Monday, October 31, 2011

ಹಿಂದೂ ಧರ್ಮಶಾಸ್ತ್ರದ ಒಗಟುಗಳು


ಅತ್ರಿ ಸಂಹಿತೆ


ಸನಾತನ ಅಥವಾ ವೈದಿಕ ಹಿಂದೂ ಧರ್ಮವನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವಿಭಾಜಿಸಲಾಗಿದೆ. ಪ್ರಪ್ರಥಮ ಹಾಗೂ ಅತಿ ಪ್ರಾಚೀನ ಕಾಲಕ್ಕೆ ಸೇರಿದ ವೇದಗಳನ್ನು ‘ಶ್ರುತಿ’ಗಳೆಂದೂ ಆನಂತರದ ಧರ್ಮ ಗ್ರಂಥಗಳನ್ನು ‘ಸ್ಮತಿ’ ಗಳೆಂದೂ ಕರೆಯಲಾಗುತ್ತದೆ.ಒಬ್ಬನು ಮತ್ತೊಬ್ಬ ನಿಂದ ಶ್ರವಣ ಮಾಧ್ಯಮದಿಂದ ಕೇಳುವುದು ಶ್ರುತಿ; ಸದಾಕಾಲ ಸ್ಮರಣ ಶಕ್ತಿಯಿಂದ ಕಾಪಾಡಿ ಕೊಂಡು ಬರುವ ಜ್ಞಾನ ಸ್ಮೃತಿ.ಈ ಎರಡೂ ಜ್ಞಾನ ಶಾಖೆಗಳು ಭಗವಂತನಿಂದ ಮನುಕುಲಕ್ಕೆ ನೀಡಿದ ಕೊಡುಗೆಗಳೆಂದು ಸನಾತನ ಹಿಂದೂಗಳ ನಂಬಿಕೆ.ಸ್ಮತಿಗಳನ್ನು ‘ಕಾಂಡ’ ಅಥವಾ ಅಧ್ಯಾಯಗಳಾಗಿ ವಿಂಗಡಿಸಲಾಗಿದೆ.1. ಆಚಾರ 2.ವ್ಯವಹಾರ 3.ಪ್ರಾಯಶ್ಚಿತ.ಆಚಾರವು ದೈನಂದಿನ ಧಾರ್ಮಿಕ ಪ್ರಕ್ರಿಯೆ ಮತ್ತು ವಿಧಿನಿಯಮಗಳಿಗೆ ಸಂಬಂಧಪಟ್ಟದ್ದು. ವ್ಯವಹಾರ ನಾಗರಿಕ ಹಕ್ಕು ಮತ್ತು ಕರ್ತವ್ಯಗಳಿಗೆ ಸಂಬಂಧಪಟ್ಟದ್ದು. ಪ್ರಾಯಶ್ಚಿತ್ತ ಪಾಪ ವಿಮೋಚನೆಗೆ ಸಂಬಂಧಪಟ್ಟದ್ದು.ಇವೆಲ್ಲ ಜ್ಞಾನ ಭಂಡಾರದ ಸಮಗ್ರ ಕ್ರೋಡೀಕರಣವನ್ನು ಧರ್ಮಶಾಸ್ತ್ರವೆಂದು ಕರೆಯಲಾಗುತ್ತದೆ. ಆದುದರಿಂದ ಧರ್ಮ ಶಾಸ್ತ್ರವೆನ್ನುವುದು ಕೇವಲ ಒಂದೇ ಬೃಹತ್ ಗ್ರಂಥಕ್ಕೆ ಸೀಮಿತಗೊಳ್ಳದೆ ಹಲವಾರು ಸಂಹಿತೆಗಳಲ್ಲಿ ಮಹರ್ಷಿಗಳಿಂದ ನಿರೂಪಿಸಲ್ಪಟ್ಟಿದೆ.

ದಾರುಣ ವ್ಯಂಗ್ಯ ಹಾಗೂ ಕುತೂಹಲದ ಸಂಗತಿಯೆಂದರೆ ಸನಾತನ ಹಿಂದೂ ಧರ್ಮದ ಎಲ್ಲ ಪ್ರತಿಪಾದಕರು ವಿತಂಡವಾದವನ್ನೇ ತಮ್ಮ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಎದುರಾಳಿಯನ್ನು ಬಗ್ಗು ಬಡಿಯುವುದರಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ. ಭಾರತೀಯ ತರ್ಕಶಾಸ್ತ್ರದಲ್ಲಿ ವಿತಂಡವಾದವು ಕೂಡ ಒಂದು ವಾದವೆ. ಆಡು ಭಾಷೆಯಲ್ಲಿ ಇದು ಕುತರ್ಕ. ಇಂಗ್ಲಿಷ್‌ನಲ್ಲಿ ಇದನ್ನು casuistry ಎಂತಲೂ ಕರೆಯುತ್ತಾರೆ. ವಿತಂಡವಾದಿಗಳು ತಮ್ಮ ಬೌದ್ಧಿಕ ಕಸರತ್ತನ್ನು ಮೂಲ ಬಂಡವಾಳವನ್ನಾಗಿ ಮಾಡಿ ಕೊಂಡು ಪ್ರತಿಸ್ಪರ್ಧಿಗಳನ್ನು ತಾವು ನಂಬಿದ ಮಿಥ್ಯೆಗಳ ಮಾಯಾಜಾಲದಲ್ಲಿ ಸಿಲುಕಿಸು ವಂತೆ ಮಾಡುವುದರಲ್ಲಿ ನಿಸ್ಸೀಮರು. ವಾಗ್ವಿಲಾಸದ ವರ್ಣರಂಜಿತ ಕಾಮನ ಬಿಲ್ಲನ್ನು ಸೃಷ್ಟಿಸಿ ಮನುಷ್ಯನ ಮಸ್ತಿಷ್ಕವನ್ನು ಭ್ರಮಾಲೋಕದಲ್ಲಿ ಸಿಕ್ಕು ಹಾಕಿ ತನ್ಮೂಲಕ ಆತ್ಮರತಿಯ ಸುಖಾನುಭವವನ್ನು ಪಡೆಯು ವುದರಲ್ಲಿ ಇವರು ನಿಷ್ಣಾತರು.

ಈ ಹಿಂದೂಧರ್ಮದ ವಕ್ತಾರರು ತಮಗೆ ಪ್ರತಿಸ್ಪರ್ಧಿಯಾದ ಪುರೋಗಾಮಿ, ವೈಚಾರಿಕ, ಪ್ರಗತಿಶೀಲ, ಮಾನವೀಯ ನೆಲೆಯಲ್ಲಿ ಬಿಂಬಿತವಾದ ಇತರ ಧರ್ಮಗಳು ಬಹು ಜನರ ಗೌರವ, ಬೆಂಬಲಕ್ಕೆ ಪಾತ್ರವಾದಾಗ ಆ ಧರ್ಮದೊಳಗೆ ಸೇರಿಕೊಂಡು ‘ಈ ಧರ್ಮದ ಶ್ರೇಯಸ್ಸಿಗಾಗಿ ನಮ್ಮ ಧರ್ಮವನ್ನು ತೊರೆದು ನಿಮ್ಮಿಡನೆ ಕೈ ಜೋಡಿಸುತ್ತೇವೆ’ ಎನ್ನುವ ಮುಖವಾಡವನ್ನು ಹೊತ್ತು ಹಂತ ಹಂತವಾಗಿ ನಯ ನಾಜೂಕಿನಿಂದ ತಮ್ಮ ಪೂರ್ವಾಶ್ರಮ ಧರ್ಮದ ಮೂಲ ತತ್ವಗಳನ್ನು ತಾವು ಸೇರಿದ ಧರ್ಮದೊಳಗೆ ಪ್ರಕ್ಷಿಪ್ತವಾಗಿ ತೂರಿಸಿ ತಮ್ಮ ಪೂರ್ವಾಶ್ರಮ ಧರ್ಮದ ಛಾಯಾಪ್ರತಿಯನ್ನಾಗಿ ಮಾಡಿದ ನಿದರ್ಶನಗಳನ್ನು ಚರಿತ್ರೆಯಿಂದ ಗುರುತಿಸಿಕೊಳ್ಳಬಹುದಾಗಿದೆ.

ಪ್ರಾಚೀನ ಭಾರತದ ಭೌತಿಕವಾದ (ಲೋಕಾಯತ ಅಥವಾ ಚಾರ್ವಾಕ ದರ್ಶನ) ಒಂದನ್ನು ಹೊರತು ಪಡಿಸಿದರೆ ಬಹುಮುಖ್ಯವಾಗಿ ಸನಾತನ ಹಿಂದೂ ಧರ್ಮದ ಅಳಿವು ಉಳಿವಿಗೆ ಸವಾಲಾಗಿ ನಿಂತ ಭೌದ್ಧ ಧರ್ಮ, ವೀರಶೈವ (ಲಿಂಗಾಯತ), ಜೈನ ಹಾಗೂ ಸಿಖ್‌ಪಂಥ ಹಿಂದೂ ಧರ್ಮದ ಧರ್ಮಾಂತರದ ಪ್ರಕ್ರಿಯೆಯ ಅಡಕತ್ತರಿಯೊಳಗೆ ಸಿಕ್ಕು ಹಾಕಿಕೊಂಡ ಅವೈದಿಕ ಧರ್ಮಗಳು. (ಅನುವಾದಕ)

ಅತ್ರಿ ಸಂಹಿತೆಯ ಪೀಠಿಕೆ

ಅತ್ರಿ ಮಹರ್ಷಿ ಕೂಡ ಚಾತುರ್ವಣ್ಯ ಪದ್ಧತಿಗೆ ಮೊದಲ ಸ್ಥಾನವನ್ನು ಕೊಟ್ಟಿದ್ದಾನೆ: ಪ್ರತಿಯೊಬ್ಬನೂ ಅನುವಂಶಿಕವಾಗಿ ಬಂದ ಜಾತಿ ಕಸುಬನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು. ಅಂತಹವರು ಉತ್ತಮ ಕುಲದವರ ಸಂಪರ್ಕ ದಿಂದ ದೂರವಿದ್ದರೂ ಅವರ ಪ್ರೀತಿಗೆ ಪಾತ್ರರಾಗುತ್ತಾರೆ. (12)
ಯಜ್ಞಯಾಗಗಳನ್ನು ನಿರ್ವಹಿಸುವುದು, ವೇದಾಧ್ಯಯನವನ್ನು ಮಾಡುವುದು, ದಾನ ಧರ್ಮಗಳನ್ನು ಸ್ವೀಕರಿಸುವುದು- ಈ ಮೂರು ವಿಪ್ರನಾದವನು ತನ್ನ ಧಾರ್ಮಿಕ ಕರ್ತವ್ಯಗಳೆಂದು ತಿಳಿಯತಕ್ಕದ್ದು. ದಾನಗಳನ್ನು ಸ್ವೀಕರಿಸುವುದ ರೊಂದಿಗೆ ಅರ್ಹರಿಗೆ ವೇದಗಳ ಅಧ್ಯಾಪನ ಮಾಡುವುದು ಮತ್ತು ಯಜ್ಞಯಾಗಗಳಲ್ಲಿ ಪೌರೋಹಿತ್ಯವನ್ನು ವಹಿಸಿ ವಿಪ್ರನಾದವನು ತನ್ನ ಉದರಾಭರಣವನ್ನು ಮಾಡತಕ್ಕದ್ದು. (13)
ಕ್ಷತ್ರಿಯನಾದವನು ಯಜ್ಞಯಾಗಗಳನ್ನು ನೆರವೇರಿಸುವುದು, ದಾನಧರ್ಮಗಳನ್ನು ನೀಡು ವುದು, ವೇದಾಧ್ಯಯನವನ್ನು ಮಾಡುವುದು; ಅಂತೆಯೇ ಯುದ್ಧ ಸಲಕರಣೆ ಮತ್ತು ಸೈನ್ಯ ಶಕ್ತಿಯಿಂದ ಪ್ರಜೆಗಳನ್ನು ರಕ್ಷಿಸುವುದು ಆತನ ಕರ್ತವ್ಯವೆಂದು ತಿಳಿಯತಕ್ಕದ್ದು. (13)
ಯಜ್ಞಯಾಗಗಳನ್ನು ನೆರವೇರಿಸಿ ದಾನದಕ್ಷಿಣೆ ಯನ್ನು ನೀಡುವುದು, ವೇದಾಧ್ಯಯನವನ್ನು ಮಾಡುವುದು ವೈಶ್ಯನಾದವನು ಧಾರ್ಮಿಕ ಕರ್ತವ್ಯವೆಂತಲೂ, ಕೃಷಿ ಆತನ ಲೌಕಿಕ ಜೀವನದ ವೃತ್ತಿಯೆಂತಲೂ ತಿಳಿಯತಕ್ಕದ್ದು. (14)
ದ್ವಿಜರ ಸೇವೆಯನ್ನು ಮಾಡುವುದು ಶೂದ್ರನ ಧಾರ್ಮಿಕ ಕರ್ತವ್ಯ. ಅಂತೆಯೇ ಹೊಟ್ಟೆಯ ಪಾಡಿಗಾಗಿ ಕರಕುಶಲ ವೃತ್ತಿಯನ್ನು ಆತನು ಮಾಡತಕ್ಕದ್ದು.(14)
ತನ್ನ ಧರ್ಮವನ್ನು ಯಾರು ಮೀರಿ ವರ್ತಿಸು ತ್ತಾನೋ ಆತನನ್ನು ರಾಜನು ಶಿಕ್ಷಿಸತಕ್ಕದ್ದ್ದು; ಅಂತೆಯೇ ಬೇರೆ ಧರ್ಮದೊಡನೆ ಗುರುತಿಸಿ ಕೊಳ್ಳುತ್ತಾನೋ ಅಂತಹವನು ಕ್ಷಮೆಗೆ ಅರ್ಹನಲ್ಲ. ಅಂತಹವರಿಗೆ ಕಠಿಣ ಶಿಕ್ಷೆ ನೀಡುವುದರಿಂದ ರಾಜ ನಾದವನು ಸ್ವರ್ಗದಲ್ಲಿ ದೇವಾದಿದೇವತೆ ಗಳ ಅನುಗ್ರಹಕ್ಕೆ ಪಾತ್ರ ನಾಗುತ್ತಾನೆ (15)
ತಾನು ಹುಟ್ಟಿದ ಧರ್ಮ ಯಾವುದೇ ಆದರೂ ಸರಿಯೆ; ಅದನ್ನು ಒಪ್ಪಲೇಬೇಕು; ಶೂದ್ರನಿಗೂ ಕೂಡ ಇದರಿಂದ ಮೋಕ್ಷವಿದೆ; ಆತನು ಕೂಡ ದೇವ ಲೋಕದ ದೇವತೆಗಳ ಕೃಪೆಗೆ ಪಾತ್ರನಾಗುತ್ತಾನೆ. ಬೇರೆಯವರ ಧರ್ಮ ವನ್ನು ಎಂದಿಗೂ ನಾವು ಸ್ವೀಕರಿಸಬಾರದು. ಹೆರವರ ಪತ್ನಿ ಎಷ್ಟೇ ಸ್ಫುರದ್ರೂಪಿಯಾದರೂ ಅವಳು ನಮ್ಮವಳಲ್ಲ. (18)
ಶ್ರೀಕೃಷ್ಣನು ಕೂಡ ಭಗವದ್ಗೀತೆಯಲ್ಲಿ ಈ ವಿಧಿ ನಿಷೇಧವನ್ನು ಒತ್ತಿ ಹೇಳಿದ್ದಾನೆ. ‘ಸ್ವಧರ್ಮವು ಶ್ರೇಯಸ್ಸನ್ನು ಕೊಡು ತ್ತದೆ; ಪರಧರ್ಮವು ಭಯಕ್ಕೆ ಕಾರಣವಾಗುತ್ತದೆ. ’ (ಅನುವಾದಕ)’
ಯಾವನೇ ಶೂದ್ರನು ಗಾಯತ್ರಿ ಮಂತ್ರವನ್ನು ಜಪಿಸುವುದಾಗಲೀ, ಪವಿತ್ರಾಗ್ನಿಗೆ ಆಹುತಿಯನ್ನು ನೀಡುವು ದಾಗಲೀ ರಾಜನ ಅವಗಾಹನೆಗೆ ಬಂದರೆ ರಾಜನಾದವನು ಅಂತಹವ ನನ್ನು ವಧೆ ಮಾಡತಕ್ಕದ್ದು! ಬೆಂಕಿ ಯನ್ನು ನೀರು ನಂದಿಸುತ್ತದೆ, ಅಂತೆಯೇ ರಾಜನಾದವನು ರಾಜ್ಯಕ್ಕೆ ಕಂಟಕಪ್ರಾಯನಾದ ಶೂದ್ರನನ್ನು ಕ್ಷಮಿಸ ತಕ್ಕದ್ದಲ್ಲ. (19)
‘‘ಭಗವದ್ಗೀತೆಯನ್ನು ಒಪ್ಪದವರು ಈ ದೇಶವನ್ನು ಬಿಟ್ಟು ತೊಲಗಬೇಕು’’ ಎಂದು ಇತ್ತೀಚೆಗೆ ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯನ್ನು ಈ ಸಂದರ್ಭ ದಲ್ಲಿ ನೆನಪಿಸಿಕೊಳ್ಳಿ. (ಅನುವಾದಕ)
ಬ್ರಾಹ್ಮಣರು ಸ್ವರ್ಗ, ಭೂಮಿ, ಆಕಾಶ; ಈ ಮೂರು, ಅಂತೆಯೇ ಮೂರು ವೇದಗಳಾದ ಋಕ್, ಯಜುಷ್, ಸಾಮನ್ ಹಾಗೂ ಮೂರು ಪವಿತ್ರಾಗ್ನಿಯ ರಕ್ಷಣೆಗಾಗಿಯೇ ಈ ನೆಲದಲ್ಲಿ ಜನ್ಮ ತಳೆದಿದ್ದಾರೆ. (25)
ದ್ವಿಜನಾದವನು ವೌನ ವ್ರತಧಾರಿ ಯಾಗಿ ಸಂಧ್ಯಾವಂದನೆಯನ್ನು ಮಾಡಿದರೆ ಅಂತಹವನು 2 ಸಾವಿರ ವರ್ಷ (ಸ್ವರ್ಗ ಲೋಕದ ವರ್ಷ) ದೇವತೆಗಳ ಸಾನ್ನಿಧ್ಯದಲ್ಲಿ ಸ್ವರ್ಗಲೋಕದ ಆನಂದದಲ್ಲಿ ಭಾಗಿಯಾಗಲು ಅರ್ಹನಾಗುತ್ತಾನೆ.(26)
ಅತ್ರಿಯ ನುಡಿಮುತ್ತುಗಳು
ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸು; ಒಬ್ಬ ವ್ಯಕ್ತಿ ಬೇರೆಯವರ ಪತ್ನಿಗಾಗಿ ಆಸೆ ಪಡಬಾರದು. ಇದನ್ನು ‘ಅಸ್ಪಹ’(ಆಸೆಯ ನಿಗ್ರಹ)ಎಂದು ತಿಳಿಯತಕ್ಕದ್ದು. (38)
ಹೆರವರಿಂದ ಆಧ್ಯಾತ್ಮಿಕ ಅಥವಾ ದೈಹಿಕ ಚಿತ್ರಹಿಂಸೆಗೆ ಒಳಗಾದರೆ ಅಂತಹವನನ್ನು ದ್ವೇಷಿಸ ಬೇಡ. ಇದನ್ನು ‘ದಮ’ಅಂತ ಹೇಳುತ್ತಾರೆ.(39)
ನಿನ್ನ ಇತಿಮಿತಿಯ ಆದಾಯದಲ್ಲಿ ಸ್ವಲ್ಪ ಭಾಗವಾದರೂ ಅರ್ಹರಾದವರಿಗೆ ನೀಡು. ಇದನ್ನು ‘ದಾನ’ ಎಂತ ಕರೆಯುತ್ತಾರೆ. (40)
ಪ್ರತಿಯೊಬ್ಬನೂ ತನ್ನ ಆತ್ಮ ಬೇರೆಯಲ್ಲ; ಬೇರೆಯವರ ಆತ್ಮ ಬೇರೆಯಲ್ಲ; ತನ್ನ ಬಂಧು ಗಳು ಮಿತ್ರರು ಬೇರೆಯಲ್ಲ ಎಂದು ತಿಳಿಯ ತಕ್ಕದ್ದು. ಯಾವಾತನು ಇಂತಹ ನಿಯಮಗಳನ್ನು ದ್ವೇಷಿಸುತ್ತಾನೆಯೋ ಅಂತಹವನು ಅವನಿಗೆ ಶತ್ರುವೆಂದು ತಿಳಿಯತಕ್ಕದ್ದು. ಇದನ್ನು ‘ದಯಾ’ ಎಂದು ತಿಳಿಯತಕ್ಕದ್ದು. (41)
ದ್ವಿಜನಾದವನು ಗೃಹಸ್ಥಾಶ್ರಮಿಯಾದರೂ ಸರಿಯೆ; ಇಂತಹ ನಿಯಮಗಳನ್ನು ತನ್ನ ನಿಜ ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ಅವನಿಗೆ ಮೋಕ್ಷವು ಲಭಿಸುತ್ತದೆ. ಆನಂತರ ಅವನಿಗೆ ಈ ಸಂಸಾರದಲ್ಲಿ ಮತ್ತೊಮ್ಮೆ ಹುಟ್ಟಿ ಬರುವ ಸಮಸ್ಯೆ ಇರುವುದಿಲ್ಲ. (42)
ಪವಿತ್ರಾಗ್ನಿ (sacred Fires)ಯ ನಿರಂತರ ಉಪಾಸನೆ, ‘ವಿಶ್ವದೇವರು’ಗಳ ಪೂಜೆಯನ್ನು ‘ಇಷ್ಟ’ (ಪವಿತ್ರವಾದ ವ್ರತಾಚರಣೆ ಅಥವಾ ಯಜ್ಞ) ಎಂದು ಕರೆಯುತ್ತಾರೆ. (43)
(ಮುಂದುವರಿಯುವುದು)

