಸೆಯಿರಲಿ, ಹೆರಲು ಧೈರ್ಯ ಬರುವುದಿಲ್ಲ -ಭಯ ಸಾಮೂಹಿಕವಾಗುತ್ತ ಇದೆ. ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತರು ಎಂಬ ಪ್ರಶ್ನೆ ಹಿಂದೆಂದಿಗಿಂತಲೂ ಹೆಚ್ಚು ಇವತ್ತು ಉದ್ಭವಿಸಿದೆ. ಇದು ಹೀಗೆಯೇ ಮುಂದುವರಿದರೆ ಸರಕಾರ, ರಾಜಕೀಯ, ಸಾಮಾಜಿಕ ಸ್ಥಿತಿಗತಿ ಎಂಬೆಲ್ಲ ಯಾವ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮತಮ್ಮ ಸಂಸಾರವನ್ನು ನಿತ್ಯ ನಿತ್ಯ ನಿಭಾಯಿಸುವುದರಲ್ಲೇ ಮಗ್ನವಾಗಿರುವ ಮುಗ್ಧ ಸಂಸಾರಸ್ಥ ಮಹಿಳೆಯರೂ ಕೂಡ ಕೆರಳಿ ಮಹಾಕಾಳಿ ರೂಪ ತಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾದೀತು. ಮೌನವೊಡೆದು ಮನೆಯಿಂದ ಹೊರಬಂದು ಅವರು ಸಂಘಟಿತರಾಗುವ ದಿನ ಖಂಡಿತವಾಗಿಯೂ ದೂರವಿಲ್ಲ.

ಮಹಿಳೆಯರ ಮೇಲೆ ನಿಜವಾಗಿಯೂ ಹಿಂದೂ ಜಾಗರಣ ವೇದಿಕೆ ಶ್ರೀ ರಾಮಸೇನೆಯಂತಹ ಗುಂಪುಗಳಿಗೆ ಗೌರವವಿರುವುದಾದರೆ, ಹೆಣ್ಣಿನ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರಗಳ ವಿರುದ್ಧ ದನಿಯೆತ್ತಲಿ. ಎಚ್ಚತ್ತು ಅವುಗಳ ವಿರುದ್ಧ ಸೇನೆ ಕಟ್ಟಲಿ. ಸಾಮಾಜಿಕ ಪಿಡುಗುಗಳ ವಿರುದ್ಧ ಸೇನೆ ಕಟ್ಟಲಿ. ನಿಜವಾಗಿ ಅವರ ಮರ್ಯಾದೆ ಉಳಿಯುವುದು ಇಂತಹ ಪ್ರಕರಣಗಳಿಂದ. ಎಷ್ಟು, ಎಷ್ಟು ಬೇಕು, ಸೇನೆಯೋಪಾದಿಯಲ್ಲಿ ಕೆಲಸ ಮಾಡಿ ಪರಿಹರಿಸಬೇಕಾದ ಸಮಸ್ಯೆಗಳು. ಅದನೆಲ್ಲ ಬಿಟ್ಟು - ಎಲ್ಲ ಬಿಟ್ಟ ಮಗ ಭಂಗಿ ನೆಟ್ಟು ನೆಡುವುದೂ ಅಲ್ಲದೆ ಅದನ್ನು ಕುಡಿದು ಹೆಣ್ಣುಮಕ್ಕಳನ್ನು ಬಡಿಯುತ್ತಿದ್ದರೆ ಸರಕಾರ ತಣ್ಣಗೆ ಕುಳಿತು ನೋಡುತ್ತಿದೆ.

ಸ್ವಾಮೀ ಮುಖ್ಯಮಂತ್ರಿಗಳೆ, ಇಂತಹ ಮರ್ಯಾದೆಗೆಟ್ಟ ಧರ್ಮದ ಹೆಸರು ತೊಟ್ಟು ಧರ್ಮಕ್ಕೆ ಮಸಿ ಬಳಿಯುವ ಕೆಲಸದ ಕಾಮುಕ ಗುಂಪುಗಳನ್ನು ಮಟ್ಟ ಹಾಕುವುದೇ ಸಧ್ಯಕ್ಕೆ ಸರಕಾರ ತುರ್ತಾಗಿ ಮಾಡಬೇಕಾದ ಅಭಿವೃದ್ದಿ ಯೋಜನೆ, ಮತ್ತು ಮಹತ್ಸಾಧನೆ ಅಂತ ಕಾಣುವುದಿಲ್ಲವೆ ನಿಮಗೆ? ನಮಗೀಗ ನಮ್ಮಲ್ಲೊಂದು ಜವಾಬ್ದಾರಿ ಸರಕಾರ ಇದೆಯೆಂದೇ ಅನಿಸುತ್ತಿಲ್ಲ. ಇಡೀ ರಾಜ್ಯದಲ್ಲಿಯೇ, ಪ್ರತಿದಿನವೆಂಬಂತೆ ಅತ್ಯಾಚಾರ ಪ್ರಕರಣಗಳಾಗುತ್ತಿವೆ. ಎಳೆಯ, ಕನಸುಗಣ್ಣುಗಳ ಹೆಣ್ಣುಮಕ್ಕಳು ಕಿಡಿಗೇಡಿಗಳ ಕೀಳ್ನುಡಿಗಳಿಂದ ನೊಂದು ಹೇವರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರ ಇಂತಹ ಪ್ರಕರಣಗಳ ಬಗ್ಗೆ ಕುರುಡಾಗಿದೆ ಏಕೆ? ಚಕಾರವೆತ್ತದೆ ಘನ ಮೌನ ತಾಳಿದೆ ಏಕೆ? ದೇಶವೆಂದರೆ, ಪ್ರಜೆಗಳೆಂದರೆ, ಪುರುಷರು ಮಾತ್ರರಲ್ಲ. ಮಹಿಳೆಯರು, ನಾವಿದ್ದೇವೆ. ಎಲ್ಲ ನಾಗರಿಕ ಹಕ್ಕು ಬಾಧ್ಯತೆಗಳಿಗೆ ನಾವೂ ಸಮಾನ ಪಾಲುದಾರರು. ಹೆಣ್ಣು ಮಕ್ಕಳೆಂದರೆ ಯಾರೋ ಹೇಳಿದ ಉಡುಗೆ ತೊಡುವ, ತೋರಿದ ಹೋಟೆಲುಗಳಿಗೆ ಮಾತ್ರ ಹೋಗುವ, ಅನುಮತಿಸಿದ ದಾರಿಯಲ್ಲಿ ಮಾತ್ರ ನಡೆಯುವ ಜಡವಸ್ತುಗಳಲ್ಲ. ಪುಟಿವ ಚೇತನರು. ಅಂಥವರು ಸರಕಾರದಡಿಯಲ್ಲಿ ಸುರಕ್ಷೆಯೇ ಸಿಗದೆ ಗುಳೇ ಹೋಗಬೇಕೇನು? ನಿಮ್ಮ ಸರಕಾರಕ್ಕೆ ಹೆಣ್ಣು ಮಕ್ಕಳು ಎಂದರೆ ಅತ್ಯಾಚಾರ ಸಾಮಗ್ರಿಗಳೇನು? ಹೇಳಿ, ಕರ್ನಾಟಕ ಸರಕಾರ ಸ್ತ್ರೀದ್ವೇಷಿಯೇನು? ಸರಕಾರ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸಲಾರದಷ್ಟು ದುರ್ಬಲವೇನು?

ಭೂಮಿ ನೀರು, ಎಲ್ಲವನ್ನೂ ನುಂಗಿ ಮುಗಿಸಿಯಾಯಿತು. ಕೊನೆಯದಾಗಿ ಈಗ ಹೆಣ್ಣುಮಕ್ಕಳ ಮೇಲೆ ಪುಂಡುಪೋಕರಿಗಳ ಗ್ರಧ್ರ ದೃಷ್ಟಿ ಬಿದ್ದಿದೆ. ಸರಕಾರ ಈಗಾದರೂ ಎಚ್ಚತ್ತುಕೊಳ್ಳದೇ ಹೋದಲ್ಲಿ ಇದು ವಿನಾಶಕಾಲವೆಂದೆ ಪರಿಗಣಿಸ ಬೇಕು

Saturday, July 28, 2012

‘ಸತ್ಯಮೇವ ಜಯತೆ’ಯ ಸತ್ಯಗಳೂ, ಮೌನಗಳೂ

- ವಸಂತ

ಹನ್ನೆರಡು ಕಂತುಗಳನ್ನು ಮುಗಿಸಿದ ಅಮೀರ್ ಖಾನರ ‘ಸತ್ಯಮೇವ ಜಯತೆ’ ಭಾರೀ ಸುದ್ದಿಯಲ್ಲಿದೆ. ರಾಮಾಯಣ, ಮಹಾಭಾರತದ ನಂತರ ಭಾನುವಾರ ಬೆಳಗ್ಗೆ ಒಂದುವರೆ ಗಂಟೆ ಕಾಲ ಅತ್ಯಂತ ಹೆಚ್ಚು ಜನರನ್ನು ಮುಟ್ಟಿದ ತಟ್ಟಿದ ಮೆಚ್ಚುಗೆ ಪಡೆದ ಹೆಗ್ಗಳಿಕೆ ಅದರದು ಎನ್ನಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ಇತರ ಸಾರ್ವಜನಿಕ-ಖಾಸಗಿ ಸಂಸ್ಥೆಗಳನ್ನು ಎಬ್ಬಿಸಿ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿದೆ ಎಂದೂ ಹೇಳಲಾಗಿದೆ. ಜತೆಗೆ ಹಲವು ಗಂಭೀರ ಟೀಕೆಗಳೂ ಬಂದಿವೆ. ಅಂತಹ ಟೀಕೆಗಳ ಸ್ಯಾಂಪಲ್ ಒಂದು ಇಲ್ಲಿದೆ.

ಜಾತಿ ಮತ್ತು ಅಸ್ಪೃಶ್ಯತೆಯ ಪ್ರಶ್ನೆಗಳ ಸುತ್ತ ‘ಸತ್ಯಮೇವ ಜಯತೆ’ಯ 10ನೇ ಕಂತಿನ ಕಾರ್ಯಕ್ರಮದ ಬಗ್ಗೆ ಈ ಟೀಕೆ ಬಂದಿದೆ. ‘ಔಟ್ ಲುಕ್’ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಎಸ್.ಆನಂದ ಅವರು ಬರೆದಿದ್ದಾರೆ. ವಿವರಗಳಿಗೆ ‘ಔಟ್‌ಲುಕ್‌’ ನ ಈ ಕೊಂಡಿ ನೋಡಿ. (http://outlookindia.com/article.aspx?281646#.UAFhZHQYgiA.facebook )

ಅದಕ್ಕೆ ಎಸ್.ಆನಂದ ‘ಮೌನ ಏವ ಜಯತೆ’ ಎಂದು ತಲೆಬರಹ ಕೊಟ್ಟಿದ್ದಾರೆ. ಎಸ್. ಆನಂದ ‘ನವಯಾನ’ ಎಂಬ ದಲಿತ ಮತ್ತು ಜಾತಿ ಪ್ರಶ್ನೆಗೆ ಮೀಸಲಾಗಿರುವ ಪುಸ್ತಕ ಪ್ರಕಾಶನದ ಸ್ಥಾಪಕರಲ್ಲೊಬ್ಬರು. ಅವರು ಮುಖ್ಯವಾಗಿ ಆ ಕಂತಿನಲ್ಲಿ ಮಾಡಲಾದ ‘ಕಟ್’ಗಳ ಬಗ್ಗೆ (ಭಾಗವಹಿಸಿದವರಿಂದಲೇ ಸಂಗ್ರಹಿಸಲಾದ) ಮಾಹಿತಿ ಕೊಡುತ್ತಾರೆ. ಕೆಲವು ‘ಸತ್ಯ’ಗಳನ್ನು ಪ್ರಶ್ನಿಸುತ್ತಾರೆ. ಕೆಲವು ‘ಸತ್ಯದ ಬಗ್ಗೆ ಮೌನ’ಗಳನ್ನು ಗುರುತಿಸುತ್ತಾರೆ. ಅಂತಹ ಕೆಲವು ‘ಸತ್ಯ’ಗಳು, ‘ಕಟ್’ಗಳು ಮತ್ತು ಮೌನಗಳ ಸಾರಾಂಶ :

