Thursday, September 29, 2011

ಸಂತೋಷ ಮತ್ತು ಇತರ ಕತೆಗಳು


ಕೊಲೆ
ಅವನೊಬ್ಬ ಕ್ರೂರಿ. ನೂರಾರು ಕೊಲೆಗಳನ್ನು ಮಾಡಿದ್ದ.
ಅವನಿಗೆ ವಯಸ್ಸಾಯಿತು. ಮುದುಕನಾಗಿ ಅವನು ನಿಶ್ಶಕ್ತನಾಗಿ ಮೂಲೆ ಸೇರಿದ.
ಆಗ ನೂರಾರು ಜನ ಅವನ ಸುತ್ತ ಸೇರಿದರು.
ಅತ್ಯಂತ ಕ್ರೂರವಾಗಿ ಥಳಿಸಿ, ಥಳಿಸಿ ಕೊಂದರು.
ಬಳಿಕ ಹೇಳಿದರು ‘‘ಅವನನ್ನು ಕೊಂದೆವು’’
ಆದರೆ ಅವನು ಸತ್ತಿರಲಿಲ್ಲ.
ಅವರೆಲ್ಲರ ರಕ್ತದ ಕಣಕಣಗಳಲ್ಲಿ ಸೇರಿ, ನಗುತ್ತಿದ್ದ.

ಪ್ರಶ್ನೆ
ಹಲವರನ್ನು ಕೊಂದ ಕಟುಕನಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು.
ಗಲ್ಲು ಶಿಕ್ಷೆಯ ದಿನ ಆತನೊಂದಿಗೆ ಕೇಳಿದರು
‘‘ನಿನಗೆ ಏನಾದರೂ ಆಸೆಗಳಿವೆಯೆ?’’
ಆತ ವಿಷಾದದಿಂದ ಉತ್ತರಿಸಿದ ‘‘ಈ ಪ್ರಶ್ನೆಯನ್ನು 20 ವರ್ಷಗಳ ಹಿಂದೆ ಕೇಳಿದ್ದಿದ್ದರೆ ನೀವು ನನಗೆ ಗಲ್ಲು ಶಿಕ್ಷೆ ನೀಡುವ ಪರಿಸ್ಥಿತಿಯೇ ಒದಗುತ್ತಿರಲಿಲ್ಲ. ತುಂಬಾ ತಡಮಾಡಿದಿರಿ’’

ಚಪ್ಪಲಿ
ಒಬ್ಬ ಜಿಪುಣ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿದ್ದ.
ಬಿಸಿಲು ಸುಡುತ್ತಿದ್ದರೂ, ಚಪ್ಪಲಿ ಸವೆಯುತ್ತದೆಯಲ್ಲ ಎನ್ನುವುದು ಅವನ ಆತಂಕ.
ದಾರಿ ಹೋಕನೊಬ್ಬ ಅದನ್ನು ನೋಡಿ ಕೇಳಿದ ‘‘ಹಾಗಾದರೆ ಚಪ್ಪಲಿಯನ್ನು ಕೊಂಡುಕೊಂಡದ್ದಾದರೂ ಯಾಕೆ?’’
‘‘ನಾನೆಲ್ಲಿ ಕೊಂಡುಕೊಂಡೆ? ಇದು ನನ್ನ ಅಪ್ಪನಿಗೆ ನನ್ನ ತಾತನಿಂದ ಸಿಕ್ಕಿದ್ದು. ಅಪ್ಪನಿಂದ ನನಗೆ ಸಿಕ್ಕಿತು’’ ಜಿಪುಣ ಉತ್ತರಿಸಿದ.

ಹಣ್ಣು
ಒಬ್ಬ ಹಣ್ಣಿನ ವ್ಯಾಪಾರಿ ಸಂತೆಯಲ್ಲಿ ಕುಳಿತಿದ್ದ.
‘ಸಿಹಿಯಾದ ಹಣ್ಣು...ಸಿಹಿಯಾದ ಹಣ್ಣು ಬನ್ನಿ ಬನ್ನಿ’ ಎಂದು ಕೂಗುತ್ತಿದ್ದ.
ಅಷ್ಟರಲ್ಲಿ ಒಬ್ಬ ಸಿಟ್ಟಿನಿಂದ ಬಂದು ಹೇಳಿದ ‘‘ನೀನು ಸುಳ್ಳು ಹೇಳುತ್ತಿದ್ದೀಯ...ಅದು ಹುಳಿ ಹಣ್ಣು...ನಿನ್ನೆ ತೆಗೆದುಕೊಂಡು ಹೋಗಿ ನಾನು ಮೋಸ ಹೋದೆ...ಸುಳ್ಳುಗಾರ...’’
ವ್ಯಾಪಾರಿ ತಣ್ಣಗೆ ಹೇಳಿದ ‘‘ನೀನು ಶ್ರೀರಾಮ ಅನ್ನುವುದು ನನಗೆ ಗೊತ್ತಿದ್ದಿದ್ದರೆ ನಾನದನ್ನು ಶಬರಿಯಂತೆ ಕಚ್ಚಿ ರುಚಿ ನೋಡಿ ಕೊಡುತ್ತಿದ್ದೆ’’

ಸಂತೋಷ
ಜೋರಾದ ಬಿರುಗಾಳಿಗೆ ಸಂತನ ಆಶ್ರಮ ಬಿದ್ದು ಬಿಟ್ಟಿತು. ಶಿಷ್ಯರು ಆತಂಕದಿಂದ ಕೇಳಿದರು ‘‘ಗುರುಗಳೇ ಏನು ಮಾಡೋಣ?’’
ಸಂತ ಹೇಳಿದ ‘‘ಬೀಳುವುದಕ್ಕೆ ಇನ್ನೇನು ಇಲ್ಲವಲ್ಲ ಎಂದು ಸಂತೋಷ ಪಡೋಣ’’

ಸ್ವರ್ಗ-ನರಕ
ನರಕ-ಸ್ವರ್ಗ ಅಕ್ಕಪಕ್ಕದಲ್ಲಿದ್ದರು.
ನರಕದ ಆಕ್ರಂದನ ಸ್ವರ್ಗದವರಿಗೆ ಕೇಳುತ್ತಿತ್ತು.
ಸ್ವರ್ಗದ ಸುಖ ನರಕದವರಿಗೆ ಕಾಣುತ್ತಿತ್ತು.
ದೇವರು ಸ್ವರ್ಗದವರಲ್ಲಿ ಕೇಳಿದ ‘‘ಹೇಗಿದ ಸ್ವರ್ಗ?’’
ಸ್ವರ್ಗದವರು ಹೇಳಿದರು ‘‘ದೇವರೇ, ಈ ಆಕ್ರಂದನವನ್ನು ಕೇಳಿಕೊಂಡು ನಾವು ಸುಖ ಪಡುವುದು ಸಾಧ್ಯವೆ?’’
ದೇವರು ನರಕದವರಲ್ಲಿ ಕೇಳಿದ ‘‘ಹೇಗಿದೆ ನರಕ?’’
ಅವರು ರೋದಿಸುತ್ತಾ ಹೇಳಿದರು ‘‘ದೇವರೇ...ಸ್ವರ್ಗದವರ ಸುಖ ನಮ್ಮನ್ನು ಬೆಂಕಿಗಿಂತಲೂ ತೀವ್ರವಾಗಿ ಸುಡುತ್ತಿದೆ. ದಯವಿಟ್ಟು ಅದರಿಂದಲಾದರೂ ನಮ್ಮನ್ನು ರಕ್ಷಿಸು’’


ಗಂಡು
ಮರಣದ ನೋವನ್ನು ಅನುಭವಿಸುತ್ತಾ ಚೀರಾಡುತ್ತಿದ್ದ ಆಕೆ ಕೊನೆಗೂ ಹೆತ್ತಳು.
ದಾದಿಯರು ಸಂತೋಷದಿಂದ ಉದ್ಗರಿಸಿದರು ‘‘ಮಗು ಗಂಡು!’’
‘‘ಆ ಮರಣದ ನೋವನ್ನು ಅನುಭವಿಸುವಾಗಲೇ ನನಗೆ ಗೊತ್ತಾಗಿ ಬಿಟ್ಟಿತ್ತು, ಗಂಡು ಮಗುವಾಗಿರಬೇಕೆಂದು’’ ತಾಯಿ ತನಗೆ ತಾನೆ ನಿಟ್ಟುಸಿರಿಟ್ಟು ಹೇಳಿದರು.

ಕಳವು
ಜೇನು ನೊಣವನ್ನು ನೋಡಿ ಬರೇ ನೊಣವೊಂದು ಕೇಳಿತು ‘‘ಪ್ರತಿ ಬಾರಿ ನೀನು ತಯಾರಿಸಿದ ಜೇನನ್ನು ಮನುಷ್ಯರು ಕದಿಯುತ್ತಾರೆ. ನಿನಗೆ ದುಃಖವಾಗುವುದಿಲ್ಲವೆ?’’
ಜೇನು ನೊಣ ನಕ್ಕು ಹೇಳಿತು ‘‘ಅವರು ಜೇನನ್ನಷ್ಟೇ ಕದಿಯಬಲ್ಲರು. ಜೇನು ತಯಾರಿಸುವ ನನ್ನ ಕಲೆಯನ್ನಲ್ಲ’’.


ಮಕ್ಕಳು
ಅವರಿಬ್ಬರು ನೆರೆ-ಹೊರೆಯವರು.
ಇಬ್ಬರು ಒಟ್ಟಿಗೆ ಮದುವೆಯಾದರು.
ಅವನಿಗೊಂದು ಮಗುವಾಯಿತು.
ಇವನಿಗೋ ಮಗುವಾಗಲಿಲ್ಲ.
ಕಾದು ಸುಸ್ತಾಗಿ ಆತ ಒಂದು ತೆಂಗಿನ ಗಿಡವನ್ನು ನೆಟ್ಟು ‘ಇದೇ ನನ್ನ ಮಗು’ ಎಂದ.

ಅವನಿಗೆ ಎಷ್ಟು ಮಕ್ಕಳಾಯಿತೋ, ಇವನು ಅಷ್ಟೇ ತೆಂಗಿನ ಗಿಡಗಳನ್ನು ನೆಡುತ್ತಾ, ಅವುಗಳನ್ನು ಪ್ರೀತಿಸತೊಡಗಿದ.
ಕಾಲ ಸರಿದಂತೆ ಅವನ ಮಕ್ಕಳು, ಇವನ ಗಿಡಗಳು ಬೆಳೆದವು.
ಮಕ್ಕಳು ದಾರಿತಪ್ಪಿದರು. ಆದರೆ ತೆಂಗಿನ ಗಿಡ ಎತ್ತೆರೆತ್ತರ ಬೆಳೆದು ಫಲಬಿಡತೊಡಗಿದವು.
ಒಂದು ದಿನ ಬೆಳೆದ ಮಕ್ಕಳು ‘ಅವನ’ನ್ನು ಮನೆಯಿಂದ ಹೊರ ಹಾಕಿದರು.
ಅವನು ಬಿಕ್ಕುತ್ತಾ, ನೆರೆಯ
‘ಇವನ’ ಮನೆಗೆ ಬಂದ.
ಇವನು ತನ್ನ ತೆಂಗಿನ ಗಿಡದಿಂದ ಎಳೆನೀರನ್ನು ಕಿತ್ತು, ಅವನಿಗಿತ್ತು ಸಂತೈಸಿದ.ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

ಜಗತ್ತನ್ನು ಸಹ್ಯಗೊಳಿಸುವ ಕನಸುಗಾರಿಕೆಯ ಸುತ್ತಒಂದು ವೇಳೆ ಕನಸುಗಳೇ ಇಲ್ಲದಿದ್ದರೆ ಜಗತ್ತು ಹೇಗಿರುತ್ತಿತ್ತು? ಕನಸುಗಳೆಂದರೆ ನಿದ್ದೆಯಲ್ಲಿ ಬರುವ ಕನಸುಗಳು ಮಾತ್ರವಲ್ಲ, ಜಾಗರದಲ್ಲೂ ಕನಸುಗಳಿವೆ. ಕನಸುಗಳಿಲ್ಲದ ಇರುಳುಗಳು ಅದೆಷ್ಟು ಅಪರೂಪವೋ ಅಷ್ಟೇ ಅಪರೂಪ ಹಗಲುಗನಸುಗಳಿರದ ಹಗಲುಗಳು.

ಕನಸುಗಳು, ಹಗಲುಗನಸುಗಳು ಮಾಯವಾದರೆ ನಮ್ಮ ಜಗತ್ತು ಬಹಳ ಅಸಹನೀಯವಾಗಿ ಬಿಡುತ್ತಿತ್ತು.ಗಜೇಶ ಮಸಣಯ್ಯನೆನ್ನುವ ವಚನಕಾರ ಈ ಅಸಹನೀಯ ಯಾತನೆಯನ್ನು ತುಂಬಾ ಹೃದ್ಯವಾಗಿ ಚಿತ್ರಿಸುತ್ತಾನೆ.

`ಅಗಲಿದ ನಲ್ಲರ ಕನಸಲ್ಲಿ ಕೂಡಿ ನೀವು ಸುಕಹಿಯಾದಿರವ್ವ.ನಮಗೆ ನಮ್ಮ ಗಜೇಶ್ವರಲಿಂಗನನಗಲಿ ನಿದ್ದೆ ಬಾರವು ಕನಸೆಲ್ಲಿಂದ ಬಪ್ಪುದವ್ವಾ?`

ನಡುಗೆಯಲ್ಲೋ ಬಸ್ಸು, ಕಾರು, ಏರೋಪ್ಲೇನುಗಳಲ್ಲೋ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಾಗ ನಮ್ಮ ದೇಹಗಳು ಒಂದೇ ಒಂದು ಪ್ರಯಾಣ ಮಾಡಿರುತ್ತವೆ.

ಆದರೆ ಮನಸ್ಸು? ಅದೆಷ್ಟೋ ಪ್ರಯಾಣಗಳನ್ನು ಮಾಡಿರುತ್ತವೆ, ಹಗಲುಗನಸುಗಳಲ್ಲಿ, ಅರೆಗನಸುಗಳಲ್ಲಿ, ಊಹಾಪೋಹಗಳಲ್ಲಿ, ಕಲ್ಪನೆಗಳಲ್ಲಿ.ಪ್ರಾಣಿಗಳು ಕನಸು ಕಾಣುತ್ತವೇನು? ಗಿಡಮರಗಳು? ಕಲ್ಲುಗಳು, ಖನಿಜಗಳು? ಕಲ್ಲು ಯಾವ ವಿಗ್ರಹ ಅಥವಾ ಕಟ್ಟಡವಾಗಬೇಕೆಂದು ಕನಸು ಕಾಣುತ್ತದೆ? ಮೋಡ ಯಾವ ನಾಡಿನಲ್ಲಿ ಸುರಿಯಬೇಕೆಂದು ಕನಸು ಕಾಣುತ್ತದೆ?

ಸುಂದರ ಬಟ್ಟೆಬರೆಗಳು ಯಾರ ದೇಹಕ್ಕೆ ಉಡುಪಾಗಬೇಕೆಂದು ಕನಸುತ್ತಿವೆ? ಹೊನ್ನು ಯಾರಿಗೆ ತೊಡುಗೆಯಾಗಬೇಕೆಂದು ಕನಸುತ್ತಿದೆ? ಇಂಥ ಪ್ರಶ್ನೆಗಳು ನಮ್ಮ ಕನಸುಗಾರಿಕೆಯ ದ್ಯೋತಕಗಳೇ ಹೊರತು ಆ ವಸ್ತುಗಳವಲ್ಲ. ಬಹುಶಃ ಮಾನವರ ಹೊರತು ಇತರೆ ಜೀವಗಳಿಗೆ ಕನಸೆಂಬುದಿಲ್ಲ.

ಆದ್ದರಿಂದಲೇ ಇರಬೇಕು ಇತಿಹಾಸದ ಮೊದಲ ಬೆಳಗಿನಿಂದಲೇ ಮಾನವರು ಕನಸಿನ ಬಗ್ಗೆ ಕುತೂಹಲ ತಾಳಿದರು. ಹಲವು ಜನಾಂಗಗಳು ತಮ್ಮ ಪುರಾಣ ಕತೆಗಳಲ್ಲಿ, ಲೋಕದೃಷ್ಟಿಯಲ್ಲಿ ಕನಸುಗಳಿಗೆ ಎಲ್ಲಿಲ್ಲದ ಮಹತ್ವ ನೀಡುತ್ತಾ ಬಂದಿವೆ.

ಆಸ್ಟ್ರೇಲಿಯಾದ ಉಡುಗ್ರೂ ಜನಾಂಗದವರು ನಮ್ಮ ನಿನ್ನೆ-ಇಂದು-ನಾಳೆಗಳ ಜಾಗರದ ಕಾಲವನ್ನು ಇಂತಹ ಕಾಲದ ವಿಭಜನೆಗಳಿಲ್ಲದ ಸ್ವಪ್ನಕಾಲದ ಸಣ್ಣಭಾಗವನ್ನಾಗಿ ನೋಡುತ್ತಾರೆ. ಅವರ ಪ್ರಕಾರ ಜಾಗರದ ಕಾಲ ಮಾನವಲೋಕದ ಕಾಲ.

ಸ್ವಪ್ನಕಾಲ ದೇವ ದಾನವರ, ಅತಿಮಾನುಷ ಶಕ್ತಿಗಳ ಕಾಲ. ಇವೊತ್ತಿನ ಪರಿಭಾಷೆಯಲ್ಲಿ ಈ ಬಿಡಿನೋಟವನ್ನು ಇತಿಹಾಸ ಪುರಾಣಗಳ ಕಲ್ಪನೆಗೆ ಹೋಲಿಸಬಹುದು. ತಮ್ಮ ಇತಿಹಾಸಗಳನ್ನು ದಾಖಲಿಸದ ಎಷ್ಟೋ ಜನಾಂಗಗಳು ಇಂದಿಗೂ ಪೃಥ್ವೀಮಂಡಲದಲ್ಲಿವೆ. ಆದರೆ ಪುರಾಣಗಳಿಲ್ಲದ ಜನಾಂಗಗಳು ಎಲ್ಲಿಯೂ ಇಲ್ಲ.

ಪುರಾತನ ಜನಾಂಗಗಳ `ಶಮನ`ರು ಜಾಗರದ ಮತ್ತು ಸ್ವಪ್ನಕಾಲಗಳ ನಡುವೆ ಸೇತುವೆಯಾಗಿ ಈ ಎರಡೂ ಜಗತ್ತುಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾರೆ.

ಇವತ್ತೂ ಬದುಕುತ್ತಿರುವ ಕಣಿ ಹೇಳುವವರು, ಕವಡೆ ನೋಡುವರು, ಕುಂಡಲಿ ಓದುವವರು, ಟ್ಯಾರೋ ಕಾರ್ಡು ಪಂಡಿತರು, ರೂನ್ ಕಲ್ಲಿನ ತಜ್ಞರು, ಸಂಖ್ಯಾಶಾಸ್ತ್ರಿಗಳು, ಆಯ್‌ಚಿಂಗ್ ವಿದ್ವಾಂಸರು, ಮನೋವಿಶ್ಲೇಷಣಾ ಪಂಡಿತರು ಅದೇ ರೀತಿಯ ಕೆಲಸ ಮಾಡುತ್ತಾರೆ.

ಕಾಣುವ ಮತ್ತು ಕಾಣದ ಲೋಕಗಳ ಕೊಂಡಿಗಳಾಗಲು ಪ್ರಯತ್ನಿಸುತ್ತಾರೆ. ವಿಚಾರವಾದದ ಅಭೂತಪೂರ್ವ ಯಶಸ್ಸು ಈ ಪ್ರಾಚೀನ ಪ್ರವೃತ್ತಿಗಳನ್ನು ಇನ್ನೂ ನಾಶಮಾಡಲಾಗಿಲ್ಲ.

ಜಾಗರ ಮತ್ತು ಸ್ವಪ್ನಕಾಲಗಳ ಸಾಮ್ಯತೆ-ವ್ಯತಿರಿಕ್ತತೆಗಳನ್ನು `ಅರೇಬಿಯನ್ ನೈಟ್ಸ್` ನ ಒಂದು ಕತೆ ಅರ್ಥಗರ್ಭಿತವಾಗಿ ಚಿತ್ರಿಸುತ್ತದೆ.ಬಾಗ್ದಾದಿನಲ್ಲಿ ಒಬ್ಬ ಕುಂಬಾರನಿರುತ್ತಾನೆ.

ಇಡೀ ವಾರ ತಾನು ಕಷ್ಟಪಟ್ಟು ಮಾಡಿದ್ದ ಮಡಕೆಗಳನ್ನು ಹೊತ್ತುಕೊಂಡು ವಾರದ ಸಂತೆಗೆ ಹೋಗುತ್ತಾನೆ. ಅಂಗಡಿಯಲ್ಲಿ ಅವುಗಳನ್ನಿರಿಸಿ ಕೂತುಕೊಳ್ಳುತ್ತಾನೆ. ಬಹಳ ಹೊತ್ತು ಗಿರಾಕಿಗಳು ಬರುವುದಿಲ್ಲ. ಬೇಜಾರಾಗಿ ಹಗಲುಗನಸಿಗೆ ಜಾರುತ್ತಾನೆ.

ತನ್ನ ಮದುವೆ ಯಾರ ಜೊತೆಗೆ ಆಗಬೇಕು? ಒಬ್ಬ ಅನುಪಮ ಚಲುವೆಯ ಜೊತೆಗೆ. ಅಂಥವಳು ಯಾರು? ನಾಡಿನ ರಾಜಕುಮಾರಿ. ಅವಳನ್ನು ಹೇಗೆ ಪಡೆಯುವುದು? ಒಂದು ಪವಾಡವೇ ಜರುಗಬೇಕು. ಎದುರಾಳಿಗಳು ರಾಜ್ಯಕ್ಕೆ ಮುತ್ತಿಗೆ ಹಾಕುತ್ತಾರೆ.

ರಾಜನನ್ನು ಸೆರೆಹಿಡಿದುಕೊಂಡು ಹೋಗುತ್ತಾರೆ. ಆಗ ರಾಜಕುಮಾರಿಯ ಅಳಲಿಗೆ ಕೊನೆಯೇ ಇರುವುದಿಲ್ಲ. ಯಾರು ಅರಸನನ್ನು ಬಿಡಿಸಿಕೊಂಡು ಬರುತ್ತಾರೋ ಅವರ ಜೊತೆ ಮದುವೆ ಮಾಡಿಕೊಳ್ಳುವುದಾಗಿ ಅವಳು ಘೋಷಿಸುತ್ತಾಳೆ.

ಕುಂಬಾರ ಈ ಸದವಕಾಶವನ್ನು ಬಳಸಿಕೊಳ್ಳಲು ತೀರ್ಮಾನಿಸುತ್ತಾನೆ. ಏಕಾಂಗಿಯಾಗಿ ಹೋಗಿ ಶತ್ರುಗಳೊಡನೆ ಸೆಣೆಸಿ ರಾಜನನ್ನು ಬಿಡುಗಡೆ ಮಾಡುತ್ತಾನೆ. ರಾಜಕುಮಾರಿ ತನ್ನ ವಚನದ ಪ್ರಕಾರ ಕುಂಬಾರನಿಗೆ ವರಮಾಲೆ ಹಾಕುತ್ತಾಳೆ.

ಮುಂದೆ ಅವನು ಆ ಹಾರದ ವಿವರಗಳನ್ನೂ ಕಲ್ಪಿಸಿಕೊಳ್ಳತೊಡಗಿದ. ಆ ಹಾರದಲ್ಲಿ ಯಾವ ಹೂವಿರಬೇಕು? ರಾಜಕುಮಾರಿಯ ಪ್ರಕಾರ ಆ ಹಾರದಲ್ಲಿ ಬರೀ ಕೆಂಪು ಗುಲಾಬಿಯಿರಬೇಕು. ಆದರೆ ಇವನಿಗೆ ಹಲವು ಬಣ್ಣಗಳ ಗುಲಾಬಿಗಳು ಹಾರದಲ್ಲಿರಬೇಕು.

ಈ ಬಗೆ ಶುರುವಾದ ವಾದವಿವಾದಗಳು ಪರಸ್ಪರ ಬೈಗುಳದಲ್ಲಿ ಮುಂದುವರಿದು, ಕೊನೆಗವನು ಬೇಸತ್ತು ತನ್ನ ಮುಂದಿರುವ ಗುಲಾಬಿರಾಶಿಯನ್ನು ಒದೆಯತೊಡಗುತ್ತಾನೆ. ಇಲ್ಲಿಗೆ ಅವನ ಹಗಲುಗನಸು ಮುಕ್ತಾಯ.

ಪಕ್ಕದ ಅಂಗಡಿಯವ `ಏ ಹುಚ್ಚ! ನಿಲ್ಲಿಸು` ಅಂತ ಕೂಗುತ್ತಿರುತ್ತಾನೆ. ಆಗ ಕುಂಬಾರಣ್ಣ ಕಣ್ತೆರೆದು ನೋಡಿದರೆ, ಪಾಪ, ತನ್ನ ಇಡೀ ವಾರದ ದುಡಿಮೆಯಾದ ಮಡಕೆಗಳನ್ನು ಒದ್ದು ಪುಡಿಪುಡಿ ಮಾಡಿರುತ್ತಾನೆ!

ಈ ಕತೆಯಲ್ಲಿ ಕನಸುಗಾರಿಕೆ ಭೌತಿಕಲೋಕದ ಕಠೋರ ಒತ್ತಡಗಳಿಂದ ಕುಂಬಾರನಿಗೆ ಸ್ವಲ್ಪಹೊತ್ತು ಬಿಡುಗಡೆಯನ್ನೇನೋ ಕೊಡುತ್ತದೆ. ಆದರೆ ಅದೇ ಸಮಯದಲ್ಲಿ ಮಡಕೆಗಳನ್ನು ಒಡೆದುಹಾಕುವಂತೆ ಮಾಡಿ ಅವನಿಗೆ ನಷ್ಟವನ್ನೂ ಉಂಟುಮಾಡಿದೆ. ಕನಸು ಅವನಿಗೆ ಈ ಕಾರಣದಿಂದ ಮೋಸ ಮಾಡಿದೆ.

ಕನಕದಾಸರ `ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ` ಇದೇ ತೆರನ ಕನಸನ್ನು ಕಂಡಿದ್ದ. ಹೀಗೆ ಕನಸುಗಳನ್ನು ಭ್ರಮೆಯೆಂದೂ ನಶ್ವರತೆಯ ಸಂಕೇತಗಳೆಂದೂ, ಅನೇಕ ಕತೆಗಳು ಬೇರೆ ಬೇರೆ ಸಂಸ್ಕೃತಿಗಳಲ್ಲಿ ವಿಪುಲವಾಗಿವೆ.

ಈ ಅರ್ಥದಲ್ಲೇ ಅಲ್ಲಮ ಸೂರ್ಯೋದಯ ಸೂರ್ಯಾಸ್ತಗಳನ್ನು `ನೀರಲಾದ ನಿರ್ಮಿತ`ಗಳೆನ್ನುತ್ತಾನೆ. ಬ್ರಹ್ಮಾಂಡಗಳು, ಕಾಲಚಕ್ರಗಳು ಕನಸಿನಂತೆ ಅಶಾಶ್ವತವೆನ್ನುತ್ತವೆ ಬೌದ್ಧಧರ್ಮ, ವೇದಾಂತ.

ಇದಕ್ಕೆ ವಿರುದ್ಧ ದೆಸೆಯಲ್ಲಿವೆ ಕನಸಿನ ಅರ್ಥ ಹುಡುಕುವ ಪ್ರಯತ್ನಗಳು, ನಂಬಿಕೆಗಳು.
`ಕೆರೆಗೆ ಹಾರ` ಜನಪದ ಗೀತೆಯಲ್ಲಿ ತನ್ನ ಮಡದಿ ಕೆರೆಗೆ ಹಾರವಾದ ಸುದ್ದಿ ದೂರದಲ್ಲಿ ದಂಡಿಗೆ ಹೋಗಿದ್ದ ಗಂಡನಿಗೆ ಸಿಗುವುದು ಒಂದು ಕನಸಿನ ಮೂಲಕ.

ಸಂಪರ್ಕಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಬಹಳ ಜನ ಕನಸನ್ನು ಸಂಪರ್ಕಸಾಧನವನ್ನಾಗಿ ನೋಡುತ್ತಿದ್ದರು. ಅನೇಕ ಜನಪದ ಕತೆಗಳಲ್ಲಿ ಕನಸುಗಳು ನಿಜದ ವಾಹಕಗಳಾಗಿ ಬರುತ್ತವೆ.

ಉದಾಹರಣೆಗೆ, ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ಕೈವಿಡಿದು ಕಣ್ತೆರೆದದ್ದು ಒಂದು ಕನಸಿನಲ್ಲೇ. `ಅಕ್ಕ ಕೇಳವ್ವ` ವಚನದಲ್ಲಿ ಕನಸು ಮೇಲುಬಾಳಿನ ದಾರಿಯಾಗುತ್ತದೆ. ಅನುಭಾವ ಮತ್ತು ತಂತ್ರ ಪರಂಪರೆಗಳಲ್ಲಿ ಸ್ವಪ್ನದೀಕ್ಷೆಯೆಂಬ ದೀಕ್ಷಾಪ್ರಕಾರವಿದೆ.

ಸಂತ ತುಕಾರಾಮ ತನ್ನ ಗುರು ನಾಮದೇವನನ್ನು ನಿಜ ಬದುಕಿನಲ್ಲಿ ಕಾಣಲೇ ಇಲ್ಲ. ಆತ ಇನ್ನೂರುವರ್ಷಗಳ ಹಿಂದೆ ಕಾಲವಾಗಿದ್ದ. ಆದರೂ ಕನಸಿನಲ್ಲಿ ಕಾಣಿಸಿಕೊಂಡು ತುಕಾರಾಮನಿಗೆ `ಜಯರಾಮಕೃಷ್ಣ ಹರಿ` ಎಂಬ ಯಾವ ಮಂತ್ರಶಾಸ್ತ್ರದ ಗ್ರಂಥಗಳಲ್ಲೂ ಇರದ ಒಂದು ಮಂತ್ರವನ್ನು ಬೋಧಿಸಿದ.

ಸೂಫಿ ಪಂಥಗಳಲ್ಲಿ ಕನಸುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಶಿಷ್ಯ ಕಾಲಕಾಲಕ್ಕೆ ತನ್ನ ಕನಸುಗಳನ್ನು ದಾಖಲಿಸಿ ಗುರುವಿನ ಜೊತೆ ಚರ್ಚಿಸುತ್ತಾನೆ. ಆ ಕನಸುಗಳ ಆಧಾರದ ಮೇಲೆ ಗುರು ಶಿಷ್ಯನ ಪ್ರಗತಿಯನ್ನು ಅಳೆಯುತ್ತಾನೆ.

ಕೈವಾರ ನಾರೇಯಣ ತಾತನ ರಚನೆಯಲ್ಲೂ ಮಾಗಡಿ ರಂಗ ತನಗೆ ಪ್ರತ್ಯಕ್ಷನಾಗಿ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಕನಸಿನಲ್ಲಿಯೇ. ಹೀಗೆ ಕೆಲವು ಸಲ ಭ್ರಮೆಗೆ ಸಂಕೇತವಾದ ಕನಸು ಸಂತ-ಅನುಭಾವೀ ಪರಂಪರೆಗಳಲ್ಲಿ ನಿಜದ ದ್ಯೋತಕವೂ ಆಗುತ್ತದೆ.

ಯೂರೋಪಿನಲ್ಲಿ ರಿನೇಸಾನ್ಸ್ ನಂತರ ಹುಟ್ಟಿದ ಮಾನವಕೇಂದ್ರಿತ ವಿಚಾರವಾದ, ಭೌತಿಕವಾದಗಳು ಇನ್ನೂ ಹೆಚ್ಚಿನ ಪ್ರೌಢಿಮೆ ಪಡೆದುಕೊಂಡದ್ದು ಎನ್‌ಲೈಟನ್ಮೆಂಟ್ ಯುಗದಲ್ಲಿ. ಆ ನಂತರ ಇಪ್ಪತ್ತನೆ ಶತಮಾನದವರೆಗೆ ವಿಕಾಸವಾದ, ಪ್ರಗತಿವಾದಗಳು ವೈಚಾರಿಕ ಚಿಂತನೆಯ ಬುನಾದಿಗಳಾದವು.

ಆದರೆ ಇದೇ ಸಂದರ್ಭದಲ್ಲಿ ರೂಹು ತಾಳಿದ ರೊಮ್ಯಾಂಟಿಕ್ ಯುಗ ವೈಚಾರಿಕತೆಗೆ ಸೆಡ್ಡು ಹೊಡೆದು ವೈಚಾರಿಕೇತರ ಪ್ರವೃತ್ತಿಗಳ ಮೊರೆ ಹೊಕ್ಕಿತು. ಆಗ ಕಲಾ ಪ್ರತಿಭೆ ವಿಚಾರಕ್ಕಿಂತ ಹೆಚ್ಚಿಗೆ ಕನಸುಗಳ, ತಳಮನದ ಸಂಗಡಿಗನಾಯಿತು.

ಕನಸುಗಳು ಗೂಢಾರ್ಥಗಳ, ಒಳನೋಟಗಳ ಆಗರವಾಗಿ ರೊಮ್ಯಾಂಟಿಕ್ಕರಿಗೆ ಕಂಡವು. ಮುಂದೆ ಕಲಾಪ್ರತಿಭೆ ಆಧುನಿಕ ಸ್ವರೂಪವನ್ನು ಪಡೆದುಕೊಂಡಾಗ ಕಲೆಯ ಸ್ವರೂಪ ಮೊದಲು-ನಡು-ಕೊನೆಗಳ ತಾರ್ಕಿಕ ಚೌಕಟ್ಟನ್ನು ತೊರೆದು ಕನಸುಗಳ ಸ್ವಚ್ಛಂದತೆಯನ್ನು ಆಸರಿಸಿತು. ಸ್ವೀಡಿಷ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್‌ಬರ್ಗನ `ಸ್ಪಪ್ನನಾಟಕ` (ಡ್ರೀಂ ಪ್ಲೇ) ಇದಕ್ಕೊಂದು ಉದಾಹರಣೆ.

ಫ್ರೆಂಚ್ ಬರಹಗಾರ, ಚಿಂತಕ ಆಂದ್ರೆ ಮಾರ್ಲೊ ಪಶ್ಚಿಮದ ಚಿತ್ರಕಲೆಯ ಇತಿಹಾಸವಾದ ತನ್ನ `ಮ್ಯೂಸಿಯಂ ಆಫ್ ಸೈಲೆನ್ಸ್` ಪುಸ್ತಕದಲ್ಲಿ ಪ್ರಾಚೀನಕಲೆಗಳು, ಎಲ್ಲಾ ಕಾಲದ ಶಿಶುಕಲೆಗಳು ಮತ್ತು ಜನಪ್ರಿಯ ಕಲೆಗಳು ಯಾವತ್ತೂ ತರ್ಕದ ಕಟ್ಟಿಗೆ ಸಿಗುವುದಿಲ್ಲ ಎಂದು ವಾದಿಸುತ್ತಾನೆ.