ಅತ್ರಿ ಸಂಹಿತೆ
ಮೂಲ: ಪ್ರೊ. ಮನ್ಮಥನಾಥ ದತ್ತ
ಕನ್ನಡಕ್ಕೆ: ಗೋಪಾಲ ಬಿ.ಶೆಟ್ಟಿ

ಖುಷಿಖುಷಿ ಕೇಳಿತು: ‘ಬೇಸರದಲ್ಲೂ ಏಕೆ ನಗುತ್ತಿರುವೆ?
ಹೇಳಿದೆ: ‘ಬಳಲಿದ್ದಾನೆ, ಬೆಂದವಗೆ ಬಿಸಿಲ ಸುರಿಸಲೆ?

ಗೆಳೆಯಾ
ಖುಷಿ ಯಾರನ್ನೂ ವಂಚಿಸುವುದಿಲ್ಲ
ಅದನ್ನಾರೂ ವಂಚಿಸಲಾರರು

ಮುಖದ ನಿರಿಗೆಗಳಲ್ಲಿ
ಬೆವರ ಪರಿಮಳದಲ್ಲಿ
ಹಿಡಿದ ಕೈಯ ಬಿಸಿಯಲ್ಲಿ
ಗುಟ್ಟಾದ ತಾವುಗಳಲ್ಲಿ
ಅಡಗಿರುವ ಅದು
ಹುಟ್ಟುವುದಿಲ್ಲ
ಕಟ್ಟು ಒಡೆದು ಹರಿಯಗೊಡಬೇಕು
ಅಷ್ಟೇ..


- ಡಾ . ಎಚ್ . ಎಸ್ ಅನುಪಮ

-ಚಿತ್ರ : ಗೂಗಲ್ ಕೃಪೆ

ಸಂಜೆ - ದ್ವಿಪದಿ
ಹಗಲ ವ್ಯವಹಾರ ಮುಗಿಯಿತೆನ್ನುವ ಹಾಗೆ ಎದ್ದಿದೆ ವಿಜಯದ ಕೆಂದೂಳಿ ಪಶ್ಚಿಮದಲ್ಲಿ
ಈ ಹಗಲ ಬದುಕಿಗೆ ಕನ್ನಡಿ ಹಿಡಿವ ಆಕಾಶ ಬಟ್ಟಲು ನೀಲಿಗಟ್ಟಿದೆ ವಿಷ ಕುಡಿದ ಹಾಗೆ

ಚಿತ್ರ : ಗೂಗಲ್ ಕೃಪೆ

ದ್ವಿಪದಿ
ಇರುಳೆ ಹರಾಜುಕಟ್ಟೆಯಲ್ಲಿ ಏನನ್ನಾದರೂ ಇಡು ಇದು ಮಾರಾಟವಾಗದೆಂಬ ಮಾತೇ ಇಲ್ಲ
ಕೊಳ್ಳಲು ಸರದಿ ನಿಂತವರ ಸಾಲು ಸಾಲಿನಲ್ಲಿ ಹಗಲು ಮುಂದೆ ನಿಂತಿದೆ

ಚಿತ್ರ ;ಗೂಗಲ್ ಕೃಪೆ

Sunday, October 30, 2011

ದಲಿತ ಸಂಘರ್ಷ ಸಮಿತಿಗೆ ‘ಬಂಧುತ್ವ’ದ ತುರ್ತು ಅಗತ್ಯ : ಸಾಹಿತಿ-ಚಿಂತಕ ದೇವನೂರ ಮಹಾದೇವ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿ

ಮೈಸೂರು, ಅ. 30: ಸೈದ್ಧಾಂತಿಕ ಕಾರಣಗಳಿಗಾಗಿ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಿ ವಿಂಗಡಣೆಯಾಗಿರುವುದು ಅಸಹಜವೇನಲ್ಲ ಎಂದು ಅಭಿಪ್ರಾಯಪಟ್ಟಿರುವ ಖ್ಯಾತ ಸಾಹಿತಿ-ಚಿಂತಕ ದೇವನೂರ ಮಹಾದೇವ, ಆದರೆ ವಿವಿಧ ಬಣಗಳು ಹಾಗೂ ಕಾರ್ಯಕರ್ತರ ಮಧ್ಯೆ ‘ಬಂಧುತ್ವ’ದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ರವಿವಾರ ಏರ್ಪಡಿಸಲಾಗಿದ್ದ ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ‘ದಸಂಸ ಹೋರಾಟದ ಪಯಣ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ದಲಿತ ಸಂಘರ್ಷ ಸಮಿತಿಯ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದ ದೇವನೂರ, ಸಂಘಟನೆಯಲ್ಲಿ ಬಂಧುತ್ವದ ತುರ್ತು ಅಗತ್ಯ ಮತ್ತು ಅನಿವಾರ್ಯದ ಪ್ರತಿಪಾದನೆಗಾಗಿ ತನ್ನ ಕೆಲವು ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವರದಯ್ಯ, ದೊಡ್ಡಣ್ಣ, ಸತ್ಯನಾರಾಯಣ ಶೆಟ್ಟಿ, ಕುಪ್ಪೆ ನಾಗರಾಜ್ ಮತ್ತು ಪಳನಿಯಪ್ಪ ಎಂಬ ಐವರು ಗೆಳೆಯರಿದ್ದರು. ಕ್ರಮವಾಗಿ ಅವರು ದಲಿತ (ಬಲಗೈ), ದಲಿತ (ಎಡಗೈ), ಕೊರಮ, ದೊಂಬಿದಾಸ ಹಾಗೂ ಪೌರಕಾರ್ಮಿಕ ಜನಾಂಗಕ್ಕೆ ಸೇರಿದ್ದರು. ಪಳನಿಯಪ್ಪ ಈ ಗುಂಪಿನ ನಾಯಕನಾಗಿದ್ದನು. ಅವರೆಲ್ಲರೂ ಸಾಂಘಿಕ ಪ್ರಯತ್ನದ ಮೂಲಕ ದಲಿತ ಸಂಘರ್ಷ ಸಮಿತಿಯನ್ನು ಸಂಘಟಿಸುತ್ತಿದ್ದರು. ಈ ಗೆಳೆಯರ ಮಧ್ಯೆ ಅಂದು ‘ಬಂಧುತ್ವ’ ಎಂಬುದು ಸಹಜ ಮತ್ತು ಅಪ್ರಜ್ಞಾಪೂರ್ವಕವಾಗಿತ್ತು.ಆದರೆ ಇಂದು ಅಂತಹ ‘ಬಂಧುತ್ವದ ಆದರ್ಶ’ ನಮ್ಮೆಲ್ಲರ ನಡುವೆ ಪ್ರಜ್ಞಾಪೂರ್ವಕವಾಗಿ ಏರ್ಪಡಬೇಕಾಗಿದೆ ಎಂದು ಅವರು ಉಪಮೆಯ ಮೂಲಕ ವಿವರಿಸಿದರು.

ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ದಿವಂಗತ ಪ್ರೊ.ಬಿ.ಕೃಷ್ಣಪ್ಪ, ಕವಿ ಡಾ.ಸಿದ್ದಲಿಂಗಯ್ಯ ಮತ್ತು ನನ್ನ ಮಧ್ಯೆ ಸೈದ್ಧ್ದಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಕೃಷ್ಣಪ್ಪ ಕಟ್ಟಾ ಅಂಬೇಡ್ಕರ್ ವಾದಿ, ಸಿದ್ದಲಿಂಗಯ್ಯ ಕಮ್ಯುನಿಸ್ಟ್ ಹಾಗೂ ನಾನು ಸಮಾಜವಾದಿ. ಹೀಗಾಗಿ ನಾವು ಮೂವರು ಅನೇಕ ಸಭೆ, ಸಮಾರಂಭ ಹಾಗೂ ವೇದಿಕೆಗಳಲ್ಲಿ ಬಹಿರಂಗವಾಗಿಯೇ ಜಗಳ ಆಡುತ್ತಿದ್ದೆವು. ಆದರೆ ನಂತರ ಪರಸ್ಪರ ಹುಡುಕಿಕೊಂಡು ಹೋಗಿ, ಭೇಟಿಯಾಗಿ ಮಾತನಾಡುತ್ತಿದ್ದೆವು. ಸೈದ್ಧ್ದಾಂತಿಕ ಭಿನ್ನಾಭಿಪ್ರಾಯವಿದ್ದಾಗ್ಯೂ ನಮ್ಮ ಮಧ್ಯೆ ಬಂಧುತ್ವವಿದ್ದುದೇ ಇದಕ್ಕೆ ಕಾರಣ ಎಂದು ಅವರು ಸ್ಮರಿಸಿದರು. ದಲಿತ ಸಂಘರ್ಷ ಸಮಿತಿ ಅನೇಕ ಬಣಗಳಾಗಿ ವಿಭಜನೆಯಾಗಿದ್ದರೂ ಯಾವೊಂದು ಬಣ ಕೂಡ ಈವರೆಗೆ ಮತೀಯವಾದಿಗಳ ಜೊತೆ ಗುರುತಿಸಿಕೊಂಡಿಲ್ಲ. ಇದು ಸಂಘಟನೆಯ ಮೂಲ ಹಾಗೂ ದೊಡ್ಡಗುಣ ಎಂದು ಮಹಾದೇವ ಬಣ್ಣಿಸಿದರು.

ವಿಚಾರಗೋಷ್ಠಿಯ ಶೀರ್ಷಿಕೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಿನ್ನೆ-ಪರವಾಗಿಲ್ಲ, ಇಂದು-ಚೆನ್ನಾಗಿಲ್ಲ, ನಾಳೆ-ಏನಾಗುತ್ತದೋ ಗೊತ್ತಿಲ್ಲ. ಈ ನಡುವೆ, ನಿನ್ನೆಯನ್ನು ಬದಲಾಯಿಸುವುದು ಅಸಾಧ್ಯ. ಆದರೆ ಈವತ್ತು ವಿವೇಕದಿಂದ ವರ್ತಿಸಿದರೆ ನಾಳೆಯ ಬದುಕು ಚೆನ್ನಾಗಿರಲು ಸಾಧ್ಯ ಎಂದು ವ್ಯಾಖ್ಯಾನಿಸಿದರು. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಂದಾಗದಿದ್ದರೂ ಪರವಾಗಿಲ್ಲ. ಆದರೆ ಎಲ್ಲ ಬಣ ಹಾಗೂ ಕಾರ್ಯಕರ್ತರು ಕನಿಷ್ಠ ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳು ರೈತ ಸಂಘ ಸೇರಿದಂತೆ ಸಮಾನಮನಸ್ಕ ಎಲ್ಲ ಸಂಘಟನೆಗಳನ್ನು ಒಳಗೊಳ್ಳಬೇಕು ಎಂದು ದೇವನೂರು ಆಶಿಸಿದರು.