 • ಐಎಎಸ್ ಸೇರಿದ ಮೊದಲ ದಲಿತ ಎಂದು ಹೆಸರಾದ ಬಲವಂತ್ ಸಿಂಗ್ ಅವರ ಸಂದರ್ಶನದಲ್ಲಿ, ತಾನು ಸ್ವತಂತ್ರ ಭಾರತದಲ್ಲಿ ಐಎಎಸ್ ಹುದ್ದೆಯಿಂದ ತಹಶಿಲ್ದಾರನಾಗಿ ಹಿಂಬಡ್ತಿ ಹೊಂದಿದ ಏಕಮಾತ್ರ ವ್ಯಕ್ತಿ ಎಂದು ಹೇಳಿದ್ದು ಕಟ್
 • ‘ಒಣ ಪಾಯಿಖಾನೆ’ ಮತ್ತು ಭಂಗಿಗಳು ಅದನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ನಿಷೇಧ ಮಾಡುವ ಕಾನೂನು ಸುಪ್ರೀಂ ಕೋರ್ಟು ಮತ್ತು ಪಾರ್ಲಿಮೆಂಟಿನಲ್ಲಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಸಫಾಯಿ ಕರ್ಮಚಾರಿ ಆಂದೋಲನ್ ನಡೆಸುತ್ತಿರುವ ಬೆಜವಾಡ ವಿಲ್ಸನ್ ಅವರ ತೀವ್ರ ಟೀಕೆ ಕಟ್
 • ‘ಒಣ ಪಾಯಿಖಾನೆ’ ಮತ್ತು ಭಂಗಿ ಪದ್ಧತಿ ವಿರುದ್ಧ ಗಾಂಧೀಜಿಯವರ ‘ಕಲ್ಪಿತ’ (ಗಾಂಧೀಜಿ ಎಲ್ಲರೂ ಪಾಯಿಖಾನೆ ಶುದ್ಧ ಮಾಡಬೇಕು ಎಂದು ಹೇಳಿದರೇ ವಿನಃ ‘ಒಣ ಪಾಯಿಖಾನೆ’ ಮತ್ತು ಭಂಗಿ ವ್ಯವಸ್ಥೆ ನಿಷೇಧಕ್ಕೆ ಹೋರಾಡಲಿಲ್ಲ) ಹೋರಾಟದ ಬಗ್ಗೆ ಮಾಜಿ ನ್ಯಾಯಾಧೀಶ ಧರ್ಮಾಧಿಕಾರಿ ಮತ್ತು ಅಮೀರ್ ಖಾನ್ ಆಶ್ಚರ್ಯಕಾರಿ ಹೇಳಿಕೆಗಳು
 • ಭಂಗಿ ಪದ್ಧತಿ ವಿರುದ್ಧ ನಿಜವಾಗಿಯೂ ತೀವ್ರ ದನಿ ಎತ್ತಿದ ಗಾಂಧೀಜಿಯವರ ಜತೆ ಆ ಬಗ್ಗೆ ವಾಗ್ವಾದ ಮಾಡಿದ ಅಂಬೇಡ್ಕರ್ ಬಗ್ಗೆ ಮೌನ
 • ದಲಿತರ ಮೇಲೆ ದೌರ್ಜನ್ಯಗಳ ಬೆಚ್ಚಿ ಬೀಳಿಸುವ (ಇತರ ಕಂತುಗಳಲ್ಲಿ ಸಾಮಾನ್ಯವಾಗಿ ಇದ್ದ) ಮತ್ತು ಮೀಸಲಾತಿಯ ಜಾರಿಯ ವೈಫಲ್ಯಗಳ ಅಂಕೆ ಸಂಖ್ಯೆಗಳ ಬಗ್ಗೆ ದಿವ್ಯ ಮೌನ
 • ಇರಲೇಬೇಕಾಗಿದ್ದ ಆದರೆ ಇಲ್ಲದ, ಕುಖ್ಯಾತ ಖೈರ್ಲಾಂಜಿ ದೌರ್ಜನ್ಯದ ಬಗ್ಗೆ ಪ್ರಸ್ತಾಪ ಮತ್ತು ಅದರಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿ ಭೈಯ್ಯಾಲಾಲ್ ಭೂತಮಾಂಗೆ ಸಂದರ್ಶನ
 • ಅಂಬೇಡ್ಕರ್ ಮತ್ತು ಮೀಸಲಾತಿ ಬಗ್ಗೆ ಬೆಜವಾಡ ವಿಲ್ಸನ್ ಹೇಳಿಕೆಗಳ ಕಟ್
 • ಅಂಬೇಡ್ಕರ್ ಮತ್ತು ಮೀಸಲಾತಿ ಬಗ್ಗೆ ಇಡೀ ಕಾರ್ಯಕ್ರಮದಲ್ಲಿ ದಿವ್ಯ ಮೌನ
 • ದಲಿತರ ಮೇಲೆ ದೌರ್ಜನ್ಯಗಳ ಬೆಚ್ಚಿ ಬೀಳಿಸುವ (ಇತರ ಕಂತುಗಳಲ್ಲಿ ಸಾಮಾನ್ಯವಾಗಿ ಇದ್ದ) ಅಂಕೆ ಸಂಖ್ಯೆಗಳ ಬಗ್ಗೆ ದಿವ್ಯ ಮೌನ
 • ಇರಲೇಬೇಕಾಗಿದ್ದ ಖೈರ್ಲಾಂಜಿ ದೌರ್ಜನ್ಯದಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿ ಭೈಯ್ಯಾಲಾಲ್ ಭೂತಮಾಂಗೆ ಸಂದರ್ಶನ
 • ಅಗತ್ಯವಿಲ್ಲದ ಗಾಂಧೀವಾದಿ ಮಾಜಿ ನ್ಯಾಯಾಧೀಶ ಧರ್ಮಾಧಿಕಾರಿಯ ಸಂದರ್ಶನ
 • ದಲಿತ ಛೇಂಬರ್ ಆಫ್ ಕಾಮರ್ಸ್ ಮಿಲಿಂದ್ ಕಾಂಬ್ಳೆ ಮತ್ತು ಅಶೋಕ ಖಡೆ ಜತೆ ಸಂದರ್ಶನ ಇಡಿಯಾಗಿ ಕಟ್
 • ಅಸ್ಪೃಶ್ಯತೆ ಮತ್ತು ಜಾತಿ ಭೇದ ಮುಂದುವರೆಯುತ್ತಿರುವ ಬಗೆಗಿನ 3 ಗಂಟೆಗಳ ಸ್ಟಾಲಿನ್ ಪದ್ಮ ಅವರ ಡಾಕ್ಯುಮೆಂಟರಿ ‘ ‘ಇಂಡಿಯಾ ಅನ್ಟಚ್ಡ್’ ನಲ್ಲಿ ಇರುವ ದಲಿತರ ಮೇಲಿನ ದೌರ್ಜನ್ಯ ಮತ್ತು ಮೀಸಲಾತಿ ಬಗೆಗಿನ ಪರಿಣಾಮಕಾರಿ ಕ್ಲಿಪ್ ಆಯ್ಕೆ ಮಾಡದೆ ಇರುವುದು
 • ಹರ್ಯಾಣಾದ ಹಳ್ಳಿಯಿಂದ ದಿಲ್ಲಿಯ ಜೆ.ಎನ್.ಯು.ವರೆಗೆ ಎಲ್ಲಾ ಕಡೆ ಅಸ್ಪೃಶ್ಯತೆ ಅನುಭವಿಸಿದ ಕೌಶಲ್ ಪನ್ವರ್ ಸಂದರ್ಶನ ಒಂಟಿಯಾಗಿ ನಡೆಸಿದ್ದರೂ, ಸ್ಟುಡಿಯೊ ಪ್ರೇಕ್ಷಕರ ‘ಪ್ರತಿಕ್ರಿಯೆ’ ಕೃತಕವಾಗಿ ತೋರಿಸಿದ್ದು
 • ಕಾರ್ಯಕ್ರಮದ ಸಂದರ್ಶನಗಳಲ್ಲಿ ಭಾಗವಹಿಸಿದ ಎಲ್ಲರಿಂದ ತಾವು ಮಾಡಿದ ಹೇಳಿಕೆಗಳ ಬಗ್ಗೆ ಯಾವ ಮಾಧ್ಯಮಗಳಲ್ಲೂ ಬಹಿರಂಗ ಪಡಿಸುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡದ್ದು.

ಸತ್ಯಾಸತ್ಯತೆಗಳು ಮತ್ತು ಮೌನಗಳು

ಎಸ್. ಆನಂದ ಅವರು ಜಾತಿ ಮತ್ತು ಅಸ್ಪೃಶ್ಯತೆಯ ಪ್ರಶ್ನೆಗಳ ಸುತ್ತ ‘ಸತ್ಯಮೇವ ಜಯತೆ’ಯ ಕಂತಿನ ಬಗ್ಗೆ ನಿರ್ದಿಷ್ಟವಾಗಿ ವ್ಯಕ್ತಪಡಿಸಿದ ಟೀಕೆಗಳು ಬಹುತೇಕ ಎಲ್ಲಾ ಕಂತುಗಳ ಬಗ್ಗೆ ಸಹ ನಿಜ. ನಮ್ಮ ದೇಶವನ್ನು ಸುಡುತ್ತಿರುವ ಪ್ರಮುಖ ಸಮಸ್ಯೆಗಳನ್ನು ಎತ್ತಿಕೊಂಡು ಅದರ ಭೀಕರ ಸ್ವರೂಪ, ಅದರ ಮೂಲ ಕಾರಣಗಳು ಮತ್ತು ಅವುಗಳಿಗೆ ತಕ್ಷಣದ ಮತ್ತುದೂರಗಾಮಿ ಪರಿಹಾರಗಳ ಬಗ್ಗೆ ಹೇಳುವಾಗ ಸಮಗ್ರತೆ ಮತ್ತು ಆಳದ ಕೊರತೆ ಹಾಗೂ ತೀವ್ರ ಮಿತಿಗಳು ಕಂಡು ಬಂದಿವೆ. ಸಮಸ್ಯೆಯ ಸ್ವರೂಪದ ಭೀಕರತೆ ಅಥವಾ ಹಲವು ಮುಖಗಳನ್ನು ಪ್ರಸ್ತುತ ಪಡಿಸುವಾಗ ‘ಮಧ್ಯಮ ವರ್ಗ’ದ ಪ್ರೇಕ್ಷಕರು, ಜಾಹೀರಾತುದಾರು ಕಂಪನಿಗಳು ಮತ್ತು ನಮ್ಮ ಆಳುವ ವ್ಯವಸ್ಥೆ ಸಹಿಸಿಕೊಳ್ಳಲು ಅಸಾಧ್ಯವಾದ ಅಥವಾ ಅವರಿಗೆ ಇಷ್ಟವಾಗದೆ ಹೋಗಬಹುದಾದ ಅಂಶಗಳನ್ನು ಸ್ವಯಂ-ಸೆನ್ಸಾರ್ ಮಾಡಿದ್ದು ಅಥವಾ ಮೌನ ತಾಳಿದ್ದು ಕಂಡು ಬರುತ್ತದೆ. ಮೇಲೆ ಹೇಳಿದ ಜಾತಿ ಮತ್ತು ಅಸ್ಪೃಶ್ಯತೆಯ ಕಂತು ಇದಕ್ಕೆ ಒಳ್ಳೆಯ ಉದಾಹರಣೆ. ಹೆಣ್ಣು ಭ್ರೂಣ ಹತ್ಯೆ ಸಮಸ್ಯೆಯ ಬಗ್ಗೆ ಮಾತಮಾಡುವಾಗ ಯಾವುದೇ ಕಾರಣಕ್ಕಾಗಿ ಗರ್ಭಪಾತವೇ ತಪ್ಪು ಎಂಬ ಧ್ವನಿ ಹೊರಟಂತಹ ಹಲವು ಸರಳೀಕರಣಗಳೂ ಇವೆ.

ಸಮಸ್ಯೆಯ ಮೂಲ ಕಾರಣ ಹುಡುಕುವಾಗ ಸಮಸ್ಯೆಗೆ ಕಾರಣವಾಗಿರುವ ನಮ್ಮ ಆಳುವ ವ್ಯವಸ್ಥೆಯನ್ನೇ ಅಥವಾ ಅದರ ಪ್ರಮುಖ ನೀತಿಗಳ ವರೆಗೆ ಹೋಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಆರೋಗ್ಯ ಮತ್ತು ಔಷಧಿಗಳ ಕಂತಿನಲ್ಲಿ ಔಷಧಿ ಬೆಲೆ ಏರಿಕೆಗೆ ಕಾರಣವಾದ 1970 ಪೇಟೆಂಟ್ ಕಾನೂನಿನಲ್ಲಿ ಬದಲಾವಣೆಯಾಗಲಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕಳಚಿ ಹಾಕಿ ವ್ಯಾಪಕ ಖಾಸಗೀಕರಣ ಮತ್ತು ವಾಣಿಜ್ಯೀಕರಣಕ್ಕೆ ಕಾರಣವಾದ ನೀತಿಗಳ ಬಗೆಗಾಗಲಿ ಚಕಾರವೆತ್ತಲಿಲ್ಲ. ಅದೇ ರೀತಿ ಪರಿಹಾರ ಹೇಳುವಾಗ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಶಿಪ್) ವ್ಯವಸ್ಥೆಗೆ ಒತ್ತು ಕೊಡಲಾಯಿತು. ಆಂಧ್ರಪ್ರದೇಶದ ಈ ಥರದ ಪಿಪಿಪಿ ಕಾರ್ಯಕ್ರಮ ಒಂದರ ದುರ್ಬಳಕೆ ಮಾಡಿಯೇ, ಅದೇ ಕಂತಿನಲ್ಲೇ ತೋರಿಸಲಾದ ಅನಗತ್ಯವಾಗಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರನ್ನು ಗರ್ಭಕೋಶ ಕತ್ತರಿಸುವ ಆಪರೇಶನಿಗೆ ಗುರಿ ಮಾಡಿದ್ದು ಎಂಬ ಸತ್ಯವನ್ನು ಮರೆ ಮಾಚಲಾಯಿತು. ಹೆಚ್ಚಿನ ಈ ಗಂಭೀರ ಸಮಸ್ಯೆಗಳಿಗೆ ಕಾರಣವಾದ ಪಾಳೆಯಗಾರಿ, ನವ-ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಪ್ರಸ್ತಾಪ ಮಾಡುವುದಂತೂ ದೂರವೇ ಉಳಿಯಿತು.

ಸಮಸ್ಯೆಯ ಪರಿಹಾರ ಕೊಡುವಾಗಂತೂ ಸಮಗ್ರತೆ ಮತ್ತು ಆಳದ ಕೊರತೆ ತೀವ್ರವಾಗಿ ಕಂಡು ಬಂತು. ನೀರಿನ ಸಮಸ್ಯೆಗೆ ‘ಮಳೆ ನೀರಿನ ಕೊಯ್ಲು’ ಒಂದೇ ಪರಿಹಾರ ಕೊಡಬಲ್ಲುದು. ಚೆನ್ನೈನಲ್ಲಿ ‘ಮಳೆ ನೀರಿನ ಕೊಯ್ಲು’ ಜಾರಿಯಿಂದ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂಬಂತೆ ಬಿಂಬಿಸಲಾಯಿತು ನೀರಾವರಿ, ಕುಡಿಯುವ ನೀರು ಸರಬರಾಜು ವ್ಯವಸ್ಥೆ ಯೋಜನೆಗಳ ಅಗತ್ಯವೇ ಇಲ್ಲವೆಂಬಂತೆ ತೋರಿಸಲಾಯಿತು.

ಸಮಸ್ಯೆಯ ತೀವ್ರತೆ ತೋರಿಸಿದ ಮೇಲೆ ಕೆಲವಾದರೂ ‘ಆಶಾಕಿರಣ’ಗಳನ್ನು ತೋರಿಸದಿದ್ದರೆ ಇನ್ನಷ್ಟು ಸಿನಿಕತೆಗೆ ಕಾರಣವಾಗುತ್ತದೆ ಎಂಬ ಆತಂಕದಿಂದಲೋ ಎಂಬಂತೆ, ಕೆಲವು ಸಣ್ಣ ಸ್ಥಳೀಯ ಪ್ರಯತ್ನಗಳನ್ನು ಹಿಗ್ಗಿಸಿ ಹೇಳಲಾಯಿತು. ಅಂತಹ ಪ್ರಯತ್ನಗಳನ್ನು ದೇಶವ್ಯಾಪಿಯಾಗಿಸಲು ಇರುವ ಸ್ಥಾಪಿತ ವ್ಯವಸ್ಥೆಯ ತೊಡಕುಗಳ ಮತ್ತು ಪ್ರತಿರೋಧಗಳ ಬಗ್ಗೆ ಮೌನ ವಹಿಸಲಾಯಿತು. ನೀತಿಯ ಮೂಲಭೂತ ಬದಲಾವಣೆಯ ಅಗತ್ಯಗಳಿಗೆ (ವಿಕಲಚೇತನರ ಬಗ್ಗೆ ಕಾನೂನು ಇತ್ಯಾದಿ ಕೆಲವೇ ಅಪವಾದಗಳನ್ನು ಬಿಟ್ಟರೆ) ಒತ್ತು ಕೊಡುವ ಪ್ರಶ್ನೆಯೇ ಇಲ್ಲ.

ಸಮಸ್ಯೆಯ ಸ್ವರೂಪ, ಮೂಲ ಕಾರಣದ ಅಧ್ಯಯನ ಹುಡುಕುವಿಕೆ, ಪರಿಹಾರ – ಇವೆಲ್ಲಾ ಹೆಚ್ಚಾಗಿ ಒಂದು ಅಥವಾ ಎರಡು ಈಗಾಗಲೇ ವಿದೇಶಿ-ಸ್ವದೇಶಿ ನಿಧಿ ಪಡೆಯುತ್ತಿರುವ (ಬಹುಶಃ ಕೆಲವು ಪಾರ್ಟ್‌ನರ್) ಎನ್.ಜಿ.ಒ.ಗಳತ್ತವೇ ಒಯ್ಯುತ್ತಿತ್ತು. ಇಂತಹುದೇ ಕೆಲಸದಲ್ಲಿ ಇನ್ನೂ ವ್ಯಾಪಕವಾಗಿ ಜನಜಾಗೃತಿ, ಕಾರ್ಯಾಚರಣೆಯಲ್ಲಿ ತೊಡಗಿರುವ ಸಾಮೂಹಿಕ ಸಂಘಟನೆಗಳ ಪ್ರಸ್ತಾಪ ಸಹ ಬರದ್ದು ಆಕಸ್ಮಿಕವೇನಲ್ಲ. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ತೀವ್ರ ಪ್ರಚಾರ-ಪ್ರಕ್ಷೋಭೆಯಲ್ಲಿ ತೊಡಗಿರುವ ಜನವಾದಿ ಮಹಿಳಾ ಸಮಿತಿಯ ಪ್ರಸ್ತಾಪ ಸಹ ಬರಲಿಲ್ಲ. ಅದೇ ರೀತಿ ಔಷಧಿ ಬಗ್ಗೆ ಕಂತಿನಲ್ಲಿ ‘ಎಲ್ಲರಿಗೂ ಆರೋಗ್ಯ’ಕ್ಕೆ ವ್ಯಾಪಕವಾಗಿ ಕೆಲಸ ಮಾಡುತ್ತಿರುವ ‘ಜನ ಸ್ವಾಸ್ಥ್ಯ ಅಭಿಯಾನ್’ ಸದಸ್ಯ ಸಂಘಟನೆಗಳ (ಉದಾ: ಡ್ರಗ್ ಆಕ್ಶನ್ ನೆಟ್‌ವರ್ಕ್, ಭಾರತ ಜನ ವಿಜ್ಞಾನ ಸಮಿತಿ) ಬಗೆಗೂ ಸುದ್ದಿಯಿರಲಿಲ್ಲ.