ಇಂದು ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಕಲೆಯಾಗಿ ಬೆಳೆಯುತ್ತಿರುವ ಬಾಲಿವುಡ್ ಸಿನಿಮಾದ ಮಾಂತ್ರಿಕತೆಯಿರುವುದು ಅದರ ಕನಸುಗಾರಿಕೆಯಲ್ಲೇ. ಬಾಲಿವುಡ್ಡಿನವರು ಕನಸಿನ ವ್ಯಾಪಾರಿಗಳು.

ಅಂದ ಮಾತ್ರಕ್ಕೆ, ಬಾಲಿವುಡ್ಡಿನಂಥ ಜನಪ್ರಿಯಕಲೆಗಳು, ಜಾಹೀರಾತು ಕಲೆಗಳು ನಮಗೆ ನಿಜದಿಂದ ಬಿಡುಗಡೆ ಕೊಡುತ್ತವೆಯೆ? ಇಂಥ ಜನಪ್ರಿಯ ಕಲೆಗಳಿಗೂ ಕನಸನ್ನು ಹೆಚ್ಚು ಅರ್ಥಪೂರ್ಣವಾಗಿ ಬಳಸುವ ಆಧುನಿಕ ಕಲೆಗಳಿಗೂ ವ್ಯತ್ಯಾಸ ಏನಾದರೂ ಇದೆಯೆ? ಸಂಸ್ಕೃತಿ ವಿದ್ವಾಂಸರು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲವಾದ್ದರಿಂದ ಜನಪ್ರಿಯಕಲೆಗಳ ಶಿಕಾರಿಗೆ ಮಿಕಗಳಾಗಿರುವ ನಮ್ಮಂಥ ಸಾಮಾನ್ಯರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಜನಪ್ರಿಯ ಕಲೆಗಳು ಕನಸಿನ ತಂತ್ರದಲ್ಲಿ ಬಿಡುಗಡೆಯ ರುಚಿ ತೋರಿಸುತ್ತಾ ಆಳದಲ್ಲಿ ವಾಸ್ತವ ಪ್ರಪಂಚದಲ್ಲಿ ಒಪ್ಪಿತವಾಗಿರುವ ಅಧಿಕಾರವ್ಯವಸ್ಥೆಯನ್ನು ಪೋಷಿಸುತ್ತಿರುತ್ತವೆ. ಆದರೆ ಆಧುನಿಕ ಕಲೆಗಳು ಕನಸನ್ನು ಕೇವಲ ತಂತ್ರವನ್ನಾಗಿ ಬಳಸುವುದಿಲ್ಲ.

ಅವನ್ನು ಸಾಮಾಜಿಕ ಒತ್ತಡಗಳನ್ನು ಪ್ರಶ್ನಿಸುವ ಮಾಧ್ಯಮವನ್ನಾಗಿ ಬಳಸುತ್ತವೆ. ಹೀಗೆ ಕಲೆಗಳಲ್ಲಿ ಕನಸು ಇಬ್ಬಾಯಿಯ ಕತ್ತಿ. ಹೊರ ಒತ್ತಡಗಳಿಂದ ಬಿಡಿಸಿಕೊಳ್ಳುವ ನಮಗೆ ನೆರವಾಗಬಹುದು ಅಥವಾ ನಮ್ಮಿಂದ ನಮ್ಮನ್ನೇ ಬೇರ್ಪಡಿಸಬಹುದು.

ಕಲೆಗಳು ಕನಸುಗಳನ್ನು ಬಿಡುಗಡೆಯ ಮಾದರಿಗಳಾಗಿ ಕಾಣುತ್ತಿದ್ದ ಯುಗದಲ್ಲೇ ಇಬ್ಬರು ಮನೋವಿಜ್ಞಾನಿಗಳು ಅವುಗಳಲ್ಲಿನ ತಾರ್ಕಿಕತೆಯನ್ನು ಅನ್ವೇಷಿಸುತ್ತಿದ್ದರು. ಮೊದಲನೆಯವ ಫ್ರಾಯ್ಡ.

ಬಹಳ ಸ್ಥೂಲವಾಗಿ ಹೇಳಬೇಕೆಂದರೆ, ಆತನ ಪ್ರಕಾರ ಜನ ಬದುಕಿನಲ್ಲಿ ಅದುಮಿಟ್ಟುಕೊಂಡ ಅಪೂರ್ಣ ಬಯಕೆಗಳನ್ನು ಕನಸುಗಳಲ್ಲಿ ಪೂರೈಸಿಕೊಳ್ಳುತ್ತಾರೆ. ಕಾಮವೆನ್ನುವುದು ಮನುಷ್ಯನ ಆದಿಮ ಪ್ರವೃತ್ತಿ. ಅದಕ್ಕೆ ಲಂಗುಲಗಾಮುಗಳಿಲ್ಲ.

ಆದರೆ ಸಮಾಜ ತನ್ನ ಉಳಿವಿಗಾಗಿ ಆ ಪ್ರವೃತ್ತಿಯನ್ನು ಹತ್ತಿಕ್ಕಲು ನಿಬಂಧನೆಗಳನ್ನು ಹೇರುತ್ತಲೇ ಇರುತ್ತದೆ. ಹೀಗಾಗಿ ಕಾಮದ ಬಯಕೆ ಎಂದೂ ತೀರುವುದಿಲ್ಲ.

ಕನಸುಗಳು ನಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುವ ಅತೃಪ್ತ ಬಯಕೆಗಳಿಗೆ ಸುರಕ್ಷಿತವಾದ ಹೊರದ್ವಾರಗಳನ್ನು ನೀಡುತ್ತವೆ. ಆದರೆ ಇದು ಅಸ್ವಸ್ಥತೆಯ ಸೂಚಕ.

ಅಂತಿಮವಾಗಿ ಮನುಷ್ಯ ಸ್ವಪ್ನಗಳ ಹುಸಿ ಪರಿಹಾರದಿಂದ ಬಿಡುಗಡೆ ಹೊಂದಿ ನಿಜದ ಜೊತೆಗೆ ತನ್ನ ಸಮಜಾಯಿಷಿ ಮಾಡಿಕೊಳ್ಳುತ್ತಾ ತನ್ನ ಪ್ರಬುದ್ಧ ಅಹಮನ್ನು ರೂಪಿಸಿಕೊಳ್ಳಬೇಕಾಗುತ್ತದೆ.

ಕನಸಿನ ಭಾಷೆಯ ಹಲವು ವ್ಯಾಕರಣ ನಿಯಮಗಳನ್ನು ಫ್ರಾಯ್ಡ ಅನಾವರಣ ಮಾಡಿದ. ಉದಾಹರಣೆಗೆ ಉತ್ಪ್ರೇಕ್ಷಾಲಂಕಾರ ಕನಸುಗಳಲ್ಲಿ ಸಹಜ. ನಿದ್ದೆ ಹೋಗಿರುವಾಗ ಹಾಸಿಗೆಯಿಂದ ಕೆಳಗೆ ಬಿದ್ದ ವ್ಯಕ್ತಿ ಕನಸಿನಲ್ಲಿ ತಾನು ಹಿಮಾಲಯ ಪರ್ವತದಿಂದ ಕೆಳಗೆ ಬಿದ್ದುದನ್ನು ಕಾಣಬಹುದು.

ಯೂಂಗ್‌ನ ಸ್ವಪ್ನ ಸಿದ್ಧಾಂತ ಬೇರೆ ದಿಕ್ಕನ್ನು ಹಿಡಿಯಿತು. ಅವನ ಪ್ರಕಾರ ಫ್ರಾಯ್ಡನ ಸಿದ್ಧಾಂತಗಳು ಮಾಮೂಲಿ ಕನಸುಗಳ ದೃಷ್ಟಿಯಿಂದ ಸರಿ. ಆದರೆ ಮಹಾನ್ ಕಲಾವಿದರ, ದಾರ್ಶನಿಕರ, ನಾಯಕರ ಕನಸುಗಳು ಬೇರೆಬಗೆಯವು.

ಇವನ್ನು ಅರ್ಥಮಾಡಿಕೊಳ್ಳಲು ಫ್ರಾಯ್ಡನ ತಳಮನದ ಕಲ್ಪನೆ ಸಾಲದು. ಆದ್ದರಿಂದ ಯೂಂಗ್ `ಮೇಲುಮನ`ವೆಂಬ ಇನ್ನೊಂದು ಕಲ್ಪನೆಯನ್ನು ಬಳಸುತ್ತಾನೆ.

ಫ್ರಾಯ್ಡ ಮನಸು, ಕನಸುಗಳ ಸಂದಿಗ್ಧಗಳನ್ನು ಅರ್ಥೈಸಲು ಕೇವಲ ವೈಯಕ್ತಿಕ ತಳಮನದ ಪರಿಕರ ಬಳಸುತ್ತಾನೆ. ಆದರೆ ಯೂಂಗ್ ಎಲ್ಲ ಮನಸ್ಸುಗಳೂ ಪರಸ್ಪರ ಹೆಣೆದುಕೊಂಡಿರುವುದನ್ನು ತೋರಿಸಲು `ಸಾಮೂಹಿಕ ತಳಮನ`ವೆಂಬ ಕಲ್ಪನೆ ಬಳಸುತ್ತಾನೆ.

ಈ ಇಬ್ಬರು ಮಹಾನ್ ಚಿಂತಕರ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಈಡಿಪಸ್ ಕತೆಯನ್ನು ಪರೀಕ್ಷಿಸಲು ಅವರು ಬಳಸುವ ವಿಭಿನ್ನ ದೃಷ್ಟಿಗಳನ್ನು ನೋಡಬೇಕು.
ಈಡಿಪಸ್ ಕತೆಯ ಪ್ರಕಾರ ಅಜ್ಞಾನದಿಂದ ಹುಟ್ಟಾ ಶಾಪಗ್ರಸ್ತನಾದ ಥೀಬ್ಸ್‌ನ ದೊರೆ ಈಡಿಪಸ್ ತನ್ನ ತಂದೆಯನ್ನು ಕೊಂದು ತಾಯಿಯನ್ನೇ ಮದುವೆಯಾಗಿ ತನ್ನ ತಂಗಿ-ತಮ್ಮಂದಿರಿಗೆ ತಂದೆಯಾಗುತ್ತಾನೆ. ಗ್ರೀಕರ ದುರಂತ ಕತೆಗಳಲ್ಲಿ ಇದು ತುಂಬಾ ಪ್ರಸಿದ್ಧ.

ಫ್ರಾಯ್ಡನ ಪ್ರಕಾರ ಬೆಳವಣಿಗೆಯ ಹಂತದಲ್ಲಿ ಎಲ್ಲ ಗಂಡುಮಕ್ಕಳೂ ಹಾದುಹೋಗುವ ತಾಯ ಬಗೆಗಿನ ಅನಿವಾರ್ಯ ಲೈಂಗಿಕ ಸೆಳೆತದ ಸಂಕೇತ ಈ ಕತೆ. ಆದರೆ ಯೂಂಗನ ಪ್ರಕಾರ ಹಾಗಲ್ಲ.

ಈಡಿಪಸ್ ಜೊಕಾಸ್ಟಾಳನ್ನು ಮದುವೆಯಾದದ್ದು ತಾಯ ಬಗೆಗಿನ ಕಾಮುಕತೆಯಿಂದಲ್ಲ. ಗಂಡ ಸತ್ತಿದ್ದ ಅವನ ತಾಯಿ ರಾಣಿಯಾಗಿ ಆ ಭೂಮಿಯ ಸಂಕೇತವಾಗಿದ್ದಳು. ಅವಳನ್ನು ಮದುವೆಯಾಗುವ ಸಾಂಕೇತಿಕ ಕ್ರಿಯೆಯಿಂದ ಅಂತಿಮವಾಗಿ ಪ್ರಕೃತಿಯಲ್ಲಿ ಲೀನವಾಗಿ ಬಿಡುಗಡೆ ಪಡೆಯುವ ಆದಿಮ ಧಾರ್ಮಿಕ ಪ್ರವೃತ್ತಿಯನ್ನು ಈಡಿಪಸ್ ವ್ಯಕ್ತಪಡಿಸಿದ.

ಹೀಗೆ ಕನಸುಗಳು ವಿಸ್ಮಯಗಳಾಗಿ, ಭ್ರಮೆಗಳಾಗಿ, ದರ್ಶನಗಳಾಗಿ, ನಿಜದ ಹೊಳಹುಗಳಾಗಿ, ನಾಳಿನ ಸೂಚಕಗಳಾಗಿ, ಅಸಂಬದ್ಧ ಸಂರಚನೆಗಳಾಗಿ ನಮ್ಮ ನಡುವೆ ಸಂಚರಿಸುತ್ತಿರುತ್ತವೆ.

-ಪ್ರಜಾವಾಣಿ ಕೃಪೆ


ಒಂದು ವೇಳೆ ಕನಸುಗಳೇ ಇಲ್ಲದಿದ್ದರೆ ಜಗತ್ತು ಹೇಗಿರುತ್ತಿತ್ತು? ಕನಸುಗಳೆಂದರೆ ನಿದ್ದೆಯಲ್ಲಿ ಬರುವ ಕನಸುಗಳು ಮಾತ್ರವಲ್ಲ, ಜಾಗರದಲ್ಲೂ ಕನಸುಗಳಿವೆ. ಕನಸುಗಳಿಲ್ಲದ ಇರುಳುಗಳು ಅದೆಷ್ಟು ಅಪರೂಪವೋ ಅಷ್ಟೇ ಅಪರೂಪ ಹಗಲುಗನಸುಗಳಿರದ ಹಗಲುಗಳು.

ಕನಸುಗಳು, ಹಗಲುಗನಸುಗಳು ಮಾಯವಾದರೆ ನಮ್ಮ ಜಗತ್ತು ಬಹಳ ಅಸಹನೀಯವಾಗಿ ಬಿಡುತ್ತಿತ್ತು.ಗಜೇಶ ಮಸಣಯ್ಯನೆನ್ನುವ ವಚನಕಾರ ಈ ಅಸಹನೀಯ ಯಾತನೆಯನ್ನು ತುಂಬಾ ಹೃದ್ಯವಾಗಿ ಚಿತ್ರಿಸುತ್ತಾನೆ.

`ಅಗಲಿದ ನಲ್ಲರ ಕನಸಲ್ಲಿ ಕೂಡಿ ನೀವು ಸುಕಹಿಯಾದಿರವ್ವ.ನಮಗೆ ನಮ್ಮ ಗಜೇಶ್ವರಲಿಂಗನನಗಲಿ ನಿದ್ದೆ ಬಾರವು ಕನಸೆಲ್ಲಿಂದ ಬಪ್ಪುದವ್ವಾ?`

ನಡುಗೆಯಲ್ಲೋ ಬಸ್ಸು, ಕಾರು, ಏರೋಪ್ಲೇನುಗಳಲ್ಲೋ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಾಗ ನಮ್ಮ ದೇಹಗಳು ಒಂದೇ ಒಂದು ಪ್ರಯಾಣ ಮಾಡಿರುತ್ತವೆ.

ಆದರೆ ಮನಸ್ಸು? ಅದೆಷ್ಟೋ ಪ್ರಯಾಣಗಳನ್ನು ಮಾಡಿರುತ್ತವೆ, ಹಗಲುಗನಸುಗಳಲ್ಲಿ, ಅರೆಗನಸುಗಳಲ್ಲಿ, ಊಹಾಪೋಹಗಳಲ್ಲಿ, ಕಲ್ಪನೆಗಳಲ್ಲಿ.ಪ್ರಾಣಿಗಳು ಕನಸು ಕಾಣುತ್ತವೇನು? ಗಿಡಮರಗಳು? ಕಲ್ಲುಗಳು, ಖನಿಜಗಳು? ಕಲ್ಲು ಯಾವ ವಿಗ್ರಹ ಅಥವಾ ಕಟ್ಟಡವಾಗಬೇಕೆಂದು ಕನಸು ಕಾಣುತ್ತದೆ? ಮೋಡ ಯಾವ ನಾಡಿನಲ್ಲಿ ಸುರಿಯಬೇಕೆಂದು ಕನಸು ಕಾಣುತ್ತದೆ?

ಸುಂದರ ಬಟ್ಟೆಬರೆಗಳು ಯಾರ ದೇಹಕ್ಕೆ ಉಡುಪಾಗಬೇಕೆಂದು ಕನಸುತ್ತಿವೆ? ಹೊನ್ನು ಯಾರಿಗೆ ತೊಡುಗೆಯಾಗಬೇಕೆಂದು ಕನಸುತ್ತಿದೆ? ಇಂಥ ಪ್ರಶ್ನೆಗಳು ನಮ್ಮ ಕನಸುಗಾರಿಕೆಯ ದ್ಯೋತಕಗಳೇ ಹೊರತು ಆ ವಸ್ತುಗಳವಲ್ಲ. ಬಹುಶಃ ಮಾನವರ ಹೊರತು ಇತರೆ ಜೀವಗಳಿಗೆ ಕನಸೆಂಬುದಿಲ್ಲ.

ಆದ್ದರಿಂದಲೇ ಇರಬೇಕು ಇತಿಹಾಸದ ಮೊದಲ ಬೆಳಗಿನಿಂದಲೇ ಮಾನವರು ಕನಸಿನ ಬಗ್ಗೆ ಕುತೂಹಲ ತಾಳಿದರು. ಹಲವು ಜನಾಂಗಗಳು ತಮ್ಮ ಪುರಾಣ ಕತೆಗಳಲ್ಲಿ, ಲೋಕದೃಷ್ಟಿಯಲ್ಲಿ ಕನಸುಗಳಿಗೆ ಎಲ್ಲಿಲ್ಲದ ಮಹತ್ವ ನೀಡುತ್ತಾ ಬಂದಿವೆ.

ಆಸ್ಟ್ರೇಲಿಯಾದ ಉಡುಗ್ರೂ ಜನಾಂಗದವರು ನಮ್ಮ ನಿನ್ನೆ-ಇಂದು-ನಾಳೆಗಳ ಜಾಗರದ ಕಾಲವನ್ನು ಇಂತಹ ಕಾಲದ ವಿಭಜನೆಗಳಿಲ್ಲದ ಸ್ವಪ್ನಕಾಲದ ಸಣ್ಣಭಾಗವನ್ನಾಗಿ ನೋಡುತ್ತಾರೆ. ಅವರ ಪ್ರಕಾರ ಜಾಗರದ ಕಾಲ ಮಾನವಲೋಕದ ಕಾಲ.

ಸ್ವಪ್ನಕಾಲ ದೇವ ದಾನವರ, ಅತಿಮಾನುಷ ಶಕ್ತಿಗಳ ಕಾಲ. ಇವೊತ್ತಿನ ಪರಿಭಾಷೆಯಲ್ಲಿ ಈ ಬಿಡಿನೋಟವನ್ನು ಇತಿಹಾಸ ಪುರಾಣಗಳ ಕಲ್ಪನೆಗೆ ಹೋಲಿಸಬಹುದು. ತಮ್ಮ ಇತಿಹಾಸಗಳನ್ನು ದಾಖಲಿಸದ ಎಷ್ಟೋ ಜನಾಂಗಗಳು ಇಂದಿಗೂ ಪೃಥ್ವೀಮಂಡಲದಲ್ಲಿವೆ. ಆದರೆ ಪುರಾಣಗಳಿಲ್ಲದ ಜನಾಂಗಗಳು ಎಲ್ಲಿಯೂ ಇಲ್ಲ.

ಪುರಾತನ ಜನಾಂಗಗಳ `ಶಮನ`ರು ಜಾಗರದ ಮತ್ತು ಸ್ವಪ್ನಕಾಲಗಳ ನಡುವೆ ಸೇತುವೆಯಾಗಿ ಈ ಎರಡೂ ಜಗತ್ತುಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾರೆ.

ಇವತ್ತೂ ಬದುಕುತ್ತಿರುವ ಕಣಿ ಹೇಳುವವರು, ಕವಡೆ ನೋಡುವರು, ಕುಂಡಲಿ ಓದುವವರು, ಟ್ಯಾರೋ ಕಾರ್ಡು ಪಂಡಿತರು, ರೂನ್ ಕಲ್ಲಿನ ತಜ್ಞರು, ಸಂಖ್ಯಾಶಾಸ್ತ್ರಿಗಳು, ಆಯ್‌ಚಿಂಗ್ ವಿದ್ವಾಂಸರು, ಮನೋವಿಶ್ಲೇಷಣಾ ಪಂಡಿತರು ಅದೇ ರೀತಿಯ ಕೆಲಸ ಮಾಡುತ್ತಾರೆ.

ಕಾಣುವ ಮತ್ತು ಕಾಣದ ಲೋಕಗಳ ಕೊಂಡಿಗಳಾಗಲು ಪ್ರಯತ್ನಿಸುತ್ತಾರೆ. ವಿಚಾರವಾದದ ಅಭೂತಪೂರ್ವ ಯಶಸ್ಸು ಈ ಪ್ರಾಚೀನ ಪ್ರವೃತ್ತಿಗಳನ್ನು ಇನ್ನೂ ನಾಶಮಾಡಲಾಗಿಲ್ಲ.

ಜಾಗರ ಮತ್ತು ಸ್ವಪ್ನಕಾಲಗಳ ಸಾಮ್ಯತೆ-ವ್ಯತಿರಿಕ್ತತೆಗಳನ್ನು `ಅರೇಬಿಯನ್ ನೈಟ್ಸ್` ನ ಒಂದು ಕತೆ ಅರ್ಥಗರ್ಭಿತವಾಗಿ ಚಿತ್ರಿಸುತ್ತದೆ.ಬಾಗ್ದಾದಿನಲ್ಲಿ ಒಬ್ಬ ಕುಂಬಾರನಿರುತ್ತಾನೆ.

ಇಡೀ ವಾರ ತಾನು ಕಷ್ಟಪಟ್ಟು ಮಾಡಿದ್ದ ಮಡಕೆಗಳನ್ನು ಹೊತ್ತುಕೊಂಡು ವಾರದ ಸಂತೆಗೆ ಹೋಗುತ್ತಾನೆ. ಅಂಗಡಿಯಲ್ಲಿ ಅವುಗಳನ್ನಿರಿಸಿ ಕೂತುಕೊಳ್ಳುತ್ತಾನೆ. ಬಹಳ ಹೊತ್ತು ಗಿರಾಕಿಗಳು ಬರುವುದಿಲ್ಲ. ಬೇಜಾರಾಗಿ ಹಗಲುಗನಸಿಗೆ ಜಾರುತ್ತಾನೆ.

ತನ್ನ ಮದುವೆ ಯಾರ ಜೊತೆಗೆ ಆಗಬೇಕು? ಒಬ್ಬ ಅನುಪಮ ಚಲುವೆಯ ಜೊತೆಗೆ. ಅಂಥವಳು ಯಾರು? ನಾಡಿನ ರಾಜಕುಮಾರಿ. ಅವಳನ್ನು ಹೇಗೆ ಪಡೆಯುವುದು? ಒಂದು ಪವಾಡವೇ ಜರುಗಬೇಕು. ಎದುರಾಳಿಗಳು ರಾಜ್ಯಕ್ಕೆ ಮುತ್ತಿಗೆ ಹಾಕುತ್ತಾರೆ.

ರಾಜನನ್ನು ಸೆರೆಹಿಡಿದುಕೊಂಡು ಹೋಗುತ್ತಾರೆ. ಆಗ ರಾಜಕುಮಾರಿಯ ಅಳಲಿಗೆ ಕೊನೆಯೇ ಇರುವುದಿಲ್ಲ. ಯಾರು ಅರಸನನ್ನು ಬಿಡಿಸಿಕೊಂಡು ಬರುತ್ತಾರೋ ಅವರ ಜೊತೆ ಮದುವೆ ಮಾಡಿಕೊಳ್ಳುವುದಾಗಿ ಅವಳು ಘೋಷಿಸುತ್ತಾಳೆ.

ಕುಂಬಾರ ಈ ಸದವಕಾಶವನ್ನು ಬಳಸಿಕೊಳ್ಳಲು ತೀರ್ಮಾನಿಸುತ್ತಾನೆ. ಏಕಾಂಗಿಯಾಗಿ ಹೋಗಿ ಶತ್ರುಗಳೊಡನೆ ಸೆಣೆಸಿ ರಾಜನನ್ನು ಬಿಡುಗಡೆ ಮಾಡುತ್ತಾನೆ. ರಾಜಕುಮಾರಿ ತನ್ನ ವಚನದ ಪ್ರಕಾರ ಕುಂಬಾರನಿಗೆ ವರಮಾಲೆ ಹಾಕುತ್ತಾಳೆ.

ಮುಂದೆ ಅವನು ಆ ಹಾರದ ವಿವರಗಳನ್ನೂ ಕಲ್ಪಿಸಿಕೊಳ್ಳತೊಡಗಿದ. ಆ ಹಾರದಲ್ಲಿ ಯಾವ ಹೂವಿರಬೇಕು? ರಾಜಕುಮಾರಿಯ ಪ್ರಕಾರ ಆ ಹಾರದಲ್ಲಿ ಬರೀ ಕೆಂಪು ಗುಲಾಬಿಯಿರಬೇಕು. ಆದರೆ ಇವನಿಗೆ ಹಲವು ಬಣ್ಣಗಳ ಗುಲಾಬಿಗಳು ಹಾರದಲ್ಲಿರಬೇಕು.

ಈ ಬಗೆ ಶುರುವಾದ ವಾದವಿವಾದಗಳು ಪರಸ್ಪರ ಬೈಗುಳದಲ್ಲಿ ಮುಂದುವರಿದು, ಕೊನೆಗವನು ಬೇಸತ್ತು ತನ್ನ ಮುಂದಿರುವ ಗುಲಾಬಿರಾಶಿಯನ್ನು ಒದೆಯತೊಡಗುತ್ತಾನೆ. ಇಲ್ಲಿಗೆ ಅವನ ಹಗಲುಗನಸು ಮುಕ್ತಾಯ.

ಪಕ್ಕದ ಅಂಗಡಿಯವ `ಏ ಹುಚ್ಚ! ನಿಲ್ಲಿಸು` ಅಂತ ಕೂಗುತ್ತಿರುತ್ತಾನೆ. ಆಗ ಕುಂಬಾರಣ್ಣ ಕಣ್ತೆರೆದು ನೋಡಿದರೆ, ಪಾಪ, ತನ್ನ ಇಡೀ ವಾರದ ದುಡಿಮೆಯಾದ ಮಡಕೆಗಳನ್ನು ಒದ್ದು ಪುಡಿಪುಡಿ ಮಾಡಿರುತ್ತಾನೆ!

ಈ ಕತೆಯಲ್ಲಿ ಕನಸುಗಾರಿಕೆ ಭೌತಿಕಲೋಕದ ಕಠೋರ ಒತ್ತಡಗಳಿಂದ ಕುಂಬಾರನಿಗೆ ಸ್ವಲ್ಪಹೊತ್ತು ಬಿಡುಗಡೆಯನ್ನೇನೋ ಕೊಡುತ್ತದೆ. ಆದರೆ ಅದೇ ಸಮಯದಲ್ಲಿ ಮಡಕೆಗಳನ್ನು ಒಡೆದುಹಾಕುವಂತೆ ಮಾಡಿ ಅವನಿಗೆ ನಷ್ಟವನ್ನೂ ಉಂಟುಮಾಡಿದೆ. ಕನಸು ಅವನಿಗೆ ಈ ಕಾರಣದಿಂದ ಮೋಸ ಮಾಡಿದೆ.

ಕನಕದಾಸರ `ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ` ಇದೇ ತೆರನ ಕನಸನ್ನು ಕಂಡಿದ್ದ. ಹೀಗೆ ಕನಸುಗಳನ್ನು ಭ್ರಮೆಯೆಂದೂ ನಶ್ವರತೆಯ ಸಂಕೇತಗಳೆಂದೂ, ಅನೇಕ ಕತೆಗಳು ಬೇರೆ ಬೇರೆ ಸಂಸ್ಕೃತಿಗಳಲ್ಲಿ ವಿಪುಲವಾಗಿವೆ.

ಈ ಅರ್ಥದಲ್ಲೇ ಅಲ್ಲಮ ಸೂರ್ಯೋದಯ ಸೂರ್ಯಾಸ್ತಗಳನ್ನು `ನೀರಲಾದ ನಿರ್ಮಿತ`ಗಳೆನ್ನುತ್ತಾನೆ. ಬ್ರಹ್ಮಾಂಡಗಳು, ಕಾಲಚಕ್ರಗಳು ಕನಸಿನಂತೆ ಅಶಾಶ್ವತವೆನ್ನುತ್ತವೆ ಬೌದ್ಧಧರ್ಮ, ವೇದಾಂತ.

ಇದಕ್ಕೆ ವಿರುದ್ಧ ದೆಸೆಯಲ್ಲಿವೆ ಕನಸಿನ ಅರ್ಥ ಹುಡುಕುವ ಪ್ರಯತ್ನಗಳು, ನಂಬಿಕೆಗಳು.
`ಕೆರೆಗೆ ಹಾರ` ಜನಪದ ಗೀತೆಯಲ್ಲಿ ತನ್ನ ಮಡದಿ ಕೆರೆಗೆ ಹಾರವಾದ ಸುದ್ದಿ ದೂರದಲ್ಲಿ ದಂಡಿಗೆ ಹೋಗಿದ್ದ ಗಂಡನಿಗೆ ಸಿಗುವುದು ಒಂದು ಕನಸಿನ ಮೂಲಕ.

ಸಂಪರ್ಕಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಬಹಳ ಜನ ಕನಸನ್ನು ಸಂಪರ್ಕಸಾಧನವನ್ನಾಗಿ ನೋಡುತ್ತಿದ್ದರು. ಅನೇಕ ಜನಪದ ಕತೆಗಳಲ್ಲಿ ಕನಸುಗಳು ನಿಜದ ವಾಹಕಗಳಾಗಿ ಬರುತ್ತವೆ.

ಉದಾಹರಣೆಗೆ, ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ಕೈವಿಡಿದು ಕಣ್ತೆರೆದದ್ದು ಒಂದು ಕನಸಿನಲ್ಲೇ. `ಅಕ್ಕ ಕೇಳವ್ವ` ವಚನದಲ್ಲಿ ಕನಸು ಮೇಲುಬಾಳಿನ ದಾರಿಯಾಗುತ್ತದೆ. ಅನುಭಾವ ಮತ್ತು ತಂತ್ರ ಪರಂಪರೆಗಳಲ್ಲಿ ಸ್ವಪ್ನದೀಕ್ಷೆಯೆಂಬ ದೀಕ್ಷಾಪ್ರಕಾರವಿದೆ.

ಸಂತ ತುಕಾರಾಮ ತನ್ನ ಗುರು ನಾಮದೇವನನ್ನು ನಿಜ ಬದುಕಿನಲ್ಲಿ ಕಾಣಲೇ ಇಲ್ಲ. ಆತ ಇನ್ನೂರುವರ್ಷಗಳ ಹಿಂದೆ ಕಾಲವಾಗಿದ್ದ. ಆದರೂ ಕನಸಿನಲ್ಲಿ ಕಾಣಿಸಿಕೊಂಡು ತುಕಾರಾಮನಿಗೆ `ಜಯರಾಮಕೃಷ್ಣ ಹರಿ` ಎಂಬ ಯಾವ ಮಂತ್ರಶಾಸ್ತ್ರದ ಗ್ರಂಥಗಳಲ್ಲೂ ಇರದ ಒಂದು ಮಂತ್ರವನ್ನು ಬೋಧಿಸಿದ.

ಸೂಫಿ ಪಂಥಗಳಲ್ಲಿ ಕನಸುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಶಿಷ್ಯ ಕಾಲಕಾಲಕ್ಕೆ ತನ್ನ ಕನಸುಗಳನ್ನು ದಾಖಲಿಸಿ ಗುರುವಿನ ಜೊತೆ ಚರ್ಚಿಸುತ್ತಾನೆ. ಆ ಕನಸುಗಳ ಆಧಾರದ ಮೇಲೆ ಗುರು ಶಿಷ್ಯನ ಪ್ರಗತಿಯನ್ನು ಅಳೆಯುತ್ತಾನೆ.

ಕೈವಾರ ನಾರೇಯಣ ತಾತನ ರಚನೆಯಲ್ಲೂ ಮಾಗಡಿ ರಂಗ ತನಗೆ ಪ್ರತ್ಯಕ್ಷನಾಗಿ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಕನಸಿನಲ್ಲಿಯೇ. ಹೀಗೆ ಕೆಲವು ಸಲ ಭ್ರಮೆಗೆ ಸಂಕೇತವಾದ ಕನಸು ಸಂತ-ಅನುಭಾವೀ ಪರಂಪರೆಗಳಲ್ಲಿ ನಿಜದ ದ್ಯೋತಕವೂ ಆಗುತ್ತದೆ.

ಯೂರೋಪಿನಲ್ಲಿ ರಿನೇಸಾನ್ಸ್ ನಂತರ ಹುಟ್ಟಿದ ಮಾನವಕೇಂದ್ರಿತ ವಿಚಾರವಾದ, ಭೌತಿಕವಾದಗಳು ಇನ್ನೂ ಹೆಚ್ಚಿನ ಪ್ರೌಢಿಮೆ ಪಡೆದುಕೊಂಡದ್ದು ಎನ್‌ಲೈಟನ್ಮೆಂಟ್ ಯುಗದಲ್ಲಿ. ಆ ನಂತರ ಇಪ್ಪತ್ತನೆ ಶತಮಾನದವರೆಗೆ ವಿಕಾಸವಾದ, ಪ್ರಗತಿವಾದಗಳು ವೈಚಾರಿಕ ಚಿಂತನೆಯ ಬುನಾದಿಗಳಾದವು.

ಆದರೆ ಇದೇ ಸಂದರ್ಭದಲ್ಲಿ ರೂಹು ತಾಳಿದ ರೊಮ್ಯಾಂಟಿಕ್ ಯುಗ ವೈಚಾರಿಕತೆಗೆ ಸೆಡ್ಡು ಹೊಡೆದು ವೈಚಾರಿಕೇತರ ಪ್ರವೃತ್ತಿಗಳ ಮೊರೆ ಹೊಕ್ಕಿತು. ಆಗ ಕಲಾ ಪ್ರತಿಭೆ ವಿಚಾರಕ್ಕಿಂತ ಹೆಚ್ಚಿಗೆ ಕನಸುಗಳ, ತಳಮನದ ಸಂಗಡಿಗನಾಯಿತು.

ಕನಸುಗಳು ಗೂಢಾರ್ಥಗಳ, ಒಳನೋಟಗಳ ಆಗರವಾಗಿ ರೊಮ್ಯಾಂಟಿಕ್ಕರಿಗೆ ಕಂಡವು. ಮುಂದೆ ಕಲಾಪ್ರತಿಭೆ ಆಧುನಿಕ ಸ್ವರೂಪವನ್ನು ಪಡೆದುಕೊಂಡಾಗ ಕಲೆಯ ಸ್ವರೂಪ ಮೊದಲು-ನಡು-ಕೊನೆಗಳ ತಾರ್ಕಿಕ ಚೌಕಟ್ಟನ್ನು ತೊರೆದು ಕನಸುಗಳ ಸ್ವಚ್ಛಂದತೆಯನ್ನು ಆಸರಿಸಿತು. ಸ್ವೀಡಿಷ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್‌ಬರ್ಗನ `ಸ್ಪಪ್ನನಾಟಕ` (ಡ್ರೀಂ ಪ್ಲೇ) ಇದಕ್ಕೊಂದು ಉದಾಹರಣೆ.