ನಿರಾಶೆಯ ನಡುವೆಯೂ ಆಶಾವಾದ: ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಮರ್ಶಕ ಪ್ರೊ.ಜಿ.ಎಚ್.ನಾಯಕ್ ಮಾತನಾಡಿ, ಗಾಂಧೀಜಿ ಹಿಂದುತ್ವವಾದಿ ಧೋರಣೆ ಹೊಂದಿದ್ದರು ಎಂಬುದು ಸುಳ್ಳಲ್ಲ. ಅವರ ಹೋರಾಟದ ಕಾಲಘಟ್ಟದಲ್ಲಿ ಭಾರತೀಯತೆ ಎಂಬುದು ಹಿಂದುತ್ವದ ಭಾಗವೇ ಆಗಿತ್ತು. ಆದುದರಿಂದ ಭಾರತೀಯತೆ, ಅರ್ಥಾತ್ ಹಿಂದುತ್ವದ ವೈಭವೀಕರಣ ಅಂದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿತ್ತು. ಆದರೆ, ಪ್ರಸ್ತುತ ಹಿಂದುತ್ವದ ರೂಪ ಹಾಗೂ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಗಾಂಧಿಯ ರಾಮ ಮತ್ತು ಬಿಜೆಪಿಯ ರಾಮ ಯಾರೆಂಬುದನ್ನು ಪತ್ತೆ ಹಚ್ಚಲು ತನಿಖಾ ಸಮಿತಿಯನ್ನೇ ನೇಮಕ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಸ್ವಾತಂತ್ರದ ಸಂದರ್ಭದಲ್ಲಿ ಭಾರತೀಯ ವಿದ್ಯಾವಂತರ ಸಂಖ್ಯೆ ವಿರಳವಾಗಿತ್ತು. ಈಗ ಎಲ್ಲರೂ ವಿದ್ಯಾವಂತರು; ಆದರೆ ಜನಪರವಾಗಿ ಚಿಂತಿಸುವವರ ಕೊರತೆಯಿದೆ ಎಂದು ಅವರು ವಿಷಾದಿಸಿದರು. ರಾಜಕೀಯ ಪಕ್ಷಗಳು ಗಬ್ಬೆದ್ದುಹೋಗಿವೆ. ದುಷ್ಟಾಚಾರ ಮತ್ತು ಭ್ರಷ್ಟಾಚಾರಕ್ಕೆ ಯಾವ ಪಕ್ಷವೂ ಹೊರತಲ್ಲ. ಆದರೆ ಪ್ರಮಾಣದಲ್ಲಷ್ಟೇ ವ್ಯತ್ಯಾಸವಿದೆ ಎಂದು ಪ್ರೊ.ನಾಯಕ್ ನುಡಿದರು. ನಡುವೆಯೂ ದಲಿತ ಸಂಘರ್ಷ ಸಮಿತಿ, ರೈತ ಸಂಘ ಹಾಗೂ ಕೆಲವು ಮಹಿಳಾ ಸಂಘಟನೆಗಳ ಬಗ್ಗೆ ವೈಯಕ್ತಿಕವಾಗಿ ನಾನು ಈಗಲೂ ಆಶಾವಾದಿಯಾಗಿದ್ದೇನೆ. ಆದುದರಿಂದ ಈ ಸಂಘಟನೆಗಳು ಒಗ್ಗೂಡಿ, ಜೀವಂತಿಕೆಯನ್ನು ಪಡೆದುಕೊಂಡು ಹೋರಾಟ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.

ಆತ್ಮವಿಮರ್ಶೆಗೆ ಸಲಹೆ:
ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಶಿವಸುಂದರ್, ಚಳವಳಿ ಹಾಗೂ ಚಳವಳಿಗಾರರಿಗೆ ಆತ್ಮವಿಮರ್ಶೆಯ ಕೊರತೆಯಿದ್ದು, ಅದನ್ನು ನಿವಾರಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿ, ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿಎಲ್‌ನ ಡಾ.ವಿ.ಲಕ್ಷ್ಮೀನಾರಾಯಣ ವಿಚಾರಗೋಷ್ಠಿಯ ವಿಷಯ ಕುರಿತು ಮಾತನಾಡಿದರು. ಬಿ.ಡಿ.ಶಿವಬುದ್ಧಿ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಅಂಬೇಡ್ಕರ್ ಎಂಬ ಜ್ಯೋತಿ ಮತ್ತು ಕೋಮುವಾದ ಎಂಬ ಕೋತಿ

ಸನತಕುಮಾರ ಬೆಳಗಲಿರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅಸ್ತಿತ್ವಕ್ಕೆ ಬಂದು 86 ವರ್ಷಗಳು ಗತಿಸಿದರೂ ಅದು ತನ್ನದೇ ಆದ ಹೆಮ್ಮೆಪಡುವ, ಅಭಿಮಾನದಿಂದ ಹೇಳಿಕೊಳ್ಳುವ ಪರಂಪರೆಯನ್ನು ಕಟ್ಟಿಸಿಕೊಳ್ಳಲು ಅದಕ್ಕೆ ಆಗಲೇ ಇಲ್ಲ. ಇಡೀ ರಾಷ್ಟ್ರ ಒಪ್ಪಿಕೊಳ್ಳುವ ಒಬ್ಬನೇ ಒಬ್ಬ ನಾಯಕನೂ ಈ ಸಂಘದಿಂದ ಬರಲಿಲ್ಲ.ದೇಶಕ್ಕಾಗಿ, ಜನತೆಗಾಗಿ ಹೋರಾಟ ನಡೆಸಿದ ಚರಿತ್ರೆಯೂ ಇದಕ್ಕಿಲ್ಲ.ಇಡೀ ರಾಷ್ಟ್ರ ಸ್ವಾತಂತ್ರ್ಯ ಆಂದೋಲನದ ಅಗ್ನಿಕುಂಡದಲ್ಲಿದ್ದಾಗ ಈ ಕರಿಟೋಪಿ ಕೂಟ ಬ್ರಿಟಿಷರ ಆಳರಸರ ಫಲಾನುಭವಿಯಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಪೊಲೀಸರಿಗೆ ಹಿಡಿದು ಕೊಡುವುದೇ ಆಗ ಈ ಸಂಘದ ‘ರಾಷ್ಟ್ರಸೇವೆ’ಯಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಗಾಂಧೀಜಿಯವರನ್ನು ಮುಗಿಸಿದ್ದು, ಗುಜರಾತನ್ನು ರಕ್ತದಲ್ಲಿ ತೋಯಿಸಿದ್ದು, ರಥಯಾತ್ರೆ ಎಂಬ ರಕ್ತಯಾತ್ರೆ ನಡೆಸಿದ್ದು ಇವರ ಸಾಧನೆ.ಅಂತಲೇ ಸಂಘದಿಂದ ಒಬ್ಬನೇ ಒಬ್ಬ ರಾಷ್ಟ್ರನಾಯಕ ಹೊರಹೊಮ್ಮಲಿಲ್ಲ. ಉದುರಿ ಬಿದ್ದವರೆಲ್ಲ ನಾತೂರಾಮ ಗೋಡ್ಸೆ, ಆಪ್ಟೆ, ಗೋಳ್ವಲ್ಕರ್, ನರೇಂದ್ರ ಮೋದಿ, ಅಡ್ವಾಣಿ,ಬಿ.ಎಸ್.ಯಡಿಯೂರಪ್ಪ, ತೊಗಾಡಿಯಾ, ಮುತಾಲಿಕ್, ಸಾಧ್ವಿ ಪ್ರಜ್ಞಾಸಿಂಗ್‌ಳಂಥ ಕಪ್ಪೆಚಿಪ್ಪುಗಳು. ಇಂಥವರಿನ್ನುಟ್ಟುಕೊಂಡು ಜನರ ಬಳಿ ಹೋಗಲು ಅದಕ್ಕೆ ಮುಖವಿಲ್ಲ.

ವಾಜಪೇಯಿಯಂಥ ಮುಖವಾಡ ಬೇಕು. ಅಂತಲೇ ಆರ್‌ಎಸ್‌ಎಸ್, ವಿಎಚ್‌ಪಿ ಮುಂತಾದ ಸಂಘಟನೆ ಗಳು ವೇದಿಕೆಗಳ ಮೇಲೆ ತಮ್ಮ ನಾಯಕರ ಬದಲಿಗೆ ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್, ಕನಕದಾಸ, ನಾರಾಯಣಗುರು, ಬಸವಣ್ಣ ಮೊದಲಾದ ಸಮಾಜ ಸುಧಾರಕರ, ಕ್ರಾಂತಿಕಾರರ ಭಾವಚಿತ್ರ ಹಾಕಿ ತಮ್ಮದಲ್ಲದ ಪರಂಪರೆಯ ವಾರಸುದಾರಿಕೆಗಾಗಿ ಯತ್ನಿಸುತ್ತಲೇ ಬಂದಿದೆ.

ಆರ್‌ಎಸ್‌ಎಸ್ ಇಂಥ ಹುನ್ನಾ ರಕ್ಕೆ ಬಳಸಿಕೊಂಡ ಮಹಾಚೇತನ ಗಳಲ್ಲಿ ಡಾ. ಅಂಬೇಡ್ಕರ್ ಕೂಡ ಒಬ್ಬರು. ಒಂದೆಡೆ ಅದೇ ಪರಿವಾರದ ಚಿಂತನ ಚಿಲುಮೆ ಅರುಣ್‌ಶೌರಿ ‘ವರ್ಷಿಪಿಂಗ್ ಫಾಲ್ಸ್‌ಗಾಡ್’ ಎಂಬ ಪುಸ್ತಕ ಬರೆದು ಬಾಬಾ ಸಾಹೇಬರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಾರೆ.ಇನ್ನೊಂದೆಡೆ ಅದೇ ಸಂಘದ ಇನ್ನೊಂದು ಚಿಂತನ ಚಿಲುಮೆ ದತ್ತೋಪಂತ ಠೇಂಗಡಿ ‘ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್’ ಎಂಬ ಪುಸ್ತಕ ಬರೆದು ಅಂಬೇಡ್ಕರ್‌ರನ್ನು ಹಿಂದುತ್ವದ ಗಲ್ಲುಗಂಬಕ್ಕೆ ಏರಿಸುತ್ತಾರೆ.ಇವೆರಡು ಇಮ್ಮುಖ ಕುತಂತ್ರಗಳನ್ನು ಈ ದೇಶದ ಮನುವಾದಿ ಶಕ್ತಿಗಳು ಮೂರು ಸಾವಿರ ವರ್ಷದಿಂದ ನಡೆಸುತ್ತ ಬಂದಿವೆ. ಈಗಲೂ ನಿರ್ಲಜ್ಯವಾಗಿ ಮುಂದುವರಿಸಿವೆ. ಆರ್‌ಎಸ್‌ಎಸ್ ಮನುವಾದದ ಆಧುನಿಕ ರೂಪ.

ಆರ್‌ಎಸ್‌ಎಸ್ ಹಿರಿಯ ನಾಯಕರಾಗಿದ್ದ ದತ್ತೋಪಂತ ಠೇಂಗಡಿಯವರು ಬರೆದ ಈ ಪುಸ್ತಕವನ್ನು (ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್) ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಯಿತು. ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆ ದಿನ ಭಾಷಣ ಮಾಡುತ್ತಾ, ‘ಡಾ. ಅಂಬೇಡ್ಕರ್ ಹಿಂದೂರಾಷ್ಟ್ರ ರಚನೆ ಬಗ್ಗೆ ಮಾತನಾಡಿದ್ದರು, ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದಿದ್ದರು. ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬೇಕು ಎಂದು ಹೇಳಿದ್ದರು’ ಎಂದು ಹಾಡಹಗಲೇ ಹಸಿ ಸುಳ್ಳು ಹೇಳಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರದುರ್ಗ ಮುರುಘಾಮಠದ ಶರಣರು ಹೊಸಬಾಳೆ ಮಾತಿಗೆ ಗೋಣು ಆಡಿಸಿದರು.
ಶಿವಮೊಗ್ಗ ಜಲ್ಲೆಯ ಈ ಹೊಸಬಾಳೆ ಎಂಬತ್ತರ ದಶಕದಲ್ಲಿ ಎಬಿವಿಪಿ ಕರ್ನಾಟಕ ಘಟಕದ ಕಾರ್ಯ ದರ್ಶಿಯಾಗಿದ್ದರು. ಆಗ ಒಮ್ಮೆ ಜಮಖಂಡಿಗೆ ಬಂದಿದ್ದ (ಅನಂತಕುಮಾರ್ ಜೊತೆಗಿದ್ದರು) ಅವರು ಇದೇ ರೀತಿ ಸುಳ್ಳಿನ ಬುರುಡೆಯನ್ನು ಬಿಚ್ಚಿಟ್ಟಿದ್ದರು. ಆಗ ಸಭೆಯಲ್ಲಿದ್ದ ಎಐಎಸ್‌ಎಫ್ ಕಾರ್ಯಕರ್ತರು ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಪಟ್ಟು ಹಿಡಿದರು. ಇಲ್ಲದ್ದನ್ನು ಇದೆ ಎಂದು ಹೇಳಿ ಪಾರಾಗಬಹುದು. ಆದರೆ ಅದನ್ನು ತೋರಿಸು ಅಂದರೆ ಎಲ್ಲಿಂದ ತೋರಿಸಬೇಕು ಅಂತಲೇ ಅಂದು ಫಜೀತಿಪಟ್ಟಿದ್ದ ಹೊಸಬಾಳೆ ಮತ್ತೆ ಉತ್ತರಿಸಲು ಹೋಗಿರಲಿಲ್ಲ.

ದತ್ತಾತ್ರೇಯ ಹೊಸಬಾಳೆ ಅವರೇ ಯಾಕೆ ಇಂಥ ಸುಳ್ಳು ಹೇಳುತ್ತೀರಿ? ಅಂಬೇಡ್ಕರ್, ಶಿವಾಜಿ, ಭಗತ್‌ಸಿಂಗ್‌ರಂಥವರ ಹೆಸರನ್ನು ಯಾಕೆ ಈ ಪರಿ ಲಜ್ಜೆಗೆಟ್ಟು ದುರುಪಯೋಗ ಮಾಡಿಕೊಳ್ಳುತ್ತೀರಿ? ಹಿಂದೂರಾಷ್ಟ್ರ ಕಲ್ಪನೆಯನ್ನು ಅಂಬೇಡ್ಕರ್ ಅತ್ಯುಗ್ರವಾಗಿ ವಿರೋಧಿಸಿದ್ದರು. ‘ಒಂದು ವೇಳೆ ಹಿಂದೂರಾಷ್ಟ್ರ ಸ್ಥಾಪಿಸಲ್ಪಟ್ಟರೆ, ಅದು ದೇಶಕ್ಕೆ ಒದಗಿದ ಮಹಾವಿಪತ್ತು ಆಗಿರುತ್ತದೆ. ಹಿಂದೂಗಳೇನೆ ಹೇಳಲಿ, ಹಿಂದೂಧರ್ಮ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ವಿರೋಧಿಯಾಗಿದೆ. ಆದ್ದರಿಂದ ಯಾವುದೇ ಬೆಲೆ ತೆತ್ತಾದರೂ ಹಿಂದೂರಾಷ್ಟ್ರ ಸ್ಥಾಪನೆಯಾಗದಂತೆ ತಡೆಯಬೇಕು’ ಎಂದು ಹೇಳಿದ್ದರು. ಇದು ‘ಪಾಕಿಸ್ತಾನದ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ (ಪುಟ-538) ಎಂಬ ಪುಸ್ತಕದಲ್ಲಿ ದಾಖಲಾಗಿದೆ.

ಇಂಥ ಮಹಾಚೇತನ ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಹೊಸಬಾಳೆಯಂಥ ನಾಯಕರು ಎಚ್ಚರ ವಹಿಸಬೇಕು. ಕನ್ನಡಕ್ಕೆ ಬಂದ ಈ ಪುಸ್ತಕವನ್ನು ಬರೆದ ದತ್ತೋಪಂತ ಠೇಂಗಡಿ ಆರ್‌ಎಸ್‌ಎಸ್ ನಾಯಕರಾಗಿದ್ದಾರೆಂದು ಗೊತ್ತು. ಕೊನೆಯ ಐದು ವರ್ಷ ಈ ಠೇಂಗಡಿ ಅಂಬೇಡ್ಕರ್ ಒಡನಾಟ ಹೊಂದಿದ್ದರೆಂದು ಸಂಘದ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವಾವಗಿ ಈ ಠೇಂಗಡಿಯನ್ನು ಗೂಢಚಾರಿಕೆ ಮಾಡಲು ಆರ್‌ಎಸ್‌ಎಸ್, ಅಂಬೇಡ್ಕರ್ ಬಳಿ ಕಳುಹಿಸಿತ್ತು. ಹಿಂದೂತ್ವದ ಹುನ್ನಾರದ ವಿರುದ್ಧ ಪ್ರತ್ಯೇಕ ದಲಿತ ಸಂಘಟನೆಯನ್ನು ಕಟ್ಟಲು ಅಂಬೇಡ್ಕರ್ ಆಗ ಕ್ರಿಯಾಶೀಲರಾಗಿದ್ದರು. ಅಂಥ ಸಭೆಗಳಲ್ಲಿ ಸಂಘಟಕರ ಕಣ್ಣುತಪ್ಪಿಸಿ, ಆಗಿನ್ನೂ ಯುವಕರಾಗಿದ್ದ ಠೇಂಗಡಿ ಓಡಾಡುತ್ತಿದ್ದರಂತೆ. ಇದರ ಬಗ್ಗೆ ವಿವರವಾಗಿ ಇನ್ನೊಮ್ಮೆ ಬರೆಯ ಬೇಕಾಗಿದೆ.