ನಮ್ಮ ಸುಡುತ್ತಿರುವ ಸಮಸ್ಯೆಗಳ ಬಗ್ಗೆ ಟಿವಿ ಮಾಧ್ಯಮದಲ್ಲಿ ಅತ್ಯಂತ ಆಸಕ್ತಿಕಾರಕವಾಗಿ ಪ್ರಸ್ತುತ ಪಡಿಸಿದ್ದು, ಗಂಭೀರ ಕಾರ್ಯಕ್ರಮಗಳಿಗೂ ಟಿ.ಆರ್.ಪಿ. ಇದೆ ಎಂದು ತೋರಿಸಿದ್ದು, ಅದು ವ್ಯಾಪಕವಾಗಿ ತಲುಪುವಂತೆ ತಟ್ಟುವಂತೆ ತೀವ್ರ ಮಾರ್ಕೆಟಿಂಗ್ ಮಾಡಿದ್ದು – ‘ಸತ್ಯಮೇವ ಜಯತೆ’ಯ ಸಕಾರಾತ್ಮಕ ಅಂಶ ಎಂಬುದುಕ್ಕೆ ಯಾವುದೇ ಸಂಶಯವಿಲ್ಲ. ಹಲವು ಕಡೆ ಅಧಿಕಾರಿಗಳು, ಸರ್ಕಾರಗಳು ಕಾರ್ಯಪ್ರವೃತ್ತರಾಗುವಂತೆ ಮಾಡಿದ್ದು ಇದೆ. ‘ಸತ್ಯಮೇವ ಜಯತೆ’ಯ ವೆಬ್ ಸೈಟಿನ ಅಂಕಿ ಅಂಶಗಳ ಪ್ರಕಾರ 1.3 ಕೊಟಿ ಪ್ರತಿಕ್ರಿಯೆ, 3.6 ಕೋಟಿ ವಂತಿಗೆ ಸಂಗ್ರಹವಾಗಿದೆ. 84 ಲಕ್ಷ ಜನ ಸೈಟಿನ ಸದಸ್ಯರಾಗಿ, 11 ಕೋಟಿ ಸಂಪರ್ಕಗಳನ್ನು ಮಾಡಿದ್ದಾರೆ. ಇದರಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ, ಅದು ಹಿಂದೆಂದಿಗಿಂತಲೂ ವ್ಯಾಪಕವಾಗಿ ತಲುಪಿದೆ. ಸಮಾಜದ ಒಂದು ಹೊಸ ವಿಭಾಗದ ಅದರಲ್ಲೂ ಯುವಜನರಲ್ಲಿ ಸಿನಿಕತೆ ಸಾಮಾಜಿಕ ನಿರ್ಲಕ್ಷ ಕಡಿಮೆ ಮಾಡಿ, ಸಾಮಾಜಿಕ ಪ್ರಜ್ಞೆ ಹೆಚ್ಚಿಸಿದೆ ಎಂಬುದು ನಿಜ.

ಆದರೆ ‘ಸತ್ಯಮೇವ ಜಯತೆ’ಯ ಒಟ್ಟಾರೆ ಧ್ವನಿ ಬಹಳ ಜನ ಅಂದುಕೊಂಡಂತೆ ಜನಜಾಗೃತಿ ಮೂಡಿಸುವ, ವ್ಯವಸ್ಥೆ ಪ್ರಶ್ನಿಸುವ, ಬದಲಾವಣೆಗೆ ಕಾರ್ಯ ಪ್ರವೃತ್ತರಾಗಲು ಸಜ್ಜು ಮಾಡುವಂತಹುದಲ್ಲ. ಸಮಸ್ಯೆಯ ಬಗ್ಗೆ ಜನ ಭಾವನಾತ್ಮಕವಾಗಿ ಸ್ಪಂದಿಸುವಂತೆ (ಅಳುವಂತೆ ಮರುಕ ಪಡುವಂತೆ) ಮಾಡಿ, ಅದಕ್ಕೆ ಭಾಗಶಃ ಅಥವಾ ಹುಸಿ ಪರಿಹಾರ ಕೊಡುವಂತಹುದು. ವ್ಯವಸ್ಥೆ ಪ್ರಶ್ನೆ ಮಾಡದೆ ಅದರ ಒಳಗೆ ತೇಪೆ ಹಾಕಿದರೆ ಸಾಕು ಎನ್ನುವಂತಹುದು. ಹೆಚ್ಚೆಂದರೆ ಹಿಂದಿನಿಂದಲೂ ಬಂದ ‘ದಾನ-ಧರ್ಮ ಮಾಡಿ. ಪಾಪಪ್ರಜ್ಞೆ ಕಳೆದುಕೊಳ್ಳಿ’ ಎಂದು ಹೇಳುವಂತಹುದು. ‘ಜನಕಲ್ಯಾಣ ಪಾರ್ಟನರ್’ ರಿಲಾಯನ್ಸ್ ಫೌಂಡೇಶನು ತನ್ನ ಲಾಭಕೋರತನ ಮುಚ್ಚಿಕೊಳ್ಳಲು ಸಹಾಯ ಮಾಡುವಂತಹುದು. ಮಾತ್ರವಲ್ಲ ಏರ್‌ಟೆಲ್ ಮುಂತಾದ ಹಲವು ಕಂಪನಿಗಳಿಗೆ -ಅಮೀರ್ ಖಾನ್ ಕಂಪನಿ ಸೇರಿದಂತೆ-ಇನ್ನಷ್ಟು ಹಣ ಪ್ರತಿಷ್ಟೆ ಬ್ರಾಂಡ್ ಮೌಲ್ಯ ಗಳಿಸಿಕೊಡುವಂತಹುದು. ಎನ್.ಜಿ.ಒ.ಗಳೇ ಎಲ್ಲಕ್ಕೂ ಪರಿಹಾರ ಒದಗಿಸಬಲ್ಲವು ಎಂದು ನಂಬಿಸುವಂತಹುದು.

ಮೌನವಾದ ಮಳೆಗೆ... • ಮೌನವಾದ ಮಳೆಗೆ...

  • ರೂಪೇಶ ಇಳಕಲ್‌

   ಝೆನ್‌ ಕಥೆಯೊಂದಿದೆ. ಸರೋವರ ಸೋಂಕಿನಲ್ಲಿಯೇ ಮನೆ ಮಾಡಿದ ಬಿಕ್ಕುವಿಗೆ ರಾತ್ರಿ ನಿದ್ದೆ ಬಾರದಿರಲು ಕಾರಣ ಕಪ್ಪೆ ವಟರ್‌ ವಟರ್‌ ಧ್ವನಿ. ಇರುಳಿನ ನೀರವವನ್ನು ಸೀಳಿ ಬರುವ ಯಾರಿಗಾದರೂ ಅದನ್ನು ಸಹಿಸುವುದು ಕಷ್ಟವೇ. ಬಿಕ್ಕು ಮನೆಯ ಹೊರಗೆ ಬಂದು ಕಪ್ಪೆಗೆ ಬೈಯತೊಡಗಿದ. ಆದರೆ, ಕಪ್ಪೆ ತನ್ನ ಕೆಲಸ ಮಾಡುತ್ತಲೇ ಇತ್ತು. "ವಟರ್‌ ವಟರ್‌'. ಕೊನೆಗೆ ಬಿಕ್ಕುವಿಗೆ ಆ ದನಿಯೊಂದಿಗೆ ನಿದ್ರಿಸಲು ಅಭ್ಯಾಸವಾಯಿತು. ಕೆಲವು ದಿನ ಕಳೆಯಿತು. ಮಳೆ ಕಡಿಮೆಯಾಯಿತು. ಕಪ್ಪೆಯ "ವಟರ್‌ ವಟರ್‌' ಕೂಡ ನಿಂತಿತು. ಬಿಕ್ಕುವಿಗೆ ನಿದ್ದೆ ಬರಲಿಲ್ಲ. ಮನೆಯ ಹೊರಗೆ ಬಂದು ಕಪ್ಪೆಯ ಕೂಗಿಗಾಗಿ ಪರಿತಪಿಸತೊಡಗಿದ.

   ಮಳೆಯ "ಧೋ' ಎಂಬ ಸದ್ದನ್ನು ಆಲಿಸುತ್ತ ಬದುಕಿದ ನಮಗೆ ಈಗ ಹೇಗೆ ನಿದ್ದೆ ಬಂದೀತು! ಎರಡೂ ಕಿವಿಗೆ ಕೈಯಿಟ್ಟುಕೊಳ್ಳಲು ಕಾರಣವಾದ ಗುಡುಗಿನ ಸುಳಿವಿಲ್ಲ. ಬೆಚ್ಚಿಬೀಳಿಸುವ ಗಾಳಿಯಿಲ್ಲ. ಮಳೆ ಹನಿ ಬೀಳುವ ಟಪ ಟಪ ಸದ್ದಿಲ್ಲ. ಎಲ್ಲಿ ಹೋಯಿತು, ಮಳೆ ! ಆ್ಯನನ್‌ ಎಂಬ ಇಂಗ್ಲಿಷ್‌ ಕವಿಯೊಬ್ಬ ಮಳೆಯು ಅಜ್ಞಾತವಾಗಿ ಭೂಮಿಯ ಮೇಲೆಲ್ಲ ಸುರಿಯುತ್ತದೆ, ತನ್ನ ಮೇಲೆ ಮಾತ್ರ ದಯತೋರಿಲ್ಲ ಎಂದು ಕವಿತೆಯೊಂದರಲ್ಲಿ ಹೇಳಿದ್ದಾನೆ. ಮಳೆಯೆನ್ನುವುದು ಬದುಕಿನಲ್ಲಿ ಭರವಸೆಯಿದ್ದಂತೆ ಅಲ್ಲವೆ?

   ಒಂದು ಹಿಂದಿ ಗಜಲ್‌ನಲ್ಲಿ ; ಶೀರ್ಷಿಕೆ ನೆನಪಾಗುತ್ತಿಲ್ಲ, ತರುಣಿಯೊಬ್ಬಳು ಮಳೆಗಾಗಿ ಕಾಯುತ್ತಿದ್ದಾಳೆ, ಇನಿಯನನ್ನು ಕಾಯುವಂತೆ. ಅದೂ ಮಳೆ ಬರಬೇಕಾದ ಸಮಯದಲ್ಲಿ ಬಾರದಿದ್ದರೆ ಎಂಥ ಆತಂಕವಾಗಬೇಡ. ಹೊರಗೆ ತರಗೆಲೆ ಅಲ್ಲಾಡಿದ ಸದ್ದಾದರೂ ನೀರ ಹನಿ ಬೀಳುವ ಸದ್ದೆಂದು ಬಾಗಿಲಿಗೆ ಓಡಿಬರುತ್ತಾಳೆ. ಬಂದರೆ, "ಧೋ' ಎಂದು ಬಂದು ಬಿಡುವ, ಇಲ್ಲದಿದ್ದರೆ ದಿನಗಟ್ಟಲೆ ಕಣ್ಮರೆಯಾಗಿ ಬಿಡುವ ಮಳೆಯನ್ನು ನಂಬುವುದೇ ಕಷ್ಟ ಎನ್ನುವ ಸ್ಥಿತಿ ಆಕೆಗೆ. ಏನು ಮಾಡುವುದು, ಕೆಲವೊಮ್ಮೆ ಮಳೆ ಕಾಯಿಸುತ್ತದೆ, ಪ್ರಿಯಕರರಂತೆ.

   ಕಾಯುವುದು ಎಲ್ಲರಿಗೂ ರೋಚಕವಾದ ಅನುಭವವೇ. ಆದರೆ, ಮನಸ್ಸು ಕಾದರೆ ಸುಖವಿದೆ. ನೆಲ ಕಾದರೆ ಕಷ್ಟವಿದೆ. ಈ ದಿನಗಳಲ್ಲಿ ತೇವವಿರಬೇಕಾದ ನೆಲ, ನೀರು ಕಾಣದೆ ಒಡೆದುಹೋಗುತ್ತಿರುವಾಗ ಉತ್ತರ ಕರ್ನಾಟಕದ ಮಂದಿ ಆಗಸ ನೋಡಿ ಕಾತರಿಸುತ್ತಿದ್ದಾರೆ. ಮಳೆ ಅವರಿಗೆ ಬಂಧುವಿನಂತೆ. ರಾಜ್ಯವೇನು, ಇಡೀ ದೇಶದÇÉೇ ಈ ಸಲ ಮಳೆಯ ಅಭಾವ ಕಾಣುತ್ತಿದೆ. ಉತ್ತರಭಾರತದ ಆಹಾರ ಕಣಜ ಬರಿದಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಪಂಜಾಬಿನಲ್ಲಿ ಶೇ. 60ರಷ್ಟು ಮಳೆಯ ಅಭಾವವಾದಂತೆ, ಉತ್ತರಪ್ರದೇಶ, ಬಿಹಾರ, ಹರ್ಯಾಣದ ಪರಿಸ್ಥಿತಿಯೂ ಭಿನ್ನವಾಗಿಲ್ಲ.

   ಪುರಾಣಕಾಲದಲ್ಲಿ ಸೂರ್ಯವಂಶದ ರೋಮಪಾದನ ರಾಜ್ಯದಲ್ಲೊಮ್ಮೆ ಮಳೆ ಕಾಣದಾಯಿತಂತೆ. ಋಷ್ಯಶೃಂಗನೆಂಬ ಮುನಿ ಹೋದಲ್ಲೆಲ್ಲ ಮಳೆ ಬರುತ್ತದ್ದೆಂದು ಪ್ರತೀತಿ. ಹಾಗಾಗಿ, ರೋಮಪಾದನು ಋಷ್ಯಶೃಂಗನಲ್ಲಿ ತನ್ನ ರಾಜ್ಯಕ್ಕೆ ಬರುವಂತೆ ಆಹ್ವಾನಿಸುತ್ತಾನೆ. ಅವನ ಸೇವೆ ಮಾಡಲು ತನ್ನ ಮಗಳಾದ ಶಾಂತಾಳನ್ನೇ ನೇಮಿಸುತ್ತಾನೆ. ಋಷ್ಯಶೃಂಗ ಅಯೋಧ್ಯೆಗೆ ಬಂದೂ ಆಯಿತು, ಮಳೆ ಬಂದು ಆಯಿತು. ಆದರೆ, ಋಷ್ಯಶೃಂಗರನ್ನು ಕರೆಸುವ ಜಾಗೃತ ರಾಜಕಾರಣಿಗಳು ಈಗ ಎಲ್ಲಿದ್ದಾರೆ? ಎಲ್ಲರಿಗೂ ಅವರವರ ಕುರ್ಚಿಯ ಚಿಂತೆಯೇ, ಪ್ರಜೆಗಳ ಬರಯಾತನೆಯ ಯೋಚನೆ ಬರುವುದಾದರೂ ಹೇಗೆ?

   ಇಂದು ಬಾರದ ಮಳೆ, ನಾಳೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಯಾವಾಗ ಏನೇನು ಆಗಬೇಕೋ ಅದು ಆಗದಿದ್ದರೆ...

ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಹೋರಾಟದ ಬದುಕುl.