ಫ್ರೆಂಚ್ ಬರಹಗಾರ, ಚಿಂತಕ ಆಂದ್ರೆ ಮಾರ್ಲೊ ಪಶ್ಚಿಮದ ಚಿತ್ರಕಲೆಯ ಇತಿಹಾಸವಾದ ತನ್ನ `ಮ್ಯೂಸಿಯಂ ಆಫ್ ಸೈಲೆನ್ಸ್` ಪುಸ್ತಕದಲ್ಲಿ ಪ್ರಾಚೀನಕಲೆಗಳು, ಎಲ್ಲಾ ಕಾಲದ ಶಿಶುಕಲೆಗಳು ಮತ್ತು ಜನಪ್ರಿಯ ಕಲೆಗಳು ಯಾವತ್ತೂ ತರ್ಕದ ಕಟ್ಟಿಗೆ ಸಿಗುವುದಿಲ್ಲ ಎಂದು ವಾದಿಸುತ್ತಾನೆ.

ಇಂದು ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಕಲೆಯಾಗಿ ಬೆಳೆಯುತ್ತಿರುವ ಬಾಲಿವುಡ್ ಸಿನಿಮಾದ ಮಾಂತ್ರಿಕತೆಯಿರುವುದು ಅದರ ಕನಸುಗಾರಿಕೆಯಲ್ಲೇ. ಬಾಲಿವುಡ್ಡಿನವರು ಕನಸಿನ ವ್ಯಾಪಾರಿಗಳು.

ಅಂದ ಮಾತ್ರಕ್ಕೆ, ಬಾಲಿವುಡ್ಡಿನಂಥ ಜನಪ್ರಿಯಕಲೆಗಳು, ಜಾಹೀರಾತು ಕಲೆಗಳು ನಮಗೆ ನಿಜದಿಂದ ಬಿಡುಗಡೆ ಕೊಡುತ್ತವೆಯೆ? ಇಂಥ ಜನಪ್ರಿಯ ಕಲೆಗಳಿಗೂ ಕನಸನ್ನು ಹೆಚ್ಚು ಅರ್ಥಪೂರ್ಣವಾಗಿ ಬಳಸುವ ಆಧುನಿಕ ಕಲೆಗಳಿಗೂ ವ್ಯತ್ಯಾಸ ಏನಾದರೂ ಇದೆಯೆ? ಸಂಸ್ಕೃತಿ ವಿದ್ವಾಂಸರು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲವಾದ್ದರಿಂದ ಜನಪ್ರಿಯಕಲೆಗಳ ಶಿಕಾರಿಗೆ ಮಿಕಗಳಾಗಿರುವ ನಮ್ಮಂಥ ಸಾಮಾನ್ಯರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಜನಪ್ರಿಯ ಕಲೆಗಳು ಕನಸಿನ ತಂತ್ರದಲ್ಲಿ ಬಿಡುಗಡೆಯ ರುಚಿ ತೋರಿಸುತ್ತಾ ಆಳದಲ್ಲಿ ವಾಸ್ತವ ಪ್ರಪಂಚದಲ್ಲಿ ಒಪ್ಪಿತವಾಗಿರುವ ಅಧಿಕಾರವ್ಯವಸ್ಥೆಯನ್ನು ಪೋಷಿಸುತ್ತಿರುತ್ತವೆ. ಆದರೆ ಆಧುನಿಕ ಕಲೆಗಳು ಕನಸನ್ನು ಕೇವಲ ತಂತ್ರವನ್ನಾಗಿ ಬಳಸುವುದಿಲ್ಲ.

ಅವನ್ನು ಸಾಮಾಜಿಕ ಒತ್ತಡಗಳನ್ನು ಪ್ರಶ್ನಿಸುವ ಮಾಧ್ಯಮವನ್ನಾಗಿ ಬಳಸುತ್ತವೆ. ಹೀಗೆ ಕಲೆಗಳಲ್ಲಿ ಕನಸು ಇಬ್ಬಾಯಿಯ ಕತ್ತಿ. ಹೊರ ಒತ್ತಡಗಳಿಂದ ಬಿಡಿಸಿಕೊಳ್ಳುವ ನಮಗೆ ನೆರವಾಗಬಹುದು ಅಥವಾ ನಮ್ಮಿಂದ ನಮ್ಮನ್ನೇ ಬೇರ್ಪಡಿಸಬಹುದು.

ಕಲೆಗಳು ಕನಸುಗಳನ್ನು ಬಿಡುಗಡೆಯ ಮಾದರಿಗಳಾಗಿ ಕಾಣುತ್ತಿದ್ದ ಯುಗದಲ್ಲೇ ಇಬ್ಬರು ಮನೋವಿಜ್ಞಾನಿಗಳು ಅವುಗಳಲ್ಲಿನ ತಾರ್ಕಿಕತೆಯನ್ನು ಅನ್ವೇಷಿಸುತ್ತಿದ್ದರು. ಮೊದಲನೆಯವ ಫ್ರಾಯ್ಡ.

ಬಹಳ ಸ್ಥೂಲವಾಗಿ ಹೇಳಬೇಕೆಂದರೆ, ಆತನ ಪ್ರಕಾರ ಜನ ಬದುಕಿನಲ್ಲಿ ಅದುಮಿಟ್ಟುಕೊಂಡ ಅಪೂರ್ಣ ಬಯಕೆಗಳನ್ನು ಕನಸುಗಳಲ್ಲಿ ಪೂರೈಸಿಕೊಳ್ಳುತ್ತಾರೆ. ಕಾಮವೆನ್ನುವುದು ಮನುಷ್ಯನ ಆದಿಮ ಪ್ರವೃತ್ತಿ. ಅದಕ್ಕೆ ಲಂಗುಲಗಾಮುಗಳಿಲ್ಲ.

ಆದರೆ ಸಮಾಜ ತನ್ನ ಉಳಿವಿಗಾಗಿ ಆ ಪ್ರವೃತ್ತಿಯನ್ನು ಹತ್ತಿಕ್ಕಲು ನಿಬಂಧನೆಗಳನ್ನು ಹೇರುತ್ತಲೇ ಇರುತ್ತದೆ. ಹೀಗಾಗಿ ಕಾಮದ ಬಯಕೆ ಎಂದೂ ತೀರುವುದಿಲ್ಲ.

ಕನಸುಗಳು ನಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುವ ಅತೃಪ್ತ ಬಯಕೆಗಳಿಗೆ ಸುರಕ್ಷಿತವಾದ ಹೊರದ್ವಾರಗಳನ್ನು ನೀಡುತ್ತವೆ. ಆದರೆ ಇದು ಅಸ್ವಸ್ಥತೆಯ ಸೂಚಕ.

ಅಂತಿಮವಾಗಿ ಮನುಷ್ಯ ಸ್ವಪ್ನಗಳ ಹುಸಿ ಪರಿಹಾರದಿಂದ ಬಿಡುಗಡೆ ಹೊಂದಿ ನಿಜದ ಜೊತೆಗೆ ತನ್ನ ಸಮಜಾಯಿಷಿ ಮಾಡಿಕೊಳ್ಳುತ್ತಾ ತನ್ನ ಪ್ರಬುದ್ಧ ಅಹಮನ್ನು ರೂಪಿಸಿಕೊಳ್ಳಬೇಕಾಗುತ್ತದೆ.

ಕನಸಿನ ಭಾಷೆಯ ಹಲವು ವ್ಯಾಕರಣ ನಿಯಮಗಳನ್ನು ಫ್ರಾಯ್ಡ ಅನಾವರಣ ಮಾಡಿದ. ಉದಾಹರಣೆಗೆ ಉತ್ಪ್ರೇಕ್ಷಾಲಂಕಾರ ಕನಸುಗಳಲ್ಲಿ ಸಹಜ. ನಿದ್ದೆ ಹೋಗಿರುವಾಗ ಹಾಸಿಗೆಯಿಂದ ಕೆಳಗೆ ಬಿದ್ದ ವ್ಯಕ್ತಿ ಕನಸಿನಲ್ಲಿ ತಾನು ಹಿಮಾಲಯ ಪರ್ವತದಿಂದ ಕೆಳಗೆ ಬಿದ್ದುದನ್ನು ಕಾಣಬಹುದು.

ಯೂಂಗ್‌ನ ಸ್ವಪ್ನ ಸಿದ್ಧಾಂತ ಬೇರೆ ದಿಕ್ಕನ್ನು ಹಿಡಿಯಿತು. ಅವನ ಪ್ರಕಾರ ಫ್ರಾಯ್ಡನ ಸಿದ್ಧಾಂತಗಳು ಮಾಮೂಲಿ ಕನಸುಗಳ ದೃಷ್ಟಿಯಿಂದ ಸರಿ. ಆದರೆ ಮಹಾನ್ ಕಲಾವಿದರ, ದಾರ್ಶನಿಕರ, ನಾಯಕರ ಕನಸುಗಳು ಬೇರೆಬಗೆಯವು.

ಇವನ್ನು ಅರ್ಥಮಾಡಿಕೊಳ್ಳಲು ಫ್ರಾಯ್ಡನ ತಳಮನದ ಕಲ್ಪನೆ ಸಾಲದು. ಆದ್ದರಿಂದ ಯೂಂಗ್ `ಮೇಲುಮನ`ವೆಂಬ ಇನ್ನೊಂದು ಕಲ್ಪನೆಯನ್ನು ಬಳಸುತ್ತಾನೆ.

ಫ್ರಾಯ್ಡ ಮನಸು, ಕನಸುಗಳ ಸಂದಿಗ್ಧಗಳನ್ನು ಅರ್ಥೈಸಲು ಕೇವಲ ವೈಯಕ್ತಿಕ ತಳಮನದ ಪರಿಕರ ಬಳಸುತ್ತಾನೆ. ಆದರೆ ಯೂಂಗ್ ಎಲ್ಲ ಮನಸ್ಸುಗಳೂ ಪರಸ್ಪರ ಹೆಣೆದುಕೊಂಡಿರುವುದನ್ನು ತೋರಿಸಲು `ಸಾಮೂಹಿಕ ತಳಮನ`ವೆಂಬ ಕಲ್ಪನೆ ಬಳಸುತ್ತಾನೆ.

ಈ ಇಬ್ಬರು ಮಹಾನ್ ಚಿಂತಕರ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಈಡಿಪಸ್ ಕತೆಯನ್ನು ಪರೀಕ್ಷಿಸಲು ಅವರು ಬಳಸುವ ವಿಭಿನ್ನ ದೃಷ್ಟಿಗಳನ್ನು ನೋಡಬೇಕು.
ಈಡಿಪಸ್ ಕತೆಯ ಪ್ರಕಾರ ಅಜ್ಞಾನದಿಂದ ಹುಟ್ಟಾ ಶಾಪಗ್ರಸ್ತನಾದ ಥೀಬ್ಸ್‌ನ ದೊರೆ ಈಡಿಪಸ್ ತನ್ನ ತಂದೆಯನ್ನು ಕೊಂದು ತಾಯಿಯನ್ನೇ ಮದುವೆಯಾಗಿ ತನ್ನ ತಂಗಿ-ತಮ್ಮಂದಿರಿಗೆ ತಂದೆಯಾಗುತ್ತಾನೆ. ಗ್ರೀಕರ ದುರಂತ ಕತೆಗಳಲ್ಲಿ ಇದು ತುಂಬಾ ಪ್ರಸಿದ್ಧ.

ಫ್ರಾಯ್ಡನ ಪ್ರಕಾರ ಬೆಳವಣಿಗೆಯ ಹಂತದಲ್ಲಿ ಎಲ್ಲ ಗಂಡುಮಕ್ಕಳೂ ಹಾದುಹೋಗುವ ತಾಯ ಬಗೆಗಿನ ಅನಿವಾರ್ಯ ಲೈಂಗಿಕ ಸೆಳೆತದ ಸಂಕೇತ ಈ ಕತೆ. ಆದರೆ ಯೂಂಗನ ಪ್ರಕಾರ ಹಾಗಲ್ಲ.

ಈಡಿಪಸ್ ಜೊಕಾಸ್ಟಾಳನ್ನು ಮದುವೆಯಾದದ್ದು ತಾಯ ಬಗೆಗಿನ ಕಾಮುಕತೆಯಿಂದಲ್ಲ. ಗಂಡ ಸತ್ತಿದ್ದ ಅವನ ತಾಯಿ ರಾಣಿಯಾಗಿ ಆ ಭೂಮಿಯ ಸಂಕೇತವಾಗಿದ್ದಳು. ಅವಳನ್ನು ಮದುವೆಯಾಗುವ ಸಾಂಕೇತಿಕ ಕ್ರಿಯೆಯಿಂದ ಅಂತಿಮವಾಗಿ ಪ್ರಕೃತಿಯಲ್ಲಿ ಲೀನವಾಗಿ ಬಿಡುಗಡೆ ಪಡೆಯುವ ಆದಿಮ ಧಾರ್ಮಿಕ ಪ್ರವೃತ್ತಿಯನ್ನು ಈಡಿಪಸ್ ವ್ಯಕ್ತಪಡಿಸಿದ.

ಹೀಗೆ ಕನಸುಗಳು ವಿಸ್ಮಯಗಳಾಗಿ, ಭ್ರಮೆಗಳಾಗಿ, ದರ್ಶನಗಳಾಗಿ, ನಿಜದ ಹೊಳಹುಗಳಾಗಿ, ನಾಳಿನ ಸೂಚಕಗಳಾಗಿ, ಅಸಂಬದ್ಧ ಸಂರಚನೆಗಳಾಗಿ ನಮ್ಮ ನಡುವೆ ಸಂಚರಿಸುತ್ತಿರುತ್ತವೆ.

-ಪ್ರಜಾವಾಣಿ ಕೃಪೆ

ಅಣು ವಿದ್ಯುತ್ ಸ್ಥಾವರದ ವಿರುದ್ಧ ಚಳವಳಿ


ಪೆರಾಚಿ ಕಣ್ಣನ್

ಕೆಲವು ತಿಂಗಳ ಹಿಂದೆಯಷ್ಟೆ ಇಡೀಂದಕಾರೈ ಮೀನುಗಾರರನ್ನೇ ಬಹುಸಂಖ್ಯಾತರನ್ನಾಗಿ ಹೊಂದಿದ್ದ ಒಂದು ಸಾಮಾನ್ಯ ಹಳ್ಳಿ. ಆದರೆ ಇಂದು ಅಣು ಸ್ಥಾವರ ವಿರೋಧಿ ಅಭಿಯಾನದ ಮುಂಚೂಣಿಯಲ್ಲಿ ಈ ಹಳ್ಳಿ ಕಾಣಿಸಿಕೊಂಡಿದೆ. ಇಲ್ಲಿಗೆ ಸಮೀಪದ ಗ್ರಾಮವಾದ ಕೂಡಂಕುಲಂನಲ್ಲಿ ೧,೦೦೦ ಮೆಗವ್ಯಾಟ್ ಸಾಮರ್ಥ್ಯದ ಎರಡು ಅಣು ವಿದ್ಯುತ್ ಸ್ಥಾವರಗಳು ಪ್ರಾರಂಭವಾಗಲಿದ್ದು, ಅವುಗಳಲ್ಲಿ ಒಂದು ಡಿಸೆಂಬರ್‌ನಲ್ಲಿ ತನ್ನ ಕಾರ್ಯಾಚರಣೆ ಶುರುಮಾಡಲಿದೆ ಎಂಬ ಅಧಿಕಾರಿಗಳ ಘೋಷಣೆ ಜನರನ್ನು ಆತಂಕದ ಮಡುವಿಗೆ ತಳ್ಳಿದ್ದು ಅವರೆಲ್ಲ ಈಗ ಉಪವಾಸ ಸತ್ಯಾಗ್ರಹದ ಮೊರೆ ಹೋಗಿದ್ದಾರೆ.


ಈ ಘೋಷಣೆ ಹೊರ ಬೀಳುವವರೆಗೆ ಈ ಚಳವಳಿ ಸಾಮೂಹಿಕ ಚಳವಳಿಯ ರೂಪ ಪಡೆದಿರಲಿಲ್ಲ. ಆದರೆ ಆಗಸ್ಟ್ ೧೫ರಂದು ಸ್ಥಳೀಯ ಪಂಚಾಯತ್ ಈ ಅಣು ಸ್ಥಾವರದ ಕೆಲಸ ಪೂರ್ಣಗೊಂಡಿದ್ದರೂ ಕೂಡ ಇಲ್ಲಿ ಅದು ತನ್ನ ಕಾರ್ಯ ನಿರ್ವಹಿಸಬಾರದು ಎಂಬ ನಿರ್ಣಯ ಕೈಗೊಂಡಿತ್ತು. ಗ್ರಾಮಸ್ಥರು ಆಗಸ್ಟ್ ೧೬ರಂದು ಮೊದಲ ಬಾರಿ ಉಪವಾಸ ಸತ್ಯಾಗ್ರಹ ಮಾಡಿದರೆ ಸೆಪ್ಟೆಂಬರ್ ೧೧ರಿಂದ ಇವರು ಸರಣಿ ಉಪವಾಸ ಕೂತಿದ್ದಾರೆ. ಮೀನುಗಾರರು ಕೂಡ ೩ ದಿನ ಮೀನುಗಾರಿಕೆ ಮಾಡದಿರುವ ನಿರ್ಣಯ ಕೈಗೊಂಡಿದ್ದಾರೆ.


ಟಿಎಸ್‌ಐ ಈ ಗ್ರಾಮಕ್ಕೆ ಭೇಟಿ ನೀಡಿದಾಗ ಈ ಗ್ರಾಮದಲ್ಲಿ ಯಾರೊಬ್ಬರೂ ಕಾಣಲಿಲ್ಲ. ಪ್ರತಿಯೊಬ್ಬರೂ ಕಪ್ಪು ಪಟ್ಟಿ ಧರಿಸಿಕೊಂಡು ಚರ್ಚ್‌ನ ಮುಂದೆ ನೆರೆದಿದ್ದರು. ಕೂಡಂಕುಲಂನ ಸುತ್ತಲಿನ ಅನೇಕ ಗ್ರಾಮಗಳ ಜನರು ಅಲ್ಲಿ ನೆರೆದಿದ್ದರು. ಸುಮಾರು ೧೫೦ ಮಂದಿ ತಾವು ಅನಿರ್ದಿಷ್ಟಾವಧಿ ಉಪವಾಸ ಕೂರುವುದಾಗಿ ಘೋಷಿಸುವುದರೊಂದಿಗೆ ಮತ್ತು ರಾಷ್ಟ್ರ ಮಟ್ಟದಲ್ಲಿ ಅಣು ಸ್ಥಾವರ ವಿರೋಧಿ ಅಭಿಯಾನದಲ್ಲಿ ತೊಡಗಿರುವವರು ಈ ಪ್ರತಿಭಟನೆಗೆ ಬೆಂಬಲ ಕೊಡುವುದರೊಂದಿಗೆ ಈ ಹೋರಾಟ ಮಹತ್ವದ ಘಟ್ಟ ತಲುಪಿದೆ.


ಬೀಡಿ ಕಟ್ಟುವ ಕೆಲಸ ಮಾಡುವ ಎಮ್. ಸರಸ್ವತಿ ಟಿಎಸ್‌ಐ ಜೊತೆ ಮಾತನಾಡುತ್ತಾ, "ಸ್ಥಾವರದಿಂದ ಹೊರ ಬರುವ ಶಬ್ದ ಭಯಾನಕವಾಗಿದೆ, ನಮ್ಮ ಮಕ್ಕಳು ಈ ಭೀಷಣ ಶಬ್ದದ ಬಗ್ಗೆ ಆತಂಕಿತರಾಗಿದ್ದಾರೆ. ನಮ್ಮನ್ನೂ ನಮ್ಮ ಹಳ್ಳಿಯಿಂದ ಎತ್ತಂಗಡಿ ಮಾಡುತ್ತಾರೆ ಎಂದು ಕೂಡ ಹೇಳುತ್ತಾರೆ. ನಾವು ಏಕೆ ಹೋಗಬೇಕು?" ಎಂದು ಕೇಳುತ್ತಾಳೆ.


"ಆರಂಭದಲ್ಲಿ ನಮಗೆ ವಿದ್ಯುತ್ ಸ್ಥಾವರದ ಬಗ್ಗೆ ಗೊತ್ತಿರಲಿಲ್ಲ. ನಾವಾಗಿಯೇ ಭೂಮಿಯನ್ನು ನೀಡಿದೆವು. ಆದರೆ ಫುಕಿಶಿಮಾ ದುರಂತದ ಬಳಿಕ ನಾವು ಈ ಅಣುಸ್ಥಾವರ ವಿರುದ್ಧ ನಿರ್ಣಯ ಕೈಗೊಂಡೆವು. ಈ ಸ್ಥಾವರದ ೧೬ ಕಿ.ಮೀ. ಸುತ್ತಳತೆಯಲ್ಲಿ ಒಂದೂವರೆ ಲಕ್ಷ ಜನರು ವಾಸಿಸುತ್ತಿದ್ದಾರೆ. ಈ ಸ್ಥಾವರಗಳನ್ನು ಮುಚ್ಚುವವರೆಗೆ ನಾವು ನಮ್ಮ ಹೋರಾಟದಿಂದ ವಿಶ್ರಾಂತಿ ಪಡೆಯುವುದಿಲ್ಲ" ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತ ಪ್ರಸನ್ನ ಕುಮಾರ್.


ಸ್ಥಳೀಯ ಶಾಸಕ ಮೈಕೆಲ್ ರಾಯಪ್ಪನ್ ಉಪವಾಸದ ಈ ವಿಷಯವನ್ನು ವಿಧಾನಸಭೆಯಲ್ಲಿ ಎತ್ತುವುದಾಗಿ ಹೇಳಿದ್ದಾರೆ.


ಸ್ಥಾವರ ವಿರೋಧಿ ಪ್ರತಿಭಟನೆ ದಿನೇ ದಿನೇ ಕಾವು ಪಡೆಯುತ್ತಿದ್ದು ಸರ್ಕಾರ ಹಾಗೂ ಪ್ರತಿಭಟನಾಕಾರರ ಮುಂದಿನ ನಡೆಯೇನು? ಎಂಬುದನ್ನು ಕಾದು ನೋಡಬೇಕಿದೆ.

- ಟಿಎಸ್‌ಐ ಕೃಪೆ

ಅವಳು ಉಳಿಯಲಿ: ಇನ್ನಾದರೂ ನಿಲ್ಲಲಿ ಹೆಣ್ಣು ಹಸುಳೆಗಳ ಹತ್ಯೆ


ಅನಿಲ್ ಶರ್ಮ

ಜನವರಿಯಲ್ಲಿ ನಾವುಗಾಮಾ ಎಂಬ ಹಳ್ಳಿಯ ನಾಲೆಯೊಂದರಲ್ಲಿ ನವಜಾತ ಹೆಣ್ಣು ಶಿಶುವಿನ ಶವ ದೊರೆತಿತ್ತು. ಪೋಲಿಸರ ಪ್ರಕಾರ ಅದು ಹೆಣ್ಣಾಗಿದ್ದರಿಂದ ಎಸೆಯಲಾಗಿದ್ದು, ಆಹಾರವಿಲ್ಲದೆ ಕೊನೆಯುಸಿರೆಳೆದಿತ್ತು.


ಜುಲೈನಲ್ಲಿ ದುಂಗರಪುರ ಜಿಲ್ಲೆಯ ರೈಲ್ವೆ ಕ್ರಾಸಿಂಗ್ ನಿಯಂತ್ರಣ ಕೊಠಡಿಯ ಹತ್ತಿರ ನವಜಾತ ಹೆಣ್ಣು ಶಿಶುವೊಂದು ಬಿದ್ದಿತ್ತು. ಪೊಲೀಸರು ಹೇಳಿದಂತೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಇದ್ದಲ್ಲಿ ’ಅವಳು’ ಉಳಿಯುವುದು ಸಾಧ್ಯವಿರಲಿಲ್ಲ.


ನವಜೀವನ ಸಂಸ್ಥಾ ಎಂಬ ಸ್ವಯಂ ಸೇವಾ ಸಂಸ್ಥೆಯ ಹೊಸ್ತಿಲ ಮೇಲೆ ೯ ತಿಂಗಳ ಹೆಣ್ಣು ಮಗುವನ್ನು ಇಡಲಾಗಿತ್ತು. ಜೊತೆಗೆ ಇಂಗ್ಲಿಷಿನಲ್ಲಿ ನಾವು ಊರಿನಿಂದ ಹೊರಹೋಗುತ್ತಿದ್ದೇವೆ ಮರಳಿದ ಬಳಿಕ ಮಗುವನ್ನು ತೆಗೆದುಕೊಳ್ಳುತ್ತೇವೆ ಎಂದು ಚೀಟಿಯನ್ನು ಬರೆದಿಡಲಾಗಿತ್ತು.

ಇದು ರಾಜಸ್ಥಾನದಲ್ಲಿ ನಡೆಯುತ್ತಿರುವ ಹೆಣ್ಣು ಹಸುಳೆಗಳ ಹತ್ಯೆಯ ಒಂದು ಸಣ್ಣ ಚಿತ್ರಣ ಅಷ್ಟೆ. ಇಂತಹ ಸಾವಿರಾರು ಘಟನೆಗಳು ವರದಿಯೇ ಆಗುವುದಿಲ್ಲ. ಇತರೆ ಮೂಲಗಳ ಪ್ರಕಾರ ರಾಜಸ್ಥಾನದಲ್ಲಿ ಪ್ರತಿದಿನ ಸುಮಾರು ೧೫೦೦-೨೦೦೦ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ೨೦೧೧ರ ಜನಗಣತಿಯಂತೆ ರಾಜ್ಯದಲ್ಲಿ ೦-೬ ವರ್ಷದ ವಯಸ್ಸಿನವರಲ್ಲಿ ೧೦೦೦ ಹುಡುಗರಿಗೆ ಕೇವಲ ೮೮೩ ಹುಡುಗಿಯರ ಲಿಂಗಾನುಪಾತವಿದೆ.


ಹೆಚ್ಚಾಗಿ ಗ್ರಾಮೀಣ ಪ್ರದೇಶದ ತಂದೆತಾಯಿಗಳ ಅನಕ್ಷರತೆ, ಬಡತನ ಹಾಗೂ ಕುಟುಂಬ ಯೋಜನೆಯ ನಿರ್ಲಕ್ಷತೆಗಳಿಂದಾಗಿ ಹೆಣ್ಣು ಮಕ್ಕಳನ್ನು ಬೆಳೆಸುವುದು ದುಬಾರಿ ಎಂದು ತಿಳಿಯಲಾಗಿದೆ. ಎಷ್ಟೇ ಬಲವಾದ ಕಾನೂನುಗಳಿದ್ದರೂ ಮಾನವನಿಗೆ ಉಪಯೋಗಕಾರಿ ಆಗಬೇಕಾದ ತಂತ್ರಜ್ಞಾನವು ಹೆಣ್ಣು ಮಕ್ಕಳ ಪಾಲಿಗೆ ಕಂಟಕಪ್ರಾಯವಾಗುತ್ತಿದೆ.
ಇನ್ನೊಂದು ಹೊಸ ವಿದ್ಯಮಾನವೆಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದು ಸರ್ಕಾರದ ’ಜನನಿ ಸುರಕ್ಷಾ ಯೋಜನೆ’ಯಂತಹ ಯೋಜನೆಗಳನ್ನು ಬಳಸಿದ ನಂತರ ಹೆಣ್ಣು ಶಿಶುವಿನ ಹತ್ಯೆಗೈಯುವುದು, ಇಲ್ಲವೆ ಎಸೆದು ಹೋಗುವಂತಹ ಘಟನೆಗಳು ಹೆಚ್ಚಾಗುತ್ತಿದೆ.


೨೦೧೧ರ ಜನಗಣತಿಯ ನಂತರ ರಾಜಸ್ಥಾನ ಸರ್ಕಾರ ಹೆಣ್ಣು ಭ್ರೂಣ ಹತ್ಯೆಯನ್ನು ನಿವಾರಿಸಲು, ಆಸ್ಪತ್ರೆಗಳ ಮೇಲೆ ನಿಗಾ ಇಡಲು ಅವಶ್ಯವಿರುವ ಉಪಕರಣಗಳನ್ನೊಳಗೊಂಡ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸುವುದು, ಅಂತಹ ಆಸ್ಪತ್ರೆಗಳ ಸುಳಿವು ನೀಡಿದವರಿಗೆ ೫೦೦೦ ರೂಪಾಯಿ ಪ್ರೋತ್ಸಾಹ ಧನವನ್ನು ನೀಡುವುದು ಮುಂತಾದ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.
ಸರ್ಕಾರದ ಇತ್ತೀಚಿನ ಸಮೀಕ್ಷೆಯಲ್ಲಿ ಸುಮಾರು ೧೦೦೦ ಅಲ್ಟ್ರಾಸೌಂಡ್ ಆಸ್ಪತ್ರೆಗಳು ಅರ್ಹ ಸಿಬ್ಬಂದಿಗಳನ್ನು ಹೊಂದಿರದಿದ್ದುದು ತಿಳಿಯಿತು. ಅಷ್ಟು ಮಾತ್ರವಲ್ಲ, ಆಸ್ಪತ್ರೆಯನ್ನು ನಡೆಸುವವರು ಸಹ ಯೋಗ್ಯ ಶಿಕ್ಷಣವನ್ನು ಪಡೆದಿಲ್ಲ. ಮಾಹಿತಿಯಂತೆ ಇವರು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ

"ಯಾವುದೇ ಹೋರಾಟ ಜನರ ಮನಸ್ಸನ್ನು ಪ್ರವೇಶಿಸಬೇಕು"

ಸಂದರ್ಶನ
ಸಂದರ್ಶಕರು ; ಹರ್ಷಕುಮಾರ್ ಕುಗ್ವೆ

ಡಾ.ಜಿ. ರಾಮಕೃಷ್ಣ ಅವರು ನಮ್ಮ ನಾಡು ಕಂಡ ಅಪರೂಪದ ಚಿಂತಕ. ಜೀವನವಿಡೀ ಸಮಾಜಮುಖಿ ಚಿಂತನೆ ಹಾಗೂ ಕೃತಿಯಲ್ಲಿ ತೊಡಗಿರುವವರು. ತತ್ವಶಾಸ್ತ್ರ ಕ್ಷೇತ್ರದಲ್ಲಿ ಕನ್ನಡ ಜನತೆಗೆ ಅಪಾರ ಕೊಡುಗೆ ಸಲ್ಲಿಸಿರುವ ಜಿಆರ್ ಎಡಪಂಥೀಯ ಚಿಂತನೆ, ಶಿಕ್ಷಣ, ಸಮಾಜ ಮೊದಲಾದ ವಿಚಾರಗಳ ಬಗ್ಗೆ ಹರ್ಷಕುಮಾರ್ ಕುಗ್ವೆ ಜೊತೆ ನಡೆಸಿದ ಮಾತುಕತೆ ಇಲ್ಲಿದೆ


ನೀವು ಎಡಪಂಥೀಯ ಚಿಂತನೆಯಲ್ಲಿ ನಂಬಿಕೆ ಇರುವವರು. ಸೋವಿಯತ್ ಒಕ್ಕೂಟ ಕುಸಿದ ನಂತರ ಮಾರ್ಕ್ಸ್‌ವಾದ ಸೋತುಹೋಗಿದೆ, ಅದಕ್ಕೆ ಭವಿಷ್ಯವಿಲ್ಲ ಎನ್ನುವ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ನಿಮ್ಮ ಅಭಿಪ್ರಾಯವೇನು?
ಮೊದಲಿಗೆ ಮಾರ್ಕ್ಸ್‌ವಾದ ಎಂದರೇನು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಮಾಜದ ವಿಕಾಸದ ನಿಯಮವನ್ನು ವೈಜ್ಞಾನಿಕವಾಗಿ ವಿವರಿಸುವುದೇ ಮಾರ್ಕ್ಸ್‌ವಾದ. ಮಾರ್ಕ್ಸ್‌ವಾದಕ್ಕೆ ಭವಿಷ್ಯ ಇಲ್ಲ ಎಂದರೆ ಸಮಾಜದ ವಿಕಾಸಕ್ಕೆ ಭವಿಷ್ಯ ಇಲ್ಲ ಎಂದಂತೆಯೇ ಸರಿ. ಸಮಾಜ ಯಾವಾಗಲೂ ಮುಂದಕ್ಕೆ ಚಲಿಸುತ್ತದೆಯೇ ಹೊರತು ಹಿಮ್ಮುಖವಾಗಲ್ಲ. ಮಾರ್ಕ್ಸ್ ಎನ್ನುವವನು ಹುಟ್ಟಿದ್ದಕ್ಕೆ ಅಥವಾ ಮಾರ್ಕ್ಸ್‌ವಾದ ಹುಟ್ಟಿದ್ದಕ್ಕೆ ಸಮಾಜ ಬದಲಾಗಿಲ್ಲ. ಸಮಾಜ ತನ್ನ ಅಂತಃಸತ್ವದ ಕಾರಣಕ್ಕೆ ವಿಕಾಸವಾಗುತ್ತದೆ. ಸೋವಿಯತ್ ಒಕ್ಕೂಟದಲ್ಲಿ ಅಥವ ಚೀನಾದಲ್ಲಿ ಸಮಾಜವಾದ ಸೋತೊಡನೆ ಕಮ್ಯೂನಿಸಂ ಸತ್ತೇ ಹೋಯಿತು ಎಂಬ ಪ್ರಚಾರ ಬಂಡವಾಳಿಗರದು. ತಕ್ಷಣದಲ್ಲಿ ವಿಶ್ವಾಸ ಕುಂದಿರಬಹುದು, ಹಾಗಂತ ಮುಂದೆಂದೂ ಹೀಗೇ ಇರುತ್ತದೆಂದಲ್ಲ. ಉದಾ: ಇಂದು ಅಮೆರಿಕ ಸೈನಿಕವಾಗಿ ಬಲಿಷ್ಠವಾಗಿರಬಹುದು. ಎಲ್ಲಾ ಕಡೆ ಹಿಂಸೆ ನಡೆಸುತ್ತಿರಬಹುದು. ಆದರೆ ಎಂದೆಂದೂ ಅದು ಹೀಗೇ ಇರುತ್ತದೆ ಎಂಬ ನಿಯಮ ಇಲ್ಲ. ಅಮೆರಿಕದಲ್ಲಿ ದಿನಬೆಳಗಾದರೆ ನಾನಾ ಬಿಕ್ಕಟ್ಟುಗಳನ್ನು ನೋಡುತ್ತೇವಲ್ಲ. ಅದು ಏನನ್ನು ತೋರಿಸುತ್ತದೆ?

