Sunday, November 28, 2010

ಕನಸು











1.
ಕನಸು ಅರಳಿಸುವ ಶಕ್ತಿ
ಮಾತಿಗಿರುವ ಹಾಗೆ
ಮೌನಕ್ಕೂ ಇದೆ..
ಸುಮ್ಮನೆ ಸುಡುವ ತಾಕತ್ತು
ಮಾತಿಗಿರುವ ಹಾಗೆ ಮೌನಕ್ಕೂ ಇದೆ..
ಆದರೆ ಮಾತಿಗೆ ಮೌನವನ್ನು ತೂಕಕ್ಕೆ ಹಚ್ಚಲಾರೆ
ನೀನಲ್ಲ, ಯಾರಾದರೂ ಸರಿಯೆ
ಮಾತನ್ನು ಕಸಿಯಬಹುದು
ಮೌನವನ್ನಲ್ಲ..

2.
ಶತಮಾನಗಳಿಂದ ಹಾಗೇ ಇರುವ ಬೆಟ್ಟ
ಒಣಗಿ ಹೋಗುವ ಹುಲ್ಲು
ಹಾರಿಹೋಗುವ ಹಕ್ಕಿಗಳಿಂದ
ಕಳೆಕಟ್ಟುವುದು
3.
ಕತ್ತಲೆಯಿದ್ದರೆ
ಸೂರ್ಯನಿದ್ದು ಹೋದ ಮನೆಯಲ್ಲಿ
ಮಿಂಚುಹುಳವೂ ಗುತರ್ಿಸಲ್ಪಡುವುದು

4.
ನಿನ್ನ ಕಣ್ಣುಗಳೇಕೆ ಸದಾ ಒದ್ದೆಯೆಂದು ಕೇಳಬೇಡ
ಸಾವಿನೆದುರು ಶತ್ರುವೂ ನಗಲಾರ
ಅಗೋ
ಇರುಳು ಸಾಯುವಾಗ
ಹಗಲ ಕಣ್ತುಂಬ ನೀರು..

5.
ಕೊನೆಯೊಳಗೆ ಹಚ್ಚಿದ ಧೂಪದ ಬೆಳಕು
ಕೊನೆಯಾಚೆ ಚಾಚುವುದು
ಹೂವಿನ ಪರಿಮಳ
ತನ್ನ ಗಾತ್ರ ಮೀರಿ ಪಸರಿಸುವುದು
ನೀ ಪ್ರತಿಸಲವೂ ಆಡುವ
ಮೀರುವ ಮಾತು
ಇದಕ್ಕಿಂತ ಭಿನ್ನವಾಗದಿರಲಿ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...