- ಪಾರ್ವತಿ ಮೆನನ್ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಹೋರಾಟದ ಬದುಕು


ತನ್ನ 92ರ ಹರೆಯದಲ್ಲಿ ಪ್ರತಿ ಮುಂಜಾನೆ ರೋಗಿಗಳನ್ನು ಕಾಣುತ್ತಿದ್ದ ವೈದ್ಯೆ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ‘‘ಹೋರಾಟ ಮುಂದುವರಿಯಲಿದೆ’’ ಎಂದು 2006ರಲ್ಲಿ ಹೇಳಿದ್ದರು. ಅವರು ತನ್ನ ಜೀವನದ ಬಗ್ಗೆ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸುತ್ತಿದ್ದ ಬರ್ಕ್ಲಿಯ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಜರ್ನಲಿಸಂನ ಯುವ ಚಿತ್ರ ನಿರ್ಮಾಪಕಿ ಸಿಂಗೆಲಿ ಆಗ್ನೂ ಎಂಬವರ ಕ್ಯಾಮರಾದ ಮುಂದೆ ಈ ಹೇಳಿಕೆ ನೀಡಿದ್ದರು.ಈ ವಿಶಿಷ್ಟ ಭಾರತೀಯಳ ಯುವ ವೈದ್ಯ ವಿದ್ಯಾರ್ಥಿನಿಯಿಂದ ಸ್ವಾತಂತ್ರ ಹೋರಾಟಗಾರ್ತಿಯವರೆಗಿನ ಜೀವನದ ವಿವಿಧ ಮಜಲುಗಳು ಅವರ ರಾಜಕೀಯ ಪಾದುರ್ಭಾವದ ಹೊಸ ಹಂತವೊಂದನ್ನು ಪ್ರತಿನಿಧಿಸುತ್ತವೆ. ಸುಭಾಶ್ಚಂದ್ರ ಬೋಸರ ಇಂಡಿಯನ್ ನ್ಯಾಶನಲ್ ಆರ್ಮಿಯ ಝಾನ್ಸಿ ರಾಣಿ ಸರ್ವ ಮಹಿಳಾ ರೆಜಿಮೆಂಟ್‌ನ ಮುಖ್ಯಸ್ಥೆಯಾಗಿ, ಒಬ್ಬಳು ವೈದ್ಯೆಯಾಗಿ ಸ್ವಾತಂತ್ರ ದೊರೆತೊಡನೆಯೇ ಸೆಹಗಲ್ ಕಾನ್ಪುರದಲ್ಲಿ ನಿರಾಶ್ರಿತರು ಹಾಗೂ ಅತ್ಯಂತ ಬಡವರಿಗಾಗಿ ವೈದ್ಯ ವೃತ್ತಿಯನ್ನು ಮತ್ತೆ ಆರಂಭಿಸಿದ್ದರು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯೆಯಾಗಿ, ಅಖಿಲ ಭಾರತ ಪ್ರಜಾತಾಂತ್ರಿಕ ಮಹಿಳಾ ಸಂಘಟನೆಯ (ಎಐಡಿಡಬ್ಲೂ) ಕಾರ್ಯಕರ್ತೆಯಾಗಿ ಅವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ಹೋರಾಡಿದ್ದರು.

‘‘ಸ್ವಾತಂತ್ರವು ಮೂರು ರೀತಿಯಲ್ಲಿ ಬರುತ್ತದೆ’’ ಎಂದು ಲಕ್ಷ್ಮಿ ನಿಷ್ಕಪಟ ಹಾಗೂ ನೇರ ಮಾತುಗಳಿಂದ ಕ್ಯಾಮರಾದ ಮುದೆ ಹೇಳಿದ್ದರು. ‘‘ಮೊದಲಿನದು ಆಕ್ರಮಣಕಾರರಿಂದ ರಾಜಕೀಯ ವಿಮುಕ್ತಿ, ಎರಡನೆಯದು ಆರ್ಥಿಕ ವಿಮುಕ್ತಿ ಹಾಗೂ ಮೂರನೆಯದು ಸಾಮಾಜಿಕ ವಿಮುಕ್ತಿ. ಭಾರತ ಕೇವಲ ಮೊದಲನೆಯದನ್ನು ಮಾತ್ರ ಪಡೆದಿದೆ’’ ಎಂದವರು ನುಡಿದಿದ್ದರು.ಲಕ್ಷ್ಮಿ ಸೆಹಗಲ್‌ರ ಮರಣದೊಂದಿಗೆ ಈ ಮೂರು ವಿಮುಕ್ತಿಗಳಿಗಾಗಿ ದಣಿವರಿಯದ ಹೋರಾಟಗಾರ್ತಿ ಯೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ.

ತಿರುವಿನ ಬಿಂದು

ಖ್ಯಾತ ವಕೀಲ ಎಸ್. ಸ್ವಾಮಿನಾಥನ್ ಹಾಗೂ ಸಮಾಜ ಸೇವಕಿ, ಸ್ವಾತಂತ್ರ ಹೋರಾಟಗಾರ್ತಿ ಎ.ವಿ.ಅಮ್ಮುಕುಟ್ಟಿ ದಂಪತಿಯ ಮಗಳಾಗಿ 1914, ಅ.24ರಂದು ಲಕ್ಷ್ಮಿ ಸ್ವಾಮಿನಾಥನ್ ಜನಿಸಿದ್ದರು. (ಅವರ ತಾಯಿ ಸ್ವಾತಂತ್ರೋತ್ತರ ಭಾರತದ ಸಂವಿಧಾನ ಸಭೆಯ ಸದಸ್ಯೆಯಾಗಿದ್ದರು.)ತನ್ನ ಬಾಲ್ಯ ಕಾಲದಲ್ಲೇ ಕೇರಳದಲ್ಲಿ ಜಾತಿ ಪದ್ಧತಿಯ ವಿರುದ್ಧ ತಾನು ಮೊದಲ ಬಂಡಾಯ ನಡೆಸಿದ್ದುದನ್ನು ಸೆಹಗಲ್ ವಿವರಿಸಿದ್ದರು. ತನ್ನ ಅಜ್ಜಿಯ ಮನೆಯ ಸುತ್ತಲಿನ ಕಾಡುಗಳಿಂದ ಜನರು ಕರೆಯುವ ಹಾಗೂ ಕೂಗುವ ಧ್ವನಿಗಳು ಕೇಳಿಸುತ್ತಿದ್ದವು. ಅಜ್ಜಿಯ ಮಾತುಗಳಲ್ಲಿ ಈ ಜನರು ‘‘ನೆರಳು ಮೈಮೇಲೆ ಬಿದ್ದರೆ ಮೈಲಿಗೆ’’ ಮಾಡುವವರಾಗಿದ್ದರು. ಪುಟ್ಟ ಲಕ್ಷ್ಮಿ ಒಂದು ದಿನ ಬುಡಕಟ್ಟು ಹುಡುಗಿಯೊಬ್ಬಳ ಬಳಿಗೆ ಹೋಗಿ ಅವಳ ಕೈ ಹಿಡಿದು ಆಟಕ್ಕೆ ಕರೆದಳು. ಇದರಿಂದ ಲಕ್ಷ್ಮಿಯ ಅಜ್ಜಿಗೆ ಸಿಟ್ಟು ಬಂದಿತ್ತು. ಆದರೆ ಕೊನೆಗೆ ಲಕ್ಷ್ಮಿಯೇ ವಿಜಯಿಯಾಗಿದ್ದಳು.

ಮದ್ರಾಸ್‌ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಸೆಹಗಲ್ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ್ದರು. 1938ರಲ್ಲ್ಲಿ ಅವರು ಎಂಬಿಬಿಎಸ್ ಪದವಿ ಗಳಿಸಿದ್ದರು. ಮುಂದಿನ ವರ್ಷಗಳು ಲಕ್ಷ್ಮಿ ಹಾಗೂ ಅವರ ಕುಟುಂಬದವರನ್ನು ಸ್ವಾತಂತ್ರ ಹೋರಾಟದೆಡೆಗೆ ಸೆಳೆದವು. ಅವರ ತಾಯಿ ಮದ್ರಾಸ್ ಸೋಶಿಯಲೈಟ್ ಆಗಿದ್ದವರು ಕಟ್ಟಾ ಕಾಂಗ್ರೆಸ್ ಬೆಂಬಲಿಗರಾಗಿ ಪರಿವರ್ತನೆ ಹೊಂದಿದ್ದರು. ಅವರೊಂದು ದಿನ ಮಗಳ ಕೋಣೆಗೆ ಬಂದು ಆಕೆಯ ಸುಂದರ ಉಡುಪುಗಳನ್ನು ಒಯ್ದು ವಿದೇಶಿ ವಸ್ತು ದಹನದ ಅಗ್ನಿಕುಂಡಕ್ಕೆ ಎಸೆದಿದ್ದರು. ಗತ ದಿನಗಳನ್ನು ಸ್ಮರಿಸಿಕೊಂಡ ಸೆಹಗಲ್, ದಕ್ಷಿಣ ಭಾರತದಲ್ಲಿ ರಾಜಕೀಯ ಸ್ವಾತಂತ್ರದ ಹೋರಾಟದ ಜೊತೆ ಜೊತೆಯಲ್ಲಿ ಹೇಗೆ ಸಮಾಜ ಸುಧಾರಣೆಯ ಹೋರಾಟವೂ ನಡೆದಿತ್ತೆಂಬುದನ್ನು ವಿವರಿಸಿದ್ದರು.

ಸ್ವಾತಂತ್ರಕ್ಕಾಗಿ ಹೋರಾಟದೊಂದಿಗೆ ದಲಿತರ ದೇವಾಲಯ ಪ್ರವೇಶಕ್ಕಾಗಿ ಹಾಗೂ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಪಿಡುಗುಗಳ ವಿರುದ್ಧವೂ ಅಭಿಯಾನ ನಡೆದಿತ್ತು. ಹಲವು ವರ್ಷಗಳನ್ನು ಜರ್ಮನಿಯಲ್ಲಿ ಕಳೆದಿದ್ದ ತೀವ್ರವಾದಿನಿ ಸುಹಾಸಿನಿ ನಂಬಿಯಾರ್ (ಸರೋಜಿನಿ ನಾಯ್ಡು ಅವರ ಸೋದರಿ) ಸೆಹಗಲ್‌ರನ್ನು ಮೊದಲ ಬಾರಿಗೆ ಕಮ್ಯುನಿಸಂಗೆ ಪರಿಚಯಿಸಿದ್ದರು. ಎಡ್ವರ್ ಸ್ನೋರ ‘ರೆಡ್ ಸ್ಟಾರ್ ಓವರ್ ಚೀನ’ ಎಂಬ ಅವರೋದಿದ ಕಮ್ಯುನಿಸ್ಟ್ ಚಳವಳಿಯ ಕುರಿತ ಮೊದಲ ಪುಸ್ತಕವೂ ಲಕ್ಷ್ಮಿಯ ಮೇಲೆ ಅಪಾರ ಪ್ರಭಾವ ಬೀರಿತ್ತು.

ಸಿಂಗಾಪುರದಲ್ಲಿ

1940ರಲ್ಲಿ 26ರ ಹರೆಯದ ಯುವ ವೈದ್ಯೆ ಲಕ್ಷ್ಮಿ ಸಿಂಗಾಪುರಕ್ಕೆ ಹೋಗಿದ್ದರು. ಮೂರು ವರ್ಷಗಳ ಬಳಿಕ ಅವರು ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಭೇಟಿಯಾಗಿದ್ದರು. ಅವರ ನಡುವಣ ಈ ಭೇಟಿ ಸೆಹಗಲ್‌ರ ಜೀವನವನ್ನೇ ಬದಲಾಯಿಸಿತ್ತು. ಅಲ್ಲಿ ಕೆ.ಪಿ.ಕೇಶವ ಮೆನನ್, ಎಸ್.ಪಿ.ಗುಹಾ, ಎನ್.ರಾಘವನ್ ಇತ್ಯಾದಿ ಹಲವು ಮಂದಿ ರಾಷ್ಟ್ರೀಯವಾದಿ ಭಾರತೀಯರಿದ್ದರು. ಅವರು ಕ್ರಿಯಾ ಸಮಿತಿಯೊಂದನ್ನು ರಚಿಸಿದ್ದರು. ಆದಾಗ್ಯೂ, ಜಪಾನಿಯರು ಇಂಡಿಯನ್ ನ್ಯಾಶನಲ್ ಆರ್ಮಿಗೆ ದೃಢ ಬದ್ಧತೆಯನ್ನಗಾಲಿ ಚಳವಳಿಯನ್ನು ಹೇಗೆ ವಿಸ್ತರಿಸಬೇಕೆಂಬ ಸಲಹೆಯನ್ನಾಗಲಿ ನೀಡಲಿಲ್ಲ ಹಾಗೂ ಅವರು ಬರ್ಮಾಕ್ಕೆ ಹೇಗೆ ಹೋಗುವುದೆಂಬುದನ್ನಾಗಲಿ ಹೋರಾಟವನ್ನು ಹೇಗೆ ನಡೆಸಬೇಕೆಂಬುದನ್ನಾಗಲಿ ತಿಳಿಸಿರಲಿಲ್ಲ. ಜನರು ನಿಜವಾಗಿ ಹತಾಶರಾಗಿದ್ದರು. ಬೋಸರ ಆಗಮನ ಈ ಸಮಸ್ಯೆಗೆ ಪರಿಹಾರವೊದಗಿಸಿತು.

ಈ ರೀತಿ ಐಎನ್‌ಎಸ್ ಸಂಪರ್ಕಕ್ಕೆ ಬಂದ ಲಕ್ಷ್ಮಿಯ ಕಿವಿಗೆ, ಬೋಸರು ಸಂಘಟನೆಗೆ ಮಹಿಳೆಯರನ್ನೂ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆಂಬ ಸುದ್ದಿ ಬಿದ್ದಿತ್ತು. ಬೋಸರು ಸಿಂಗಾಪುರಕ್ಕೆ ಆಗಮಿಸಿದ್ದಾಗ ಅವರೊಂದಿಗೆ ಭೇಟಿಯೊಂದಕ್ಕಾಗಿ ಸೆಹಗಲ್ ವಿನಂತಿಸಿದ್ದರು. ಐದು ತಾಸುಗಳ ಮಾತುಕತೆಯ ಬಳಿಕ, ಮಹಿಳೆಯರ ರೆಜಿಮೆಂಟ್ ಒಂದನ್ನು ಸ್ಥಾಪಿಸುವುದು ಹಾಗೂ ಅದಕ್ಕೆ ಝಾನ್ಸಿ ರಾಣಿ ರೆಜಿಮೆಂಟ್ ಎಂಬ ಹೆಸರಿಡುವ ನಿರ್ಧಾರದೊಂದಿಗೆ ಅವರು ಹೊರಗೆ ಬಂದರು. ಈ ಸರ್ವ ಮಹಿಳಾ ರೆಜಿಮೆಂಟ್‌ಗೆ ಸೇರುವ ಬಗ್ಗೆ ಮಹಿಳೆಯರಿಂದ ಅದ್ಭುತ ಪ್ರತಿಕ್ರಿಯೆ ಬಂದಿತ್ತು. ಡಾ.ಲಕ್ಷ್ಮಿ ಸ್ವಾಮಿನಾಥನ್ ಕ್ಯಾಪ್ಟನ್ ಲಕ್ಷ್ಮಿಯಾದರು. ಆ ಹೆಸರು ಅವರಿಗೆ ಚಿರಸ್ಥಾಯಿಯಾಗಿದೆ.

1944ರ ಡಿಸೆಂಬರ್‌ನಲ್ಲಿ ಬರ್ಮಾಕ್ಕೆ ನಡಿಗೆ ಆರಂಭವಾಯಿತು ಹಾಗೂ 1945 ಮಾರ್ಚ್‌ನೊಳಗೆ ಹಿಂದೆ ಬರುವ ನಿರ್ಧಾರವನ್ನು ಇಂಫಾಲಕ್ಕೆ ಸೇನೆ ಪ್ರವೇಶಿಸುವ ಸ್ವಲ್ಪವೇ ಮುನ್ನ ಐಎನ್‌ಎಯ ನಾಯಕತ್ವ ಕೈಗೊಂಡಿತ್ತು. 1945ರ ಮೇಯಲ್ಲಿ ಕ್ಯಾ.ಲಕ್ಷ್ಮಿಯವರನ್ನು ಬ್ರಿಟಿಷ್ ಸೇನೆ ಬಂಧಿಸಿತ್ತು. 1946ರ ಮಾರ್ಚ್‌ವರೆಗೆ ಬರ್ಮಾದ ಕಾಡಿನಲ್ಲಿ ಗೃಹ ಬಂಧನದಲ್ಲಿರಿಸಲಾಗಿದ್ದ ಇವರನ್ನು ಭಾರತಕ್ಕೆ ಕಳುಹಿಸಲಾಗಿತ್ತು. ಆ ವೇಳೆಗೆ ಐಎನ್‌ಎಯ ಪ್ರಯೋಗಗಳು ದಿಲ್ಲಿಯ ಜನರಲ್ಲ್ಲಿ ವಸಾಹತು ಶಾಹಿಗಳ ಆಡಳಿತದ ಬಗ್ಗೆ ಸಾರ್ವತ್ರಿಕ ಆಕ್ರೋಶವನ್ನು ಮೂಡಿಸಿದ್ದವು.1947ರ ಮಾರ್ಚ್‌ನಲ್ಲಿ ಕ್ಯಾ.ಲಕ್ಷ್ಮಿ ಐಎನ್‌ಎಯಲ್ಲಿ ಪ್ರಸಿದ್ಧರಾಗಿದ್ದ ಪ್ರೇಂಕುಮಾರ್ ಸೆಹಗಲ್‌ರನ್ನು ವಿವಾಹವಾದರು. ದಂಪತಿ ಲಾಹೋರ್‌ನಿಂದ ಕಾನ್ಪುರಕ್ಕೆ ಬಂದರು. ಅಲ್ಲಿ ಲಕ್ಷ್ಮಿ ವೈದ್ಯಕೀಯ ವೃತ್ತಿಗೆ ಮತ್ತೆ ಧುಮುಕಿ ಪಾಕಿಸ್ತಾನದಿಂದ ವಲಸೆ ಬಂದಿದ್ದವರ ನಡುವೆ ಕೆಲಸ ಮಾಡುವ ಮೂಲಕ ಹಿಂದೂ ಹಾಗೂ ಮುಸ್ಲಿಮ್ ಜನಗಳೆರಡರ ವಿಶ್ವಾಸವನ್ನು ಗಳಿಸಿದ್ದರು.