ಜಗತ್ತಿನ ಸರ್ವಾಧಿಕಾರಿಗಳ ಮಾತು ಬಂದಾಗ ಸ್ಟಾಲಿನ್, ಪೋಲ್‌ಪಾಟ್‌ನಂತಹ ಕಮ್ಯುನಿಸ್ಟರ ಹೆಸರಿರುತ್ತದೆ. ಇವರನ್ನು ಹೇಗೆ ಸಮರ್ಥಿಸುತ್ತೀರಿ?
ಸಮಸ್ಯೆ ಏನೆಂದರೆ ಸ್ಟಾಲಿನ್ ಹೆಸರು ಹೇಳ್ತಾರೆ, ಆದರೆ ಜಾರ್ಜ್ ಬುಷ್ ಹೆಸರು ಹೇಳೋಲ್ಲ. ಯಾರು ದೊಡ್ಡ ಸರ್ವಾಧಿಕಾರಿ? ಯಾರು ಹೆಚ್ಚು ಹಿಂಸೆ ನಡೆಸಿರುವುದು? ಅಮೆರಿಕ ಕೊಂದಷ್ಟು ಜನರನ್ನು ಯಾರೂ ಕೊಂದಿಲ್ಲ. ಸ್ಟಾಲಿನ್ ತನ್ನ ದೇಶದಲ್ಲಿ ಜನರನ್ನು ಕೊಂದ ಎಂಬ ಆಪಾದನೆ ನಿಜ ಎನ್ನುವುದಾದರೆ ಇವನು ಹತ್ತಾರು ದೇಶಗಳಲ್ಲಿ ಕೊಲ್ಲುತ್ತಲೇ ಇರುವುದನ್ನು ಹಿಂಸೆ ಎಂದು ಕರೆಯುವುದಿಲ್ಲ ಏಕೆ? ಇರಾಕ್, ಅಫಘಾನಿಸ್ತಾನ, ಲಿಬಿಯಾ ಎಲ್ಲಾ ಏನು ಹೇಳುತ್ತವೆ? ನಾನು ಪೆರು ಮತ್ತು ಕ್ಯೂಬಾಗಳನ್ನು ಕಣ್ಣಾರೆ ನೋಡಿದ್ದೇನೆ. ಅಲ್ಲಿ ಇವರು ಅದೆಷ್ಟು ಜನರನ್ನು ಕೊಂದಿದ್ದಾರೆ, ಎಷ್ಟು ನಾಶ ಮಾಡಿದ್ದಾರೆ ಅಂತಾ ವಿವರಿಸಲಿಕ್ಕೆ ಸಾಧ್ಯವಿಲ್ಲ. ಇನ್ನು ಪೋಲ್‌ಪಾಟ್‌ನ್ನು ಕಮ್ಯುನಿಸ್ಟ್ ಅನ್ನೋರಿಗೆ ಹುಚ್ಚು ಹಿಡಿದಿರಬೇಕು. ಅವನೊಬ್ಬ ರಾಕ್ಷಸ. ವಿಶ್ವಸಂಸ್ಥೆಯಲ್ಲಿ ಅವನನ್ನು ರಕ್ಷಿಸಿದ್ದು ಇದೇ ಅಮೆರಿಕ. ಸ್ಟಾಲಿನ್ ಜನರನ್ನು ಕೊಂದಿದ್ದು ಸರಿ ಅಂತ ನಾನು ಸಮರ್ಥಿಸುವುದಿಲ್ಲ. ಆದರೆ ಅಂದಿನ ಸನ್ನಿವೇಶ ಹೇಗಿತ್ತು ನೋಡಿ. ಅಂದು ಚರ್ಚಿಲ್ ಸಂಸತ್ ಭಾಷಣದಲ್ಲಿ ಒಂದು ಮಾತು ಹೇಳಿದ್ದ. ’ಕಮ್ಯುನಿಸ್ಟ್ ಕೂಸೊಂದು ಹುಟ್ಟಿಕೊಂಡಿದೆ. ತೊಟ್ಟಿಲಲ್ಲೇ ಅದನ್ನು ಕತ್ತು ಹಿಸುಕಿ ಸಾಯಿಸಿಬಿಡಬೇಕು’ ಅಂತ. ಹೀಗೆ ಸೋವಿಯತ್‌ನ್ನು ಬುಡಮೇಲು ಮಾಡಲು ಸುತ್ತಲಿನಿಂದ ನಡೆದ ನಿರಂತರ ಆಕ್ರಮಣಗಳ ಪರಿಣಾಮವಾಗಿ ಕಂಡವರನ್ನೆಲ್ಲಾ ಅನುಮಾನಿಸುವ ಸ್ಥಿತಿ ಸ್ಟಾಲಿನ್‌ದಾಗಿತ್ತು. ಅಮೆರಿಕದ ಕೆಲವು ಏಜೆಂಟ್‌ಗಳು ತನ್ನ ಸರ್ಕಾರದೊಳಗೇ ಇದ್ದಾರೆ ಎಂದು ತಿಳಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಜರ್ಮನಿಯ ಹಿಟ್ಲರ್ ರಷ್ಯಾವನ್ನು ಆಕ್ರಮಣ ಮಾಡಿದ. ಇಂಥಾ ಭಯಾನಕ ಒತ್ತಡಗಳ ಹಿನ್ನೆಲೆಯಲ್ಲಿ ನಾವು ಸ್ಟಾಲಿನ್‌ನ ತಪ್ಪುಗಳನ್ನು ನೋಡಬೇಕು. ಅದು ಹಾಗಿರಲಿ, ಕಾಶ್ಮೀರದಲ್ಲಿ ಸ್ಟಾಲಿನ್ ಇಲ್ಲ. ಅಲ್ಲಿ ನಾವು ಎಷ್ಟು ಜನರನ್ನು ಕೊಂದಿದ್ದೇವೆ? ಈಶಾನ್ಯ ಭಾರತದಲ್ಲಿ ಎಷ್ಟು ಕೊಲೆ ಮಾಡಿದ್ದೇವೆ? ನಾವು ಹೇಗೆ ಸ್ಟಾಲಿನ್‌ಗಿಂತ ಕಡಿಮೆ ಆಗುತ್ತೇವೆ? ಇಂದಿಗೂ ನರಮೇಧ ನಡೆಸುತ್ತಿರುವ ಚಂಡಾಲರ ಬಗ್ಗೆ ನನಗೆ ಹೆಚ್ಚು ಆಸಕ್ತಿ.

ಭಾರತದಲ್ಲಿ ಮಾರ್ಕ್ಸ್‌ವಾದಿಗಳು ಎಂದುಕೊಳ್ಳುವವರಲ್ಲಿ ಹಲವಾರು ಬಣಗಳಿವೆ. ಕಾರಣವೇನು?
ಇದು ನಮ್ಮ ದೇಶದ ಮಾರ್ಕ್ಸ್‌ವಾದಿಗಳಿಗೆ ಅಂಟಿಕೊಂಡಿರೋ ದೊಡ್ಡ ಜಾಡ್ಯ. ಬಹುತೇಕರು ’ನಾನು ತಿಳಿದುಕೊಂಡಿರೋದೇ ಮಾರ್ಕ್ಸ್‌ವಾದ, ತಾವು ಮಾತ್ರ ಪರಿಶುದ್ಧರು’ ಎಂಬ ಮಡಿವಂತಿಕೆಯಲ್ಲಿದ್ದಾರೆ. ಇದು ನಿಜವಾದ ಮಾರ್ಕ್ಸ್‌ವಾದ ಅಲ್ಲ. ಇಲ್ಲಿ ಶೋಷಣೆ ಮಾಡುವವರು, ದೇಶದ ಸಂಪತ್ತನ್ನು ಲೂಟಿ ಹೊಡೆಯುವವರು ಒಗ್ಗಟ್ಟಾಗಿರ‍್ತಾರೆ. ಆದರೆ ಶೋಷಣೆ ವಿರುದ್ಧ ಹೋರಾಡುವವರು ಒಗ್ಗಟ್ಟಾಗಿರುವುದಿಲ್ಲ. ಇದೊಂದು ದೊಡ್ಡ ದುರಂತ.

ಶಸ್ತ್ರ ಹಿಡಿದಿರುವ ಮಾವೋವಾದಿಗಳೂ ತಾವು ಮಾರ್ಕ್ಸ್‌ವಾದಿಗಳು ಎನ್ನುತ್ತಾರೆ. ಆ ಬಗ್ಗೆ?

ಶಸ್ತ್ರಾಸ್ತ್ರ ಹಿಡಿದುಕೊಂಡು ಹೋರಾಟ ಮಾಡಬೇಕೇ ಬೇಡವೇ ಎಂಬುದನ್ನು ಸೂತ್ರರೂಪದಲ್ಲಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಹಿಂಸೆ ಯಾವುದು, ಅಹಿಂಸೆ ಯಾವುದು ಎಂಬುದು ಬಹಳ ಅಮೂರ್ತ ಚರ್ಚೆಯಾಗುತ್ತೆ. ಒಬ್ಬನನ್ನು ಹೊಟ್ಟೆಗೆ ನೀಡದೆ ಸಾಯಿಸುವುದೂ ಹಿಂಸೆಯೇ ಅಲ್ಲವೇ? ಗಾಂಧಿಯ ಬಳಿ ಹೋಗಿ ಕೆಲವರು ’ನಾವು ಬ್ರಿಟಿಷರ ವಿರುದ್ಧ ಶಸ್ತ್ರ ಹಿಡಿದು ಹೋರಾಡುತ್ತೇವೆ’ ಎಂದಾಗ ಅವರು ನೀವು ಈ ಮಾರ್ಗದಲ್ಲಿ ಗೆಲ್ಲುತ್ತೇವೆ ಎನ್ನುವುದಾದರೆ ಹಾಗೇ ಮಾಡಿ ಎಂದಿದ್ದರಂತೆ. ಕಡೆಗೆ ಗೆದ್ದಿದ್ದು ಗಾಂಧಿಯೇ ಬಿಡಿ. ಮಾವೋವಾದಿಗಳ ಶಸ್ತ್ರಕ್ಕೆ ನಿಜವಾದ ಶಕ್ತಿ ಯಾವಾಗ ಬರುತ್ತದೆಂದರೆ ಜನರ ಮನಸ್ಸು ಆ ಶಸ್ತ್ರದ ಪರವಾಗಿದ್ದಾಗ ಮಾತ್ರ. ಆದರೆ ಆ ಬಂದೂಕಿಗೆ ಜನರೇ ಭಯಬೀಳುವ ಸನ್ನಿವೇಶದಲ್ಲಿ ಅದು ಯಾವ ಬದಲಾವಣೆಯನ್ನೂ ತರುವುದಿಲ್ಲ. ಜನಗಳ ಮನಸ್ಸನ್ನು ಪ್ರವೇಶ ಮಾಡಿದ್ದೇ ಆದಲ್ಲಿ ಗೆಲುವು ಖಚಿತ. ಶಸ್ತ್ರ ಹಿಡಿದಾಗಲೀ, ನಿಶಸ್ತ್ರವಾಗಲೀ ನಮಗೆ ಗೆಲುವಿನ ಖಾತ್ರಿ ಇರಬೇಕು. ಧ್ಯೇಯ ಮಕ್ಕಾಗಬಾರದು. ಹಾಗೆಯೇ ತಲೆಗಳನ್ನು ಕೊಚ್ಚಿ ಹಾಕುವುದೇ ಕಾಯಕವಾಗಬಾರದು. ಪೋಸ್ಕೋ ವಿರುದ್ಧ ಹೋರಾಟವನ್ನು ನೋಡಿ. ಜನರ ಮನಸ್ಸನ್ನು ಪ್ರವೇಶ ಮಾಡಿದ್ದರ ಪರಿಣಾಮ ಏನೆಂದು ಅರ್ಥವಾಗುತ್ತದೆ.

’ಲೋಕಾಯತ’ ಗ್ರಂಥದ ಅನುವಾದ ಮಾಡಿದ್ದೀರಿ. ಭಾರತೀಯ ತತ್ವಶಾಸ್ತ್ರದಲ್ಲಿ ಲೋಕಾಯತದ ಪ್ರಾಮುಖ್ಯತೆ ಏನು?

ಲೋಕಾಯತ ಪದವೇ ಹೇಳುವಂತೆ ಅದು ಜನರಿಂದಲೇ ಬಂದಿರುವ ತತ್ವಶಾಸ್ತ್ರ. ಲೋಕಾಯತ ಎಂಬುದು ವಾಸ್ತವಿಕ ಪ್ರಪಂಚ ಅಸ್ತಿತ್ವದಲ್ಲಿದೆ ಎಂದು ಸಾರುತ್ತದೆ, ವಸ್ತುನಿಷ್ಠ ವಿಶ್ಲೇಷಣೆಗೆ ಪ್ರಾಮುಖ್ಯತೆ ನೀಡುತ್ತದೆ. ಅಮೂರ್ತವಾದಗಳಿಗೆ ಪ್ರಾಮುಖ್ಯತೆ ನೀಡಿ ವಾಸ್ತವದ ಕಡೆಗಣನೆಯನ್ನು ಅದು ಒಪ್ಪುವುದಿಲ್ಲ. ಚರಿತ್ರೆಯ ಒಂದು ಹಂತದವರೆಗೆ ಯೋಚಿಸುವ ಮನಸ್ಸು ಮತ್ತು ದುಡಿಯುವ ಕೈಗಳು ಜೊತೆಜೊತೆಯಾಗಿ ಸಾಗಿವೆ. ಮುಂದೊಂದು ಹಂತದಲ್ಲಿ ಚಿಂತಿಸುವ ಮನಸ್ಸು ದುಡಿಯುವ ಕೈಗಳಿಗಿಂತ ಶ್ರೇಷ್ಠ ಎಂದು ಘೋಷಿಸಿಬಿಟ್ಟವು. ಋಗ್ವೇದದಲ್ಲಿ ಒಬ್ಬ ಕವಿಯನ್ನು ’ಬಡಗಿ ಇದ್ದಂಗೆ ಕಣಯ್ಯಾ ನೀನು’ ಎಂಬ ಹೊಗಳಿಕೆ ಬರುತ್ತದೆ. ಇಂದು ಒಬ್ಬ ಕವಿಯನ್ನು ಬಡಗಿಗೆ ಹೋಲಿಸಿದರೆ ಅದು ಅವನಿಗೆ ಅವಮಾನಕರ ಅನಿಸಬಹುದು. ಇದು ಶ್ರಮ ಹಾಗೂ ಬುದ್ಧಿಯ ನಡುವೆ ಅಂತರವನ್ನುಂಟು ಮಾಡಿದ ಪರಿಣಾಮ. ಆದರೆ ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವುದನ್ನು ಲೋಕಾಯತ ತತ್ವ ಪ್ರಣಾಳಿಕೆ ಒಪ್ಪುವುದಿಲ್ಲ. ತತ್ವಶಾಸ್ತ್ರ ಎನ್ನುವುದು ಅಂದಿನಿಂದಲೂ ಒಂದು ಆಯುಧವಾಗಿ ಬಳಕೆಯಾಗಿದೆ. ಪಾರಮಾರ್ಥಿಕ ಸತ್ಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು ಲೌಕಿಕ ಸುಖಗಳಲ್ಲಿ ತೇಲುತ್ತಿರುತ್ತಾರೆ. ಇಹ ಸತ್ಯವಲ್ಲ, ಪಾರಮಾರ್ಥಿಕವೇ ಸತ್ಯ ಎನ್ನುವವರು ಹಾಗಾದರೆ ಅದನ್ನು ಪಡೆಯಲಿಕ್ಕಾಗಿ ಉಪವಾಸ ಇದ್ದು ಬೇಗ ಸತ್ತುಹೋಗಿ ಬಿಡಬಹುದಲ್ಲ? ಭಗವದ್ಗೀತೆ ಹೇಳುತ್ತೆ ’ಯದ್ಭಾವಂ ತದ್ಭವತಿ’ ಅಂತ. ಬಡತನ ಅಂತ ಯಾಕೆ ಒದ್ದಾಡ್ತೀಯಾ. ಅದು ಬಡತನ ಅಲ್ಲ. ಮನೆ ಇಲ್ಲ ಅಂತ ಯಾಕೆ ಒದ್ದಾಡ್ತೀಯಾ ಅದು ಸತ್ಯ ಅಲ್ಲ. ಜಗತ್ತು ಮಿಥ್ಯೆ ಎಂದೆಲ್ಲಾ ಸಾಗುತ್ತದೆ ಈ ವಾದ. ಹೀಗೆ ವಾಸ್ತವತೆಯಿಂದ ಜನರನ್ನು ದಿಕ್ಕುತಪ್ಪಿಸುವುದೇ ಒಂದು ತತ್ವಶಾಸ್ತ್ರದ ಉದ್ದೇಶವಾದರೆ, ಜನರ ಶ್ರೇಯಕ್ಕಾಗಿ ಜನರನ್ನು ಸತ್ಯದೆಡೆಗೆ ಕರೆದೊಯ್ಯುವ ಒಂದು ತತ್ವಪ್ರಣಾಳಿಕೆಯೇ ಲೋಕಾಯತ.

ಅಣ್ಣಾ ಹಜಾರೆ ನೆತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮಧ್ಯಮ ವರ್ಗ ಬೀದಿಗಿಳಿದಿದೆ. ಈ ಬಗ್ಗೆ...?

ಇದನ್ನು ಕೆಲವರು ’ಎರಡನೇ ಸ್ವಾತಂತ್ರ್ಯ ಹೋರಾಟ’ ಅಂತಾರೆ. ನಮ್ಮ ದೇಶದಲ್ಲಿ ಈ ’ಎರಡನೆಯದು’ ಅದೆಷ್ಟು ಸಲ ಬರುತ್ತೆ ಅಂತ? ಮೂರನೆಯದು ಇಲ್ಲವೇ ಇಲ್ಲ. ಇನ್ನೊಂದು ಮುಖ್ಯ ಪ್ರಶ್ನೆಯೆಂದರೆ, ಈ ಮೂರು ಜನರಿಗೆ ನಾಗರಿಕ ಸಮಾಜ ಎಂದು ಕರೆದುಕೊಳ್ಳುವ ಶಕ್ತಿ ಎಲ್ಲಿಂದ ಬಂತು? ಆ ಅರವಿಂದ ಕೇಜ್ರಿವಾಲ್ ಫೋರ್ಡ್ ಫೌಂಡೇಷನ್ ಹಾಗೂ ಸ್ವಲ್ಪ ಹಿಂದೆ ಮುಳುಗಿ ಹೋದ ಅಮೆರಿಕದ ಲೆಹಮನ್ ಬ್ರದರ್ಸ್ ಕಂಪನಿಯಿಂದ ನಾಲ್ಕು ಲಕ್ಷ ಡಾಲರ್ ತಗೊಂಡು ಈಗ ಭ್ರಷ್ಟಾಚಾರದ ಪಾಠ ಮಾಡುತ್ತಿದ್ದಾರೆ. ಇನ್ನೊಂದು ವಿಪರ‍್ಯಾಸ ನೋಡಿ. ಕನಕಪುರ ರಸ್ತೆಯಲ್ಲಿ ರೈತರ ಜಮೀನು ಕಿತ್ತುಕೊಂಡು ತಾನೇ ದೊಡ್ಡ ಭ್ರಷ್ಟ ಆಗಿ ರೈತರಿಂದ ಒದೆತ ತಿನ್ನದೇ ಬಚಾವಾಗಿರುವ ರವಿಶಂಕರ್ ಗುರೂಜಿಯಂಥವರಿಗೆ ಯಾವ ನೈತಿಕ ಹಕ್ಕಿದೆ? ಇಂತಹವರನ್ನು ಈ ಹೋರಾಟದಲ್ಲಿ ಬಿಟ್ಟುಕೊಂಡದ್ದು ಹೇಗೆ ಎಂಬುದೂ ಪ್ರಶ್ನಾರ್ಹ ಅಲ್ಲವೆ? ಭ್ರಷ್ಟಾಚಾರ ತೊಲಗಬೇಕು, ನಿಜ. ಆದರೆ ಭ್ರಷ್ಟಾಚಾರದ ಬಗ್ಗೆ ನಮ್ಮ ಕಲ್ಪನೆಯಾದರೂ ಏನು? ನನ್ನ ಪ್ರಕಾರ ಸಾರ್ವಜನಿಕ ಸಂಪತ್ತನ್ನು ಬಳಸಿಕೊಂಡು ಖಾಸಗಿಯವರು ಲಾಭ ಮಾಡಿಕೊಳ್ಳಲು ಅವಕಾಶ ಇರುವಾಗೆಲ್ಲಾ ಭ್ರಷ್ಟಾಚಾರ ಇದ್ದೇ ಇರುತ್ತದೆ. ಇದೇ ಅದರ ಮೂಲ. ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕ ಹಿತಕ್ಕಾಗಿಯೇ ಬಳಸಬೇಕು ಎಂಬ ಆರ್ಥಿಕ ನೀತಿ ಇಲ್ಲದಿರುವಾಗ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ್ಲ.

ಶಿಕ್ಷಣ ಮಾಧ್ಯಮದ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನಿಮ್ಮ ಅಭಿಪ್ರಾಯವೇನು?

ಇಂಗ್ಲಿಷ್ ಓದಿದೋರೆಲ್ಲಾ ಅಮೆರಿಕಕ್ಕೆ ಹೋಗ್ತಾರೆ ಎನ್ನೋ ಒಂದು ಯೂಫೋರಿಯಾ ಇದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪರಿಕಲ್ಪನೆಗಳನ್ನು ಅರ್ಥ ಮಾಡಿಸುವ ಬದಲಿಗೆ ಕಂಠಪಾಠ ಮಾಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಮಾಧ್ಯಮದ ಒಂದೇ ಕಾರಣದಿಂದಾಗಿ ಮಕ್ಕಳ ಪ್ರತಿಭೆ ಕುಂಠಿತವಾಗುತ್ತ್ತಿದೆ. ಇಂಗ್ಲಿಷ್ ಕಲಿಯುವುದರಲ್ಲೇ ಅವರ ಎಲ್ಲಾ ಶಕ್ತಿ ಉಡುಗಿ ಹೋಗುತ್ತದೆ. ಮಕ್ಕಳ ಸೃಜನಶೀಲ ಸಾಮರ್ಥ್ಯವೇ ಮಸುಕಾಗುತ್ತ್ತಿದೆ. ಕೆಲ ಕಾನ್ವೆಂಟ್‌ಗಳಲ್ಲಿ ಎಂತಹಾ ದುಸ್ಥಿತಿ ಇದೆ ಅಂದರೆ ಜೋಕುಗಳನ್ನೂ ಗಟ್ಟು ಮಾಡಿಸುತ್ತಾರೆ! ನಮ್ಮಲ್ಲಿ ಹೆಚ್ಚು ವಿಜ್ಞಾನಿಗಳು ಯಾಕೆ ಬರುತ್ತಿಲ್ಲ ಹೇಳಿ?ಶಿಕ್ಷಣದಲ್ಲಿ ಎಲ್ಲಾ ವರ್ಗಗಳಿಗೂ ಪ್ರವೇಶ ಯಾವಾಗ ಸಾಧ್ಯವಾಯಿತೋ ಆಗಿನಿಂದ ಸಮಾಜದ ಮೇಲ್‌ವರ್ಗಗಳು ಶಿಕ್ಷಣದ ಖಾಸಗೀಕರಣಕ್ಕೆ ಒತ್ತಾಸೆಯಾಗಿ ನಿಂತು ತಮ್ಮ ಮಕ್ಕಳನ್ನು ಖಾಸಗಿ ಶಾಲಾ ಕಾಲೇಜುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಂಡರು. ಶಿಕ್ಷಣ ಖಾಸಗೀಕರಣಗೊಳಿಸಿರುವುದರ ಹಿಂದೆ ಸಮಾಜದ ಮೇಲ್ಜಾತಿ ಮನಸ್ಸುಗಳು ಕೆಲಸಮಾಡಿವೆ.

ನಿಮ್ಮ ಅವಗಾಹನೆಯಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಎತ್ತ ಸಾಗುತ್ತಿದೆ?
ಪಾಶ್ಚಾತ್ಯ ದೇಶದಲ್ಲಿ ಏನೇನು ಸಾಹಿತ್ಯ ಪರಿಕಲ್ಪನೆಗಳು ಬರುತ್ತೋ ಅದು ಭಾರತದಲ್ಲಿ ಮೊತ್ತಮೊದಲು ಕನ್ನಡದಲ್ಲೇ ಬರುವುದು. ನೋಡಿ ಈಗ ’ರಾಚನಿಕೋತ್ತರ’ ಎನ್ನುತ್ತಾರೆ. ಏನು ಹಾಗೆಂದರೆ? ಯಾರದ್ದೋ ಅನುಭವವನ್ನು ತಂದು ಅದನ್ನು ಯಥಾವತ್ ಹಾಗೇ ಆಧುನಿಕೋತ್ತರ, ರಾಚನಿಕೋತ್ತರ ಎಂದೆಲ್ಲಾ ಬಡಬಡಿಸುತ್ತೇವೆ. ನಾವು ಕೋತಿಗಳು. ಕನಕದಾಸ ಸಾಹಿತ್ಯದಲ್ಲಿ ’ಪೋಸ್ಟ್ ಸ್ಟ್ರಕ್ಚರಲಿಸಂ’ ಇದೆ, ಡೆರಿಡಾನ ಮೆಥಡ್ ಇದೆ, ಡಿಕನ್ಸ್ಟ್ರಕ್ಷನ್ ಇದೆ ಎಂದೆಲ್ಲಾ ಎಲ್ಲಾ ಪಾರಿಭಾಷಿಕ ಪದಗಳನ್ನೂ ತುರುಕುತ್ತಿದ್ದೇವೆ. ಇದು ಪಂಡಿತರ ಒಂದು ಶಾಖೆ. ಎಲ್ಲರಿಗೂ ತಿಳಿಯುವಂತೆ ಬರೆಯುವ, ಸಾಮಾನ್ಯ ತುಮುಲಗಳನ್ನು ಪ್ರತಿಫಲಿಸುವ ಮತ್ತೊಂದು ಶಾಖೆ ಇದೆ. ಪಂಡಿತರ ಶಾಖೆ ದುರ್ಬಲಗೊಂಡಿದೆ ಎಂದೇ ಹೇಳಬೇಕು. ಅದು ವಿಶ್ವವಿದ್ಯಾಲಯ, ವಿಚಾರಸಂಕಿರಣ ಹಾಗೂ ಕೆಲವೇ ಸಾಹಿತ್ಯ ಪತ್ರಿಕೆಗಳಿಗೆ ಸೀಮಿತವಾಗಿದೆ. ಆದರೆ ಸಾಮಾನ್ಯರ ಸಾಹಿತ್ಯ, ಜನರ ಹತ್ತಿರಕ್ಕೆ ಹೋಗುತ್ತಿರುವ ಸಾಹಿತ್ಯ ಇಂದು ಈ ಹಿಂದಿಗಿಂತಲೂ ಹೆಚ್ಚಾಗಿ ಬರುತ್ತಿದೆ. ಬರೆಯುವವರೂ ಸಮಾಜದ ಎಲ್ಲಾ ಸ್ತರಗಳಿಂದಲೂ ಬರುತ್ತಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ.

ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿದೆ. ಅದರ ಆಡಳಿತ ವೈಖರಿ ಬಗ್ಗೆ?

ಒಂದೇ ಮಾತಲ್ಲಿ ಹೇಳುವುದಾದರೆ ಈ ಹಿಂದೆ ಆಡಳಿತ ನಡೆಸಿದವರು ಮೂವತ್ತು ವರ್ಷದಲ್ಲಿ ಕಮಾಯಿಸಿದ್ದನ್ನು ಇವರು ಮೂರೇ ವರ್ಷದಲ್ಲಿ ಕಮಾಯಿಸಿದ್ದಾರೆ. ಕಾಂಗ್ರೆಸ್‌ನವರಿಗೆ ಸ್ವಲ್ಪ ತಾಳ್ಮೆಯಾದರೂ ಇತ್ತು. ಈ ಸಲ ಧರ್ಮಸಿಂಗ್ ತಿನ್ನಲಿ, ಮುಂದಿನ ವರ್ಷ ನಾನು ತಿನ್ನಬಹುದು ಎಂದು. ಆದರೆ ಇವರು ಹಾಗಲ್ಲ. ಮುಂದೆಂದೂ ಅವಕಾಶವೇ ಸಿಗುವುದಿಲ್ಲವೇನೋ ಎಂಬಂತೆ ಪೈಪೋಟಿಯಲ್ಲಿ ಕಚ್ಚಾಡಿಕೊಂಡು ತಿನ್ನುತ್ತಿದ್ದಾರೆ. ಸಾಮಾನ್ಯವಾಗಿ ಬೇರೆ ಬೇರೆ ಪಕ್ಷಗಳು ಸೇರಿ ಸಂಯುಕ್ತ ಸರ್ಕಾರ ರಚಿಸುತ್ತವೆ. ಆದರೆ ಬಿಜೆಪಿ ಒಂದೇ ಪಕ್ಷ ಸಂಯುಕ್ತ ಸರ್ಕಾರ ರಚಿಸಿಕೊಳ್ಳುವಂಥ ಹೀನಾಯ ಮಟ್ಟ ಮುಟ್ಟಿದೆ. ಮೌಲ್ಯಗಳಿಗೆ ಅರ್ಥವೇ ಇಲ್ಲ. ರಾಜಕೀಯ ಸಿದ್ಧಾಂತಕ್ಕೆ ಸ್ಥಾನವೇ ಇಲ್ಲ. ಆರ್‌ಎಸ್‌ಎಸ್‌ನಿಂದ ಬಂದವರೇ ಮಾಡುತ್ತಿರುವುದೇನು? ಶಿಸ್ತು ಅದೂ ಇದೂ ಎಂದು ಮಾತಾಡುವ ಆರ್‌ಎಸ್‌ಎಸ್ ಇದಕ್ಕೆ ಏನು ಮಾಡಿದೆ? ಈ ಹಿಂದೆ ಗೋಡೌನ್‌ಗಳಲ್ಲಿ ತುಂಬಿದ್ದ ೧೭ ಕೋಟಿ ರೂಪಾಯಿಗಳ ರಾಷ್ಟ್ರೋತ್ಥಾನದ ಪುಸ್ತಕಗಳನ್ನು ಶಾಲಾ ಕಾಲೇಜು ಲೈಬ್ರರಿಗಳಿಗೆ ತುಂಬಿದರು. ತಮ್ಮ ಸರ್ಕಾರ ಬಂದೊಡನೆ ಹೀಗೆ ಒಂದೇ ಪ್ರಕಾಶನದಿಂದ ೧೭ ಕೋಟಿ ವ್ಯವಹಾರ ನಡೆಸುವುದು ಯಾವ ಮೌಲ್ಯವನ್ನು ತೋರಿಸುತ್ತೆ? ನಾಡಿನ ಜನರ ವಿಶ್ವಾಸಕ್ಕೆ ಇವರು ದ್ರೋಹ ಬಗೆದಿದ್ದಾರೆ.

ನಿಮ್ಮ ಅಭಿಪ್ರಾಯದಲ್ಲಿ ಸಮಾಜವನ್ನು ಇಂದು ಕಾಡುತ್ತಿರುವ ಸಮಸ್ಯೆಗಳಲ್ಲಿ ಯಾವ ಸಮಸ್ಯೆ ಗಂಭೀರವಾದದ್ದು?
ಸಮಸ್ಯೆ ಏನು? ಯಾಕಿದೆ? ಎಂಬುದರ ಅರಿವಿಲ್ಲದಿರುವುದೇ ಈಗಿನ ದೊಡ್ಡ ಸಮಸ್ಯೆ ಎಂದು ನನ್ನ ಭಾವನೆ. ಜನರ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಬೇಕಾದ ಸಲಕರಣೆಗಳನ್ನು ಜನರಿಗೆ ತಲುಪಿಸದಿರುವುದೇ ಇಂದು ಮುಖ್ಯವಾದ ಸಮಸ್ಯೆಯಾಗಿದೆ.
ಪರಿಸರ ಹೋರಾಟದ ಮಹಾತಾಯಿ

ಪರಿಸರ ಹೋರಾಟದ ಮಹಾತಾಯಿಅವರು ತನ್ನ ಪರಿಸರ ಚಳವಳಿಯ ಆರಂಭದ ದಿನಗಳಲ್ಲಿ ಗಿಡಗಳನ್ನು ನೆಡುವುದಕ್ಕಾಗಿ ಮಹಿಳೆಯರಿಗೆ ಕೆಲವು ಶಿಲಿಂಗ್ (ಹಣ)ಗಳನ್ನು ಕೊಟ್ಟರು. ಅಂತಿಮವಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಮೊದಲ ಆಫ್ರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರೇ ಕೆನ್ಯದ ಪರಿಸರವಾದಿ ವಂಗರಿ ಮಥಾಯ್. ಅವರು ಇತ್ತೀಚೆಗೆ ಕ್ಯಾನ್ಸರ್‌ನಿಂದಾಗಿ ಮೃತಪಟ್ಟರು. ಅವರಿಗೆ 71 ವರ್ಷ ಪ್ರಾಯವಾಗಿತ್ತು.ಆಫ್ರಿಕ ಖಂಡದ ಅತ್ಯಂತ ಪ್ರಸಿದ್ಧ ಹಾಗೂ ವ್ಯಾಪಕ ಗೌರವಕ್ಕೆ ಪಾತ್ರರಾದ ಮಹಿಳೆಯರ ಪೈಕಿ ಒಬ್ಬರಾಗಿರುವ ಮಥಾಯ್ ಹಲವು ಉಪಾಧಿಗಳನ್ನು ಗಳಿಸಿದ್ದಾರೆ- ಪರಿಸರವಾದಿ, ಮಹಿಳಾವಾದಿ, ರಾಜಕಾರಣಿ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ, ಮಾನವಹಕ್ಕುಗಳ ಕಾರ್ಯಕರ್ತೆ ಹಾಗೂ ಪ್ರತಿಭಟನಗಾರ್ತಿ... ಹೀಗೆ.

ಅವರು ತಾನೆ ಸ್ಥಾಪಿಸಿದ ‘ಗ್ರೀನ್ ಬೆಲ್ಟ್ ಚಳವಳಿ’ಯ ಮುಖ್ಯಸ್ಥೆಯಾಗಿದ್ದರು.ವಿವಿಧ ದೇಶಗಳ ಮುಖ್ಯಸ್ಥರೊಂದಿಗೆ ವ್ಯವಹರಿಸುವಾಗ ಅವರು ಯಾವ ರೀತಿ ಇರುತ್ತಿದ್ದರೋ ನೈರೋಬಿ ಕೊಳಚೆಗೇರಿಯ ಬೀದಿಗಳಲ್ಲಿ ಅಥವಾ ಮಧ್ಯ ಕೆನ್ಯದ ಕೆಸರಿನಿಂದಾವೃತ ಬೆಟ್ಟದ ತಪ್ಪಲುಗಳಲ್ಲೂ ಅದೇ ರೀತಿಯ ಸಮಾಧಾನದಿಂದ ಇರುತ್ತಿದ್ದರು. 2004ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಸಹ್ಯ ಬೆಳವಣಿಗೆ, ಪ್ರಜಾಪ್ರಭುತ್ವ ಮತ್ತು ಶಾಂತಿಗೆ ಅವರು ನೀಡಿದ ದೇಣಿಗೆಗಳನ್ನು ನೊಬೆಲ್ ಆಯ್ಕೆ ಸಮಿತಿಯು ಗಣನೆಗೆ ತೆಗೆದುಕೊಂಡಿತ್ತು. ಅದು ಕೆನ್ಯ ಮತ್ತು ಒಟ್ಟಾರೆ ಆಫ್ರಿಕದ ಜನರ ಹೆಮ್ಮೆಯ ಕ್ಷಣವಾಗಿತ್ತು.