ಡಾ. ಅಂಬೇಡ್ಕರ್‌ರ ಸಂಘಟನೆಯನ್ನು ನಾಶಪಡಿಸಲು ಗೂಢಚಾರಿಕೆ ಮಾಡಿದ ಈ ವ್ಯಕ್ತಿ ಮುಂದೆ ಕಮ್ಯುನಿಸ್ಟ್ ಸಂಘಟನೆಗಳಲ್ಲೂ ನುಸುಳಿ ಅಲ್ಲೂ ಇದೇ ಕೆಲಸ ಮಾಡಿದರು. ಕಮ್ಯುನಿಸ್ಟರು ಕಾರ್ಮಿಕರನ್ನು, ರೈತರನ್ನು, ಮಹಿಳೆಯರನ್ನು ಹೇಗೆ ಸಂಘಟಿಸುತ್ತಾರೆ ಎಂಬುದನ್ನು ತಿಳಿದುಕೊಂಡ ಠೇಂಗಡಿ ಮುಂದೆ ಭಾರತೀಯ ಮಜದೂರ ಸಂಘ, ಎಬಿವಿಪಿ, ಕಿಸಾನ ಸಂಘ ಮುಂತಾದವು ಕಟ್ಟಿ ಸಂಘಪರಿವಾರದ ಜಾಲ ವಿಸ್ತರಿಸಲು ನೆರವಾದರು. ಈ ಠೇಂಗಡಿಯನ್ನು ಕೆಲ ಬಾರಿ ಹತ್ತಿರದಿಂದ

ನೋಡಿ ಭಾಷಣ ಕೇಳಿದ ನನಗೆ ಆ ಮಾತುಗಳು ಎರವಲು ಮಾತುಗಳು ಎಂದು ತಿಳಿಯಿತು.ಆರ್‌ಎಸ್‌ಎಸ್ ಈಗ ಹತಾಶ ಸ್ಥಿತಿಗೆ ತಲುಪಿದೆ.ಮಾಲೆಗಾಂವ್, ನಾಂದೇಡ, ಸಂಜೋತಾ ಮುಂತಾದ ಬಾಂಬ್ ಸ್ಫೋಟದಲ್ಲಿ ಈ ನಕಲಿ ರಾಷ್ಟ್ರಪ್ರೇಮಿ ಸಂಘದ ಸಾಧ್ವಿಗಳು ಸಿಕ್ಕು ವಿಲಿವಿಲಿ ಒದ್ದಾಡುತ್ತಿದ್ದಾರೆ. ಇನ್ನೊಂದೆಡೆ ಆಕಸ್ಮಿಕವಾಗಿ ದೊರೆತ ಅಧಿಕಾರ ಬಳಸಿಕೊಂಡು ತಿನ್ನಬಾರದ್ದನ್ನು ತಿಂದು ಸಂಘದ ಸ್ವಯಂಸೇವಕರಾದ ಬಿ.ಎಸ್. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನೀರಾ ರಾಡಿಯಲ್ಲಿ ಮುಳುಗಿ ಮೇಲೆದ್ದ ಅನಂತಕುಮಾರ್ ಎಂಬ ಸ್ವಯಂಸೇವಕ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ ಎಂದು ಯಡಿಯೂರಪ್ಪ ಗುಂಪಿನವರೇ ಹೇಳುತ್ತಿದ್ದಾರೆ.

ಹೀಗೆ ತನ್ನ ಮೈತುಂಬ ಹೊಲಸು ಮತ್ತಿಕೊಂಡು ನಿಂತ ಪರಿವಾರದ ರಕ್ಷಣೆಗೆ ಈಗಿರುವುದು ದೇಶ-ವಿದೇಶಿ ಲೂಟಿಕೋರ, ಬಂಡವಾಳಶಾಹಿಗಳಿಂದ ಸಂಗ್ರಹಿಸಿದ ಗುರುದಕ್ಷಿಣೆ ಎಂಬ ಕಪ್ಪುಹಣ. ಈ ಕಪ್ಪು ಹಣಕ್ಕೆ ರಕ್ಷಣೆ ನೀಡುತ್ತಿರುವವರು ಕಪಟ ಮಠಾಧೀಶರುಗಳು. ಈ ಹಣವನ್ನು ಬಳಸಿಕೊಂಡೇ ಜನರನ್ನು ಇನ್ನಷ್ಟು ದಾರಿ ತಪ್ಪಿಸಲು ಮತ್ತು ಕಲಹದ ಕಿಡಿ ಹೊತ್ತಿಸಲು ಈ ಸಂಘ ಪಿತೂರಿ ನಡೆಸುತ್ತಲೇ ಬಂದಿದೆ. ಅದಕ್ಕಾಗಿ ಅಂಬೇಡ್ಕರ್, ಭಗತ್ ಸಿಂಗ್‌ರ ಹೆಸರುಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ಇಂಥ ಕೇಸರಿ ಖೆಡ್ಡಾಕ್ಕೆ ಬೀಳುವಷ್ಟು ದಲಿತ, ಶೂದ್ರ ಸಮುದಾಯದವರು ಪ್ರಜ್ಞಾಹೀನ ರಾಗಿಲ್ಲ ಎಂಬುದನ್ನು ಈ ನಕಲಿ ರಾಷ್ಟ್ರಭಕ್ತರು ಮರೆಯಬಾರದು.

ಹಿಂದುತ್ವದ ಮುಸುಕಿನಲ್ಲಿ ಕೆಲ ಹಿಂದುಳಿದ ವರ್ಗಗಳನ್ನು ಆಪೋಶನ ಮಾಡಿಕೊಳ್ಳುವಲ್ಲಿ ಈ ಕರಾಳ ಫ್ಯಾಸಿಸ್ಟ್ ಪರಿವಾರ ಕೊಂಚ ಯಶಸ್ವಿಯಾಗಿದೆ. ಕರ್ನಾಟಕ ಕರಾವಳಿ ಪ್ರದೇಶದ ಬಿಲ್ಲವ, ಮೊಗವೀರ ಯುವಕರಿಗೆ ಮತಾಂಧತೆಯ ಮತ್ತೇರಿಸಿ ಅಮಾಯಕರ ಮೇಲೆ ಅವರ ಮೂಲಕ ಹಲ್ಲೆ ನಡೆಸಿ, ಈ ಶೂದ್ರ ಯುವಕರು ಜೈಲು ಮತ್ತು ಕೋರ್ಟ್‌ಗೆ ಎಡತಾಕುವಂತೆ ಮಾಡಿದ್ದು ಇದೇ ಈ ಕಲ್ಲಡ್ಕ ಭಟ್ಟರ ಪರಿವಾರ. ಆದರೆ ಈ ಪರಿವಾರದ ವಂಚನೆಯ ಜಾಲಕ್ಕೆ ದಲಿತ ಸಮುದಾಯ ಈವರಗೆ ಬಲಿ ಬಿದ್ದಿಲ್ಲ. ಆದರೂ ಆರ್‌ಎಸ್‌ಎಸ್ ಈ ಯತ್ನ ಕೈಬಿಟ್ಟಿಲ್ಲ. ದಲಿತರನ್ನು ಬಲಗೈ ಮತ್ತು ಎಡಗೈ ಎಂದು ವಿಭಜಿಸಲು ಮತ್ತು ವಿಭಜಿಸಿ ಒಡೆದಾಳಲು ಕಸರತ್ತು ನಡೆಸುತ್ತಲೇ ಇದೆ.

ಅದೆಲ್ಲ ವಿಫಲವಾದಾಗ ಅಂಬೇಡ್ಕರ್ ಭಜನೆ ಶುರುವಾಗುತ್ತದೆ. ದಲಿತ ಸಮುದಾಯದ ಬಂಧುಗಳು ಸಂಘ ಪರಿವಾರದ ಹಿಂದುತ್ವವಾದಿ ಕತ್ತಲಕೂಪಕ್ಕೆ ಬೀಳದಂತೆ ತಡೆದದ್ದು ಡಾ. ಅಂಬೇಡ್ಕರ್ ಎಂಬ ಬೆಳಕು. ಅಂಬೇಡ್ಕರ್ ಸಾಹಿತ್ಯವನ್ನು ಓದಿದ ಯಾವುದೇ ಸಮುದಾಯದ ವ್ಯಕ್ತಿಯಿರಲಿ, ಆತ ನಿದ್ದೆಗಣ್ಣಿನಲ್ಲೂ ಆರ್‌ಎಸ್‌ಎಸ್ ಎಂಬ ಹಾಳು ಬಾವಿಗೆ ಬೀಳುವುದಿಲ್ಲ. ‘ನಾನು ಹಿಂದುವಾಗಿ ಜನಿಸಿದ್ದರೂ ಹಿಂದುವಾಗಿ ಸಾಯುವುದಿಲ್ಲ’ ಎಂಬ ಅಂಬೇಡ್ಕರ್ ಅವರ ಒಂದೇ ನುಡಿಮುತ್ತು ಸಾಕು, ಯಾವ ದಲಿತನೂ ಆರೆಸ್ಸೆಸ್ ಶಾಖೆ ಎಂಬ ಖೆಡ್ಡಾಕ್ಕೆ ಬೀಳಲು ಇಷ್ಟಪಡುವುದಿಲ್ಲ.

ಅಂಬೇಡ್ಕರ್ ಎಂಬ ಚೇತನ ಬೆಂಕಿ ಇದ್ದಂತೆ. ಅದು ಜ್ಯೋತಿಯಾಗಿ ಬೆಳಕನ್ನು ನೀಡುತ್ತದೆ. ಆ ಬೆಳಕಿನ ಜ್ಯೋತಿ ಈ ದೇಶದ ಶೋಷಿತ ವರ್ಗಗಳ ಕೈದೀವಿಗೆಯಾಗಿದೆ. ಈ ಬೆಳಕನ್ನು ನಂದಿಸಲು ಕೇಸರಿ ಪರಿವಾರ ಕೈ ಹಾಕಿದರೆ, ಆ ಜ್ಯೋತಿ ಉರಿಯುವ ಪಂಜಾಗಿ ನಂದಿಸಲು ಬಂದ ಹಸ್ತವನ್ನೇ ಸುಟ್ಟು ಹಾಕುತ್ತದೆ ಎಂಬುದನ್ನು ಈ ನಯವಂಚಕರು ಮರೆಯಬಾರದು.

- ವಾರ್ತಾಭಾರತಿ

ನಿನ್ನೆ ದುಬೆ, ಇಂದು ಕುಲಕರ್ಣಿ, ನಾಳೆ ಯಾರು?ದಿನೇಶ್ ಅಮೀನ್ ಮಟ್ಟು

ಪರಮಾಪ್ತರು ಸಂಕಷ್ಟಕ್ಕೀಡಾದಾಗ ಎಂತಹ ಉಕ್ಕಿನ ಮನುಷ್ಯರೂ ಕುಗ್ಗಿಹೋಗುತ್ತಾರೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರದ್ದು ಇದೇ ಸ್ಥಿತಿ. ತಮಗೆ ರಾಜಕೀಯ ಸಲಹೆಗಾರ, ಮಾರ್ಗದರ್ಶಕ, ಗೆಳೆಯ ಎಲ್ಲವೂ ಆಗಿದ್ದ ಸುಧೀಂದ್ರ ಕುಲಕರ್ಣಿ ಅವರ ಬಂಧನದ ದು:ಖ ಬಹುಷ: ಅಡ್ವಾಣಿಯವರನ್ನು ಸಹಿಸಲಾಗದಷ್ಟು ಘಾಸಿಗೊಳಿಸಿದೆ.

ಈ ಕಾರಣದಿಂದಾಗಿಯೇ `ವೋಟಿಗಾಗಿ ನೋಟು ಪ್ರಕರಣದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬಿಜೆಪಿ ಸಂಸದರು ಆರೋಪಿಗಳೆಂದಾದರೆ ನಾನೂ ಆರೋಪಿ, ನನ್ನನ್ನೂ ಬಂಧಿಸಿ` ಎಂದು ಅವರು ಭಾವಾವೇಶದಿಂದ ಲೋಕಸಭೆಯಲ್ಲಿ ಗುಡುಗಿದ್ದು. ಅವರ ಈಗಿನ `ಜನಚೇತನ ಯಾತ್ರೆ`ಗೆ ಈ ಘಟನೆಯೂ ಒಂದು ಪ್ರೇರಣೆ ಎನ್ನಲಾಗುತ್ತಿದೆ.


ವೈಯಕ್ತಿಕವಾಗಿ ನಾನೂ ಬಲ್ಲ ಕನ್ನಡಿಗರಾದ ಸುಧೀಂದ್ರ ಕುಲಕರ್ಣಿ ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಅನುಭವ ಹೊಂದಿರುವ ಸಜ್ಜನ ಪತ್ರಕರ್ತ. ರಾಜಕೀಯದ ಮೋಹಪಾಶಕ್ಕೆ ಸಿಲುಕದೆ ಇದ್ದಿದ್ದರೆ ಅವರು ಈಗ ಯಾವುದಾದರೂ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರ ಕುರ್ಚಿಯಲ್ಲಿರುತ್ತಿದ್ದರು.ಖಂಡಿತ ಅವರ ಸ್ಥಾನ ಸೆರೆಮನೆಯಲ್ಲ. ಮೇಲ್ನೋಟದಲ್ಲಿಯೇ ಕುಲಕರ್ಣಿ ಬಂಧನದಲ್ಲಿನ ವಿರೋಧಾಭಾಸ ಕಾಣುತ್ತಿದೆ. `ವಿಶ್ವಾಸ ಮತಗಳಿಸಲು ದುಡ್ಡುಕೊಟ್ಟು ಮತ ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೊಳಗಾದವರು ನಿಶ್ಚಿಂತೆಯಾಗಿ ಅಧಿಕಾರದಲ್ಲಿದ್ದಾರೆ, ಇದನ್ನು ಬಯಲು ಮಾಡಲು ಹೊರಟವರು ಜೈಲಿನಲ್ಲಿದ್ದಾರೆ` ಎಂಬ ಬಿಜೆಪಿ ನಾಯಕರ ಹೇಳಿಕೆ, `ಸೀಟಿ ಊದುವವರಿಗೆ (ವಿಷಲ್ ಬ್ಲೋವರ್ಸ್‌) ರಕ್ಷಣೆ ಬೇಕು ಎನ್ನುವ ಅಡ್ವಾಣಿ ಅವರ ಕಳಕಳಿ, ಕುಲಕರ್ಣಿಯವರಿಗೆ ಆಗಿರುವ ಅನ್ಯಾಯ ಎಲ್ಲವೂ ಅರ್ಥಮಾಡಿಕೊಳ್ಳುವಂತಹದ್ದೇ. ಆದರೆ....

ಸರಿಯಾಗಿ ಹತ್ತು ವರ್ಷಗಳ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಪಕ್ಷದ ನಾಯಕರ ನಡೆ-ನುಡಿಗಳೆರಡೂ ಹೀಗಿರಲಿಲ್ಲವಲ್ಲಾ? ತೆಹೆಲ್ಕಾದ ತನಿಖಾ ತಂಡ ಆಗಿನ ಎನ್‌ಡಿಎ ಸರ್ಕಾರದ ರಕ್ಷಣಾ ಇಲಾಖೆಯೊಳಗಿನ ಹಗರಣಗಳ ಬೆನ್ನತ್ತಿ `ಕುಟುಕು ಕಾರ‌್ಯಾಚರಣೆ`ಯ ಮೂಲಕ ಹಿರಿಯ ಸೇನಾಧಿಕಾರಿಗಳು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಭ್ರಷ್ಟ ಮುಖಗಳನ್ನು ಬಯಲು ಮಾಡಿತ್ತು.

ತೆಹೆಲ್ಕಾ ರಹಸ್ಯವಾಗಿ ಚಿತ್ರೀಕರಿಸಿದ್ದ ಭ್ರಷ್ಟರ ಮುಖಗಳು 2001ರ ಮಾರ್ಚ್ ಹದಿಮೂರರಂದು ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡಾಗ ದೇಶದ ಜನ ಬೆಚ್ಚಿಬಿದ್ದಿದ್ದರು.