1970ರ ಆರಂಭದಲ್ಲಿ ಸೆಹಗಲ್‌ರ ಪುತ್ರಿ ಸುಭಾಷಿಣಿ ಸಿಪಿಎಂಗೆ ಸೇರಿದರು. ಆಕೆ ಬಾಂಗ್ಲಾದೇಶ ನಿರಾಶ್ರಿತರ ಶಿಬಿರಗಳಿಗೆ ವೈದ್ಯರು ಹಾಗೂ ಔಷಧಿ ಪೂರೈಕೆಯ ಕುರಿತಾದ ಜ್ಯೋತಿ ಬಸು ಅವರ ಮನವಿಯೊದನ್ನು ತಾಯಿಯ ಗಮನಕ್ಕೆ ತಂದರು. ಕ್ಯಾ.ಲಕ್ಷ್ಮಿ ಬಟ್ಟೆ ಬರೆಗಳು ಹಾಗೂ ಔಷಧಿಗಳೊಂದಿಗೆ ಗಡಿ ಪ್ರದೇಶದಲ್ಲಿ ಮುಂದಿನ 5 ವಾರಗಳ ಕಾಲ ಕೆಲಸ ಮಾಡುವುದಕ್ಕಾಗಿ ಹೊರಟು ನಿಂತರು.

ಅಲ್ಲಿಂದ ಮರಳಿದ ಬಳಿಕ ಅವರು ಸಿಪಿಎಂನ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದರು. 57ರ ಹರೆಯದ ವೈದ್ಯೆಗೆ ಸಿಪಿಎಂ ಪಕ್ಷಕ್ಕೆ ಸೇರ್ಪಡೆಯೆಂದರೆ ತವರಿಗೆ ಬಂದಂತಿತ್ತು. ‘‘ನನ್ನ ಯೋಚನಾ ವಿಧಾನ ಈಗಾಗಲೇ ಕಮ್ಯುನಿಸ್ಟ್ ಆಗಿತ್ತು. ನಾನು ಯಾವಾಗಲೂ ಭಾರೀ ಹಣ, ಆಸ್ತಿ, ಸಂಪತ್ತು ಗಳಿಸುವುದಕ್ಕೆ ಮನ ಮಾಡಲಿಲ್ಲ’’ ಎಂದು ಲಕ್ಷ್ಮಿ ಹೇಳಿದ್ದರು. ಅವರು 1981ರಲ್ಲಿ ಆರಂಭವಾದ ಎಐಡಿಡಬ್ಲೂಎಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.ಲಕ್ಷ್ಮಿ ಬಳಿಕ ಈ ಸಂಘಟನೆಯ ಅನೇಕ ಚಟುವಟಿಕೆ ಹಾಗೂ ಅಭಿಯಾನಗಳ ನೇತೃತ್ವ ವಹಿಸಿದ್ದರು.

1984ರಲ್ಲಿ ಭೋಪಾಲ್ ಅಣು ದುರಂತ ಬಳಿಕ ಅವರ ನೇತೃತ್ವದಲ್ಲಿ ವೈದ್ಯರ ತಂಡವೊಂದು ನಗರಕ್ಕೆ ಹೋಗಿತ್ತು. ಕೆಲವು ವರ್ಷಗಳ ಬಳಿಕ, ‘ವಿಷಾನಿಲದಿಂದ ಗರ್ಭಿಣಿಯರ ಮೇಲಾಗುವ ದುಷ್ಪರಿಣಾಮ’ದ ಕುರಿತು ಸೆಹಗಲ್ ವರದಿಯೊಂದನ್ನು ಸಿದ್ಧಪಡಿಸಿದ್ದರು. 1984ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಭುಗಿಲೆದ್ದ ಸಿಖ್ ವಿರೋಧಿ ದಂಗೆಯ ವೇಳೆ ಅವರು ಕಾನ್ಪುರದಲ್ಲ್ಲಿ ಬೀದಿಗಿಳಿದು ದಾಳಿಕಾರರ ಎದುರು ನಿಂತರು. ಹಾಗೂ ತನ್ನ ವೈದ್ಯಾಲಯವಿದ್ದ ಪ್ರದೇಶ ಹಾಗೂ ಸುತ್ತ ಯಾವನೇ ಸಿಖ್ ಅಥವಾ ಸಿಖ್ ಸಂಸ್ಥೆಗಳ ಮೇಲೆ ಹಿಂಸಾ ನಿರತರು ದಾಳಿ ನಡೆಸದಂತೆ ನೋಡಿಕೊಂಡಿದ್ದರು. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ಎಐಡಿಡಬ್ಲೂಎ ನಡೆಸಿದ್ದ ಪ್ರತಿಭಟನೆಯೊಂದರ ಸಂಬಂಧ ಸೆಹಗಲ್‌ರನ್ನು ಬಂಧಿಸಲಾಗಿತ್ತು.

2002ರಲ್ಲಿ ಕ್ಯಾ.ಲಕ್ಷ್ಮಿ ಸೆಹಗಲ್ ಎಡಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದರು. ಅವರು ಎಪಿಜೆ ಅಬ್ದಲ್ ಕಲಾಂ ವಿರುದ್ಧ ಆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಲಕ್ಷ್ಮಿ ದೇಶಾದ್ಯಂತ ಬಿರುಸಿನ ಪ್ರಚಾರ ನಡೆಸಿ ಭಾರೀ ಸಭೆಗಳಲ್ಲಿ ಭಾಷಣ ಮಾಡಿದ್ದರು. ತಾನು ಗೆಲ್ಲುವಷ್ಟು ಬೆಂಬಲ ಹೊಂದಿಲ್ಲವೆಂಬುದನ್ನು ಪ್ರಾಂಜಲವಾಗಿ ಒಪ್ಪಿಕೊಂಡಿದ್ದ ಅವರು ಈ ವೇದಿಕೆಗಳನ್ನು ಬಡತನ ಹಾಗೂ ಅನ್ಯಾಯದ ಬೆಳವಣಿಗೆಗೆ ಕಾರಣವಾದ ಹಾಗೂ ಅಸಮಾನತೆಯ ಮತ್ತು ವಿಭಜನೀಯ ಸಿದ್ಧಾಂತಗಳನ್ನು ಉಣಬಡಿಸುವ ರಾಜಕೀಯ ವ್ಯವಸ್ಥೆಯೊಂದರ ವಿಮರ್ಶೆಗಾಗಿ ಬಳಸಿಕೊಂಡಿದ್ದರು.

ಸೆಹಗಲ್ ತನ್ನನ್ನು ಭೇಟಿ ಮಾಡಿದವರಲ್ಲಿ ಸಂತೋಷ ಹಾಗೂ ಭರವಸೆ ತುಂಬುವ ವ್ಯಕ್ತಿತ್ವದವರಾಗಿದ್ದರು.ಅವರ ಸಹೋದ್ಯೋಗಿಗಳು, ಸಂಘಟನೆಯ ಸದಸ್ಯರು, ರೋಗಿಗಳು, ಕುಟುಂಬ ಸದಸ್ಯರು ಹಾಗೂ ಮಿತ್ರರು ಇದರ ಪ್ರತ್ಯಕ್ಷಾನುಭವಿಗಳಾಗಿದ್ದಾರೆ. ಲಕ್ಷ್ಮಿಯವರ ಬದುಕು 20 ಹಾಗೂ 21ನೆ ಶತಮಾನಗಳ ಭಾರತೀಯ ಚರಿತ್ರೆಯಲ್ಲಿ ಮರೆಯಲಾಗದ ಭಾಗವಾಗಿದೆ. ವಸಾಹತುಶಾಹಿಗಳ ವಿರುದ್ಧ ಹೋರಾಟ, ಸ್ವಾತಂತ್ರ ಗಳಿಕೆ ಹಾಗೂ 65 ಸಂಕಷ್ಟಕರ ವರ್ಷಗಳ ಕಾಲ ರಾಷ್ಟ್ರ ಕಟ್ಟಿದ ಚರಿತ್ರೆಯೆಲ್ಲವೂ ಇದರಲ್ಲಿದೆ.

ಈ ಎಲ್ಲ ಚಾರಿತ್ರಿಕ ಪರಿವರ್ತನೆಗಳ ವೇಳೆ ಸೆಹಗಲ್ ಬಡವರು ಹಾಗೂ ದುರ್ಬಲರ ಪರ ದೃಢವಾಗಿ ನಿಂತಿದ್ದರು.ಸ್ವಾತಂತ್ರ ಹೋರಾಟಗಾರ್ತಿ, ನಿಷ್ಠಾವಂತ ವೈದ್ಯೆ ಹಾಗೂ ಭಾರತೀಯ ಮಹಿಳಾ ಚಳವಳಿಗಳ ವಿಶಿಷ್ಟ ನಾಯಕಿಯಾಗಿ ಅವರು ದೇಶಕ್ಕೆ ಹಾಗೂ ಜನರಿಗೆ ಉತ್ತಮ ಹಾಗೂ ದೀರ್ಘ ಬಾಳಿಕೆಯ ನ್ಯಾಯ ಒದಗಿಸಿದ್ದರು.

ಕೃಪೆ: ಹಿಂದೂ

ಸಲ್ವಾ ಜುಡುಂ: ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ

-ವಾರ್ತಾಭಾರತಿ ಸಂಪಾದಕೀಯ

ನ್ಯಾಯಾಲಯಗಳು ನೀಡುವ ಆದೇಶಗಳನ್ನು ನಮ್ಮ ಚುನಾಯಿತ ಸರಕಾರಗಳು ಎಷ್ಟು ಉದಾಸೀನವಾಗಿ ಕಾಣುತ್ತದೆ ಎಂಬುದಕ್ಕೆ ಛತ್ತೀಸಗಡ ಸರಕಾರ ಪ್ರತ್ಯಕ್ಷ ಉದಾಹರಣೆ ಯಾಗಿದೆ. ನಕ್ಸಲೀಯರನ್ನು ಹತ್ತಿಕ್ಕುವ ಹೆಸರಿನಲ್ಲಿ ಅಲ್ಲಿನ ಬಿಜೆಪಿ ಸರಕಾರ ಸ್ಥಾಪಿಸಿದ್ದ ಸಲ್ವಾ ಜುಡುಂ ಎಂಬ ಗೂಂಡಾ ಪಡೆಯನ್ನು ನಿಷೇಧಿಸಬೇಕು ಹಾಗೂ ಅಲ್ಲಿನ ಅರಣ್ಯದ ಜನ ವಸತಿ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ನೆಲೆ ಊರಿರುವ ಭದ್ರತಾ ಪಡೆಗಳನ್ನು ತೆರವುಗೊಳಿಸ ಬೇಕೆಂದು ಸುಪ್ರೀಂ ಕೋರ್ಟ್ ೨೦೧೧ ಜುಲೈ ೫ರಂದು ಆದೇಶ ನೀಡಿತ್ತು. ಈ ಆದೇಶದ ಬಗ್ಗೆ ಅಸಡ್ಡೆಯ ನಿಲುವನ್ನು ತಳೆದ ಛತ್ತೀಸಗಡದ ರಮಣ ಸಿಂಗ್ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯ ಈಗ ತರಾಟೆಗೆ ತೆಗೆದು ಕೊಂಡಿದೆ. ನ್ಯಾಯಾಲಯ ನೀಡಿದ ಇಂದಿನ ಆದೇಶವನ್ನು ಜಾರಿ ಮಾಡುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಅದು ಸೂಚಿಸಿದೆ.ಸಲ್ವಾ ಜುಡುಂ ಎಂಬ ಗೂಂಡಾ ಪಡೆ ಈಗಲೂ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಅಲ್ಲಿನ ಶಾಲೆಗಳಲ್ಲಿ ಹಾಗೂ ವಸತಿ ಗೃಹಗಳಲ್ಲಿ ಈಗಲೂ ಭದ್ರತಾ ಪಡೆಗಳು ತಳವೂರಿರುವ ಬಗ್ಗೆ ಸ್ವಾಮಿ ಅಗ್ನಿವೇಶ್, ರಾಮಚಂದ್ರ ಗುಹಾ ಮತ್ತಿತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಛತ್ತೀಸಗಡ ಸರಕಾರವು ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿದ ಬಗ್ಗೆ ಗಮನ ಸೆಳೆದಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಚ್.ಎಸ್.ನಿಜ್ಜಾರ್ ಹಾಗೂ ಗೋಖಲೆ ಯವರಿದ್ದ ಪೀಠ ತಕ್ಷಣ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಆದೇಶ ಮಾಡಿದೆ.ಛತ್ತೀಸಗಡದ ಬಿಜೆಪಿ ಸರಕಾರ ಆ ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ನ ಒಂದು ಗುಂಪಿನ ಸಹಕಾರದೊಂದಿಗೆ ಸಲ್ವಾ ಜುಡುಂ ಎಂಬ ಪಡೆಯನ್ನು ಕಟ್ಟಿ ಬುಡಕಟ್ಟು ಜನರಲ್ಲೇ ಒಡಕು ಮೂಡಿಸಿ ಕೆಲ ಯುವಕರನ್ನು ಭರ್ತಿ ಮಾಡಿಕೊಂಡಿತು. ಭರ್ತಿ ಮಾಡಿಕೊಂಡವರಿಗೆ ವಿಶೇಷ ಪೊಲೀಸ್ ಅಧಿಕಾರಿಗಳೆಂದು ನೇಮಕ ಪತ್ರ ನೀಡಿತ್ತು. ಯಾವುದೇ ತರಬೇತಿ ಇಲ್ಲದೆ, ಶಾಲಾ ಸರ್ಟಿಫಿಕೇಟ್ ಇಲ್ಲದೆ ಇಂತಹ ನೇಮಕವನ್ನು ಮಾಡಿಕೊಳ್ಳಲಾಗಿದೆ.

ಅಂತಲೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಈ ಪಡೆಯನ್ನು ವಿಸರ್ಜಿಸುವಂತೆ ಆದೇಶ ನೀಡಿದ್ದರೂ ಕೂಡ ಈ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಕಾನೂನಿನ ಮೂಲಕ ಖಾಯಂಗೊಳಿಸಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ದೇಶ-ವಿದೇಶಗಳ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳೇ ಈ ದೇಶದ ಕೇಂದ್ರ ಹಾಗೂ ಕೆಲ ರಾಜ್ಯ ಸರಕಾರಗಳನ್ನು ನಿಯಂತ್ರಿಸುತ್ತಿವೆ. ಆ ಕಂಪೆನಿಗಳ ತಾಳಕ್ಕೆ ತಕ್ಕಂತೆ ಚುನಾಯಿತ ಸರಕಾರಗಳು ಕುಣಿಯುತ್ತಿವೆ. ಛತ್ತೀಸಗಡದ ಬಸ್ತಾರ್ ಜಿಲ್ಲೆಯ ಅಮೂಲ್ಯ ಖನಿಜ ಸಂಪತ್ತನ್ನು ದೋಚಿಕೊಂಡು ಹೋಗಲು ಛತ್ತೀಸ್‌ಗಡ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಒಪ್ಪಂದ ಜಾರಿಯಾಗಬೇಕಾದರೆ ಅರಣ್ಯದಲ್ಲಿ ನೆಲಸಿರುವ ಅದಿವಾಸಿಗಳನ್ನು ಖಾಲಿ ಮಾಡಿಸಬೇಕು. ಕಾನೂನಿನ ಮೂಲಕ ಅದಿವಾಸಿಗಳನ್ನು ಖಾಲಿ ಮಾಡಿಸಲು ಸಾಧ್ಯವಾಗುವುದಿಲ್ಲ. ಈ ಸಲ್ವಾ ಜುಡುಂ ಮೂಲಕ ದಾಳಿ ಮಾಡಿಸಿ ಅದಿವಾಸಿ ಗಳ ಮನೆ ಗುಡಿಸಲುಗಳಿಗೆ ಬೆಂಕಿ ಹಾಕಲಾಗುತ್ತಿದೆ. ತನ್ನ ಪ್ರಜೆಗಳ ವಿರುದ್ಧ ಸಾರಿದ ಸಮರಕ್ಕೆ ಕೇಂದ್ರ ಸರಕಾರ ಮೌನ ಸಮ್ಮತಿ ನೀಡಿದೆ. ದೇಶದ ಕೆಲವೆಡೆ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಸಮರ್ಪಕವಾಗಿ ಜಾರಿಯಾಗಿಲ್ಲ. ಇದಕ್ಕೆ ಕಾರಣ ಚುನಾಯಿತ ಸರಕಾರಗಳು ಮತ್ತು ಆಧಿಕಾರಶಾಹಿಗಳ ಕರ್ತವ್ಯ ಲೋಪವಾಗಿದೆ. ಅಂತಲೇ ಕಳೆದ ವರ್ಷ ತಾನು ನೀಡಿದ ಆದೇಶ ಏನಾಯಿತೆಂದು ಛತ್ತೀಸಗಡ ಸರಕಾರದ ಕಿವಿ ಹಿಂಡಿರುವುದು ಸೂಕ್ತವಾಗಿದೆ. ಸಲ್ವಾ ಜುಡಾಂ ನಿಂದಾಗಿ ಬಸ್ತಾರ್ ಪ್ರದೇಶದ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ. ಅಲ್ಲಿ ನೆಲೆಸಿರುವ ಗಿರಿಜನರು ಮತ್ತು ಸತ್ಯಶೋಧನೆಗಾಗಿ ಅಲ್ಲಿ ಭೇಟಿ ನೀಡುವ ಮಾನವ ಹಕ್ಕು ಕಾರ್ಯಕರ್ತರ ಮೇಲೆ ದಾಳಿಗಳು ನಡೆಯುತ್ತಿವೆ.

ಮೇಧಾ ಪಾಟ್ಕರ್‌ರ ಮೇಲೆ ಮತ್ತು ಮಾನವ ಹಕ್ಕು ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮತ್ತೆ ಸಂದೀಪ್ ಪಾಂಡೆಯಂತಹ ವರ ಮೇಲೆ ಸಲ್ವಾ ಜುಡುಂ ಗೂಂಡಾಗಳು ದೈಹಿಕ ಹಲ್ಲೆ ಮಾಡಿದ್ದಾರೆ. ಕೆಲವು ಅಂಗ್ಲ ಪತ್ರಿಕೆಗಳ ವರದಿಗಾರರು ಕೂಡ ಈ ಗೂಂಡಾಗಿರಿಗೆ ಬಲಿಯಾಗಿದ್ದಾರೆ. ಆದರೂ ಕೇಂದ್ರ ಗೃಹ ಸಚಿವ ಚಿದಂಬರಂ ಛತ್ತೀಸಗಡ ಸರಕಾರವನ್ನು ಹೊಗಳುತ್ತಿದ್ದಾರೆ. ಈ ಸಲ್ವಾ ಜುಡುಂನ ವಿಶೇಷ ಪೊಲೀಸ್ ಅಧಿಕಾರಿಗಳ ಗೂಂಡಾಗಿರಿ ಎಷ್ಟು ವಿಪರೀತಕ್ಕೆ ಹೋಗಿದೆ ಎಂದರೆ ಅಲ್ಲಿ ನಡೆದ ಅತಿರೇಕಗಳ ತನಿಖೆಗೆ ಆಗಮಿಸಿದ್ದ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಕೂಡ ಈ ಸಲ್ವಾ ಜುಡುಂನಿಂದ ತನಗೆ ರಕ್ಷಣೆ ಬೇಕೆಂದು ಕೋರಿದೆ. ಆದರೂ ರಮಣ ಸಿಂಗ್ ಸರಕಾರ ತಾನೇ ಸಾಕಿ ಬೆಳೆಸಿದ ಸಲ್ವಾ ಜುಡುಂಯನ್ನು ವಿಸರ್ಜಿಸಲು ಸಿದ್ಧವಿಲ್ಲ. ಸಲ್ವಾ ಜುಡುಂ ಶಾಂತಿ ಪಡೆಯೆಂದು ಅವರು ವರ್ಣಿಸುತ್ತಾರೆ.

ಚುನಾಯಿತ ಸರಕಾರಗಳು ನ್ಯಾಯಾಂಗವನ್ನು ಕಡೆಗಣಿಸುತ್ತಿರುವುದಕ್ಕೆ ಇದು ಪ್ರತ್ಯಕ್ಷ ಉದಾಹರಣೆಯಾಗಿದೆ. ಛತ್ತೀಸಗಡದ ಅದಿವಾಸಿ ಪ್ರದೇಶಗಳು ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ಭದ್ರತಾ ಪಡೆಗಳು ಆಕ್ರಮಿಸಿ ತಳವೂರಿರುವುದರಿಂದ ಅಲ್ಲಿನ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ಅವರ ಭವಿಷ್ಯಕ್ಕೆ ಆಂಧಕಾರ ಕವಿದಿದೆ. ವೈದ್ಯಕೀಯ ಸೌಕರ್ಯ, ರಸ್ತೆ, ನೀರಿನಂತಹ ಸೌಕರ್ಯವಿಲ್ಲದ ಈ ಪ್ರದೇಶದಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಸುಪ್ರೀಂ ಕೋರ್ಟ್‌ನ ವಿಶೇಷ ಪೀಠ ತೀವ್ರ ಅಸಮಾಧಾನಗೊಂಡಿದೆ. ಸಲ್ವಾ ಜುಡುಂ ಗೂಂಡಾ ಪಡೆಯಿಂದ ಆದಿವಾಸಿಗಳ ಅಪಾರ ಪ್ರಮಾಣದ ಅಸ್ತಿಪಾಸ್ತಿ ನಾಶವಾಗಿದೆ. ಜೀವ ಹಾನಿಗೂ ಲೆಕ್ಕವಿಲ್ಲ. ಆದುದರಿಂದ ಇದನ್ನು ವಿಸರ್ಜಿಸುವುದು ಅಗತ್ಯವಾಗಿದೆ.
ಹುಬ್ಬಳ್ಳಿ ಮಲದಗುಂಡಿ ಸಾವುಗಳ ಬಗ್ಗೆ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.
ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಮ್ಯಾನ್ಹೋಲ್ ವಿಷಾನಿಲ ಸೇವನೆಯಿಂದ ಮೃತಪಟ್ಟ

ಇಬ್ಬರ ಸಾವಿನ ಕುರಿತ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

ಜುಲೈ 2012ನೇ ತಿಂಗಳ 22ನೇ ತಾರೀಖಿನ ಭಾನುವಾರದಂದು ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಶ್ರೀ ಮೌನೇಶರ್ವರ ದೇವಸ್ಥಾನದ ಬಳಿಯ ಮ್ಯಾನ್ ಹೋಲ್ ಒಳಗೆ ಸ್ವಚ್ಛತೆಗೆ ಇಳಿದ ಇಬ್ಬರು ಯುವಕರು ಮೃತಪಟ್ಟ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ನಿವಾಸಿಗಳಾದ ಸಂತೋಷ್ ಮತ್ತು ರಮೇಶ್ ಎಂಬ ಸಹೋದರರು ಸ್ಥಳದಲ್ಲೇ ವಿಷಾನಿಲ ಸೇವನೆಯಿಂದ ಮೃತಪಟ್ಟರೆ, ಅವರೊಡನೆ ಕೆಲಸ ನಿರ್ವಹಿಸುತ್ತಿದ್ದಅದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಾರ್ಮಿಕ ಶಿವು ಭದ್ರಪ್ಪ ರಾಠೋಡ್ ಮತ್ತು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೋಕಿನ ಎಲ್ಲಾರಟ್ಟಿ ಗ್ರಾಮದ ನಿವಾಸಿ ಬಸವರಾಜ ಹೊನ್ನಗೋಳ ಎಂಬ ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಮುಂಬೈನ ಈಗಲ್ ಕನ್ಸ್ಟ್ರಕ್ಷನ್ ಕಂಪನಿಯು ಗುತ್ತಿಗೆಗೆ ಪಡೆದಿರುವ ಉತ್ತರ ಕರ್ನಾಟಕ ನಗರ ಮೂಲಸೌಕರ್ಯ ಯೋಜನೆಯಡಿಯಲ್ಲಿ ಮಲಿನ ನೀರು ಸಾಗಾಟ ಜಾಲಕ್ಕೆ ಸಂಬಂಧಿಸಿದಂತೆ ನಿರ್ಮಿಸಲಾಗಿರುವ ಮ್ಯಾನ್ಹೋಲ್ ಸ್ವಚ್ಛತೆಯ ವೇಳೆ ಈ ದಿನಗೂಲಿ ಕಾರ್ಮಿಕರ ಘೋರಸಾವಿನ ದುರಂತ ಸಂಭವಿಸಿದೆ. ಇನ್ನೂ ಪಾಲಿಕೆಗೆ ಹಸ್ತಾಂತರಿಸದ ಎಂಟು ತಿಂಗಳ ಹಿಂದೆಯಷ್ಟೇ ರಸ್ತೆ ಮಧ್ಯದಲ್ಲಿ ನಿಮರ್ಿಸಿದ ಒಳ ಚರಂಡಿಯನ್ನು ಸ್ವಚ್ಛಗೊಳಿಸಲು ಈ ಕಾರ್ಮಿಕರು ಮ್ಯಾನ್ ಹೋಲ್ ಒಳಗೆ ಇಳಿದಿದ್ದರು. ಆರಂಭದಲ್ಲಿ ಶಿವು ಭದ್ರಪ್ಪ ರಾಠೋಡ ಎಂಬ ಅಪ್ರಾಪ್ರ ವಯಸ್ಸಿನ ಕಾರ್ಮಿಕನು ಇಳಿಯಲೆತ್ನಿಸಿ ಮೇಲೆ ಬಂದು ಗುಂಡಿಯ ಪಕ್ಕದಲ್ಲೇ ಚೇತರಿಸಿಕೊಳ್ಳುತ್ತಿದ್ದಾಗ, ಅದೇ ಗುಂಡಿಯೊಳಗೆ ರಮೇಶ ಇಳಿದು ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡು ಮ್ಯಾನ್ ಹೋಲ್ ಒಳಗೇ ಕುಸಿದು ಬಿದ್ದಾಗ ಅವನನ್ನು ರಕ್ಷಿಸಲು ಆತನ ಅಣ್ಣ ಸಂತೋಷ ಇಳಿದಿದ್ದಾನೆ, ಆತನೂ ವಿಷದಗಾಳಿ ಸೇವಿಸಿ ಗುಂಡಿಯೊಳಗೇ ಮೃತಪಟ್ಟಿದಾನೆ, ಇವರಿಬ್ಬರನ್ನೂ ಕಾಪಾಡಲು ಒಳಗಿಳಿಯಲು ಯತ್ನಿಸಿದ ಬಸವರಾಜನೂ ಅಸ್ವಸ್ಥಗೊಂಡಾಗ ಸಾರ್ವಜನಿಕರು ಮತ್ತು ಪೋಲೀಸರು ಆತನನ್ನು ಗುಂಡಿಯಿಂದ ಹೊರಗೆಳೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ಸಪಾಯಿ ಕರ್ಮಚಾರಿಗಳ ಕಾವಲುಪಡೆಯ ವತಿಯಿಂದ ಸಂಶೋಧಕ ಮತ್ತು ಪತ್ರಕರ್ತ ಟಿ.ಕೆ. ದಯಾನಂದ, ಹಾಗೂ ಸಾಮಾಜಿಕ ಕಾರ್ಯಕರ್ತ ಓಬಳೇಶ್ ಅವರ ದ್ವಿಸದಸ್ಯ ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು. ಈ ಇಬ್ಬರು ಸದಸ್ಯರ ತಂಡವು 2012ನೇ ಜುಲೈ 26ನೇ ತಾರೀಖಿನಂದು ಮ್ಯಾನ್ಹೋಲ್ ಒಳಗಿಳಿದು ಮೃತಪಟ್ಟ ರಮೇಶ್ ಮತ್ತು ಸಂತೋಷ್ ಅವರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು, ಸಂತ್ರಸ್ತ ಕುಟುಂಬದವರೊಡನೆ ಮಾತನಾಡಿ, ವಿಡಿಯೋ ಮತ್ತು ಪೋಟೋ ದಾಖಲಾತಿಗಳನ್ನು ಪಡೆದು, ಆ ಮೂಲಕ ಕಂಡುಕೊಂಡ ಸತ್ಯಾಂಶಗಳನ್ನು ಇಲ್ಲಿ ಮಂಡಿಸಲಾಗಿದೆ.

ಸತ್ಯಶೋಧನ ಸಮಿತಿಯೊಂದಿಗೆ ಘಟನೆಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡವರು

1)ದೇವಕ್ಕ ಯಮುನಪ್ಪ - ಮೃತ ಸಂತೋಷ್ ಮತ್ತು ರಮೇಶರ ತಾಯಿ, ವಯಸ್ಸು ಸುಮಾರು 55 ವರ್ಷಗಳು

2)ಫಕೀರಪ್ಪ ಬೀರಪ್ಪ ಲಮಾಣಿ - ಮೃತ ಸಂತೋಷ್ ಮತ್ತು ರಮೇಶರ ಚಿಕ್ಕಪ್ಪ, ವಯಸ್ಸು ಸುಮಾರು 45 ವರ್ಷಗಳು

3)ಶಿವು ಭದ್ರಪ್ಪ ರಾಠೋಡ್ - ನೆಲ್ಲೂರು ಗ್ರಾಮವಾಸಿ, ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ ಮತ್ತು ಘಟನೆಯ ಪ್ರತ್ಯಕ್ಷಸಾಕ್ಷಿ ವಯಸ್ಸು 16 ವರ್ಷಗಳು.