ಮಾತಾಯ್ ವಿಶ್ವಾದ್ಯಂತ ಪ್ರವಾಸ ಮಾಡಿ ಪರಿಸರ ಹಾನಿ ಹಾಗೂ ಬಡತನದ ವಿರುದ್ಧ ಭಾಷಣ ಮಾಡಿದರು. ಪರಿಸರ ಹಾನಿ ಮತ್ತು ಬಡತನದ ಮಧ್ಯೆ ನೇರ ಸಂಬಂಧವಿದೆ ಎಂದು ಅವರು ವಾದಿಸಿದರು. ಆದರೆ, ತನ್ನ ದೇಶ ಕೆನ್ಯವನ್ನು ಮಾತ್ರ ಮರೆಯಲಿಲ್ಲ. ಅವರು ಹಲವು ವರ್ಷಗಳ ಕಾಲ ಸಂಸದರಾಗಿ ಹಾಗೂ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿ ದರು. 2008ರಲ್ಲಿ ಸರಕಾರದಿಂದ ಹೊರ ದಬ್ಬಲ್ಪಟ್ಟರು. ಆಳವಾಗಿ ಬೇರೂರಿದ್ದ ಕೆನ್ಯದ ಆಳುವ ವರ್ಗದ ದೌರ್ಜನ್ಯಗಳ ವಿರುದ್ಧ 2008ರಲ್ಲಿ ಪ್ರತಿಭಟನೆ ನಡೆಸಿದ ವೇಳೆ ಅವರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದರು.‘‘ವಂಗರಿ ಮಥಾಯ್ ಸತ್ಯವನ್ನು ಪರಿಣಾಮಕಾರಿಯಾಗಿ ಹೇಳುತ್ತಿದ್ದರು’’ ಎಂದು ಕೆನ್ಯದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಜಾನ್ ಗಿತಾಂಗೊ ಹೇಳಿದರು. ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ತಪ್ಪಿಗಾಗಿ ಗಿತಾಂಗೊ ಹಲವು ವರ್ಷಗಳ ಕಾಲ ದೇಶಭ್ರಷ್ಟರಾಗಿ ಜೀವಿಸಿದ್ದರು.

‘‘ಪರಿಸರ, ರಾಜಕೀಯ ಸೇರಿದಂತೆ ಏನೇ ಮಾಡಿದರೂ ಅದರಲ್ಲಿ ಅವರು ತನ್ನ ಛಾಪು ಮೂಡಿಸುತ್ತಿದ್ದರು’’ ಎಂದೂ ಗಿತಾಂಗೊ ಮಾತಾಯ್ ವಂಗರಿ ಮುಟ ಮಥಾಯ್ 1940ರಲ್ಲಿ ವೌಂಟ್ ಕೆನ್ಯದ ತಪ್ಪಲಲ್ಲಿರುವ ಮಧ್ಯಮ ಗಾತ್ರದ ಪಟ್ಟಣ ನ್ಯೇರಿಯಲ್ಲಿ ಜನಿಸಿದರು.ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರಿಗೆ ಅಮೆರಿಕದ ಕನ್ಸಾಸ್‌ನ ಅಚಿಸನ್ ನಲ್ಲಿರುವ ವೌಂಟ್ ಸೈಂಟ್ ಸ್ಕೊಲಾಸ್ಟಿಕ ಕಾಲೇಜ್‌ನಲ್ಲಿ ಜೀವಶಾಸ್ತ್ರ ಅಧ್ಯಯನ ನಡೆಸಲು ವಿದ್ಯಾರ್ಥಿವೇತನ ಸಿಕ್ಕಿತು.

ಅವರು ಪ್ರಾಣಿಗಳ ದೇಹರಚನೆ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಅವರು ಈ ಪದವಿಯನ್ನು ಪಡೆದ ಪೂರ್ವ ಅಥವಾ ಮಧ್ಯ ಆಫ್ರಿಕದ ಮೊದಲ ಮಹಿಳೆಯಾದರು.ಅವರು 1977ರಲ್ಲಿ ಗ್ರೀನ್ ಬೆಲ್ಟ್ ಚಳವಳಿಯನ್ನು ಹುಟ್ಟುಹಾಕಿದರು. ಈ ಚಳವಳಿಯ ಮೂಲಕ ಭೂ ಸವಕಳಿ ತಡೆಯಲು ಹಾಗೂ ಇಂಧನ (ಕಟ್ಟಿಗೆ) ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಕೆನ್ಯಾದ್ಯಂತ ಮರಗಳನ್ನು ನೆಡಲಾಯಿತು.

1980ರ ದಶಕದಲ್ಲಿ ಕೆನ್ಯ ಸರಕಾರ ಗ್ರೀನ್ ಬೆಲ್ಟ್ ಚಳವಳಿಯನ್ನು ‘‘ಬುಡಮೇಲು’’ ಕೃತ್ಯ ಎಂಬುದಾಗಿ ಬಣ್ಣಿಸಿತು. ಉದ್ಯಾನವನವೊಂದರಲ್ಲಿ ಬೃಹತ್ ಗಗನಚುಂಬಿ ಕಟ್ಟಡವನ್ನು ನಿರ್ಮಿಸುವ ಸರಕಾರದ ಯೋಜನೆಯ ವಿರುದ್ಧ ಮಥಾಯ್ ಜನಾಂದೋಲನ ಸಂಘಟಿಸಿದರು. ಇದು ಆಗ ಅಧಿಕಾರದಲ್ಲಿದ್ದ ಅಧ್ಯಕ್ಷ ಡೇನಿಯಲ್ ಅರಪ್ ಮೊಯಿಯ ಕೆಂಗಣ್ಣಿಗೆ ಪಾತ್ರವಾಯಿತು. ಈ ಗಗನಚುಂಬಿ ಪ್ರಸ್ತಾಪವನ್ನು ಬಳಿಕ ಹಿಂದಕ್ಕೆ ಪಡೆದುಕೊಳ್ಳಲಾಯಿತು. ಆದರೆ, ಕೆಲವೇ ಸಮಯದಲ್ಲಿ ನಡೆದ ಇನ್ನೊಂದು ಪ್ರತಿಭಟನೆಯ ವೇಳೆ ಪೊಲೀಸರು ಮಥಾಯ್‌ಗೆ ಮೂರ್ಛೆ ಬರುವಂತೆ ಹೊಡೆದರು.

ಅವರ ಮನೆಯ ವಾತಾವರಣವೂ ಚೆನ್ನಾಗಿರಲಿಲ್ಲ. ಭಾರೀ ಗಟ್ಟಿ ಮನಸ್ಸಿನ ಮಹಿಳೆ ಎಂದು ಹೇಳಿ ಮಥಾಯ್‌ಗೆ ಅವರ ಗಂಡ ವಿಚ್ಛೇದನ ನೀಡಿದ್ದರು. ನ್ಯಾಯಾಲಯದಲ್ಲಿ ತನ್ನ ವಿಚ್ಛೇದನ ಪ್ರಕರಣದಲ್ಲಿ ಸೋತ ಬಳಿ ನ್ಯಾಯಾಧೀಶರನ್ನು ನಿಂದಿಸಿದಾಗ ಅವರನ್ನು ಜೈಲಿಗೆ ತಳ್ಳಲಾಯಿತು. ಆದಾಗ್ಯೂ, ಅವರು ಬದುಕಿನುದ್ದಕ್ಕೂ ಹಲವಾರು ಗೌರವ ಪದವಿಗಳು ಹಾಗೂ ಪ್ರಶಸ್ತಿಗಳನ್ನು ಗಳಿಸಿದ್ದರು.ಪ್ರಜಾಪ್ರಭುತ್ವ, ಮಾನವಹಕ್ಕುಗಳು ಮತ್ತು ಮಹಿಳೆಯರ ಹಕ್ಕುಗಳು ಸೇರಿದಂತೆ ಸಹ್ಯ ಬೆಳವಣಿಗೆಯ ಪರಿಪೂರ್ಣ ಕಲ್ಪನೆಯನ್ನು ಅವರು ಹೊಂದಿದ್ದರು ಎಂದು ನೊಬೆಲ್ ಶಾಂತಿ ಸಮಿತಿ ಬಣ್ಣಿಸಿದೆ.

-ರಾನಾ

ದೇವದಾಸಿಯರಿಗೆ ಬದುಕು ನೀಡುವ ಗ್ರೇಸ್

ದೇವದಾಸಿಯರಿಗೆ ಬದುಕು ನೀಡುವ ಗ್ರೇಸ್

ಸಂಪ್ರದಾಯ, ನಂಬಿಕೆಯ ಹೆಸರಿನಲ್ಲಿ ಬಡ ದಲಿತ ಹೆಣ್ಣು ಮಕ್ಕಳನ್ನು ಬಲವಂತವಾಗಿ ದೇವದಾಸಿಯರನ್ನಾಗಿ ಮಾಡುವ ಕ್ರೂರ ಹಾಗೂ ಅನಾಗರಿಕ ಪದ್ಧತಿ ಈಗಲೂ ನಮ್ಮ ದೇಶದಲ್ಲಿ ಜೀವಂತವಾಗಿದೆ. ಆಂಧ್ರದ ಮೆಹ ಬೂಬ್‌ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಗ್ರಾಮದೇವತೆ ಯಲ್ಲಮ್ಮಳ ಸೇವೆಗೆಂದು ಈ ದಲಿತ ಹೆಣ್ಣು ಮಕ್ಕಳನ್ನು ದೇವದಾಸಿಯರ್ನಾಗಿ ಮಾಡುವ ಪಿಡುಗು ಅವ್ಯಾಹತವಾಗಿ ಮುಂದು ವರಿದಿದೆ. ಗ್ರಾಮದ ಪ್ರಭಾವಿ ವ್ಯಕ್ತಿಗಳ ಕಾಮ ಪಿಪಾಸೆಗೆ ಈ ಅಮಾಯಕ ಬಾಲಕಿಯರು ಬಲಿಯಾಗುತ್ತಿದ್ದಾರೆ. ಎಲ್ಲರಂತೆ ಆಟವಾಡಿ, ವಿದ್ಯಾಭ್ಯಾಸ ಕಲಿತು ಉತ್ತಮ ಬಾಳನ್ನು ಬದುಕಬೇಕಾದ ಈ ಮುಗ್ಧೆಯರ ಬದುಕು ಬಾಲ್ಯದಲ್ಲೇ ಕಮರಿಹೋಗುತ್ತಿದೆ. ಇದೀಗ ಈ ದುಷ್ಟ ಪಿಡುಗಿನ ವಿರುದ್ಧ ಗ್ರೇಸ್ ನಿರ್ಮಲಾ ಎಂಬ ದಿಟ್ಟ ಮಹಿಳೆ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ದೇವದಾಸಿ ಪದ್ಧತಿಗೆ ದೂಡಲ್ಪಟ್ಟ ಹೆಣ್ಣು ಮಕ್ಕಳನ್ನು ರಕ್ಷಿಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ನಿರ್ಮಲಾ ಈ ನತದೃಷ್ಟೆಯರು, ಮತ್ತವರ ಮಕ್ಕಳಿಗಾಗಿ ಅಭಯಾಶ್ರಮವನ್ನು ಕೂಡಾ ನಡೆಸುತ್ತಿದ್ದಾರೆ.

ಗ್ರೇಸ್ ನಿರ್ಮಲಾ ಅವರ ಆಶ್ರಮದಲ್ಲಿ ಹೊಸ ಬಾಳನ್ನು ಕಾಣುತ್ತಿರುವ ಈ ಬಾಲಕಿಯರ ಕಥೆಯು ಕರುಣಾಜನಕವಾದುದು. ಅಂಜಲಿ ಎಂಬಾಕೆಗೆ ಕೇವಲ 10 ವರ್ಷವಾಗಿರುವಾಗ ಆಕೆಯ ಹೆತ್ತವರು ಅವಳನ್ನು ದೇವದಾಸಿಯ ನ್ನಾಗಿ ಮಾಡಿದರು. ದೇವದಾಸಿ ಪದ್ಧತಿ ಯೆಂಬುದು ಎಷ್ಟು ಹೀನಾಯವಾದುದೆಂದರೆ, ಆ ಸಂಪ್ರದಾಯದ ಪ್ರಕಾರ ಮೊದಲಿಗೆ ದೇವದಾಸಿಯಾಗುವ ಬಾಲಕಿಯನ್ನು ಗ್ರಾಮದ ದೇವತೆಗೆ ಮದುವೆ ಮಾಡಿಕೊಡಲಾಗುತ್ತದೆ. ಗ್ರಾಮದ ಸರಪಂಚನು ಗ್ರಾಮದೇವತೆಯ ಪ್ರತಿನಿಧಿಯೆನಿಸಿಕೊಂಡು ಆಕೆಯ ಕೊರಳಿಗೆ ತಾಳಿಕಟ್ಟುತ್ತಾನೆ. ಒಮ್ಮೆ ಈ ವಿವಾಹ ನಡೆದ ಬಳಿಕ ಆಕೆ ಗ್ರಾಮದ ಮುಖಂಡರಿಂದ ಲೈಂಗಿಕ ಶೋಷಣೆಗೊಳಗಾಗುತ್ತಾಳೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 50 ಸಾವಿರ ದೇವದಾಸಿಯರಿದ್ದಾರೆ. ಅವರಲ್ಲಿ ಹಲವರು ಆಂಧ್ರಪ್ರದೇಶದವರು. ಈ ದೇವದಾಸಿಯರು ವೇಶ್ಯಾವೃತ್ತಿಯಿಂದಲೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಮುದುಕಿಯರಾದ ಬಳಿಕ ಭಿಕ್ಷಾಟನೆ ಬೇಡುತ್ತಾ ಜೀವನ ಕಳೆಯು ತ್ತಾರೆ. ಆದರೆ ಸುದೈವವಶಾತ್ ನಿರ್ಮಲಾ ಅವರ ನೆರವಿನಿಂದ ಅಂಜಲಿ ಈ ದುಷ್ಟ ಪಿಡುಗಿ ನಿಂದ ಪಾರಾಗುವಲ್ಲಿ ಯಶಸ್ವಿಯಾದಳು.‘‘ಗ್ರೇಸ್ ಮೇಡಂ ಮಧ್ಯಪ್ರವೇಶಿಸಿ ನನ್ನನ್ನು ರಕ್ಷಿಸಿದರು. ನನ್ನನ್ನವರು ಈ ಅಭಯಾಶ್ರಮಕ್ಕೆ ಕರೆತಂದರು. ಆಕೆಯೇ ನನ್ನ ರಕ್ಷಕಿ’’ ಎನ್ನುವ ಅಂಜಲಿ ಭಾವುಕಳಾಗಿ ಆ ಕರಾಳ ದಿನಗಳನ್ನು ಸ್ಮರಿಸುತ್ತಾಳೆ.

ಈವರೆಗೆ ಗ್ರೇಸ್ ನಿರ್ಮಲಾ, 34ಕ್ಕೂ ಅಧಿಕ ದೇವದಾಸಿಯರನ್ನು ರಕ್ಷಿಸಿದ್ದಾರೆ. ಹೈದರಾ ಬಾದ್‌ನಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭದಲ್ಲಿ ಗ್ರೇಸ್, ದೇವದಾಸಿಯರ ದಾರುಣ ಬದುಕಿನ ಬಗ್ಗೆ ಹಲವಾರು ಲೇಖನಗಳನ್ನು ಓದಿ ಮರು ಗಿದ್ದರು. ಈ ದುಷ್ಟ ಪಿಡುಗಿನ ವಿರುದ್ಧ ಹೋರಾ ಡಲು ತನ್ನ ಕೈಲಾದುದನ್ನು ಮಾಡಬೇಕೆಂದು ಅವರು ಪಣತೊಟ್ಟರು.ಮೊದಲಿಗೆ ಗ್ರೇಸ್ ಹಲವಾರು ರಾಜಕಾರಣಿಗಳು, ಅರ್ಚಕರು ಮತ್ತು ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿ ಸಿದರು. ಆದರೆ ಅವರೆಲ್ಲರೂ ‘ಅದೊಂದು ಧಾರ್ಮಿಕ ನಂಬುಗೆಯಾಗಿದ್ದು, ಅದನ್ನು ಪ್ರಶ್ನಿಸುವ ಹಾಗಿಲ್ಲ’ವೆಂದೇ ಹೇಳಿಕೊಂಡರು. ಆ ಬಳಿಕ ಗ್ರೇಸ್, ಈ ಪಿಡುಗಿನ ವಿರುದ್ಧ ಮಹಿಳೆ ಯರಲ್ಲೇ ಜಾಗೃತಿ ಮೂಡಿಸುವ ಅಗತ್ಯವನ್ನು ಮನಗಂಡರು.

ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಅವರು ನೇರವಾಗಿ ಮೆಹಬೂಬ್ ನಗರದ ಈ ಹಳ್ಳಿಗೆ ನಡೆದರು. ದಲಿತರ ಮನೆಮನೆಗೆ ತೆರಳಿ, ದೇವದಾಸಿ ಪಿಡುಗಿನ ವಿರುದ್ಧ ಅಭಿಯಾನವನ್ನೇ ಆರಂಭಿಸಿದರು. ಆಗ ಗ್ರಾಮದ ಸ್ಥಾಪಿತ ಹಿತಾ ಸಕ್ತಿಗಳ ಕೆಂಗಣ್ಣು ಈಕೆಯ ಮೇಲೆ ಬಿದ್ದಿತು. ಗ್ರೇಸ್ ನಿರ್ಮಲಾ ಗ್ರಾಮಸ್ಥರ ಮನಸ್ಸು ಕೆಡಿಸು ತ್ತಿದ್ದಾಳೆ ಮತ್ತು ಹಳ್ಳಿಗೆ ಗ್ರಾಮದೇವತೆಯ ಶಾಪ ತಗಲುವಂತೆ ಮಾಡುತ್ತಿದ್ದಾಳೆಂದು ಕೆಲವು ಪ್ರಭಾವಿಗಳು ಪ್ರಚಾರ ಮಾಡತೊಡಗಿದರು. ಮಾತ್ರವಲ್ಲ, ಆಕೆಗೆ ಜೀವಬೆದರಿಕೆ ಕೂಡಾ ಒಡ್ಡಿದರು. ಅದ್ಯಾವುದಕ್ಕೂ ಬಗ್ಗದ ನಿರ್ಮಲಾ ದೇವದಾಸಿಯರು, ಮತ್ತವರ ಮಕ್ಕಳಿಗಾಗಿ ‘ಅಶ್ರಯ’ ಎಂಬ ಹೆಸರಿನ ಅಭಯಾಶ್ರಮವನ್ನು ಸ್ಥಾಪಿಸಿದರು.

ಇದೀಗ ಗ್ರೇಸ್ ಆಂಧ್ರದ ಒಂಬತ್ತು ಜಿಲ್ಲೆ ಗಳಲ್ಲಿ 30 ಕಾರ್ಯಕರ್ತರ ನೆರವಿನೊಂದಿಗೆ ದೇವದಾಸಿಯರ ಪುನರ್ವಸತಿ ಹಾಗೂ ರಕ್ಷಣಾ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಈ ಘೋರ ಪಿಡುಗಿನ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಈ ಪ್ರಾಂತ್ಯದಲ್ಲಿ ಪ್ರಪ್ರಥಮ ಬಾರಿಗೆ ಕಾನೂನು ಬದ್ಧವಾಗಿ ದೇವದಾಸಿಯರಿಗೆ ಸಾಮೂಹಿಕ ವಿವಾಹವನ್ನು ಕೂಡಾ ಅವರು ಏರ್ಪಡಿಸಿದ್ದರು.

ಆಂಧ್ರ ಸರಕಾರವು 1988ರಲ್ಲಿಯೇ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆಯಾದರೂ, ಅದೊಂದು ಹಲ್ಲುಗುರು ಗಳಿಲ್ಲದ ಕಾನೂನೆಂದು ನಿರ್ಮಲಾ ಹೇಳುತ್ತಾರೆ.ದೇವದಾಸಿಯರ ಪುನರ್ವಸತಿಗಾಗಿ ಸರಕಾರ ಘೋಷಿಸಿರುವ ಕಾರ್ಯಕ್ರಮಗಳನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸಿದಲ್ಲಿ, ಹಲವಾರು ಬಾಲಕಿಯರ ರಕ್ಷಣೆಯಾಗಬಹುದು. ದೇವದಾಸಿ ವಿರೋಧಿ ಕಾನೂನು ವಿಫಲಗೊಂಡಲ್ಲಿ, ಅದಕ್ಕೆ ಆಯಾಯ ಗ್ರಾಮ ಪಂಚಾಯತ್, ರಾಜಕೀಯ ಪಕ್ಷಗಳು, ಗ್ರಾಮದ ಸರಪಂಚರನ್ನು ಹೊಣೆ ಮಾಡಬೇಕು ಎಂದು ನಿರ್ಮಲಾ ಹೇಳುತ್ತಾರೆ. ಗ್ರೇಸ್ ಅವರ ಈ ಮಾನವೀಯ ಸಾಧನೆಗೆ, ‘ಸಿಎನ್‌ಎನ್-ಐಬಿಎನ್’ ರಿಯಲ್ ಹೀರೋ ಪ್ರಶಸ್ತಿ ನೀಡಿ ಗೌರವಿಸಿದೆ.

-ರಾ.ನಾ

ಕಂಬಾರರ ಲೋಕಸೃಷ್ಟಿ

-ಎಚ್.ಎಸ್.ವೆಂಕಟೇಶಮೂರ್ತಿ

ವಾಸ್ತವ ಜಗತ್ತನ್ನು ನಮ್ಮ ಜಾನಪದ ಮತ್ತು ಮಾರ್ಗ ಕಾವ್ಯ ಲೋಕದ ಕಲ್ಪನಾವೈದೃಶ್ಯಕ್ಕೆ ಪ್ರತಿನಿಧಾನಮಾಡಿ ನಿಲ್ಲಿಸುವ ಯತ್ನ ಆಧುನಿಕ ಸಂದರ್ಭದಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಬಂದಿದೆ. ಆಧುನಿಕ ಕಥನ ಜಗತ್ತಲ್ಲಂತೂ ಆ ಪ್ರಯತ್ನ ನಿರಂತರವಾಗಿ ನಡೆದಿದೆ. ನಮ್ಮ ಕಾದಂಬರೀಯುಗದ ಆರಂಭಿಕ ಕಾಲದಲ್ಲಿ ಸೃಷ್ಟಿಯಾಗಿದ್ದ ಮಿಥಿಕ ಜಗತ್ತು ನಿಧಾನವಾಗಿ ಮಸಳಿಸಿಹೋಗಿ ಬಹು ದೊಡ್ಡ ಕಥಕವೃತ್ತಿಯೊಂದನ್ನು ನಾವು ಕಳೆದುಕೊಂಡು ಪತಿತರಾಗಿದ್ದೇವೆ. ರಾಮಾಯಣ, ಮಹಾಭಾರತ, ಜೈನಪುರಾಣಗಳು, ಬೌದ್ಧಜಾತಕ ಕಥೆಗಳು, ದ್ರವಿಡಮೂಲದ ಜಾನಪದ ಕಥಾವೃತ್ತಿಗಳು, ಇವೆಲ್ಲಕ್ಕೂ ಹೊಯ್ಕಯ್ ಆದ ಅತ್ಯದ್ಭುತ ಜಾನಪದ ಕಥಾಲೋಕ-ಈ ಎಲ್ಲವೂ ನಮ್ಮ ಕೈಜಾರಿಹೋಗಿವೆ. ಕಳೆದದ್ದು ಕಥೆ ಮಾತ್ರವಲ್ಲ; ಅತ್ಯಂತ ಸಮೃದ್ಧವೂ ಅರ್ಥ ನಿಬಿಡವೂ ಆಗಿದ್ದ ಒಂದು ಭಾಷಾ ಪರಂಪರೆ. ಆ ನಷ್ಟದ ಅರಿವೇ ನಮಗಿದ್ದಂತಿಲ್ಲ. ಈ ಭಾಷೆಯ ಮೂಲಕ ಹೊಸದನ್ನು ಕಟ್ಟುವುದು ಹಾಗಿರಲಿ, ಈಗಾಗಲೇ ಕಟ್ಟಲಾಗಿರುವ ಶಿಷ್ಟ, ಜಾನಪದೀಯ ಮಿಥಿಕ ಜಗತ್ತನ್ನು ಈವತ್ತಿಗೆ ಅನುವಾದಿಸುವ ಪೇಲವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಾ ಇದೆ. ಮಿತ್ತುಗಳನ್ನು ಒಡೆಯುವ ವೃತ್ತಿಯೇ ಈಗ ಕಥಕಜಗತ್ತಿನ ಒಂದು ಉದ್ಯಮವಾಗಿ ಬಿಟ್ಟಿದೆ. ಈ ಶಿಥಿಲೀಕರಣಕ್ಕೆ ಎದುರುಹಾಕಿ ನಿಂತ ಒಬ್ಬ ಕವಿಯಾಗಿ ನನಗೆ ಚಂದ್ರಶೇಖರ ಕಂಬಾರರು ಮುಖ್ಯರಾಗಿದ್ದಾರೆ. ಅವರ ಶಿವಾಪುರ ಏನನ್ನೂ ಒಳಗೊಳ್ಳಬಲ್ಲ ಪ್ರತಿವಿಶ್ವವೊಂದರ ಕೀಲುಕಂಬಿಯಾಗಿದೆ. ಆ ಪ್ರಾಂತದಲ್ಲಿ ಆಳುವ, ಆಳಿಸಿಕೊಳ್ಳುವ, ಪ್ರತಿಭಟಿಸುವವ, ಹೊಸದೊಂದನ್ನು ಕಟ್ಟಲು ಹಪಹಪಿಸುವ-ಅನಂತ ಕ್ರಿಯಾಮುಖಗಳಿವೆ. ಸಮುದಾಯ ಪ್ರಜ್ಞೆ ಹುಟ್ಟಿಸಿದ ಅನೇಕ ಬಗೆಯ ಆರ್ಕಿಟೈಪುಗಳು ಮತ್ತೆ ಮತ್ತೆ ಇಲ್ಲಿ ಪುನಾರಚನೆಗೆ ಒಳಗಾಗುತ್ತವೆ. ಕಂಬಾರರ ಜಾನಪದ ವಸ್ತುಜಗತ್ತು ಅತ್ಯಂತ ಸಮೃದ್ಧವಾಗಿದೆ. ಅದರ ಮಹತ್ವ ಕಥೆಯಲ್ಲಿಲ್ಲ; ಕಥನದ ಅನಂತ ಸಾಧ್ಯತೆಗಳಲ್ಲಿ ಇದೆ. ಹೇಳತೇನ ಕೇಳ, ಋಶ್ಯಶೃಂಗ, ಕುದುರೀಸಿದ್ಧ, ನವಿಲೇ ನವಿಲೇ, ಜೋಕುಮಾರಸ್ವಾಮಿ, ಚಕೋರಿ, ಶಿಖರಸೂರ್ಯ, ಶಿವರಾತ್ರಿ-ಹೀಗೆ ಸದೃಢವಾದ ಅರ್ಥಪ್ರಪಂಚದಲ್ಲಿ ಕಂಬಾರರ ಸೃಷ್ಟಿಶೀಲತೆ ಬಹು ಹಿಂದಿನಿಂದಲೂ ನಿರಂತರವಾಗಿ ವ್ಯವಹರಿಸುತ್ತಾ ಬಂದಿದೆ.