ಸೇನಾಧಿಕಾರಿಗಳು ಹೆಣ್ಣು ಮತ್ತು ಹೆಂಡಕ್ಕಾಗಿ ರಕ್ಷಣಾ ಇಲಾಖೆಯನ್ನೇ ಮಾರಾಟಕ್ಕಿಡಲು ಹೊರಟಿದ್ದನ್ನು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿಯೇ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಿರುವುದನ್ನು, ಬಿಜೆಪಿಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿರುವುದನ್ನು ದೇಶದ ಜನ ಕಣ್ಣಾರೆ ನೋಡಿದರೂ ನಂಬಲಾಗದೆ ಕಣ್ಣುಜ್ಜಿಕೊಂಡಿದ್ದರು.

ಒತ್ತಡಕ್ಕೆ ಸಿಕ್ಕಿ ಜಾರ್ಜ್ ಫರ್ನಾಂಡಿಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು, ಬಯಲಾದ ಹಗರಣಗಳ ತನಿಖೆಗೆ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗವನ್ನೂ ಎನ್‌ಡಿಎ ಸರ್ಕಾರ ರಚಿಸಿತ್ತು.

ವಿಚಿತ್ರವೆಂದರೆ ಹಗರಣಗಳ ಬಗ್ಗೆ ಮಾತ್ರವಲ್ಲ ತೆಹೆಲ್ಕಾ ಕಾರ‌್ಯಾಚರಣೆಯ `ಉದ್ದೇಶ`ವನ್ನೂ ತನಿಖೆ ಮಾಡಲು ಎನ್‌ಡಿಎ ಸರ್ಕಾರ ಆದೇಶ ನೀಡಿತ್ತು. ಅದರ ನಂತರದ ಸುಮಾರು ಮೂರುವರ್ಷಗಳ ಕಾಲ ಎನ್‌ಡಿಎ ಸರ್ಕಾರ ತೆಹೆಲ್ಕಾ ಸಂಸ್ಥೆಗೆ ನೀಡಿದ್ದ ಕಿರುಕಳ ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಪತ್ರಿಕೆಗಳ ಮೇಲೆ ನಡೆಸಿದ್ದ ದಾಳಿಯನ್ನು ನೆನೆಪಿಸುವಂತಿತ್ತು.

ಸಂಸ್ಥೆಯಲ್ಲಿ ಬಂಡವಾಳ ಹೂಡಿದವರ ಮನೆಮೇಲೆ ವರಮಾನ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು, ಸೆಬಿ, ಅನುಷ್ಠಾನ ನಿರ್ದೇಶನಾಲಯ ಹೀಗೆ ಸರ್ಕಾರದ ಹಲವಾರು ಇಲಾಖೆಗಳು ಒಟ್ಟಾಗಿ ತೆಹೆಲ್ಕಾದ ಮೇಲೆ ಎರಗಿ ಬಿದ್ದಿದ್ದವು, ಅದರಲ್ಲಿದ್ದ ಕೆಲವು ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿತ್ತು, ಉಳಿದವರು ಪ್ರಾಣ ಬೆದರಿಕೆ ಎದುರಿಸುತ್ತಿದ್ದರು, ಸಂಸ್ಥೆ ದಿವಾಳಿಯಾಗಿತ್ತು. ತೆಹೆಲ್ಕಾ ಟೇಪ್‌ನ ವಿಶ್ವಾಸಾರ್ಹತೆಯನ್ನು ಮತ್ತೆಮತ್ತೆ ಪ್ರಶ್ನಿಸಲಾಯಿತು.

ಆಯೋಗ ತೆಹೆಲ್ಕಾ ಪರವಾಗಿಯೇ ವರದಿ ನೀಡಲಿರುವ ಗುಮಾನಿ ಬಂದಾಗ ಅದನ್ನು ಬರ್ಖಾಸ್ತುಗೊಳಿಸಿ ಮತ್ತೊಂದನ್ನು ರಚಿಸಲಾಯಿತು. ಮೂರುವರ್ಷಗಳ ನಂತರ ಹೊಸ ತನಿಖಾ ಆಯೋಗವನ್ನು ಕೂಡಾ ರದ್ದು ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಅದರ ನಂತರ ಏನಾಯಿತೆಂದು ಯಾರಿಗೂ ಗೊತ್ತಿಲ್ಲ.

ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಎನ್‌ಡಿಎ ಸರ್ಕಾರ ಈ ರೀತಿ ಮಾಧ್ಯಮ ಸಂಸ್ಥೆಯೊಂದರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವಾಗ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾಗಿದ್ದರು. ಈಗ `ಸೀಟಿ ಊದುವವರ` ರಕ್ಷಣೆಯ ಬಗ್ಗೆ ಭಾಷಣಮಾಡುತ್ತಿರುವ ಅರುಣ್ ಜೇಟ್ಲಿ ತೆಹೆಲ್ಕಾ ವಿರುದ್ದದ ನ್ಯಾಯಾಂಗ ಹೋರಾಟದ ಮುಂಚೂಣಿಯಲ್ಲಿದ್ದರು.

ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡುವುದು `ದೇಶದ್ರೋಹದ ಕೆಲಸ`ವೆಂದು ಆಗ ಇವರೆಲ್ಲರ ಅಭಿಪ್ರಾಯವಾಗಿತ್ತು, ಇದು `ಎನ್‌ಡಿಎ ವಿರುದ್ದದ ದೊಡ್ಡ ಸಂಚು` ಎಂದೇ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಯಾವ ನೈತಿಕ ಬಲದಿಂದ ಅಡ್ವಾಣಿಯವರು ಈಗ `ಕುಟುಕು ಕಾರ‌್ಯಾಚಾರಣೆ`ಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಸುಧೀಂದ್ರ ಕುಲಕರ್ಣಿ ಮತ್ತು ಪಕ್ಷದ ಸಂಸದರನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯ?

ಹೋಗ್ಲಿಬಿಡಿ, ತೆಹೆಲ್ಕಾಕ್ಕೇನೋ ದುಷ್ಟ ಉದ್ದೇಶ ಇದ್ದಿರಬಹುದೆಂದು ಅಂದುಕೊಳ್ಳೋಣ. ಸತ್ಯೇಂದ್ರ ದುಬೆ ಎಂಬ 31 ವರ್ಷದ ಐಐಟಿ ಪದವೀಧರ ಏನು ಅನ್ಯಾಯ ಮಾಡಿದ್ದರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟಿ ಜನರಲ್ ಮ್ಯಾನೆಜರ್ ಆಗಿದ್ದ ದುಬೆ ತನ್ನ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ರಹಸ್ಯ ಪತ್ರ ಬರೆದಿದ್ದರು. ಪ್ರಾಣ ಭಯ ಇರುವುದರಿಂದ ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಪತ್ರದಲ್ಲಿ ವಿನಂತಿಯನ್ನೂ ಮಾಡಿದ್ದರು.

ಆದರೆ ಆ ಪತ್ರ ಪ್ರಧಾನಿ ಕಾರ‌್ಯಾಲಯದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೋಗಿ ಕೊನೆಗೆ ಯಾರ ಕೈಗೆ ಸಿಗಬಾರದಿತ್ತೋ ಅವರಿಗೆ ಸಿಕ್ಕಿತು. ಪತ್ರ ಬರೆದ ಹದಿನಾರನೇ ದಿನ ಸತ್ಯೇಂದ್ರ ದುಬೆ ಅವರನ್ನು ಗಯಾದ ಬೀದಿಯಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು.

ಅದಾದ ನಂತರ ಭುಗಿಲೆದ್ದ ಸಾರ್ವಜನಿಕ ಆಕ್ರೋಶ ಕಂಡು ಸುಪ್ರೀಂಕೋರ್ಟ್ `ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಮತ್ತು ರಕ್ಷಣಾ ಗೊತ್ತುವಳಿ`ಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದರ ಅನುಷ್ಠಾನದ ಹೊಣೆಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ವಹಿಸಿಕೊಟ್ಟಿತ್ತು.

ಆದರೆ ಅದಾದ ಒಂದು ವರ್ಷದ ನಂತರ ಭಾರತೀಯ ತೈಲನಿಗಮದ ಮ್ಯಾನೇಜರ್ ಆಗಿದ್ದ ಕೋಲಾರದ ಮಂಜುನಾಥ ಷಣ್ಮುಗಂ ಎಂಬ ಐಐಎಂ ಪದವೀಧರನನ್ನು ಉತ್ತರಪ್ರದೇಶದಲ್ಲಿ ಹತ್ಯೆ ಮಾಡಲಾಯಿತು. ಪೆಟ್ರೋಲ್ ಕಲಬೆರಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ದ ದನಿ ಎತ್ತಿದ್ದೇ ಆ ಯುವಕನ ಪ್ರಾಣಕ್ಕೆ ಮುಳುವಾಯಿತು.

ಮತ್ತೆ `ಸೀಟಿ ಊದುವವರ` ರಕ್ಷಣೆಯ ಕೂಗೆದ್ದಿತ್ತು. 2001ರ ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಅನುಗುಣವಾಗಿ ಕಾಯಿದೆ ರೂಪಿಸುವುದಾಗಿ ಎನ್‌ಡಿ ಸರ್ಕಾರ ಆಶ್ವಾಸನೆಯನ್ನೂ ನೀಡಿತ್ತು.

ಅದು ಅಧಿಕಾರ ಕಳೆದುಕೊಂಡಿತೇ ವಿನ: ಆಶ್ವಾಸನೆ ಈಡೇರಿಸಲೇ ಇಲ್ಲ. ಅಡ್ವಾಣಿ, ಜೇಟ್ಲಿ, ಸುಷ್ಮಾಸ್ವರಾಜ್ ಎಲ್ಲರೂ ಸೇರಿ `ಸೀಟಿ ಊದುವವರ` ರಕ್ಷಣಾ ಕಾಯಿದೆಯೊಂದನ್ನು ಆಗ ಜಾರಿಗೆ ತಂದಿದ್ದರೆ ಬಹುಷ: ಸುಧೀಂದ್ರ ಕುಲಕರ್ಣಿಯವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲವೇನೋ?

ಭ್ರಷ್ಟರೇ ಬಹುಸಂಖ್ಯೆಯಲ್ಲಿರುವುದು ನಿಜವಾದರೂ ಪ್ರಾಮಾಣಿಕರಿಗೇನು ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅವರು ಯಾವತ್ತೂ ಅಲ್ಪಸಂಖ್ಯಾತರು. ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಸಹೋದ್ಯೋಗಿಗಳ ಪಾತ್ರವೂ ಇರುವುದರಿಂದ ಮೊದಲ ಶತ್ರುಗಳು ಅವರೇ ಆಗಿರುತ್ತಾರೆ. ಮೊದಲು `ಸೀಟಿ ಊದುವವರ` ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ನಂತರ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತದೆ.

ಇವೆಲ್ಲದರ ನಡುವೆ ಅವರನ್ನು ಒಂಟಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ತಂತ್ರಗಳ ಮೂಲಕವೇ ಅವರನ್ನು `ತಮ್ಮ ದಾರಿಗೆ ತರುವ` ಪ್ರಯತ್ನ ನಡೆಯುತ್ತದೆ. ಇದಕ್ಕೆ ಕೆಲವರು ಶರಣಾಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. `ದಾರಿಗೆ ಬರದವರು` ಒಂದೋ ಮೂಲೆ ಗುಂಪಾಗುತ್ತಾರೆ ಇಲ್ಲವೇ ಮಸಣದ ಹಾದಿ ಹಿಡಿಯುತ್ತಾರೆ.

ನಕಲಿ ಛಾಪಾ ಕಾಗದ ಹಗರಣದ ಸುಳಿವನ್ನು ಮೊದಲು ನೀಡಿದ್ದ ಮಹಾರಾಷ್ಟ್ರದ ಸ್ಟಾಂಪ್ಸ್ ಸುಪರಿಂಟೆಂಡೆಂಟ್ ರಾಧೇಶ್ಯಾಮ್ ಮೋಪಾಲ್‌ವಾಲ್, ಮುಂಬೈನ ಅಕ್ರಮ ಕಟ್ಟಡಗಳ ವಿರುದ್ದ ಸಮರಸಾರಿದ ಜಿ.ಎಸ್. ಖೈರ್ನಾರ್, 26 ವರ್ಷಗಳ ಸೇವಾವಧಿಯಲ್ಲಿ 26 ಬಾರಿ ವರ್ಗಾವಣೆಯ ಶಿಕ್ಷೆಗೊಳಗಾದ ಪುಣೆಯ ಮುನ್ಸಿಪಲ್ ಕಮಿಷನರ್ ಅರುಣ್ ಭಾಟಿಯಾ... ಹೀಗೆ ಅನ್ಯಾಯ,ಅಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆದ `ಸೀಟಿ ಊದುವವರು` ಎಲ್ಲೋ ಮೂಲೆಗುಂಪಾಗಿ ಹೋಗಿದ್ದಾರೆ.

ದುಬೆ, ಮಂಜುನಾಥ್ ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಭ್ರಷ್ಟರನ್ನು ಬಯಲುಗೊಳಿಸಲು ಹೊರಟ ಭೋಪಾಲದ ಶೆಹಲಾ ಮಸೂದ್, ಗುಜರಾತ್‌ನ ಅಮಿತ್ ಜೆಟ್ವಾ, ಪುಣೆಯ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಆಂಧ್ರಪ್ರದೇಶದ ಸೋಲಾ ರಂಗರಾವ್-ಇವರಲ್ಲಿ ಯಾರೂ ಈಗ ಬದುಕಿ ಉಳಿದಿಲ್ಲ. ಎಲ್ಲರೂ ಭ್ರಷ್ಟರ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ.

ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ತಂಡ ಚಳುವಳಿ ಪ್ರಾರಂಭಿಸಿದ ನಂತರ ಮತ್ತೊಮ್ಮೆ `ಸೀಟಿ ಊದುವವರ` ರಕ್ಷಣೆಯ ಕಾನೂನಿನ ಚರ್ಚೆ ಪ್ರಾರಂಭವಾಗಿದೆ. ಅಣ್ಣಾ ತಂಡ ರಚಿಸಿರುವ `ಜನಲೋಕಪಾಲ ಮಸೂದೆ`ಯಲ್ಲಿ `ಸೀಟಿ ಊದುವವರ ರಕ್ಷಣೆಯೂ ಸೇರಿದೆ.

ಆದರೆ ಸರ್ಕಾರದ `ಲೋಕಪಾಲ ಮಸೂದೆ`ಯಲ್ಲಿ ಅದು ಸೇರಿಲ್ಲ. ಇದನ್ನು ಪ್ರತ್ಯೇಕವಾಗಿ ಜಾರಿಗೆ ತರುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಕೂಡಾ ಮಂಡನೆಯಾಗಿದೆ.

`ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಿರೋಧ ಕಾಯಿದೆ ಇಲ್ಲವೇ ಭಾರತೀಯ ದಂಡಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಮತ್ತು ದುರಾಡಳಿತ- ಈ ಮೂರು ಅಂಶಗಳಿಗೆ ಸಂಬಂಧಿಸಿದ ದೂರುಗಳನ್ನು `ಸೀಟಿ ಊದುವವರ ರಕ್ಷಣಾ ಮಸೂದೆಯಲ್ಲಿ ಸೇರಿಸಲಾಗಿದೆ.

ಇದರಲ್ಲಿಯೂ ಕಾರ್ಪೋರೇಟ್ ಕ್ಷೇತ್ರದಲ್ಲಿನ `ಸೀಟಿ ಊದುವವರನ್ನು` ಸೇರಿಸಲಾಗಿಲ್ಲ. ಎರಡನೆ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕಾರ್ಪೋರೇಟ್ ಕ್ಷೇತ್ರವನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.

ಇದರ ಬಗ್ಗೆ ಅಣ್ಣಾತಂಡವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮೌನವಾಗಿವೆ.
ಭಾರತದಲ್ಲಿ ಮಾತ್ರವಲ್ಲ, ನಾಲ್ಕು ದೇಶಗಳನ್ನು ಹೊರತುಪಡಿಸಿದರೆ ಬೇರೆಲ್ಲೂ `ಸೀಟಿ ಊದುವವರ` ರಕ್ಷಣೆಗಾಗಿ ಕಾನೂನು ಇಲ್ಲ. 1989ರಲ್ಲಿ ಅಮೆರಿಕಾ ಮೊದಲ ಬಾರಿ ಈ ಕಾನೂನು ರೂಪಿಸಿತ್ತು.