4)ಯಮುನವ್ವ - ನೆಲ್ಲೂರು ಗ್ರಾಮ ವಾಸಿ ಮತ್ತು ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ, ವಯಸ್ಸು ಸುಮಾರು 38 ವರ್ಷಗಳು

ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ಸಮಕಾಲೀನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ :

ನೆಲ್ಲೂರು ಗ್ರಾಮವು ಗದಗ ಜಿಲ್ಲೆಯ ರೋಣ ತಾಲ್ಲೋಕು ವ್ಯಾಪ್ತಿಗೆ ಬರುವ ಗ್ರಾಮವಾಗಿದ್ದು ಉತ್ತರ ಕರ್ನಾಟಕದ ಎಲ್ಲ ಹಿಂದುಳಿದ ಗ್ರಾಮಗಳಂತೆಯೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮವಾಗಿದೆ. ಈ ನೆಲ್ಲೂರು ಗ್ರಾಮದಲ್ಲಿ ನೆಲೆಸಿರುವ ಪರಿಶಿಷ್ಟಜಾತಿ ಸಮುದಾಯಕ್ಕೆ ಸೇರಿರುವ 60 ಲಂಬಾಣಿ ಕುಟುಂಬಗಳು ನೆಲೆಸಿದ್ದು 450ಕ್ಕೂ ಹೆಚ್ಚು ಜನಸಂಖ್ಯೆ ಈ ಸಮುದಾಯಕ್ಕಿದೆ. 60 ಲಂಬಾಣಿ ಕುಟುಂಬಗಳಲ್ಲಿ 4 ಮಂದಿಗೆ ಮಾತ್ರ ಒಂದೆರಡು ಎಕರೆಯಷ್ಟು ಸ್ವಂತ ಭೂಮಿಯಿದ್ದು ಉಳಿಕೆ ಮಂದಿ ಗ್ರಾಮದ ಭೂಹಿಡುವಳಿದಾರರ ಹೊಲಗದ್ದೆಗಳಲ್ಲಿ ಕೃಷಿಕೂಲಿ ಕಾಮರ್ಿಕರಾಗಿ ದಿನವೊಂದಕ್ಕೆ 30-40 ರೂಪಾಯಿಗಳಿಗೆ ದುಡಿಯುತ್ತಿದ್ದಾರೆ. ಶಿಕ್ಷಣದ ಸೋಂಕೇ ಇಲ್ಲದ ಈ ಲಂಬಾಣಿ ಕುಟುಂಬಗಳಲ್ಲಿ ಒಂದಿಬ್ಬರು ಯುವಕರು ಪಿಯುಸಿವರೆಗೆ ಶಿಕ್ಷಣ ಪಡೆದಿರುವುದನ್ನು ಬಿಟ್ಟರೆ ಮಿಕ್ಕುಳಿದವರು ಇವತ್ತಿಗೂ ಅನಕ್ಷರಸ್ಥರು. ಗ್ರಾಮದಲ್ಲಿ ಅಂಗನವಾಡಿ, ರೇಷನ್ ಡಿಪೋ, ಆರೋಗ್ಯಕೇಂದ್ರದಂತಹ ಯಾವ ಸೌಲಭ್ಯವೂ ಇಲ್ಲ. 2 ತಿಂಗಳಿಗೊಮ್ಮೆ ನೆಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು ಮನೆಮನೆಗೂ ತೆರಳಿ ಚಿಕಿತ್ಸೆ ನೀಡುವುದು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಲ್ಲಿ ಒಂದು. ಆದರೆ ಆರೋಗ್ಯ ಸಹಾಯಕಿಯು ಅಪಿತಪ್ಪಿಯೂ ಈ ಪರಿಶಿಷ್ಟಪಂಗಡಕ್ಕೆ ಸೇರಿದ ಲಂಬಾಣಿತಾಂಡದೊಳಕ್ಕೆ ಹೆಜ್ಜೆಯಿಡುವುದಿಲ್ಲ. ಗ್ರಾಮದ ಮೇಲ್ಜಾತಿ ಮಂದಿಯ ಮನೆಯ ಬಳಿ ಕುಳಿತು ಎಲ್ಲರನ್ನೂ ತನ್ನ ಬಳಿಗೆ ಕರೆಯಿಸಿಕೊಂಡು ಆರೋಗ್ಯ ವಿಚಾರಿಸುವುದು ಆರೋಗ್ಯ ಸಹಾಯಕಿಯ ಕಾರ್ಯವೈಖರಿ. ಗ್ರಾಮದ ಯಾವ ಭಾಗದಲ್ಲಿಯೂ ಸಮರ್ಪಕ ರಸ್ತೆಯಾಗಲೀ, ನೀರು ಹರಿದುಹೋಗಲು ಚರಂಡಿ ವ್ಯವಸ್ಥೆಯೆಂಬುದು ಇಲ್ಲವೇ ಇಲ್ಲ.

ಲಂಬಾಣಿ ತಾಂಡದ ಬಹುತೇಕ ಯುವಕರು ಮತ್ತು ಅಪ್ರಾಪ್ತರು ವಯಸ್ಸಿಗೆ ಬರುತ್ತಿದ್ದಂತೆಯೇ ಕೂಲಿಕೆಲಸ ಹುಡುಕುತ್ತ ಊರೂಗಿಗೆ ಗುಳೆ ಹೋಗುವುದು ಸವರ್ೇ ಸಾಮಾನ್ಯ ಸಂಗತಿ. ಹಾಗಾಗಿ ಗಾರೆಕೆಲಸ, ಮ್ಯಾನ್ಹೋಲ್ ಸ್ವಚ್ಛತೆ, ಕಾಂಕ್ರೀಟ್ ಕೆಲಸಗಳಿಗೆಂದು ದೂರದ ಮಂಗಳೂರು, ಬೆಂಗಳೂರು ಮತ್ತು ಕರಾವಳಿಯತ್ತ ಕೆಲಸ ಹುಡುಕುತ್ತ ಗುಳೆಯೆದ್ದು ಹೋದ ಯುವಕರನ್ನು ಹೊರತುಪಡಿಸಿ ಬರಿಯ ಮಕ್ಕಳು ಮತ್ತು ವೃದ್ಧರು ಮಾತ್ರ ನೆಲ್ಲೂರು ಲಂಬಾಣಿ ತಾಂಡಾದೊಳಗೆ ಕಾಣಸಿಗುತ್ತಾರೆ.

ದೇವಕ್ಕ ಯಮುನಪ್ಪ - ಮೃತ ಸಂತೋಷ್ ಮತ್ತು ರಮೇಶರ ತಾಯಿ, ವಯಸ್ಸು ಸುಮಾರು 55 ವರ್ಷಗಳು

ಹುಬ್ಬಳ್ಳಿಯಲ್ಲಿ ಸುರಕ್ಷಾ ಸಾಧನಗಳಿಲ್ಲದೆ ಮ್ಯಾನ್ ಹೋಲ್ ಒಳಗಿಳಿದು ಮೃತಪಟ್ಟ ಸಂತೋಷ್ ಮತ್ತು ರಮೇಶರ ತಾಯಿ ದೇವಕ್ಕ ಯಮುನಪ್ಪನವರು ಕಳೆದ ಒಂದು ವರ್ಷದಿಂದ ಅವರ ಇಬ್ಬರೂ ಮಕ್ಕಳು ಹುಬ್ಬಳ್ಳಿಯಲ್ಲಿ ಒಳಚರಂಡಿ ವಿಬಾಗದಲ್ಲಿ ದಿನಗೂಲಿ ಕಾಮರ್ಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶ್ರೀಕಾಂತ್ ಅನ್ನುವ ಮೇಸ್ತ್ರಿಯೊಬ್ಬರಿದ್ದಾರೆ ಎಂದು ಮೃತಪಟ್ಟ ಮಕ್ಕಳು ಆಗಾಗ್ಗೆ ಹೇಳುತ್ತಿದ್ದರು, ನಮ್ಮ ನೆಲ್ಲೂರು ಲಂಬಾಣಿ ತಾಂಡದಿಂದಲೇ ಸುಮಾರು 30 ಮಂದಿಯು ಹುಬ್ಬಳ್ಳಿಯಲ್ಲಿ ಅದೇ ಒಳಚರಂಡಿ ವಿಬಾಗದಲ್ಲಿ ದಿನಗೂಲಿ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿ ಶಿವು ಭದ್ರಪ್ಪ ರಾಠೋಡ್, ಕುಮ್ಯಾ ಹಾಗೂ ಬಾಲು ಎಂಬ ಅಪ್ರಾಪ್ತ ಬಾಲಕರೂ ಇದ್ದಾರೆ, ಎಲ್ಲರೂ ಹುಬ್ಬಳ್ಳಿಯ ಬೆಳಗಿಹಾಳ ಮತ್ತು ಬೇರಿಕೊಪ್ಪ ಪ್ರದೇಶದ ಪಕ್ಕದ ಏರ್ಟೆಲ್ ಟವರ್ ಬಳಿ ಶೆಡ್ ಹಾಕಿಕೊಂಡು ಉಳಿದುಕೊಂಡಿದ್ದಾರೆ, ಗಂಡಸರಿಗೆ ದಿನಕ್ಕೆ 250 ಮತ್ತು ಹೆಂಗಸರಿಗೆ 150 ರೂ ಕೂಲಿ ಕೊಡುತ್ತಾರೆ, ಪ್ರತೀ ವಾರಕ್ಕೊಮ್ಮೆ ನಗದು ರೂಪದಲ್ಲಿ ಸಂಬಳ ಕೊಡುವುದಾಗಿಯೂ, ಅದಕ್ಕೆ ರಸೀತಿಯನ್ನೇನೂ ಕೊಡುತ್ತಿರಲಿಲ್ಲವೆಂದು ಮೃತಪಟ್ಟ ಮಕ್ಕಳು ತಮ್ಮಲ್ಲಿ ಹೇಳುತ್ತಿದ್ದರು ಎಂಬುದನ್ನು ಬಿಟ್ಟರೆ ಮಕ್ಕಳ ಕೆಲಸದ ಬಗ್ಗೆ ನನಗೆ ಹೆಚ್ಚಿನ ವಿಷಯಗಳೇನೂ ತಿಳಿದಿಲ್ಲ ಎಂದು ದೇವಕ್ಕ ತಮ್ಮಲ್ಲಿದ್ದ ಮಾಹಿತಿಯನ್ನು ನಮ್ಮೊಡನೆ ಹಂಚಿಕೊಂಡರು.

1) ಯಮುನವ್ವ - ನೆಲ್ಲೂರು ವಾಸಿ ಮತ್ತು ಯುಜಿಡಿ ಸಫಾಯಿ ಕರ್ಮಚಾರಿ, ವಯಸ್ಸು ಸುಮಾರು 38 ವರ್ಷಗಳು

ನಾವು ಒಟ್ಟು 30 ಮಂದಿ ನೆಲ್ಲೂರು ಲಂಬಾಣಿತಾಂಡದಿಂದ ಹುಬ್ಬಳ್ಳಿ ಒಳಚರಂಡಿ ವಿಬಾಗದಲ್ಲಿ ಸಫಾಯಿ ಕರ್ಮಚಾರಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದೇವೆ, ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡ ಮಾಲೀಕರಾಗಲೀ ಕಂಪೆನಿಯಾಗಲೀ ನಮಗೆ ತಿಳಿದಿಲ್ಲ, ಮೇಸ್ತ್ರಿಯಾಗಿದ್ದ ಶ್ರೀಕಾಂತ್ ಮತ್ತು ಚೌಗಲೆ, ಪಾಂಡೆ ಎನ್ನುವರು ಮಾತ್ರ ನಮಗೆ ಗೊತ್ತು, ಅವರು ಆಗಾಗ್ಗೆ ಕೆಲಸದ ಜಾಗಕ್ಕೆ ಬರುತ್ತಿದ್ದರು, ಚರಂಡಿ ಮತ್ತು ಮ್ಯಾನ್ಹೋಲ್ ಸ್ವಚ್ಛಗೊಳಿಸುವುದು ನಮಗೆ ವಹಿಸಿದ ಕೆಲಸವಾಗಿತ್ತು. ಕೆಲಸ ಮಾಡುವುದಕ್ಕೆಂದು ಯಾವುದೇ ಸಮವಸ್ತ್ರವಾಗಲೀ, ಸುರಕ್ಷಾ ಸಾಧನಗಳನ್ನಾಗಲೀ, ಕೈಗವಸು, ಬೂಟುಗಳನ್ನು ಗುತ್ತಿಗೆದಾರರು ನಮಗೆ ಕೊಟ್ಟಿಲ್ಲ, ಬರಿಗೈಯಲ್ಲೇ ಚರಂಡಿ, ಒಳಚರಂಡಿ ಶುಚಿಗೊಳಿಸುವ ಕೆಲಸವನ್ನು ನಮ್ಮಿಂದ ಮಾಡಿಸಲಾಗುತ್ತಿತ್ತು, ಅನೈರ್ಮಲ್ಯಕರ ವಾತಾವರಣದಲ್ಲಿ ವಾಸನೆ ಬಂದರೂ ಹೇಸಿಗೆಯಾದರೂ ವಾರದ ದಿನಗೂಲಿಗಾಗಿ ನಾವು ಯಾವ ಸುರಕ್ಷಾಸಾಧನವೂ ಇಲ್ಲದೆ ಆ ಕೆಲಸವನ್ನು ಮಾಡಲೇ ಬೇಕಿತ್ತು ಎಂದು ಯಮುನವ್ವ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡರು.

2) ಶಿವು ಭದ್ರಪ್ಪ ರಾಠೋಡ್ - ನೆಲ್ಲೂರು ಗ್ರಾಮವಾಸಿ, ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ ಮತ್ತು ಘಟನೆಯ ಪ್ರತ್ಯಕ್ಷಸಾಕ್ಷಿ ವಯಸ್ಸು 16 ವರ್ಷಗಳು.

ಆವತ್ತು 22ನೇ ತಾರೀಖಿನ ಭಾನುವಾರ ಬೆಳಿಗ್ಗೆಯಿಂದ ಗಟಾರ ಸ್ವಚ್ಛ ಮಾಡಲಿಕ್ಕೆ ಮೇಸ್ತ್ರಿ ಶ್ರೀಕಾಂತ್ ಹೇಳಿದ್ದರು. ಅದರಂತೆ ಕೆಲಸ ಮಾಡ್ತ ಇದ್ದೆವು. ಬೇರೆ ಪ್ರದೇಶಗಳ ಮ್ಯಾನ್ ಹೋಲ್ ಸ್ವಚ್ಛತೆ ಮುಗಿಸಿ ಚಾಣಕ್ಯಪುರಿ ರಸ್ತೆ ಮ್ಯಾನ್ ಹೋಲ್ ಸ್ವಚ್ಛತೆಗೆ ಮುಂದಾದಾಗ ಮೊದಲು ಅದರ ಮುಚ್ಚಳ ತೆರೆದು ನಾನೇ ಇಳಿದೆ. ಒಳಗೆ ಹೋಗುತ್ತಿದ್ದಂತೆ ಉಸಿರುಕಟ್ಟಿದಂತೆ ಅನುಭವ ಆಗಿ ಪ್ರಜ್ಞೆ ತಪ್ಪುವಂತಾಯಿತು, ಕೂಗಿಕೊಂಡೆ, ತಕ್ಷಣವೇ ರಮೇಶ ಮತ್ತು ಸಂತೋಷ ನನ್ನನ್ನು ಮೇಲಕ್ಕೆ ಎಳೆದುಕೊಂಡರು. ಮೇಲಕ್ಕೆ ಬಂದು ಅಲ್ಲೇ ರಸ್ತೆಯಲ್ಲಿ ಮಲಗಿ ಸುಧಾರಿಸಿಕೊಳ್ಳುತ್ತಿದ್ದೆ, ಆಗ ರಮೇಶ ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸಿ ಅವನೇ ಒಳಗೆ ಮ್ಯಾನ್ ಹೋಲ್ ಒಳಗೆ ಇಳಿದವನು ಅಲ್ಲಿಯೇ ಕುಸಿದು ಬಿದ್ದ, ಅವನ ನಂತರ ಸಂತೋಷ, ಅವನ ಹಿಂದೆ ಬಸವರಾಜ ಮೂವರೂ ಒಬ್ಬರನ್ನೊಬ್ಬರು ಕಾಪಾಡಲು ಗುಂಡಿಯೊಳಗೆ ಇಳಿದವರು ಒಳಗೆ ಒದ್ದಾಡತೊಡಗಿದ್ದರು, ನಾನು ಅಲ್ಲಿದ್ದ ಜನರನ್ನು ಕಾಪಾಡಲು ಕೂಗಿಕೊಂಡೆ, ಬಸವರಾಜನನ್ನು ಯಾರೋ ಮೇಲಕ್ಕೆ ಎಳೆದು ಕಾಪಾಡಿದರು. ನನಗೆ ಅಷ್ಟೇ ಗೊತ್ತು, ನಮ್ಮ ಮೇಸ್ತ್ರಿ ಶ್ರೀಕಾಂತ್ ಮತ್ತು ಇನ್ನೊಬ್ಬರು ನನ್ನನ್ನು ಅಲ್ಲಿಂದ ಕರೆದುಕೊಂಡು ಯಾವುದೋ ಒಂದು ಆಫೀಸಿನಲ್ಲಿ ಕೂಡಿ ಹಾಕಿದ್ದರು. ನನ್ನ ಮೊಬೈಲಿನಿಂದ ಅವರಿಗೆ ಕಾಲ್ ಮಾಡಿ ರಮೇಶ, ಸಂತೋಷ ಮತ್ತು ಬಸವರಾಜುಗೆ ಏನಾಯ್ತು ಅಂತ ಕೇಳಿದೆ, ಅದಕ್ಕವರು ಏನೂ ಆಗಿಲ್ಲ ಎಲ್ಲರೂ ಆಸ್ಪತ್ರೆಯಲ್ಲಿದ್ದಾರೆ, ಗ್ಲೂಕೋಸ್ ಹಾಕಿದ್ದಾರೆ, ಚೆನ್ನಾಗಿದ್ದಾರೆ ಅಂತ ಹೇಳಿದರು. ಮಾರನೆಯ ದಿನ ಊರಿನವರ ಜೊತೆಯಲ್ಲಿ ನೆಲ್ಲೂರು ತಾಂಡಕ್ಕೆ ಬಂದಾಗಲೇ ರಮೇಶ ಮತ್ತು ಸಂತೋಷ ಇಬ್ಬರೂ ಸತ್ತಿರುವ ವಿಷಯ ನನಗೆ ಗೊತ್ತಾಗಿದ್ದು.