ಕವಿತೆಯಾಗಲಿ, ನಾಟಕವಾಗಲಿ, ಕಾದಂಬರಿಯಾಗಲಿ ಇದು ಮೂಲಭೂತವಾಗಿ ನಿಗೂಢವಾದ ಬೆಳ್ದಿಂಗಳಿನ ಮತ್ತು ಕಲಸಿಹೋಗಿರುವ ಅರ್ಥಪುಷ್ಟಿಯ ಮಾಯಾಲೋಕವಾಗಿದೆ. ಸಮಕಾಲೀನವೂ ಪ್ರಸ್ತುತವೂ ಎನ್ನಿಸಬಹುದಾದ ಅನೇಕ ಅರ್ಥಗಳು ಈ ಮಾಯಾಲೋಕದಲ್ಲಿ ಮಿಂಚಿಮರೆಯಾಗಿ ಹೋಗುತ್ತವೆ. ಅವು ಅದೃಷ್ಟವಶಾತ್ ಸದ್ಯದ ಗೂಟಕ್ಕೆ ಕಟ್ಟಿಬೀಳುವುದಿಲ್ಲ ಎನ್ನುವುದೇ ಅಚ್ಚರಿಯ ಮಾತಾಗಿದೆ. ಹೇಳತೇನ ಕೇಳ ಎಂಬ ಕಂಬಾರರ ಆರಂಭಿಕ ಕಥನವನ್ನೇ ನೋಡಿರಿ. ಶಿವಾಪುರದ ಗೌಡ ತೀರಿಹೋಗಿ ಅವನ ವೇಷದಲ್ಲಿ ಒಬ್ಬ ರಾಕ್ಷಸ ಗೌಡತಿಯನ್ನು ಫಲವತಿಯನ್ನಾಗಿ ಮಾಡುತ್ತಾನೆ. ಅವಳ ಬಸುರಿನ ಬಯಕೆ ತೀರಿಸಲು ಹಿರಿಯ ಮಗ ಬಾಳಗೊಂಡ ಪ್ರಾಣವನ್ನೇ ಫಣವಾಗಿಟ್ಟು ಇನ್ನಿಲ್ಲದ ಸಾಹಸ ಮಾಡಬೇಕಾಗುತ್ತದೆ. ಈ ಪ್ರಯತ್ನದಲ್ಲಿರುವಾಗ ಅವನಿಗೆ ತಂದೆಯ ಮರಣ ರಹಸ್ಯ ತಿಳಿಯುತ್ತದೆ. ಆಸ್ತಿ ತನ್ನದು; ಅದರ ನಿರ್ವಾಹಕ ಪರಕೀಯ-ಇದು ರಾಮಗೊಂಡ ಎದುರಿಸುವ ವಿಷಮ ಸಂದರ್ಭ. ಗೌಡತಿ ಹಡೆಯುವ ಬಾಳಗೊಂಡ ಮುಂದೆ ಋಶ್ಯಶೃಂಗದ ನಾಯಕನಾಗಿ ಕಾಣಿಸಿಕೊಳ್ಳುತ್ತಾನೆ. ಅವನು ದ್ವೇಶಿಸುವುದು ತಾಯಿಯನ್ನ. ರಾಕ್ಷಸನ ಸಂಸರ್ಗದಿಂದ ಅಸ್ಮಿತೆಯನ್ನು ನಾಶಪಡಿಸಿಕೊಂಡಿರುವ ತಾಯಿ ಬಾಳಗೊಂಡನ ಎದೆಗುದಿಗೆ ಕಾರಣಳಾಗುತ್ತಾಳೆ. ಕಾಮ ಇಲ್ಲಿ ಅನುಭವವನ್ನು ಬೆಲೆಕಟ್ಟುವ ಸಾಮಗ್ರಿಯಾಗಿ ಬಳಕೆಗೊಳ್ಳುತ್ತದೆ. ನಿಜವಾದ ಫಲವಂತಿಕೆ ಯಾವುದು? ಜನಾಂಗೀಯ, ಅಧ್ಯಾತ್ಮಿಕ ಅರ್ಥಗಳನ್ನು ಜತೆಗೆ ಕಟ್ಟಿಕೊಂಡೇ ಈ ಫಲವಂತಿಕೆಯ ಶೋಧ ನಡೆಯುತ್ತದೆ. ನವಿಲೇ ನವಿಲೇ ಕವಿತೆಯಲ್ಲಿ ಶಿವಪುರದ ಗೌಡ ಶಿವದೇವ ನಾಯಕ. ಅವನ ಮಕ್ಕಳಿಲ್ಲದ ರಾಣಿ ಮಹಾದೇವಿ, ನೀರಿಗಾಗಿ ನದಿಗೆ ಹೋದವಳು ನವಿಲೊಂದರ ನೃತ್ಯಕ್ಕೆ ಮನಸೋತು ಅದರ ಸಾಂಕೇತಿಕ ಸಂಪರ್ಕದಿಂದ ಧಾರಾಕಾರ ಮಳೆಗೆ ಕಾರಣಳಾಗುತ್ತಾಳೆ. ಅವಳು ಮಳೆಯಲ್ಲಿ ತೊಪ್ಪನೆ ತೊಯ್ದುಕೊಂಡು ಮನೆಗೆ ಬಂದರೆ ರಾಜ ಶಿವದೇವ ನಾಯಕ ಅವಳಿಗೆ ನವಿಲುಗರಿಯಿಂದ ನೇಯ್ದ, ನವಿಲಿನ ರಕ್ತಸಿಂಪಡಿಸಿದ ಹೊಸ ಸೀರೆಯೊಂದನ್ನು ಕಾಣಿಕೆಯಾಗಿ ಕೊಡುತ್ತಾನೆ. ಮಹಾದೇವಿ ಆ ಸೀರೆಯನ್ನು ತಿರಸ್ಕರಿಸಿ ಬರೀ ಬೆತ್ತಲಲ್ಲಿ ಅರಮನೆಯನ್ನು ತ್ಯಜಿಸಿ ಕತ್ತಲಲ್ಲಿ ಕರಗಿಹೋಗುತ್ತಾಳೆ. ಮತ್ತೆ ಇದು ಇನ್ನೊಂದು ಫಲವಂತಿಕೆಯ ಕಥೆಯಾಗಿದೆ. ಅಕ್ಕಮಹಾದೇವಿಯ ಅಧ್ಯಾತ್ಮದ ಅಭೀಪ್ಸೆಯನ್ನೂ ಒಳಗೊಂಡು ಫಲವಂತಿಕೆಯ ಆಶಯವನ್ನು ಒಂದು ರಿಚುವಲ್ಲಿನ ತೀವ್ರತೆಯಲ್ಲಿ ಇಲ್ಲಿ ಕಥಿಸಲಾಗಿದೆ. ಸುಲಭದ ತರ್ಕಕ್ಕೆ ಯಾವುದೂ ಸಿಕ್ಕುವಂತಿಲ್ಲ. ಹಾಗಾಗಿಯೇ ಇದೊಂದು ಅರ್ಥಸಾಂದ್ರವಾದ ಕಲಸುಮೇಲೋಗರದ ಪ್ರಪಂಚವಾಗಿದೆ. ಸಾಮಾಜಿಕ ನೆಲೆಯಲ್ಲಿ ಯಾವುದು ತಥ್ಯ, ಯಾವುದು ಅಲ್ಲ ಎಂಬುದು ಸುಲಭಕ್ಕೆ ತೀರ್ಮಾನಗೊಳ್ಳುವಂಥದಲ್ಲ. ಲೌಕಿಕ, ಅಲೌಕಿಕ, ಸಾಮಾಜಿಕ, ಅಸಮಾಜಿಕ, ನೈತಿಕ, ಅನೈತಿಕ ಸಂಗತಿಗಳು ಹೀಗೆ ತೊಡಕು ಹಾಕಿಕೊಳ್ಳುವುದರಿಂದ ಬದುಕಿನ ನಿಬಿಡತ್ವವನ್ನು ಸಮಕಾಲೀನ ಸಂಘರ್ಷವನ್ನು ಸೂಚಿಸುತ್ತಲೇ ನಿರ್ಮಿಸಿಬಿಡುವುದು ಕವಿಗೆ ಸಾಧ್ಯವಾಗುತ್ತದೆ. ಕಂಬಾರರ ಬಹು ಪ್ರಸಿದ್ಧವಾದ ಜೋಕುಮಾರಸ್ವಾಮಿ ನಾಟಕವಾದರೂ ಅಷ್ಟೆ. ಕೀರ್ತಿಯವರು ಹೇಳುವಂತೆ ಜಾನಪದವನ್ನು ಒಂದು ಭಾಷೆಯಂತೆ ಸಮಕಾಲೀನ ಜಗತ್ತನ್ನು ಅರ್ಥವಿಸಲು ಕಂಬಾರರು ಉಪಯೋಗಿಸುತ್ತಾರೆ. ವಾಚೀಪುರುಷನಾದ ಗೌಡ ವಾಸ್ತವವಾಗಿ ನಪುಂಸಕನಾಗಿದ್ದಾನೆ. ಅವನ ಹೊಲವನ್ನು ಗೇಯುತ್ತಿರುವ ಬಸಣ್ಯ ನಿಜವಾದ ಅರ್ಥದಲ್ಲಿ ಪುರುಷನಾಗಿದ್ದಾನೆ. ಗೌಡನ ಹುಸಿ ಬಂದೂಕಿಗೆ ಎದುರು ನಿಲ್ಲುವ ಬಸಣ್ಯನ ನೇಗಿಲು ಫಲವಂತಿಕೆಯ ಪ್ರತೀಕವೇ ಆಗಿದೆ. (ಪುರಾಣದ ಗೌತಮ-ಅಹಲ್ಯೆ-ಇಂದ್ರರ ವೃತ್ತಾಂತ ಇಲ್ಲಿ ನೆನಪಾದರೆ ಆಶ್ಚರ್ಯವಿಲ್ಲ. ಹಾಗೆ ನೋಡಿದರೆ ನಮ್ಮ ಮಹಾಕಾವ್ಯದ ವೃತ್ತಾಂತಗಳೆಷ್ಟೋ ಅಚ್ಚರಿಹುಟ್ಟಿಸುವಂತೆ ಜಾನಪದದಲ್ಲಿ ಮರುಹುಟ್ಟು ಪಡೆಯುತ್ತವೆ-ಅಥವಾ ಇದೊಂದು ವಿಲೋಮ ವೃತ್ತಿಯೂ ಆಗಿರಬಹುದು). ಗೌಡ ಮತ್ತು ಬಸಣ್ಯ ಇವರ ಸಂದರ್ಭದಲ್ಲಿ ನಿಜವಾದ ಫಲವಂತಿಕೆ ಯಾವುದು ಎನ್ನುವುದು ಗಣನೆಗೆ ಬರಬೇಕಾದ ಸಂಗತಿಯಾಗಿದೆ.(ರೈತನ ಹೆಸರು ಬಸಣ್ಯ ಎಂದಿರುವುದು ಕೂಡ ಕೇವಲ ಕಾಕತಾಳೀಯವಾಗಿರಲಿಕ್ಕಿಲ್ಲ). ಒಬ್ಬ ಕವಿ ಜಾನಪದಕ್ಕೆ ಪ್ರತಿಭೆಯನ್ನು ತೆತ್ತುಕೊಂಡಾಗ ಸಮಕಾಲೀನ ಜಗತ್ತಿನ ರಹಸ್ಯಗಳೆಲ್ಲಾ ಜಾನಪದ ಭಾಷೆಯಾ ಮೂಲಕ ಅರುಣೋದಯದಲ್ಲಿ ಮೂಡುವ ಕ್ಷಿತಿಜದ ಹಾಗೆ ಒಡಮೂಡುತ್ತಾ ಹೋಗುತ್ತವೆ. ಕಂಬಾರರ ಈಚಿನ ಕೃತಿಗಳಲ್ಲಿ ಚಕೋರಿ ಎಂಬ ದೀರ್ಘಕಾವ್ಯ(ಕಂಬಾರರು ಈಗದನ್ನು ವಚನ ಕಥಾನಕ ಎಂದು ಕರೆಯುತ್ತಿದ್ದಾರೆ)ಮತ್ತು ಶಿಖರ ಸೂರ್ಯ ಎಂಬ ಕಾದಂಬರಿಯು ಯಾವುದನ್ನು ನಾವು ಕಾದಂಬರೀಯುಗದ ಆರಂಭಿಕ ಕಾಲದಲ್ಲಿ ನಾವು ಕಳೆದುಕೊಂಡಿದ್ದೆವೋ ಆ ಮಿಥಿಕ ಜಗತ್ತಿನ ಪುನಾಸೃಷ್ಟಿಯಾಗಿದೆ. ಈ ಎರಡೂ ಕೃತಿಗಳು ಪರಸ್ಪರ ಪೂರಕ ಕೃತಿಗಳಾಗಿವೆ ಎಂಬುದನ್ನು ಕಂಬಾರರರೇ ಒಪ್ಪಿಕೊಂಡಿದ್ದಾರೆ.ಜಾನಪದ ಮಹಾಕಾವ್ಯಗಳೂ ಕಂಬಾರರ ಈ ಮಿಥಿಕ ಜಗತ್ತಿನ ಸೃಷ್ಟಿಯಲ್ಲಿ ಕಂಬಾರರ ಹಿಂದೆ ಇವೆ ಎಂಬುದನ್ನು ನಾವು ಮಾನ್ಯ ಮಾಡಲೇ ಬೇಕು. ಈ ಹಿನ್ನೆಲೆಯನ್ನು ಎಚ್.ಎಸ್.ಶಿವಪ್ರಕಾಶ ತಮ್ಮ ಮೊದಲ ಮಾತಲ್ಲಿ ಇನ್ನಷ್ಟು ವಿಸ್ತರಿಸಿದ್ದಾರೆ. ಕಂಬಾರರು ವ್ಯಾಸ, ವಾಲ್ಮೀಕಿ, ಪಂಪ-ರನ್ನಾದಿಗಳ ಮೇರು ಕೃತಿಗಳ ಬದಲಿಗೆ ದ್ರಾವಿಡ ಸಂಸ್ಕೃತಿಯ ಮೂಲ ಮಾತೃಕೆಯಂತಿರುವ ಇಳಂಗೋ ಅಡಿಗಳ ಕೃತಿಯನ್ನು ತಮ್ಮ ಮಾದರಿಯಾಗಿ ಹೊಂದಿದ್ದಾರೆ. ಶಿವಪ್ರಕಾಶ ಹೇಳುವಂತೆ ಅವರ ಸ್ಫೂರ್ತಿಯ ಜಲಕಣ್ಣಿರುವುದು ಬಹುಪಾಲು ಮಂದಿ ಯಾವುದನ್ನು ಭಾರತೀಯ ಅಥವಾ ಕನ್ನಡ ಸಂಸ್ಕ್ರುತಿಯ ಪ್ರಧಾನ ಧಾರೆಯೆಂದು ತಿಳಿದಿದ್ದಾರೋ ಅದರಲ್ಲಲ್ಲ. ರಾಷ್ಟ್ರೀಯವಾದಿ ಸಾಂಸ್ಕೃತಿಕ ಚೌಕಟ್ಟಿನ ಹೊರಗೆ ದೂಡಲ್ಪಟ್ಟಿರುವ ಮಹಾನ್ ಆರ್ಯೇತರ ಪರಂಪರೆಗಳ ಸ್ಮೃತಿಕೋಶದಿಂದ ಅವರು ಸ್ಫೂರ್ತಿ ಮತ್ತು ದ್ರವ್ಯಗಳನ್ನು ಪಡೆದುಕೊಳ್ಳುತ್ತಾರೆಂಬುದು ಇದರಿಂದ ಸೂಚಿತವಾಗುತ್ತದೆ”. ಇಷ್ಟಾದರೂ ಕಂಬಾರರ ಸೂರ್ಯಶಿಖಾರಿ ಶಿಲಪ್ಪದಿಗಾರಂಗಿಂತ ಭಿನ್ನವಾದುದು ಎಂಬುದನ್ನು ಮುನ್ನುಡಿ ಗುರುತಿಸಿದೆ. ಶಿಖರಸೂರ್ಯದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿರುವುದು ಲೋಕಮುಖಿಯಾದ ತಾಯಿ ಧರ್ಮದ ನೋಟ ಎಂಬುದು ಮುನ್ನುಡಿಯಿಂದ ಕಾದಂಬರಿಯ ಅಭ್ಯಾಸಕ್ಕೆ ಒದಗುವ ಮಹತ್ವದ ಒಳನೊಟವಾಗಿದೆ. ಶಿಖರಸೂರ್ಯದ ಮೂಲಕ ಕಂಬಾರರು ಆಧುನಿಕ ಕಾದಂಬರಿಯ ವ್ಯಾಖ್ಯೆಯನ್ನು ವಿಸ್ತರಿಸಿದ್ದಾರೆ; ಜೊತೆಗೆ ಜಾನಪದ ಕಥಕ ಜಗತ್ತಿನ ಅಂತಸ್ಥೀಕರಣಶಕ್ತಿಯನ್ನೂ.

****
ಕನ್ನಡಕ್ಕೆ ಎಂಟನೇ ಬಾರಿ ಜ್ಞಾನಪೀಠ ಪುರಸ್ಕಾರ ದೊರೆತ ಕಾರಣ ಕಂಬಾರರ ಮೂಲಕ ಮತ್ತೆ ಕನ್ನಡ ಸಾಹಿತ್ಯ ಸಂದರ್ಭವು ವಿಸ್ತಾರವಾದ ವಿವೇಚನಾ ಕಕ್ಷೆಗೆ ಒಳಪಟ್ಟಿದೆ. ಅದು ಸಂತೋಷದ ವಿಷಯ. ಜೊತೆಗೆ, ಅಚ್ಚರಿಯ ಸಂಗತಿಯೆಂದರೆ ಕಂಬಾರ ಈವತ್ತೂ ಹಳೆಯ ಬಂಡುವಳದಲ್ಲಿ ವ್ಯವಹರಿಸುವ ಲೇಖಕರಲ್ಲ. ಮೊನ್ನೆಮೊನ್ನೆಯಷ್ಟೇ ಅವರ ಶಿವರಾತ್ರಿ ನಾಟಕ ಬಂದಿದೆ. ಜ್ಞಾನಪೀಠದ ಸದ್ದುಗದ್ದಲ ಮುಗಿದು ಈಗ ಮತ್ತೆ ಅವರು ಹೊಸ ಹೊಳಹೊಂದನ್ನು ಧ್ಯಾನಿಸುವ ಜೂಬರಿಕೆಯಲ್ಲಿ ಮಗ್ನರಾಗಿದ್ದರೆ ನನಗಂತೂ ಆಶ್ಚರ್ಯವಾಗುವುದಿಲ್ಲ.
****

-ಅವಧಿ ಕೃಪೆ

ಕನ್ನಡದ ಮಾನ ಎತ್ತರಿಸಿದ ಹಾಮಾನಾ

ಬಿ ಎ ವಿವೇಕ ರೈ.

ಮೊನ್ನೆ ಭಾನುವಾರ (ಸಪ್ಟಂಬರ ೨೫) ಬೆಂಗಳೂರಿನ ‘ಸಿರಿಸಂಪಿಗೆ’ಯಲ್ಲಿ ಚಂದ್ರಶೇಖರ ಕಂಬಾರರನ್ನು ಕಾಣಲು ಹೋದಾಗ ಅಲ್ಲಿ ಗೆಳೆಯ ಬರಗೂರು ರಾಮಚಂದ್ರಪ್ಪ ,ಹಿರಿಯ ಜಾನಪದ ಜೀವಿ ಗೊ.ರು.ಚನ್ನಬಸಪ್ಪ ಸಿಕ್ಕಿದರು.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇಡೀ ಕನ್ನಡ ನಾಡಿನ ಜನರು ಸಂಭ್ರಮಿಸಿದ ಬಗೆಯ ಬಗ್ಗೆ ಮಾತಾಡಿಕೊಂಡೆವು.ಸೈದ್ಧಾಂತಿಕ ಮತ್ತು ವ್ಯಕ್ತಿಗತ ಭಿನ್ನತೆಗಳನ್ನು ಒಂದು ಕ್ಷಣ ಬದಿಗಿಟ್ಟು ಕನ್ನಡದ ಸಾಹಿತಿಗಳು ಮತ್ತು ಎಲ್ಲ ವರ್ಗದ ಕನ್ನಡಿಗರು ಸಂತೋಷ ಪ್ರಕಟಿಸಿದ ,ಮಾಧ್ಯಮಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗೌರವ ಸೂಚಿಸಿದ ಸನ್ನಿವೇಶ ಕರ್ನಾಟಕದ ಸಾಂಸ್ಕೃತಿಕ ಜಗತ್ತಿನಲ್ಲಿ ಒಂದು ಆರೋಗ್ಯಕರ ಬೆಳವಣಿಗೆ.ಇದಕ್ಕೆ ಕಂಬಾರರ ಸಾಹಿತ್ಯ ಸಾಧನೆಗಳಷ್ಟೇ ಕನ್ನಡಿಗರ ಕನ್ನಡಪರ ಅಭಿಮಾನ ಮತ್ತು ಔದಾರ್ಯವೂ ಕಾರಣ.

ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಬಂದಿದೆ.ಇಂತಹ ಪ್ರಶಸ್ತಿ ಬರಬಹುದಾಗಿದ್ದ ಅನೇಕ ಸಾಹಿತಿಗಳು ನಮ್ಮನ್ನು ಅಗಲಿಹೋಗಿದ್ದಾರೆ.ಅರ್ಹರಾದ ಇನ್ನಷ್ಟು ಮಂದಿ ನಮ್ಮ ನಡುವೆ ಇದ್ದಾರೆ.ಆದರೆ ಇಂತಹ ರಾಷ್ಟ್ರೀಯ ಪ್ರಶಸ್ತಿ ಕನ್ನಡಕ್ಕೆ ದೊರೆಯಲು ಸಾಧ್ಯವಾಗುವ ವಾತಾವರಣ ನಿರ್ಮಾಣದ ದೃಷ್ಟಿಯಿಂದ ನಮ್ಮ ಕನ್ನಡ ಕೃತಿಗಳು ಎಷ್ಟು ಪ್ರಮಾಣದಲ್ಲಿ ಇಂಗ್ಲಿಷಿಗೆ ಭಾಷಾಂತರ ಆಗಿವೆ ಎನ್ನುವ ಪ್ರಶ್ನೆಗೆ ,ಎಷ್ಟು ಹೊರನಾಡಿನ ಸಾಹಿತಿಗಳ ವಿಮರ್ಶಕರ ಗಮನವನ್ನು ಸೆಳೆದಿವೆ ಎನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ದೊರೆಯುತ್ತದೆ.ಕೇವಲ ಕನ್ನಡದ ಬಗೆಗಿನ ಉತ್ಸಾಹ ಅಭಿಮಾನಗಳಿಂದಲೇ ಇದು ಸಾಧ್ಯ ಆಗುವುದಿಲ್ಲ.ರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕ ಅನುವಾದಗಳ ಮೂಲಕ ಬೇರೆ ಭಾಷೆಗಳ ವಿಮರ್ಶಕರ ಗಮನ ಸೆಳೆಯುವ ಕೆಲಸವನ್ನು ಮಾಡುವುದು ಬಹಳ ಮುಖ್ಯವಾದ ಕೆಲಸ.ಈ ದೃಷ್ಟಿಯಲ್ಲಿ ನೋಡಿದರೆ ಭಾರತದ ಅತಿ ಶ್ರೇಷ್ಠ ಲೇಖಕರಾದ ಕನ್ನಡದ ಕುವೆಂಪು,ಬೇಂದ್ರೆ,ಕಾರಂತ ಮತ್ತು ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದರ ಹಿಂದೆ ನಡೆದಿರಬಹುದಾದ ಕನ್ನಡಪರ ಪರಿಶ್ರಮ ಬೆರಗು ಹುಟ್ಟಿಸುತ್ತದೆ.ಈ ಮಹಾನ್ ಸಾಹಿತಿಗಳು ಎಲ್ಲರೂ ಇಂಗ್ಲಿಶ್ ಜ್ಞಾನ ಇದ್ದರೂ ಕನ್ನಡಲ್ಲೇ ಬರೆದು ಕನ್ನಡದ ಅನನ್ಯತೆಯನ್ನು ಸಾಧಿಸಿದವರು.ಆ ಕಾಲಕ್ಕೆ ಇವರ ಕೃತಿಗಳು ವಿಶೇಷವಾಗಿ ಇಂಗ್ಲಿಷಿಗೆ ಅನುವಾದ ಆಗಿರಲಿಲ್ಲ.ಇಂತಹ ವೇಳೆಯಲ್ಲಿ ನಿಜವಾದ ಶ್ರೇಷ್ಠ ಕನ್ನಡ ಸಾಹಿತಿಗಳ ಪರವಾಗಿ ಅವರಿಗೆ ಗೊತ್ತಿಲ್ಲದೆಯೇ ರಾಷ್ಟ್ರ ಮಟ್ಟದಲ್ಲಿ ಸಕಾರಾತ್ಮಕ’ ಲಾಬಿ’ ಮಾಡಬೇಕಾಗುತ್ತದೆ.ಇಂತಹ ಸಾಹಿತಿಗಳ ವ್ಯಕ್ತಿ ವಿವರ ಮತ್ತು ಕೆಲವು ಮಹತ್ವದ ಕೃತಿಗಳ ಆಯ್ದ ಭಾಗಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಸುವುದು,ಸಮಿತಿಯಲ್ಲಿ ಇರುವ ಇತರ ಭಾಷೆಯ ಸಾಹಿತಿಗಳ ಗಮನಕ್ಕೆ ತರುವುದು,ಅವರಿಗೆ ಮನವರಿಕೆ ಮಾಡಿಕೊಡುವುದು,ಕೊನೆಗೆ ಒಮ್ಮತ ಅಭಿಪ್ರಾಯಕ್ಕೆ ಪ್ರಯತ್ನಿಸುವುದು,ಆ ಭಾಷೆಯ ಉತ್ತಮ ಸಾಹಿತಿಗಳ ಅವಕಾಶಗಳು ಬಂದಾಗ ಅವರಿಗೆ ಬೆಂಬಲ ಕೊಡುವುದು-ಇವೆಲ್ಲವನ್ನೂ ಶೈಕ್ಷಣಿಕ ನೆಲೆಯಲ್ಲಿ ಮಾಡಿದಾಗ ಮಾತ್ರ ಎಲ್ಲ ಅರ್ಹತೆಗಳು ಇದ್ದಾಗಲೂ ಇಂತಹ ಪ್ರಶಸ್ತಿಗಳು ಕನ್ನಡಕ್ಕೆ ದೊರೆಯಲು ಸಾಧ್ಯ ಆಗುತ್ತದೆ.

ಕನ್ನಡಕ್ಕೆ ದೊರೆತ ಆರಂಭದ ಜ್ಞಾನಪೀಠ ಪ್ರಶಸ್ತಿಗಳು -ಕುವೆಂಪು,ಬೇಂದ್ರೆ,ಕಾರಂತ,ಮಾಸ್ತಿ,ಗೋಕಾಕರದ್ದು.ಅನುಭಾವಿಗಳ ಹಾಗೆ ಬದುಕಿದ ಮತ್ತು ಬರೆದ ಇವರಿಗೆ ಜ್ಞಾನಪೀಠದಂತಹ ರಾಷ್ಟ್ರೀಯ ಪ್ರಶಸ್ತಿ ದೊರೆಯಲು ಪರಿಶ್ರಮ ಪಟ್ಟವರು ಮತ್ತು ಬಹುತೇಕ ಕಾರಣರಾದವರಲ್ಲಿ ಡಾ.ಹಾ.ಮಾ.ನಾಯಕರು ಅಗ್ರಗಣ್ಯರು.ಹಾ.ಮಾ.ನಾಯಕ (೧೨ ಸಪ್ಟಂಬರ ೧೯೩೧-೧೦ ನವಂಬರ ೨೦೦೦) ಅವರು ಬದುಕಿದ್ದರೆ ಈ ತಿಂಗಳಿಗೆ ಅವರಿಗೆ ಎಂಬತ್ತು ವರ್ಷ ಆಗುತ್ತಿತ್ತು.ಹಾಮಾನಾ ೧೯೭೪-೧೯೮೩ರ ಅವಧಿಯಲ್ಲಿ ಭಾರತೀಯ ಜ್ಞಾನಪೀಠ ಕನ್ನಡ ಸಲಹಾ ಸಮಿತಿಯ ಸದಸ್ಯ ಮತ್ತು ಸಂಚಾಲಕರಾಗಿದ್ದರು.ಅವರು ೧೯೮೪-೮೬ರ ಅವಧಿಯಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.ಬೇಂದ್ರೆ ,ಕಾರಂತ ಮತ್ತು ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದದ್ದು ಈ ಅವಧಿಗಳಲ್ಲಿ.ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭಾಷಾವಿಜ್ಞಾನದಲ್ಲಿ ಎಂ.ಎ.ಪದವಿ (೧೯೫೮),ಅಮೇರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಭಾಷಾವಿಜ್ನಾನದಲ್ಲಿ ಪಿಎಚ್.ಡಿ.ಪದವಿ (೧೯೬೪) ಪಡೆದಿದ್ದ ಹಾಮಾನಾ ಅವರಿಗೆ ಬೆಂಗಾಲಿ ಲೇಖಕರ ಸಹಿತ ಭಾರತದ ಅನೇಕ ಭಾಷೆಗಳ ಹಿರಿಯ ಸಾಹಿತಿಗಳ ನೇರ ಸಂಪರ್ಕ ಇದ್ದಕಾರಣ ಆರಂಭದ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡದ ಹಿರಿಯ ಸಾಧಕ ಸಾಹಿತಿಗಳು ಪಡೆಯಲು ಸಾಧ್ಯವಾಯಿತು.ಹೀಗೆ ಕನ್ನಡದ ಮಾನವನ್ನು ಎತ್ತರಿಸುವ ಕೆಲಸವನ್ನು ತಮ್ಮ ಕಾಯಕ ಮತ್ತು ಬರಹಗಳಿಂದ ನಿರಂತರವಾಗಿ ಮಾಡಿದವರು ಹಾಮಾನಾ.

ಹಾಮಾನಾ ಅವರು ಕನ್ನಡದ ಪತ್ರಿಕೆಗಳಲ್ಲಿ ನಿರಂತರವಾಗಿ ಅಂಕಣಗಳನ್ನು ಬರೆದು ಕನ್ನಡ ,ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಯ ಬಗ್ಗೆ ಕನ್ನಡಿಗರಿಗೆ ಸಮರ್ಪಕ ಮಾಹಿತಿ ಮತ್ತು ಜ್ಞಾನವನ್ನು ಏಕಕಾಲಕ್ಕೆ ಕೊಡುತ್ತಲೇ ಸಾಂಸ್ಕೃತಿಕ ಕರ್ನಾಟಕವನ್ನು ಕಟ್ಟಲು ನೆರವಾದರು.’ಸ’ಕಾರದಿಂದ ಆರಂಭವಾಗುವ ಅವರ ಹೆಚ್ಚಿನ ಅಂಕಣಬರಹಗಳು ಶ್ರೀಸಾಮಾನ್ಯ ಕನ್ನಡಿಗರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರೀತಿಯನ್ನು ಬೆಳಸಿದವು.ಅಮೇರಿಕಾದ ಇಂಡಿಯಾನಾ ಮತ್ತು ಪೆನ್ಸಿಲ್ ವೇನಿಯಾ ವಿವಿಗಳಿಂದ ಭಾಷಾವಿಜ್ಞಾನ ಮತ್ತು ಜಾನಪದ ವಿಜ್ಞಾನ ತರಬೇತಿ ಪಡೆದ ಹಾಮಾನಾ ,ಆ ತಿಳುವಳಿಕೆಯನ್ನು ಕನ್ನಡ ಭಾಷೆ ಮತ್ತು ಜಾನಪದಗಳ ವೈಜ್ಞಾನಿಕ ಅಧ್ಯಯನಕ್ಕೆ ಧಾರೆ ಎರೆದರು.ಅವರ ‘ಜಾನಪದ ಸ್ವರೂಪ’ ಕಿರುಗ್ರಂಥ ಕನ್ನಡದಲ್ಲಿ ಜಾನಪದ ಅಧ್ಯಯನದ ಹೊಸ ದಿಕ್ಕಿನ ಬಾಗಿಲು ತೆರೆಯಿತು.ಈರೀತಿ ಕನ್ನಡದ ಮಾನವನ್ನು ಎತ್ತರಿಸಿದ ಮತ್ತು ಕನ್ನಡದ ಅಭಿಮಾನವನ್ನು ತಮ್ಮ ಬರಹಗಳ ಮೂಲಕ ಬೆಳೆಸಿದ ಹಾಮಾನಾ ಅವರ ಅಂಕಣ ಬರಹಗಳ ಸಂಕಲನ ‘ಸಂಪ್ರತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ೧೯೮೯ರಲ್ಲಿ ಬಂದಾಗ ಕನ್ನಡ ಸಾಹಿತಿಗಳ ಒಂದು ಗುಂಪು ನಡೆಸಿದ ಅಸೂಯೆಯ ಸಾಹಿತ್ಯಕ ರಾಜಕೀಯ ಈಗ ಇತಿಹಾಸಕ್ಕೆ ಸೇರಿದ್ದು.ಸಾಹಿತ್ಯದ ಶ್ರೇಷ್ಟತೆಯ ಕುರಿತು ಕನ್ನಡದ ಸಾಹಿತಿಗಳು ಮತ್ತು ವಿಮರ್ಶಕರು ಅನ್ನಿಸಿಕೊಂಡವರು ಕೆಲವರು ಅಂದು ನಡೆಸಿದ ಚರ್ಚೆಯು ಸಾಹಿತ್ಯೇತರ ಉದ್ದೇಶಗಳನ್ನು ಹೊಂದಿತ್ತು ಎನ್ನುವುದು ಆ ಬಳಿಕ ಎಲ್ಲರಿಗೂ ಗೊತ್ತಾದ ಬಹಿರಂಗ ಸತ್ಯ.ಆ ಚರ್ಚೆಯಲ್ಲಿ ಪಾಲುಗೊಂಡ ಕೆಲವರು ಇಂದು ನಮ್ಮೊಂದಿಗಿಲ್ಲ.ಉಳಿದವರು ಸಾಕಷ್ಟು ಮಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಗೆಳೆತನಕ್ಕಿಂತ ಹೆಚ್ಚಾಗಿ ತನ್ನ ನಿಲುವಿನ ಬದ್ಧತೆಯನ್ನು ತೋರಿ ಕೆ.ವಿ.ಸುಬ್ಬಣ್ಣ ಅವರು ಬರೆದ ‘ಶ್ರೇಷ್ಟತೆಯ ವ್ಯಸನ’ ಇಂದಿಗೂ ಒಂದು ಮಹತ್ವದ ಚಿಂತನೆಯ ಲೇಖನವಾಗಿ ಉಳಿಯುತ್ತದೆ.ಆ ಬಳಿಕ ಕಾವೇರಿ ತುಂಗಭದ್ರಾ ಕೃಷ್ಣಾಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ.ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಅಂಕಣ ಬರಹಗಳ ಸಹಿತ ಚಿಂತನೆಯ ಲೇಖನಗಳಿಗೆ ನಮ್ಮ ಕನ್ನಡದ ಸಾಹಿತಿಗಳು ಪಡೆದುಕೊಂಡಿದ್ದಾರೆ.ಇಂತಹ ಕಾಲಘಟ್ಟದಲ್ಲಿ ನಮ್ಮೊಡನಿಲ್ಲದ ಹಾಮಾನಾ ನಮಗೆ ಮತ್ತೆ ಮತ್ತೆ ನೆನಪಾಗುತ್ತಾರೆ.

ಹಾಮಾನಾ ನನ್ನ ಪಿಎಚ್.ಡಿ.ಸಂಶೋಧನೆಯ ಮಾರ್ಗದರ್ಶಕರಾಗಿದ್ದರು: ‘ತುಳು ಜನಪದ ಸಾಹಿತ್ಯ’ -ಮೈಸೂರು ಬಿಶ್ವವಿದ್ಯಾನಿಲಯ .೧೯೮೧.ನನ್ನ ಥೀಸಿಸ್ ನ ಪ್ರಕಟಿತ ಗ್ರಂಥದ (ಕನ್ನಡ ಸಾಹಿತ್ಯ ಪರಿಷತ್ತು ,೧೯೮೫ ) ನನ್ನ ಮಾತಿನಲ್ಲಿ ಬರೆದ ಈ ಸಾಲುಗಳು ಈಗಲೂ ನನ್ನ ಪಾಲಿಗೆ ಜೀವಂತವಾಗಿವೆ :’ಯಾವ ಅಧಿಕಾರದಲ್ಲಿದ್ದರೂ ಮಾನವೀಯ ಸಂಬಂಧಗಳಿಗೆ ಎಳ್ಳಷ್ಟೂ ಕುಂದಾಗದಂತೆ ನಡೆದುಕೊಳ್ಳುವ ಡಾ.ಹಾ.ಮಾ.ನಾಯಕರ ವಿಶ್ವಾಸದ ಸುಖವನ್ನು ಬಹಳ ಅಮೂಲ್ಯವಾದುದೆಂದು ನಾನು ಎಲ್ಲ ಕಾಲಕ್ಕ್ಕೂ ತಿಳಿದಿದ್ದೇನೆ.ಬದುಕಿನ ಶಿಸ್ತು,ಅಚ್ಚುಕಟ್ಟು,ಮೌಲ್ಯಗಳ ಬಗೆಗಿನ ಪ್ರಾಮಾಣಿಕ ಕಾಳಜಿ ,ಒಳ್ಳೆಯ ಉದ್ದೇಶಕ್ಕಾಗಿ ಎಲ್ಲಾ ಅಡ್ಡಿಗಳನ್ನು ಎದುರಿಸುವ ಎದೆಗಾರಿಕೆ -ಇಂತಹ ಅನೇಕ ಅಂಶಗಳಲ್ಲಿ ಡಾ.ನಾಯಕರನ್ನು ಈ ನಿಬಂಧದ ವ್ಯಾಪ್ತಿಯ ಹೊರಗೂ ನನ್ನ ಮಾರ್ಗದರ್ಶಕರೆಂದು ನಾನು ತಿಳಿದಿದ್ದೇನೆ.”

ಹಾಮಾನಾ ಅವರನ್ನು ನಾನು ಮೊದಲು ನೋಡಿದ್ದು ೧೯೬೮ರಲ್ಲಿ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ನಾನು ಕನ್ನಡ ಎಂ ಎ ವಿದ್ಯಾರ್ಥಿಯಾಗಿದ್ದಾಗ.ನನ್ನ ಗುರುಗಳಾದ ಪ್ರೊ.ಎಸ.ವಿ.ಪರಮೇಶ್ವರ ಭಟ್ಟರು ಅವರನ್ನು ನಮ್ಮ ವಿಭಾಗಕ್ಕೆ ಮೊದಲ ಬಾರಿ ಕರೆಸಿದಾಗ.ಆಗ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು.ನಡೆನುಡಿಯಲ್ಲಿ ಹಿತಮಿತ ಗುಣ,ಸ್ಪಷ್ಟತೆ ,ಗಾಂಭೀರ್ಯ -ಅದು ಅವರ ಬಗೆಗಿನ ಆಕರ್ಷಣೆಯೂ ಹೌದು , ಭಯವೂ ಹೌದು.೧೯೬೯ರಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು.ಆಗ ನಾನು ಎರಡನೆಯ ವರ್ಷದ ಎಂ ಎ ವಿದ್ಯಾರ್ಥಿ.ಸಿಂಪಿ ಲಿಂಗಣ್ಣ ಸಮ್ಮೇಳನಾಧ್ಯಕ್ಷರು.ಎಚ್.ಎಲ್.ನಾಗೇಗೌಡರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿ ಸಮ್ಮೇಳನದ ಜವಾಬ್ದಾರಿ ಹೊತ್ತವರು.ದೇಜಗೌ ,ಹಾಮಾನಾ,ಜೀಶಂಪ ಮೊದಲಾಗಿ ಕರ್ನಾಟಕದ ಜಾನಪದ ವಿದ್ವಾಂಸರೆಲ್ಲ ಒಟ್ಟು ಸೇರಿದ ಮಹಾಸಮ್ಮೇಳನ.ಗೊರು ಚನ್ನಬಸಪ್ಪ ಮತ್ತು ತರೀಕೆರೆಯ ಕೆ.ಆರ್.ಲಿಂಗಪ್ಪ ಕಾರ್ಯದರ್ಶಿಗಳು.ಇಡೀ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.ಮೈಸೂರು ಕೇಂದ್ರದಿಂದ ತೀ ನಂ ಶಂಕರನಾರಾಯಣ ಮತ್ತು ಮಂಗಳೂರು ಕೇಂದ್ರದಿಂದ ನಾನು ಆಯ್ಕೆ ಆಗಿದ್ದೆವು.ನನ್ನ ಪ್ರಬಂಧದ ವಿಷಯ ‘ದಕ್ಷಿಣ ಕನ್ನಡದ ಕಲಾತ್ಮಕ ವಿನೋದಗಳು’.ನನ್ನ ಬದುಕಿನ ಮೊದಲನೆಯ ರಾಜ್ಯ ಮಟ್ಟದ ಸಮ್ಮೇಳನದ ಭಾಗವಹಿಸುವಿಕೆ ಅದು.ನನ್ನ ಪ್ರಬಂಧ ಮಂಡನೆಯ ಬಳಿಕ ಅನೇಕ ಹಿರಿಯರು ನನ್ನ ಬೆನ್ನು ತಟ್ಟಿದರು.ಹಾಮಾನಾ ನನ್ನಲ್ಲಿ ಬಂದು ಮೆಚ್ಚುಗೆಯ ಎರಡು ಮಾತು ಹೇಳಿದಾಗ ಪ್ರತಿಕ್ರಿಯೆ ಹೇಳಲು ನನಗೆ ಮಾತುಗಳು ಬರಲಿಲ್ಲ.