ಅದರ ನಂತರ ಬ್ರಿಟನ್, ಅಸ್ಟೇಲಿಯಾ ಮತ್ತು ನ್ಯೂಜಿಲೇಂಡ್‌ಗಳು ಹಿಂಬಾಲಿಸಿದವು. ಈ ಕಾನೂನು ಇರುವ ಕಾರಣಕ್ಕಾಗಿಯೇ ಎನ್ರಾನ್ ಸಂಸ್ಥೆಯ ತಪ್ಪು ಲೆಕ್ಕಪತ್ರವನ್ನು ಬಯಲಿಗೆಳೆದ ಅದರ ಉಪಾಧ್ಯಕ್ಷ ಶೆರ‌್ರಾನ್ ವಾಟ್ಕಿನ್ಸ್, 9/11 ದಾಳಿ ನಡೆಸಿದ ಭಯೋತ್ಪಾದಕರ ಸುಳಿವಿನ ಮುನ್ಸೂಚನೆ ನಿರ್ಲಕ್ಷಿಸಿದ್ದನ್ನು ಪತ್ರಬರೆದು ಬಹಿರಂಗಗೊಳಿಸಿದ ಎಫ್‌ಬಿಐ ಅಟಾರ್ನಿ ಕೊಲೀನ್ ರೌಲೆ, ವರ್ಲ್ಡ್‌ಕಾಮ್ ಸುಮಾರು 3.8 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಮುಚ್ಚಿಹಾಕಿದ್ದನ್ನು ನಿರ್ದೇಶಕ ಮಂಡಳಿಗೆ ತಿಳಿಸಿ ಸುದ್ದಿ ಮಾಡಿದ ಸಿಂಥಿಯಾ ಕೂಪರ್ ಅಮೆರಿಕಾದಲ್ಲಿ `ತಾರಾಮೌಲ್ಯ` ಗಳಿಸುವಷ್ಟು ಜನಪ್ರಿಯರು.

ವಿಕಿಲೀಕ್ಸ್‌ನ ಮೂಲಕ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳು ಬಹಿರಂಗವಾಗಲು ಕೂಡಾ ಅನಾಮಿಕ `ಸೀಟಿ ಊದುವವರು` ಕಾರಣ.

ಆದರೆ ಭಾರತದಲ್ಲಿ ಇವರಿಗೆ ಯಾವ ರಕ್ಷಣೆಯೂ ಇಲ್ಲ, ಬದಲಿಗೆ ಕಿರುಕುಳ, ಜೈಲು, ಸಾವು-ನೋವುಗಳ ಕೊಡುಗೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರ ಭ್ರಷ್ಟಾಚಾರದ ವಿರುದ್ಧ ದೂರು ದಾಖಲು ಮಾಡಿರುವ ಇಬ್ಬರು ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೆಳೆಯ ಸುಧೀಂದ್ರ ಕುಲಕರ್ಣಿ ಅವರಿಗಾಗಿ ಕಣ್ಣೀರು ಸುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರು ಇದಕ್ಕೇನನ್ನುತ್ತಾರೆ?

-ಪ್ರಜಾವಾಣಿ ಕೃಪೆ

೪ ದ್ವಿಪದಿಗಳು
ಇಷ್ಟು ದೂರ ನಡೆದು ಬಂದಿದ್ದೇನೆ
ಹಾದಿಯಲ್ಲಿ ಮೂಡಿದ ಹೆಜ್ಜೆಗಳಷ್ಟೇ ನನ್ನ ಪರಿಚಯ

ಅನಪೇಕ್ಷಿತ ಇಚ್ಚೆಗಳ ಆಸ್ತಿ ದೊಡ್ಡದಿತ್ತು
ಹಾಡಿಯುದ್ಧಕ್ಕೂ ಸಾಗಿ ಬಂತು ಬದುಕಿನ ಬಡತನ

ಬರೆವ ಎರಡು ಸಾಲುಗಳನ್ನೂ ಕವಿತೆಯಾಗಿಸದೆ ಹೋದರೆ
ಕವಿಯೇ ನೂರು ಸಾಲು ಬರೆದರೂ ಕವಿತೆ ಹುಟ್ಟದು !

ಕಲ್ಲು ಬೀಸಿದರೂ
ಮಾವಿನಮರ ಹಣ್ಣು ಕೊಡುವುದು ನಿನ್ನ ಹಾಗೆ

ಚಿತ್ರ : ಗೂಗಲ್ ಕೃಪೆ

ನಿನ್ನ ವಶ

 • gÁwæAiÀÄ PÀvÀÛ¯É

  ºÀUÀ°£À ¨É¼ÀPÀÄ

  J®è ¤£Àß ªÀ±ÀªÁVªÉ

  EA¢£À PÁ¼Àf

  ªÀÄÄA¢£À PÀ£À¸ÀÄ

  JgÀqÀÆ ¤£Àß ªÀ±ÀªÁVªÉ

  ¯ÉÃR¤ ¯ÉÃR

  ªÀÄ£ÀªÀÇ ªÀÄwAiÀÄÆ

  ¦æAiÀÄ ¤£Àß ªÀ±ÀªÁVªÉ

  G½ªÉÇ C½ªÉÇ

  G¹gÀÆ ºÁqÀÆ

  zÉÆgÉ ¤£Àß ªÀ±ÀªÁVºÉ


  -ಕವಿತಾ ಕುಸುಗಲ

  ಆರು ದ್ವಿಪದಿಗಳು
  ಈಜುವದಕೇನು ವಿಶಾಲ ಸಮುದ್ರವಿದೆಯೆಂದು ಮೀನು ತುಸು ಮೇಲೆದ್ದಿತು
  ಆ ನೂರಾರು ಗಾವುದ ದೂರದಲಿರುವ ಹದ್ದಿನ ಕಣ್ಣಿಗೆ ಅಷ್ಟು ಸಾಕಿತ್ತು ...


  ಈ ಬೆಳಗು ಹೊಸಗೋಡೆಯ ಮೇಲೂ ಹಲ್ಲಿ ನಿಶಬ್ದವಾಗಿಯೇ ಇತ್ತು
  ಆ ಕ್ಷಣವಷ್ಟೇ ನೊಣ ನುಂಗುವಾಗ ಸಪ್ಪಳ ಗೋಡೆ ಮೇಲೆ ಮತ್ತದೇ ಮೌನ !


  ಮನ್ನಿಸು, ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಬರೀ ಅಕ್ಷರಗಳನಿಟ್ಟೆ
  ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು ..!


  ನೀವು ಹರ್ಷದಿಂದ ಹೂಮಾಲೆ ತಂದಾಗ ನಾ ತಲೆಬಾಗದೆ ಇರಲಾರೆ
  ಹೂಗೋಣು ಮುರಿದು ಮಾಲೆ ಮಾಡಿರುವಾಗ ನಾ ತಲೆಯೆತ್ತುವುದಾದರೂ ಹೇಗೆ ಹೇಳಿ ?


  ಈ ರಾತ್ರಿ ಸಾಲು ಸಾಲು ಹಣತೆ ಹಚ್ಚಿ ಹುಡುಕಿದರೇನು ?
  ಕತ್ತಲಲಿ ಬೆಳಕಿನ ಸ್ವಿಚ್ಚು ಎಲ್ಲಿದೆಯೆಂದು ಭೂಮಿಗಷ್ಟೇ ಗೊತ್ತು

  ಆ ಕವಿ ಒಂದು ಜನಾಂಗದ ಕಣ್ಣು ತೆರೆಯಿಸಿದರೆಂಬ ಮಾತಿಗೇಕೆ ಕೋಪ
  ಕವಿ ಕೊಟ್ಟ ಕಣ್ಣು ಆ ಕವಿ ತೋರಿದ ದಾರಿಗಷ್ಟೇ ದೀಪ
  ಚಿತ್ರ :ಗೂಗಲ್ ಕೃಪೆ

  Saturday, October 29, 2011

  ಎಲ್ಲಿದೆ? ಹೇಗಿದೆ? ಕನ್ನಡದ ಉಸಿರು
  - ಬಾಲಸುಬ್ರಹ್ಮಣ್ಯ ಕಂಜರ್ಪಣೆ


  ಎಲ್ಲಿದೆ? ಹೇಗಿದೆ? ಕನ್ನಡದ ಉಸಿರು  ಕನ್ನಡ ನೆಲದಲ್ಲಿ ಕನ್ನಡ ತನ್ನ ಮಾನ್ಯತೆಗಳನ್ನು ಕಳೆದು ಕೊಳ್ಳುತ್ತಿದೆ ಎಂದು ನಮ್ಮ ವಿಶ್ರಾಂತರು (ಇವರಲ್ಲಿ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಪ್ರಾಧ್ಯಾಪಕರು, ಸಾಹಿತಿಗಳು ಮತ್ತಿತರ ಸಾಂಸ್ಕೃತಿಕ ಮಾಜಿ ಉದ್ಯೋಗಿಗಳು ಸೇರುತ್ತಾರೆ) ಮಾಧ್ಯಮಗಳಲ್ಲಿ ಸದಾ ಕೊರಗುತ್ತಲೂ ಮಿಂಚುತ್ತಿದ್ದಾರೆ. ಶಿಕ್ಷಣದಲ್ಲಿ ಕನ್ನಡ ಬಲಗೊಳ್ಳಬೇಕು, ಮನೆಮಾತಿನಲ್ಲಿ ಕನ್ನಡ ಸಂವರ್ಧನಗೊಳ್ಳಬೇಕು.ಒಟ್ಟಿನಲ್ಲಿ ಎಲ್ಲರೂ ಕನ್ನಡವನ್ನು ಕಲಿಯಬೇಕು ಎಂಬ ಚಿಂತನೆ ರಾಜ್ಯದ ರಾಜಧಾನಿಯಲ್ಲಿ ಅವ್ಯಾಹತವಾಗಿ ಜರುಗುತ್ತಿರುವಾಗಲೇ ಅಂಕಿ-ಅಂಶಗಳ ಪರಿಣತ ವೆದ್ಯರು ಕನ್ನಡದ ದೇಹದಲ್ಲಿ ಬಿಳಿ ಮತ್ತು ಕೆಂಪು ರಕ್ತಕಣಗಳು ಕಡಿಮೆ ಯಾಗುತ್ತಿರುವ ವರದಿಗಳನ್ನು ನೀಡುತ್ತಿದ್ದಾರೆ.ವ್ಯಾಯಾಮ ಮಾಡಿದ್ದರಿಂದಲೇ ನಿತ್ರಾಣವಾಗುವ ಬಡವನ ಸ್ಥಿತಿ ಕನ್ನಡದ್ದು. ಬೆಂಗಳೂರಿನಲ್ಲಿ ನಡೆಯುವ ಕನ್ನಡಪರ ಚಟುವಟಿಕೆಗಳ ಯಶಸ್ಸಿನ ಕುರಿತ ಮಾಧ್ಯಮಗಳ ವರದಿಯನ್ನು ನಂಬುವುದಾದರೆ ಈಗಾಗಲೇ 110 ಶೇಕಡಾ ಕನ್ನಡವಿರಬೇಕಾಗಿತ್ತು!ಆದರೆ ಅಸಲಿಗೆ ಕನ್ನಡ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಭಾಷೆಯಾಗ ತೊಡಗಿದೆ, ವಿರಳವಾಗತೊಡಗಿದೆ.

  ರಕ್ಷಿತ ಅರಣ್ಯ,ರಕ್ಷಿತ ಸ್ಮಾರಕಗಳೊಂದಿಗೆ ಕನ್ನಡವನ್ನು ರಕ್ಷಿತಭಾಷೆಯಾಗಿ ಜತನದಿಂದ, ವಿಶೇಷ ಮಮತೆ ಮತ್ತು ಅನುಕಂಪದಿಂದ ನೋಡಬೇಕಾಗಿದೆ.ಇತರ ಭಾಷಾ ಅಭಿವೃದ್ಧಿ ಪ್ರಾಧಿಕಾರಗಳ ಬದಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇರುವುದು ಎಷ್ಟು ಅರ್ಥಪೂರ್ಣ! ಮನೆಯ ಮಗನಿಗೆ ಮನೆಯಲ್ಲೇ ಬೀಗರ ಔತಣ!ಕವಿರಾಜ ಮಾರ್ಗವು ಕಂಡ ಕನ್ನಡ ಜಗತ್ತಿಗಿಂತಲೂ ವಿಶಿಷ್ಟವಾದ ಒಂದು ಜಗತ್ತನ್ನು ಕನ್ನಡದಲ್ಲಿ ಕರ್ನಾಟಕದಲ್ಲಿ, ಕನ್ನಡ ಸಾಹಿತ್ಯ-ಕಲೆ-ಸಂಸ್ಕೃತಿಯಲ್ಲಿ ನಾವಿಂದು ಕಾಣಬಹುದು.

  ಒಂದೆಡೆ ಕನ್ನಡವನ್ನು ಅದರ ಎಲ್ಲ ಧ್ವನ್ಯಾರ್ಥಗಳಲ್ಲೂ ಉಳಿಸುವ, ಬೆಳೆಸುವ ಮಾತುಗಳನ್ನು ಹೇಳುತ್ತಲೇ, ಚಿಂತನೆಗಳನ್ನು ಮಥಿಸುತ್ತಲೇ ಕನ್ನಡದ ಬೇರುಗಳನ್ನು ಒಂದೊಂದಾಗಿ ಕತ್ತರಿಸಿ ಅದನ್ನು ನೆಲದ ಬಂಧನದಿಂದ ಬಿಡುಗಡೆ ಮಾಡುವ ಬೌದ್ಧಿಕ ಪ್ರಕ್ರಿಯೆಗಳು ನಡೆಯುತ್ತಿವೆ. ಎರಡು ಸಾವಿರ ವರುಷಗಳ ದೀರ್ಘ ಬದುಕಿನ ನಂತರವೂ ಕನ್ನಡ ನಿಲ್ಲಬೇಕಾದರೆ ನೆಲೆ ಯಾವುದು ಎಂಬ ಅನ್ವೇಷಣೆ ನಿತ್ಯ ನಿರಂತರವಾಗಿ ನಡೆಯಬೇಕಾಗಿ ಬಂದದ್ದು ವಿಷಾದನೀಯ. ಈ ವಿರೋಧಾಭಾಸ ಸ್ಥಿತಿಯಲ್ಲಿ ಕನ್ನಡ ತಾಯಿ ಕಣ್ಮರೆಯಾಗಿ ಆ ಜಾಗದಲ್ಲಿ ಸೀರೆ ಉಡಲು ತಿಳಿಯದ ಸ್ತ್ರೀ ವೇಷಧಾರಿ ಗಡ್ಡ ಮೀಸೆ ಹೊತ್ತ ಪುರುಷನೊಬ್ಬನ ಆಕೃತಿ ಮೂಡುತ್ತಿದೆ. ಈ ಪುರುಷನಿಗೆ ಕನ್ನಡ ತಾಯಿಯ ವೇಷ ಹಾಕಬೇಕಾಗಿದೆ; ಹಾಗೆಂದು ತನ್ನ ಇಂಗ್ಲಿಷ್ ಗಡ್ಡ-ಮೀಸೆಗಳನ್ನು ತ್ಯಜಿಸಲೊಲ್ಲ. ಹೇಗಿದೆ ಎಂದರೆ ಹೀಗಿದೆ ಎಂಬಂತಿದೆ ಕನ್ನಡದ ಸ್ಥಿತಿ-ಗತಿ!

  ಎಲ್ಲ ಸಮಸ್ಯೆಗಳೂ ಪರಿಹಾರವಾಗಬೇಕು. ಶಿಕ್ಷಣ ಸರಿ ಯಿಲ್ಲ; ಬದಲಾಗಬೇಕು. ಕನ್ನಡದ ಪ್ರಭಾವ ಕಡಿಮೆಯಾಗಿದೆ; ಅದು ಹೆಚ್ಚಬೇಕು.ಇಂಗ್ಲಿಷ್ ನಮ್ಮ ಜೀವನವನ್ನು ಅಕ್ಟೋಪಸ್‌ನಂತೆ ಆವರಿಸಿದೆ.ಇದು ಶತಾಯ ಗತಾಯ ಸ್ಥಗಿತಗೊಳ್ಳಬೇಕು. ಇಂತಹ ಕರೆಗಳು ಇರುವುದಕ್ಕೆ ನಮ್ಮ ಪತ್ರಿಕೆಗಳು ಪುಟ ತುಂಬಿಸುತ್ತಿವೆ;ವಿದ್ಯುನ್ಮಾನ ಛಾನೆಲ್ಲುಗಳು ಸಮಯ ಕಳೆಯುತ್ತಿವೆ. ಆದರೆ ವಸ್ತು ಸ್ಥಿತಿ ಇಷ್ಟಕ್ಕೆ ಸರಿಯಾಗುವುದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಮಂತ್ರಕ್ಕೆ ಮಾವಿನ ಕಾಯಿ ಬೀಳಿಸಬಹುದಿತ್ತು.