3) ಫಕೀರಪ್ಪ ಬೀರಪ್ಪ ಲಮಾಣಿ ಮೃತರ ಚಿಕ್ಕಪ್ಪ, ವಯಸ್ಸು ಸುಮಾರು 45 ವರ್ಷಗಳು

ರಮೇಶ ಮತ್ತು ಸಂತೋಷ ಗುಂಡಿಯೊಳಗೆ ಬಿದ್ದು ಸತ್ತಿದ್ದು 22ನೇ ತಾರೀಖಿನ ಮಧ್ಯಾನ್ಹ 2 ಗಂಟೆಗೆ. ಆದರೆ ಹುಬ್ಬಳ್ಳಿ ಮಹಾನಗರಪಾಲಿಕೆಯವರು ಮತ್ತು ಕಂಪನಿಯವರು ನಮಗೆ ವಿಷಯ ತಿಳಿಸಿದ್ದು ರಾತ್ರಿ 8 ಗಂಟೆಗೆ. ಅಲ್ಲಿಯತನಕ ನಮ್ಮ ಮಕ್ಕಳು ಮೃತಪಟ್ಟಿರುವ ವಿಷಯ ನಮಗೆ ತಿಳಿದೇ ಇರಲಿಲ್ಲ. ತಕ್ಷಣವೇ ನಾವು ಮತ್ತು ನಮ್ಮ ಸಂಬಂಧಿಕ ರಾಮು ಲಂಬಾಣಿ ಅನ್ನುವರು ಇಬ್ಬರೂ ಹುಬ್ಬಳ್ಳಿಗೆ ಹೊರಟೆವು. ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಮೇಶ ಸಂತೋಷರ ಹೆಣವನ್ನು ಪೋಸ್ಟ್ ಮಾರ್ಟಂ ಮಾಡಿ ಇಟ್ಟಿದ್ದರು. ಹೆಣವನ್ನು ನೋಡಲಿಕ್ಕೂ ನಮಗೆ ಅಧಿಕಾರಿಗಳು ಬಿಡಲಿಲ್ಲ. ರಾತ್ರಿಯಿಡೀ ಆಸ್ಪತ್ರೆ ಆವರಣದಲ್ಲೇ ಇದ್ದ ನಮಗೆ ಮಾರನೆಯ ದಿನ ಬೆಳಗ್ಗೆ ಪೋಲೀಸರು ಬಂದ ಮೇಲೆಯೇ ಹೆಣ ತೋರಿಸಿದ್ದು. ಆವ ಯಾರೆಲ್ಲ ಇದ್ದರು, ಅವರೆಲ್ಲ ಯಾವ ಅಧಿಕಾರಿಗಳು ಅನ್ನುವುದು ನಮಗೂ ತಿಳಿದಿರಲಿಲ್ಲ. ಕಂಪನಿಯ ಕಡೆಯವರೆಂದು ಯಾರೋ ಒಬ್ಬರು ಒಂದೊಂದು ಜೀವಕ್ಕೆ ಎರಡೂವರೆ ಲಕ್ಷದಂತೆ 5 ಲಕ್ಷ ದುಡ್ಡು ಕೊಟ್ಟು ಮಣ್ಣು ಮಾಡಲು 10,500 ರೂಗಳನ್ನು ಕೊಟ್ಟರು. ಕೊಟ್ಟವರು ಯಾರು ಅಂತಲೂ ನಮಗೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ಆಂಬ್ಯುಲೆನ್ಸ್ ಮಾಡಿ ಎರಡೂ ಹೆಣಗಳನ್ನು ಅದರೊಳಗೆ ತುಂಬಿ ಊರಿಗೆ ತೆಗೆದುಕೊಂಡು ಹೋಗಲು ನಮ್ಮನ್ನು ಬಲವಂತವಾಗಿ ಕಳಿಸಿಬಿಟ್ಟರು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೆಲ್ಲೂರು ಲಂಬಾಣಿ ತಾಂಡದ 30 ಮಂದಿಯನ್ನೂ ಆವತ್ತೇ ಊರಿಗೆ ಕಳಿಸಿದರು. ಈಗ ಎಲ್ಲರೂ ಇಲ್ಲಿಯೇ ಇದ್ದೇವೆ.

ಸತ್ಯಶೋಧನಾ ಸಮಿತಿಯ ಗಮನಕ್ಕೆ ಬಂದಂಥಹ ಅಂಶಗಳು

1)ಜುಲೈ 22ನೇ ತಾರೀಖಿನ ಭಾನುವಾರದಂದು ಹುಬ್ಬಳ್ಳಿಯಲ್ಲಿ ನಡೆದ ಮಲದಗುಂಡಿಯ ಸಾವಿನ ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ, ಒಳಚರಂಡಿ ನಿಮರ್ಾಣ ಮತ್ತು ನಿರ್ವಹಣೆಯ ಗುತ್ತಿಗೆದಾರರಾದ ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಹಾಗೂ ಜಿಲ್ಲಾಡಳಿತದ ಹೊಣೆಗೇಡಿತನ ಮತ್ತು ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕನ್ನಡಿಯಂತಿದೆ. ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆಗೆ ಒಪ್ಪಂದ ಮಾಡಿಕೊಂಡ ಮಹಾನಗರಪಾಲಿಕೆ ಮತ್ತು ಈಗಲ್ ಕನ್ಸ್ಟ್ರಕ್ಷನ್ ಕಂಪನಿಯ ನಡುವೆ ನಡುವೆ ಆಗಿರುವ ಒಪ್ಪಂದದಂತೆ ಈ ಕೆಲಸದಲ್ಲಿ ಬಾಲಕಾರ್ಮಿಕರನ್ನು ಬಳಸುವಂತಿಲ್ಲ, ಆದರೆ ಈ ಒಪ್ಪಂದವನ್ನು ಉಲ್ಲಂಘಿಸಿರುವ ಕಂಪನಿಯ ಅಧಿಕಾರಿಗಳು ಮೃತ ರಮೇಶ್ ಸಂತೋಷ್ ಸೇರಿದಂತೆ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ಶಿವು ಭದ್ರಪ್ಪ ರಾಠೋಡ, ಕುಮ್ಯಾ, ಬಾಲು ಎಂಬ ಅಪ್ರಾಪ್ತ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.

2)ಒಳಚರಂಡಿ ಸ್ವಚ್ಛತೆಯ ಸಂದರ್ಭದಲ್ಲಿ ಮನುಷ್ಯರನ್ನು ಗುಂಡಿಯೊಳಗೆ ಇಳಿಸುವುದು ಅಕ್ರಮ ಮತ್ತು ಅಪರಾಧವೆಂದು ಕೋರ್ಟ್ ತೀರ್ಪುಗಳು ಇದ್ದಾಗ್ಯೂ ಸಹ, ಸಕ್ಕಿಂಗ್ ಮೆಷೀನ್ ಹೊರತುಪಡಿಸಿ ಈ ಬಗೆಯ ಕೆಲಸವನ್ನು ಮನುಷ್ಯರಿಂದ ಮಾಡಿಸುವುದು ತಪ್ಪೆಂದು 1993ರ ಮಲಹೊರುವ ಪದ್ದತಿ ನಿಷೇಧ ಕಾಯ್ದೆಯು ಹೇಳಿದರೂ ಸಹ ಅದಕ್ಕೆ ಬೆಲೆ ಕೊಡದೆ, ಮನುಷ್ಯರನ್ನು ಮ್ಯಾನ್ ಹೋಲ್ ಒಳಗೆ ಇಳಿಸಿ ಸ್ವಚ್ಛಗೊಳಿಸುವುದನ್ನು ಮುಂದುವರೆಸುವ ಮೂಲಕ ಹುಬ್ಬಳ್ಳಿ ಮಹಾನಗರಪಾಲಿಕೆ ಮತ್ತು ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಇಬ್ಬರೂ ಕೋರ್ಟ್ ಆದೇಶ ಹಾಗೂ 1993ರ ಮಲಹೊರುವ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ.

3)ಮ್ಯಾನ್ ಹೋಲ್ ಒಳಗೆ ಮೃತಪಟ್ಟ ರಮೇಶ್ ಮತ್ತು ಸಂತೋಷರ ಸಂಬಂಧಿಕರಿಗೆ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯು 5 ಲಕ್ಷರೂಗಳ ಔಪಚಾರಿಕ ಪರಿಹಾರ ಧನವನ್ನು ನೀಡಿದೆ. ಈ ಪರಿಹಾರ ಧನದ ಕುರಿತಂತೆ ಯಾವುದೇ ಅಧಿಕೃತ ಘೋಷಣೆಯನ್ನಾಗಲೀ, ಹೇಳಿಕೆಯನ್ನಾಗಲೀ ಕಂಪನಿ ಮತ್ತು ಮಹಾನಗರಪಾಲಿಕೆ ನೀಡದಿರುವುದು ಮತ್ತು ಕಾಮರ್ಿಕ ನ್ಯಾಯಾಲಯದಲ್ಲಿ ಪ್ರಕರಣವನ್ನು ತಂದು ನ್ಯಾಯಬದ್ಧ ಪರಿಹಾರ ವಿತರಣೆಗೆ ಮುಂದಾಗದೆ ಇರುವುದು ಪ್ರಕರಣವನ್ನು ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನದಂತೆ ಕಾಣುತ್ತದೆ.

4)ಮ್ಯಾನ್ ಹೋಲ್ ಸ್ವಚ್ಛತೆಯ ಸಂದರ್ಭದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮನುಷ್ಯರನ್ನು ಗುಂಡಿಯೊಳಗೆ ಇಳಿಸುವಾಗ ಅಗತ್ಯ ಸುರಕ್ಷಾ ಸಲಕರಣಗಳನ್ನು ಬಳಸಿ ಇಳಿಸುವ ಎಚ್ಚರಿಕೆಯಿಲ್ಲದೆ ನಿರ್ಲಕ್ಷ್ಯ ತೋರಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯ ವಿರುದ್ಧ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಲ ಹೊರುವ ಪದ್ದತಿ ನಿಷೇಧ ಕಾಯ್ದೆ ಮೂರರ ಕೆಳಗೂ ಮೊಕದ್ದಮೆಗಳನ್ನು ಹೂಡಲೇಬೇಕಿದೆ.

5)ಮೃತರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮವು ಮನುಷ್ಯರು ವಾಸಿಸಲು ಕೂಡ ಯೋಗ್ಯವಾಗಿಲ್ಲದೆ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿದ್ದು ಭೂ ರಹಿತ ಕೃಷಿ ಕೂಲಿ ಕಾಮರ್ಿಕರೇ ಹೆಚ್ಚಿರುವ ಹಳ್ಳಿಯಾಗಿದೆ. ಅತ್ಯಂತ ತ್ವರಿತವಾಗಿ ಈ ಗ್ರಾಮದ ಬಡ ಲಂಬಾಣಿ ಕುಟುಂಬಗಳಿಗೆ ಭೂಮಿಯೂ ಸೇರಿದಂತೆ ಇನ್ನಿತರೆ ಕಲ್ಯಾಣಾಧರಿತ ಸಕರ್ಾರಿ ಕಾರ್ಯಕ್ರಮಗಳನ್ನು ತಲುಪಿಸಲೇಬೇಕಾದ ತುರ್ತು ಕಂಡುಬಂದಿದೆ.

ಸತ್ಯಶೋಧನ ಸಮಿತಿಯ ಶಿಫಾರಸ್ಸುಗಳು

1)ಮನುಷ್ಯ ಜೀವರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರಿ ಇಬ್ಬರು ಯುವಕರ ಸಾವಿಗೆ ಕಾರಣರಾದ ಹುಬ್ಬಳ್ಳಿ ಮಹಾನಗರಪಾಲಿಕೆ ಮತ್ತು ಒಳಚರಂಡಿ ನಿರ್ವಹಣೆಯ ಗುತ್ತಿಗೆ ಪಡೆದಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಈರ್ವರ ಮೇಲೂ ಐಪಿಸಿ 304 ಎ ಪ್ರಕಾರ, ದಲಿತ ದೌರ್ಜನ್ಯ ತಡೆ ಕಾಯ್ದೆ, ಮಲಹೊರುವ ಪದ್ದತಿ ನಿಷೇಧ ಕಾಯ್ದೆಯಡಿಯಲ್ಲಿ ಈ ತಕ್ಷಣವೇ ಮೊಕದ್ದಮೆ ದಾಖಲಿಸಿ ಸಂಬಂಧಿಸಿದ ಎರಡೂ ಸಂಸ್ಥೆಗಳ ಅಧಿಕಾರಿಗಳನ್ನು ಬಂಧಿಸಬೇಕು

2)ಒಟ್ಟು ಪ್ರಕರಣವು ವಲಸೆ, ಬಡತನ, ಅಧಿಕಾರಿಗಳ ಬೇಜವಬ್ದಾರಿತನ, ಕಾನೂನುಗಳ ಉಲ್ಲಂಘನೆಯಂತಹ ಸಂಕೀರ್ಣ ವಿಷಯಗಳಿಂದ ಕೂಡಿದ್ದು ಘೋರವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣ ಇದಾಗಿರುವುದರಿಂದ ಈ ಕುರಿತು ಶೀಘ್ರವೇ ಒಂದು ತನಿಖೆ ನಡೆಸಲು ಸಿಓಡಿಗೆ ವಹಿಸಬೇಕು

3)ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಇದಕ್ಕೆ ಸಹಕರಿಸಿದ ಮಹಾನಗರಪಾಲಿಕೆಯ ಅಧಿಕಾರಿಗಳನ್ನು ಈ ಕೂಡಲೇ ಸಸ್ಪೆಂಡ್ ಮಾಡಬೇಕು

4) ಅನಧಿಕೃತವಾಗಿ 5 ಲಕ್ಷ ಪರಿಹಾರವನ್ನು ನೀಡಿ ಕೈತಳೆದುಕೊಳ್ಳಲು ಯತ್ನಿಸಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯು ಮೃತ ರಮೇಶ್ ಮತ್ತು ಸಂತೋಷ್ ಎಳೆಯ ವಯಸ್ಸಿನವರಾಗಿರುವುದರಿಂದ ಕಾಮರ್ಿಕ ನ್ಯಾಯಾಲಯದ ಮೂಲಕ ಅಧಿಕೃತವಾಗಿ ಮತ್ತು ಕಾನೂನುಬದ್ದವಾಗಿ ಮೃತ ದುರ್ದೈವಿಗಳ ಕುಟುಂಬಕ್ಕೆ ತಲಾ 50 ಲಕ್ಷರೂಗಳಂತೆ ಒಂದು ಕೋಟಿ ರೂಗಳ ಪರಿಹಾರ ಧನವನ್ನು ಪಾವತಿಸಬೇಕು.

- ಟಿ.ಕೆ. ದಯಾನಂದ

- ಓಬಳೇಶ್

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...