೧೯೭೦ ಎಪ್ರಿಲ್ .ನನ್ನ ಕನ್ನಡ ಎಂ ಎ ಅಂತಿಮ ಪರೀಕ್ಷೆಯ ಬಳಿಕ ಮೌಖಿಕ ಪರೀಕ್ಷೆ.ನಮ್ಮ ಪ್ರೊಫೆಸರ್ ಎಸ ವಿ ಪಿ ಅವರಲ್ಲದೆ ಹೊರಗಿನಿಂದ ನಾಲ್ಕು ಮಂದಿ ಪ್ರಾಧ್ಯಾಪಕರು ಪರೀಕ್ಷಕರಾಗಿ ಬಂದಿದ್ದರು.ಮೈಸೂರಿನಿಂದ ಹಾಮಾನಾ ಮತ್ತು ಎಚ್.ತಿಪ್ಪೇರುದ್ರ ಸ್ವಾಮಿ ,ಧಾರವಾಡದಿಂದ ಆರ್.ಸಿ.ಹಿರೇಮಠ,ಮದ್ರಾಸಿನಿಂದ ಎಂ.ಮರಿಯಪ್ಪ ಭಟ್ಟರು.(ಈಗ ಈ ಐದೂ ಮಂದಿ ಪ್ರಾಧ್ಯಾಪಕ ವಿದ್ವಾಂಸರು ನಮ್ಮ ನಡುವೆ ಇಲ್ಲ ಎನ್ನುವುದು ವಿಷಾದದ ಸಂಗತಿ.)ನನ್ನ ಸರದಿ ಬಂದಾಗ ಹಾಮಾನಾ ನನ್ನಲ್ಲಿ ಕೇಳಿದ ಒಂದು ಪ್ರಶ್ನೆ :’ರೈ ಪದದ ನಿಷ್ಪತ್ತಿ.’ ನನ್ನ ಪಾಠಗಳ ಬಗ್ಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ನನಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು.ಆದರೆ ಸಮಯ ಸ್ಪೂರ್ತಿಯಿಂದ ‘ರಾಯ ಪದದಿಂದ ರೈ ಬಂದಿರಬಹುದು.ವಿಜಯನಗರ ಅರಸರು ತುಳುವ ವಂಶದವರಾಗಿದ್ದರು ,ಅವರು ತುಳುನಾಡನ್ನು ಆಳಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ.ಅವರ ಹೆಸರುಗಳ ಕೊನೆಯಲ್ಲಿ ರಾಯ ಇದೆ.ಕೃಷ್ಣದೇವರಾಯ ಇತ್ಯಾದಿ ’ಎಂದೆ.’ಪ್ರತ್ಯೇಕ ತುಳುನಾಡು ಬೇಕು ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?’-ಹಾಮಾನಾ ಅವರ ಮರುಪ್ರಶ್ನೆ.’ಕರ್ನಾಟಕದಿಂದ ಪ್ರತ್ಯೇಕಗೊಳ್ಳುವ ತುಳುನಾಡು ಬೇಕಾಗಿಲ್ಲ.ಆದರೆ ತುಳು ಭಾಷೆ ಮತ್ತು ಸಾಹಿತ್ಯ ವಿಶಿಷ್ಟವಾಗಿ ಬೆಳೆಯಬೇಕು’-ನನ್ನ ಉತ್ತರ.ಎಲ್ಲರೂ ಒಪ್ಪಿಕೊಂಡಂತೆ ಭಾಸವಾಯಿತು.ನಾಯಕರೊಂದಿಗೆ ಎದುರಿನಲ್ಲಿ ಕುಳಿತು ಸ್ವಲ್ಪ ಧೈರ್ಯದಿಂದ ಮೊದಲು ಮಾತಾಡಿದ್ದು ಆಗಲೇ.

೧೯೭೦ ಜುಲೈ.ನನ್ನ ಕನ್ನಡ ಎಂ ಎ ಫಲಿತಾಂಶ ಪ್ರಕಟವಾಯಿತು.ಮಂಗಳೂರು ಕೇಂದ್ರಕ್ಕೆ ಮೊದಲನೆಯವನಾಗಿ ,ಮಂಗಳೂರು ಮತ್ತು ಮೈಸೂರು ಕೇಂದ್ರಗಳು ಸೇರಿ ಎರಡನೆಯವನಾಗಿ ಮೊದಲ ದರ್ಜೆಯಲ್ಲಿ ಉನ್ನತ ಶ್ರೇಣಿಯಲ್ಲಿ ನಾನು ಪಾಸಾಗಿದ್ದೆ.ಮುಂದೆ ಏನು ಮಾಡಬೇಕು ಎನ್ನುವ ಕಲ್ಪನೆ ಇರಲಿಲ್ಲ.ಕಾಲೇಜು ,ವಿಶ್ವವಿದ್ಯಾಲಯ ಸಂಸ್ಕೃತಿಗಳ ಹೊರಗೆ ಹಳ್ಳಿಯಲ್ಲಿ ಇದ್ದ ಕಾರಣ ಉದ್ಯೋಗದ ಅವಕಾಶಗಳು ಕ್ರಮಗಳು ಗೊತ್ತಿರಲಿಲ್ಲ.ಪುತ್ತೂರಿನ ಒಂದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿ ಇದೆ ಎಂದು ಕೇಳಿ,ಅರ್ಜಿ ಹಾಕಿಕೊಂಡು ಸಂದರ್ಶನಕ್ಕೆ ಹೋದೆ.ಆದರೆ ಆಯ್ಕೆ ಆಗಲಿಲ್ಲ.ಎಂ ಎ ಯಲ್ಲಿ ಉತ್ತಮ ಶ್ರೇಣಿ ಇರುವ ಕಾರಣ ,ಕಾಲೇಜು ಉಪನ್ಯಾಸಕ ಹುದ್ದೆಗೆ ಅರ್ಹತೆ ಜಾಸ್ತಿ ಆಯಿತು ಎಂದು ಹೇಳಿದರು ಎಂದು ಆ ಮೇಲೆ ತಿಳಿಯಿತು.ಆವೇಳೆಗೆ ಮೈಸೂರು ವಿವಿಗೆ ಪ್ರೊ.ದೇ ಜವರೇ ಗೌಡರು ಕುಲಪತಿಗಳಾಗಿ ಬಂದಿದ್ದರು.ಹಾ ಮಾ ನಾಯಕರು ಅಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು.ಒಂದು ದಿನ ಆಕಸ್ಮಿಕವಾಗಿ ನನಗೆ ಒಂದು ಸಂದೇಶ ಬಂತು .ನಾನು ಮೈಸೂರಿನಲ್ಲಿ ಹಾ ಮಾ ನಾಯಕರನ್ನು ಹೋಗಿ ಕಾಣಬೇಕೆಂದು.ಯಾವುದಾದರೂ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕ ಕೆಲಸ ದೊರೆಯಬಹುದೇ ಎಂಬ ಆಸೆಯಿಂದ ನಾನು ಮೈಸೂರಿಗೆ ಹೊರಟೆ.ಇದು ೧೯೭೦ರ ಆಗಸ್ಟ್ ಆರಂಭದಲ್ಲಿ.ಆ ವೇಳೆಗೆ ಮೈಸೂರು ನನಗೆ ಅಪರಿಚಿತ ಊರು.ಎರಡು ಬಾರಿ ಮಾತ್ರ ಮೈಸೂರು ನೋಡಿದ್ದೆ.ನಾನು ಮಂಗಳೂರಲ್ಲಿ ಎಂ ಎ ವಿದ್ಯಾರ್ಥಿ ಆಗಿದ್ದಾಗ ೧೯೬೮ರಲ್ಲಿ ನಾಲ್ಕು ತಿಂಗಳ ಕಾಲ ನನ್ನ ಅಧ್ಯಾಪಕರಾಗಿದ್ದ ರಾಮೇಗೌಡ (ರಾಗೌ ) ಅವರ ಮನೆಗೆ ಹೋದೆ.ಅಲ್ಲೇ ಉಳಿದುಕೊಂಡು ,ಮರುದಿನ ಬೆಳಗ್ಗೆ ರಾಗೌ ಜೊತೆಗೆ ಜಯಲಕ್ಷ್ಮಿಪುರಂನಲ್ಲಿ ಇರುವ ಹಾಮಾನಾ ಮನೆ ‘ಗೋಧೂಳಿ’ಗೆ ಹೋದೆ.ಹಾಮಾನಾ ನೇರವಾಗಿ ವಿಷಯ ಪ್ರಸ್ತಾವಿಸಿದರು.’ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕ ಹುದ್ದೆಯೊಂದನ್ನು ಸೃಜಿಸುತ್ತಿದ್ದೇವೆ.ಈ ಕುರಿತು ಕುಲಪತಿ ದೇಜಗೌ ಜೊತೆ ಸಮಾಲೋಚಿಸಿದ್ದೇನೆ.ಆ ಪ್ರದೇಶದವರನ್ನೇ ಅಲ್ಲಿಗೆ ನೇಮಕಮಾಡಬೇಕು ಎನ್ನುವುದು ನಮ್ಮ ನಿಲುವು.ನೀವು ಅಲ್ಲಿನ ಮೊದಲ ತಂಡದಲ್ಲಿ ಮೊದಲ ಸ್ಥಾನ ಪಡೆದವರಾದ ಕಾರಣ ನಿಮ್ಮನ್ನು ಈಗ ಅಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಪನ್ಯಾಸಕರಾಗಿ ನೇಮಿಸುತ್ತೇವೆ.ಕುಲಪತಿಗಳು ಈ ಅಭಿಪ್ರಾಯವನ್ನು ಕೊಟ್ಟಿದ್ದಾರೆ.ಮುಂದೆ ನಿಮ್ಮ ಕೆಲಸದ ಪ್ರಗತಿ ನೋಡಿಕೊಂಡು ಖಾಯಂ ನೇಮಕಾತಿ ಮಾಡಿಕೊಳ್ಳಬಹುದು.ಆದರೆ ಖಾಯಂ ಆಗುತ್ತದೆ ಎನ್ನುವ ಭರವಸೆ ಇಲ್ಲ.’ ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ.ಅವರೇ ಒಂದು ಬಿಳಿಯ ಹಾಳೆ ಕೊಟ್ಟರು.ಅರ್ಜಿ ಹೇಗೆ ಬರೆಯಬೇಕು ಎಂದು ತಿಳಿಸಿದರು .ಅವರ ಎದುರೇ ಅರ್ಜಿ ಬರೆದು ಸಹಿ ಹಾಕಿ ,ಅಂಕ ಪಟ್ಟಿ ಸೇರಿಸಿ ,ಅವರ ಕೈಗೆ ಕೊಟ್ಟೆ.ಊರಿಗೆ ಹಿಂದಿರುಗಿದೆ.ಎರಡು ವಾರಗಳ ಬಳಿಕ ನೇಮಕಾತಿಯ ಆದೇಶ ಬಂತು.ಈಗ ನೆನಪಿಸಿಕೊಂಡರೂ ಕನಸಿನಂತೆ ಕಾಣುವ ಘಟನೆ.ಯಾವ ಸಂಪರ್ಕ ,ಕೋರಿಕೆ ,ಪ್ರಭಾವ ಇಲ್ಲದೆ ವಿಶ್ವವಿದ್ಯಾಲಯದಲ್ಲಿ ಕರೆದು ಕೆಲಸ ಕೊಟ್ಟ ಈ ಘಟನೆ ನನ್ನ ಮುಂದಿನ ಬದುಕಿನ ಗತಿಯನ್ನು ನಿರ್ಧರಿಸಿತು.ಜೊತೆಗೆ ನಾನು ಹೇಗೆ ಕೆಲಸಮಾಡಬೇಕು ಎನ್ನುವ ಪಾಠವನ್ನು ಕಲಿಸಿತು.

೧೯೭೦ರಿನ್ದ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆ ಆದ ೧೯೮೦ರ ವರೆಗೆ ನಮ್ಮ ಸ್ನಾತಕೋತ್ತರ ಕನ್ನಡ ವಿಭಾಗ ಮೈಸೂರು ವಿವಿಯ ನೇರ ಆಡಳಿತದಲ್ಲಿದ್ದ ಕಾರಣ ,ಆ ಅವಧಿಯಲ್ಲಿ ಡಾ.ಹಾ ಮಾ ನಾಯಕರು ನಮ್ಮ ನಿರ್ದೇಶಕರು,ಅಧ್ಯಯನ ಮಂಡಳಿಯ ಅಧ್ಯಕ್ಷರು.೧೯೭೫ರಲ್ಲಿ ಒಮ್ಮೆ ಮೈಸೂರಿಗೆ ನನ್ನನ್ನು ಬರಹೇಳಿ ,’ ಮಂಗಳೂರಿನ ಕನ್ನಡ ವಿಭಾಗದಲ್ಲಿ ತುಳು ಭಾಷೆ ,ಸಾಹಿತ್ಯ,ಇತಿಹಾಸವನ್ನು ಐಚ್ಚಿಕವಾಗಿ ಆರಂಭಿಸೋಣ,ಅದರ ಪಾಠಪಟ್ಟಿ ಸಿದ್ಧಪಡಿಸಿ ಕೊಡಿ ಎಂದರು .ಅದನ್ನು ಸಿದ್ಧಪಡಿಸಿ ಕೊಟ್ಟೆ.ತುಳುನಾಡಿನ ಇತಿಹಾಸ,ತುಳು ಭಾಷೆ ಸಾಹಿತ್ಯ ಮತ್ತು ಯಕ್ಷಗಾನ ಎನ್ನುವ ಮೂರು ಪತ್ರಿಕೆಗಳ ಪಾಠಪಟ್ಟಿ ಸಿದ್ಧಪಡಿಸಿ ಕೊಟ್ಟೆ.ಅದಕ್ಕೆ ಮೈಸೂರು ವಿವಿಯ ಅಧ್ಯಯನ ಮಂಡಳಿ ಮತ್ತು ಅಕಾಡೆಮಿಕ್ ಕೌನ್ಸಿಲ್ ಗಳಿಂದ ಅನುಮೋದನೆ ಮಾಡಿಸಿಕೊಂಡರು.ಹೀಗೆ ವಿಶ್ವವಿದ್ಯಾಲಯದ ಎಂ ಎ ಪಾಠಪಟ್ಟಿಯಲ್ಲಿ ತುಳು ಭಾಷೆ ಸಾಹಿತ್ಯ ಜಾನಪದ ಮೊದಲ ಬಾರಿ ಸೇರ್ಪಡೆಯಾದದ್ದು ಹಾಮಾನಾ ಅವರ ಆಲೋಚನೆ ಮತ್ತು ಕಾರ್ಯಶಕ್ತಿಯಿಂದ ೧೯೭೫ರಲ್ಲಿ.ಇದರಿಂದಾಗಿ ಮುಂದೆ ಅನೇಕ ಮಂದಿ ಸಂಶೋಧಕರು ಈ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಅವಕಾಶ ಆಯಿತು.

ನಾನು ‘ತುಳು ಜನಪದ ಸಾಹಿತ್ಯ’ವನ್ನು ಕುರಿತು ಪಿಎಚ್.ಡಿ.ಪದವಿಗಾಗಿ ಸಂಶೋದನೆ ನಡೆಸಲು ಸೂಚಿಸಿದವರು ಹಾಮಾನಾ. ಈ ವಿಷಯಕ್ಕೆ ಅವರೇ ನನಗೆ ಮಾರ್ಗದರ್ಶಕರಾಗಬೇಕು ಎಂದು ನಾನು ಕೇಳಿಕೊಂಡಾಗ ಮೊದಲು ಒಪ್ಪಿಕೊಳ್ಳಲಿಲ್ಲ.ತುಳು ತನಗೆ ಗೊತ್ತಿಲ್ಲ ಎನ್ನುವ ಕಾರಣ ಹೇಳಿದರು.ಆದರೆ ಜಾನಪದದಲ್ಲಿ ಹೊಸ ಅಧ್ಯಯನ ವಿಧಾನಗಳನ್ನು ತಿಳಿದುಕೊಂಡಿದ್ದ ಕಾರಣ ನನ್ನ ಒತ್ತಾಸೆಗೆ ಕೊನೆಗೂ ಒಪ್ಪಿಕೊಂಡರು.ಓದಬೇಕಾದ ಇಂಗ್ಲಿಶ್ ಪುಸ್ತಕಗಳ ವಿವರ ಕೊಟ್ಟರು.ಕೆಲವನ್ನು ಅವರೇ ತರಿಸಿಕೊಟ್ಟರು.ವೈಯಕ್ತಿಕ ಕಾರಣಗಳಿಂದ ನನ್ನ ಸಂಶೋಧನೆಯ ಕೆಲಸ ನಿಧಾನವಾದಾಗ ನೋಂದಣಿ ರದ್ದು ಮಾಡುವ ನೋಟಿಸು ಕಳುಹಿಸಿದರು.ಮತ್ತೆ ಪ್ರತೀ ಅಧ್ಯಾಯವನ್ನು ಓದಿ,ಟಿಪ್ಪಣಿಗಳನ್ನು ಬರೆದು ,ಕೆಲವೆಡೆ ಹಸ್ತಪ್ರತಿಯಲ್ಲೇ ಮೆಚ್ಚುಗೆಯ ಮಾತುಗಳನ್ನು ಬರೆದರು.

೧೯೮೪ರಲ್ಲಿ ನಾನು ಕನ್ನಡ ವಿಭಾಗದ ಮುಖ್ಯಸ್ಥ ಆದ ಬಳಿಕ ಕರೆದಾಗಲೆಲ್ಲ ನಮ್ಮಲ್ಲಿಗೆ ಬಂದಿದ್ದಾರೆ.’ಕಡೆಂಗೋಡ್ಲು ಸಾಹಿತ್ಯ’ ಗ್ರಂಥದ ಬಿಡುಗಡೆಯನ್ನು ಮಾಡಿ (೧೯೮೭) ಹಿರಿಯ ತಲೆಮಾರಿನ ಕನ್ನಡ ಸಾಹಿತಿಗಳನ್ನು ನಾವು ಗೌರವದಿಂದ ನೆನೆಯಬೇಕಾದ ಪಾಠವನ್ನು ನನಗೆ ಕಲಿಸಿಕೊಟ್ಟಿದ್ದಾರೆ.ನಾನು ಪ್ರಸಾರಾಂಗದ ನಿರ್ದೇಶಕನಾಗಿ ಪ್ರಕಟಿಸಿದ ‘ಶಿವರಾಮ ಕಾರಂತರ ಲೇಖನಗಳು -ಸಂಪುಟ ೫ ಮತ್ತು ೬’-ಇದನ್ನು ಕಾರಂತರ ಸಮ್ಮುಖದಲ್ಲಿ ೧೯೯೫ರಲ್ಲಿ ಬಿಡುಗಡೆ ಮಾಡಿದ ಕಾರ್ಯಕ್ರಮದ ಫೋಟೋಗಳನ್ನು ಕೆಳಗೆ ಬಲಗಡೆ ಕೊಟ್ಟಿದ್ದೇನೆ.ಅನೇಕ ಬಾರಿ ಮೈಸೂರಿನಿಂದ ಕಾರಿನಲ್ಲಿ ಮಂಗಳೂರು ವಿವಿಗೆ ಕಾರ್ಯಕ್ರಮಗಳಿಗೆ ಬಂದಾಗ ,ವಿವಿಯ ನಿಯಮಾನುಸಾರ ಕಿಲೋಮೀಟರ್ ಲೆಕ್ಕದಲ್ಲಿ ಪ್ರಯಾಣ ಭತ್ಯ ಕೊಡುವಾಗ ಅವರು ಬಾಡಿಗೆ ಕಾರಿನವನಿಗೆ ಕೊಡಬೇಕಾದಷ್ಟು ಹಣ ಸಿಗದ ಸಂದರ್ಭಗಳು ನನಗೆ ನೆನಪಾಗುತ್ತವೆ.ಅಂತಹ ಸಂದರ್ಭಗಳಲ್ಲಿ ನಾನು ಮುಜುಗರ ಮತ್ತು ಅಸಹಾಯಕತೆಯನ್ನು ಅನುಭವಿಸುತ್ತಿದ್ದಾಗ ಹಾಮಾನಾ ನನಗೆ ಸಮಾಧಾನ ಮಾಡುತ್ತಿದ್ದರು ;’ಇರಲಿ ಸ್ವಾಮಿ,ಕನ್ನಡದ ಕೆಲಸಕ್ಕಾಗಿ ನಾವು ಅಷ್ಟೂ ಖರ್ಚು ಮಾಡದಿದ್ದರೆ ಹೇಗೆ ?’ ನೈತಿಕತೆಯ ಅನೇಕ ಪಾಠಗಳನ್ನು ಆವರಿಂದ ನಾನು ಕಲಿತಿದ್ದೇನೆ.

ಹಾಮಾನಾ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡು ವರ್ಷ ಕೆಲಸಮಾಡಿ,ತಾತ್ವಿಕ ಕಾರಣಗಳಿಗಾಗಿ ಆ ಹುದ್ದೆಗೆ ರಾಜೀನಾಮೆ ಕೊಟ್ಟರು.ಅನೈತಿಕ ರಾಜಕಾರಣಿಗಳ ಆಳುವವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ.ಆದರೆ ತಮ್ಮ ರಾಜೀನಾಮೆಯನ್ನು ಅವರು ತಮ್ಮ ಇಮೇಜ್ ಹೆಚ್ಚಿಕೊಳ್ಳಲು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ.ಸಾರ್ವಜನಿಕವಾಗಿ ಅದನ್ನು ಚರ್ಚಿಸಲಿಲ್ಲ.ಆದರೆ ಒಂದು ನೈತಿಕ ದಿಟ್ಟ ನಿಲುವಿನ ಸಂದೇಶವನ್ನು ಆಳುವವರಿಗೆ ಮುಟ್ಟಿಸಿದರು.ಅವರ ಬದುಕಿನ ನಿಲುವುಗಳೆಲ್ಲವೂ ತಮ್ಮ ವ್ಯಕ್ತಿತ್ವದ ನೈತಿಕತೆಯ ಗಟ್ಟಿತನಕ್ಕೆ ಬಳಕೆಯಾದುವೆ ಹೊರತು ,ಪ್ರದರ್ಶನಕ್ಕೆ ಪ್ರಚಾರಕ್ಕೆ ಆಹಾರವಾಗಲೀಲ್ಲ.ದೇವರು ಧರ್ಮದ ಬಗೆಗಿನ ಅವರ ನಿರ್ಲಿಪ್ತ ಧೋರಣೆ,ಜಾತಿ ಸಂಘಟನೆಗಳಿಂದ ಸಂಪೂರ್ಣವಾಗಿ ದೂರ ಉಳಿಯುವ ನಿಲುವು- ಇಂತಹ ಹಲವು ವೈಚಾರಿಕ ಸ್ಪಷ್ಟತೆಗಳು ಹಾಮಾನಾರಲ್ಲಿ ಇದ್ದವು.ಆದರೆ ಅದನ್ನು ಪ್ರಚಾರಕ್ಕೆ ತಮ್ಮ ವೈಭವೀಕರಣಕ್ಕೆ ಅವರು ಬಳಸಿಕೊಳ್ಳಲಿಲ್ಲ.

ಹಾಗಾಗಿಯೇ ಹಾಮಾನಾ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ನಡೆಸಿದ ಅನೇಕ ಯೋಜನೆಗಳು ಯಶಸ್ವಿಯಾಗಲು ಅವರು ಜಾತಿ ಪಂಥ ಪ್ರದೇಶಗಳ ಭೇದವಿಲ್ಲದೆ ,ಪ್ರಭಾವಗಳ ಮಾಲಿನ್ಯವಿಲ್ಲದೆ ಸಮರ್ಪಕವಾಗಿ ಪ್ರಾಮಾಣಿಕವಾಗಿ ಕೆಲಸಮಾಡುವವರನ್ನು ಶೋಧಿಸಿ ಆಯ್ಕೆಮಾಡಿ ಸರಿಯಾಗಿ ಬಳಸಿಕೊಂಡದ್ದು ಮುಖ್ಯ ಕಾರಣ.ಕನ್ನಡ ವಿಶ್ವಕೋಶ,ವಿಷಯ ವಿಶ್ವಕೋಶ,ಕನ್ನಡ ಸಾಹಿತ್ಯ ಚರಿತ್ರೆ,ಕನ್ನಡ ಛಂದಸ್ಸಿನ ಚರಿತ್ರೆ,ಶಾಸನ ಸಂಪುಟಗಳು,ಜಾನಪದ ವಸ್ತುಸಂಗ್ರಹಾಲಯ -ಹೀಗೆ ಹಲವಾರು ಯೋಜನೆಗಳು ಅಲ್ಲಿ ಕಾರ್ಯರೂಪಕ್ಕೆ ಬಂದವು.ಸಾಮೂಹಿಕ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇತ್ತು.ಅವರು ಕಾಯಕದ ಕರ್ಣಧಾರ ಆಗಿದ್ದರು.

ಹಾಮಾನಾ ಅವರನ್ನು ನಾನು ಆಹ್ವಾನಿಸಿದ ಒಂದು ಕಾರ್ಯಕ್ರಮ ‘ಕುಶಿ ಹರಿದಾಸ ಭಟ್ಟ ಅವರ ಸಂಸ್ಮರಣ’ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ.ಅದು ನಡೆದದ್ದು ೧೩ ಅಕ್ಟೋಬರ ೨೦೦೦ ದಂದು.ನಮ್ಮೆಲ್ಲರ ಹಿತೈಷಿ ಹಿರಿಯರು ಕುಶಿಯವರು ಹಾಮಾನಾ ಅವರ ಆಪ್ತ ಸ್ನೇಹಿತರು.ಅದೊಂದು ಸಂತಾಪದ ಮತ್ತು ಮರುನೆನಕೆಯ ಕಾರ್ಯಕ್ರಮ.ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಮತ್ತು ಉಡುಪಿಯ ಹೇರಂಜೆ ಕೃಷ್ಣ ಭಟ್ ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದರು.ನಾಯಕರು ಕುಶಿ ಜೊತೆಗಿನ ತಮ್ಮ ಸುದೀರ್ಘ ಸ್ನೇಹದ ಅನೇಕ ಅಪೂರ್ವ ಸಂಗತಿಗಳನ್ನು ತೆರೆಯುತ್ತಾ ಆರ್ದ್ರರಾದರು.ಸಾವಿನ ಬಗ್ಗೆ ಮಾತಾಡಿದರು.ಎಂದಿನಂತೆಯ ಹಾಮಾನಾ ಅವರ ಲವಲವಿಕೆ ,ನಗು ಉತ್ಸಾಹ ಆ ದಿನ ಇರಲಿಲ್ಲ.ಕುಶಿ ಅವರಿಗೆ ಗೌರವ ಡಾಕ್ಟರೇಟ್ ಕೊಡದೆ ಮಂಗಳೂರು ವಿವಿ ತಪ್ಪುಮಾಡಿದೆ ಎನ್ನುವುದನ್ನು ಕಟುವಾಗಿ ಹೇಳಿದರು.

ಇದು ನಮ್ಮ ಪಾಲಿಗೆ ಹಾಮಾನಾ ಅವರ ಕೊನೆಯ ದರ್ಶನ ಮತ್ತು ಕೊನೆಯ ಕಾರ್ಯಕ್ರಮ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ.ಈ ಕಾರ್ಯಕ್ರಮ ನಡೆದು (೧೩ ಅಕ್ಟೋಬರ ೨೦೦0 ) ಒಂದು ತಿಂಗಳ ಒಳಗೆ ,೧೦ ನವಂಬರ ೨೦೦೦ ರಂದು ಅವರು ನಮ್ಮನ್ನು ಅಗಲಿದರು.ಕೆಳಗೆ ಎಡಗಡೆಯಲ್ಲಿ ಇರುವ ಫೋಟೋ -ಕುಶಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಾಮಾನಾ ಮಾತಾಡುತ್ತಿರುವ ಒಂದು ಅಪೂರ್ವ ,ಆದರೆ ನಮಗೆ ವಿಷಾದದ ದಾಖಲೆಯ ಚಿತ್ರ.

ಹಾಮಾನಾ ಅವರಿಗೆ ಅರುವತ್ತು ವರ್ಷ ತುಂಬಿದಾಗ ಅವರ ಸ್ನೇಹಿತರು ಅಭಿಮಾನಿಗಳು ಹೊರತಂದ ಅಭಿನಂದನಗ್ರಂಥ -’ಮಾನ’ :ಸಂ .ಎಸ.ಎಲ್.ಭೈರಪ್ಪ,ಜೆ.ಆರ್.ಲಕ್ಷ್ಮಣ ರಾವ್ ,ಪ್ರಧಾನ ಗುರುದತ್ತ-೧೯೯೨.ಅದರಲ್ಲಿ ಶಿವರಾಮ ಕಾರಂತರು ಬರೆದ ಕೆಲವು ಮಾತುಗಳು ಇಲ್ಲಿವೆ :

“ವಿಶಾಲ ಪರಿಶೀಲನೆಯಿಂದ ,ಆಗಾಗ ತಿಳಿದು ಬಂದುದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಾ ಬಂದವರು ಡಾ.ಹಾ.ಮಾ.ನಾಯಕರು.ಅವರ ತಾಳ್ಮೆಯೂ ವಿಶೇಷ ,ಅಭಿರುಚಿಯೂ ವಿಶೇಷ; ಅವುಗಳ ಪ್ರಕಟಣೆಯೂ ಧಾರಾಳ…ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ -ಕನ್ನಡದಲ್ಲಿ -ಏನಾಗಿದೆ ,ಆಗುತ್ತಿದೆ ಎಂದು ಹೇಳಬಲ್ಲವರು ಇರುವುದಾದರೆ ಅದು ಹಾ.ಮಾ.ನಾಯಕರು.”-ಶಿವರಾಮ ಕಾರಂತ.

‘ಮಾನ’ ಅಭಿನಂದನ ಗ್ರಂಥದಲ್ಲಿ ಚಂದ್ರಶೇಖರ ಕಂಬಾರರು ಹಾಮಾನಾ ಬಗ್ಗೆ ಬರೆದ ಮಾತುಗಳು ,ಇಪ್ಪತ್ತು ವರ್ಷಗಳ ಹಿಂದಿನವು. ಆದರೆ ಅವು ಕವಿ ನಾಟಕಕಾರ ಕಂಬಾರರ ಒಳನೋಟದ ವಿಮರ್ಶಾಸೂಕ್ಷ್ಮವನ್ನು ಅನಾವರಣ ಮಾಡುತ್ತವೆ :

“ಕನ್ನಡಿಗರ ಬದುಕಿನ ಒಳಿತಿಗೆ ,ಮೌಲಿಕತೆಗೆ,ಸೃಜನಶೀಲತೆಗೆ ,ಅಭಿಮಾನಕ್ಕೆ ಯಾವೆಲ್ಲ ತಿಳುವಳಿಕೆ ಅಗತ್ಯವೆಂದು ,ಉಪಯುಕ್ತವೆಂದು ಅವರಂದುಕೊಂಡರೋ ಅದೆಲ್ಲದರ ಬಗ್ಗೆ ಬರೆದಿದ್ದಾರೆ ,ಬರೆಯುತ್ತ ಇದ್ದಾರೆ .ಈ ಎಲ್ಲ ಬರೆಹಗಳ ಹಿಂದೆ ಪ್ರಜ್ಞಾಪೂರ್ವಕವಾದ ,ಸುಸಂಸ್ಕೃತ ಮನಸ್ಸೊಂದು ಕಾಳಜಿಪೂರ್ವಕ ಆಯ್ಕೆಮಾಡುವುದನ್ನು,

ಜವಾಬ್ದಾರಿಯಿಂದ ನಿರೂಪಣೆಮಾಡುವುದನ್ನು ಕಾಣಬಹುದು. ..ಸಾಹಿತ್ಯ ನಮ್ಮ ಸಾಂಸ್ಕೃತಿಕ ಬದುಕಿನ ಒಂದು ಭಾಗ.ಅದನ್ನು ಬಿಟ್ಟರೆ ಅದಕ್ಕೆ ಪ್ರತ್ಯೇಕ ಅಸ್ತಿತ್ವ ಇರಬಾರದು ಎನ್ನುವ ಒಂದು ವಿವೇಕ ಮತ್ತು ನಂಬಿಕೆ ಈ ಬರಹಗಳ ಹಿನ್ನೆಲೆಗಿದೆ.ಅಂದರೆ ಹಾಮಾನಾ ಬದುಕು-ಬರೆಹಗಳ ನಡುವೆ ಬಿರುಕಿಲ್ಲ.ಅವರು ಬರೆದದ್ದನ್ನು ಬದುಕುತ್ತಾರೆ,ಬದುಕಿದ್ದನ್ನು ಬರೆಯುತ್ತಾರೆ .ಆದ್ದರಿಂದ ಅವರ ವ್ಯಕ್ತಿತ್ವವೇ ನಮಗೊಂದು ದೊಡ್ಡ ಮೌಲ್ಯವಾಗುತ್ತದೆ.”-ಚಂದ್ರಶೇಖರ ಕಂಬಾರ.


ಬಿ ಎ ವಿವೇಕ ರೈ.

ವ್ಯಂಗ್ಯ (ವಿ)ಚಿತ್ರ

-ಕೆ.ಎಲ್.ಚಂದ್ರಶೇಖರ್ ಐಜೂರ್

ದಿನೇಶ್ ಅಮಿನ್‌ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್‌ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.

ಶಾಸಕರನ್ನು ಗಣಿ ಲಾರಿಯಲ್ಲಿ ತುಂಬಿಕೊಂಡು ಬಂದು “ಸ್ಥಿರ ಸರ್ಕಾರಕ್ಕೆ ಇನ್ನೊಂದು ಲೋಡ್ ತರ್‍ಲಾ ಸಾರ್” ಎನ್ನುತ್ತಿರುವ ಬಳ್ಳಾರಿ ದೇಶದ ಡ್ರೈವರ್, ಮತ್ತೊಂದು ವ್ಯಂಗ್ಯ ಚಿತ್ರದಲ್ಲಿ 1992ರ ದುರಂತದ ನಂತರ “ಶಿಕ್ಷಣ, ಉದ್ಯೋಗ ಮತ್ತು ರಕ್ಷಣೆ ಕೊಡಿ” ಎಂದು ಅಂಗಲಾಚುತ್ತಿರುವ ಒಬ್ಬ ನಿರ್ಗತಿಕ ಮುಸ್ಲಿಮ್ ಯುವಕನಿಗೆ ವಾಜಪೇಯಿ “ದುಃಖಿಸಬೇಡ ಮಸೀದಿಯನ್ನು ಮತ್ತೆ ನಿರ್ಮಿಸಿ ಕೊಡುತ್ತೇವೆ” ಎಂದು ಹೇಳುವ ಭಂಗಿಯಲ್ಲಿ ನಿಂತಿದ್ದರೆ ಪಕ್ಕದಲ್ಲಿ “ಎಲ್ಲರೂ ನೋಡಿ ಸರಕಾರ ಮತ್ತೆ ಮುಸ್ಲಿಮರನ್ನು ಸಂತುಷ್ಟಿಗೊಳಿಸುವ ತಂತ್ರ ನಡೆಸಿದೆ…” ಎಂದು ಮತ್ತೊಬ್ಬ ರಾಜಕಾರಣಿ ಜೋರು ದನಿ ತೆಗೆದು ಕೂಗುತ್ತಿದ್ದಾನೆ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ದಿನಗಳಲ್ಲಿ ದೇವೇಗೌಡರಿಗೆ ಪ್ರಚಂಡ ಐಡಿಯಾಗಳನ್ನು ಕೊಟ್ಟು ಸರ್ಕಾರ ಉರುಳಿಸಲು ನೆರವಾದ ಮಹಮ್ಮದರ ಕಾರ್ಟೂನ್‌ಗಳನ್ನು ಪ್ರಜಾವಾಣಿ ಓದುಗರು ಮರೆತಿರಲಿಕ್ಕಿಲ್ಲ. ಮಹಮ್ಮದ್ ಅವರ ಪೆನ್ನು ಗೆರೆಗಳಾಗಿ, ವ್ಯಂಗ್ಯ ಚಿತ್ರಗಳಾಗಿ ದುಡಿದಿರುವುದನ್ನು ಕಾಣಲು ಓದುಗರು “ವ್ಯಂಗ್ಯ (ವಿ)ಚಿತ್ರ”ವನ್ನು ನೋಡಲೇ ಬೇಕು. “ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧ ಪಕ್ಷಗಳಾಗುವ ಈ ಕೆಟ್ಟ ಕಾಲದಲ್ಲಿ ಮಹಮ್ಮದ್ ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗೂ ಏಕಕಾಲಕ್ಕೆ ಮೂಲಭೂತವಾದಿಗಳನ್ನೂ ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ,” ಎಂಬ ಡಾ.ನಟರಾಜ್ ಹುಳಿಯಾರರ ಪ್ರಸ್ತಾವನೆಯ ಮಾತುಗಳು ಮಹಮ್ಮದರ ಕಾರ್ಟೂನ್ ಶಕ್ತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತವೆ.