  ವಿವಿಧ ರಾಜ್ಯಗಳ, ವಿವಿಧ ಭಾಷೆಗಳ ಜನ ಕನ್ನಡ ನೆಲವನ್ನು ಅದರಲ್ಲೂ ಬೆಂಗಳೂರನ್ನು ತುಂಬಿಕೊಂಡಿದ್ದಾರೆ. ಕನ್ನಡವಿಲ್ಲದೇ ಸುಧಾರಿಸ ಬಹುದಾದ ಕರ್ನಾಟಕದ ಯಾವುದಾದರೊಂದು ಊರನ್ನು ಹೆಸರಿಸಿ ಎಂದರೆ (ಜಾಣ ಮರೆವನ್ನು ಹೊರತು ಪಡಿಸಿದರೆ) ಥಟ್ಟನೆ ನೆನಪಾಗುವುದು- ಬೆಂಗಳೂರು; ಬೆಳಗಾಂ ಅಲ್ಲ. ಒಂದು ರಾಷ್ಟ್ರದ ಮುಖ್ಯ ನಗರಿಯಾಗಿ ಬೆಳೆಯುವ ಲಕ್ಷಣದಲ್ಲಿ ಇವೆಲ್ಲ ಸಹಜವೆಂದಾದರೆ ನಾವು ಕನ್ನಡದ ಉದ್ಧಾರದ ಬಗ್ಗೆ, ಕರ್ನಾಟಕದಲ್ಲಿ ಕನ್ನಡವನ್ನು ಸಾರ್ವತ್ರಿಕಗೊಳಿಸುವುದರ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡುವ ಆವಶ್ಯಕತೆಯಿಲ್ಲ.

  ಅಂತರಾಷ್ಟ್ರೀಯ ಮ್ಯಾರಥಾನಿನಲ್ಲಿ ಯಾವ ಭಾಷೆ ಗೆಲ್ಲುತ್ತದೋ ಎಂಬ ವೀಕ್ಷಕ ವಿವರಣೆ ಕೇಳಿದರೆ ಸಾಕು. ಕರ್ನಾಟಕವನ್ನು ಆವರಿಸುತ್ತಿರುವ ಎಲ್ಲ ಭಾಷೆ,ಸಂಸ್ಕೃತಿಗಳನ್ನು ಜೀರ್ಣಿಸಿಕೊಳ್ಳುವ ಅಗಸ್ತ್ಯಾಪೋಶನ ಶಕ್ತಿ ಕನ್ನಡಕ್ಕಿದೆಯೇ?ಕನ್ನಡ ಶಾಲೆಗಳಿಗೆ ಅದರಲ್ಲೂ ಸರಕಾರಿ ಶಾಲೆಗಳಿಗೆ ಹೋಗಬೇಕೆಂದು ನಾವು ಬಯಸುವುದಾದರೂ ಯಾರನ್ನು? ಗ್ರಾಮೀಣ ಪ್ರದೇಶದ ಮಕ್ಕಳನ್ನು;ಬಡವರನ್ನು ಆದರ್ಶಗಳೆಲ್ಲ ಇರುವುದು ಉಳ್ಳವರು ಹೇಳುವುದಕ್ಕೂ, ನಿರ್ಗತಿಕರು ಅನುಸರಿಸುವುದಕ್ಕೂ ಎಂಬ ಹಾಗಿದೆ.ಆದ್ದರಿಂದ ಒಪ್ಪೊತ್ತು ಊಟದ ಪ್ರಜೆಯೂ ಯಥಾನುಶಕ್ತಿ ದುಡಿದು ಮಕ್ಕಳನ್ನು ಆಂಗ್ಲ ಮಾಧ್ಯಮದ (ಕಾನ್ವೆಂಟು) ಶಿಕ್ಷಣಕ್ಕೆ ಹೇಗೋ ಕಳುಹಿಸುತ್ತಾನೆ.

  ಈ ಮೋಹದ ಗುಟ್ಟು ತಿಳಿದೇ ಇಂದು ಎಲ್ಲೆಡೆ ಇಂತಹ ಶಾಲೆಗಳು ತಲೆಯೆತ್ತುತ್ತಿವೆ. ರಾಜಕಾರಣಿಗಳೂ ಅಧಿಕಾರಶಾಹಿಗಳೂ ಯಥಾನುಶಕ್ತಿ ಭ್ರಷ್ಟಸಂಪನ್ನರಾಗುತ್ತಿದ್ದಾರೆ.ಜಾಗತೀಕರಣದ ಓಟದಲ್ಲಿ ಹಿಂದುಳಿದವರು ಸತ್ತೇ ಹೋಗುವ ಭೀತಿಯಲ್ಲಿರುವಾಗ ಮೊಣಕೈಗೆ ಮೊಣಕಾಲು ತರಚಿತೆಂದು ಅಳುವವರಿದ್ದಾರೆಯೇ? ಕನ್ನಡಕ್ಕಾಗಿ ಉಸಿರಾಡುವವರಾದರೂ ಯಾರು? ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದ್ದು ಎಲ್ಲಿ? ಒಂದು ಚಿಕ್ಕ ಉದಾಹರಣೆಯನ್ನು ಕೈಗೆತ್ತಿಕೊಳ್ಳಬಹುದು; ಕಳೆದ ಸುಮಾರು ಒಂದು ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ನೆಲೆ-ಸೆಲೆಗಳನ್ನು ಗಮನಿಸಿದರೆ ಶ್ರೀ ವಿಜಯ/ನೃಪತುಂಬ, ಪಂಪ, ರನ್ನ, ಜನ್ನ, ವಚನಕಾರರು, ಹರಿಹರ, ರಾಘವಾಂಕ, ಲಕ್ಷ್ಮಿಶ, ನಾರಣಪ್ಪ, ದಾಸರು, ನರಹರಿಯಾದಿಯಾಗಿ ಘಟಾ ನುಘಟಿಗಳಿಗೆ ಕಾರಣವಾದ್ದು ಇಂದಿನ ಉತ್ತರ ಕರ್ನಾಟಕ. ಕನ್ನಡ ಕಂಪನ್ನು ಬಹುಕಾಲ ಬೀರಿದ ಕೀರ್ತಿ ಅಲ್ಲಿನದ್ದು.

  ಆಧುನಿಕ ಕಾಲದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಅರಳಿತು. ಈ ಗಂಡು ಮೆಟ್ಟಿದ ಉತ್ತರ ಕರ್ನಾಟಕದಲ್ಲಿ ಇಂದು ಉಳಿಯುತ್ತಿರುವುದು, ಒಣಹವೆ, ಬಡರೈತರು, ಮತ್ತು ಅಭಿವೃದ್ಧಿಹೀನ ಹಳ್ಳಿಗಳು ಮಾತ್ರ. ಕನ್ನಡದ ಕುರಿತು ಏನಾದರೂ ಮಾಡಬಹುದಾದ ಪೂರಕ ವಾತಾವರಣವಿಲ್ಲದ್ದರಿಂದ ಕನ್ನಡದ ಕೆಲಸ ಮಾಡಿ ಪ್ರಸಿದ್ಧರಾಗುವುದು ಸುಳ್ಳಿನ ಮಾತು. ಸ್ವಾರ್ಥ ರಹಿತರಾಗಿ ಕನ್ನಡವನ್ನು ನೆಲೆಗೊಳಿಸುವುದಕ್ಕಾಗಿ ಗ್ರಾಮಗಳಲ್ಲಿ ಉಳಿಯಬೇಕೆಂದು ಆಳುವವರಾಗಲೀ ರಾಜ(ಧಾನಿ)ಕವಿಗ ಳಾಗಲೀ ಭಾವಿಸಿದರೆ ಮತ್ತು ಹಾಗೆ ಯಾರ ನ್ನಾದರೂ ಉಪದೇಶಿಸಿದರೆ ಅದು ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿದಂತಾ ದೀತು.

  ಏಕೆಂದರೆ ಇತ್ತ-ದಕ್ಷಿಣ ಕರ್ನಾ ಟಕದ ಬೆಂಗಳೂರು- ಮೈಸೂರು ಗಳೆಂಬ ಕಾರಿಡಾರುಗಳಲ್ಲಿ ಇಡೀ ವಿಶ್ವದ ಮುತ್ತುರತ್ನಗಳು ಮಾರಾಟಕ್ಕಿವೆ. ಮಂಗಳೂರೆಂಬ ಬಂದರು ನಗರದಲ್ಲಿ ಬಳ್ಳಾರಿಯ ಕೆಂಪು ಮಣ್ಣು ಬಂಗಾರವಾಗಿ ಪರಿವರ್ತನೆಯಾಗು ತ್ತಿದೆ. ಇನ್‌ಫೋಸಿಸ್ ವಿಪ್ರೋತ್ತಮರು ನೆಲೆಸಿರುವ ಈ ಅಲಕಾವತಿಗಳಲ್ಲಿ ಕಂಪ್ಯೂಟರ್ ಭಾಷೆಯೆದುರು ಕನ್ನಡ ಭಾಷೆ ಸಹಜವಾಗಿಯೇ ಸೋತಿದೆ. ಮೇಘ ಸಂದೇಶ ತಲುಪುತ್ತಿಲ್ಲ. ಹಣದ ಝಣ ಝಣದ ಪದತಲದಲ್ಲಿ ಸರಸ್ವತಿಯ ಹಳೆಯ ಕನ್ನಡ ಪುಸ್ತಕ, ಚಿಂದಿಯಾಗಿ ಬಿದ್ದಿದೆ, ರಾಜಧಾನಿಯ ದಾಸಾನು ದಾಸರು ‘ಏನು ಧನ್ಯಳೋ ಲಕುಮಿ..’ ಎಂದುಕೊಂಡು ವಿಧಾನಸೌಧದ ಮೆಟ್ಟಿಲುಗಳಲ್ಲಿ ಮಹಾನ್ವೇಷಣೆಯ ಸ್ವಾರಸ್ಯ ವನ್ನು ಚರ್ಚಿಸುತ್ತ ಜ್ಞಾನಪೀಠಕ್ಕೆ ಪೀಠಿಕೆ ಹಾಕುತ್ತಿದ್ದರೆ ಯಾರಿಗೆ ತಾನೇ ಕನ್ನಡದ ನೆಲೆ-ನೆಲೆ ಬೇಕಾಗಿದೆ?

  ಆದ್ದರಿಂದಲೇ ಹಿಡಿಯಷ್ಟಾದರೂ ಸಾಂಸ್ಕೃತಿಕ ಸಂಪತ್ತನ್ನೊದಗಿಸುತ್ತಿದ್ದ ಹಳ್ಳಿ ಗಾಡಿನ ಸರಸ್ವತಿ ಪುತ್ರರು ಬೆಂಗಳೂರಿಗೆ, ಮತ್ತು ಅಲ್ಲಿಂದಾಚಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಗುಳೆ ಹೋಗುತ್ತಿ ದ್ದಾರೆ. ‘ಎಂಥ ಗುಣವೇ ಕನ್ನಡಾಂಬೆಯ ನಿನ್ನ ಈ ನೆಲಕೆ..’ ಎಂದು ತೇವರಹಿತ ಗಂಟಲು ಮೂಲೆಯಲ್ಲೆಲ್ಲೋ ಹಾಡಲು ಯತ್ನಿಸುತ್ತಿದೆ. ಕನ್ನಡದ ಸಮಸ್ಯೆ ಹಿತೋಪದೇಶದಿಂದ ಪರಿಹಾರವಾಗದು. ಅಡಿಗರು ‘ಕೃತಿ’ ಕವನದಲ್ಲಿ ಬರೆದಂತೆ ‘ಹತ್ತು ಕೊಡದಷ್ಟುಚ್ಚೆ ಪ್ರತಿನಿತ್ಯ ಹೊಯ್ದರು ಕೂಡ, ಮಗು ಹುಟ್ಟುವುದಿಲ್ಲ’ ಅದನ್ನು ನಾಡಿನ ಮೂಲೆ ಮೂಲೆಗಳಲ್ಲಿ ಅನುಷ್ಠಾನಗೊಳಿಸುವ ಕಾಯ- ವಾಚಾ-ಮನಸಾ ಇಚ್ಛಾಶಕ್ತಿಯಿರಬೇಕು.

  ನಮ್ಮ ಸಾಂಸ್ಕೃತಿಕ ಪ್ರತಿನಿಧಿಗಳಂತೆ ಮಾತನಾಡುವ ಅನೇಕ ಮಂದಿ ಅಕಾಡಮಿಗಳ, ಪ್ರಾಧಿಕಾರಗಳ ಸ್ವಾಯತ್ತತೆ, ಕಾಯಕಲ್ಪ ಮುಂತಾದ ವಿಚಾರಗಳ ಕುರಿತೇ ತಲೆ ಕೆಡಿಸಿಕೊಳ್ಳುತ್ತಾರೆ. ನಿಜ; ಆದರೆ ಇವೆಲ್ಲ ಬೆಂಗಳೂರಿನಲ್ಲಿ ಬೆಂಗಳೂರಿನವರಿಂದ ಬೆಂಗಳೂರಿನವರಿಗಾಗಿ ಎಂಬ ಹಾಗೆ ಪ್ರಕಾಶಗೊಂಡರೆ ಏನೂ ಪ್ರಯೋಜನ ವಿಲ್ಲ. ಈ ಎಲ್ಲಾ ಅರೆ-ಬರೆ ಸರಕಾರೀ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಕನ್ನಡವೇ ಮಾತನಾಡುವ ಹಳ್ಳಿಗಾಡಿನ ಜನರೆಷ್ಟಿದ್ದಾರೆ? ವಯಸ್ಸೇ ಕಾರಣವಾಗಿ ಪುನರ್ವಸತಿಗೊಂಡ ನಿವೃತ್ತರೋ ವೃದ್ಧರೋ ಹೊರತುಪಡಿಸಿದರೆ ಉಳಿದವರಲ್ಲಿ ಬಹುಮಂದಿ ಮೆಕಾಲೆಯ ಮಕ್ಕಳೇ ಆಗಿದ್ದಾರೆ. ಇಂಥವರಿಂದ ಕನ್ನಡದ ಕೆಲಸ ಏನು ನಡೆದೀತು?

  ಈ ವಿಶ್ವವಿದ್ಯಾಲಯದಿಂದ ಆ ವಿಶ್ವ ವಿದ್ಯಾಲಯಕ್ಕೆ, ಆ ವಿಶ್ವವಿದ್ಯಾಲಯದಿಂದ ಈ ವಿಶ್ವವಿದ್ಯಾಲಯಕ್ಕೆ ಹೀಗೆ ಬುಕ್ ಅಡ್ಜಸ್ಟ್‌ಮೆಂಟಿನಂತೆ ವಿನಿಮಯಿಸಿಕೊಂಡು ಅಕಾಡಮಿಗಳ ಖರ್ಚಿನಲ್ಲಿ ಸೆಮಿನಾರು ನಡೆಸಿದರೆ, ಪುಸ್ತಕ ಪ್ರಕಟಿಸಿದರೆ ಕನ್ನಡ ಉಳಿಯುತ್ತದೆ-ಬೆಳೆಯುತ್ತದೆ ಎಂದು ನಂಬುವು ದಾದರೆ ಚರ್ಚೆಯೇ ಬೇಡ. ಆದರೆ ಕನ್ನಡದ ನಿಜವಾದ ಯಾವುದೇ ಪ್ರಯೋಗಗಳು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಪಂಚಾಯತು -ಸಹಕಾರಿ ಸಂಘಗಳ ಪರಿಸರ ದಲ್ಲಿ ಜನ ನಾಡಿಬಡಿತ ಕೇಳಿಸುವಲ್ಲಿ ನಡೆಯಬೇಕು.

  ಅಲ್ಲೂ ಅಷ್ಟೇ; ಯಾರೋ ಒಬ್ಬರು (ಬಿಡುವಿಲ್ಲದಿದ್ದರೂ) ಮುಖ್ಯ ಅತಿಥಿಗಳಂತೆ ಬಂದು ಸಂತೆಯ ಹೊತ್ತಿಗೆ ನೇಯ್ದು ಮೂರು ಮೊಳವನ್ನೋ, ಆಗತಾನೇ ಯಾವುದಾದ ರೊಂದು ಜಾಗತೀಕೃತ ಸಮ್ಮೇಳನದಲ್ಲಿ ಕೇಳಿದ ಉಪದ್ವಾಪವನ್ನೋ ಧಾರೆಯೆರೆದು ಹರಕೆ ಸಂದಾಯ ಮಾಡಿ ಹೋದರೆ ಉಪಯೋಗವಿಲ್ಲ. ಜನಪರವಾದ ಚರ್ಚೆಗೆ ಅವಕಾಶವಾಗುವಂತೆ ಸರಳವಾದ ಸೂತ್ರಗಳಿದ್ದರೆ ಮಾತ್ರ ಸುಸೂತ್ರಕ್ಕೆ ಅರ್ಥ ಬಂದೀತು.

  ನಮ್ಮ ಅನೇಕ ಕನ್ನಡಪರ ಚರ್ಚೆಗಳು ಚಂಪಾ ಹೇಳಿದಂತೆ ‘ಟಾಡಾ’ (ಟಿ.ಎ.ಡಿ.ಎ) ಚರ್ಚೆಗಳಾಗಿ ಅವಸಾನ ಹೊಂದಿದ್ದರೆ ಪರಿಣಾಮವಾಗಿ ಕನ್ನಡದ ಸಮಸ್ಯೆಗಳೇನೆಂದು ಯಾರಿಗೂ ತಿಳಿಯುವುದಿಲ್ಲ.ಸರಕಾರಿ ಸಂಸ್ಥೆಗಳು ಪಾಲುದಾರರೋ ಭಾಗೀದಾರರೋ ಆದರೆ ಸಾಕು ಅಲ್ಲಿ ಮೆರವಣಿಗೆ ಸ್ವಾಗತ-ಪರಿಚಯ-ಹೊಗಳಿಕೆ-ಸನ್ಮಾನ-ಕನಿಷ್ಠ ಅರ್ಧ ಡಝನ್ ಭಾಷಣಗಳ ಕಿವಿಗಡಚಿಕ್ಕುವ ಮೊಳಗಾಟ -ಸ್ಮರಣಿಕೆ-ಧನ್ಯವಾದಗಳ ಸದ್ದಿನಲ್ಲಿ ಕನ್ನಡಮ್ಮನ ಆಕ್ರಂದನ ಯಾರಿಗೂ ಕೇಳಿಸುವುದಿಲ್ಲ. ಕೇಳುವುದಕ್ಕಾಗಿ ಬಂದ ಮುಗ್ಧ ವಿದ್ಯಾರ್ಥಿಗಳೋ, ಅಭಿಮಾನಿ ಪ್ರಜೆಗಳೂ ಅಭಿವ್ಯಕ್ತಿಯ ಅವಕಾಶವೇ ಇಲ್ಲದೆ ಬಲಿಪಶುಗಳಂತೆ ಕುಳಿತುಕೊಳ್ಳುವು ದನ್ನು ಅನೇಕ ಕಾರ್ಯಕ್ರಮಗಳಲ್ಲಿ ಕಾಣಬಹುದು.

  ಬದಲಾಗಿ ಇಂತಹ ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಿ. ಸಭಾಸದರಲ್ಲಿ ಸರಕಾರದ ಪ್ರಜಾಪ್ರಭುತ್ವದ ಪ್ರಾತಿನಿಧಿಕ ಅಂದರೆ ಅಕಾಡಮಿಗಳ, ಪ್ರಾಧಿಕಾರಗಳ, ಕನ್ನಡ ಸಾಹಿತ್ಯ ಪರಿಷತ್ತಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮತ್ತಿತರ ಉನ್ನತ ಪದಾಧಿಕಾರಿಗಳು ವೌಲ್ಯ ಮಾಪಕರಂತೆ ಕುಳಿತು ಕೊಳ್ಳುವುದು, ಊರ ಜನರು ತಮ್ಮ ಕನ್ನಡತನವನ್ನು ಅಭಿ ಮಾನವನ್ನು. (ಕಿಂಚಿದೂನವನ್ನೂ) ವೇದಿಕೆಯಲ್ಲಿ ಹೇಳಿ ಕೊಳ್ಳುವುದು. ಅವರ ಪೈಕಿ ಶಕ್ತ ಅಭಿವ್ಯಕ್ತರನ್ನು ಆರಿಸಿ ಅವ ರಿಗೆ ಗ್ರಾಮಕ್ಕಿಂತ ಮೇಲ್ಮಟ್ಟದ ಕೇಂದ್ರದಲ್ಲಿ ವೇದಿಕೆಯನ್ನು ಕಲ್ಪಿಸುವುದು.ಹೀಗೆ ಆರಿಸಲ್ಪಟ್ಟ ಮಂದಿಗಳು ವಿಭಾಗೀಯ ಮಟ್ಟದಲ್ಲೋ, ರಾಜ್ಯಮಟ್ಟದಲ್ಲೋ, ಪ್ರತಿನಿಧಿಸುವ ಹಂತದ ವರೆಗಿನ ಎಲ್ಲ ಅಭಿಪ್ರಾಯಗಳನ್ನು ರಾಜ್ಯಾದ್ಯಂತ ವಿನಿಮ ಯಿಸುವುದು, ಮತ್ತು ಅವಕ್ಕೆ ಸೂಕ್ತ ಮಣೆ ಹಾಕುವುದು.

  ಹೀಗೆ ಮಾಡುವುದರಿಂದ ಸಾಂಸ್ಕೃತಿಕ ವಿಕೇಂದ್ರೀಕರಣ ಸಾಧ್ಯವಾಗಬಹುದು. ಜೊತೆಗೆ ದನಿಯಿಲ್ಲದವರ ದನಿ ಎಲ್ಲೆಡೆ ಕೇಳಿ ಬರಬಹುದು.ನಮ್ಮ ಸ್ವಘೋಷಿತ ಸಾಂಸ್ಕೃತಿಕ ಹರಿಕಾರರಿಗೆ ಕನ್ನಡದ ಕುರಿತು ತಾವಲ್ಲದೆ ಇನ್ನೂ ಹಲವರು ಹೇಳ ಬಲ್ಲವರಿದ್ದಾರೆ ಎಂದು ಅರಿವಾಗಬಹುದು.ಕುವೆಂಪು ಜನ್ಮಶತಮಾನೋತ್ಸವ ಸಮಾರಂಭವೊಂದರಲ್ಲಿ ಅತ್ಯಾಧುನಿಕ ವಿದ್ವಾಂಸರೊಬ್ಬರು ವಿರಚನವಾದ- ನಿರಚನ ವಾದ-ಆಧುನಿಕೋತ್ತರ ವಾದಗಳನ್ನು ತಮ್ಮದೇ ಆದ ನಿಗೂಢ ತರಂಗಾಂತರದಲ್ಲಿ ಮಾತನಾಡಿದರಂತೆ, ಸಭೆಗೆ ಆಗಮಿಸಿದ ಕುವೆಂಪು ಅಭಿಮಾನಿ ಪ್ರೇಕ್ಷಕಗಡಣ ಬೈದು ಕೊಂಡು ಹೋದರಂತೆ. (ಈ ಭಾಷಣಕ್ಕೆ ಕಾರಣರಾದ ಸಂಘಟಕರಿಗೆ ಬೈದರೆ ಅಡ್ಡಿಯಿಲ್ಲ.ಆದರೆ ಕುವೆಂಪು ಅವರಿಗೂ ಬೈದರೇನೋ? ಗೊತ್ತಿಲ್ಲ) ಹೊಸತನ ಹೊಸ ಪಂಥ ಗಳಿರಲಿ. ಆದರೆ ಅವು ಸಂವಹನವಾಗದಿದ್ದರೆ ಕತ್ತಲಲ್ಲಿ ಕಣ್ಣು ಹೊಡೆದಂತಾದೀತೇ ವಿನಾ ಏನೂ ಪ್ರಯೋಜನವಾಗದು.
  ­

  ಕನ್ನಡದ ಉದ್ಧಾರಕ್ಕೆ ಮನಸ್ಸಿದೆಯೇ? ಕೇರಳಕ್ಕೇ ಹೋದರೆ ಮಲೆಯಾಳೇತರ ನಾಮಫಲಕಗಳನ್ನು ಹುಡುಕಿ ಹಿಡಿಯಬೇಕು, ಅಷ್ಟು ಅಪರೂಪ. ಕನ್ನಡನಾಡಿನಲ್ಲಿ..? ಕನ್ನಡದ ನಾಮಫಲಕಗಳಿದ್ದರೆ ಅವು ನಿಯಮಪಾಲನೆಯ ಬಲವಂತದ ಮಾಘಸ್ನಾನದ ಫಲ. ಯಾರಿಗೆ ಹೇಳಿಕೊಳ್ಳ ಬೇಕು ಈ ಸಂಕಷ್ಟ? ಪ್ರತಿಷ್ಠೆ- ಪ್ರಶಸ್ತಿಗಳನ್ನು ಸ್ವಲ್ಪ ಬದಿಗಿಟ್ಟು, ಮಣ್ಣು ರಸ್ತೆಗಿಳಿಯಿರಿ! ಕನ್ನಡದ, ಕನ್ನಡ ಸಾಹಿತ್ಯ-ಸಂಸ್ಕೃತಿಯ ಕುರಿತು ಮಾತನಾಡುವುದಕ್ಕೆ ಕನ್ನಡದ ಪದವಿಗಳು ಸಾಕು, ಇಂಗ್ಲೆಂಡು-ಅಮೆರಿಕಗಳ ಸನ್ನದುಗಳು ಬೇಕಿಲ್ಲವೆಂಬ ತೃಪ್ತಿ ಅಭಿಪ್ರಾಯ ನೆಲೆಗೊಳ್ಳಬೇಕು. ಷೆಲ್ಡನ್ ಪೊಲ್ಲಾಕ್ ಹೇಳದಿದ್ದರೂ ಕವಿರಾಜ ಮಾರ್ಗ ಸೃಷ್ಟಿಸಿದ ಪ್ರತಿಜಗತ್ತು ಶ್ರೇಷ್ಠವೆಂಬೋ ಭಾವ ತುಂಬಿ ತುಳುಕಬೇಕು.

  ನಾಡು-ನುಡಿಯ ವ್ಯಾಕರಣಗಳು ಪ್ರಾಥಮಿಕ ಪೂರ್ವ ಸ್ಥಿತಿಯಿಂದಲೇ ಜಾರಿಗೆ ಬರಬೇಕು. ಹಿಂದೆ ಉಗ್ರಾಣ ಮಂಗೇಶರಾಯರು ಬರೆದಂತಹ ಕನ್ನಡ ವ್ಯಾಕರಣಗಳು ಪಠ್ಯವಾಗಬೇಕು. ದೇಶಿಯ ಹೆಸರಿನಲ್ಲೋ ನೆಪದಲ್ಲೂ ಹೇಗೆ ಬರೆದರೂ ಅದು ಕನ್ನಡವಾಗುತ್ತದೆಂಬ ತಾತ್ಸಾರ ತೊರೆಯಬೇಕು. ಏಳು ಬೀಳುಗಳೆಂಬ ಕೂಡು ನುಡಿಗಳ ಬದಲಿಗೆ ಏಳುಗಳು-ಬೀಳುಗಳು ಎಂದು ನಮ್ಮ ಕನ್ನಡ ವಿದ್ವಾಂಸರೊಬ್ಬರು ಪ್ರಯೋಗಿಸುವುದನ್ನು ಕೇಳಿದ್ದೇನೆ. ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನವು ಹೊರತಂದ ಕೆಲವು ಪಠ್ಯಗಳಲ್ಲಿ ಅಲ್ಪಪ್ರಾಣ-ಮಹಾಪ್ರಾಣ, ಲಘು- ಗುರುಗಳು ಅದ್ವೈತಗೊಂಡು ಭಾಷೆಯ ಜೀವಕ್ಕೆ ಸಂಚ ಕಾರವಾಗುವಂತಹ ರಿಯಾಯಿತಿಗಳಿವೆ!

  ನಮ್ಮ ಪೂರ್ವ ಸೂರಿಗಳು ರಚಿಸಿದ ಒಳ್ಳೆಯ ಕನ್ನಡ ಸಾಹಿತ್ಯವು ವಿದ್ಯಾರ್ಥಿಗಳಿಗೆ ಪಠ್ಯವಾದರೆ ಸಾಲದು; ಅದನ್ನು ಮನಪೂರ್ವಕ ಮತ್ತು ಯೋಗ್ಯವಾಗಿ ಪಾಠ ಮಾಡಬಲ್ಲ ಅಭಿಮಾನಿ ಅಧ್ಯಾಪಕರು ನೇಮಕಗೊಳ್ಳಬೇಕು. ಕನ್ನಡ ಕಾರ್ಯಕ್ರಮ ಗಳಿಲ್ಲದ ಕಂಪ್ಯೂಟರ್ ಆಗಲಿ, ಟೀವಿಯಾಗಲಿ ಸರಕಾರದ ಅಥವಾ ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಸರಬರಾಜಾಗಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಮಾತನಾಡಿದರೆ ಸರಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಹೆಚ್ಚು ಗೌರವ, ಮಾನ್ಯತೆ ಪ್ರಾಪ್ತವಾಗಬೇಕು. ಲಾಭಕ್ಕಾಗಿ ಅದು ವ್ಯಾವಹಾರಿಕವಿರಲಿ, ವರ್ಚಸ್ಸಿನದ್ದಿರಲಿ, ಇಂಗ್ಲಿಷನ್ನು ಅರಸಿ ಕೊಂಡು ಹೋಗುವಂತಿರಬಾರದು.

  ಪರಭಾಷಾ ಬಂದಣಿಕೆಗಳಿಂದಾಗಿ ಸೊರಗುತ್ತಿರುವ ಕನ್ನಡ ವೃಕ್ಷದ ಕಾಯಕಲ್ಪಕ್ಕೆ ಇಂಥ ನೂರೆಂಟು ಸಾಧ್ಯತೆ ಗಳನ್ನು ಪಟ್ಟಿ ಮಾಡಬಹುದು. ಆದರೆ ಇವಿಷ್ಟೇ ಸಾಲದು. ಬೇಕಾಗಿರುವುದು ಕನ್ನಡತನದ ಪ್ರಾಮಾಣಿಕತೆ. ಈಗಿನ ಸ್ಥಿತಿಗೆ ಈ ಪ್ರಾಮಾಣಿಕತೆಯ ಅಭಾ ವವೇ ಕಾರಣವೆಂಬ ಗುಮಾನಿ ನನಗಿದೆ. ಏನಕೇನ ಪ್ರಕಾರೇಣ ಪ್ರಸಿದ್ಧಿ ಪಡೆಯುವ ಹಂಬಲಿಗರ ನೂಕು ನುಗ್ಗಲಿನಲ್ಲಿ ಕನ್ನಡ ಬಡ ವಾಗುತ್ತಿದೆ. ಮಂತ್ರಿಗಳ ಆರ್ಥಿಕ ಚಿಂತನೆಯಲ್ಲಿ ಭಾಗವಹಿಸುವ ಸಾಹಿತಿಗಳ ರಾಜಕೀಯ ಚಿಂತನೆಯ ಕುರಿತ ಗೋಷ್ಠಿ ನಡೆಯುವುದು ಅಗತ್ಯವೇನೋ? ಎಲ್ಲಿಯವರೆಗೆ ಪ್ರಾಮಾಣಿಕತೆಯ ಅಭಾವವಿದೆಯೋ ಅಲ್ಲಿಯವರೆಗೂ ಕನ್ನಡ ತೀವ್ರ ನಿಗಾವಹಿಸುವ ಕೊಠಡಿ ಯಲ್ಲೇ ಉಳಿಯುತ್ತದೆ.

  ನುಡಿ ಮತ್ತು ನಡೆಯ ನಡುವಲ್ಲಿ ಕನ್ನಡನುಡಿ ನರಳುತ್ತದೆ. ಜಿಜ್ಞಾಸುಗಳು ‘ಕಾವೇರಿಯಿಂದ ಮಾಗೋದಾವರಿವರಮಿರ್ದ..’ ಎಂದು ಹಾಡಿ ಹೊಗಳಿದರೆ ಕನ್ನಡಮ್ಮನ ಜೀವಂತ ಆತ್ಮಕ್ಕೆ ಶಾಂತಿ ದೊರಕೀತೆ? ಈ ಅಪ್ರಾಮಾಣಿಕತೆಯನ್ನು ಪ್ರಮಾಣೀ ಕರಿಸುವುದು ಹೇಗೆ? ಕನ್ನಡ ಸದ್ಯಕ್ಕೆ ಕೃತಕ ಶ್ವಾಸೋ ಚ್ಛಾಸದ ಆರೈಕೆಯಲ್ಲಿದೆ. ‘ವಿಲ್ಸನ್ ಗಾರ್ಡನ್’ ಚಿತಾಗಾರ ಪಕ್ಕದಲ್ಲಿದೆ. ಅಂತಹ ಅಸಹಾಯಕತನದ ಹಣೆಬರಹ ಕನ್ನಡಕ್ಕೆ, ಕನ್ನಡಿಗರಿಗೆ ಕಾದಿದೆಯೇನೋ ಎಂಬ ಆತಂಕ ನಮ್ಮನ್ನು ಕಾಡಬೇಕಾಗಿದೆ.

  ನಮ್ಮ ಪ್ರಶಸ್ತಿ ಪುರಸ್ಕೃತರು..

  ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...