ವ್ಯಂಗ್ಯ (ವಿ)ಚಿತ್ರ
ಲೇಖಕರು :ಪಿ.ಮಹಮ್ಮದ್

ಪ್ರಕಾಶಕರು
ಚಿಂತನ ಪುಸ್ತಕ
ನಂ.1863, 11ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆ,
4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ಪುಟಗಳು:140 ಬೆಲೆ:ರೂ.140 ಪ್ರಕಟಣೆ:2010

ಜ್ಞಾನಪೀಠ ಸಂಭ್ರಮ ಮತ್ತು ಜಾನಪದ ಓದಿದವರ ಸಂಕಟ
ನನ್ನ ಫೋಟೋ

ಕನ್ನಡಕ್ಕೆ ಪ್ರತಿಷ್ಠಿತ ಎಂಟನೇ ಜ್ಞಾನಪೀಠ ಪ್ರಶಸ್ತಿ ಚಂದ್ರಶೇಖರ ಕಂಬಾರರಿಗೆ ಬಂದಿದೆ. ಇದು ಜಾನಪದ ಪ್ರತಿಭೆಗೆ ಸಂದ ಗೌರವವೆಂದು, ಅಲಕ್ಷಿತ ಸಮುದಾಯದ ತಿಳಿವಿಗೆ ಸಿಕ್ಕ ಮರ್ಯಾದೆಯೆಂದು ಚರ್ಚೆಯಾಗುತ್ತಿದೆ. ಇದು ನಿಜ ಕೂಡ. ಕರ್ನಾಟಕದಲ್ಲಿ ಮೊದಲಿನಿಂದಲೂ ಮತ್ತು ಜಾನಪದ ವಿಶ್ವವಿದ್ಯಾಲಯ ಆದಂದಿನಿಂದಲೂ ಜಾನಪದದ ಬಗೆಗಿನ ಸಂಭ್ರಮಾಚರಣೆಯೂ ಸಹಜವಾಗಿದೆ. ಇಂದು ಕರ್ನಾಟಕದ ಯಾವುದೇ ಕ್ಷೇತ್ರದ ಆಲೋಚನೆಗೆ ಜಾನಪದದ ಪ್ರತಿಕ್ರಿಯೆ ಏನಿದೆ ಎಂದು ನೋಡುವ ಹಾಗೆ ಜಾನಪದ ಕ್ಷೇತ್ರ ಪ್ರಭಾವ ಬೀರಿದೆ. ಈ ಎಲ್ಲವುಗಳನ್ನು ನೋಡಿದರೆ ಜಾನಪದದ ಬಗೆಗೆ ಸಂಭ್ರಮ ಪಡಲಿಕ್ಕೆ ಹಲವು ಕಾರಣಗಳಿವೆ.

ಆದರೆ ಜಾನಪದವನ್ನು ಒಂದು ಶಿಸ್ತನ್ನಾಗಿ ಸ್ನಾತಕೋತ್ತರ ಪದವಿ ಪಡೆದ ವಿಧ್ಯಾರ್ಥಿಗಳ ಪಾಲಿಗೆ ಜಾನಪದ ಎನ್ನುವುದು ಸಂಕಟವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕರ್ನಾಟಕದಲ್ಲಿ ಮೈಸೂರು ವಿವಿ, ಕರ್ನಾಟಕ ವಿವಿ, ಗುಲ್ಬರ್ಗಾ ವಿವಿಗಳಲ್ಲಿ ಜಾನಪದ ಎಂ.ಎ ತರಗತಿಗಳು ನಡೆಯುತ್ತಿವೆ. ಇಲ್ಲಿ ಜಾನಪದ ಎಂ.ಎ ಮಾಡಿಕೊಂಡು ವಿಧ್ಯಾರ್ಥಿಗಳು ಹೊರಬರುತ್ತಾರೆ. ಅಂತವರು ಹೊರ ಬಂದ ನಂತರ ಹುದ್ದೆ ಹಿಡಿಯುವ ದಾರಿಯೇ ಮಂಕಾದಂತಾಗಿದೆ. ಪಿ.ಯು ಕಾಲೇಜಿಗೆ ಕನ್ನಡಕ್ಕೆ ಜಾನಪದ ಎಂ.ಎ ಮಾಡಿದವರನ್ನು ಅರ್ಹರನ್ನಾಗಿಸುವುದು ಬಿಟ್ಟರೆ, ಪದವಿ ತರಗತಿಗಳಿಗೆ, ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕ ಹುದ್ದೆಗಳಿಗೆ ಜಾನಪದ ಎಂ.ಎ ಮಾಡಿದವರನ್ನು ಅನರ್ಹರನ್ನಾಗಿ ಪರಿಗಣಿಸಲಾಗುತ್ತದೆ.

ಕಾರಣ ಕರ್ನಾಟಕದಲ್ಲಿ ಕನ್ನಡದ ಜತೆ ಜಾನಪದವನ್ನು ಆಂಶಿಕವಾಗಿ ಸೇರಿಸಿ, ಅವೆರಡನ್ನೂ ಸಂಯೋಜಿಸಲಾಗಿದೆ. ಹಾಗಾಗಿ ಕನ್ನಡ ಮತ್ತು ಜಾನಪದ ಇಲ್ಲಿ ಬೇರೆ ಬೇರೆಯಲ್ಲ. ಆದರೆ ಪದವಿ ಕನ್ನಡ ಉಪನ್ಯಾಸಕ ಹುದ್ದೆಗಳಿಗೆ ಕನ್ನಡ ಎಂ.ಎ ಮಾಡಿದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಾಗುತ್ತಿದೆ. ಕಾರಣ ಯು.ಜಿ.ಸಿ ನಿಯಮದ ಪ್ರಕಾರ ಜಾನಪದ ಮತ್ತು ಕನ್ನಡ ಬೇರೆ ಬೇರೆ ವಿಷಯಗಳು. ಇವುಗಳಿಗೆ ಪ್ರತ್ಯೇಕ ಎನ್.ಇ.ಟಿ ಪರೀಕ್ಷೆಗಳೂ ಇವೆ. ಯುಜಿಸಿ ಪ್ರಕಾರ ಜಾನಪದ ಓದಿದವರು ಕನ್ನಡ ವಿಷಯಕ್ಕೆ ಅಧ್ಯಾಪಕರಾಗಲು ಅನರ್ಹರು. ಆದರೆ ಕರ್ನಾಟಕದಲ್ಲಿ ಜಾನಪದವನ್ನು ಕನ್ನಡದ ಪಠ್ಯಕ್ರಮದಲ್ಲಿ ತೂರಿಸಿ ಅದೊಂದು ಸ್ವತಂತ್ರ ವಿಷಯವಾಗದಂತೆ ಮಾಡಲಾಗಿದೆ. ಹಾಗಾಗಿ ಇಲ್ಲಿನ ಪದವಿ ತರಗತಿಯ ಕನ್ನಡ ಅಧ್ಯಾಪಕರ ಹುದ್ದೆಗೆ ಜಾನಪದ ಎಂ.ಎ ಆದವರನ್ನೂ ಅರ್ಹರನ್ನಾಗಿ ಮಾಡಬೇಕಾಗಿದೆ. ಇಲ್ಲವೆ ಜಾನಪದವನ್ನು ಪ್ರತ್ಯೇಕ ವಿಷಯವಾಗಿ ಪಿ.ಯು ಮತ್ತು ಪದವಿ ತರಗತಿಗಳಿಗೆ ಹೊಸದಾಗಿ ಸೇರಿಸಬೇಕಿದೆ.

ಕನ್ನಡ ಮಾಧ್ಯಮದಲ್ಲಿ ಕರ್ನಾಟಕದ ಜಾನಪದವನ್ನು ಓದಿದವರಿಗೆ, ಇಂಗ್ಲೀಷಿನಲ್ಲಿ ನೆಟ್ ಪರೀಕ್ಷೆ ಬರೆದು ಉತ್ತೀರ್ಣವಾಗುವುದೂ ಕೂಡ ಕಷ್ಟವೆ. ಕಾರಣ ಕರ್ನಾಟಕದ ಜಾನಪದ ಸಂಗತಿಗಳನ್ನು ಓದಿದವರಿಗೆ, ನೆಟ್ ಪರೀಕ್ಷೆಯಲ್ಲಿ ಜಾಗತಿಕ ಜಾನಪದ, ಭಾರತದ ಜಾನಪದದ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಇವುಗಳಿಗೆ ಇಂಗ್ಲೀಷಿನಲ್ಲಿಯೇ ಉತ್ತರಿಸಬೇಕಾಗುತ್ತದೆ. ಈ ಪ್ರಶ್ನೆ ಪತ್ರಿಕೆಯ ಎದುರು ಕನ್ನಡ ಜಾನಪದ ಓದಿದ ವಿಧ್ಯಾರ್ಥಿಗಳು ಕಕ್ಕಾಬಿಕ್ಕಿಯಾಗುತ್ತಾರೆ. ಹೀಗಿರುವಾಗ ನೆಟ್ ಪಾಸ್ ಮಾಡುವುದು ಕೂಡ ದೂರದ ಕನಸು. ಬೇರೆ ವಿಷಯಗಳಿಗಿರುವ ಈ ಸಮಸ್ಯೆಯನ್ನು ಆಧರಿಸಿಯೇ ಮೈಸೂರು ವಿಶ್ವವಿದ್ಯಾಲಯ ಸ್ಲೆಟ್ ಪರೀಕ್ಷೆಯನ್ನು ಕೆಲ ತಿಂಗಳುಗಳ ಹಿಂದೆ ಕಾಲ್ ಮಾಡಿತ್ತು. ಜಾನಪದ ಎಂ.ಎ ಮೊದಲು ಆರಂಭಗೊಂಡ ಮೈಸೂರು ವಿವಿಯೇ ಸ್ಲೆಟ್ ಪರೀಕ್ಷೆಯಲ್ಲಿ ಜಾನಪದ ವಿಷಯವನ್ನು ಕೈಬಿಡಲಾಗಿದೆ. ಇದೊಂದು ವಿಪರ್ಯಾಸ.

ಕನ್ನಡ ಎಂ.ಎ ಮಾಡಿದವರು ಅರೆಕಾಲಿಕ ಉಪನ್ಯಾಸಕರಾಗಿಯೂ ತಮ್ಮ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಮುಂದೂಡುತ್ತಿದ್ದಾರೆ. ಆದರೆ ಜಾನಪದ ಎಂ.ಎ ಮಾಡಿದವರಿಗೆ ಹೀಗೆ ಅರೆಕಾಲಿಕ ಉಪನ್ಯಾಸಕರಾಗಿ ದುಡಿಯುವ ಅವಕಾಶಗಳೂ ಇಲ್ಲ. ಈಚೆಗೆ ವಿಜಯನಗರ ಕೃಷ್ಟದೇವರಾಯ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ ಮಿತ್ರರೊಬ್ಬರನ್ನು ಸಂದರ್ಶನಕ್ಕೂ ಅನರ್ಹಗೊಳಿಸಿತು. ವಿಶ್ವವಿದ್ಯಾಲಯಗಳೂ ಕೂಡ ಜಾನಪದ ಓದಿದವರನ್ನು ಕನ್ನಡ ಅಧ್ಯಾಪಕ ಉದ್ದೆಗೆ ಪರಿಗಣಿಸುತ್ತಿಲ್ಲ. ಈ ಸಮಸ್ಯೆಯನ್ನು ಅರಿತು, ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ.ಎ ಆರಂಭಿಸಿ, ಎರಡು ವರ್ಷದ ನಂತರ ನಿಲ್ಲಿಸಲಾಯಿತು.

ಈ ಸಮಸ್ಯೆ ಇಂದು ನಿನ್ನೆಯದಲ್ಲ. ೧೯೬೬ ರಲ್ಲಿ ಜಾನಪದವನ್ನು ಮೈಸೂರು ವಿವಿಯಲ್ಲಿ ಕನ್ನಡ ಎಂ.ಎ ನಲ್ಲಿ ಒಂದು ವಿಷಯವನ್ನಾಗಿ ಸೇರಿಸಿದರು. ಅದು ಈಗಲೂ ಇದೆ. ಹೀಗೆ ಕನ್ನಡದಲ್ಲಿ ಒಂದು ವಿಷಯವಾಗಿ ಓದುವವರಿಗೆ ಸಮಸ್ಯೆಯಲ್ಲದ್ದು, ಪ್ರತ್ಯೇಕ ಜಾನಪದ ಎಂ.ಎ ಮಾಡಿದವರನ್ನು ಸಮಸ್ಯೆಯಾಗಿ ಕಾಡತೊಡಗಿದೆ. ಇಂತಹ ಸಮಸ್ಯೆಯನ್ನು ಜಾನಪದ ಎಂ.ಎ ಮಾಡಿದ ವಿಧ್ಯಾರ್ಥಿಗಳು ಮೂರು ದಶಕಗಳಿಂದ ಅನುಭವಿಸುತ್ತಲೇ ಬಂದಿದ್ದಾರೆ. ಈ ಸಮಸ್ಯೆ ಕುರಿತು ಕರ್ನಾಟಕದ ಯಾವುದೇ ಜಾನಪದ ವಿದ್ವಾಂಸರು ಮಾತನಾಡದಿರುವುದೊಂದು ವಿಪರ್ಯಾಸ. ಜಾನಪದದ ಕುರಿತು ಸಂಭ್ರಮಿಸುವವರಿಗೆ, ಅದೇ ಜಾನಪದವನ್ನು ಒಂದು ಶಿಸ್ತನ್ನಾಗಿ ಓದಿದವರ ಸಂಕಟ ಅರ್ಥವಾಗದಿರುವುದು ಒಂದು ವ್ಯಂಗ್ಯ. ಜಾನಪದದಲ್ಲಿ ಪಿಹೆಚ್‌ಡಿ ಮಾಡಿದವರಿಗೆ ಜಾನಪದ ಅಕಾಡೆಮಿಯು ಪ್ರತಿ ವರ್ಷ ನೀಡುವ ಸಂಶೋಧನ ಫೆಲೋಶಿಪ್‌ನ್ನೂ ಈ ವರ್ಷ ನಿರಾಕರಿಸಿದೆ. ವಯಕ್ತಿಕವಾಗಿ ನಾನು ಜಾನಪದ ಎಂ.ಎ ಮತ್ತು ಪಿಹೆಚ್.ಡಿ ಮಾಡಿ, ಈ ಸಮಸ್ಯೆಗಳಿಗೆ ಎದುರಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಜಾನಪದವನ್ನು ಒಂದು ಸಂವೇದನೆಯನ್ನಾಗಿ ಸೃಜನಶೀಲ ಸಾಹಿತ್ಯದಲ್ಲಿ ಶಕ್ತಿಯುತವಾಗಿ ಬಳಸಿಕೊಂಡು ಜ್ಞಾನಪೀಠ ಪ್ರಶಸ್ತಿ ಪಡೆದ ಕಂಬಾರರು ಮತ್ತು ಜಾನಪದ ವಿದ್ವಾಂಸರು, ಸಂಸ್ಕೃತಿ ಚಿಂತಕರು ಈ ಕುರಿತು ಆಲೋಚಿಸಬೇಕಿದೆ. ಜಾನಪದ ವಿಶ್ವವಿದ್ಯಾಲಯ ಇವರುಗಳಿಗೆ, ಹುದ್ದೆಗಳ ಆಯ್ಕೆಯಲ್ಲಿ ಮೊದಲ ಆಧ್ಯತೆಯನ್ನು ಕಡ್ಡಾಯಗೊಳಿಸಬೇಕಿದೆ. ಅಂತೆಯೇ ಇವರ ಪರವಾದ ಹಕ್ಕೊತ್ತಾಯಗಳಿಗೂ ವಿವಿ ದ್ವನಿಯಾಗುವ ಅಗತ್ಯವಿದೆ.

ಹೊಸ ನಾಟಕ ಅಕ್ಟೋಬರ್ ೧೧ ರಂದು ಬೆಂಗಳೂರಲ್ಲಿ

ಆತ್ಮೀಯರೇ
ದಯವಿಟ್ಟು ಗಮನಿಸಿ
ಅಕ್ಟೋಬರ್ ೧೧ರನ್ದು ಸಂಜೆ ಬಿಡುವು ಮಾಡಿಕೊಂಡು ಆಗಮಿಸಿ
ನಮ್ಮ ಹೊಸ ನಾಟಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ
ಉಚಿತ ಪ್ರವೇಶ
ನಿಮ್ಮ ನಿರೀಕ್ಷೆಯಲ್ಲಿ
ಬೈರೇಗೌಡ


Veshada huli -inv1..jpg
Veshada huli -inv2..jpg
Veshada huli -poster..jpg

Wednesday, September 28, 2011

ಪಾಪು-ಕಂಬಾರ ಮತ್ತು ಕುವೆಂಪು-ಬೇಂದ್ರೆ


 • - ಡಾ.ಎನ್.ಜಗದೀಶ್ ಕೊಪ್ಪ

  ಡಾ.ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಪಾಟೀಲ ಪುಟ್ಟಪ್ಪನವರನ್ನು 22ರ ಬುಧವಾರ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಗೆಳೆಯರ ಜೊತೆ ಬೇಟಿ ಮಾಡಿದೆ. ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಬಗ್ಗೆ ನನಗೆ ವಿಸ್ಮಯ ಉಂಟುಮಾಡಿತು.

  ಪುಟ್ಟಪ್ಪನವರ ವಾದವೆಂದರೆ, ಕಂಬಾರರು ಹಲವರ ಜಾನಪದ ಕೃತಿಯ ವಸ್ತುವನ್ನು ಕದ್ದಿದ್ದಾರೆ, ಕಂಬಾರರ ಲಕ್ಷಾಧಿಪತಿ ರಾಜನ ಕಥೆ ಮುದೆನೂರು ಸಂಗಣ್ಣ ಸಂಗ್ರಹಿದ ಜಾನಪದ ಕಥೆ. ಇದಕ್ಕೆ ಸಂಗಣ್ಣ ಬರೆದ ಪತ್ರ ಅವರಲ್ಲಿದೆಯಂತೆ. ಹಾಗಾಗಿ ಕಂಬಾರರು ಪ್ರಶಸ್ತಿಗೆ ಯೋಗ್ಯರಲ್ಲ. ಪುಟ್ಟಪ್ಪನವರ ವಾದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭ, ಸಮಯ ಅದಾಗಿರಲಿಲ್ಲ. ಏಕೆಂದರೆ, ವೈದ್ಯರು ಪಿಸಿಯೋಥೆರೆಪಿ ಚಿಕಿತ್ಸೆ ನೀಡಲು ನಾವು ಹೊರಹೋಗವುದನ್ನೇ ಕಾಯುತಿದ್ದರು.

  ಪುಟ್ಟಪ್ಪನವರು ಕನ್ನಡ ನಾಡು ನುಡಿ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಾರೆ, ಅದರೆ ನಮ್ಮ ಜಾನಪದ ಕಥಾ ಪರಂಪರೆ, ಮೌಖಿಕ ಕಾವ್ಯ ಪರಂಪರೆಯ ಬಗ್ಗೆ ಏಕೆ ತಿಳಿದುಕೊಂಡಿಲ್ಲ?

  ಜಾನಪದ ಕಥೆಯಾಗಲಿ, ಹಾಡಾಗಲಿ ಅವು ಯಾರೊಬ್ಬರ ಸ್ವತ್ತಲ್ಲ. ಅವುಗಳ ನಿಜ ವಾರಸುದಾರರು ನಮ್ಮ ಜನಪದರು. ಬಾಯಿಂದ ಬಾಯಿಗೆ, ಎದೆಯಿಂದ ಎದಗೆ ಹರಿದು ಬಂದ ಜಾನಪದ ಸಾಹಿತ್ಯ ಸೃಜನಶೀಲರ ಮನಸ್ಸು ಮತ್ತು ಬಾಯಲ್ಲಿ ಹಲವು ರೂಪಗಳಲ್ಲಿ ಮೈದಾಳಿ ಇಂದು ನಮ್ಮೆದುರು ಹರಡಿಕೊಂಡಿದೆ. ಇದು ಗ್ರಾಮೀಣ ಸಂಸ್ಕೃತಿಯ ಜನರ ಸಂಪತ್ತು. ಇಂದು ನಮ್ಮೆದೆರು ಇರುವ ಮಂಟೆಸ್ವಾಮಿ ಕಾವ್ಯವಾಗಲಿ, ಮಲೆ ಮಹದೇಶ್ವೇರ ಕಾವ್ಯವಾಗಲಿ, ಜನಪದ ಮಹಾಭಾರತವಾಗಲಿ ಇವೆಲ್ಲವು ಹಲವು ರೂಪಗಳನ್ನು ದಾಟಿ ಬಂದ ಜನಪದ ಕಾವ್ಯಗಳಾಗಿವೆ.

  ಕಂಬಾರರು ಸೃಷ್ಟಿಸಿದ ಸಂಗ್ಯಾ-ಬಾಳ್ಯ, ಜೋಕುಮಾರಸ್ವಾಮಿ, ಕರಿಮಾಯಿ, ಋಷ್ಯಶೃಂಗ, ಲಕ್ಷಾಧಿಪತಿರಾಜನ ಕಥೆ, ಇವೆಲ್ಲವೂ ನಮ್ಮ ಜನಪದರ ನಡುವಿನಿಂದ ಎತ್ತಿಕೊಂಡ ಕಥೆಗಳ ಹಂದರದಿಂದ ಕೂಡಿದ ನಾಟಕಗಳು. ಇದನ್ನು ಕಂಬಾರು ಎಂದೂ ಅಲ್ಲಗೆಳದಿಲ್ಲ. ನಿಜ, ಆದರೆ, ಈ ನಾಟಕಗಳ ಸೃಷ್ಟಿಯಲ್ಲಿ ಕಾರ್ಯನಿರ್ವಹಿಸಸಿರುವ ಕಂಬಾರರ ಸೃಜನ ಶೀಲತೆಯನ್ನು ನಾವು ಅಲ್ಲಗೆಳೆಯಲು ಸಾಧ್ಯವೆ?

  ಇನ್ನೊಂದು ಗಮನಿಸಬೆಕಾದ ಮುಖ್ಯ ಸಂಗತಿಯಂದರೆ, ಎ.ಕೆ. ರಾಮಾನುಜನ್ ರವರು ಸಂಪಾದಿಸಿದ ದಕ್ಷಿಣ ಭಾರತದ ಜಾನಪದ ಕಥೆಗಳು ಸಂಗ್ರಹದ ಕಥೆಯೊಂದರ ತಿರುಳನ್ನು ಇಟ್ಟುಕೊಂಡು ಗಿರೀಶ್ ಕಾರ್ನಾಡ್ ನಾಗಮಂಡಲ ನಾಟಕ ರಚಿಸಿದರೆ, ಕಂಬಾರರು ಇದೇ ಕಥೆಯನ್ನಾಧರಿಸಿ ಸಿರಿಸಂಪಿಗೆ ನಾಟಕ ರಚಿಸಿದರು. ಇವುಗಳನ್ನು ರಾಮಾನುಜನ್ ಕಥೆಗಳ ಕೃತಿಚೌರ್ಯ ಎಂದು ಕರೆಯಲು ಸಾಧ್ಯವೆ? ಒಂದೇ ಕಥೆಯನ್ನ ಕನ್ನಡದ ಎರಡು ಅನನ್ಯ ಪ್ರತಿಭೆಗಳು ವಿಭಿನ್ನ ರೀತಿ ಗ್ರಹಿಸಿ ನಿರ್ವಹಿಸಿರುವುದು ಕನ್ನಡದ ರಂಗಭೂಮಿಯಲ್ಲೊಂದು ದಾಖಲೆ ಜೊತೆಗೆ ಹೆಮ್ಮೆಯ ಸಂಗತಿ.

  ಮೂಲತಃ ರಾಮಾನುಜನ್ ಕಥೆಯ ವಾರಸುದಾರರಲ್ಲದಿದ್ದರೂ ಕೂಡ, ಅವರ ಸೃಜನಶೀಲ ಮನಸ್ಸು ಇಂತಹ ಕಥೆಗಳ ಆಯ್ಕೆಯ ಹಿಂದೆ ಕೆಲಸ ಮಾಡಿದೆ

  ಕಂಬಾರರ ಜನಪ್ರಿಯ ನಾಟಕ ಸಂಗ್ಯಾ ಬಾಳ್ಯ ಬಂದ ನಂತರವೂ ಅವರ ಸಹಪಾಠಿಯಾಗಿದ್ದ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲ್ಬುಗರ್ಿ ನಾಟಕದ ಮೂಲ ರೂಪವನ್ನು ಸಂಗ್ರಹಿಸಿ ಖರೇ ಸಂಗ್ಯಾ-ಬಾಳ್ಯ ಎಂದು ಪ್ರಕಟಿಸಿದ್ದಾರೆ. ಇಂದು ಉತ್ತರ ಕನರ್ಾಟಕದಲ್ಲಿ ಶ್ರೀ ಕೃಷ್ಣ ಪಾರಿಜಾತ ಹಾಗು ಸಂಗ್ಯಾ ಬಾಳ್ಯ ಹಲವು ರೂಪದಲ್ಲಿ ಪ್ರದಶರ್ೀತವಾಗುತ್ತಿವುದು ಪುಟ್ಟಪ್ಪನವರಿಗೆ ತಿಳಿಯದ ಸಂಗತಿಯೆನಲ್ಲ.

  ಕಂಬಾರರ ಪ್ರತಿಭೆಯನ್ನು ಅವರ ನಾಟಕಗಳ ಮೂಲಕ ಅಳೆಯಲು ಹೊರಟ ಪುಟ್ಟಪ್ಪನವರಿಗೆ ಅವರ ಹೇಳತೇನ ಕೇಳ ಮುಂತಾದ ಕಾವ್ಯಗಳಾಗಲಿ, ಸಿಂಗಾರವ್ವ ಮತ್ತು ಅರಮನೆ, ಶಿಖರ ಸೂರ್ಯದಂತಹ ಕಾದಂಬರಿಗಳೇಕೆ ಗೋಚರಿಸಲಿಲ್ಲ?

  ಜ್ಙಾನಪೀಠ ಪ್ರಶಸಿ ಎಂಬುದು ಯಾವುದೇ ಸಕರ್ಾರ ಕೊಡುವಂತಹದ್ದಲ್ಲ. ಅದಕ್ಕೆ ಅದರದೇ ಆದ ಆಯ್ಕೆ ಪ್ರಕ್ರಿಯೆಗಳಿವೆ. ಜಾತಿಯ ಬೆಂಬಲ. ಮಠಾಧೀಶರ, ರಾಜಕಾರಣಿಗಳ ಕುಮ್ಮಕ್ಕಿನಿಂದ ಪಡೆಯುವ ರಾಜ್ಯೋತ್ಸವ ಪ್ರಶಸ್ತಿ ಅದಲ್ಲ. ಲಾಬಿಯ ಬಗ್ಗೆ ಮಾತನಾಡುವ ಪುಟ್ಟಪ್ಪನವರಿಗೆ ಈ ವಾಸ್ತವಗಳು ಏಕೆ ಅರ್ಥವಾಗುತ್ತಿಲ್ಲ?

  ಕನ್ನಡದಲ್ಲಿ ಬೈರಪ್ಪ ಮಾತ್ರವಲ್ಲ ಜಿ.ಎಸ್. ಶಿವರುದ್ರಪ್ಪ, ಯಶವಂತಚಿತ್ತಾಲ, ಕುಂ.ವೀರಭದ್ರಪ್ಪ ಮುಂತಾದ ಶಕ್ತಿವಂತ ಲೇಖಕರು ಜ್ಙಾನಪೀಠ ಪ್ರಶಸ್ತಿಗೆ ಯೋಗ್ಯರಿದ್ದಾರೆ. ಇಂತಹ ಸಂದರ್ಭದಲ್ಲಿ ಭೈರಪ್ಪನವರ ಪರ ವಕಾಲತ್ತು ವಹಿಸಿ ಕಂಬಾರರನ್ನು ಯೋಗ್ಯರಲ್ಲ ಎಂದು ನಿಂದಿಸುವ ಅಗತ್ಯವಿರಲಿಲ್ಲ. ಕಂಬಾರರು ಈಗಾಗಲೇ ಪದ್ಮಶ್ರಿ, ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ಪಡೆದು ನಾಟಕಕಾರರಾಗಿ, ಕವಿಯಾಗಿ ರಾಷ್ಟ ಮಟ್ಟದಲ್ಲಿ ಗುರುತಿಸಿಕೊಂಡವರು.

  ಯಾವುದೇ ಲೇಖಕ ಎಷ್ಟೇ ದೊಡ್ಡವನಿರಲಿ ಆತನಿಗೆ ತನ್ನ ಸಮಕಾಲಿನ ಬರಹಗಾರನ ಬಗ್ಗೆ ಗೌರವ ಸೌಜನ್ಯತೆ ಇರಬೇಕು. ಇದಕ್ಕೆ ಕುವೆಂಪು ನಮ್ಮ ಮುಂದೆ ಉದಾಹರಣೆಯಾಗಿದ್ದಾರೆ.
  ಅದು 1960 ದಶಕ ಡಾ. ಪ್ರಭುಶಂಕರರವರು ಕುವೆಂಪು ಮಾರ್ಗದರ್ಶನದಲ್ಲಿ ಭಾವಗೀತೆ ಕುರಿತು ಪಿ.ಹೆಚ್.ಡಿ. ಪದವಿಗಾಗಿ ಅಧ್ಯಯನ ಮಾಡುತಿದ್ದಾಗ ಬೇಂದ್ರೆಯವರ ಕವಿತೆಯೋಂದರ ಸಾಲು “ಮಲ್ಲಿಗಿ ಪಟಪಟನೆ ಬಿರಿದಾವು” ಎಂಬುದರ ಬಗ್ಗೆ ತಮ್ಮ ಪ್ರಬಂಧದಲ್ಲಿ ಕಟುವಾಗಿ ವಿಮರ್ಶ ಮಾಡಿದ್ದರು. ಹೂವು ಅರಳುವಾಗ ಶಬ್ಧ ಮಾಡುವುದಿಲ್ಲ ಎಂಬುದು ಪ್ರಭುಶಂಕರರ ನಿಲುವಾಗಿತ್ತು. ಪ್ರಬಂಧವನ್ನು ಗಮನಿಸಿದ ಕುವೆಂಪು ಶಿಷ್ಯನನ್ನು ಕರೆದು “ಜಗತ್ತು ಕಾಣದ್ದನ್ನು, ಕೇಳದ್ದನ್ನು ಕವಿ ಕಾಣಬಲ್ಲ, ಕೇಳಬಲ್ಲ ಅದಕ್ಕಾಗಿ ಅವನನ್ನು ಕವಿ ಎಂದು ಕರೆಯುವುದು,” ಎಂದು ಬುದ್ಧಿವಾದ ಹೇಳಿ ವಿಮರ್ಶೆಯನ್ನು ತಿದ್ದುಪಡಿ ಮಾಡಿದರು.

  ಇಲ್ಲಿ ಗಮನಿಸಬೇಕಾದ ವಿಶಿಷ್ಟ ಸಂಗತಿಯೆಂದರೆ, ಆ ವೇಳೆಗಾಗಲೆ ಧಾರವಾಡದಲ್ಲಿ ಗೆಳೆಯರ ಬಳಗ ಹೆಸರಿನಲ್ಲಿ ಕೆಲವರು ಬೇಂದ್ರೆ ಪರ ನಿಂತು ಕುವೆಂಪುರವರ ರಾಮಾಯಣ ದರ್ಶನಂ ನಿಂದ ಹಿಡಿದು ಅವರ ಕವಿತೆಗಳ ಮೇಲೆ ಟೀಕೆ ಮಾಡುತ್ತಾ ನಿರಂತರ ವಾಗ್ಧಾಳಿ ನಡೆಸುತಿದ್ದರು. ಈ ಕುರಿತು ಕುವೆಂಪುಗೆ ಬೇಂದ್ರೆ ಬಗ್ಗೆಯಾಗಲಿ, ಅವರ ಗೆಳೆಯರ ಬಗ್ಗೆ ಯಾವುದೇ ಅಸಮಾಧಾನವಿರಲಿಲ್ಲ. ಕುವೆಂಪು ಬೇಂದ್ರೆಯವನ್ನು ಕನ್ನಡದ ದೊಡ್ಡ ಕವಿ ಎಂದೇ ಭಾವಿಸಿದ್ದರು. ಬೇಂದ್ರೆಗೂ ಕೂಡ ಕುವೆಂಪು ಬಗ್ಗೆ ಅಪಾರ ಗೌರವವಿತ್ತು. ಇದಕ್ಕೆ ಸಾಕ್ಷಿಯೆಂದರೆ, ಕುವೆಂಪು ಕುರಿತು ಬೇಂದ್ರೆ ಬರೆದ ಕವಿತೆಯ ಸಾಲುಗಳೇ ಸಾಕು.

  ಯುಗದ ಕವಿಗೆ
  ಜಗದ ಕವಿಗೆ
  ಶ್ರೀ ರಾಮಾಯಣದರ್ಶನದಿಂದಲೇ ಕೈ
  ಮುಗಿದ ಕವಿಗೆ-ಮಣಿಯದವರು ಆರು?

  ಇದು ಕನ್ನಡದ ಇಬ್ಬರು ಮಹಾನ್ ಕವಿಗಳು ಪರಸ್ಪರ ಹೊಂದಿದ್ದ ಗೌರವ ಮತ್ತು ಸಹೃದಯತೆಯ ಭಾವನೆಗಳಿಗೆ ಸಾಕ್ಷಿ.

  ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಮೂಲಕ ಕೀರ್ತಿಯ ಕಿರೀಟಕ್ಕೆ ಮತ್ತೋಂದು ಗರಿ ಮುಡಿಸಿದ ಕಂಬಾರರ ಬಗ್ಗೆ ಕನ್ನಡಿಗರು ಸಂಭ್ರಮಿಸುತ್ತಿರುವಾಗ, ಯಜಮಾನನ ಸ್ಥಾನದಲ್ಲಿರುವ ಪಾಟೀಲ ಪುಟ್ಟಪ್ಪ ಈ ರೀತಿ ಪ್ರತಿಕ್ರಿಯಸಬಹುದೆ?

  ಇದು ಸಂಕಟದಿಂದ ಕೇಳಲೇಬೇಕಾದ ಪ್ರಶ್ನೆ.

  ನಮ್ಮ ಪ್ರಶಸ್ತಿ ಪುರಸ್ಕೃತರು..

  ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...